- ನಿಮ್ಮ ಕಾರನ್ನು 1 ವರ್ಷಕ್ಕೆ ನವೀಕರಿಸಿ. ಆಕ್ಸಿಡೆಂಟ್, ಕಳ್ಳತನ, ನೈಸರ್ಗಿಕ ವಿಕೋಪಗಳು, ಮಾನವ-ನಿರ್ಮಿತ ವಿಕೋಪಗಳು ಮತ್ತು ಥರ್ಡ್ ಪಾರ್ಟಿಗೆ ಆದ ಯಾವುದೇ ನಷ್ಟದ ವಿರುದ್ಧ ಕವರೇಜ್ ಪಡೆಯಿರಿ
ಆಕ್ಸಿಡೆಂಟ್, ನೈಸರ್ಗಿಕ ವಿಪತ್ತುಗಳು ಅಥವಾ ಮನುಷ್ಯ ಮಾಡಿದ ಅನಾಹುತ, ಇತ್ಯಾದಿ ಅನಿರೀಕ್ಷಿತ ಘಟನೆಗಳಿಂದ ಉಂಟಾಗಬಹುದಾದ ಹೊಣೆಗಾರಿಕೆಗಳ ವಿರುದ್ಧ ಕಾರ್ ಇನ್ಶೂರೆನ್ಸ್, ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ.. ಅದರ ಗಡುವು ದಿನಾಂಕಕ್ಕಿಂತ ಮೊದಲು ನಿಮ್ಮ ಪಾಲಿಸಿಯನ್ನು ನವೀಕರಿಸಲು ನಿಮಗೆ ಸಾಧ್ಯವಾಗದಿದ್ದರೆ ಅದು ಲ್ಯಾಪ್ಸ್ ಆಗುತ್ತದೆ ಮತ್ತು ಈ ಅವಧಿಯಲ್ಲಿ ಮಾಡಲಾದ ಯಾವುದೇ ಕ್ಲೇಮ್ ಅನ್ನು ತಿರಸ್ಕರಿಸಲಾಗುತ್ತದೆ.. ಜೊತೆಗೆ, ಮೋಟಾರ್ ವಾಹನ ಕಾಯ್ದೆ 1988 ಮತ್ತು ಇತ್ತೀಚೆಗೆ ಜಾರಿಯಾದ ಮೋಟಾರ್ ವಾಹನಗಳ (ತಿದ್ದುಪಡಿ) ಕಾಯಿದೆ 2019 ರ ಅಡಿಯಲ್ಲಿ ಎಲ್ಲಾ ಕಾರ್ ಚಾಲಕರು ಸದಾಕಾಲ ಸರಿಯಾದ ಕಾರ್ ಇನ್ಶೂರೆನ್ಸ್ ಹೊಂದಿರಬೇಕಾದ್ದು ಕಡ್ಡಾಯವಾಗಿದೆ.
ಎಲ್ಲಾ ಕಾರ್ ಚಾಲಕರು ಸದಾಕಾಲ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದಿರತಕ್ಕದ್ದು ಕಡ್ಡಾಯ ಕಾನೂನು ಅಗತ್ಯವಾಗಿದೆ.. ನಿಮ್ಮ ಇನ್ಶೂರೆನ್ಸ್ ಪ್ಲಾನ್ ನವೀಕರಿಸದೇ ಇದ್ದರೆ ಭಾರೀ ಬೆಲೆ ತೆರಬೇಕಾದೀತು. ಆಕ್ಸಿಡೆಂಟ್ ಸಂದರ್ಭದಲ್ಲಿ ನಿಮ್ಮ ಬಳಿ ಸರಿಯಾದ ಕಾರ್ ಇನ್ಶೂರೆನ್ಸ್ ಇಲ್ಲದಿದ್ದರೆ. ಥರ್ಡ್ ಪಾರ್ಟಿಗೆ ಅಥವಾ ಥರ್ಡ್ ಪಾರ್ಟಿ ಆಸ್ತಿಗೆ ಉಂಟಾದ ಯಾವುದೇ ಹಾನಿಗೆ ಸಂಬಂಧಿಸಿದ ವೆಚ್ಚಗಳನ್ನು ನೀವು ಕೈಯಾರೆ ಪಾವತಿಸಬೇಕಾಗುತ್ತದೆ.. ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ನವೀಕರಿಸುವ ಸೌಲಭ್ಯದ ಮೂಲಕ, ಗಡುವು ದಿನಾಂಕಕ್ಕಿಂತ ಮೊದಲೇ ನಿಮ್ಮ ಪಾಲಿಸಿಯನ್ನು ನವೀಕರಿಸುವುದು ಇನ್ನಷ್ಟು ಅನುಕೂಲಕರ ಮತ್ತು ಸುಲಭವಾಗಿದೆ.
ಸುರಕ್ಷಿತ 1.5+ ಕೋಟಿ ನಗು!@
ತಡ ರಾತ್ರಿ ವಾಹನ ರಿಪೇರಿಗಳು¯
ಅತ್ಯುತ್ತಮ ಪಾರದರ್ಶಕತೆ
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಕಾಗದರಹಿತ! ತಡೆರಹಿತ!
ಸುರಕ್ಷಿತ 1.5+ ಕೋಟಿ ನಗು!@
ತಡರಾತ್ರಿಯ ಕಾರ್ ರಿಪೇರಿ ಸೇವೆಗಳು***
ಅತ್ಯುತ್ತಮ ಪಾರದರ್ಶಕತೆ
ನಿಮಗೆ ಬೇಕಾದ ಎಲ್ಲಾ ಬೆಂಬಲ - 24 x 7!
ಕಾಗದರಹಿತ! ತಡೆರಹಿತ!
ಸಾಮಾನ್ಯವಾಗಿ, ನಿಮ್ಮ ಪಾಲಿಸಿಯು ಸವಕಳಿ ಮೊತ್ತವನ್ನು ಕಡಿತಗೊಳಿಸಿದ ನಂತರ ಉಳಿಯುವ ಕ್ಲೇಮ್ ಮೊತ್ತವನ್ನು ಮಾತ್ರ ಪಾವತಿಸುತ್ತದೆ. ನಿಮ್ಮ ಪಾಲಿಸಿ ವಿವರಗಳು ಸವಕಳಿಯ ವಿವರಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ, ಸಂಪೂರ್ಣ ಮೊತ್ತವನ್ನು ಪಡೆಯಲು ನೀವು ಏನು ಮಾಡಬಹುದು? ಒಂದು ಮಾರ್ಗ ಇದೆ! ಜೀರೋ-ಡಿಪ್ರಿಸಿಯೇಶನ್ ಕವರ್! ಜೀರೋ ಡಿಪ್ರಿಸಿಯೇಶನ್‌ನಲ್ಲಿ, ಯಾವುದೇ ಸವಕಳಿ ಕಡಿತಗಳಿಲ್ಲ ಮತ್ತು ಸಂಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ!
ಹೊರಗಿನ ಅಂಶಗಳು, ಪ್ರವಾಹ, ಬೆಂಕಿ ಇತ್ಯಾದಿಗಳಿಂದ ಪಾರ್ಕ್ ಮಾಡಿದ ವಾಹನಕ್ಕೆ ಅಥವಾ ವಿಂಡ್‌ಶೀಲ್ಡ್ ಗ್ಲಾಸ್‌ಗೆ ಉಂಟಾದ ಹಾನಿಗಾಗಿ ಕ್ಲೈಮ್ ಸಲ್ಲಿಸಿದಾಗ, ಈ ಆ್ಯಡ್ ಆನ್ ಕವರ್ ನೀವು ಇಲ್ಲಿಯವರೆಗೆ ಗಳಿಸಿದ ನೋ ಕ್ಲೈಮ್ ಬೋನಸ್ ಅನ್ನು ರಕ್ಷಿಸುವುದು ಮಾತ್ರವಲ್ಲದೇ, ಅದನ್ನು ಮುಂದಿನ NCB ಸ್ಲ್ಯಾಬ್‌ಗೆ ಕೊಂಡೊಯ್ಯುತ್ತದೆ .
ನಿಮ್ಮ ಕಾರಿನ ಯಾವುದೇ ತಾಂತ್ರಿಕ ಅಥವಾ ಯಾಂತ್ರಿಕ ಬ್ರೇಕ್‌ಡೌನ್ ಸಮಸ್ಯೆಗಳನ್ನು ನಿರ್ವಹಿಸಲು ನಾವು ನಿಮಗೆ ಸದಾಕಾಲ ಸಹಾಯ ಒದಗಿಸುತ್ತೇವೆ! ಹಾನಿಯಾದ ಸ್ಥಳದಲ್ಲಿ ಸಣ್ಣ ರಿಪೇರಿ, ಕೀ ಕಳೆದುಹೋದಾಗ ಸಹಾಯ, ನಕಲಿ ಕೀ ಸಮಸ್ಯೆ, ಟೈರ್ ಬದಲಾವಣೆ, ಬ್ಯಾಟರಿ ಜಂಪ್ ಸ್ಟಾರ್ಟ್, ಇಂಧನ ಟ್ಯಾಂಕ್ ಖಾಲಿಯಾಗುವುದು ಮತ್ತು ಟೋವಿಂಗ್ ಶುಲ್ಕಗಳು ಈ ತುರ್ತು ಸಹಾಯ ಕವರ್‌ನಲ್ಲಿ ಸೇರಿವೆ!
ಒಂದು ದಿನ ಅಚಾನಕ್ಕಾಗಿ ನಿಮ್ಮ ಕಾರು ಕಳುವಾಗಿದೆ ಅಥವಾ ಸಂಪೂರ್ಣವಾಗಿ ಜಖಂಗೊಂಡಿದೆ ಎಂಬ ಸುದ್ಧಿ ಕೇಳುವುದಕ್ಕಿಂತ ಕೆಟ್ಟ ವಿಷಯ ಏನಿದೆ? ನಿಮ್ಮ ಪಾಲಿಸಿಯು ಯಾವಾಗಲೂ ನಿಮ್ಮ ವಾಹನದ IDV (ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಅನ್ನು ಪಾವತಿಸುತ್ತದೆ. IDV ವಾಹನದ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ. ಆದರೆ, ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಮೂಲಕ, ನೀವು ಇನ್ವಾಯ್ಸ್ ಮೌಲ್ಯ ಮತ್ತು IDV ನಡುವಿನ ವ್ಯತ್ಯಾಸವನ್ನು ಕೂಡ ಪಡೆಯುತ್ತೀರಿ! ನೀವು FIR ಫೈಲ್ ಮಾಡಿದ್ದೀರಿ ಮತ್ತು ಘಟನೆ ನಡೆದ 90 ದಿನಗಳ ಒಳಗೆ ಕಾರನ್ನು ಮರುಪಡೆಯಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.
ಭಾರೀ ಮಳೆಯಿರಲಿ ಅಥವಾ ಭೋರ್ಗರೆವ ಪ್ರವಾಹವೇ ಬರಲಿ, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್ ಮೂಲಕ ನಿಮ್ಮ ವಾಹನದ ಗೇರ್‌ಬಾಕ್ಸ್ ಮತ್ತು ಎಂಜಿನ್‌ಗೆ ಸುಭದ್ರ ಕವರೇಜ್ ಸಿಗುತ್ತದೆ.! ಇದು ಎಲ್ಲಾ ಸಣ್ಣ ಭಾಗಗಳು ಅಥವಾ ಆಂತರಿಕ ಭಾಗಗಳ ಬದಲಿ ಅಥವಾ ದುರಸ್ತಿಗೆ ಹಣ ಪಾವತಿಸುತ್ತದೆ. ಇದಲ್ಲದೆ, ಇದು ಕೆಲಸದ ವೆಚ್ಚಗಳು, ಕಂಪ್ರೆಷನ್ ಟೆಸ್ಟ್‌ಗಳ ವೆಚ್ಚ, ಯಂತ್ರ ಶುಲ್ಕಗಳು ಮತ್ತು ಎಂಜಿನ್ ಸಿಲಿಂಡರ್ ರೀ-ಬೋರಿಂಗ್‌ಗಳನ್ನು ಕೂಡ ಕವರ್ ಮಾಡುತ್ತದೆ.
ನಿಮ್ಮ ಕೀ ಕಳುವಾಗಿದೆಯೇ ಅಥವಾ ಕಾಣೆಯಾಗಿದೆಯೇ? ಈ ಆ್ಯಡ್-ಆನ್, ಆದಷ್ಟು ಬೇಗ ಬದಲಿ ಕೀಗಳನ್ನು ಪಡೆಯಲು ಸಹಾಯ ಮಾಡುತ್ತದೆ.!
ನಿಮ್ಮ ಕಾರಿನಲ್ಲಿ ಬಳಸಲಾದ ಎಲ್ಲಾ ಬಳಕೆ ಮಾಡಬಹುದಾದ ವಸ್ತುಗಳ ಕವರೇಜ್ ಇಲ್ಲಿದೆ! ಹೌದು! ಇದು ನಿಮಗೆ ಈಗಲೇ ಅಗತ್ಯವಿದೆ!! ಇದು ನಟ್, ಬೋಲ್ಟ್, ಸೇರಿದಂತೆ ಎಲ್ಲಾ ಮರುಬಳಕೆ ಮಾಡಲಾಗದ ವಸ್ತುಗಳಿಗೆ ಪಾವತಿಸುತ್ತದೆ ....
ನಿಮ್ಮ ಕಾರನ್ನು ರಿಪೇರಿಗೆ ಕೊಟ್ಟು ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದಿರಾ? ನಿಮಗಾಗಿ ನಾವು ಡೌನ್‌ಟೈಮ್ ಪ್ರೊಟೆಕ್ಷನ್ ತಂದಿದ್ದೇವೆ! ಗ್ರಾಹಕರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬೇರೆ ಸಾರಿಗೆ ವಿಧಾನಗಳನ್ನು ಬಳಸಿದಾಗ, ಇದು ನಗದು ಭತ್ಯೆಯ ಪ್ರಯೋಜನ ಒದಗಿಸುತ್ತದೆ .
ಎಲ್ಲಾ ಬಗೆಯ ವಾಹನಗಳು | ಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ % |
---|---|
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 20% |
ಇನ್ಶೂರೆನ್ಸ್‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 25% |
ಇನ್ಶೂರೆನ್ಸ್‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 35% |
ಇನ್ಶೂರೆನ್ಸ್‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 45% |
ಇನ್ಶೂರೆನ್ಸ್‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 50% |
ವಾಹನದ ವಯಸ್ಸು | IDV ಫಿಕ್ಸ್ ಮಾಡಲು ಸವಕಳಿ % |
---|---|
6 ತಿಂಗಳು ಮೀರದ | 5% |
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ | 15% |
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ | 20% |
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ | 30% |
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ | 40% |
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ | 50% |