ಟ್ರಾಕ್ಟರ್‌ಗಳು ಮತ್ತು ಇತರ ಭಾರೀ ವಾಣಿಜ್ಯ ವಾಹನಗಳು ಯಾವುದೇ ಸಾರಿಗೆ ವ್ಯವಸ್ಥೆಯ ಅವಿಭಾಜ್ಯ ಅಂಗಗಳು. ಈ ಸದೃಢ ಮತ್ತು ವಿಶ್ವಾಸಾರ್ಹ ವಾಹನಗಳು ಸದಾ ರಸ್ತೆ ಮೇಲೆ ರಾಜಗಾಂಭೀರ್ಯದಿಂದ ಓಡಾಡುವಂತೆ ನೋಡಿಕೊಳ್ಳಿ. ಎಚ್‌ಡಿಎಫ್‌ಸಿ ಎರ್ಗೋ ಮೂಲಕ ಅತ್ಯಂತ ಕೈಗೆಟಕುವ, ಸಮಯೋಚಿತ ಮತ್ತು ವೃತ್ತಿಪರ ಆರೈಕೆಯನ್ನು ಖಚಿತಪಡಿಸಿಕೊಳ್ಳಿ.
ನಾವು ಆಕ್ಸಿಡೆಂಟ್‌ನಿಂದ ಉಂಟಾದ ನಷ್ಟಗಳನ್ನು ನಾವು ಕವರ್ ಮಾಡುವ ಮೂಲಕ ಹಣಕಾಸು ವೆಚ್ಚವನ್ನು ತಗ್ಗಿಸುತ್ತೇವೆ.
ಸಮಗ್ರ ಮೋಟಾರ್ ಇನ್ಶೂರೆನ್ಸ್ ಪ್ಲಾನ್, ಕಳ್ಳತನದಿಂದ ನಿಮ್ಮ ಟ್ರಾಕ್ಟರ್‌ಗೆ ಉಂಟಾದ ನಷ್ಟ ಅಥವಾ ಹಾನಿಯನ್ನು ಕವರ್ ಮಾಡುತ್ತದೆ.
ನೀವು ಸಮಗ್ರ ಕವರೇಜ್ ಹೊಂದಿದ್ದರೆ, ಪ್ರವಾಹ, ಭೂಕಂಪ, ಭೂಕುಸಿತ, ಮುಂತಾದ ವಿಪತ್ತುಗಳಿಂದ ಉಂಟಾದ ಹಾನಿಗಳ ವಿರುದ್ಧ ನಿಮ್ಮ ವಾಹನಕ್ಕೆ ಕವರೇಜ್ ನೀಡಲಾಗುತ್ತದೆ. ನಾವು ಗಲಭೆಗಳಂತಹ ಮಾನವನಿರ್ಮಿತ ಅಪಾಯಗಳ ವಿರುದ್ಧವೂ ನಿಮ್ಮ ವಾಹನಕ್ಕೆ ಕವರೇಜ್ ನೀಡುತ್ತೇವೆ.
ಚಾಲಕರ ಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡುತ್ತದೆ.. ಉದ್ಯೋಗಿಗಳು ಅಥವಾ ಪ್ರಯಾಣಿಕರನ್ನು ಸಹ ಕವರ್ ಮಾಡಬಹುದು. ಆದರೆ ಅದಕ್ಕೆ ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕು.
ಪಾಲಿಸಿದಾರರಿಂದ ಥರ್ಡ್ ಪಾರ್ಟಿ ವ್ಯಕ್ತಿಗೆ ಉಂಟಾಗುವ ಯಾವುದೇ ದೈಹಿಕ ಗಾಯಗಳು ಅಥವಾ ಆಕಸ್ಮಿಕ ಸಾವು.
ಈ ಪಾಲಿಸಿಯು ಥರ್ಡ್ ಪಾರ್ಟಿ ಆಸ್ತಿಗೆ ಅಥವಾ ಯಾವುದೇ ಇತರೆ ರೀತಿಯ ಆಸ್ತಿಗೆ ಮಾಡಲಾದ ಎಲ್ಲಾ ಹಾನಿಗಳನ್ನು ಕೂಡ ಕವರ್ ಮಾಡುತ್ತದೆ.
ಕಾಲಕಾಲಕ್ಕೆ ಟ್ರಾಕ್ಟರ್ ಮೌಲ್ಯದಲ್ಲಿ ಉಂಟಾಗುವ ಇಳಿಕೆಯನ್ನು ನಾವು ಕವರ್ ಮಾಡುವುದಿಲ್ಲ.
ನಮ್ಮ Mis-D ಟ್ರಾಕ್ಟರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವುದೇ ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಬ್ರೇಕ್‌ಡೌನ್‌ಗಳನ್ನು ಕವರ್ ಮಾಡಲಾಗುವುದಿಲ್ಲ.
ನಿಮ್ಮ ಬಳಿ ಸರಿಯಾದ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ನಿಮ್ಮ Mis-D ಟ್ರಾಕ್ಟರ್ ಇನ್ಶೂರೆನ್ಸ್ ಮಾನ್ಯವಾಗುವುದಿಲ್ಲ. ಮದ್ಯ/ಮಾದಕದ್ರವ್ಯಗಳ ಪ್ರಭಾವದಲ್ಲಿ ಚಾಲನೆ ಮಾಡುವುದು ಇನ್ನಷ್ಟು ಓದಿ...
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸರಳವಾಗಿ, ಕ್ಲೈಮ್-ರಹಿತ ವರ್ಷದ ನಂತರ ನಿಮ್ಮ ಪಾಲಿಸಿಯನ್ನು ನವೀಕರಿಸುವಾಗ ಪಾವತಿಸಬೇಕಾದ ಸ್ವಂತ ಹಾನಿ ಪ್ರೀಮಿಯಂನಲ್ಲಿ ಸಿಗುವ ರಿಯಾಯಿತಿಯಾಗಿದೆ. ಎಚ್ಚರಿಕೆಯಿಂದ ಚಾಲನೆ ಮಾಡಲು ಮತ್ತು ಅಪಘಾತಗಳನ್ನು ತಪ್ಪಿಸಲು ಇದು ಪ್ರೋತ್ಸಾಹಕವಾಗಿದೆ.
ಎಲ್ಲಾ ಬಗೆಯ ವಾಹನಗಳು | ಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ % |
---|---|
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 20% |
ಇನ್ಶೂರೆನ್ಸ್‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 25% |
ಇನ್ಶೂರೆನ್ಸ್‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 35% |
ಇನ್ಶೂರೆನ್ಸ್‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 45% |
ಇನ್ಶೂರೆನ್ಸ್‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 50% |
ವಾಹನದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಅನ್ನು 'ವಿಮಾ ಮೊತ್ತ' ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಪ್ರತಿ ಇನ್ಶೂರ್ಡ್ ವಾಹನಕ್ಕೆ ಪ್ರತಿ ಪಾಲಿಸಿ ಅವಧಿಯ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ.
ವಾಹನದ IDVಯನ್ನು ಆ ಬ್ರ್ಯಾಂಡ್‌ನ ಉತ್ಪಾದಕರು ಪಟ್ಟಿ ಮಾಡಿದ ಮಾರಾಟ ಬೆಲೆ ಮತ್ತು ಇನ್ಶೂರೆನ್ಸ್/ನವೀಕರಣ ಪ್ರಾರಂಭದಲ್ಲಿ ಇನ್ಶೂರೆನ್ಸ್‌ಗಾಗಿ ಪ್ರಸ್ತಾಪಿಸಲಾದ ವಾಹನದ ಮಾಡೆಲ್ ಆಧಾರದ ಮೇಲೆ ನಿಗದಿಪಡಿಸಬೇಕು ಹಾಗೂ ಅದನ್ನು ಸವಕಳಿಗೆ ಸರಿಹೊಂದಿಸಬೇಕು (ಕೆಳಗೆ ನಿರ್ದಿಷ್ಟಪಡಿಸಿದ ಶೆಡ್ಯೂಲ್ ಪ್ರಕಾರ). ಸೈಡ್ ಕಾರ್ (ಗಳು)
ವಾಹನದ ವಯಸ್ಸು | IDV ಫಿಕ್ಸ್ ಮಾಡಲು ಸವಕಳಿ % |
---|---|
6 ತಿಂಗಳು ಮೀರದ | 5% |
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ | 15% |
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ | 20% |
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ | 30% |
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ | 40% |
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ | 50% |