ಹೋಮ್ / ಹೋಮ್ ಇನ್ಶೂರೆನ್ಸ್ / ರೆಫ್ರಿಜರೇಟರ್‌ ಇನ್ಶೂರೆನ್ಸ್

ನಿಮ್ಮ ಮನೆಗೆ ರೆಫ್ರಿಜರೇಟರ್ ಇನ್ಶೂರೆನ್ಸ್ ಕವರೇಜ್

ರೆಫ್ರಿಜರೇಟರ್‌ ಇಲ್ಲದ ಆಧುನಿಕ ಮನೆಗಳನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ತಂತ್ರಜ್ಞಾನ ಪ್ರಗತಿಯಿಂದಾಗಿ, ಇವತ್ತಿನ ಬಹುತೇಕ ರೆಫ್ರಿಜರೇಟರ್‌ಗಳು ತಮ್ಮ ಕಾರ್ಯಕ್ಷಮತೆ ಹೆಚ್ಚಿಸುವ ಸುಧಾರಿತ ಫೀಚರ್‌ಗಳೊಂದಿಗೆ ಬಳಕೆದಾರರಿಗೆ ಅನುಕೂಲ ಒದಗಿಸುತ್ತಿವೆ. ಅಂತಹ ಅತ್ಯಾಧುನಿಕ ರೆಫ್ರಿಜರೇಟರ್‌ಗಳಿಗೆ ಬೆಲೆಯೂ ಜಾಸ್ತಿ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದೇ ಕಾರಣಕ್ಕಾಗಿ, ಹೋಮ್ ಇನ್ಶೂರೆನ್ಸ್ ಖರೀದಿಸುವಾಗ, ನಿಮ್ಮ ಪಾಲಿಸಿಯ ಅಡಿಯಲ್ಲಿ ರೆಫ್ರಿಜರೇಟರ್‌ಗಳಂತಹ ಉಪಕರಣಗಳನ್ನು ಕವರ್ ಮಾಡುವುದು ಬಹಳ ಮುಖ್ಯ.

ಅದಲ್ಲದೆ, ನೀವು ಈ ಉಪಕರಣ ಖರೀದಿಸಲು ಹತ್ತಾರು ಸಲ ಯೋಚಿಸಿರುವುದರಿಂದ, ನೀವು ಖಂಡಿತ ಅದನ್ನು ಕಾಪಾಡಿಕೊಳ್ಳಲು ಬಯಸುತ್ತೀರಿ ಮತ್ತು ಯಾವುದೇ ಹಾನಿ ಅಥವಾ ಬ್ರೇಕ್‌ಡೌನ್ ತಡೆಗಟ್ಟಲು ಅದನ್ನು ಜೋಪಾನವಾಗಿ ಬಳಸುತ್ತೀರಿ. ಯಾಕೆಂದರೆ, ಅದಕ್ಕೆ ಸಣ್ಣಪುಟ್ಟ ಹಾನಿಯಾದರೂ, ನಿಮ್ಮ ಹಣಕಾಸಿಗೆ ದೊಡ್ಡ ಹೊಡೆತ ಬೀಳುತ್ತದೆ. ಆದರೆ, ನೀವು ಎಷ್ಟೇ ಎಚ್ಚರಿಕೆ ವಹಿಸಿದರೂ, ಕೆಲವು ಸನ್ನಿವೇಶಗಳು ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಬೆಂಕಿ, ಸಿಡಿಲು, ಸೈಕ್ಲೋನ್, ಭೂಕಂಪ, ಪ್ರವಾಹ, ಕಳ್ಳತನ ಅಥವಾ ದರೋಡೆ, ಇತ್ಯಾದಿಗಳು ಹೇಳಿಕೇಳಿ ಬರುವುದಿಲ್ಲ. ಹಾಗಾಗಿ, ರೆಫ್ರಿಜರೇಟರ್‌ಗೆ ಆಗುವ ವ್ಯಾಪಕ ಶ್ರೇಣಿಯ ಅಪಾಯಗಳನ್ನು ಕವರ್ ಮಾಡುವ ಇನ್ಶೂರೆನ್ಸ್ ಖರೀದಿಸುವುದು ಅಗತ್ಯವಾಗಿದೆ. ಹಲವಾರು ಹೋಮ್ ಇನ್ಶೂರೆನ್ಸ್ ಪಾಲಿಸಿಗಳು ಎಲೆಕ್ಟ್ರಾನಿಕ್ ಅಪ್ಲಾಯನ್ಸ್‌ಗಳಿಗೆ ಆ್ಯಡ್-ಆನ್ ಕವರ್ ನೀಡಿದರೂ ಕೂಡಾ, ಅದರಲ್ಲಿ ರೆಫ್ರಿಜರೇಟರ್‌ಗೂ ಕವರೇಜ್ ಇದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ರೆಫ್ರಿಜರೇಟರ್ ಇನ್ಶೂರೆನ್ಸ್‌ನ ಪ್ರಯೋಜನಗಳು

  • ಕೈಗೆಟಕುವ ಪ್ರೀಮಿಯಂನಲ್ಲಿ ಹೆಚ್ಚಿನ ಕವರೇಜ್ ಪ್ರಯೋಜನಗಳು

  • ಅವಧಿ: ಕಳ್ಳತನ/ದರೋಡೆ, ಬೆಂಕಿ/ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಬ್ರೇಕ್‌ಡೌನ್ ಮತ್ತು ಇತರ ಆಕಸ್ಮಿಕ ಹಾನಿಗಳಿಂದಾಗಿ ಉಂಟಾದ ನಷ್ಟ/ಹಾನಿಗಳ ವಿರುದ್ಧ ಸಂಪೂರ್ಣ ಕವರೇಜ್

  • 24x7 ಬೆಂಬಲದೊಂದಿಗೆ ಸುಲಭ ಮತ್ತು ತೊಂದರೆ ರಹಿತ ಕ್ಲೈಮ್‌ ಪ್ರಕ್ರಿಯೆ

  • ಅವಧಿ: ಪ್ರಾಡಕ್ಟ್‌ಗೆ ನೀಡಲಾಗುವ ವಾರಂಟಿಗಿಂತ ಹೆಚ್ಚು ಸಮಗ್ರ ಕವರೇಜ್. ವಾರಂಟಿ ಪ್ಲಾನ್‌ಗಳು ಸೀಮಿತ ಕವರೇಜ್ ಹೊಂದಿರುತ್ತವೆ


ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

ಮೊತ್ತವು ಪ್ರೀಮಿಯಂ ವೆಚ್ಚ ಮತ್ತು ಅದರೊಂದಿಗೆ ಬರುವ ಕವರೇಜ್ ಅನ್ನು ಪ್ರಭಾವಿಸುವ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅದರ ವಿವರ ಹೀಗಿದೆ:

  • ರೆಫ್ರಿಜರೇಟರ್‌ನ ವಿಮಾ ಮೊತ್ತ: ವಿಮಾ ಮೊತ್ತದ ಆಧಾರದ ಮೇಲೆ, ರೆಫ್ರಿಜರೇಟರ್‌ನ ಬೇರೆಬೇರೆ ಮಾಡೆಲ್‌ಗಳಿಗೆ ಬೇರೆಬೇರೆ ಪ್ರೀಮಿಯಂ ವಿಧಿಸಲಾಗುತ್ತದೆ.

  • ಅವಧಿ: ಪ್ಲಾನ್ ಅವಧಿ ಮತ್ತು ಕವರೇಜ್ ಪ್ರಕಾರ ಪ್ರೀಮಿಯಂ ಮೊತ್ತವು ಬದಲಾಗುತ್ತದೆ.


ರೆಫ್ರಿಜರೇಟರ್ ಇನ್ಶೂರೆನ್ಸ್‌ನಲ್ಲಿ ಏನೇನು ಒಳಗೊಂಡಿದೆ?

ಬೆಂಕಿ
ಬೆಂಕಿ

ಬೆಂಕಿಯಿಂದ ಉಂಟಾದ ಯಾವುದೇ ಹಾನಿಯ ವಿರುದ್ಧ ರೆಫ್ರಿಜರೇಟರ್‌ಗೆ ಕವರೇಜ್ ನೀಡಲಾಗುತ್ತದೆ.

ದರೋಡೆ ಮತ್ತು ಕಳ್ಳತನ
ದರೋಡೆ ಮತ್ತು ಕಳ್ಳತನ

TV ಕಳುವಾಗುವುದರ ಬಗ್ಗೆ ಯೋಚಿಸುವುದೂ ಕಷ್ಟ. ಕಳ್ಳತನ ಅಥವಾ ದರೋಡೆಗಳ ಸಂದರ್ಭದಲ್ಲಿ ಹಣಕಾಸಿನ ಕವರೇಜ್ ನೀಡಲಾಗುತ್ತದೆ

ಆಕ್ಸಿಡೆಂಟಲ್ ಹಾನಿಗೆ ಕವರೇಜ್
ಆಕ್ಸಿಡೆಂಟಲ್ ಹಾನಿಗೆ ಕವರೇಜ್

ಯಾವುದೇ ಬಾಹ್ಯ ಅಪಘಾತದಿಂದಾಗಿ ಉಂಟಾದ ಹಾನಿಗಳು ಅಥವಾ ರೆಫ್ರಿಜರೇಟರ್ ಸಾಗಣೆಯಲ್ಲಿರುವಾಗ (ವಾಯುಮಾರ್ಗ ಹೊರತುಪಡಿಸಿ) ಉಂಟಾಗುವ ಯಾವುದೇ ಹಾನಿಗಳನ್ನು ರೆಫ್ರಿಜರೇಟರ್ ಇನ್ಶೂರೆನ್ಸ್ ಕವರ್ ಮಾಡುತ್ತದೆ

ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಕವರೇಜ್
ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಕವರೇಜ್

ಯಾವುದೇ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ದೋಷದಿಂದ ಆಗುವ ಬ್ರೇಕ್‌ಡೌನ್‌ಗೆ ಕವರೇಜ್. ಈ ಸಂದರ್ಭದಲ್ಲಿ ರಿಪೇರಿ ಮತ್ತು ಬದಲಾವಣೆ ವೆಚ್ಚವನ್ನು ಕವರ್ ಮಾಡಲಾಗುತ್ತದೆ

ರೆಫ್ರಿಜರೇಟರ್ ಇನ್ಶೂರೆನ್ಸ್‌ ಏನನ್ನು ಒಳಗೊಂಡಿಲ್ಲ?

ಸವೆತ
ಸವೆತ

ಸ್ವಾಭಾವಿಕ ಸವೆತ ಅಥವಾ ರಿಪೇರಿಯಿಂದ ಆಗುವ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ

ಉತ್ಪಾದನಾ ದೋಷಗಳು
ಉತ್ಪಾದನಾ ದೋಷಗಳು

ಉತ್ಪಾದನಾ ದೋಷಗಳು ಅಥವಾ ಉತ್ಪಾದಕರು ಮಾಡಿದ ತಪ್ಪಿನಿಂದ ಉಂಟಾಗುವ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ ವಿಮಾದಾರರು ಉತ್ಪಾದಕರ ವಿರುದ್ಧ ಕ್ಲೈಮ್ ಸಲ್ಲಿಸಬೇಕಾಗುತ್ತದೆ

ಅನಧಿಕೃತ ದುರಸ್ತಿಗಳು
ಅನಧಿಕೃತ ದುರಸ್ತಿಗಳು

ನೀವೇ ಖುದ್ದಾಗಿ ರಿಪೇರಿ ಮಾಡಿ ಕ್ಲೈಮ್ ಸಲ್ಲಿಸಿದರೆ, ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ

ಸದಭಿರುಚಿಯ ದೋಷಗಳು
ಸದಭಿರುಚಿಯ ದೋಷಗಳು

ಗೀರುಗಳು, ಕಲೆಗಳು ಮತ್ತು ಮೆಟೀರಿಯಲ್ ಗುಣಮಟ್ಟಕ್ಕೆ ಸಂಬಂಧಿಸಿದ ಯಾವುದೇ ದೋಷಗಳನ್ನು ಈ ಇನ್ಶೂರೆನ್ಸ್‌ ಕವರ್ ಮಾಡುವುದಿಲ್ಲ

ಯುದ್ಧ ಮತ್ತು ಪರಮಾಣು ಅಪಾಯಗಳು
ಯುದ್ಧ ಮತ್ತು ಪರಮಾಣು ಅಪಾಯಗಳು

ಯುದ್ಧ ಅಥವಾ ಪರಮಾಣು ವಿಪತ್ತುಗಳ ಸಂದರ್ಭದಲ್ಲಿ ನಿಮ್ಮ ರೆಫ್ರಿಜರೇಟರ್‌ಗೆ ಆಗುವ ಯಾವುದೇ ಹಾನಿ ಕವರ್ ಆಗುವುದಿಲ್ಲ

1 ವರ್ಷಕ್ಕಿಂತ ಹಳೆಯ ವಸ್ತುಗಳು
1 ವರ್ಷಕ್ಕಿಂತ ಹಳೆಯ ವಸ್ತುಗಳು

ಖರೀದಿಯ ದಿನಾಂಕದಿಂದ 365 ದಿನಗಳಿಗಿಂತ ಹೆಚ್ಚು ಹಳೆಯದಾದ ಟೆಲಿವಿಷನ್‌ಗಳಿಗೆ, ಇನ್ಶೂರೆನ್ಸ್ ಮಾನ್ಯವಾಗಿರುವುದಿಲ್ಲ. ಏಕೆಂದರೆ ಈ ಪಾಲಿಸಿಯನ್ನು, TV ಖರೀದಿಸಿದ ಒಂದು ವರ್ಷದೊಳಗೆ ತೆಗೆದುಕೊಳ್ಳಬೇಕು

ದೋಷದ ಬಗ್ಗೆ ತಿಳಿಸದೇ ಇರುವುದು
ದೋಷದ ಬಗ್ಗೆ ತಿಳಿಸದೇ ಇರುವುದು

ಪಾಲಿಸಿ ಖರೀದಿಸುವ ಸಮಯದಲ್ಲಿ, ಪ್ರಾಡಕ್ಟ್ ಬಗ್ಗೆ ವಿಮಾದಾರರು ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿಯನ್ನು ಒದಗಿಸಬೇಕು. ಒಂದು ವೇಳೆ ಯಾವುದಾದರೂ ಪ್ರಮುಖ ಮಾಹಿತಿಯನ್ನು ಒದಗಿಸದಿದ್ದರೆ ಅಥವಾ ಬೇಕೆಂತಲೇ ಮರೆಮಾಚಿದ್ದರೆ, ಅದನ್ನು ಈ ಇನ್ಶೂರೆನ್ಸ್‌ ಕವರ್ ಮಾಡುವುದಿಲ್ಲ

ಉದ್ದೇಶಪೂರ್ವಕ ವಿಧ್ವಂಸ
ಉದ್ದೇಶಪೂರ್ವಕ ವಿಧ್ವಂಸ

ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ. ಕೈ ಜಾರಿ ನೆಲಕ್ಕೆ ಬೀಳುವುದು ಸೇರಿದಂತೆ, ಯಾವುದೇ ಅಪಘಾತದಿಂದ ಪ್ರಾಡಕ್ಟ್‌ನ ಭಾಗಗಳು ಮುರಿದರೆ ಅಥವಾ ಹಾನಿಯಾದರೆ, ಅದು ಕವರ್ ಆಗುವುದಿಲ್ಲ

ಉದ್ದೇಶಪೂರ್ವಕ ನಿರ್ಲಕ್ಷ್ಯ
ಉದ್ದೇಶಪೂರ್ವಕ ನಿರ್ಲಕ್ಷ್ಯ

ವಿಮೆ ಮಾಡಿಸಿದ ನಂತರ, ಮಾಲೀಕರ ಅಜಾಗರೂಕತೆಯಿಂದ ಉಂಟಾದ ಯಾವುದೇ ಹಾನಿಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ. ತಪ್ಪಾದ ನಿರ್ವಹಣೆ ಅಥವಾ ದುರುಪಯೋಗ ಸೇರಿದಂತೆ ಮಾಲೀಕರ ನಿರ್ಲಕ್ಷ್ಯದಿಂದ ಉಂಟಾದ ಯಾವುದೇ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ

Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.6+ ಕೋಟಿ ನಗು!@

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ 24x7

ತೊಂದರೆಯ ಸಮಯದಲ್ಲಿ, ತಕ್ಷಣದ ಸಹಾಯವು ಆ ಸಮಯದ ಅವಶ್ಯಕತೆ ಎಂದು ನಾವು ತಿಳಿದುಕೊಂಡಿದ್ದೇವೆ. ತೊಂದರೆ ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಂತರಿಕ ಕ್ಲೈಮ್ ತಂಡವು ಇಪ್ಪತ್ತನಾಲ್ಕು ಗಂಟೆಯ ಸಹಾಯ ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮ್ಮ ನಿರಂತರ ಬೆಂಬಲ ನೀಡುವ ವ್ಯವಸ್ಥೆಯಾಗಿರುತ್ತೇವೆ ಎಂದು ನಾವು ಖಚಿತಪಡಿಸುತ್ತೇವೆ.
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards
Awards
Awards
Awards
Awards
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
Awards

ಸುರಕ್ಷಿತ #1.6+ ಕೋಟಿ ನಗು

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಂಬಿಕೆಯು ಸಂಬಂಧಗಳನ್ನು ಮರು ವ್ಯಾಖ್ಯಾನಿಸುತ್ತದೆ. ಇನ್ಶೂರೆನ್ಸ್ ಅನ್ನು ಸುಲಭ, ಹೆಚ್ಚು ಕೈಗೆಟಕುವ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ನಾವು ಸತತವಾಗಿ ಪ್ರಯತ್ನಿಸುತ್ತೇವೆ. ಇಲ್ಲಿ ಭರವಸೆಗಳನ್ನು ಉಳಿಸಿಕೊಳ್ಳಲಾಗುತ್ತದೆ, ಕ್ಲೈಮ್‌ಗಳನ್ನು ಪೂರೈಸಲಾಗುತ್ತದೆ ಮತ್ತು ಜೀವನವನ್ನು ಅತ್ಯಂತ ಬದ್ಧತೆಯಿಂದ ಪೋಷಿಸಲಾಗುತ್ತದೆ.
Awards

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಸಂಕಟದ ಸಮಯದಲ್ಲಿ, ತ್ವರಿತ ಸಹಾಯವು ಆ ಸಮಯದ ಅಗತ್ಯವಾಗಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ನಮ್ಮ ಆಂತರಿಕ ಕ್ಲೇಮ್‌ಗಳ ತಂಡವು ತೊಂದರೆ - ರಹಿತ ಕ್ಲೈಮ್ ಅನುಭವವನ್ನು ಖಚಿತಪಡಿಸಿಕೊಳ್ಳಲು ಸದಾ ಕಾಲ ಬೆಂಬಲವನ್ನು ಒದಗಿಸುತ್ತದೆ. ಅಗತ್ಯವಿರುವ ಸಮಯದಲ್ಲಿ ನಿಮಗೆ ನಿರಂತರ ಬೆಂಬಲ ವ್ಯವಸ್ಥೆ ನೀಡುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ.
Awards

ಗ್ರಾಹಕರ ಅಗತ್ಯಗಳನ್ನು ಪೂರೈಸುವುದು

ಕಳೆದ 20 ವರ್ಷಗಳಿಂದ, ಪ್ರತಿ ಪೋರ್ಟ್‌ಫೋಲಿಯೋಗೆ ವ್ಯಾಪಕ ಶ್ರೇಣಿಯ ಪ್ಲಾನ್‌ಗಳು ಮತ್ತು ಆ್ಯಡ್ ಆನ್ ಕವರ್‌ಗಳನ್ನು ಒದಗಿಸುವ ಮೂಲಕ ನಾವು ಗ್ರಾಹಕರ ಅವಶ್ಯಕತೆಗಳನ್ನು ತಡೆರಹಿತವಾಗಿ ಸುಲಭವಾಗಿ ಪೂರೈಸುತ್ತಿದ್ದೇವೆ.
Awards

ಅತ್ಯುತ್ತಮ ಪಾರದರ್ಶಕತೆ

ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅತಿ ಹೆಚ್ಚಿನ ಪಾರದರ್ಶಕತೆ ಮತ್ತು ಸರಳವಾಗಿ ಸೆಟಲ್ ಮಾಡಲಾಗುತ್ತದೆ.
Awards

Awards

ಎಚ್‌ಡಿಎಫ್‌ಸಿ ಎರ್ಗೋ FICCI ಇನ್ಶೂರೆನ್ಸ್ ಇಂಡಸ್ಟ್ರಿ ಪ್ರಶಸ್ತಿ, 2021 ನಲ್ಲಿ "ಕ್ಲೈಮ್‌ಗಳು ಮತ್ತು ಗ್ರಾಹಕ ಸೇವಾ ಉತ್ಕೃಷ್ಟತೆ" ವರ್ಗದಲ್ಲಿ ಗೆದ್ದಿದೆ.

ನಮ್ಮ ನೆಟ್ವರ್ಕ್
ಬ್ರಾಂಚ್‌ಗಳು

100+

ಬ್ರಾಂಚ್ ಲೊಕೇಟರ್

ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್


ನಿಮ್ಮ ಕ್ಲೈಮ್‌ಗಳನ್ನು ನೋಂದಾಯಿಸಿ ಮತ್ತು ಟ್ರ್ಯಾಕ್ ಮಾಡಿ

ಬ್ರಾಂಚ್ ಹುಡುಕಿ
ನಿಮ್ಮ ಹತ್ತಿರದಲ್ಲಿ

ನಿಮ್ಮ ಮೊಬೈಲ್‌ನಲ್ಲಿ
ಅಪ್ಡೇಟ್‌ ಪಡೆಯಿರಿ

ನಿಮ್ಮ ಆದ್ಯತೆಯ
ಕ್ಲೈಮ್‌ ಸಲ್ಲಿಕೆ ವಿಧಾನ ಆರಿಸಿ

ಹೋಮ್ ಇನ್ಶೂರೆನ್ಸ್ ಸಂಬಂಧಿತ ಲೇಖನಗಳು

 

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ನೀವು ಇನ್ಶೂರೆನ್ಸ್ ಪೂರೈಕೆದಾರರ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಅಪ್ಲಿಕೇಶನ್ ಫಾರ್ಮ್ ಭರ್ತಿ ಮಾಡಬೇಕು, ಪ್ರೀಮಿಯಂ ಪಾವತಿಸಬೇಕು, ಮತ್ತು ಇಮೇಲ್ ಮೂಲಕ ಮತ್ತು ಪೋಸ್ಟ್ ಮೂಲಕವೂ ಪಾಲಿಸಿ ಡಾಕ್ಯುಮೆಂಟ್ ಪಡೆಯಬಹುದು
ಹಾನಿಯಾದ ದಿನಾಂಕದಿಂದ 14 ದಿನಗಳಲ್ಲಿ ನೀವು ನಷ್ಟ/ಹಾನಿಯ ಬಗ್ಗೆ ಲಿಖಿತದಲ್ಲಿ ತಿಳಿಸಬೇಕು. ಕ್ಲೈಮ್‌ಗಳ ಫಾರ್ಮ್ ಭರ್ತಿ ಮಾಡಿ ಅದನ್ನು ರೆಫ್ರಿಜರೇಟರ್ ಬಿಲ್, ರಿಪೇರಿ ಕೆಲಸದ ಬಿಲ್, ಇನ್ಶೂರೆನ್ಸ್ ಪಾಲಿಸಿಯ ನಕಲು ಪ್ರತಿ ಮುಂತಾದ ಅಗತ್ಯ ಡಾಕ್ಯುಮೆಂಟ್‌ಗಳೊಂದಿಗೆ ಸಲ್ಲಿಸಿ. ಫಾರ್ಮ್ ಮತ್ತು ಡಾಕ್ಯುಮೆಂಟ್‌ಗಳನ್ನು ಪಡೆದ ನಂತರ ಕ್ಲೈಮ್ ಪರಿಶೀಲಿಸಲು ಸರ್ವೇದಾರರನ್ನು ನೇಮಿಸಲಾಗುತ್ತದೆ. ಸಮೀಕ್ಷೆಯ ವರದಿಯನ್ನು ಪಡೆದ ನಂತರ ಕ್ಲೈಮ್ ಮೊತ್ತವನ್ನು ನಿರ್ಧರಿಸಲಾಗುತ್ತದೆ ಮತ್ತು ವಿತರಿಸಲಾಗುತ್ತದೆ. ಪ್ರತಿ ಕ್ಲೈಮ್‌ಗೆ ₹5000 ಹೆಚ್ಚುವರಿ ಕ್ಲೈಮ್ ಪ್ರಕ್ರಿಯಾ ಶುಲ್ಕ ಅನ್ವಯವಾಗುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.
ಸಾಮಾನ್ಯವಾಗಿ, ಕ್ಲೈಮ್ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿದ ನಂತರ ಸೆಟಲ್ಮೆಂಟ್ ಮೊತ್ತವನ್ನು ಬಿಡುಗಡೆ ಮಾಡಲು 30 ದಿನ ಹಿಡಿಯುತ್ತದೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x