Cyber Insurance provides a safety shield for businesses and individuals against cyber-attacks and online frauds. In today's digital landscape, businesses face an escalating threat of cyberattacks that can compromise sensitive data, disrupt operations, and incur significant financial losses. Cyber insurance has emerged as a vital safeguard, offering comprehensive coverage against various cyber risks, including data breaches, cyber extortion, and business interruptions.
We offer tailored policies to meet the unique needs of diverse industries, ensuring robust protection and peace of mind. Selecting the right cyber insurance policy is crucial for mitigating potential cyber threats. Our customisable solutions address the multifaceted challenges posed by cyber incidents, safeguard your assets, and maintain operational resilience in an increasingly interconnected world.
ನಾವು ಡಿಜಿಟಲ್ ಯುಗದಲ್ಲಿ ವಾಸಿಸುತ್ತಿದ್ದೇವೆ, ಅಲ್ಲಿ ನಾವು ಇಂಟರ್ನೆಟ್ ಇಲ್ಲದೆ ನಮ್ಮ ಒಂದು ದಿನವನ್ನೂ ಕಲ್ಪಿಸಲು ಸಾಧ್ಯವಿಲ್ಲ. ವಿಶೇಷವಾಗಿ ಕೊರೋನಾವೈರಸ್ ಪ್ಯಾಂಡೆಮಿಕ್ನೊಂದಿಗೆ, ದೈನಂದಿನ ಬಿಸಿನೆಸ್ ಕಾರ್ಯಾಚರಣೆಗಳಿಗಾಗಿ ನಾವು ಈಗಲೂ ವರ್ಚುವಲ್ ವೇದಿಕೆಗಳ ಮೇಲೆ ಅವಲಂಬಿತರಾಗಿದ್ದೇವೆ. ಆದಾಗ್ಯೂ, ಇಂಟರ್ನೆಟ್‌ನ ವ್ಯಾಪಕ ಬಳಕೆಯೊಂದಿಗೆ, ಯಾವುದೇ ರೀತಿಯ ಸೈಬರ್-ದಾಳಿಗಳಿಂದ ನಿಮ್ಮ ಡೇಟಾವನ್ನು ರಕ್ಷಿಸುವ ಅಗತ್ಯವಿದೆ.
ಇಂದಿನ ದಿನಗಳಲ್ಲಿ, ಡಿಜಿಟಲ್ ಪಾವತಿಗಳು ಎಲ್ಲಾ ಸಮಯದಲ್ಲೂ ಹೆಚ್ಚಾಗಿರುತ್ತವೆ, ಆದರೆ ಸಂಶಯಾಸ್ಪದ ಆನ್‌ಲೈನ್ ಮಾರಾಟಗಳು ಮತ್ತು ಮೋಸದ ಟ್ರಾನ್ಸಾಕ್ಷನ್‌ಗಳು ಕೂಡ ಹಾಗೆಯೇ ಅಧಿಕವಾಗಿವೆ. ಸೈಬರ್ ಇನ್ಶೂರೆನ್ಸ್‌ನಿಂದ ಆನ್ಲೈನಿನಲ್ಲಿ ನಿಮ್ಮ ನಷ್ಟಗಳನ್ನು ರಕ್ಷಿಸಬಹುದು ಮತ್ತು ಏನಾದರೂ ತಪ್ಪಾಗಿದ್ದರೆ ನೀವು ಸುರಕ್ಷಿತರಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಬಹುದು. ಸೈಬರ್ ಬೆದರಿಕೆಗಳಿಂದಾಗಿ ಹಣಕಾಸಿನ ನಷ್ಟಗಳ ನಿರಂತರ ಚಿಂತೆಯಿಲ್ಲದೆ ನಿಮ್ಮ ಆನ್ಲೈನ್ ಚಟುವಟಿಕೆಗಳನ್ನು ನಡೆಸಲು ಇದು ನಿಮಗೆ ಸಹಾಯ ಮಾಡುತ್ತದೆ. ಆನ್ಲೈನಿನಲ್ಲಿ ಸರ್ಫಿಂಗ್ ಮಾಡುವಾಗ, ನಿಮ್ಮ ಚಟುವಟಿಕೆಯ ಸ್ವರೂಪವನ್ನು ಅವಲಂಬಿಸಿ ನೀವು ವಿವಿಧ ರೀತಿಯ ಅಪಾಯಗಳಿಗೆ ಒಡ್ಡಿಕೊಳ್ಳುತ್ತೀರಿ. ಆದ್ದರಿಂದ, ಎಚ್‌ಡಿಎಫ್‌ಸಿ ಎರ್ಗೋ ಸೈಬರ್ ಸ್ಯಾಚೆಟ್ ಇನ್ಶೂರೆನ್ಸ್ ಅನ್ನು ವಿನ್ಯಾಸಗೊಳಿಸಿದೆ, ಇದನ್ನು ನಿಮ್ಮ ಅವಶ್ಯಕತೆಗಳನ್ನು ಪೂರೈಸಲು ಸಂಪೂರ್ಣವಾಗಿ ಕಸ್ಟಮೈಜ್ ಮಾಡಬಹುದು ಮತ್ತು ಇದರಿಂದಾಗಿ ಯಾವುದೇ ಒತ್ತಡ ಅಥವಾ ಚಿಂತೆಯಿಲ್ಲದೆ ಡಿಜಿಟಲ್ ಆಗಿ ಕಾರ್ಯನಿರ್ವಹಿಸಲು ನಿಮಗೆ ಸಹಾಯ ಮಾಡುತ್ತದೆ.
ಅನಧಿಕೃತ ಅಕ್ಸೆಸ್, ಫಿಶಿಂಗ್, ಸ್ಪೂಫಿಂಗ್‌ನಂತಹ ಆನ್ಲೈನ್ ವಂಚನೆಗಳಿಂದ ಉಂಟಾಗುವ ನಿಮ್ಮ ಬ್ಯಾಂಕ್ ಅಕೌಂಟ್, ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳು, ಡಿಜಿಟಲ್ ವಾಲೆಟ್‌ಗಳಲ್ಲಿ ಉಂಟಾಗುವ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ. ಇದು ನಮ್ಮ ಬೇಸ್ ಆಫರ್ ಆಗಿದೆ (ಕನಿಷ್ಠ ಅಗತ್ಯ ಕವರೇಜ್). ಪರ್ಯಾಯದೊಂದಿಗೆ ಹೋಲಿಕೆ ಮಾಡಿ
ಬಲಿಯಾಗಿ ಪರಿಣಾಮ ಬೀರಿದವರಿಗೆ ಮಾನಸಿಕ ಸಮಾಲೋಚನೆ ವೆಚ್ಚಗಳೊಂದಿಗೆ ಥರ್ಡ್ ಪಾರ್ಟಿಯಿಂದ ಇಂಟರ್ನೆಟ್‌ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಯ ದುರುಪಯೋಗದಿಂದ ಉಂಟಾಗುವ ಹಣಕಾಸಿನ ನಷ್ಟಗಳು, ಕ್ರೆಡಿಟ್ ಮೇಲ್ವಿಚಾರಣೆ ವೆಚ್ಚಗಳು, ಕಾನೂನು ಪ್ರಾಸಿಕ್ಯೂಶನ್ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ
ನಿಮ್ಮ ಸೈಬರ್ ಸ್ಥಳದಲ್ಲಿ ಮಾಲ್‌ವೇರ್ ದಾಳಿಗಳಿಂದ ಉಂಟಾದ ನಿಮ್ಮ ಕಳೆದುಹೋದ ಅಥವಾ ದೋಷಪೂರಿತವಾದ ಡೇಟಾವನ್ನು ಸ್ವಸ್ಥಿತಿಗೆ ತರಲು ಒಳಗೊಂಡಿರುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.
ಮಾಲ್ವೇರ್ ದಾಳಿಯಿಂದಾಗಿ ಪರಿಣಾಮ ಬೀರುವ ನಿಮ್ಮ ವೈಯಕ್ತಿಕ ಸಾಧನ ಅಥವಾ ಅದರ ಘಟಕಗಳನ್ನು ಬದಲಾಯಿಸುವಲ್ಲಿ ಒಳಗೊಂಡಿರುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.
ನಾವು ಕಾನೂನು ವೆಚ್ಚಗಳು, ಸೈಬರ್-ಬುಲ್ಲಿಗಳು ಪೋಸ್ಟ್ ಮಾಡಿದ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವ ವೆಚ್ಚ ಮತ್ತು ಬಾಧಿತರಿಗೆ ಮಾನಸಿಕ ಸಮಾಲೋಚನೆ ವೆಚ್ಚಗಳನ್ನು ಕವರ್ ಮಾಡುತ್ತೇವೆ
ವಂಚನಾತ್ಮಕ ವೆಬ್‌ಸೈಟ್‌ನಲ್ಲಿ ಆನ್ಲೈನ್ ಶಾಪಿಂಗ್ ಕಾರಣದಿಂದಾಗಿ,ನೀವು ಆನ್ಲೈನಿನಲ್ಲಿ ಪೂರ್ಣ ಪಾವತಿ ಮಾಡಿದ ನಂತರವೂ ಪ್ರಾಡಕ್ಟ್ ಅನ್ನು ಪಡೆಯದೇ ಉಂಟಾದ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ
ನಾವು, ಪಾವತಿ ನೀಡದೆ ಮತ್ತು ಅದೇ ಸಮಯದಲ್ಲಿ ಉತ್ಪನ್ನವನ್ನು ಹಿಂದಿರುಗಿಸಲು ನಿರಾಕರಿಸುವ ಮೋಸದ ಖರೀದಿದಾರರಿಗೆ ಉತ್ಪನ್ನಗಳನ್ನು ಮಾರಾಟ ಮಾಡುವುದರಿಂದ ಉಂಟಾದ ಹಣಕಾಸಿನ ನಷ್ಟವನ್ನು ಕವರ್ ಮಾಡುತ್ತೇವೆ.
ಒಂದು ವೇಳೆ ನಿಮ್ಮ ಸಾಮಾಜಿಕ ಮಾಧ್ಯಮ ಪೋಸ್ಟ್ ಗೌಪ್ಯತಾ ಉಲ್ಲಂಘನೆ ಅಥವಾ ಕೃತಿಸ್ವಾಮ್ಯತೆ ಉಲ್ಲಂಘನೆಗಳನ್ನು ಮಾಡಿದರೆ, ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾದ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.
ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾಗುವ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ, ಒಂದು ವೇಳೆ ಅದೇ ನೆಟ್ವರ್ಕ್‌ನಲ್ಲಿ ಕನೆಕ್ಟ್ ಆದ ನಿಮ್ಮ ಮೂಲ ಡಿವೈಸ್ ಮಾಲ್ವೇರ್ ಸೋಂಕಿತವಾಗಿದ್ದರೆ
ನಿಮ್ಮ ಡಿವೈಸ್‌ಗಳು/ಅಕೌಂಟ್‌ಗಳಿಂದ ಗೌಪ್ಯ ಡೇಟಾದ ಅನಿರೀಕ್ಷಿತ ಸೋರಿಕೆಯಿಂದಾಗಿ, ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾದ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ.
ನಿಮ್ಮ ಗೌಪ್ಯ ಮಾಹಿತಿ ಅಥವಾ ಡೇಟಾ ಸೋರಿಕೆಗೆ ಥರ್ಡ್ ಪಾರ್ಟಿಯ ವಿರುದ್ಧ ಪ್ರಕರಣವನ್ನು ಮುಂದುವರಿಸಲು ಉಂಟಾಗುವ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ
ಮಾಲ್ವೇರ್ ದಾಳಿಯಿಂದಾಗಿ ಪರಿಣಾಮ ಬೀರುವ ನಿಮ್ಮ ಸ್ಮಾರ್ಟ್ ಹೋಮ್ ಡಿವೈಸ್‌ಗಳನ್ನು ರಿಸ್ಟೋರ್ ಮಾಡುವ ಅಥವಾ ಸ್ವಚ್ಛಗೊಳಿಸುವ ವೆಚ್ಚವನ್ನು ನಾವು ಕವರ್ ಮಾಡುತ್ತೇವೆ
ಅಪ್ರಾಪ್ತ ವಯಸ್ಸಿನ ಮಕ್ಕಳ ಸೈಬರ್ ಚಟುವಟಿಕೆಗಳಿಂದಾಗಿ ಥರ್ಡ್ ಪಾರ್ಟಿ ಕ್ಲೈಮ್‌ಗಳಿಂದ ನಿಮ್ಮನ್ನು ರಕ್ಷಿಸಲು ಉಂಟಾದ ಕಾನೂನು ವೆಚ್ಚವನ್ನು ನಾವು ಕವರ್ ಮಾಡುತ್ತೇವೆ
ಮೋಸದ ATM ವಿತ್‌ಡ್ರಾವಲ್‌ಗಳು, POS ವಂಚನೆಗಳು ಮುಂತಾದ ದೈಹಿಕ ವಂಚನೆಗಳಿಂದ ಉಂಟಾಗುವ ಯಾವುದೇ ನಷ್ಟಗಳನ್ನು ನಿಮ್ಮ ಕ್ರೆಡಿಟ್/ಡೆಬಿಟ್/ಪ್ರಿಪೆಯ್ಡ್ ಕಾರ್ಡ್‌ಗಳಲ್ಲಿ ಕವರ್ ಮಾಡಲಾಗುವುದಿಲ್ಲ
ಸೈಬರ್ ಸುಲಿಗೆಯನ್ನು ಪರಿಹರಿಸಲು ಪಾವತಿ ಅಥವಾ ಪರಿಹಾರದ ಮೂಲಕ ನಿಮ್ಮಿಂದ ಉಂಟಾದ ಹಣಕಾಸಿನ ನಷ್ಟಗಳನ್ನು ನಾವು ಕವರ್ ಮಾಡುತ್ತೇವೆ
ಉದ್ಯೋಗಿ ಅಥವಾ ಸ್ವಯಂ ಉದ್ಯೋಗಿ ವ್ಯಕ್ತಿಯಾಗಿ ನಿಮ್ಮ ಸಾಮರ್ಥ್ಯದ ಯಾವುದೇ ಚಟುವಟಿಕೆ ಅಥವಾ ಲೋಪದಿಂದಾಗಿ ಉಂಟಾಗುವ ನಷ್ಟವನ್ನು ಮತ್ತು ವೃತ್ತಿಪರ ಅಥವಾ ವ್ಯವಹಾರ ಚಟುವಟಿಕೆಯನ್ನು ಕವರ್ ಮಾಡಲಾಗುವುದಿಲ್ಲ
ಸೆಕ್ಯೂರಿಟಿಗಳ ಮಾರಾಟ, ವರ್ಗಾವಣೆ ಅಥವಾ ವಿಲೇವಾರಿ ಮಾಡುವ ಮಿತಿ ಅಥವಾ ಸಾಮರ್ಥ್ಯ ಸೇರಿದಂತೆ ಹೂಡಿಕೆ ಅಥವಾ ಟ್ರೇಡಿಂಗ್ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ
ನಿಮ್ಮ ಕುಟುಂಬದ ಸದಸ್ಯರಿಂದ ಕಾನೂನು ಮೊಕದ್ದಮೆಗಳ ವಿರುದ್ಧ ರಕ್ಷಣೆ ಪಡೆಯಲು ಉದ್ಭವಿಸುವ ಯಾವುದೇ ಕ್ಲೈಮ್, ನಿಮ್ಮೊಂದಿಗೆ ವಾಸಿಸುತ್ತಿರುವ ಯಾವುದೇ ವ್ಯಕ್ತಿಯನ್ನು ಕವರ್ ಮಾಡಲಾಗುವುದಿಲ್ಲ
ಇನ್ಶೂರೆನ್ಸ್ ಮಾಡಿದ ಸಂದರ್ಭಕ್ಕೆ ಮುಂಚಿತವಾಗಿ ಅಸ್ತಿತ್ವದಲ್ಲಿರುವ ಸ್ಥಿತಿಗೆ ಹೊರತಾಗಿ ನಿಮ್ಮ ವೈಯಕ್ತಿಕ ಸಾಧನವನ್ನು ಉತ್ತಮಗೊಳಿಸುವ ಯಾವುದೇ ವೆಚ್ಚಗಳನ್ನು ತಪ್ಪಿಸಲಾಗದ ಹೊರತಾಗಿ, ಕವರ್ ಮಾಡಲಾಗುವುದಿಲ್ಲ
ಮೇಲೆ ತಿಳಿಸಿದ ಸಂಯೋಜನೆಯಲ್ಲಿ ಬಳಸಲಾಗುತ್ತಿರುವ ಕಾಯಿನ್‌ಗಳು, ಟೋಕನ್‌ಗಳು ಅಥವಾ ಸಾರ್ವಜನಿಕ / ಖಾಸಗಿ ಕೀಗಳನ್ನು ಒಳಗೊಂಡಿರುವ ಕ್ರಿಪ್ಟೋಕರೆನ್ಸಿಗಳೊಂದಿಗೆ ಟ್ರೇಡಿಂಗ್‌ನಲ್ಲಿ ಉಂಟಾಗುವ ಯಾವುದೇ ನಷ್ಟ / ಕಳೆದುಕೊಳ್ಳುವಿಕೆ / ವಿನಾಶ / ಮಾರ್ಪಾಡು / ಲಭ್ಯತೆ / ಅಕ್ಸೆಸ್ ಮಾಡದಿರುವುದು ಮತ್ತು / ಅಥವಾ ವಿಳಂಬ ಕವರ್ ಆಗುವುದಿಲ್ಲ
ಇಂಟರ್ನೆಟ್ ಮೂಲಕ ಸಂಬಂಧಿತ ಪ್ರಾಧಿಕಾರವು ನಿಷೇಧಿಸಿದ ಯಾವುದೇ ನಿರ್ಬಂಧಿತ ಅಥವಾ ವೆಬ್‌ಸೈಟ್‌ಗಳನ್ನು ಅಕ್ಸೆಸ್ ಮಾಡುವ ಮೂಲಕ ನಿಮ್ಮಿಂದ ಉಂಟಾದ ಯಾವುದೇ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ
ಆನ್‌ಲೈನ್‌ನಲ್ಲಿ ಜೂಜಾಟ ಮತ್ತು ಅಥವಾ ಇನ್ಯಾವುದೇ ರೀತಿಯಲ್ಲಿ, ಕವರ್ ಆಗುವುದಿಲ್ಲ
"ಏನನ್ನು ಕವರ್ ಮಾಡಲಾಗಿದೆ/ಕವರ್ ಮಾಡಲಾಗಿಲ್ಲ" ಎಂಬಲ್ಲಿ ನಮೂದಿಸಲಾದ ವಿವರಣೆಗಳು ವಿವರಣಾತ್ಮಕವಾಗಿವೆ ಮತ್ತು ಪಾಲಿಸಿಯ ನಿಯಮಗಳು, ಷರತ್ತುಗಳು ಮತ್ತು ಹೊರಗಿಡುವಿಕೆಗಳಿಗೆ ಒಳಪಟ್ಟಿರುತ್ತವೆ. ಹೆಚ್ಚಿನ ವಿವರಗಳಿಗಾಗಿ ದಯವಿಟ್ಟು ಪಾಲಿಸಿ ಡಾಕ್ಯುಮೆಂಟನ್ನು ನೋಡಿ
ಪ್ರಮುಖ ಫೀಚರ್‌ಗಳು | ಪ್ರಯೋಜನಗಳು |
ಫಂಡ್‌ಗಳ ಕಳ್ಳತನ | ಆನ್ಲೈನ್ ವಂಚನೆಗಳಿಂದ ಉಂಟಾಗುವ ಹಣಕಾಸಿನ ನಷ್ಟಗಳನ್ನು ಕವರ್ ಮಾಡುತ್ತದೆ. |
ಶೂನ್ಯ ಕಡಿತಗಳು | ಕವರ್ ಮಾಡಲಾದ ಕ್ಲೈಮ್‌ಗೆ ಮುಂದೆ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ. |
ಕವರ್ ಮಾಡಲಾದ ಡಿವೈಸ್‌ಗಳು | ಅನೇಕ ಸಾಧನಗಳಿಗೆ ಅಪಾಯವನ್ನು ಕವರ್ ಮಾಡುವ ಸೌಲಭ್ಯ. |
ಕೈಗೆಟುಕುವ ಪ್ರೀಮಿಯಂ | ಪ್ಲಾನ್ ದಿನಕ್ಕೆ ₹ 2 ರಿಂದ ಆರಂಭ*. |
ಐಡೆಂಟಿಟಿ ಕಳ್ಳತನ | ಇಂಟರ್ನೆಟ್‌ನಲ್ಲಿ ವೈಯಕ್ತಿಕ ಮಾಹಿತಿಯ ದುರುಪಯೋಗದಿಂದಾಗಿ ಹಣಕಾಸಿನ ನಷ್ಟಕ್ಕೆ ಕವರೇಜ್. |
ಪಾಲಿಸಿ ಅವಧಿ | 1 ವರ್ಷ |
ಇನ್ಶೂರೆನ್ಸ್ ಮಾಡಲಾದ ಮೊತ್ತ | ₹10,000 ರಿಂದ ₹5 ಕೋಟಿ |
ನಮ್ಮ ಸೈಬರ್ ಇನ್ಶೂರೆನ್ಸ್ ಪ್ಲಾನ್ ಅನ್ನು ವ್ಯಾಪಕ ಶ್ರೇಣಿಯ ಸೈಬರ್ ಅಪಾಯಗಳನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ಕೈಗೆಟಕುವ ಪ್ರೀಮಿಯಂನೊಂದಿಗೆ ವಿನ್ಯಾಸಗೊಳಿಸಲಾಗಿದೆ.
ಯಾವುದೇ ಅಪಾಯವಿಲ್ಲದೆ ಆನ್ಲೈನಿನಲ್ಲಿ ಕೆಲಸ ಮಾಡಿ
ಹೆಚ್ಚುವರಿ ಸುರಕ್ಷತೆಯೊಂದಿಗೆ ಆನ್ಲೈನಿನಲ್ಲಿ ಅಧ್ಯಯನ
ಸುರಕ್ಷಿತ ಆನ್ಲೈನ್ ಬಿಸಿನೆಸ್‌ಗಾಗಿ
ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಪ್ಲಾನನ್ನು ಕಸ್ಟಮೈಸ್ ಮಾಡಿ
18 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿಯು ಈ ಪಾಲಿಸಿಯನ್ನು ಖರೀದಿಸಬಹುದು. ಫ್ಯಾಮಿಲಿ ಕವರ್‌ನ ಭಾಗವಾಗಿ ನಿಮ್ಮ ಕಡಿಮೆ ವಯಸ್ಸಿನ ಮಕ್ಕಳನ್ನು ಕೂಡ ನೀವು ಸೇರಿಸಬಹುದು
ಪಾಲಿಸಿ ಅವಧಿ 1 ವರ್ಷ (ವಾರ್ಷಿಕ ಪಾಲಿಸಿ)
ಡಿಜಿಟಲ್ ಜಗತ್ತಿನಲ್ಲಿ ನೀವು ಎದುರಿಸಬಹುದಾದ ಎಲ್ಲಾ ರೀತಿಯ ಸೈಬರ್ ಅಪಾಯಗಳನ್ನು ನಿರ್ವಹಿಸಲು ಪಾಲಿಸಿಯು ವಿಶಾಲ ಶ್ರೇಣಿಯ ವಿಭಾಗಗಳನ್ನು ಒದಗಿಸುತ್ತದೆ. ವಿಭಾಗಗಳನ್ನು ಕೆಳಗೆ ನಮೂದಿಸಲಾಗಿದೆ:
1. ಫಂಡ್‌ಗಳ ಕಳ್ಳತನ (ಅನಧಿಕೃತ ಡಿಜಿಟಲ್ ಟ್ರಾನ್ಸಾಕ್ಷನ್‌ಗಳು ಮತ್ತು ಅನಧಿಕೃತ ಭೌತಿಕ ಟ್ರಾನ್ಸಾಕ್ಷನ್‌ಗಳು)
2. ಐಡೆಂಟಿಟಿ ಕಳ್ಳತನ
3. ಡೇಟಾ ಮರುಸ್ಥಾಪನೆ / ಮಾಲ್‌ವೇರ್ ಡಿಕಾಂಟಾಮಿನೇಶನ್
4. ಹಾರ್ಡ್‌ವೇರ್ ಬದಲಾವಣೆ
5. ಸೈಬರ್ ಬೆದರಿಕೆ, ಸೈಬರ್ ಸ್ಟಾಕಿಂಗ್ ಮತ್ತು ಗೌರವದ ನಷ್ಟ
6. ಸೈಬರ್ ಸುಲಿಗೆ
7. ಆನ್‌ಲೈನ್ ಶಾಪಿಂಗ್
8. ಆನ್ಲೈನ್ ಸೇಲ್ಸ್
9. ಸಾಮಾಜಿಕ ಮಾಧ್ಯಮ ಮತ್ತು ಮಾಧ್ಯಮ ಹೊಣೆಗಾರಿಕೆ
10. ನೆಟ್ವರ್ಕ್ ಸೆಕ್ಯೂರಿಟಿ ಹೊಣೆಗಾರಿಕೆ
11. ಗೌಪ್ಯತೆ ಉಲ್ಲಂಘನೆ ಮತ್ತು ಡೇಟಾ ಉಲ್ಲಂಘನೆ ಹೊಣೆಗಾರಿಕೆ
12. ಗೌಪ್ಯತೆ ಉಲ್ಲಂಘನೆ ಮತ್ತು ಥರ್ಡ್ ಪಾರ್ಟಿಯಿಂದ ಡೇಟಾ ಉಲ್ಲಂಘನೆ
13. ಸ್ಮಾರ್ಟ್ ಹೋಮ್ ಕವರ್
14. ಅವಲಂಬಿತ ಮಕ್ಕಳಿಂದಾಗಿ ಉಂಟಾಗುವ ಹೊಣೆಗಾರಿಕೆ
ನಿಮ್ಮ ಸೈಬರ್ ಇನ್ಶೂರೆನ್ಸ್ ಅಗತ್ಯಗಳಿಗೆ ಅನುಗುಣವಾಗಿ ಲಭ್ಯವಿರುವ ಕವರ್‌ಗಳ ಯಾವುದೇ ಸಂಯೋಜನೆಯನ್ನು ನೀವು ಆಯ್ಕೆ ಮಾಡಬಹುದು.
ಈ ಕೆಳಗಿನ ಹಂತಗಳಲ್ಲಿ ನೀವು ನಿಮ್ಮದೇ ಆದ ಪ್ಲಾನ್ ಅನ್ನು ಮಾಡಬಹುದು:
• ನೀವು ಬಯಸುವ ಕವರ್‌ಗಳನ್ನು ಆಯ್ಕೆಮಾಡಿ
• ನೀವು ಬಯಸುವ ವಿಮಾ ಮೊತ್ತವನ್ನು ಆಯ್ಕೆಮಾಡಿ
• ಅಗತ್ಯವಿದ್ದರೆ ಕವರ್ ಅನ್ನು ನಿಮ್ಮ ಕುಟುಂಬಕ್ಕೆ ವಿಸ್ತರಿಸಿ
• ನಿಮ್ಮ ಕಸ್ಟಮೈಜ್ ಮಾಡಿದ ಸೈಬರ್ ಪ್ಲಾನ್ ಸಿದ್ಧವಾಗಿದೆ
ಪಾಲಿಸಿಯ ಅಡಿಯಲ್ಲಿ ಲಭ್ಯವಿರುವ ವಿಮಾ ಮೊತ್ತದ ಶ್ರೇಣಿಯು ₹ 10,000 ರಿಂದ ₹ 5 ಕೋಟಿಯವರೆಗೆ ಇರುತ್ತದೆ. ಆದಾಗ್ಯೂ, ಇದು ಅಂಡರ್‌ರೈಟಿಂಗ್ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ. ಇತ್ತೀಚಿನ ಮಾರ್ಗಸೂಚಿಗಳನ್ನು ತಿಳಿದುಕೊಳ್ಳಲು ದಯವಿಟ್ಟು ನಮ್ಮನ್ನು ಸಂಪರ್ಕಿಸಿ
ಈ ಕೆಳಗಿನ ಆಧಾರದ ಮೇಲೆ ನೀವು ವಿಮಾ ಮೊತ್ತವನ್ನು ಆಯ್ಕೆ ಮಾಡಬಹುದು:
• ಪ್ರತಿ ವಿಭಾಗಕ್ಕೆ: ಪ್ರತಿ ಆಯ್ದ ವಿಭಾಗಕ್ಕೆ ಪ್ರತ್ಯೇಕ ವಿಮಾ ಮೊತ್ತವನ್ನು ಒದಗಿಸಿ ಅಥವಾ
• ಫ್ಲೋಟರ್: ಆಯ್ದ ವಿಭಾಗಗಳಲ್ಲಿ ಫ್ಲೋಟ್ ಆಗುವ ಫಿಕ್ಸೆಡ್ ವಿಮಾ ಮೊತ್ತವನ್ನು ಒದಗಿಸಿ
ಒಂದು ವೇಳೆ ನೀವು ವಿಭಾಗದ ಪ್ರಕಾರ ವಿಮಾ ಮೊತ್ತವನ್ನು ಆಯ್ಕೆ ಮಾಡಿದರೆ, ಈ ಕೆಳಗಿನ ರಿಯಾಯಿತಿಯು ಅನ್ವಯವಾಗುತ್ತದೆ:
• ಮಲ್ಟಿಪಲ್ ಕವರ್ ರಿಯಾಯಿತಿ: ನಿಮ್ಮ ಪಾಲಿಸಿಯಲ್ಲಿ ನೀವು 3 ಅಥವಾ ಅದಕ್ಕಿಂತ ಹೆಚ್ಚಿನ ವಿಭಾಗಗಳು/ಕವರ್‌ಗಳನ್ನು ಆಯ್ಕೆ ಮಾಡಿದಾಗ 10% ರಿಯಾಯಿತಿ ಅನ್ವಯವಾಗುತ್ತದೆ
ಒಂದು ವೇಳೆ ನೀವು ಫ್ಲೋಟರ್ ವಿಮಾ ಮೊತ್ತವನ್ನು ಆಯ್ಕೆ ಮಾಡಿದರೆ, ಈ ಕೆಳಗಿನ ರಿಯಾಯಿತಿಯು ಅನ್ವಯವಾಗುತ್ತದೆ:
• ಫ್ಲೋಟರ್ ರಿಯಾಯಿತಿ: ನೀವು ಫ್ಲೋಟರ್ ವಿಮಾ ಮೊತ್ತದ ಆಧಾರದ ಮೇಲೆ ಪ್ರಾಡಕ್ಟ್ ಅಡಿಯಲ್ಲಿ ಅನೇಕ ಕವರ್‌ಗಳನ್ನು ಆಯ್ಕೆ ಮಾಡಿದಾಗ, ಈ ಕೆಳಗಿನ ರಿಯಾಯಿತಿಗಳನ್ನು ನೀಡಲಾಗುತ್ತದೆ:
ಕವರ್‌ಗಳ ಸಂಖ್ಯೆ | % ರಿಯಾಯಿತಿ |
2 | 10% |
3 | 15% |
4 | 25% |
5 | 35% |
>=6 | 40% |
ಇಲ್ಲ. ಪಾಲಿಸಿ ಅಡಿಯಲ್ಲಿ ಯಾವುದೇ ಕಡಿತಗಳಿಲ್ಲ
ಇಲ್ಲ. ಯಾವುದೇ ಕಾಯುವ ಅವಧಿ ಅನ್ವಯವಾಗುವುದಿಲ್ಲ
ಇಲ್ಲ. ಪಾಲಿಸಿಯ ಯಾವುದೇ ವಿಭಾಗದ ಅಡಿಯಲ್ಲಿ ಯಾವುದೇ ಉಪ-ಮಿತಿಗಳು ಅನ್ವಯವಾಗುವುದಿಲ್ಲ
ನೀವು ಆಯ್ಕೆ ಮಾಡಿದ ವಿಮಾ ಮೊತ್ತಕ್ಕೆ ಒಳಪಟ್ಟು ಸಂಬಂಧಿತ ಕವರ್‌ಗಳು/ವಿಭಾಗಗಳನ್ನು ಆಯ್ಕೆ ಮಾಡಿದ್ದರೆ, ನೀವು ಪೀಡಿತರಾಗಿರುವ ಎಲ್ಲಾ ಸೈಬರ್ ಅಪರಾಧಗಳಿಗೆ ಕ್ಲೈಮ್ ಮಾಡಲು ನೀವು ಅರ್ಹರಾಗಿರುತ್ತೀರಿ
ಹೌದು. ನೀವು ಕವರ್ ಅನ್ನು ಗರಿಷ್ಠ 4 ಕುಟುಂಬದ ಸದಸ್ಯರಿಗೆ ವಿಸ್ತರಿಸಬಹುದು (ಪ್ರಸ್ತಾಪಕರನ್ನು ಒಳಗೊಂಡಂತೆ). ಫ್ಯಾಮಿಲಿ ಕವರ್ ಅನ್ನು ನಿಮಗೆ, ನಿಮ್ಮ ಸಂಗಾತಿಗೆ, ನಿಮ್ಮ ಮಕ್ಕಳಿಗೆ, ಒಡಹುಟ್ಟಿದವರಿಗೆ, ಪೋಷಕರಿಗೆ ಅಥವಾ ಸಂಗಾತಿಯ ಪೋಷಕರಿಗೆ, ಅದೇ ಮನೆಯಲ್ಲಿ ವಾಸಿಸುತ್ತಿರುವವರಿಗೆ, ಸಂಖ್ಯೆಯಲ್ಲಿ ಗರಿಷ್ಠ 4 ವರೆಗೆ ವಿಸ್ತರಿಸಬಹುದು
ಹೌದು. ನಮ್ಮೊಂದಿಗೆ ಸಮಾಲೋಚನೆಯ ನಂತರ, ಕಾನೂನು ಕಾರ್ಯವಿಧಾನಗಳಿಗಾಗಿ ನೀವು ನಿಮ್ಮ ಸ್ವಂತ ವಕೀಲರನ್ನು ನೇಮಿಸಬಹುದು.
ಹೌದು. ನಮ್ಮ ವೆಬ್‌ಸೈಟ್‌ನಿಂದ ನೇರವಾಗಿ ಖರೀದಿಸಿದ ಪಾಲಿಸಿಗಳಿಗೆ ನೀವು 5% ರಿಯಾಯಿತಿಯನ್ನು ಪಡೆಯುತ್ತೀರಿ
ಕವರ್ ಮಾಡಲಾಗುವ ಸಾಧನಗಳ ಸಂಖ್ಯೆಯ ಮೇಲೆ ಯಾವುದೇ ನಿರ್ಬಂಧವಿಲ್ಲ
ಈ 5 ತ್ವರಿತ, ಸುಲಭ ಹಂತಗಳನ್ನು ನೆನಪಿಡುವ ಮೂಲಕ ನೀವು ಸೈಬರ್ ದಾಳಿಗಳನ್ನು ತಡೆಯಬಹುದು:
• ಯಾವಾಗಲೂ ಬಲವಾದ ಪಾಸ್ವರ್ಡ್‌ಗಳನ್ನು ಬಳಸಿ ಮತ್ತು ನಿಯಮಿತವಾಗಿ ಪಾಸ್ವರ್ಡ್‌ಗಳನ್ನು ಅಪ್ಡೇಟ್ ಮಾಡಿ
• ನೀವು ಬಳಸುತ್ತಿರುವ ಸಾಫ್ಟ್‌ವೇರ್ ಅನ್ನು ಯಾವಾಗಲೂ ಅಪ್ಡೇಟ್ ಮಾಡಿ
• ನಿಮ್ಮ ಸೋಶಿಯಲ್ ಮೀಡಿಯಾ ಗೌಪ್ಯತಾ ಸೆಟ್ಟಿಂಗ್‌ಗಳನ್ನು ನಿರ್ವಹಿಸಿ
• ನಿಮ್ಮ ಹೋಮ್ ನೆಟ್ವರ್ಕ್ ಸುರಕ್ಷಿತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ
• ಪ್ರಮುಖ ಭದ್ರತಾ ಉಲ್ಲಂಘನೆಗಳ ಕುರಿತು ಅಪ್ ಟು ಡೇಟ್ ಆಗಿರಿ
ನೀವು ಈ ಪಾಲಿಸಿಯನ್ನು ನಮ್ಮ ಕಂಪನಿಯ ವೆಬ್‌ಸೈಟ್‌ನಿಂದ ಖರೀದಿಸಬಹುದು. ಖರೀದಿ ಪ್ರಕ್ರಿಯೆಯು ಸಂಪೂರ್ಣವಾಗಿ ಡಿಜಿಟಲ್ ಆಗಿದೆ ಮತ್ತು ಈ ಪಾಲಿಸಿಯನ್ನು ಖರೀದಿಸಲು ಯಾವುದೇ ಹೆಚ್ಚುವರಿ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ
ಹೌದು. ಅದನ್ನು ತೆಗೆದುಕೊಂಡ ನಂತರ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು. ಕೆಳಗಿನ ಟೇಬಲ್ ಪ್ರಕಾರ ನೀವು ಪ್ರೀಮಿಯಂ ರಿಫಂಡ್‌ಗೆ ಅರ್ಹರಾಗಿರುತ್ತೀರಿ:
ಅಲ್ಪಾವಧಿಯ ಸ್ಕೇಲ್‌ಗಳ ಟೇಬಲ್ | |
ಅಪಾಯದ ಅವಧಿ (ಮೀರದಂತೆ) | ವಾರ್ಷಿಕ ಪ್ರೀಮಿಯಂನ % ರಿಫಂಡ್ |
1 ತಿಂಗಳು | 85% |
2 ತಿಂಗಳು | 70% |
3 ತಿಂಗಳು | 60% |
4 ತಿಂಗಳು | 50% |
5 ತಿಂಗಳು | 40% |
6 ತಿಂಗಳು | 30% |
7 ತಿಂಗಳು | 25% |
8 ತಿಂಗಳು | 20% |
9 ತಿಂಗಳು | 15% |
9 ತಿಂಗಳಿಗಿಂತ ಹೆಚ್ಚಿನ ಅವಧಿಗೆ | 0% |