ಸ್ವಂತ ಮನೆಯೊಂದನ್ನು ಖರೀದಿಸಬೇಕು ಎಂಬುದು ಭಾರತದ ಬಹುತೇಕ ಜನರ ಬಹುದಿನಗಳ ಕನಸಾಗಿರುತ್ತದೆ ಎಂಬುದು ನಮಗೆಲ್ಲ ಗೊತ್ತಿರುವ ವಿಷಯ. ಆದರೆ ತಮ್ಮ ಕನಸನ್ನು ನನಸಾಗಿಸಿಕೊಂಡ ನಂತರ ಮನೆಯನ್ನು ಸುರಕ್ಷಿತಗೊಳಿಸುವ ಅಗತ್ಯವೂ ಇದೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ಅವರು ವಿಫಲರಾಗುತ್ತಾರೆ. ಎಚ್‌ಡಿಎಫ್‌ಸಿ ಎರ್ಗೋದ ಮಾಲೀಕರಿಗಾಗಿನ ಹೋಮ್ ಶೀಲ್ಡ್ ಇನ್ಶೂರೆನ್ಸ್‌ನಿಂದ, ನಿಮ್ಮ ಮನೆ ಅಥವಾ ಮನೆಯ ವಸ್ತುಗಳು ಎಂದಾದರೂ ಅಪಾಯಕ್ಕೀಡಾದರೆ, ಅವುಗಳಿಗೆ ರಕ್ಷಣೆ ಒದಗಿಸಲು ನಾವು ಒಂದು ಶೀಲ್ಡ್‌ನೊಂದಿಗೆ ಸಿದ್ಧರಾಗಿದ್ದೇವೆ ಎಂಬುದನ್ನು ತಿಳಿದು ನೆಮ್ಮದಿಯಿಂದ ಇರಬಹುದು.
ಮನೆ ಎನ್ನುವುದು ಅಕ್ಷರಶಃ ಇಟ್ಟಿಗೆ-ಗಾರೆ ರೂಪದಲ್ಲಿ ಬದಲಾದ ನಿಮ್ಮ ಕನಸೇ ಆಗಿರುತ್ತದೆ. ಈ ನಿಮ್ಮ ಕನಸನ್ನು ಬೆಂಕಿ ಅನಾಹುತದಿಂದ ಆಗುವ ಯಾವುದೇ ಹಾನಿಯಿಂದ ರಕ್ಷಿಸಿಕೊಳ್ಳಿ.
ಮನೆ ಒಡೆಯುವ ಬಗ್ಗೆ ಯೋಚಿಸುವುದು ಕೂಡ ಕಷ್ಟ. ಕಳ್ಳತನ/ದರೋಡೆಗಳ ವಿರುದ್ಧ ನಿಮ್ಮ ಸ್ವತ್ತುಗಳನ್ನು ಇನ್ಶೂರ್ ಮಾಡಿಸಿ ನಿಶ್ಚಿಂತೆಯಿಂದ ಇರಿ.
ಗೃಹೋಪಯೋಗಿ ಸಾಮಗ್ರಿಗಳು ಕೆಟ್ಟರೆ ದಿನನಿತ್ಯದ ಜೀವನಕ್ಕೆ ಅಡಚಣೆಯಾಗುತ್ತದೆ. ಇಂತಹ ಧಿಡೀರ್ ಖರ್ಚುಗಳನ್ನು ತಪ್ಪಿಸಲು ಅವುಗಳನ್ನು ಇನ್ಶೂರ್ ಮಾಡಿಸಿ.
ಭಾರತದ 68% ಭೂಮಿ ಬರಗಾಲಕ್ಕೆ, 60% ಭೂಕಂಪಗಳಿಗೆ, 12% ಪ್ರವಾಹಕ್ಕೆ ಮತ್ತು 8% ಸೈಕ್ಲೋನ್‌ಗಳಿಗೆ ಗುರಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಗೊತ್ತಿರಲಿಕ್ಕಿಲ್ಲ ಇನ್ನಷ್ಟು ಓದಿ...
ಸಂಕಷ್ಟದ ಸಮಯಗಳು ನಿಮ್ಮ ಮನೆ ಹಾಗೂ ಮನಸ್ಸಿನ ನೆಮ್ಮದಿಗಳೆರಡರ ಮೇಲೆಯೂ ಪ್ರಭಾವ ಬೀರಬಹುದು. ಮುಷ್ಕರ, ಗಲಭೆ, ಭಯೋತ್ಪಾದನೆ ಮತ್ತು ದುರುದ್ದೇಶಪೂರಿತ ಕಾರ್ಯಗಳ ವಿರುದ್ಧ ಅದನ್ನು ಸುರಕ್ಷಿತವಾಗಿಸಿ.
ಫಿಕ್ಸ್ಚರ್‌ಗಳು ಮತ್ತು ಸ್ಯಾನಿಟರಿ ಫಿಟ್ಟಿಂಗ್‌ಗಳಿಗೆ ಖರ್ಚು ಮಾಡಿದಿರಾ? ಆಕಸ್ಮಿಕ ಹಾನಿಯ ವಿರುದ್ಧ ಅವುಗಳನ್ನು ಸುರಕ್ಷಿತವಾಗಿಸಿ ನಿಶ್ಚಿಂತೆಯಿಂದಿರಿ.
ಈ ಸಂದರ್ಭದಲ್ಲಿ ಮನೆ ಬದಲಾಯಿಸುವ ಖರ್ಚುಗಳು, ಪರ್ಯಾಯ/ಹೋಟೆಲ್ ವಸತಿಗಾಗಿ ಬಾಡಿಗೆ, ತುರ್ತಿನ ಖರೀದಿಗಳು, ಮತ್ತು ಬ್ರೋಕರೇಜ್ಇನ್ನಷ್ಟು ಓದಿ...
ಯುದ್ಧ, ಆಕ್ರಮಣ, ಅನ್ಯ ದೇಶದ ಶತ್ರುಗಳ ಚಟುವಟಿಕೆಗಳು, ಪ್ರತಿಕೂಲತೆಯಿಂದ ಉಂಟಾಗುವ ನಷ್ಟ ಮತ್ತು/ಅಥವಾ ಹಾನಿಗಳು ಕವರ್ ಆಗುವುದಿಲ್ಲ.
ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಇತ್ಯಾದಿಗಳನ್ನು ಕವರ್ ಮಾಡಲಾಗುವುದಿಲ್ಲ.
ನಿಮ್ಮ ಅಮೂಲ್ಯ ಸ್ವತ್ತುಗಳೊಂದಿಗೆ ನೀವು ಭಾವನಾತ್ಮಕ ಸಂಬಂಧ ಹೊಂದಿರುವುದು ನಮಗೆ ತಿಳಿದಿದೆ. ಆದರೆ 10 ವರ್ಷಕ್ಕೂ ಹಳೆಯ ವಸ್ತುಗಳನ್ನು ಕವರ್ ಮಾಡಲಾಗುವುದಿಲ್ಲ.
ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ
ನಾವು ಅನಿರೀಕ್ಷಿತವಾಗಿ ಆಗುವ ನಷ್ಟಗಳನ್ನು ಕವರ್ ಮಾಡುವ ಭರವಸೆ ನೀಡುತ್ತೇವೆ, ಆದರೆ ನಿಮ್ಮ ಆಸ್ತಿಗೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಪಾಲಿಸಿಯ ಕವರೇಜ್ ವ್ಯಾಪ್ತಿಯಿಂದ ಸಂಪೂರ್ಣವಾಗಿ ಹೊರಗುಳಿಯುತ್ತದೆ.
ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.
ಸಾಮಾನ್ಯ ಶಿಥಿಲಗೊಳ್ಳುವಿಕೆ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಹೋಮ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.
ಈ ಸಂದರ್ಭದಲ್ಲಿ ಪಾಲಿಸಿಯು ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.
ಹೋಮ್ ಇನ್ಶೂರೆನ್ಸ್ ಕವರ್ ನೀವು ವಾಸಿಸುತ್ತಿರುವ ಮನೆಗೆ ಕವರ್ ನೀಡುತ್ತದೆ, ನಿರ್ಮಾಣದ ಹಂತದಲ್ಲಿರುವ ಯಾವುದೇ ಆಸ್ತಿಯು ಕವರ್ ಆಗುವುದಿಲ್ಲ.
ಲ್ಯಾಪ್ಟಾಪ್, ಕ್ಯಾಮರಾ, ದುರ್ಬೀನುಗಳು, ಸಂಗೀತ ಉಪಕರಣಗಳಂತಹ ಎಲ್ಲಾ ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳಿಗೆ ಈ ಕವರ್ ಕವರೇಜ್ ನೀಡುತ್ತದೆ; ಸ್ಪೋರ್ಟ್ಸ್ ಗೇರ್ ಪೋರ್ಟೆಬಲ್ ಆಗಿರುವ ಯಾವುದೇ ನಿರ್ದಿಷ್ಟ ವಸ್ತು. ಈ ಪಾಲಿಸಿಯು 10 ವರ್ಷಕ್ಕಿಂತ ಹಳೆಯದಾದ ಉಪಕರಣಗಳನ್ನು ಕವರ್ ಮಾಡುವುದಿಲ್ಲ.
ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳೆಂದರೆ ಚಿನ್ನ, ಬೆಳ್ಳಿ ಅಥವಾ ಯಾವುದೇ ಬೆಲೆಬಾಳುವ ಲೋಹದಿಂದ ಮಾಡಿದ ಆಭರಣಗಳು, ವಜ್ರದ ಆಭರಣಗಳು, ಕಲಾಕೃತಿಗಳು ಮತ್ತು ವಾಚ್‌ಗಳು. ಈ ಆ್ಯಡ್ ಆನ್ ಕವರ್ ಅನ್ನು ನಿಮ್ಮ ಹೋಮ್ ಕಂಟೆಂಟ್ (ಮನೆ ವಸ್ತುಗಳು) ವಿಮಾ ಮೊತ್ತದ ಗರಿಷ್ಠ 20% ವರೆಗೆ ಆಯ್ಕೆ ಮಾಡಬಹುದು. ನಿಮ್ಮ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳಿಗೆ ಆದ ನಷ್ಟವನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಕವರ್ ಮಾಡಲಾಗುತ್ತದೆ
ಈ ಕವರ್ ಅಡಿಯಲ್ಲಿ ಸ್ಟ್ಯಾಟಿಕ್ ಎಕ್ಸರ್ಸೈಸ್ ಸೈಕಲ್ ಮತ್ತು ಗೇರ್ ಇರುವ ಅಥವಾ ಇಲ್ಲದ ಪೆಡಲ್ ಸೈಕಲ್‌ಗೆ ಆಗುವ ನಷ್ಟವನ್ನು ನಾವು ಇನ್ಶೂರ್ ಮಾಡುತ್ತೇವೆ. ಇದು ಬೆಂಕಿ, ವಿಕೋಪಗಳು, ಕಳ್ಳತನ ಮತ್ತು ಅಪಘಾತಗಳಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆ. ನಿಮ್ಮ ಇನ್ಶೂರ್ಡ್ ಸೈಕಲ್‌ನಿಂದ ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಆದ ಥರ್ಡ್ ಪಾರ್ಟಿ ಹೊಣೆಗಾರಿಕೆಗೆ ರಕ್ಷಣೆ ಒದಗಿಸುತ್ತೇವೆ. ಆದರೆ, ಕೇವಲ ನಿಮ್ಮ ಪೆಡಲ್ ಸೈಕಲ್ ಟೈರ್‌ಗಳು ಮಾತ್ರ ಕಳ್ಳತನವಾದರೆ ಅಥವಾ ಹಾನಿಗೊಳಗಾದರೆ ಅದು ಕವರ್ ಆಗುವುದಿಲ್ಲ.
ಈ ಕವರ್ ಸುರಕ್ಷತಾ ಕವಚವಾಗಿ ಕೆಲಸ ಮಾಡುತ್ತದೆ ಮತ್ತು ಇನ್ಶೂರ್ಡ್ ವ್ಯಕ್ತಿಗಳನ್ನು ಥರ್ಡ್ ಪಾರ್ಟಿಯ ಆಕಸ್ಮಿಕ ಸಾವು, ಅಂಗವೈಕಲ್ಯ ಅಥವಾ ದೈಹಿಕ ಗಾಯಗಳಿಗೆ ಸಂಬಂಧಪಟ್ಟ ಕ್ಲೇಮ್‌ಗಳ ವಿರುದ್ಧ ರಕ್ಷಿಸುತ್ತದೆ. ಇದು ಇನ್ಶೂರ್ಡ್ ವ್ಯಕ್ತಿಯ ಮನೆಯ ಉದ್ಯೋಗಿ ಅಥವಾ ಮನೆಕೆಲಸದ ಸಿಬ್ಬಂದಿಯನ್ನು ಒಳಗೊಳ್ಳುವುದಿಲ್ಲ. ಹಾಗೆಯೇ, ಇದು ಥರ್ಡ್ ಪಾರ್ಟಿ ಆಸ್ತಿಗೆ ಆದ ಆಕಸ್ಮಿಕ ಹಾನಿಯನ್ನೂ ಕವರ್ ಮಾಡುತ್ತದೆ.
ಭಯೋತ್ಪಾದಕರ ದಾಳಿಯಿಂದ ನಿಮ್ಮ ಕಟ್ಟಡ/ಮನೆಯ ವಸ್ತುಗಳು ನಷ್ಟವಾದರೆ ನಾವು ಅದನ್ನು ಕವರ್ ಮಾಡುತ್ತೇವೆ
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards