ಹೆಚ್.ಡಿ.ಎಫ್.ಸಿ ಎರ್ಗೊ ಜನರಲ್ ಕಂಪೆನಿಯನ್ನು ಕರ್ನಾಟಕ ಸರ್ಕಾರದ ವತಿಯಿಂದ ನಿಯೋಜಿಸಿದ್ದು ಅವರ ಮೂಲಕ ಪುನರ್ ರಚನೆಯಾದ ಹಾವಾಮಾನ ಆಧಾರಿತ ಬೆಳೆ ವಿಮಾ ಯೋಜನೆ (ಆರ್-ಡಬ್ಲೂ ಬಿ ಸಿ ಐ ಎಸ್) ಅನ್ನು ಬೆಳೆ ಸಾಲ ಪಡೆದ ರೈತರು ಹಾಗೂ ಬೆಳೆ ಸಾಲವನ್ನು ಪಡೆಯುವ ರೈತರಿಗೆ ಬೆಂಗಳೂರು (ಗ್ರಾಮಾಂತರ ಮತ್ತು ನಗರ) ಜಿಲ್ಲೆ, ಬೀದರ್ , ದಕ್ಷಿಣ ಕನ್ನಡ , ದಾವಣಗೆರೆ ಜಿಲ್ಲೆಯವರಿಗೆ ಅನ್ವಯವಾಗುವಂತೆ ಹಾಗೂ ಕೆಳಕಾಣಿಸಿರುವ ಬೆಳೆಗಳ ಮೇಲೆ ಮುಂಗಾರು ಹಂಗಾಮಿಗೆ ಜ್ಯಾರಿಯಾಗುವುವು.
ಗೇಣಿದಾರರು ಮತ್ತು ಜಮೀನು ಭೋಗ್ಯಕ್ಕೆ ಪಡೆದು ಬೆಳೆ ಬೆಳೆಯುವ ರೈತರು ಸೇರಿದಂತೆ, ಅಧಿಸೂಚಿತ ಪ್ರದೇಶದಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುವ ಎಲ್ಲ ರೈತರು ವಿಮಾ ಸುರಕ್ಷೆಗೆ ಅರ್ಹರಾಗಿರುತ್ತಾರೆ.
a. ಕಡ್ಡಾಯ ಅಂಶ
ಅಧಿಸೂಚಿತ ಬೆಳೆ(ಗಳಿ)ಗೆ ಆರ್ಥಿಕ ಸಂಸ್ಥೆಗಳಿಂದ (ಅಂದರೆ ಸಾಲಗಾರ ರೈತರು) ಋತುಮಾನದ ಕೃಷಿ ಕಾರ್ಯಾಚರಣೆಗಳ (ಎಸ್‌ಎಒ) ಸಾಲಗಳನ್ನು ಪಡೆಯುವ ಎಲ್ಲ ರೈತರಿಗೆ ಕಡ್ಡಾಯವಾಗಿ ವಿಮಾ ಸುರಕ್ಷೆ ಒದಗಿಸಲಾಗುತ್ತದೆ. ಸಾಲ ಪಡೆದಿರುವ ಎಲ್ಲ ಬೇಸಾಯಗಾರರು ಯೋಜನೆಯ ನಿಯಮಗಳ ಅನುಸಾರ ವಿಮಾ ಸುರಕ್ಷೆಗೆ ಒತ್ತಾಯಿಸುವುದು ಕಡ್ಡಾಯವಾಗಿರುತ್ತದೆ.
b. ಐಚ್ಛಿಕ ಅಂಶ
ಸಾಲಗಾರರಲ್ಲದ ರೈತರಿಗೆ ಯೋಜನೆ ಐಚ್ಛಿಕವಾಗಿರುತ್ತದೆ ಮತ್ತು ಯಾವುದೇ ಅಧಿಸೂಚಿತ ವಿಮಾ ಘಟಕದಲ್ಲಿ ಯಾವುದೇ ಅಧಿಸೂಚಿತ ಬೆಳೆಗೆ ಪಿಎಂಎಫ್‌ಬಿವೈ ಅಡಿಯಲ್ಲಿ ವಿಮೆ ಪಡೆಯಲು ಬಯಸುವ ಬೇಸಾಯಗಾರರು ಕಟ್-ಆಫ್ ದಿನಾಂಕದ ಒಳಗೆ ಸಮೀಪದ ಬ್ಯಾಂಕ್ ಶಾಖೆ/ ಪಿಎಸಿಎಸ್/ ಅಧಿಕೃತ ಮಾಧ್ಯಮ ಸಹಭಾಗಿ/ ವಿಮಾ ಸಂಸ್ಥೆಯ ವಿಮಾ ಮಧ್ಯವರ್ತಿಯನ್ನು ಸಂಪರ್ಕಿಸಿ, ಸೂಚಿಸಿದ ಮಾದರಿಯಲ್ಲಿ ಪ್ರಸ್ತಾವನೆ ನಮೂನೆಯನ್ನು ಭರ್ತಿ ಮಾಡಿ, ವಿಮೆಗೆ ಪ್ರಸ್ತಾವಿಸಿರುವ ಕೃಷಿ ಭೂಮಿ/ ಬೆಳೆಗೆ ಸಂಬಂಧಿಸಿದ ವಿಮಾ ಖಾತ್ರಿಯ ಅಗತ್ಯ ದಾಖಲೆಗಳೊಂದಿಗೆ (ಉದಾಹರಣೆಗೆ ಮಾಲೀಕತ್ವ/ ಭೋಗ್ಯ/ ಬೇಸಾಯದ ಹಕ್ಕುಗಳು) ಬ್ಯಾಂಕ್ ಶಾಖೆ/ ವಿಮಾ ಮಧ್ಯವರ್ತಿ/ ಸಿಎಸ್‌ಸಿ ಕೇಂದ್ರಗಳಿಗೆ ನಮೂನೆ ಮತ್ತು ಪ್ರೀಮಿಯಂ ಠೇವಣಿಯನ್ನು ಸಲ್ಲಿಸಬಹುದು.
1. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನಾ ಎಂದರೇನು? ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನಾ, ಅನಿಶ್ಚಿತತೆ ಮತ್ತು ಪ್ರತಿಕೂಲ ಹವಾಮಾನ ವೈಪರೀತ್ಯಗಳಿಂದ ಹೊಲದಲ್ಲಿ ಆಗುವ ಬೆಳೆ ನಷ್ಟಗಳಿಂದ ರೈತರಿಗೆ ರಕ್ಷಣೆ ಒದಗಿಸುತ್ತದೆ.
2. ಬೆಳೆಗಳು ಬಾಧಿತವಾಗುವ ಕಾರಣಗಳು ಯಾವುವು ಮತ್ತು ಯಾವ ಅಪಾಯಗಳಿಂದ ಸುರಕ್ಷೆ ಒದಗಿಸಲಾಗುತ್ತೆದೆ? ನೈಸರ್ಗಿಕ ವಿಪತ್ತು, ಕೀಟ ದಾಳಿಗಳು ಮತ್ತು ಅತಿಯಾದ ಮಳೆ ಅಥವಾ ಮಳೆ ಕೊರತೆಯಂಥ ಹವಾಮಾನ ವೈಪರೀತ್ಯಗಳು, ಅತಿಯಾದ ಅಥವಾ ಕಡಿಮೆ ತಾಪಮಾನ, ಆರ್ದ್ರತೆ, ಹಿಮ, ಬಿರುಗಾಳಿ ಇತ್ಯಾದಿ
3. ದಾವೆಯ ಮೌಲ್ಯಮಾಪನವನ್ನು ಹೇಗೆ ಮಾಡಲಾಗುತ್ತದೆ?
a. ಒಂದು ವೇಳೆ ವಿಮೆ ಮಾಡಿಸಿದ ಋತುವಿನಲ್ಲಿ ವಿಮಾ ಘಟಕಗಳ (ಅಗತ್ಯ ಸಂಖ್ಯೆಯ ಸಿಸಿಗಳ ಆಧಾರದಲ್ಲಿ ಲೆಕ್ಕಾಚಾರ ಮಾಡಲಾಗುತ್ತದೆ) ವಿಮೆ ಮಾಡಿಸಿದ ಬೆಳೆಯ ಪ್ರತಿ ಹೆಕ್ಟೇರ್ ನೈಜ ಇಳುವರಿ ನಿರ್ದಿಷ್ಟಪಡಿಸಿದ ನಿಗದಿತ ಮಿತಿ ಇಳುವರಿಗಿಂತ ಕಡಿಮೆಯಾದರೆ, ಆ ವ್ಯಾಖ್ಯಾನಿತ ಪ್ರದೇಶದಲ್ಲಿನ ಎಲ್ಲ ರೈತರು ಮತ್ತು ಬೆಳೆಗಳು ಇಳುವರಿ ಕೊರತೆ ಅನುಭವಿಸಿವೆ ಎಂದು ಪರಿಗಣಿಸಲಾಗುತ್ತದೆ. ಈ ಕೆಳಗಿನ ಸೂತ್ರದ ಅನುಸಾರ ‘ದಾವೆ’ಯನ್ನು ಲೆಕ್ಕಾಚಾರ ಮಾಡಲಾಗುತ್ತದೆ:
(ನಿಗದಿತ ಮಿತಿ ಇಳುವರಿ - ನೈಜ ಇಳುವರಿ) _____________________________X ವಿಮೆಯ ಮೊತ್ತ ನಿಗದಿತ ಮಿತಿ ಇಳುವರಿ ಇಲ್ಲಿ,
ನಿಗದಿತ ಮಿತಿ ಇಳುವರಿ ಅಂದರೆ ಆ ಬೆಳೆಗೆ ಅನ್ವಯವಾಗುವ ನಷ್ಟಪರಿಹಾರ ಪ್ರಮಾಣದಿಂದ ಗುಣಿಸಲ್ಪಟ್ಟ ಕಳೆದ ಏಳು ವರ್ಷಗಳ ಇಳುವರಿಯ (ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶ ಅಧಿಸೂಚಿಸಿದ ಗರಿಷ್ಠ ಎರಡು ವಿಪತ್ತು ವರ್ಷವ(ಗಳ)ನ್ನು ಹೊರತುಪಡಿಸಿ) ಸರಾಸರಿಯಾಗಿರುತ್ತದೆ.
b. ಕೇಂದ್ರ ಮತ್ತು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಿಂದ ಆ ಋತುವಿಗೆ ಪ್ರೀಮಿಯಂ ಸಬ್ಸಿಡಿಯನ್ನು ವಿಮಾ ಸಂಸ್ಥೆ ಸ್ವೀಕರಿಸಿದ ಬಳಿಕ ರೈತರ ದಾವೆಯ ಇತ್ಯರ್ಥ ಆರಂಭವಾಗುತ್ತದೆ.
c. ಸಂಬಂಧಿಸಿದ ವಿಮಾ ಸಂಸ್ಥೆಗಳಿಂದ ದಾವೆ ಮೊತ್ತವನ್ನು ಸ್ವೀಕರಿಸಿದ ಬಳಿಕ, ಆರ್ಥಿಕ ಸಂಸ್ಥೆಗಳು/ ಬ್ಯಾಂಕ್‌ಗಳು ಆ ದಾವೆ ಮೊತ್ತವನ್ನು ಫಲಾನುಭವಿ ರೈತನ ಖಾತೆಗೆ 1 ವಾರದ ಒಳಗೆ ಪಾವತಿಸಬೇಕು ಮತ್ತು 7 ದಿನಗಳ ಒಳಗಾಗಿ ಫಲಾನುಭವಿಗಳ ಸಂಪೂರ್ಣ ವಿವರಗಳನ್ನು ಶಾಖೆಯ ಕಚೇರಿಯಲ್ಲಿ ಪ್ರದರ್ಶಿಸಬೇಕು ಹಾಗೂ ಪರಿಶೀಲನೆ ಮತ್ತು ಲೆಕ್ಕಪರಿಶೋಧನೆಗಾಗಿ ಬಳಕೆ ಪ್ರಮಾಣಪತ್ರದೊಂದಿಗೆ ವಿಮಾ ಸಂಸ್ಥೆಗೆ ವರದಿ ಸಲ್ಲಿಸಬೇಕು.
d. ಒಂದು ವೇಳೆ ರೈತರಿಗೆ ಐಚ್ಛಿಕ ಆಧಾರದಲ್ಲಿ, ಅಂದರೆ ಮಧ್ಯವರ್ತಿಗಳ ಮೂಲಕ ವಿಮಾ ಸುರಕ್ಷೆ ಒದಗಿಸಿದ್ದರೆ, ಪಾವತಿಸಬೇಕಾದ ದಾವೆಯನ್ನು ದಾವೆಯ ವಿವರಗಳ ಮಾಹಿತಿಯೊಂದಿಗೆ ವಿಮಾ ಕಂಪನಿಯಿಂದ ನೇರವಾಗಿ ರೈತರ ವೈಯಕ್ತಿಕ ಖಾತೆಗೆ ಪಾವತಿ ಮಾಡಲಾಗುತ್ತದೆ.
ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರು:
ರಾಜ್ಯ | ಅನುಸೂಚಿತ ಜಿಲ್ಲೆ | ವ್ಯಕ್ತಿ | ಸಂಪರ್ಕಿಸಬೇಕಾದ ವ್ಯಕ್ತಿ | ದೂರವಾಣಿ ಸಂಖ್ಯೆ |
---|---|---|---|---|
ಕರ್ನಾಟಕ | ಬೀದರ್ | ಕಿರಣ್ ಗೊಲ್ಲಾ | ಲಿಂಗೇಶ್ವರ ಕಾಂಪ್ಲೆಕ್ಸ್, ಶಾಪ್ ನಂ 2, ಮನಹಳ್ಳಿ, ತಾಲೂಕ್ ಅಂಡ ಜಿಲ್ಲೆ ಬೀದರ್ ೫೮೫೪೦೩ | ೯೮೮೫೩೯೬೭೪೪ |
ಕರ್ನಾಟಕ | ದಕ್ಷಿಣ ಕನ್ನಡ | ಎಂ.ಎಸ್.ಡಿ. ಜ್ಞಾನದೇವ್ | ನೇ ಫ್ಲೋರ್ ಎಸ್ಸೆಲ್ ಸೆಂಟರ್, ಎಂ.ಜಿ ರೋಡ್, ಮಂಗಳೂರು ೫೭೫೦೦೩ | ೯೯೬೩೨೦೪೧೨೨ |
ಕರ್ನಾಟಕ | ದಾವಣಗೆರೆ | ಗವಲಾ ರಮೇಶ | ಡೋರ್ ನಂ ೩೨೩ /೨ ನೇ ಮೇಯ್ನ್ 2ನೇ ಕ್ರಾಸ್, ಅಧಾರ್ ನಗರ್, ದಾವಣಗೆರೆ ೫೭೭೦೦೧ | ೯೬೨೬೩೨೦೫೬೩ |
ರಾಜ್ಯ | ಅನುಸೂಚಿತ ಜಿಲ್ಲೆ | ವ್ಯಕ್ತಿ | ಸಂಪರ್ಕಿಸಬೇಕಾದ ವ್ಯಕ್ತಿ | ದೂರವಾಣಿ ಸಂಖ್ಯೆ |
---|---|---|---|---|
ಕರ್ನಾಟಕ | ಬೀದರ್ | ಕಿರಣ್ ಗೊಲ್ಲಾ | ಲಿಂಗೇಶ್ವರ ಕಾಂಪ್ಲೆಕ್ಸ್, ಶಾಪ್ ನಂ 2, ಮನಹಳ್ಳಿ, ತಾಲೂಕ್ ಅಂಡ ಜಿಲ್ಲೆ ಬೀದರ್ ೫೮೫೪೦೩ | ೯೮೮೫೩೯೬೭೪೪ |
ಕರ್ನಾಟಕ | ದಕ್ಷಿಣ ಕನ್ನಡ | ಎಂ.ಎಸ್.ಡಿ. ಜ್ಞಾನದೇವ್ | ನೇ ಫ್ಲೋರ್ ಎಸ್ಸೆಲ್ ಸೆಂಟರ್, ಎಂ.ಜಿ ರೋಡ್, ಮಂಗಳೂರು ೫೭೫೦೦೩ | ೯೯೬೩೨೦೪೧೨೨ |
ಕರ್ನಾಟಕ | ದಾವಣಗೆರೆ | ಗವಲಾ ರಮೇಶ | ಡೋರ್ ನಂ ೩೨೩ /೨ ನೇ ಮೇಯ್ನ್ 2ನೇ ಕ್ರಾಸ್, ಅಧಾರ್ ನಗರ್, ದಾವಣಗೆರೆ ೫೭೭೦೦೧ | ೯೬೨೬೩೨೦೫೬೩ |
ಯಾವುದೇ ರೀತಿಯ ಇತರ ಮಾಹಿತಿಗಾಗಿ, ನಮ್ಮ ಮೀಸಲಾದ ಕಾಲ್ ಸೆಂಟರ್ ಸಂಖ್ಯೆ @ 1800 266 0700 ಅಥವಾ ಮೇಲಿನ ರಾಜ್ಯ ಮಟ್ಟದ ಜಿಲ್ಲಾ ಸಂಯೋಜಕರಾಗಿ ಸಂಪರ್ಕಿಸಿ.