ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಕೇವಲ ಒಬ್ಬ ವ್ಯಕ್ತಿಯನ್ನು ಕವರ್ ಮಾಡುತ್ತದೆ, ಪಾಲಿಸಿದಾರರ ಅವಶ್ಯಕತೆಗಳನ್ನು ಸಂಪೂರ್ಣವಾಗಿ ಪೂರೈಸಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ. ನಿಮ್ಮ ಆರೋಗ್ಯ ಅಗತ್ಯಗಳನ್ನು ಅವಲಂಬಿಸಿ, ನೀವು ಅತ್ಯಂತ ಸೂಕ್ತವಾದ ಪ್ಲಾನ್ ಅನ್ನು ಆಯ್ಕೆ ಮಾಡಬಹುದು.
ಹೆಚ್ಚಿನ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ನಗದುರಹಿತ ಆಸ್ಪತ್ರೆ ದಾಖಲಾತಿ, ಡೇಕೇರ್ ಪ್ರಕ್ರಿಯೆಗಳು, ರಸ್ತೆ ಆಂಬ್ಯುಲೆನ್ಸ್ ಸೇವೆಗಳು, ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳು, ಪರ್ಯಾಯ ಚಿಕಿತ್ಸೆಗಳು ಮತ್ತು ನೋ-ಕ್ಲೈಮ್ ಪ್ರಯೋಜನಗಳನ್ನು ಒಳಗೊಂಡಂತೆ ಸಮಗ್ರ ಶ್ರೇಣಿಯ ಕವರೇಜ್ ಒದಗಿಸುತ್ತವೆ. ಎಚ್‌ಡಿಎಫ್‌ಸಿ ಎರ್ಗೋದ ಆಪ್ಟಿಮಾ ಸೆಕ್ಯೂರ್ ಪ್ಲಾನ್, ಆಸ್ಪತ್ರೆಗಳ ವಿಶಾಲ ನೆಟ್ವರ್ಕ್ ಮತ್ತು ತ್ವರಿತ ಪ್ರಕ್ರಿಯೆ ಸಮಯವನ್ನು ಹೊಂದಿದ್ದು, ನೀವು ಗುಣಮಟ್ಟದ ಚಿಕಿತ್ಸೆಯನ್ನು ಪಡೆಯುವುದನ್ನು ಖಚಿತಪಡಿಸುತ್ತದೆ.
ಆಪ್ಟಿಮಾ ಸೆಕ್ಯೂರ್
ಆಪ್ಟಿಮಾ ರಿಸ್ಟೋರ್
ಮೈ:ಹೆಲ್ತ್ ಸುರಕ್ಷಾ
ಮೈ:ಹೆಲ್ತ್ ಮೆಡಿಶ್ಯೂರ್ ಸೂಪರ್ ಟಾಪ್-ಅಪ್
ಬೆಳೆಯುತ್ತಿರುವ ವೈದ್ಯಕೀಯ ಅಗತ್ಯಗಳು ಮತ್ತು ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ನಮ್ಮ ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ಅನಾರೋಗ್ಯಗಳು ಮತ್ತು ಗಾಯಗಳಿಂದ ಉಂಟಾಗುವ ನಿಮ್ಮ ಎಲ್ಲಾ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ. ಅತ್ಯಂತ ಪ್ರಮುಖವಾಗಿ, ಆಪ್ಟಿಮಾ ಸೆಕ್ಯೂರ್ ಪ್ಲಾನ್ ಕೋವಿಡ್-19 ಗಾಗಿ ಚಿಕಿತ್ಸೆ ವೆಚ್ಚಗಳನ್ನು ಕೂಡ ಒಳಗೊಂಡಿದೆ.
ಸಾಮಾನ್ಯವಾಗಿ 30 ಮತ್ತು 90 ದಿನಗಳ ಬದಲಾಗಿ, 60 ಮತ್ತು 180 ದಿನಗಳ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.
ವೈದ್ಯಕೀಯ ಸಂಶೋಧನೆಗಳು, ಪ್ರಮುಖ ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತದೆ. ನೀವು ನಂಬುತ್ತೀರೋ ಇಲ್ಲವೋ? ನಿಮಗಾಗಿ ನಾವು ಅದನ್ನೂ ಕವರ್ ಮಾಡುತ್ತೇವೆ.
ತಡೆಗಟ್ಟುವಿಕೆ ನಿಶ್ಚಿತವಾಗಿ ಚಿಕಿತ್ಸೆಗಿಂತ ಉತ್ತಮವಾಗಿದೆ ಮತ್ತು ಅದಕ್ಕಾಗಿಯೇ ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸುವ ಮೇಲೆ ನಾವು ಉಚಿತ ಹೆಲ್ತ್ ಚೆಕ್-ಅಪ್ ಅನ್ನು ಒದಗಿಸುತ್ತೇವೆ.
₹5 ಲಕ್ಷಗಳವರೆಗಿನ ಏರ್ ಆಂಬ್ಯುಲೆನ್ಸ್ ಸಾರಿಗೆಯ ವೆಚ್ಚವನ್ನು ತುಂಬಿಕೊಡಲು ಆಪ್ಟಿಮಾ ಸೆಕ್ಯೂರ್ ಪ್ಲಾನ್ ಅನ್ನು ರೂಪಿಸಲಾಗಿದೆ.
ಆಪ್ಟಿಮಾ ಸೆಕ್ಯೂರ್ ಪ್ಲಾನ್ ಇನ್ಶೂರೆನ್ಸ್ ಮೊತ್ತದವರೆಗೆ ರೋಡ್ ಆಂಬ್ಯುಲೆನ್ಸ್ ವೆಚ್ಚವನ್ನು ಕವರ್ ಮಾಡುತ್ತದೆ.
ಆಪ್ಟಿಮಾ ಸೆಕ್ಯೂರ್ ಪ್ಲಾನ್ ಅಡಿಯಲ್ಲಿ ಆಸ್ಪತ್ರೆ ದಾಖಲಾತಿಯ ಮೇಲೆ ದಿನಕ್ಕೆ ₹800 ಗರಿಷ್ಠ ₹4800 ವರೆಗೆ ದೈನಂದಿನ ನಗದು ಪಡೆಯಿರಿ.
ಆಪ್ಟಿಮಾ ಸೆಕ್ಯೂರ್ ಪ್ಲಾನ್ ಅಡಿಯಲ್ಲಿ ಭಾರತದಲ್ಲಿ ನೆಟ್ವರ್ಕ್ ಒದಗಿಸುವವರ ಮೂಲಕ 51 ಗಂಭೀರ ಅನಾರೋಗ್ಯಗಳಿಗೆ ಇ-ಅಭಿಪ್ರಾಯವನ್ನು ಪಡೆಯಿರಿ.
ನೀವು ಮನೆಯಲ್ಲಿ ಆಸ್ಪತ್ರೆ ಚಿಕಿತ್ಸೆಗಳನ್ನು ಪಡೆದುಕೊಳ್ಳುವಾಗ ಆಗುವ ವೈದ್ಯಕೀಯ ವೆಚ್ಚಗಳಿಗೆ ನಾವು ವೈದ್ಯರ ಸಲಹೆ ಮೇಲೆ ನಗದುರಹಿತ ಆಧಾರದಲ್ಲಿ ಪಾವತಿ ನೀಡುತ್ತೇವೆ.
ಇನ್ಶೂರ್ಡ್ ವ್ಯಕ್ತಿಯೇ ಅಂಗ ಸ್ವೀಕರಿಸುತ್ತಿರುವಾಗ ದಾನಿಯ ದೇಹದಿಂದ ಪಡೆದುಕೊಂಡ ಒಂದು ಪ್ರಮುಖ ಅಂಗಕ್ಕೆ ತಗುಲುವ ವೈದ್ಯಕೀಯ ವೆಚ್ಚಗಳಿಗೆ ನಾವು ಕವರೇಜ್ ನೀಡುತ್ತೇವೆ.
ನಾವು ಆಯುರ್ವೇದ, ಯುನಾನಿ, ಸಿದ್ಧ, ಹೋಮಿಯೋಪತಿ, ಯೋಗ ಮತ್ತು ನ್ಯಾಚುರೋಪತಿ ರೀತಿಯ ಪರ್ಯಾಯ ಚಿಕಿತ್ಸೆಗಳ ಒಳ-ರೋಗಿ ಆರೈಕೆಗೆ ವಿಮಾ ಮೊತ್ತದವರೆಗಿನ ಚಿಕಿತ್ಸೆ ವೆಚ್ಚಗಳನ್ನು ಕವರ್ ಮಾಡುತ್ತೇವೆ.
ಆಪ್ಟಿಮಾ ಸೆಕ್ಯೂರ್ ಪ್ಲಾನ್ ನಿಮಗೆ ಶಕ್ತಿ ನೀಡುತ್ತದೆ. ನಮ್ಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯು ಜೀವಮಾನ ತಡೆರಹಿತ ಉಚಿತ ನವೀಕರಣಗಳ ಮೇಲೆ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ.
ಮೈ ಆಪ್ಟಿಮಾ ಸೆಕ್ಯೂರ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ಪದಗುಚ್ಛಗಳು, ಬ್ರೋಶರ್ ಮತ್ತು ಪ್ರಾಸ್ಪೆಕ್ಟಸ್ ಓದಿ.
ಸಾಹಸಗಳಿಂದ ನಿಮಗೆ ಮಾನಸಿಕ ಉತ್ತೇಜನ ಸಿಗಬಹುದು. ಆದರೆ, ಅದರಿಂದ ಹಾನಿಗಳು ಆದಾಗ, ಅದು ಅಪಾಯಕಾರಿಯಾಗುತ್ತದೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಿದಾಗ ಆಗುವ ಅವಘಡಗಳಿಗೆ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರೇಜ್ ನೀಡುವುದಿಲ್ಲ.
ಕ್ರಿಮಿನಲ್ ಉದ್ದೇಶದೊಂದಿಗೆ ಕಾನೂನು ಉಲ್ಲಂಘನೆಯನ್ನು ಮಾಡಲು ಪ್ರಯತ್ನಿಸುವ ಅಥವಾ ಅದರ ಪರಿಣಾಮದಿಂದ ನೇರವಾಗಿ ಉಂಟಾಗುವ ಚಿಕಿತ್ಸೆಯ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ.
ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯುದ್ಧಗಳಿಂದ ಆಗುವ ಯಾವುದೇ ಕ್ಲೇಮ್‌ಗೆ ಕವರೇಜ್ ನೀಡುವುದಿಲ್ಲ.
ಯಾವುದೇ ಆಸ್ಪತ್ರೆಯಲ್ಲಿ ಅಥವಾ ಯಾವುದೇ ವೈದ್ಯಕೀಯ ಪ್ರಾಕ್ಟೀಸ್ ಮಾಡುವವರು ಅಥವಾ ವಿಮಾದಾರರಿಂದ ನಿರ್ದಿಷ್ಟವಾಗಿ ಹೊರತುಪಡಿಸಿದ ಯಾವುದೇ ಇತರ ಪೂರೈಕೆದಾರರಿಂದ ಚಿಕಿತ್ಸೆಗಾಗಿ ಉಂಟಾದ ವೆಚ್ಚಗಳನ್ನು ಒಳಗೊಂಡಿರುವುದಿಲ್ಲ. (ಡಿ ಎಂಪನೆಲ್ಡ್ ಆಸ್ಪತ್ರೆಯ ಪಟ್ಟಿಗಾಗಿ ನಮ್ಮನ್ನು ಸಂಪರ್ಕಿಸಿ)
ಜನ್ಮಜಾತ ಬಾಹ್ಯ ರೋಗದ ಚಿಕಿತ್ಸೆಯು ಗಂಭೀರವಾಗಿರುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಆದರೆ ಜನ್ಮಜಾತ ಬಾಹ್ಯ ರೋಗಗಳ ದೋಷಗಳು ಅಥವಾ ವೈಪರೀತ್ಯಗಳಿಗೆ ಉಂಟಾದ ವೈದ್ಯಕೀಯ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ.
(ಜನ್ಮಜಾತ ರೋಗಗಳು ಹುಟ್ಟಿದ ದೋಷಗಳನ್ನು ಉಲ್ಲೇಖಿಸುತ್ತವೆ).
ಮದ್ಯಪಾನ, ಮಾದಕ ದ್ರವ್ಯ ಅಥವಾ ಮಾದಕ ವ್ಯಸನದ ಚಿಕಿತ್ಸೆ ಅಥವಾ ಯಾವುದೇ ವ್ಯಸನಕಾರಿ ಸ್ಥಿತಿ ಮತ್ತು ಅದರ ಪರಿಣಾಮಗಳು ಕವರ್ ಆಗುವುದಿಲ್ಲ.
ವೈಯಕ್ತಿಕ ಹೆಲ್ತ್ ಇನ್ಶೂರೆನ್ಸ್ ಖರೀದಿಸಿದಾಗ, ಪಾಲಿಸಿದಾರರು ವಿಮಾದಾತರೊಂದಿಗೆ ಒಪ್ಪಂದಕ್ಕೆ ಒಳಪಡುತ್ತಾರೆ. ವಿಮಾ ಮೊತ್ತದ ಪ್ರಕಾರ ಮತ್ತು ಪಾಲಿಸಿಯ ನಿಯಮಗಳ ಪ್ರಕಾರ ವಿಮಾದಾತರು ನಿಮ್ಮ ಆರೋಗ್ಯ ವೆಚ್ಚಗಳನ್ನು ಕವರ್ ಮಾಡುತ್ತಾರೆ ಎಂದು ಒಪ್ಪಂದವು ನಮೂದಿಸುತ್ತದೆ. ಅದಕ್ಕೆ ಪ್ರತಿಯಾಗಿ, ಪಾಲಿಸಿದಾರರು ನಿಯಮಿತವಾಗಿ ಪ್ರೀಮಿಯಂ ಪಾವತಿಸಬೇಕು.
ಉದಾಹರಣೆಗೆ, ನೀವು ₹10 ಲಕ್ಷಗಳ ವಿಮಾ ಮೊತ್ತದೊಂದಿಗೆ ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಿದ್ದೀರಿ. ನೀವು ಆಸ್ಪತ್ರೆಗೆ ದಾಖಲಾಗಿದ್ದರೆ ಪಾಲಿಸಿಯನ್ನು ಖರೀದಿಸಿದ ನಂತರ, ಪಾಲಿಸಿಯ ನಿಯಮ ಮತ್ತು ಷರತ್ತುಗಳ ಪ್ರಕಾರ ಆಸ್ಪತ್ರೆ ಬಿಲ್‌ಗಳನ್ನು ಪಾವತಿಸಲು ವಿಮಾದಾತರು ಜವಾಬ್ದಾರರಾಗಿರುತ್ತಾರೆ.
ಈಗ, ಆಸ್ಪತ್ರೆ ಬಿಲ್ ₹4 ಲಕ್ಷ ಆಗಿತ್ತು ಎಂದುಕೊಳ್ಳೋಣ. ನಿಮ್ಮ ವಿಮಾದಾತರು ಆಸ್ಪತ್ರೆಯೊಂದಿಗೆ ಬಿಲ್ಲನ್ನು ಸೆಟಲ್ ಮಾಡುತ್ತಾರೆ, ಈಗ ವರ್ಷದ ನಿಮ್ಮ ವಿಮಾ ಮೊತ್ತವನ್ನು ₹6 ಲಕ್ಷಗಳಿಗೆ ಕಡಿಮೆ ಮಾಡಲಾಗುತ್ತದೆ.
ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಏಕೈಕ ಉದ್ದೇಶವೆಂದರೆ, ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ಹಣಕಾಸಿನ ನೆರವು ಪಡೆಯುವುದಾಗಿದೆ. ಆದ್ದರಿಂದ, ನಗದುರಹಿತ ಕ್ಲೈಮ್‌ಗಳು ಮತ್ತು ವೆಚ್ಚ ತುಂಬಿಕೊಡುವ ಕ್ಲೈಮ್ ಕೋರಿಕೆಗಳಿಗೆ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಓದುವುದು ಮುಖ್ಯವಾಗಿದೆ.
ನಗದುರಹಿತ ಅನುಮೋದನೆಗಾಗಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಪೂರ್ವ ದೃಢೀಕೃತ ಫಾರ್ಮ್ ಭರ್ತಿ ಮಾಡಿ
ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದ ನಂತರ, ನಾವು ನಿಮಗೆ ಸ್ಟೇಟಸ್ ಅಪ್ಡೇಟ್ ಕಳುಹಿಸುತ್ತೇವೆ
ಪೂರ್ವ ದೃಢೀಕೃತ ಅನುಮೋದನೆಯ ಆಧಾರದಲ್ಲಿ ಆಸ್ಪತ್ರೆಗೆ ದಾಖಲಾತಿ ಮಾಡಬಹುದು
ಡಿಸ್ಚಾರ್ಜ್ ಸಮಯದಲ್ಲಿ, ನಾವು ನೇರವಾಗಿ ಆಸ್ಪತ್ರೆಯೊಂದಿಗೆ ಕ್ಲೈಮ್ ಸೆಟಲ್ಮೆಂಟ್ ಮಾಡುತ್ತೇವೆ
ನೀವು ಆರಂಭದ ಬಿಲ್‌ಗಳನ್ನು ಪಾವತಿಸಿ, ಮೂಲ ರಸೀತಿಗಳನ್ನು ನಿಮ್ಮ ಬಳಿಯಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ನಮಗೆ ನಿಮ್ಮ ಎಲ್ಲಾ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಕಳುಹಿಸಿಕೊಡಿ
ನಾವು ನಿಮ್ಮ ಕ್ಲೈಮ್ ಸಂಬಂಧಿತ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಪರಿಶೀಲನೆ ಮಾಡುತ್ತೇವೆ
ನಾವು ನಿಮ್ಮ ಬ್ಯಾಂಕ್ ಅಕೌಂಟಿಗೆ ಅನುಮೋದಿತ ಕ್ಲೈಮ್ ಮೊತ್ತವನ್ನು ಕಳುಹಿಸುತ್ತೇವೆ.
ಇತ್ತೀಚಿನ ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಬಹು ವರ್ಷಗಳ ಪ್ಲಾನ್‌ಗೆ ಇಡಿಯಾಗಿ ಪಾವತಿಸಿದ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ. ಹಾಗೂ ತೆರಿಗೆಯಲ್ಲಿ ಕಡಿತವಾಗುವ ಈ ಮೊತ್ತವು ಪಾಲಿಸಿ ಅವಧಿಗೆ ಪಾವತಿಸುವ ಸಂಪೂರ್ಣ ಪ್ರೀಮಿಯಂ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ. ಇದು ಸಂದರ್ಭಕ್ಕನುಗುಣವಾಗಿ ₹25,000 ಅಥವಾ ₹ 50,000ದ ಮಿತಿಗಳಿಗೆ ಒಳಪಡುತ್ತದೆ.
ಆಸ್ಪತ್ರೆ ದಾಖಲಾತಿ ವೆಚ್ಚಗಳ ಜೊತೆಗೆ, ಹೊರರೋಗಿ ವಿಭಾಗ ಅಥವಾ OPD ಸಮಾಲೋಚನೆ ಶುಲ್ಕಗಳು ಮತ್ತು ಡಯಾಗ್ನಸಿಸ್ ಪರೀಕ್ಷೆಗಳ ಮೇಲೆ ಉಂಟಾದ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ನಗದು ಪಾವತಿಗಳ ಮೇಲೆಯೂ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಇದು ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಲು ಡೆಬಿಟ್/ಕ್ರೆಡಿಟ್ ಕಾರ್ಡ್ಗಳು, ಚೆಕ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಗಳ ಅವಶ್ಯಕತೆ ಇರುವ ಇತರೆ ವೈದ್ಯಕೀಯ ವೆಚ್ಚಗಳ ಹಾಗಲ್ಲ.
ಮೇಲೆ ತಿಳಿಸಲಾದ ಪ್ರಯೋಜನಗಳು, ದೇಶದಲ್ಲಿ ಚಾಲ್ತಿಯಲ್ಲಿರುವ ಪ್ರಸ್ತುತ ತೆರಿಗೆ ಕಾನೂನುಗಳ ಪ್ರಕಾರ ಇವೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಮ್ಮ ತೆರಿಗೆ ಪ್ರಯೋಜನಗಳು ತೆರಿಗೆ ಕಾನೂನುಗಳಿಗೆ ಒಳಪಟ್ಟು ಬದಲಾಗಬಹುದು. ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಅದನ್ನೇ ಮರು ದೃಢೀಕರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಇದು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೌಲ್ಯದಿಂದ ಮುಕ್ತವಾಗಿದೆ.
ಪ್ರತಿ ಬಾರಿ ನೀವು ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹುಡುಕುತ್ತಿರುವಾಗ, ನಿಮಗಾಗಿ ಯಾವುದು ಉತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಎಂದು ನೀವು ಆಶ್ಚರ್ಯಪಡುತ್ತೀರಿ. ಆನ್ಲೈನ್ನಲ್ಲಿ ಅತ್ಯುತ್ತಮ ಹೆಲ್ತ್ ಪ್ಲಾನ್ ಆಯ್ಕೆ ಮಾಡುವುದು ಹೇಗೆ? ಅದು ಯಾವ ಕವರೇಜ್ ಹೊಂದಿರಬೇಕು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಇನ್ನಷ್ಟು ಓದಿ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಲು ಇರುವ ಹ್ಯಾಕ್ಗಳನ್ನು ಡೀಕೋಡ್ ಮಾಡೋಣ.
ನೀವು ಮೆಟ್ರೋ ನಗರಗಳಲ್ಲಿ ವಾಸಿಸುತ್ತಿದ್ದರೆ ಚಿಕಿತ್ಸೆಯ ವೆಚ್ಚ ಹೆಚ್ಚಾಗಿರುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು 7 ಲಕ್ಷದಿಂದ 10 ಲಕ್ಷಗಳ ನಡುವೆ ವೈಯಕ್ತಿಕ ವಿಮಾ ಮೊತ್ತವನ್ನು ಹೊಂದಿರುವುದು ಉತ್ತಮವಾಗಿದೆ. ನೀವು ನಿಮ್ಮ ಸಂಗಾತಿಯನ್ನು ಮತ್ತು ಮಕ್ಕಳನ್ನು ಇನ್ಶೂರ್ ಮಾಡಲು ಫ್ಯಾಮಿಲಿ ಕವರ್ ಹುಡುಕುತ್ತಿದ್ದರೆ, ಫ್ಲೋಟರ್ ಆಧಾರದಲ್ಲಿ 8 ಲಕ್ಷದಿಂದ 15 ಲಕ್ಷಗಳ ನಡುವಿನ ವಿಮಾ ಮೊತ್ತವನ್ನು ಹೊಂದಿರುವುದು ಉತ್ತಮವಾಗಿದೆ. ಒಂದು ವರ್ಷದಲ್ಲಿ ಆಗಬಹುದಾದ ಒಂದಕ್ಕಿಂತ ಹೆಚ್ಚಿನ ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡುವುದಕ್ಕೆ ಇಷ್ಟು ಸಾಕಾಗುತ್ತದೆ.
ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗೆ ಕಡಿಮೆ ಪ್ರೀಮಿಯಂಗಳನ್ನು ಪಾವತಿಸಲು ಬಯಸಿದರೆ, ನಿಮ್ಮ ಆಸ್ಪತ್ರೆ ಬಿಲ್‌ಗಳನ್ನು ಸಹ-ಪಾವತಿಸಿ. ನೀವು ನಿಮ್ಮ ಹೆಲ್ತ್ ಇನ್ಶೂರರ್ ಅವರೊಂದಿಗೆ ವೈದ್ಯಕೀಯ ವೆಚ್ಚಗಳನ್ನು ಹಂಚಿಕೊಳ್ಳುತ್ತಾ ಇರುವುದರಿಂದ, ಭಾರಿ ಪ್ರೀಮಿಯಂ ಪಾವತಿಸಬೇಕಾಗಿರುವುದಿಲ್ಲ. ನೀವು ಮಾಸಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ವಾರ್ಷಿಕ ಆಧಾರದ ಮೇಲೆ ಕಂತು ಪಾವತಿಸುವ ಸೌಲಭ್ಯ ಒದಗಿಸುವ ಮೈ:ಹೆಲ್ತ್ ಸುರಕ್ಷಾ ಹೆಲ್ತ್ ಇನ್ಶೂರೆನ್ಸ್ ಕೂಡ ಖರೀದಿಸಬಹುದು.
ಇನ್ಶೂರೆನ್ಸ್ ಕಂಪನಿಯು ಹೆಚ್ಚಿನ ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿ ಹೊಂದಿದೆಯೇ ಎಂಬುದನ್ನು ಯಾವಾಗಲೂ ಪರಿಶೀಲಿಸಿ. ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯ ಕೇಂದ್ರವನ್ನು ಇನ್ಶೂರೆನ್ಸ್ ಕಂಪನಿಯು ಪಟ್ಟಿ ಮಾಡಿದ್ದರೇ, ಅದು ನಗದುರಹಿತ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ನಾವು 16,000+ ನಗದುರಹಿತ ಆರೋಗ್ಯ ರಕ್ಷಣಾ ಕೇಂದ್ರಗಳ ದೊಡ್ಡ ನೆಟ್ವರ್ಕ್ ಹೊಂದಿದ್ದೇವೆ.
ಸಾಮಾನ್ಯವಾಗಿ ನಿಮ್ಮ ವೈದ್ಯಕೀಯ ವೆಚ್ಚಗಳು, ನಿಮ್ಮ ರೂಮ್ ಬಗೆ ಮತ್ತು ಕಾಯಿಲೆಯನ್ನು ಅವಲಂಬಿಸಿರುತ್ತವೆ. ಆಸ್ಪತ್ರೆ ರೂಮ್ ಬಾಡಿಗೆಯ ಮೇಲೆ ಉಪಮಿತಿಗಳನ್ನು ಹೊಂದಿರದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಶಿಫಾರಸು ಮಾಡಲಾಗುತ್ತದೆ. ಇದರಿಂದಾಗಿ, ನೀವು ನಿಮಗೆ ಆರಾಮದಾಯಕ ಎನ್ನಿಸುವ ಆಸ್ಪತ್ರೆ ಕೊಠಡಿಯನ್ನು ಆಯ್ಕೆ ಮಾಡಬಹುದು. ನಮ್ಮ ಹೆಚ್ಚಿನ ಪಾಲಿಸಿಗಳು ಕಾಯಿಲೆ ಉಪಮಿತಿ ಸೂಚಿಸುವುದಿಲ್ಲ; ಇದು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒಂದು ಪ್ರಮುಖ ಅಂಶವಾಗಿದೆ.
ನೀವು ಕಾಯುವಿಕೆ ಅವಧಿಯನ್ನು ಪೂರ್ಣಗೊಳಿಸದೆ ಇರುವಾಗ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಚಾಲ್ತಿಗೆ ಬರುವುದಿಲ್ಲ. ಆನ್ಲೈನ್ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮೊದಲು, ಪಾಲಿಸಿ-ಪೂರ್ವದ ಕಾಯಿಲೆಗಳಿಗೆ ಮತ್ತು ತಾಯ್ತನದ ಪ್ರಯೋಜನಗಳಿಗಾಗಿ ಕಡಿಮೆ ಕಾಯುವಿಕೆ ಅವಧಿಗಳನ್ನು ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಯಾವಾಗಲೂ ಪರಿಶೀಲಿಸಿ.
ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಯಾವಾಗಲೂ ಆಯ್ಕೆ ಮಾಡಿ. ನೀವು ಭವಿಷ್ಯದಲ್ಲಿ ಮಾಡಬಹುದಾದ ಕ್ಲೈಮ್‌ಗಳನ್ನು ಬ್ರ್ಯಾಂಡ್ ಅನುಮೋದಿಸುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು, ನೀವು ಕಸ್ಟಮರ್ ಬೇಸ್ ಮತ್ತು ಕ್ಲೈಮ್ ಪಾವತಿ ಸಾಮರ್ಥ್ಯವನ್ನು ಗಮನಿಸಬೇಕು.
ಸಾಮಾನ್ಯವಾಗಿ, ಒಂದು ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದರ ಬಗ್ಗೆ ನೀವು ಯೋಚಿಸಿದಾಗ, ನಿಮ್ಮ ಮನಸ್ಸಿಗೆ ಬರಬಹುದಾದ ಮೊದಲ ವಿಷಯವೆಂದರೆ, ನಾನು ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಅರ್ಹನಾಗಿದ್ದೇನೆಯೇ? ಈ ನಿರ್ದಿಷ್ಟ ಮೆಡಿಕಲ್ ಇನ್ಶೂರೆನ್ಸ್ ಪ್ಲಾನ್‌ಗೆ ಕೆಲವು ವೈದ್ಯಕೀಯ ಪರೀಕ್ಷೆಗಳ ಅಗತ್ಯವಿದೆಯೇ? ಅದರ ಜೊತೆಗೆ, ಹೆಲ್ತ್ ಇನ್ಶೂರೆನ್ಸ್ಗೆ ಒಪ್ಪಿಗೆಯ ರುಜು ಮಾಡುವ ಮೊದಲು ನಾನು ವಯಸ್ಸಿನ ಮಾನದಂಡವನ್ನು ಪೂರೈಸುತ್ತೇನೆಯೇ? ಈ ಪ್ರಶ್ನೆಗಳು ಆಗಾಗ ಕಾಡುತ್ತವೆ. ಆದಾಗ್ಯೂ, ನೀವು ಆನ್ಲೈನ್ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಪ್ರಯತ್ನಿಸುವಾಗ, ಭಾರತದಲ್ಲಿ ಒಂದು ನಿರ್ದಿಷ್ಟ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮೊದಲು ನಿಮ್ಮ ಅರ್ಹತೆಯನ್ನು ಪರಿಶೀಲಿಸಬಹುದು.
ಮೆಡಿಕ್ಲೈಮ್ ಪಾಲಿಸಿಯನ್ನು ಖರೀದಿಸುವಾಗ, ನಿಮ್ಮ ಎಲ್ಲಾ ಪಾಲಿಸಿ ಪೂರ್ವ ಅನಾರೋಗ್ಯಗಳನ್ನು ಘೋಷಿಸಲು ನೀವು ಪ್ರಾಮಾಣಿಕರಾಗಿರಬೇಕು. ಈ ಅನಾರೋಗ್ಯಗಳು ನಿಮ್ಮ ಸಾಮಾನ್ಯ ಜ್ವರ, ಫ್ಲೂ ಅಥವಾ ತಲೆನೋವುಗಳು ಆಗಿರಬೇಕಾಗಿಲ್ಲ. ಆದಾಗ್ಯೂ, ಹಿಂದೆ ನೀವು ಯಾವುದೇ ಕಾಯಿಲೆ, ಹುಟ್ಟಿನ ದೋಷಗಳ ಡಯಾಗ್ನಸಿಸ್ಗೆ ಒಳಗಾಗಿದ್ದರೆ, ಶಸ್ತ್ರಚಿಕಿತ್ಸೆ ಅಥವಾ ಯಾವುದೇ ಗಂಭೀರತೆಯ ಕ್ಯಾನ್ಸರ್ನಿಂದ ಬಾಧಿತರಾಗಿದ್ದರೆ, ನಿಮ್ಮ ಮೆಡಿಕಲ್ ಇನ್ಶೂರೆನ್ಸ್ ಕಂಪನಿಗೆ ತಿಳಿಸುವುದು ಮುಖ್ಯವಾಗಿದೆ. ಏಕೆಂದರೆ, ಶಾಶ್ವತ ಹೊರಗಿಡುವಿಕೆಯ ಅಡಿಯಲ್ಲಿ ಅನೇಕ ಕಾಯಿಲೆಗಳನ್ನು ಪಟ್ಟಿ ಮಾಡಲಾಗಿದೆ. ಕೆಲವನ್ನು ಕಾಯುವಿಕೆ ಅವಧಿಯೊಂದಿಗೆ ಕವರ್ ಮಾಡಲಾಗುತ್ತದೆ ಮತ್ತು ಇನ್ನೂ ಕೆಲವನ್ನು ಕಾಯುವಿಕೆ ಅವಧಿಯ ಜೊತೆಗೆ ಹೆಚ್ಚುವರಿ ಪ್ರೀಮಿಯಂ ವಿಧಿಸುವ ಮೂಲಕ ಕವರ್ ಮಾಡಲಾಗುತ್ತದೆ.
ನೀವು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನವರಾಗಿದ್ದರೆ, ನೀವು ಸುಲಭವಾಗಿ ನಿಮಗೋಸ್ಕರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ನಾವು ನವಜಾತ ಶಿಶುಗಳಿಗೂ ಕವರೇಜ್ ನೀಡುತ್ತೇವೆ. ಆದರೆ, ಪೋಷಕರು ನಮ್ಮೊಂದಿಗೆ ಮೆಡಿಕ್ಲೈಮ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿರಬೇಕು. ನೀವು ಹಿರಿಯ ನಾಗರಿಕರಾಗಿದ್ದರೆ, 65 ವರ್ಷ ವಯಸ್ಸಿನವರೆಗೆ ಇನ್ಶೂರ್ಡ್ ಆಗಲು ವಿಮೆ ಪಡೆದುಕೊಳ್ಳಬಹುದು.
ನೀವು ಮನೆಯಲ್ಲೇ ಆರಾಮಾಗಿ ಕುಳಿತು ಇಂಟರ್ನೆಟ್ನಲ್ಲಿ ಕಣ್ಣು ಹಾಯಿಸುತ್ತಾ ಪ್ಲಾನ್‌ಗಳನ್ನು ಹುಡುಕಬಹುದು. ಇನ್ಶೂರೆನ್ಸ್ ಕಂಪನಿಯ ಆಫೀಸ್‌ಗೆ ಹೋಗುವ ಅಥವಾ ಏಜೆಂಟ್ ಒಬ್ಬರು ನಿಮ್ಮನ್ನು ಭೇಟಿ ಮಾಡುವ ಸಮಯ ಹಾಗೂ ಶ್ರಮ ಉಳಿಸುತ್ತೀರಿ. ನೀವು ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಸುರಕ್ಷಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಬಹುದು. ಅಲ್ಲದೆ, ಕೊನೆಯ ಕ್ಷಣದಲ್ಲಿ ಯಾವುದೇ ಪ್ರಕಾರದ ಆಶ್ಚರ್ಯಗಳನ್ನು ತಪ್ಪಿಸಲು ಪಾಲಿಸಿ ನಿಯಮಾವಳಿಗಳನ್ನು ಆನ್ಲೈನ್ನಲ್ಲಿ ಯಾವಾಗ ಬೇಕಾದರೂ ಓದುವ ಅವಕಾಶವಿರುತ್ತದೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗೆ ನೀವು ನಗದು ಅಥವಾ ಚೆಕ್‌ನಲ್ಲಿ ಪ್ರೀಮಿಯಂಗಳನ್ನು ಪಾವತಿಸಬೇಕಾಗಿಲ್ಲ! ಡಿಜಿಟಲ್ ಆಗಿ ಪಾವತಿಸಿ! ಅನೇಕ ಸುರಕ್ಷಿತ ಪಾವತಿ ವಿಧಾನಗಳ ಮೂಲಕ ಆನ್ಲೈನ್ನಲ್ಲಿ ಪಾವತಿ ಮಾಡಲು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿ.
ಆನ್ಲೈನ್ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ನೀವು ತಕ್ಷಣವೇ ಪ್ರೀಮಿಯಂ ಲೆಕ್ಕ ಹಾಕಬಹುದು, ಸದಸ್ಯರನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು, ಪ್ಲಾನ್‌ಗಳನ್ನು ಕಸ್ಟಮೈಜ್ ಮಾಡಬಹುದು ಮತ್ತು ನಿಮ್ಮ ಬೆರಳತುದಿಯಲ್ಲಿ ಕವರೇಜ್ ಅನ್ನು ಪರಿಶೀಲಿಸಬಹುದು.
ನೀವು ಇನ್ನು ಮುಂದೆ ಭೌತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್‌ಗಳಿಗಾಗಿ ಕಾಯಬೇಕಾಗಿಲ್ಲ. ನೀವು ಪ್ರೀಮಿಯಂ ಅನ್ನು ಆನ್ಲೈನ್ನಲ್ಲಿ ಪಾವತಿಸಿದ ತಕ್ಷಣ, ನಿಮ್ಮ ಪಾಲಿಸಿಯ PDF ಪ್ರತಿ ನಿಮ್ಮ ಮೇಲ್ಬಾಕ್ಸಿಗೆ ಬರುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ನೀವು ನಿಮ್ಮ ಪಾಲಿಸಿಯನ್ನು ಪಡೆದುಕೊಳ್ಳುತ್ತೀರಿ.
ನಮ್ಮ ಮೈ:ಹೆಲ್ತ್ ಸರ್ವೀಸಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್‌ಗಳು, ಬ್ರೋಶರ್ ಮತ್ತು ಇತರ ದಾಖಲೆಗಳಿಗೆ ಅಕ್ಸೆಸ್ ಪಡೆಯಿರಿ. ಆನ್‌ಲೈನ್ ಕನ್ಸಲ್ಟೇಷನ್ಗಳನ್ನು ಬುಕ್ ಮಾಡಲು, ನಿಮ್ಮ ಆಹಾರ ಸೇವನೆಯ ಕ್ಯಾಲೋರಿ ಮತ್ತು BMI ಕೂಡಾ ಟ್ರ್ಯಾಕ್ ಮಾಡಲು ನಮ್ಮ ವೆಲ್‌ನೆಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
ನೀವು ನಿಮಗಾಗಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುತ್ತಿದ್ದರೆ, ನೀವು ಕನಿಷ್ಠ ಪಕ್ಷ ವಾರ್ಷಿಕ ಆದಾಯಕ್ಕೆ ಸಮನಾದ ಕವರೇಜ್ ಮೊತ್ತವನ್ನು ಆಯ್ಕೆ ಮಾಡಬೇಕು. ಉದಾಹರಣೆಗೆ, ನಿಮ್ಮ ವಾರ್ಷಿಕ ಆದಾಯ ₹6 ಲಕ್ಷ ಆಗಿದ್ದರೆ, ನೀವು ಕನಿಷ್ಠ ₹3 ಲಕ್ಷದ ಹೆಲ್ತ್ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡಬೇಕು.
ಆದರೆ, ಕಳೆದ ಕೆಲವು ವರ್ಷಗಳಲ್ಲಿ ಹೆಲ್ತ್‌ಕೇರ್ ವೆಚ್ಚಗಳು ಅಪಾರವಾಗಿ ಹೆಚ್ಚಾಗಿವೆ. ಆದ್ದರಿಂದ, ನಿಮ್ಮ ಸಂಬಳದ 50% ಕ್ಕೆ ಸಮನಾಗಿರುವಷ್ಟಿದ್ದರೂ, ಕಡಿಮೆ ಹೆಲ್ತ್ ಕವರ್ ಆಯ್ಕೆ ಮಾಡಿದರೆ ಸಾಕಾಗುವುದಿಲ್ಲ. ಆದ್ದರಿಂದ, ಇನ್ಶೂರೆನ್ಸ್ ತಜ್ಞರು ತಮ್ಮ ವೈದ್ಯಕೀಯ ವೆಚ್ಚಗಳನ್ನು ಆರಾಮದಾಯಕವಾಗಿ ಕವರ್ ಮಾಡಲು ₹5 ಲಕ್ಷದ ಕನಿಷ್ಠ ಹೆಲ್ತ್ ಇನ್ಶೂರೆನ್ಸ್ ಕವರ್ ಆಯ್ಕೆ ಮಾಡಲು ಜನರಿಗೆ ಸಲಹೆ ನೀಡುತ್ತಾರೆ.
ಹೆಚ್ಚುವರಿಯಾಗಿ, ನೀವು ನಿಮ್ಮ 20 ರ ಆರಂಭಿಕ ವರ್ಷಗಳಲ್ಲಿ ಇನ್ಶೂರೆನ್ಸ್ ಖರೀದಿಸಿದರೆ, ಕ್ಲೈಮ್ ಮಾಡುವ ಸಾಧ್ಯತೆಗಳು ಕಡಿಮೆಯಾಗಿರುತ್ತವೆ ಮತ್ತು ಇದರಿಂದಾಗಿ ನೀವು ಪ್ರತಿ ಕ್ಲೈಮ್-ಮುಕ್ತ ವರ್ಷದಲ್ಲಿ ಒಟ್ಟುಗೂಡಿಸಿದ ಬೋನಸ್ ಸಹಾಯದಿಂದ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ನಿಮ್ಮ ವಿಮಾ ಮೊತ್ತವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.
ಕುಟುಂಬಕ್ಕಾಗಿ ಎಂಪ್ಲಾಯರ್ಸ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೂ, ನಿಮಗೆ ಪ್ರತ್ಯೇಕ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಬೇಕಾಗುತ್ತದೆ. ನಿಮ್ಮ ಉದ್ಯೋಗದಾತರು ನೀಡಿರುವ ಇನ್ಶೂರೆನ್ಸ್ ನೀವು ಸಂಸ್ಥೆಯಲ್ಲಿ ಕೆಲಸ ಮಾಡುವವರಿಗೆ ಮಾತ್ರ ಮಾನ್ಯವಾಗಿರುತ್ತದೆ. ಸಾಮಾನ್ಯವಾಗಿ ಗ್ರೂಪ್ ಪ್ಲಾನ್‌ಗಳು ಬೇಸಿಕ್ ಕವರೇಜ್ ಮಾತ್ರ ನೀಡುತ್ತವೆ.
ಹೆಲ್ತ್ ಇನ್ಶೂರೆನ್ಸ್ ಪೋರ್ಟಬಿಲಿಟಿ ನೀವು ವಿಮಾದಾತರನ್ನು ಬದಲಾಯಿಸುವಾಗ ಮತ್ತೊಂದು ವೇಟಿಂಗ್ ಪಿರಿಯಡ್ವರೆಗೆ ಕಾಯಬೇಕಿಲ್ಲ ಎಂಬುದನ್ನು ಖಾತ್ರಿಗೊಳಿಸುತ್ತದೆ. ಪೋರ್ಟಬಿಲಿಟಿಯ ಸಹಾಯದಿಂದ ಯಾವುದೇ ಪ್ರಯೋಜನಗಳನ್ನು ಕಳೆದುಕೊಳ್ಳದೆ ನಿಮ್ಮ ಇನ್ಶೂರರ್ ಅನ್ನು ಬದಲಾಯಿಸಬಹುದು.
ಪಾಲಿಸಿ ಖರೀದಿಸುವುದಕ್ಕೂ ಮೊದಲೇ ಇದ್ದ ಗಾಯ ಅಥವಾ ಅನಾರೋಗ್ಯವನ್ನು ಪೂರ್ವ-ಅಸ್ತಿತ್ವದ ಕಾಯಿಲೆ ಎನ್ನಲಾಗುತ್ತದೆ. ಸಾಮಾನ್ಯವಾಗಿ, ವೇಟಿಂಗ್ ಪಿರಿಯಡ್ ಮುಗಿದ ನಂತರವಷ್ಟೇ ಇನ್ಶೂರರ್ ಪೂರ್ವ-ಅಸ್ತಿತ್ವದ ಕಾಯಿಲೆಗಳಿಗೆ ಕವರೇಜ್ ನೀಡುತ್ತಾರೆ.
ಆಸ್ಪತ್ರೆ ದಾಖಲಾತಿಗೆ ಸಂಬಂಧಿಸಿದಂತೆ ಅನೇಕ ವೆಚ್ಚಗಳಿರುತ್ತವೆ. ದಾಖಲಾಗುವ ಮೊದಲು, ವೈದ್ಯರನ್ನು ಸಂಪರ್ಕಿಸಿ ರೋಗ ನಿರ್ಣಯಕ್ಕಾಗಿ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಡಿಸ್ಚಾರ್ಜ್ ಆದ ನಂತರವೂ ಇದೇ ಪ್ರಕ್ರಿಯೆಯನ್ನು ಅನುಸರಿಸಲಾಗುತ್ತದೆ. ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ದಾಖಲಾದ ನಂತರದ ವೆಚ್ಚಗಳನ್ನು ಪೂರ್ವ ದಾಖಲಾತಿ ಮತ್ತು ದಾಖಲಾತಿ ನಂತರದ ವೆಚ್ಚಗಳಾಗಿ ಪರಿಗಣಿಸಲಾಗುತ್ತದೆ.
ಹೌದು, ನೀವು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ವೈದ್ಯಕೀಯ ಪರೀಕ್ಷೆ ಮಾಡಿಸಬೇಕಾಗುತ್ತದೆ. ಆದರೆ, ನೀವು ನಿರ್ದಿಷ್ಟ ವಯೋಮಿತಿಗಿಂತ ಕಡಿಮೆ ವಯಸ್ಸಿನವರಾಗಿದ್ದರೆ ಕೆಲವು ಪಾಲಿಸಿಗಳಿಗೆ ಪರೀಕ್ಷೆಯ ಅಗತ್ಯವಿಲ್ಲ.
ಹೌದು, ಪಾಲಿಸಿ ಖರೀದಿಸುವಾಗ ಅಥವಾ ನವೀಕರಿಸುವಾಗ ನೀವು ಕುಟುಂಬದ ಸದಸ್ಯರನ್ನು ಸೇರಿಸಬಹುದು.`
90 ದಿನಗಳ ಮಕ್ಕಳಿಂದ ಹಿಡಿದು 21 ವರ್ಷದವರೆಗಿನ ವ್ಯಕ್ತಿಗಳನ್ನು ನವೀಕರಣದ ಸಮಯದಲ್ಲಿ, ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್‍ನಲ್ಲಿ ಸೇರಿಸಬಹುದು.
ಅರ್ಜಿದಾರರ ವಯಸ್ಸು ಕಡಿಮೆ ಇದ್ದಷ್ಟೂ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಇರುತ್ತದೆ. ಹಾಗೆಯೇ ಚಿಕ್ಕ ವಯಸ್ಸಿನಲ್ಲೇ ಇನ್ಶೂರೆನ್ಸ್ ಖರೀದಿಸಿದರೆ ನಿಮಗೆ ಹೆಚ್ಚಿನ ಪ್ರಯೋಜನಗಳು ದೊರೆಯುತ್ತವೆ.
ಹೌದು, ನಿಮ್ಮ ಕುಟುಂಬದ ಅಗತ್ಯಗಳಿಗೆ ಅನುಗುಣವಾಗಿ ನೀವು ಒಂದಕ್ಕಿಂತ ಹೆಚ್ಚು ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಪಡೆಯಬಹುದು.
ಯಾವ ಅವಧಿಯಲ್ಲಿ ಪಾಲಿಸಿದಾರರು ನಿರ್ದಿಷ್ಟ ಅನಾರೋಗ್ಯಕ್ಕೆ ಸಂಬಂಧಪಟ್ಟಂತೆ ಕೆಲವು ಅಥವಾ ಎಲ್ಲ ಪ್ರಯೋಜನಗಳನ್ನೂ ಪಡೆದುಕೊಳ್ಳಲು ಸಾಧ್ಯವಿಲ್ಲವೋ ಅದುವೇ ವೇಟಿಂಗ್ ಪಿರಿಯಡ್.
ಫ್ರೀ ಲುಕ್ ಪೀರಿಯಡ್ ಎಂದರೆ ಯಾವುದೇ ದಂಡವಿಲ್ಲದೆ ನಿಮ್ಮ ಪಾಲಿಸಿಯನ್ನು ರದ್ದು ಮಾಡಿಕೊಳ್ಳಬಹುದಾದ ಸಮಯವಾಗಿದೆ. ಸಾಮಾನ್ಯವಾಗಿ, ಇನ್ಶೂರರ್ ಅವಲಂಬಿಸಿ ಫ್ರೀ ಲುಕ್ ಪೀರಿಯಡ್ 10 ರಿಂದ 15 ದಿನಗಳವರೆಗೆ ಇರುತ್ತದೆ.
ಇನ್ಶೂರೆನ್ಸ್ ಕಂಪನಿಗಳು ತಮ್ಮ ನೆಟ್‌ವರ್ಕ್‌ನಲ್ಲಿ ಹಲವಾರು ಆಸ್ಪತ್ರೆಗಳನ್ನು ಹೊಂದಿರುತ್ತವೆ. ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಮಾತ್ರ ನೀವು ನಗದುರಹಿತ ಚಿಕಿತ್ಸೆ ಪಡೆಯಬಹುದು. ನೆಟ್‌ವರ್ಕ್‌ನಲ್ಲಿ ಇಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ, ಮೊದಲು ಬಿಲ್ ಪಾವತಿಸಿ ನಂತರ ಮರುಪಾವತಿ ಕ್ಲೇಮ್ ಮಾಡಿಕೊಳ್ಳಬಹುದು.
ಒಂದು ವೇಳೆ ಇನ್ಶೂರ್ಡ್ ವ್ಯಕ್ತಿಯನ್ನು ಅವರ ಆರೋಗ್ಯ ಸ್ಥಿತಿಯ ಕಾರಣದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದಿದ್ದರೆ ಅಥವಾ ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿರದ ಕಾರಣಕ್ಕೆ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುವ ಹಾಗಾದರೆ ಅದನ್ನು ಮನೆ ಆಸ್ಪತ್ರೆ ಎನ್ನಲಾಗುತ್ತದೆ.
ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳು, ರೋಗನಿರ್ಣಯಕ್ಕಾಗಿ ಮಾಡುವ ಪರೀಕ್ಷೆಗಳು, ಔಷಧಿ ಮತ್ತು ಸಮಾಲೋಚನೆ ವೆಚ್ಚಗಳು ಮೂಲಭೂತ ಆಸ್ಪತ್ರೆ ದಾಖಲಾತಿ ಅಡಿಯಲ್ಲಿ ಕವರ್ ಆಗುತ್ತವೆ.
ಕಿರಿಯರಾಗಿದ್ದರೆ ನೀವು ಉತ್ತಮ ಹೆಲ್ತ್ ಇನ್ಶೂರೆನ್ಸ್ ಅನ್ನು ಪಡೆಯುತ್ತೀರಿ. 18 ವಯಸ್ಸಿನ ನಂತರ ನೀವು ಹೆಲ್ತ್ ಕವರ್ ಅನ್ನು ಪಡೆಯಬಹುದು. 18 ಕ್ಕಿಂತ ಕಡಿಮೆ ವಯಸ್ಸಿನವರು ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ರಕ್ಷಣೆ ಪಡೆಯಬಹುದು.
ಒಬ್ಬ ಮೈನರ್ ಆಗಿ ನೀವು ವೈಯಕ್ತಿಕವಾಗಿ ಹೆಲ್ತ್ ಇನ್ಶೂರೆನ್ಸ್ ಖರೀದಿಸಲು ಸಾಧ್ಯವಿಲ್ಲ. ಆದರೆ, ಮೈನರ್ ತಮ್ಮ ಪೋಷಕರ ಫ್ಯಾಮಿಲಿ ಹೆಲ್ತ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಪಡೆಯಬಹುದು.