ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿವೆ. ಏಕೆಂದರೆ ಮಾಲೀಕರು ತಮ್ಮ ದುಬಾರಿ ವಸ್ತುಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೆ ಹಾಗೂ ತಮ್ಮ ಮನೆಯನ್ನು ಹಾನಿ, ಕಳ್ಳತನಗಳಿಂದ ರಕ್ಷಿಸಲು ಮುಂದಾಗುತ್ತಿದ್ದಾರೆ. ನಿಮ್ಮ ಮನೆಗೆ ಸಮಗ್ರ ಹಣಕಾಸಿನ ಕವರೇಜ್ ಪಡೆಯುವುದು, ಅದರ ಭೌತಿಕ ರಚನೆಯನ್ನು ರಕ್ಷಿಸಲು ಮಾತ್ರವಲ್ಲದೆ ವಾಶಿಂಗ್ ಮಷೀನ್‌ಗಳಂತಹ ದುಬಾರಿ ವಸ್ತುಗಳನ್ನೂ ರಕ್ಷಿಸಲು ಸಹಕಾರಿಯಾಗುತ್ತದೆ. ಇದರಿಂದ ನೀವು ಯಾವುದೇ ಚಿಂತೆಯಿಲ್ಲದೆ ನೆಮ್ಮದಿಯಿಂದ ಇರಬಹುದು.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಮನೆಗೆಲಸಗಳನ್ನು ಸುಲಭವಾಗಿಸುವ ಆಧುನಿಕ ಸಲಕರಣೆಗಳನ್ನು ಹೊಂದಿದ್ದಾರೆ. ಈ ಪಟ್ಟಿಯಲ್ಲಿ ವಾಷಿಂಗ್ ಮಷೀನ್ ಮೊದಲನೆಯದಾಗಿರುತ್ತದೆ ಎಂದರೆ ತಪ್ಪಾಗಲಾರದು. ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನದ ದೆಸೆಯಿಂದ ಈ ವಾಷಿಂಗ್ ಮಷೀನ್‌ಗಳು ಹೆಚ್ಚೆಚ್ಚು 'ಸ್ಮಾರ್ಟ್' ಆಗುತ್ತಾ ಬಂದಿವೆ. ಇವುಗಳಲ್ಲಿ ಈಗ ಹತ್ತು ಹಲವು ವೈಶಿಷ್ಟ್ಯಗಳು ತುಂಬಿವೆ. ಪರಿಣಾಮವಾಗಿ, ಬೆಲೆಯೂ ಹೆಚ್ಚಾಗಿದೆ. ಹೀಗಾಗಿ, ಬೆಂಕಿ ಅಥವಾ ಇತರ ಅಪಾಯಗಳು, ಕಳ್ಳತನ ಅಥವಾ ಇತರ ಯಾವುದೇ ಹಾನಿಗಳಿಂದಾಗಿ ಉಂಟಾಗುವ ಯಾವುದೇ ಹಣಕಾಸಿನ ನಷ್ಟಗಳ ವಿರುದ್ಧ ಅವುಗಳನ್ನು ರಕ್ಷಿಸುವ ಅಗತ್ಯವಿದೆ. ಆದ್ದರಿಂದ, ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ನಿಮ್ಮ ವಾಶಿಂಗ್ ಮಷೀನ್‌ಗೆ ಕವರೇಜ್ ಪಡೆಯಿರಿ, ಇದರಿಂದ ನೀವು ಹಲವಾರು ಅಪಾಯಗಳ ವಿರುದ್ಧ ನಿಮ್ಮ ಮಷೀನ್ ಅನ್ನು ರಕ್ಷಿಸಬಹುದು
ವಾಶಿಂಗ್ ಮಷೀನ್ ಕವರ್ ಮಾಡುವ ಸಮಗ್ರ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ಪ್ರಯೋಜನಗಳನ್ನು ಹೊಂದಿದೆ:
ಪ್ರೀಮಿಯಂ ವೆಚ್ಚ ಮತ್ತು ಅದರೊಂದಿಗೆ ಬರುವ ಕವರೇಜ್ ಮೇಲೆ ಪ್ರಭಾವ ಬೀರುವ ಅನೇಕ ಅಂಶಗಳ ಆಧಾರದಲ್ಲಿ ಪ್ರೀಮಿಯಂ ನಿರ್ಧಾರವಾಗುತ್ತದೆ. ಅದರ ವಿವರ ಹೀಗಿದೆ:
ಬೆಂಕಿ, ಸಿಡಿಲು, ನೀರಿನ ಟ್ಯಾಂಕ್ ಸ್ಪೋಟ ಅಥವಾ ಓವರ್‌ಫ್ಲೋ, ನೈಸರ್ಗಿಕ ವಿಕೋಪಗಳು, ಮುಂತಾದ ಅನಿರೀಕ್ಷಿತ ಅಥವಾ ಹಠಾತ್ ಅವಘಢಗಳಿಂದ ಆಗುವ ಹಾನಿಗಳು.
ಕಳ್ಳತನ, ಸುಲಿಗೆ, ದರೋಡೆ, ದಾಂಧಲೆ, ಗಲಭೆ ಮತ್ತು ಮುಷ್ಕರಗಳಂತಹ ಸಮಾಜಘಾತುಕ ಚಟುವಟಿಕೆಗಳಿಂದ ಆಗುವ ಹಣಕಾಸು ನಷ್ಟ. .
ಯಾವುದೇ ಹೊರಾಂಗಣ ಅಪಘಾತ ಅಥವಾ ವಾಶಿಂಗ್ ಮಷೀನ್ ಸಾಗಾಣಿಕೆ ಸಮಯದಲ್ಲಿ ಉಂಟಾದ ಹಾನಿಗಳನ್ನು ವಾಶಿಂಗ್ ಮಷೀನ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
ಸಾಮಾನ್ಯ ಹಾನಿ ಮತ್ತು ದುರಸ್ತಿ, ಚಾಲನೆ ಮಾಡುವಾಗ ಅಪರೂಪದ ನಡವಳಿಕೆ ಅಥವಾ ಸ್ವಚ್ಛಗೊಳಿಸುವಾಗ, ಸೇವೆ ನೀಡುವಾಗ ಅಥವಾ ದುರಸ್ತಿ ಮಾಡುವಾಗ ಉಂಟಾದ ಹಾನಿಗಳಿಂದಾಗಿ ಉಂಟಾಗುವ ಹಾನಿ
ಇನ್ಶೂರೆನ್ಸ್ ಮಾಡಿಸಿದ ನಂತರ ಮಾಲೀಕರ ಅಜಾಗರೂಕತೆಯಿಂದ ಉಂಟಾಗುವ ಹಾನಿಗಳು.
ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡುವುದಿಲ್ಲ. ಕೈ ಜಾರಿ ಬಿದ್ದು, ಬಿಡಿಭಾಗಗಳು ಆಕಸ್ಮಿಕವಾಗಿ ಮುರಿದರೆ ಅಥವಾ ಹಾನಿಗೊಳಗಾದರೆ, ಅದಕ್ಕೆ ಕವರೇಜ್ ಸಿಗುವುದಿಲ್ಲ
ಪಾಲಿಸಿ ಖರೀದಿಸುವಾಗ, ವಿಮಾದಾರರು ತಮ್ಮ ಪ್ರಾಡಕ್ಟ್ ಬಗ್ಗೆ ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿ ಒದಗಿಸಬೇಕು. ಒಂದು ವೇಳೆ ಯಾವುದಾದರೂ ಪ್ರಮುಖ ಮಾಹಿತಿಯನ್ನು ಒದಗಿಸದಿದ್ದರೆ ಅಥವಾ ಬೇಕೆಂತಲೇ ಮರೆಮಾಚಿದ್ದರೆ.
ಉತ್ಪಾದನಾ ದೋಷಗಳು ಅಥವಾ ಉತ್ಪಾದಕರಿಂದ ಕಣ್ತಪ್ಪಿನಿಂದ ಆದ ದೋಷಗಳನ್ನು ಕವರ್ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ, ವಿಮಾದಾರರು ಉತ್ಪಾದಕರ ವಿರುದ್ಧ ಕ್ಲೈಮ್ ಸಲ್ಲಿಸಬೇಕಾಗುತ್ತದೆ
ಖರೀದಿ ದಿನಾಂಕದಿಂದ 365 ದಿನಕ್ಕಿಂದ ಹೆಚ್ಚು ಹಳೆಯದಾದ ವಾಶಿಂಗ್ ಮಷೀನ್‌ಗಳಿಗೆ ಇನ್ಶೂರೆನ್ಸ್ ಮಾನ್ಯವಾಗಿರುವುದಿಲ್ಲ. ಏಕೆಂದರೆ, ಪ್ರಾಡಕ್ಟ್ ಖರೀದಿಸಿದ ಒಂದು ವರ್ಷದೊಳಗೆ ಪಾಲಿಸಿ ಖರೀದಿಸಬೇಕು
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್