ಇಂದಿನ ಕಾಲಘಟ್ಟದಲ್ಲಿ, ಹಲವಾರು ಮಂದಿ ತಮ್ಮದೇ ಕಾರಿನಲ್ಲಿ ಸುತ್ತಮುತ್ತಲಿನ ಪಟ್ಟಣಗಳಿಗೆ ಸಂಚಾರ ಮಾಡಲು ಬಯಸುತ್ತಾರೆ. ಕಾರುಗಳು ಸಾರಿಗೆಗೆ ಅನುಕೂಲಕರವಾಗಿದೆ, ಏಕೆಂದರೆ ಅದರಿಂದ ಜನರಿಗೆ ಸರಿಯಾದ ಸಮಯಕ್ಕೆ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸಲು ಸಹಾಯವಾಗುತ್ತದೆ. ಇಂದಿನ ಕಾಲದಲ್ಲಿ ಕಾರ್ ಇದ್ದವರು ಅದರೊಂದಿಗೆ, ತಮ್ಮನ್ನು ರಕ್ಷಿಸಲು ಸಹಾಯ ಮಾಡುವ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದುವುದು ಕೂಡ ಅತಿ ಮುಖ್ಯವಾಗಿದೆ.
ಆಕ್ಸಿಡೆಂಟ್ ಅಥವಾ ನೈಸರ್ಗಿಕ ವಿಪತ್ತಿನಲ್ಲಿ ಪಾಲಿಸಿದಾರರ ಕಾರು ಹಾನಿಗೊಳಗಾದರೆ ಅಥವಾ ಕಳ್ಳತನವಾಗಿದ್ದರೆ ಅಥವಾ ವಿಧ್ವಂಸಕ ಕೃತ್ಯಕ್ಕೆ ಒಳಗಾಗಿದ್ದರೆ ಸಿಗುವ ಕವರೇಜ್‌ನಲ್ಲಿ ಕಾರ್ ಇನ್ಶೂರೆನ್ಸ್ ಮೌಲ್ಯವು ಅಡಗಿದೆ.. ವಾಹನವು ಎದುರಿಸಬಹುದಾದ ಯಾವುದೇ ಹಾನಿಗಳಿಗೆ ಪಾಕೆಟ್‌ನಿಂದ ಪಾವತಿಸಬೇಕಾದ ವಿರುದ್ಧ, ಪಾಲಿಸಿದಾರರು ತಮ್ಮ ಕಾರ್ ಇನ್ಶೂರೆನ್ಸ್ ಕಂಪನಿಗೆ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಸಬೇಕಾಗುತ್ತದೆ. ಈ ಪಾವತಿಯ ಫಲಿತಾಂಶವಾಗಿ, ಕಾರ್ ಇನ್ಶೂರೆನ್ಸ್ ಪೂರೈಕೆದಾರರು ಪಾಲಿಸಿದಾರರ ಆಯಾ ಕಾರ್‌ನ ಹಾನಿಗೆ ಸಂಬಂಧಿಸಿದ ಪೂರ್ತಿ ವೆಚ್ಚವಲ್ಲದಿದ್ದರೂ ಒಂದಿಷ್ಟು ವೆಚ್ಚಗಳನ್ನು ಪಾವತಿಸುತ್ತಾರೆ.
ಕಾರ್ ಇನ್ಶೂರೆನ್ಸ್ ನ ಪ್ರಾಮುಖ್ಯತೆಯನ್ನು 1988 ರ ಮೋಟಾರ್ ವಾಹನ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ, ಇದು ಎಲ್ಲಾ ಕಾರ್ ಮಾಲೀಕರಿಗೆ ಕಾರ್ ಇನ್ಶೂರೆನ್ಸ್ ಅನ್ನು ಕಾನೂನು ಅವಶ್ಯಕತೆ ಎಂದು ನಿಗದಿಪಡಿಸುತ್ತದೆ. ಥರ್ಡ್ ಪಾರ್ಟಿ ಹೊಣೆಗಾರಿಕೆ ಇರುವ ಕಾರ್ ಇನ್ಶೂರೆನ್ಸ್ ಕಡ್ಡಾಯವಾಗಿದೆ ಮತ್ತು ಈ ವಿಧದ ಕವರೇಜ್ ಅನ್ನು ಎಲ್ಲಾ ಕನಿಷ್ಠ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಒದಗಿಸಬೇಕು.
ಮಾರುಕಟ್ಟೆಯಲ್ಲಿ ಹಲವಾರು ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳು ಲಭ್ಯವಿದ್ದು, ನೀವು ಎಲ್ಲಾ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡಿ ಖರೀದಿಸುವುದು ಮುಖ್ಯವಾಗಿದೆ. ಇಂಟರ್ನೆಟ್‌ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾದ್ದರಿಂದ ಈ ಹೋಲಿಕೆಗಳನ್ನು ಆನ್ಲೈನ್‌ನಲ್ಲಿ ಉತ್ತಮವಾಗಿ ಮಾಡಬಹುದು ಮತ್ತು ವಿವಿಧ ಗುಂಪುಗಳ ಮಧ್ಯದಲ್ಲಿ ಸುಲಭವಾಗಿ ಹೋಲಿಕೆ ಮಾಡಿ ನೋಡಬಹುದು. ಹೋಲಿಕೆಗಳು ಕಡಿಮೆ ಬೆಲೆಗೆ ಹಲವಾರು ಪ್ರಯೋಜನಗಳನ್ನು ಒದಗಿಸುವ ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ನಿಖರವಾಗಿ ನಿರ್ಧರಿಸಲು ನಿಮಗೆ ಅನುಮತಿ ನೀಡುತ್ತದೆ. ಈ ಹೋಲಿಕೆಗಳಿಗೆ ಸಂಬಂಧಿಸಿದ ಕೆಳಗಿನ ಪ್ರಮುಖ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.
ಆರಂಭಿಸುವವರಿಗಾಗಿ, ತಮ್ಮ ಬೆಲೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವ ಮೂಲಕ, ಅವುಗಳು ನಿಮ್ಮ ಬಜೆಟ್‌ಗೆ ಸೂಕ್ತವಾಗಿವೆಯೇ, ಇಲ್ಲವೇ ಎಂಬುದನ್ನು ನಿರ್ಧರಿಸಲು ನಿಮಗೆ ಸಾಧ್ಯವಾಗುತ್ತದೆ.. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಿಗಿಂತ ಹೆಚ್ಚು ಕೈಗೆಟಕುವಂತಿವೆ. ಆದರೂ ಸಹ, ಎರಡನೆಯದಕ್ಕೆ ಹೋಲಿಸಿದರೆ ಮೊದಲನೆಯದು ಹೆಚ್ಚು ಕವರೇಜ್ ಒದಗಿಸುವುದಿಲ್ಲ. ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಗಳು ಹೆಚ್ಚುವರಿ ಕವರೇಜ್ ಒದಗಿಸುತ್ತವೆ ಏಕೆಂದರೆ ಅವುಗಳು ಶೂನ್ಯ ಸವಕಳಿ ಕವರ್ ರಿಂದ ರಸ್ತೆಬದಿಯ ಸಹಾಯ ಕವರ್ ವರೆಗಿನ ಆ್ಯಡ್-ಆನ್‌ಗಳನ್ನು ಒದಗಿಸುತ್ತವೆ
ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳ ನಡುವೆ ಹೋಲಿಕೆ ಮಾಡುವುದರ ಮೂಲಕ, ಯಾವ ಪಾಲಿಸಿಯು ನಿಮಗೆ ಅತ್ಯಂತ ಸೂಕ್ತ ಕವರೇಜ್ ಒದಗಿಸುತ್ತದೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಿಂದ ಹಿಡಿದು ಸಮಗ್ರ ಪಾಲಿಸಿಗಳವರೆಗೆ ಹಲವಾರು ಕವರೇಜ್ ಆಯ್ಕೆಗಳಿವೆ. ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಪಾಲಿಸಿದಾರರು, ಸಮಗ್ರ ಪಾಲಿಸಿಗಳಂತೆ ಹಲವಾರು ಐಚ್ಛಿಕ ಆ್ಯಡ್-ಆನ್‌ಗಳನ್ನು ಹೊಂದಿರದೇ ಕನಿಷ್ಠ ಕವರೇಜ್‌ಗಳನ್ನು ಮಾತ್ರ ಪಡೆಯುತ್ತಾರೆ.
ನೀವು ಬೇರೆಬೇರೆ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಸಿ ನೋಡಿದಾಗ, ಪ್ರತಿ ಪ್ಲಾನ್ ಅಡಿಯಲ್ಲಿ ನೀಡಲಾಗುವ ಸೇವೆಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಕಾರ್ ಇನ್ಶೂರೆನ್ಸ್ ನೀಡಿದ ನಂತರದ ಕಾಲದಲ್ಲಿ ಪೂರೈಕೆದಾರರು ಒದಗಿಸುವ ಸೇವೆಗಳನ್ನು ಗಮನಿಸುವುದು ಕೂಡಾ ಮುಖ್ಯ. ಉದಾಹರಣೆಗೆ, ಎಚ್‌ಡಿಎಫ್‌ಸಿ ಎರ್ಗೋ ತನ್ನ ಪಾಲಿಸಿದಾರರಿಗೆ, ಓವರ್‌ನೈಟ್ ಕಾರ್ ರಿಪೇರಿ ಸೇವೆ ಸೇರಿದಂತೆ ಅನೇಕ ಹೆಚ್ಚುವರಿ ಸೇವೆಗಳನ್ನು ಒದಗಿಸುತ್ತದೆ. ಇದು ದೇಶಾದ್ಯಂತ ನಗದುರಹಿತ ಗ್ಯಾರೇಜ್‌ಗಳ ವಿಶಾಲ ನೆಟ್ವರ್ಕ್ ಹೊಂದಿದೆ.
ಕೇವಲ ಕಾನೂನು ಅವಶ್ಯಕತೆಗಾಗಿ ಮಾತ್ರವಲ್ಲದೆ, ಕಾರು ಮಾಲೀಕರ ನೆಮ್ಮದಿಯ ದೃಷ್ಟಿಯಿಂದಲೂ ಸರಿಯಾದ ಕಾರ್ ಇನ್ಶೂರೆನ್ಸ್ ಬಹಳ ಮುಖ್ಯವಾಗುತ್ತದೆ. ಕಾರ್ ಇನ್ಶೂರೆನ್ಸ್ ಪಡೆಯುವುದು ಒಂದು ಸರಳ ಮತ್ತು ಸುಲಭ ಪ್ರಕ್ರಿಯೆಯಾಗಿದ್ದು, ಅದನ್ನು ಮನೆಯಲ್ಲಿ ಕುಳಿತೇ ಆರಾಮವಾಗಿ ಮುಗಿಸಬಹುದು. ಆಸಕ್ತ ಅರ್ಜಿದಾರರು ತ್ವರಿತವಾಗಿ ಕೋಟ್ ಪಡೆಯಲು, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಬೇಕಾಗುತ್ತದೆ.
ಹೋಲಿಕೆಯ ಅಂಶಗಳು | ಥರ್ಡ್ ಪಾರ್ಟಿ ಇನ್ಶೂರೆನ್ಸ್ | ಸಮಗ್ರವಾದ ಕಾರ್ ಇನ್ಶೂರೆನ್ಸ್ |
ಒದಗಿಸಲಾದ ಕವರೇಜ್ | ಹೆಸರೇ ಸ್ಪಷ್ಟವಾಗಿ ಸೂಚಿಸುವಂತೆ, ಥರ್ಡ್ ಪಾರ್ಟಿ ಇನ್ಶೂರೆನ್ಸ್, ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯ ವಿರುದ್ಧ ಮಾತ್ರ ನಿಮ್ಮನ್ನು ಕವರ್ ಮಾಡುತ್ತದೆ. ಇದು ಭಾರತದಲ್ಲಿ ಅತ್ಯಂತ ಬೇಸಿಕ್ ಆಗಿರುವ ಇನ್ಶೂರೆನ್ಸ್ ಕವರ್ ಆಗಿದೆ ಮತ್ತು ಕಡ್ಡಾಯವಾಗಿದೆ. | ಮತ್ತೊಂದೆಡೆ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್ ಅಪಾಯವನ್ನು ಕಡಿಮೆ ಮಾಡುತ್ತದೆ ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡುವುದರಿಂದ ಇದು ಗಮನಾರ್ಹ ಅಂಶವಾಗಿದೆ. |
ಆ್ಯಡ್-ಆನ್‌ಗಳ ಲಭ್ಯತೆ | ಈ ಪಾಲಿಸಿ ಅಡಿಯಲ್ಲಿ ನೀವು ಯಾವುದೇ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. | ಹೌದು, ನೀವು ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ಹೊಂದಿದ್ದೀರಿ ನಿಮ್ಮ ಅಸ್ತಿತ್ವದಲ್ಲಿರುವ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ವೃದ್ಧಿಸಿಕೊಳ್ಳಿ |
ಕಸ್ಟಮೈಸೇಶನ್ | ಇಲ್ಲ, ಯಾವುದೇ ಕಸ್ಟಮೈಸೇಶನ್ ಸಾಧ್ಯವಿಲ್ಲ.. ಒಂದು ಸ್ಟ್ಯಾಂಡರ್ಡ್ ಪಾಲಿಸಿಯು ಎಲ್ಲಕ್ಕೂ ಅನ್ವಯವಾಗುತ್ತದೆ. | ಹೌದು, ಇದು IDV ಅಥವಾ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ ಕಸ್ಟಮೈಜ್ ಮಾಡಲು ಅನುಮತಿ ನೀಡುತ್ತದೆ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ನಿಮ್ಮ ಪ್ರೀಮಿಯಂ ಮೊತ್ತವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. |
ಪ್ರಯೋಜನಗಳು | ಒಂದು ವೇಳೆ ವ್ಯಕ್ತಿ ಅಥವಾ ಆಸ್ತಿಯಾಗಿರಲಿ, ಥರ್ಡ್ ಪಾರ್ಟಿಗೆ ಯಾವುದೇ ಹಾನಿ ಉಂಟಾದ ಸಂದರ್ಭದಲ್ಲಿ ನಿಮ್ಮನ್ನು ಕವರ್ ಮಾಡಲಾಗುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬಹುದು. | ಇದು ನಿಮಗೆ ನೈಸರ್ಗಿಕ ವಿಕೋಪಗಳಾದ ಭೂಕಂಪ, ಸೈಕ್ಲೋನ್ಗಳು, ಬಿರುಗಾಳಿ ಇತ್ಯಾದಿಗಳ ವಿರುದ್ಧ ಕವರೇಜ್ ನೀಡುತ್ತದೆ. ಮಾನವನಿರ್ಮಿತ ಕೃತ್ಯಗಳಾದ ಕಳ್ಳತನ, ವಿಧ್ವಂಸಕತೆ, ಬೆಂಕಿ ಇತ್ಯಾದಿಗಳು ಕೂಡ ಕವರೇಜ್‌ನ ಒಂದು ಭಾಗ. ಇದರ ಜೊತೆಗೆ, ನೀವು ಯಾವುದೇ ಕ್ಲೈಮ್ಗಳನ್ನು ಸಲ್ಲಿಸದಿದ್ದರೆ ವಾರ್ಷಿಕ ನವೀಕರಣ ಮಾಡುವಾಗ NCB ಅಥವಾ ನೋ ಕ್ಲೈಮ್ಸ್ ಬೋನಸ್ ಪ್ರಯೋಜನ ಪಡೆಯಬಹುದು. |
ಕೊರತೆಗಳು | ಇದು ನಿಮ್ಮನ್ನು ಬಹುಸಂಖ್ಯೆಯ ಅಪಾಯಗಳಿಗೆ ಗುರಿಯಾಗುವಂತೆ ಮಾಡುತ್ತದೆ ಮತ್ತು ಸ್ವಂತ ಹಾನಿಯ ಸಂದರ್ಭದಲ್ಲಿ ನಿಮ್ಮ ಸ್ವಂತ ಜೇಬಿನಿಂದ ಹಣವನ್ನು ಖರ್ಚು ಮಾಡುವಾಗ ವಿಷಾದವನ್ನು ಉಂಟುಮಾಡಬಹುದು. | ಆದಾಗ್ಯೂ, ಪ್ರೀಮಿಯಂ ಮೊತ್ತವು ಥರ್ಡ್ ಪಾರ್ಟಿ ವ್ಯಕ್ತಿಯ ಇನ್ಶೂರೆನ್ಸ್ ಕವರ್ಗಿಂತ ಹೆಚ್ಚಿರಬಹುದು, ಅದು ನೀಡುವ ಹೆಚ್ಚುವರಿ ವ್ಯಾಪ್ತಿಗೆ ಇದು ನ್ಯಾಯ ಒದಗಿಸುತ್ತದೆ. |
ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್ನಲ್ಲಿ ಹೋಲಿಕೆ ಮಾಡುವ ಮೊದಲು, ನೀವು ವಿವಿಧ ಪಾಲಿಸಿ ವಿಧಗಳ ಬಗ್ಗೆ ತಿಳಿದುಕೊಳ್ಳಬೇಕು. ನೀವು ಆಯ್ಕೆ ಮಾಡಬಹುದಾದ ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿ ಇಲ್ಲಿದೆ.
ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್: ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ಇನ್ಶೂರೆನ್ಸ್ ಮಾಡಿದ ಕಾರನ್ನು ಚಾಲನೆ ಮಾಡುವಾಗ ಬೇರೊಬ್ಬರ ಆಸ್ತಿ/ವಾಹನ ಅಥವಾ ಗಾಯಗಳಿಗೆ ಉಂಟಾಗುವ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವಿರುದ್ಧ ಕವರ್ ಮಾಡುತ್ತದೆ. ಆದಾಗ್ಯೂ, ಈ ಕವರ್‌ನೊಂದಿಗೆ ನಿಮ್ಮ ವಾಹನಕ್ಕೆ ಸ್ವಂತ ಹಾನಿಗಾಗಿ ನೀವು ಕ್ಲೈಮ್ ಮಾಡಲು ಸಾಧ್ಯವಿಲ್ಲ. 1988 ರ ಮೋಟಾರ್ ವಾಹನ ಕಾಯ್ದೆಯಡಿ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವುದು ಕಡ್ಡಾಯವಾಗಿದೆ.
ಸಮಗ್ರ ಕಾರ್ ಇನ್ಶೂರೆನ್ಸ್: ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಹೋಲಿಸಿದರೆ, ಸಮಗ್ರ ಪಾಲಿಸಿಯು ಥರ್ಡ್ ಪಾರ್ಟಿಗೆ ಉಂಟಾದ ಹಾನಿಗಳು/ಗಾಯಗಳನ್ನು ಮತ್ತು ಸ್ವಂತ ಹಾನಿಗಳನ್ನು ಕವರ್ ಮಾಡುತ್ತದೆ. ಅದರರ್ಥ ಅಪಘಾತ, ಬೆಂಕಿ, ನೈಸರ್ಗಿಕ ವಿಕೋಪಗಳು, ಮಾನವ ನಿರ್ಮಿತ ವಿಕೋಪಗಳು, ಕಳ್ಳತನ ಮತ್ತು ಯಾವುದೇ ಇನ್ಶೂರೆಬಲ್ ಅಪಾಯದ ಸಂದರ್ಭದಲ್ಲಿ ನಿಮ್ಮ ಕಾರಿಗೆ ಉಂಟಾದ ಹಾನಿಗಳಿಗೆ ಸಮಗ್ರ ಕವರೇಜ್ ಒದಗಿಸುತ್ತದೆ.
ಸ್ಟ್ಯಾಂಡ್ಅಲೋನ್ ಸ್ವಂತ ಹಾನಿ ಕವರ್: ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಪಾಲಿಸಿಯು ಅಪಘಾತ, ನೈಸರ್ಗಿಕ ವಿಪತ್ತು, ಭೂಕಂಪ, ಬೆಂಕಿ, ಕಳ್ಳತನ ಇತ್ಯಾದಿಗಳಿಂದ ಉಂಟಾದ ವೆಚ್ಚದ ನಷ್ಟದಿಂದ ನಿಮ್ಮನ್ನು ರಕ್ಷಿಸುತ್ತದೆ. ಸ್ಟ್ಯಾಂಡರ್ಡ್ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್‌ಗೆ ವಿರುದ್ಧವಾಗಿ ಸ್ವಂತ ಹಾನಿ ಇನ್ಶೂರೆನ್ಸ್ ಐಚ್ಛಿಕವಾಗಿದೆ. ನೀವು ಈಗಾಗಲೇ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ಇದು ಕಡ್ಡಾಯ ಅವಶ್ಯಕತೆಯಾಗಿದೆ, ನಿಮ್ಮ ಸ್ವಂತ ಹಾನಿಯ ಕವರೇಜನ್ನು ಸೇರಿಸುವುದರಿಂದ ನಿಮ್ಮ ವಾಹನವು ಯಾವಾಗಲೂ ಸಂಪೂರ್ಣವಾಗಿ ಇನ್ಶೂರ್ ಆಗಿದೆ ಎಂದು ಖಾತರಿಪಡಿಸುತ್ತದೆ.
ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಸಿ ನೋಡಿದಾಗ, ಅನೇಕ ಅಂಶಗಳು ಕಂಡುಬರುತ್ತದೆ. ಇವುಗಳಲ್ಲಿ ಕೆಲವು ಅತ್ಯಂತ ಪ್ರಮುಖ ಅಂಶಗಳನ್ನು ಕೆಳಗೆ ಪರಿಶೀಲಿಸಲಾಗಿದೆ.
ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡಿದಾಗ ಹಲವಾರು ಪ್ರಯೋಜನಗಳಿವೆ. ಕೆಲವು ಪ್ರಯೋಜನಗಳನ್ನು ಈ ಕೆಳಗೆ ನೋಡೋಣ:
ನೀವು ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಸಿದ ನಂತರ, ಈ ಕೆಳಗಿನ ಹಂತಗಳನ್ನು ನೋಡುವ ಮೂಲಕ ನೀವು ಅದನ್ನು ಖರೀದಿಸಬಹುದು:
ಹಂತ 1 - ವಿಮಾದಾತರ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2 - ಆ ವೆಬ್‌ಸೈಟ್‌ನಿಂದ ಕಾರ್ ಇನ್ಶೂರೆನ್ಸ್ ಪುಟಕ್ಕೆ ನ್ಯಾವಿಗೇಟ್ ಮಾಡಿ.
ಹಂತ 3 - ಮೇಕ್ ಮಾಡೆಲ್ ವಿವರಗಳೊಂದಿಗೆ ನಿಮ್ಮ ವಾಹನದ ನೋಂದಣಿ ನಂಬರನ್ನು ನಮೂದಿಸಿ.
ಹಂತ 4 - ಸಮಗ್ರ ಅಥವಾ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ನಡುವೆ ಆಯ್ಕೆ ಮಾಡಿ.
ಹಂತ 5 - ಶೂನ್ಯ ಸವಕಳಿ, ನೀವು ಸಮಗ್ರ ಕವರ್ ಆಯ್ಕೆ ಮಾಡಿದರೆ ನೋ ಕ್ಲೈಮ್ ಬೋನಸ್ ರಕ್ಷಣೆಯಂತಹ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಿ.
ಹಂತ 6 - ಕೋಟ್ ನೋಡಿ, ಆನ್ಲೈನಿನಲ್ಲಿ ಪ್ರೀಮಿಯಂ ಪಾವತಿಸಿ ಮತ್ತು ನಿಮ್ಮ ನೋಂದಾಯಿತ ಇಮೇಲ್ ID ಯಲ್ಲಿ ನೀವು ತಕ್ಷಣವೇ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ಪಡೆಯುತ್ತೀರಿ.
• ವೆಚ್ಚ: ಲಭ್ಯವಿರುವ ಬೆಲೆಯಲ್ಲಿ ಗರಿಷ್ಠ ಕವರೇಜನ್ನು ಒದಗಿಸುವ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿದೆ. ಆನ್ಲೈನ್ನಲ್ಲಿ ಕಾರ್ ಇನ್ಶೂರೆನ್ಸ್ ಹೋಲಿಕೆ ಮಾಡುವಾಗ ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪ್ಲಾನ್ ಹುಡುಕುವುದನ್ನು ಪರಿಗಣಿಸಿ.
• ರಿವ್ಯೂಗಳು: ನೀವು ಆನ್‌ಲೈನ್‌ಗೆ ಹೋದಾಗ, ಕಾರ್ ಇನ್ಶೂರೆನ್ಸ್ ಎಷ್ಟು ಪ್ರಮುಖವಾಗಿದೆ ಮತ್ತು ಅದು ನಿಮ್ಮ ಅಗತ್ಯಗಳನ್ನು ಎಷ್ಟು ಚೆನ್ನಾಗಿ ಪೂರೈಸುತ್ತದೆ ಎಂಬುದರ ಬಗ್ಗೆ ನಿಮಗೆ ತಿಳಿಸುವ ಹಲವಾರು ರಿವ್ಯೂಗಳನ್ನು ನೀವು ಕಂಡುಕೊಳ್ಳುತ್ತೀರಿ. ಅತ್ಯುತ್ತಮ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಪರಿಶೀಲಿಸುವಾಗ, ಖರೀದಿ ಬಟನ್ ಹಿಟ್ ಮಾಡುವ ಮೊದಲು ಗ್ರಾಹಕರ ರಿವ್ಯೂಗಳನ್ನು ಪರಿಶೀಲಿಸಿ.
• ಕವರೇಜ್: ನೀವು ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡಿದಾಗ, ನೀಡಲಾಗುವ ಕವರೇಜನ್ನು ಯಾವಾಗಲೂ ಪರಿಗಣಿಸಿ. ಸಮಗ್ರ ಕವರ್‌ನೊಂದಿಗೆ ಲಭ್ಯವಿರುವ ಆ್ಯಡ್-ಆನ್ ಕವರ್‌ಗಳನ್ನು ಪರಿಶೀಲಿಸಿ, ಇದು ಪ್ರೀಮಿಯಂ ವೆಚ್ಚವನ್ನು ಹೆಚ್ಚಿಸುತ್ತದೆ ಆದರೆ ಕಾರ್ ಇನ್ಶೂರೆನ್ಸ್ ಪಾಲಿಸಿ ನವೀಕರಣದ ಸಮಯದಲ್ಲಿ ಪ್ರಯೋಜನಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
• ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಸಂಪೂರ್ಣವಾಗಿ ಓದಿ: ಕಾರ್ ಇನ್ಶೂರೆನ್ಸ್ ಒಪ್ಪಂದದಲ್ಲಿ ವಿವರಗಳನ್ನು ನೋಡುವುದು ಮುಖ್ಯವಾಗಿದೆ, ಇದು ಕ್ಲೈಮ್ ಸಮಯದಲ್ಲಿ ವಿಮಾದಾತರೊಂದಿಗೆ ತಪ್ಪಾಗಿರುವ ಸಂವಹನಕ್ಕೆ ಕಾರಣವಾಗಬಹುದು. ಆದ್ದರಿಂದ, ಕ್ಲೈಮ್ ತಿರಸ್ಕಾರವನ್ನು ತಪ್ಪಿಸಲು ಒಪ್ಪಂದವನ್ನು ಸಂಪೂರ್ಣವಾಗಿ ಓದಿ.
• ನೆಟ್ವರ್ಕ್ ಗ್ಯಾರೇಜ್‌ಗಳ ಭಾಗ: ನೀವು ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಸಿದಾಗ ವಿಮಾದಾತರ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್ ಸಂಖ್ಯೆಯನ್ನು ಪರಿಶೀಲಿಸಲು ಯಾವಾಗಲೂ ನೆನಪಿಡಿ.
• ಇನ್ಶೂರೆನ್ಸ್ ಕಂಪನಿಯ ಇತಿಹಾಸ: ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಹೋಲಿಕೆ ಮಾಡುವಾಗ ಇನ್ಶೂರೆನ್ಸ್ ಕಂಪನಿಯ ಕ್ಲೈಮ್ ಇತಿಹಾಸವನ್ನು ಪರಿಗಣಿಸಬೇಕು. ಹೆಚ್ಚಿನ ಕ್ಲೈಮ್ ಸೆಟಲ್ಮೆಂಟ್ ಅನುಪಾತ ಹೊಂದಿರುವ ಕಂಪನಿಯನ್ನು ಆಯ್ಕೆಮಾಡಿ.
• ನೋ-ಕ್ಲೈಮ್ ಬೋನಸ್: ನೀವು ಕಾರ್ ಇನ್ಶೂರೆನ್ಸ್ ಕೋಟ್‌ಗಳನ್ನು ಹೋಲಿಕೆ ಮಾಡಿದಾಗ, NCB ಇಲ್ಲದೆ ಕೋಟೇಶನ್ ನೀಡಬಹುದಾದ್ದರಿಂದ NCB ಪರಿಗಣಿಸಲಾಗುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಈ ರಿಯಾಯಿತಿಯು ಸತತ ಕ್ಲೈಮ್-ಮುಕ್ತ ವರ್ಷಗಳ ಸಂಖ್ಯೆಯೊಂದಿಗೆ ಬೆಳೆಯುತ್ತದೆ ಮತ್ತು 50% ವರೆಗೆ ತಲುಪಬಹುದು.
ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಹೋಲಿಕೆ ಮಾಡುವುದರ ಮೂಲಕ, ಪ್ರತಿಯೊಂದು ಪ್ಲಾನ್‌ಗೆ ಕಟ್ಟಬೇಕಾದ ಪ್ರೀಮಿಯಂಗಳಿಗೆ ತಕ್ಕಂತೆ ಅದು ಒದಗಿಸುವ ಪ್ರಯೋಜನಗಳನ್ನು ನಿರ್ಧರಿಸಬಹುದು. ನಿಮ್ಮ ಬಜೆಟ್‌ಗೆ ಯಾವ ಪ್ಲಾನ್ ಅತ್ಯುತ್ತಮವಾಗಿದೆ ಎಂಬುದನ್ನು ನೀವೇ ನಿರ್ಧರಿಸಬಹುದು. ನೀವು ಸಾಮಾನ್ಯ ಬಜೆಟ್ ಹೊಂದಿದ್ದರೆ, ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನ್ ಸೂಕ್ತವಾಗಿರುತ್ತದೆ. ಏಕೆಂದರೆ ಸಮಗ್ರ ಕಾರ್ ಇನ್ಶೂರೆನ್ಸ್ ಪ್ಲಾನ್‌ನ ಪ್ರೀಮಿಯಂಗಿಂತ ಇದರ ಪ್ರೀಮಿಯಂ ಕಡಿಮೆ ಇರುತ್ತದೆ.
ಈಗ ನೀವು ಮನೆಯಲ್ಲೇ ಕುಳಿತು ಬೇರೆಬೇರೆ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡಬಹುದು.. ಈ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ಹೋಲಿಕೆ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳಿವೆ.
● ಹೊಸಬರಿಗೆ ಇಲ್ಲಿ ಹೆಚ್ಚೆಚ್ಚು ಮಾಹಿತಿ ಸಿಗುವುದರಿಂದ, ಆನ್ಲೈನ್‌ನಲ್ಲಿ ಹೋಲಿಕೆ ಮಾಡುವುದು ತುಂಬಾ ಸುಲಭ.
● ಜೊತೆಗೆ, ವಿವಿಧ ಕಾರ್ ಇನ್ಶೂರೆನ್ಸ್ ಪ್ಲಾನ್‌ಗಳಿಗೆ ಸಂಬಂಧಿಸಿದ ಹಲವಾರು ರಿವ್ಯೂಗಳನ್ನು ಆನ್ಲೈನ್‌ನಲ್ಲಿ ಓದಬಹುದು.
● ಲಭ್ಯವಿರುವ ವಿವಿಧ ಪಾಲಿಸಿಗಳು ಮತ್ತು ಅವುಗಳ ಪ್ರೀಮಿಯಂಗಳ ಬಗ್ಗೆ ತಿಳಿದುಕೊಳ್ಳಬಹುದು. ಇದು ನಿಮಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
● ಈ ಹೋಲಿಕೆಗಳನ್ನು ದಿನದ ಯಾವುದೇ ಸಮಯದಲ್ಲಿ ಮಾಡಬಹುದು ಮತ್ತು ಇನ್ಸೆಂಟಿವ್ ಆಸೆಗೆ ಒಂದು ನಿರ್ದಿಷ್ಟ ಇನ್ಶೂರೆನ್ಸ್ ಪ್ಲಾನ್‌ಗೆ ಹೆಚ್ಚಿನ ಮಹತ್ವ ನೀಡುವ ಸೇಲ್ಸ್‌ಮ್ಯಾನ್‌ನ ಕಿರಿಕಿರಿಯೂ ಇರುವುದಿಲ್ಲ.
ಪಾಲಿಸಿಗಳಿಗೆ ಸಂಬಂಧಿಸಿದ ಈ ಅಂಶಗಳನ್ನು ಗಮನಿಸುವ ಮೂಲಕ ವಿವಿಧ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಆನ್ಲೈನ್‌ನಲ್ಲಿ ಪರಿಣಾಮಕಾರಿಯಾಗಿ ಹೋಲಿಕೆ ಮಾಡಬಹುದು. ಆ ಅಂಶಗಳೆಂದರೆ.
● ವಿಧಿಸಲಾದ ಪ್ರೀಮಿಯಂ – ವಿವಿಧ ಪಾಲಿಸಿಗಳು ತಮ್ಮದೇ ಆದ ಪ್ರೀಮಿಯಂಗಳನ್ನು ಹೊಂದಿರುವುದರಿಂದ ನಿಮ್ಮ ಬಜೆಟ್‌ಗೆ ಹೊಂದುವುದನ್ನು ಆಯ್ಕೆ ಮಾಡಿ.
● ಕವರೇಜ್ – ಸಮಗ್ರ ಪಾಲಿಸಿಗಳು ಹೆಚ್ಚಿನ ಕವರೇಜ್ ಒದಗಿಸುತ್ತವೆ ಮತ್ತು ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪಾಲಿಸಿಯ ಕವರೇಜ್ ಬಹಳ ಸೀಮಿತವಾಗಿರುತ್ತದೆ.
● ಕ್ಲೇಮ್ ರೆಕಾರ್ಡ್ಗಳು – ವಿವಿಧ ಕಾರ್ ಇನ್ಶೂರೆನ್ಸ್ ಪೂರೈಕೆದಾರರ ಕವರೇಜ್ ಒದಗಿಸುವ ಸಾಮರ್ಥ್ಯವನ್ನು ನಿರ್ಧರಿಸಲು, ಕ್ಲೇಮ್ ಸೆಟಲ್ಮೆಂಟ್ ಅನುಪಾತಗಳನ್ನು ಹೋಲಿಕೆ ಮಾಡುವುದು ಬಹಳ ಮುಖ್ಯ.
● ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್ – ಕಾರ್ ಇನ್ಶೂರೆನ್ಸ್ ಪೂರೈಕೆದಾರರ ಅಡಿಯಲ್ಲಿರುವ ನಗದುರಹಿತ ಗ್ಯಾರೇಜ್‌ಗಳ ನೆಟ್ವರ್ಕ್ ಹೆಚ್ಚಾದಷ್ಟೂ, ಆ ಕಾರ್ ಇನ್ಶೂರೆನ್ಸ್ ಪಾಲಿಸಿಯು ಉತ್ತಮವಾಗಿರುತ್ತದೆ.