ದುಬೈ ತನ್ನ ಸಂಸ್ಕೃತಿಯ ಪ್ರಾಚೀನ ಶ್ರೀಮಂತಿಕೆಯೊಂದಿಗೆ ಅದ್ಭುತ ಆಧುನಿಕ-ದಿನದ ಐಷಾರಾಮಿಗಳನ್ನು ಸಂಯೋಜಿಸುವ ನಗರವಾಗಿದೆ. ನೀವು ಪ್ರಯಾಣವನ್ನು ಯೋಜಿಸುತ್ತಿದ್ದರೆ, ಎತ್ತರದ ಗಗನಚುಂಬಿ ಕಟ್ಟಡಗಳಿಂದ ಹಿಡಿದು ಗದ್ದಲದ ಬೀದಿಗಳ ಮೂಲಕ ಪ್ರಯಾಣಿಸುವ ಆನಂದವನ್ನು ಪಡೆಯಬಹುದು. ನೀವು ಹೊರಡುವ ಮೊದಲು, ಗಮನದಲ್ಲಿಡಬೇಕಾದ ಕೆಲವು ವಿಷಯಗಳು ಇಲ್ಲಿವೆ. ದುಬೈ ಟ್ರಾವೆಲ್ ಇನ್ಶೂರೆನ್ಸ್ ವೈದ್ಯಕೀಯ ತುರ್ತುಸ್ಥಿತಿಗಳಿಂದ ಹಿಡಿದು ಪ್ರಯಾಣ ಮಾಡುವಾಗ ಲಗೇಜ್ ಕಳೆದುಕೊಳ್ಳುವವರೆಗೆ ಎಲ್ಲವನ್ನೂ ಕವರ್ ಮಾಡುತ್ತದೆ. ಕೆಲವು ಅನಿರೀಕ್ಷಿತ ದುರ್ಘಟನೆಯಿಂದಾಗಿ ನಿಮ್ಮ ಪ್ರವಾಸದ ಆನಂದವನ್ನು ಕಳೆದುಕೊಳ್ಳಲು ನೀವು ಬಯಸುವುದಿಲ್ಲ. ಹೀಗಾಗಿ, ನೀವು ಪ್ರಯಾಣವನ್ನು ಯೋಜಿಸುವಾಗ ನಿಮ್ಮ ಚೆಕ್‌ಲಿಸ್ಟ್‌ಗೆ ದುಬೈ ಟ್ರಾವೆಲ್ ಇನ್ಶೂರೆನ್ಸ್ ಸೇರಿಸಲು ಮರೆಯಬೇಡಿ. ಇದು ನಿಮ್ಮ ಪ್ರಯಾಣವು ಸುಗಮ ಮತ್ತು ತೊಂದರೆ ರಹಿತವಾಗಿರುತ್ತದೆ ಎಂದು ಖಾತರಿಪಡಿಸುವ ಸಣ್ಣ ಹಂತವಾಗಿದೆ.
ದುಬೈ ಟ್ರಾವೆಲ್ ಇನ್ಶೂರೆನ್ಸ್‌ನ ಕೆಲವು ಪ್ರಮುಖ ಫೀಚರ್‌ಗಳ ಪಟ್ಟಿ ಇಲ್ಲಿದೆ:
ಪ್ರಮುಖ ಫೀಚರ್‌ಗಳು | ವಿವರಗಳು |
ಗರಿಷ್ಠ ಕವರೇಜ್ | ವೈದ್ಯಕೀಯ, ಪ್ರಯಾಣ ಮತ್ತು ಬ್ಯಾಗೇಜ್ ಸಂಬಂಧಿತ ತುರ್ತುಸ್ಥಿತಿಗಳಂತಹ ವಿವಿಧ ಅನಿರೀಕ್ಷಿತ ಘಟನೆಗಳ ವಿರುದ್ಧ ಕವರೇಜನ್ನು ಒದಗಿಸುತ್ತದೆ. |
ನಿರಂತರ ಬೆಂಬಲ | 24x7 ಗ್ರಾಹಕ ಸಹಾಯವಾಣಿ ಮತ್ತು ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್ ಮೂಲಕ ಇಪ್ಪತ್ತನಾಲ್ಕು ಗಂಟೆಗಳ ಸಹಾಯ. |
ಸುಲಭ ನಗದುರಹಿತ ಕ್ಲೈಮ್‌ಗಳು | ಅನೇಕ ನೆಟ್ವರ್ಕ್ ಆಸ್ಪತ್ರೆಗಳ ಮೂಲಕ ಅಕ್ಸೆಸ್ ಮಾಡಬಹುದಾದ ನಗದುರಹಿತ ಕ್ಲೈಮ್‌ಗಳ ಪ್ರಯೋಜನಗಳನ್ನು ಒದಗಿಸುತ್ತದೆ. |
ಕೋವಿಡ್-19 ಕವರೇಜ್ | ಕೋವಿಡ್-19 ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳಿಗೆ ಕವರೇಜ್. |
ದೊಡ್ಡ ಕವರ್ ಮೊತ್ತ | $40k ರಿಂದ $1000K ವರೆಗಿನ ವ್ಯಾಪಕ ಕವರೇಜ್ ಶ್ರೇಣಿ. |
ದುಬೈಗಾಗಿ ನೀವು ಆಯ್ಕೆ ಮಾಡುವ ಟ್ರಾವೆಲ್ ಇನ್ಶೂರೆನ್ಸ್ ವಿಧವು ನಿಮ್ಮ ಪ್ರಯಾಣದ ಅವಶ್ಯಕತೆಗಳ ಆಧಾರದ ಮೇಲೆ ಇರಬೇಕು. ನೀಡಲಾಗುವ ಮುಖ್ಯ ಆಯ್ಕೆಗಳು ಇಲ್ಲಿವೆ ;
ದುಬೈನ ಯಾವುದೇ ಪ್ರಯಾಣಕ್ಕಾಗಿ, ನೀವು ದುಬೈ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರಬೇಕು. ಇದು ನಿಮ್ಮ ಚೆಕ್‌ಲಿಸ್ಟ್ ಪೂರೈಸುವುದು ಮಾತ್ರವಲ್ಲದೆ, ನಿಮ್ಮ ದುಬೈ ಪ್ರಯಾಣವು ಉತ್ತಮ, ಸುರಕ್ಷಿತ ಮತ್ತು ಒತ್ತಡ ರಹಿತವಾಗಿದೆ ಎಂಬುದನ್ನು ಖಚಿತಪಡಿಸುತ್ತದೆ. ದುಬೈ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಪಡೆಯುವುದನ್ನು ನೀವು ಏಕೆ ಪರಿಗಣಿಸಬೇಕು ಎಂಬುದಕ್ಕೆ ಕಾರಣಗಳು ಇಲ್ಲಿವೆ:
ದುಬೈ ವಿಶ್ವದ ಅತ್ಯುತ್ತಮ ಆರೋಗ್ಯ ರಕ್ಷಣಾ ಸೇವೆಗಳನ್ನು ಹೊಂದಿದ್ದರೂ, ಚಿಕಿತ್ಸೆಯು ತುಂಬಾ ದುಬಾರಿಯಾಗಿರಬಹುದು. ದುಬೈ ಟ್ರಾವೆಲ್ ಇನ್ಶೂರೆನ್ಸ್ ಯಾವುದೇ ಅನಿರೀಕ್ಷಿತ ಅನಾರೋಗ್ಯಗಳು ಅಥವಾ ಗಾಯಗಳನ್ನು ಕವರ್ ಮಾಡುವ ಮೂಲಕ, ದುಬಾರಿ ಆಸ್ಪತ್ರೆ ಬಿಲ್‌ಗಳನ್ನು ಭರಿಸುವ ಹಣಕಾಸಿನ ಒತ್ತಡದಿಂದ ನಿಮ್ಮನ್ನು ರಕ್ಷಿಸುತ್ತದೆ.
ನಿಮ್ಮ ಲಗೇಜ್ ಕಳೆದುಕೊಳ್ಳುವುದು, ವಿಶೇಷವಾಗಿ ನೀವು ವಿದೇಶದಲ್ಲಿದ್ದಾಗ ದುಃಸ್ವಪ್ನವಾಗಿದೆ. ದುಬೈ ಟ್ರಾವೆಲ್ ಇನ್ಶೂರೆನ್ಸ್ ಬ್ಯಾಗೇಜ್ ನಷ್ಟ ಅಥವಾ ವಿಳಂಬವನ್ನು ಕವರ್ ಮಾಡುತ್ತದೆ, ಇದರಿಂದಾಗಿ ತಕ್ಷಣದ ಬಳಕೆಗೆ ಬೇಕಾದ ಅಗತ್ಯ ವಸ್ತುಗಳನ್ನು ತ್ವರಿತವಾಗಿ ಖರೀದಿಸಬಹುದು.
ನಿಮ್ಮ ವಿಮಾನವು ವಿಳಂಬವಾಗುತ್ತದೆ ಅಥವಾ ರದ್ದುಗೊಳ್ಳುತ್ತದೆ ಎಂದು ಊಹಿಸಿಕೊಳ್ಳಿ. ದುಬೈ ಟ್ರಾವೆಲ್ ಇನ್ಶೂರೆನ್ಸ್ ಮರುಪಾವತಿಸಲಾಗದ ವೆಚ್ಚಗಳಿಗೆ ನಿಮಗೆ ಮರುಪಾವತಿ ನೀಡುತ್ತದೆ ; ಆದ್ದರಿಂದ, ಯಾವುದೇ ಹಣಕಾಸಿನ ಒತ್ತಡವಿಲ್ಲದೆ ನಿಮ್ಮ ಪ್ಲಾನ್‌ಗಳನ್ನು ರಿಶೆಡ್ಯೂಲ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.
ಅಪಘಾತವು ಯಾವುದೇ ಸಮಯದಲ್ಲಿ ಸಂಭವಿಸಬಹುದು, ಮತ್ತು ನೀವು ಆಕಸ್ಮಿಕವಾಗಿ ಬೇರೆಯವರ ಆಸ್ತಿಗೆ ಹಾನಿ ಮಾಡಬಹುದು ಅಥವಾ ಯಾರಿಗಾದರೂ ಗಾಯ ಮಾಡಬಹುದು. ಅಂತಹ ಸಂದರ್ಭಗಳಲ್ಲಿ, ನಿಮ್ಮ ದುಬೈ ಟ್ರಾವೆಲ್ ಇನ್ಶೂರೆನ್ಸ್ ಕಾನೂನು ವೆಚ್ಚಗಳನ್ನು ಕವರ್ ಮಾಡುತ್ತದೆ ಹಾಗೂ ಹಠಾತ್ ಹಣಕಾಸಿನ ಹೊರೆಗಳಿಂದ ನಿಮ್ಮನ್ನು ಉಳಿಸುತ್ತದೆ.
ದುಬೈ ಡ್ಯೂನ್ ಬ್ಯಾಶಿಂಗ್ ಮತ್ತು ಸ್ಕೈಡೈವಿಂಗ್‌ನಂಥ ಸಾಹಸ ಚಟುವಟಿಕೆಗಳನ್ನು ಒದಗಿಸುತ್ತದೆ. ನೀವು ಯಾವುದೇ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಯೋಜಿಸಿದರೆ, ದುಬೈನಲ್ಲಿ ಈ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಆ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಆಗಬಹುದಾದ ಗಾಯಗಳನ್ನು ಕವರ್ ಮಾಡುತ್ತದೆ ಹಾಗೂ ನಿಮ್ಮನ್ನು ಒತ್ತಡ-ರಹಿತವಾಗಿರಿಸುತ್ತದೆ.
ಭಾರತದಿಂದ ದುಬೈಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಸಾಮಾನ್ಯವಾಗಿ ಕವರ್ ಆಗುವ ಕೆಲವು ವಿಷಯಗಳು ಇಲ್ಲಿವೆ:
ನಮ್ಮ ಪಾಲಿಸಿಯು ವೈದ್ಯಕೀಯ ತುರ್ತುಸ್ಥಿತಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡುತ್ತದೆ, ಆದ್ದರಿಂದ ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ನಿಮ್ಮ ಜೇಬಿನಿಂದ ಕೊಡಬೇಕಾಗಿಲ್ಲ.
ದುಬೈ ಟ್ರಾವೆಲ್ ಇನ್ಶೂರೆನ್ಸ್ ನೀವು ಎದುರಿಸಬಹುದಾದ ದಂತ ತುರ್ತುಸ್ಥಿತಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಕೂಡ ಕವರ್ ಮಾಡುತ್ತದೆ.
ತಕ್ಷಣದ ಆರೈಕೆಯ ಅಗತ್ಯವಿರುವ ವೈದ್ಯಕೀಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ, ನಮ್ಮ ಪಾಲಿಸಿಯು ಹತ್ತಿರದ ಆರೋಗ್ಯ ಕೇಂದ್ರಕ್ಕೆ ವಿಮಾನ/ಭೂ ವೈದ್ಯಕೀಯ ಸ್ಥಳಾಂತರಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡುವ ಮೂಲಕ ಸಹಾಯ ಮಾಡುತ್ತದೆ.
ನಮ್ಮ ಪಾಲಿಸಿಯು ನಿಮಗೆ ಸಣ್ಣ ಆಸ್ಪತ್ರೆ ದಾಖಲಾತಿ ಸಂಬಂಧಿತ ವೆಚ್ಚಗಳನ್ನು ನೋಡಿಕೊಳ್ಳಲು ಸಹಾಯ ಮಾಡುತ್ತದೆ, ಆದ್ದರಿಂದ ನೀವು ನಿಮ್ಮ ಪ್ರಯಾಣದ ಬಜೆಟ್ ಅನ್ನು ಮೀರಬೇಕಾಗಿಲ್ಲ.
ಸಾವಿನ ದುಃಖದ ಸಂದರ್ಭದಲ್ಲಿ, ನಮ್ಮ ಪಾಲಿಸಿಯು ಒಬ್ಬರ ದೇಹದ ಅವಶೇಷವನ್ನು ತಮ್ಮ ದೇಶಕ್ಕೆ ವರ್ಗಾಯಿಸುವ ವೆಚ್ಚವನ್ನು ಕವರ್ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಪ್ರಯಾಣ ಮಾಡುವಾಗ ಆಕಸ್ಮಿಕ ಸಾವಿನ ದುರದೃಷ್ಟಕರ ಸಂದರ್ಭದಲ್ಲಿ, ನಮ್ಮ ಪಾಲಿಸಿಯು ನಿಮ್ಮ ಕುಟುಂಬಕ್ಕೆ ಒಟ್ಟು ಮೊತ್ತದ ಪರಿಹಾರವನ್ನು ಒದಗಿಸುತ್ತದೆ.
ಅನಿರೀಕ್ಷಿತ ಸಂಭವದ ಸಂದರ್ಭದಲ್ಲಿ ಶಾಶ್ವತ ಅಂಗವಿಕಲತೆಗೆ ಕಾರಣವಾದರೆ, ನಿಮ್ಮ ಹೊರೆಯನ್ನು ಕಡಿಮೆ ಮಾಡಲು, ಪಾಲಿಸಿಯು ನಿಮಗೆ ಒಟ್ಟು ಮೊತ್ತದ ಪರಿಹಾರವನ್ನು ಒದಗಿಸುತ್ತದೆ.
ನೀವು ವಿದೇಶದಲ್ಲಿ ಥರ್ಡ್ ಪಾರ್ಟಿ ಹಾನಿಗೆ ಜವಾಬ್ದಾರರಾಗಿದ್ದರೆ, ಆ ನಷ್ಟಗಳಿಗೆ ಪರಿಹಾರ ನೀಡುವುದನ್ನು ನಮ್ಮ ಪಾಲಿಸಿಯು ಸರಳಗೊಳಿಸುತ್ತದೆ.
ಕಳ್ಳತನ ಅಥವಾ ದರೋಡೆಯಿಂದ ಉಂಟಾದ ನಗದು ತೊಂದರೆಯನ್ನು ನೀವು ಅನುಭವಿಸಿದರೆ, ನಮ್ಮ ಪಾಲಿಸಿಯು ಭಾರತದಿಂದ ತುರ್ತು ಫಂಡ್ ಟ್ರಾನ್ಸ್‌ಫರ್‌ಗಳನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.
ಒಂದು ವೇಳೆ ನಿಮ್ಮ ವಿಮಾನವು ಹೈಜಾಕ್ ಆದರೆ, ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ವಹಿಸುವಾಗ ನಿಮಗೆ ಉಂಟಾಗುವ ತೊಂದರೆಗೆ ಪರಿಹಾರವನ್ನು ನೀಡುವ ಮೂಲಕ ನಾವು ನಮ್ಮ ಪಾಲಿನ ಕೆಲಸ ನಿರ್ವಹಿಸುತ್ತೇವೆ.
ನಮ್ಮ ದುಬೈ ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ ಮರಳಿಸುವಿಕೆ ಫೀಚರ್ ಅನ್ನು ಒದಗಿಸುತ್ತದೆ, ಇದು ವಿಮಾನ ವಿಳಂಬದಿಂದ ಉಂಟಾಗುವ ಅಗತ್ಯ ಖರೀದಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ನಿಮ್ಮ ಹೋಟೆಲ್ ವಾಸ್ತವ್ಯವನ್ನು ನೀವು ವಿಸ್ತರಿಸಬೇಕಾದ ಸಂದರ್ಭದಲ್ಲಿ, ನಮ್ಮ ಪಾಲಿಸಿಯು ಆ ಹೆಚ್ಚುವರಿ ವೆಚ್ಚಗಳನ್ನು ಕವರ್ ಮಾಡುತ್ತದೆ.
ಕಳೆದುಹೋದ ಅಥವಾ ಕಳ್ಳತನವಾದ ವೈಯಕ್ತಿಕ ಡಾಕ್ಯುಮೆಂಟ್‌ಗಳು ಮತ್ತು ವಸ್ತುಗಳನ್ನು ಬದಲಾಯಿಸುವ ವೆಚ್ಚವನ್ನು ನಮ್ಮ ದುಬೈ ಟ್ರಾವೆಲ್ ಇನ್ಶೂರೆನ್ಸ್ ಮೂಲಕ ಕವರ್ ಮಾಡುತ್ತದೆ.
ಚೆಕ್-ಇನ್ ಆದ ಬ್ಯಾಗೇಜ್ ಕಳೆದುಹೋದ ಸಂದರ್ಭದಲ್ಲಿ ನಮ್ಮ ಪಾಲಿಸಿಯು ನಿಮಗೆ ಪರಿಹಾರವನ್ನು ನೀಡುತ್ತದೆ. ಆದ್ದರಿಂದ, ನಿಮ್ಮ ಅಗತ್ಯ ವಸ್ತುಗಳ ಅನುಪಸ್ಥಿತಿಯಲ್ಲಿ ನಿಮ್ಮ ದುಬೈ ಪ್ರಯಾಣವನ್ನು ಕಳೆಯುವ ಬಗ್ಗೆ ಚಿಂತಿಸಬೇಡಿ.
ಒಂದು ವೇಳೆ ನಿಮ್ಮ ಚೆಕ್-ಇನ್ ಬ್ಯಾಗೇಜ್ ವಿಳಂಬವಾದರೆ, ಅದನ್ನು ಸರಿಪಡಿಸುತ್ತಿರುವಾಗ ನಮ್ಮ ಪಾಲಿಸಿಯು ಅಗತ್ಯ ಖರೀದಿಗಳನ್ನು ಕವರ್ ಮಾಡುತ್ತದೆ.
ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್ ಓದಿ.
ಭಾರತದಿಂದ ದುಬೈಗಾಗಿ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಇವುಗಳಿಗೆ ಕವರೇಜ್ ಒದಗಿಸದೇ ಇರಬಹುದು:
ಯುದ್ಧ, ಭಯೋತ್ಪಾದನೆ ಅಥವಾ ಕಾನೂನಿನ ಉಲ್ಲಂಘನೆಯಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ನೀವು ಮಾದಕದ್ರವ್ಯ ಅಥವಾ ನಿಷೇಧಿತ ಪದಾರ್ಥಗಳನ್ನು ಬಳಸಿದರೆ, ದುಬೈ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯಾವುದೇ ಕವರೇಜ್ ಒದಗಿಸುವುದಿಲ್ಲ.
ಪ್ರಯಾಣದ ಮೊದಲು ನೀವು ವೈದ್ಯಕೀಯ ಪರಿಸ್ಥಿತಿಯನ್ನು ಹೊಂದಿದ್ದರೆ ಅಥವಾ ಮುಂಚಿತ-ಅಸ್ತಿತ್ವದಲ್ಲಿರುವ ರೋಗಕ್ಕೆ ಚಿಕಿತ್ಸೆಯನ್ನು ಪಡೆದರೆ, ಈ ಪ್ಲಾನ್ ಆ ವೆಚ್ಚಗಳನ್ನು ಕವರ್ ಮಾಡುವುದಿಲ್ಲ.
ಭಯೋತ್ಪಾದನೆ ಅಥವಾ ಯುದ್ಧದಿಂದಾಗಿ ಉಂಟಾದ ಗಾಯಗಳು ಅಥವಾ ಆರೋಗ್ಯ ಸಮಸ್ಯೆಗಳು.
ಉದ್ದೇಶಪೂರ್ವಕ ಹಾನಿ ಅಥವಾ ಆತ್ಮಹತ್ಯೆಯ ಪ್ರಯತ್ನಗಳ ಪರಿಣಾಮವಾಗಿ ಉಂಟಾದ ಗಾಯಗಳನ್ನು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ಅಪಾಯಕಾರಿ ಚಟುವಟಿಕೆಗಳು ಮತ್ತು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವ ಪರಿಣಾಮವಾಗಿ ಉಂಟಾಗುವ ಗಾಯಗಳು ಮತ್ತು ಆಸ್ಪತ್ರೆ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
ವಿದೇಶ ಪ್ರವಾಸದ ಸಮಯದಲ್ಲಿ, ನೀವು ಅಥವಾ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆಯನ್ನು ಪಡೆಯಲು ಆಯ್ಕೆ ಮಾಡಿದರೆ, ಆ ಸಂಬಂಧಿತ ವೆಚ್ಚಗಳನ್ನು ಪ್ಲಾನ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ನೀವು ದುಬೈಗಾಗಿ ಆನ್ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ನೀವು ಅನುಸರಿಸಬೇಕಾದ ಹಂತಗಳು ಈ ಕೆಳಗಿನಂತಿವೆ:
• ಅಧಿಕೃತ ಎಚ್‌ಡಿಎಫ್‌ಸಿ ಎರ್ಗೋ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ವೆಬ್‌ಸೈಟ್‌ಗೆ ಭೇಟಿ ನೀಡಿ.
• "ಈಗಲೇ ಖರೀದಿಸಿ" ಬಟನ್ ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
• ಟ್ರಿಪ್ ಪ್ರಕಾರ, ಒಟ್ಟು ಪ್ರಯಾಣಿಕರು ಮತ್ತು ಅವರ ಆಯಾ ವಯಸ್ಸಿನಂತಹ ಅಗತ್ಯ ವಿವರಗಳನ್ನು ನಮೂದಿಸಿ ಮತ್ತು "ಮುಂದುವರಿಯಿರಿ" ಮೇಲೆ ಕ್ಲಿಕ್ ಮಾಡಿ.
• ನಿರ್ಗಮನ ಮತ್ತು ಹಿಂತಿರುಗುವ ದಿನಾಂಕಗಳೊಂದಿಗೆ ನೀವು ಭೇಟಿ ನೀಡಲು ಯೋಜಿಸುತ್ತಿರುವ ದೇಶದ ಹೆಸರನ್ನು ಒದಗಿಸಿ, ಈ ಸಂದರ್ಭದಲ್ಲಿ ಅದು ದುಬೈ ಆಗಿರುತ್ತದೆ ಮತ್ತು ನಂತರ ಮುಂದೆ ಒತ್ತಿ.
• ಪಾಪ್-ಅಪ್ ವಿಂಡೋದಲ್ಲಿ ನಿಮ್ಮ ಹೆಸರು, ಇಮೇಲ್ ಮತ್ತು ಫೋನ್ ನಂಬರ್‌ನಂತಹ ನಿಮ್ಮ ಸಂಪರ್ಕ ವಿವರಗಳನ್ನು ನಮೂದಿಸಿ ಮತ್ತು "ಕೋಟ್ ನೋಡಿ" ಕ್ಲಿಕ್ ಮಾಡಿ.
• ಲಭ್ಯವಿರುವ ಪ್ಲಾನ್‌ಗಳಿಂದ ಆಯ್ಕೆ ಮಾಡಿ, "ಖರೀದಿಸಿ" ಆಯ್ಕೆಮಾಡಿ, ಮತ್ತು ಮುಂದಿನ ವಿಂಡೋಗೆ ಹೋಗಲು ವೆರಿಫಿಕೇಶನ್ ಕೋಡ್ ನಮೂದಿಸಿ.
• ಪಾಲಿಸಿಗೆ ಅಗತ್ಯವಿರುವ ಹೆಚ್ಚುವರಿ ಮಾಹಿತಿಯನ್ನು ಅನುಸರಿಸಿ ಮತ್ತು ಆನ್ಲೈನ್ ಪಾವತಿಯನ್ನು ಪೂರ್ಣಗೊಳಿಸಿ.
• ಯಶಸ್ವಿ ಪಾವತಿ ಪೂರ್ಣಗೊಂಡ ನಂತರ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ನೀಡಲಾಗುತ್ತದೆ ಮತ್ತು ನೀವು ಒದಗಿಸಿದ ಇನ್‌ಬಾಕ್ಸಿಗೆ ಕಳುಹಿಸಲಾಗುತ್ತದೆ.
ವಿದೇಶದಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳಿಗೆ ನಿಮ್ಮ ಪ್ರಯಾಣದ ಬಜೆಟ್‌ನಲ್ಲಿ ಕತ್ತರಿ ಹಾಕಲು ಬಿಡಬೇಡಿ. ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ತುರ್ತು ವೈದ್ಯಕೀಯ ಮತ್ತು ದಂತ ವೆಚ್ಚಗಳ ವಿರುದ್ಧ ನಿಮ್ಮನ್ನು ಆರ್ಥಿಕವಾಗಿ ಕವರ್ ಮಾಡಿಕೊಳ್ಳಿ.
ಪ್ರಮುಖ ಅಂಶ | ವಿವರಗಳು |
ವಿಶ್ವದ ಅತ್ಯಂತ ಎತ್ತರದ ಕಟ್ಟಡ | ಬುರ್ಜ್ ಖಲೀಫಾ ವಿಶ್ವದ ಅತಿ ಎತ್ತರದ ಕಟ್ಟಡ ಎಂದು ನಿಮಗೆ ತಿಳಿದಿದೆ, ಆದರೆ ಇದು ಅತ್ಯುನ್ನತ ವೀಕ್ಷಣಾ ಡೆಕ್ ಮತ್ತು ರೆಸ್ಟೋರೆಂಟ್‌ಗೆ ನೆಲೆಯಾಗಿದೆ ಎಂದು ನಿಮಗೆ ತಿಳಿದಿದೆಯೇ? ನೀವು ಅಲ್ಲಿಂದ ಸಂಪೂರ್ಣ ನಗರವನ್ನು ನೋಡಬಹುದಾಗಿದ್ದು, ಇದು ನಿಮ್ಮ ಪ್ರಯಾಣದಲ್ಲಿ ಕಡ್ಡಾಯವಾಗಿ ಭೇಟಿ ನೀಡಬೇಕಾದ ಸ್ಥಳವಾಗಿದೆ. |
ಮರುಭೂಮಿಯಲ್ಲಿ ಇನ್‌ಡೋರ್ ಸ್ಕೀಯಿಂಗ್ | ಇದು ಅಸಾಧ್ಯವೆಂದು ಕಾಣಬಹುದು, ಆದರೆ ದುಬೈ ಮಾಲ್ ಆಫ್ ದಿ ಎಮಿರೇಟ್ಸ್ ಒಳಗೆ ಒಳಾಂಗಣ ಸ್ಕೀ ರೆಸಾರ್ಟ್ ಆಗಿರುವ ಸ್ಕೀ ದುಬೈಗೆ ನೆಲೆಯಾಗಿದೆ. ಇಲ್ಲಿ, ಮರುಭೂಮಿಯ ಶಾಖದಿಂದ ಹೊರ ಬಂದು ನೀವು ಸ್ಕೀ, ಸ್ನೋಬೋರ್ಡ್ ಮತ್ತು ಪೆಂಗ್ವಿನ್‌ಗಳನ್ನು ಕೂಡ ಭೇಟಿ ಮಾಡಬಹುದು. |
ಯಾವುದೇ ಆದಾಯ ತೆರಿಗೆ ಇಲ್ಲ | ದುಬೈ ಹಲವಾರು ವಲಸಿಗರನ್ನು ಆಕರ್ಷಿಸಲು ಒಂದು ಪ್ರಮುಖ ಕಾರಣವೆಂದರೆ, ಇಲ್ಲಿ ಯಾವುದೇ ಆದಾಯ ತೆರಿಗೆ ಇರುವುದಿಲ್ಲ. ಇದು ನಿವಾಸಿಗಳಿಗೆ ಉನ್ನತ ಮಟ್ಟದ ಜೀವನವನ್ನು ಆನಂದಿಸಲು ಅನುವು ಮಾಡಿಕೊಡುತ್ತದೆ. ಆದಾಗ್ಯೂ, ನೀವು ಭೇಟಿ ನೀಡುವಾಗ ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿರಿಸಲು ದುಬೈ ಟ್ರಾವೆಲ್ ಇನ್ಶೂರೆನ್ಸ್ ಹೊಂದಲು ಮರೆಯಬೇಡಿ. |
ರೋಬೋಟ್‌ಗಳ ಜೊತೆ ಒಂಟೆ ರೇಸಿಂಗ್ | ಒಂಟೆ ರೇಸಿಂಗ್ ದುಬೈನಲ್ಲಿ ಸಾಂಪ್ರದಾಯಿಕ ಕ್ರೀಡೆಯಾಗಿದೆ, ಆದರೆ ಮನುಷ್ಯರಿಗೆ ಬದಲಾಗಿ ರೋಬೋಟ್ ಜಾಕಿಗಳನ್ನು ಬಳಸುತ್ತಾರೆ ಎಂದು ನಿಮಗೆ ತಿಳಿದಿದೆಯೇ? ಇದು ಸಾಂಪ್ರದಾಯಿಕತೆ ಮತ್ತು ತಂತ್ರಜ್ಞಾನದ ವಿಶಿಷ್ಟ ಮಿಶ್ರಣವಾಗಿದ್ದು, ಬೇರೆಲ್ಲಿಯೂ ನೋಡಲು ಸಿಗುವುದಿಲ್ಲ. |
ಚಿನ್ನದ ATM ಗಳು | ದುಬೈನಲ್ಲಿ ಮಾತ್ರ ನೀವು ATM ನಿಂದ ಗೋಲ್ಡ್ ಬಾರ್‌ಗಳನ್ನು ವಿತ್‌ಡ್ರಾ ಮಾಡಬಹುದು! ಗೋಲ್ಡ್ ಟು ಗೋ ಮಷೀನ್‌ಗಳು ಬುರ್ಜ್ ಖಲೀಫಾ ಸೇರಿದಂತೆ ಹಲವಾರು ಸ್ಥಳಗಳಲ್ಲಿದ್ದು, ಒಂದು ಬಟನ್ ಒತ್ತುವ ಮೂಲಕ ಚಿನ್ನವನ್ನು ಖರೀದಿಸಲು ನಿಮಗೆ ಅನುಮತಿ ನೀಡುತ್ತದೆ. |
ಮಾನವ ನಿರ್ಮಿತ ದ್ವೀಪಗಳು | ದಿ ಪಾಮ್ ಜುಮೇರಾ ಮತ್ತು ದಿ ವರ್ಲ್ಡ್ ಐಲ್ಯಾಂಡ್ಸ್ ಆಧುನಿಕ ಎಂಜಿನಿಯರಿಂಗ್‌ನ ಅದ್ಭುತಗಳಾಗಿವೆ. ಈ ಮಾನವ ನಿರ್ಮಿತ ದ್ವೀಪಗಳು ಅಂತರಿಕ್ಷದಿಂದ ಕಾಣಿಸುತ್ತವೆ ಮತ್ತು ಐಷಾರಾಮಿ ಹೋಟೆಲ್‌ಗಳು, ವಿಲ್ಲಾಗಳು ಮತ್ತು ಮನರಂಜನಾ ಆಯ್ಕೆಗಳಿಗೆ ನೆಲೆಯಾಗಿದ್ದು, ದುಬೈನ ಮಹತ್ವಾಕಾಂಕ್ಷೆಯ ಸಂಕೇತಗಳಾಗಿವೆ. |
ಸುಸ್ಥಿರ ನಗರ | ಸೌರ ಶಕ್ತಿಯನ್ನು ಬಳಸುವ, ನೀರನ್ನು ಮರುಬಳಕೆ ಮಾಡುವ ಮತ್ತು ಪರಿಸರ ಸ್ನೇಹಿ ಜೀವನವನ್ನು ಉತ್ತೇಜಿಸುವ ದಿ ಸಸ್ಟೇನೆಬಲ್ ಸಿಟಿಯಂತಹ ಯೋಜನೆಗಳೊಂದಿಗೆ ದುಬೈ ಸುಸ್ಥಿರತೆಯ ಮೇಲೆ ಗಮನ ಕೇಂದ್ರೀಕರಿಸಿದೆ. ಇದು ಪರಿಸರದ ಬಗ್ಗೆ ಕಾಳಜಿ ವಹಿಸುವ ನಗರವಾಗಿ ದುಬೈನ ಭವಿಷ್ಯದ ಒಂದು ನೋಟವಾಗಿದೆ. |
ದುಬೈ ಪ್ರವಾಸಿ ವೀಸಾಗೆ ಅಪ್ಲೈ ಮಾಡುವ ಭಾಗವಾಗಿ, ಭಾರತೀಯ ನಾಗರಿಕರು ಈ ಕೆಳಗಿನ ಅಗತ್ಯ ಡಾಕ್ಯುಮೆಂಟ್‌ಗಳನ್ನು ತಯಾರಿಸಬೇಕು. ಅವುಗಳೆಂದರೆ:
• ಪಾಸ್‌ಪೋರ್ಟ್: ಇದು ನಿಮ್ಮ ಪ್ರವೇಶದ ದಿನಾಂಕದಿಂದ ಕನಿಷ್ಠ ಆರು ತಿಂಗಳವರೆಗೆ ಮಾನ್ಯವಾಗಿರಬೇಕು.
• ವೀಸಾ ಅಪ್ಲಿಕೇಶನ್ ಫಾರ್ಮ್: ಪೂರ್ಣಗೊಂಡ ಮತ್ತು ಸಹಿ ಮಾಡಿದ ಅಪ್ಲಿಕೇಶನ್ ಫಾರ್ಮ್
• ಫೋಟೋಗಳು: ಬಿಳಿ ಹಿನ್ನೆಲೆಯೊಂದಿಗೆ ಇತ್ತೀಚಿನ ಪಾಸ್‌ಪೋರ್ಟ್ ಸೈಜ್ ಫೋಟೋಗಳು.
• ವಿಮಾನ ಪ್ರಯಾಣ: ದುಬೈ ಪ್ರವೇಶ ಮತ್ತು ನಿರ್ಗಮನದ ದಿನಾಂಕವನ್ನು ತೋರಿಸುವ ದೃಢೀಕೃತ ರಿಟರ್ನ್ ಟಿಕೆಟ್.
• ಹಣಕಾಸಿನ ಪುರಾವೆ: ಖರ್ಚುಗಳನ್ನು ಮಾಡುವ ನಿಮ್ಮ ಹಣಕಾಸಿನ ಸಾಮರ್ಥ್ಯವನ್ನು ಸಾಬೀತುಪಡಿಸಲು ಬ್ಯಾಂಕ್ ಸ್ಟೇಟ್ಮೆಂಟ್ ಅಥವಾ ಸಂಬಳದ ಸ್ಲಿಪ್‌ನ ಅಗತ್ಯವಿದೆ.
• ವಸತಿ ಪುರಾವೆ: ದುಬೈನಲ್ಲಿ ನಿಮಗೆ ಆತಿಥ್ಯ ನೀಡುವ ವ್ಯಕ್ತಿಯಿಂದ ಹೋಟೆಲ್ ಬುಕಿಂಗ್ ಅಥವಾ ಆಹ್ವಾನ ಪತ್ರ.
• ದುಬೈ ಟ್ರಾವೆಲ್ ಇನ್ಶೂರೆನ್ಸ್: ನಿಮ್ಮ ವಾಸ್ತವ್ಯದಲ್ಲಿ ಉಂಟಾಗಬಹುದಾದ ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ಇತರ ಯಾವುದೇ ಅನಿರೀಕ್ಷಿತ ಪರಿಸ್ಥಿತಿಗಳಿಗೆ ಇನ್ಶೂರೆನ್ಸ್.
ದುಬೈಗೆ ಪ್ರವಾಸವನ್ನು ಯೋಜಿಸುವಾಗ, ಅಲ್ಲಿಗೆ ಭೇಟಿ ನೀಡಲು ಉತ್ತಮ ಸಮಯ ಯಾವುದು ಎಂಬುದು ನೀವು ಯಾವ ಅನುಭವ ಪಡೆಯಲು ಹುಡುಕುತ್ತಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೊರಾಂಗಣ ತಿರುಗಾಟ ಮತ್ತು ತಂಪಾದ ಹವಾಮಾನವನ್ನು ಇಷ್ಟಪಡುವವರು, ನವೆಂಬರ್ ಮತ್ತು ಮಾರ್ಚ್ ನಡುವೆ ದುಬೈಗೆ ಭೇಟಿ ನೀಡುವುದು ಉತ್ತಮ. ಈ ಅವಧಿಯಲ್ಲಿ, ತಾಪಮಾನವು 20°C ಮತ್ತು 25°C ನಡುವೆ ಆಹ್ಲಾದಕರವಾಗಿ ಇರುತ್ತವೆ. ಆದ್ದರಿಂದ ಬುರ್ಜ್ ಖಲೀಫಾ ಅಥವಾ ಬೀಚ್ ಚಟುವಟಿಕೆಗಳಂಥ ವಿವಿಧ ಸ್ಥಳಗಳನ್ನು ಆರಾಮಾಗಿ ನೋಡಬಹುದಾಗಿದೆ.
ಆದರೆ, ನೀವು ಸೆಖೆಯನ್ನು ತಡೆಯಬಲ್ಲಿರಿ ಅಂತಾದರೆ ಜೂನ್ ಆರಂಭದಿಂದ ಆಗಸ್ಟ್‌ವರೆಗಿನ ಅವಧಿಯು ನಿಮಗೆ ಸೂಕ್ತವಾಗಬಹುದು ; ಆ ಸಮಯದಲ್ಲಿ ಬೆಲೆಗಳು ಮತ್ತು ಜನಸಂದಣಿ ಕಡಿಮೆ ಇರುತ್ತದೆ. 40°C ಗಿಂತ ಹೆಚ್ಚಿನ ಬಿಸಿ ತಾಪಮಾನಕ್ಕೆ ಸಿದ್ಧರಾಗಿರಿ. ನೀವು ಯಾವ ಅವಧಿಯನ್ನು ಆಯ್ಕೆ ಮಾಡಿದರೂ, ದುಬೈ ಟ್ರಾವೆಲ್ ಇನ್ಶೂರೆನ್ಸ್ ಪಡೆಯುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರಯಾಣದ ಸಮಯದಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳು ಅಥವಾ ಪ್ರಯಾಣಗಳ ರದ್ದತಿಯಂತಹ ಯಾವುದೇ ಅನಿರೀಕ್ಷಿತ ಸಂದರ್ಭಗಳಲ್ಲಿ ನಿಮ್ಮನ್ನು ಕವರ್ ಮಾಡುತ್ತದೆ. ಹವಾಮಾನ ಮತ್ತು ಬಜೆಟ್ ವಿಷಯದಲ್ಲಿ ನಿಮ್ಮ ಆರಾಮದ ಮಟ್ಟವನ್ನು ಯೋಚಿಸಿ ಮತ್ತು ದುಬೈ ಟ್ರಾವೆಲ್ ಇನ್ಶೂರೆನ್ಸ್ ಪಡೆಯಿರಿ.
ಪ್ರಯಾಣವನ್ನು ಯೋಜಿಸುವುದರ ಜೊತೆಗೆ, ದುಬೈ ಪ್ರವಾಸದ ನಿಮ್ಮ ಸೂಟ್‌ಕೇಸ್‌ನಲ್ಲಿ ಏನನ್ನು ಕೊಂಡೊಯ್ಯಬೇಕು ಎಂಬುದನ್ನು ಪಟ್ಟಿ ಮಾಡಲು ಮರೆಯಬೇಡಿ. ವರ್ಷಪೂರ್ತಿ ಅಗತ್ಯವಿರುವ ಕೆಲವು ವಸ್ತುಗಳು ಹೀಗಿವೆ ;
• ದೇಶವನ್ನು ನಡಿಗೆಯಲ್ಲಿ ಅನ್ವೇಷಿಸಲು ನಿಮಗೆ ಸಹಾಯ ಮಾಡಲು ಆರಾಮದಾಯಕ ಶೂಗಳು.
• ಅಂತರರಾಷ್ಟ್ರೀಯ ಅಕ್ಸೆಸ್ ಹೊಂದಿರುವ ಕ್ರೆಡಿಟ್/ಡೆಬಿಟ್ ಕಾರ್ಡ್
• ಹಗುರ, ಸಾಧಾರಣ ಉಡುಪು - ಸಾರ್ವಜನಿಕ ಪ್ರದೇಶಗಳಲ್ಲಿ, ವಿಶೇಷವಾಗಿ ಧಾರ್ಮಿಕ ಅಥವಾ ಸಾಂಸ್ಕೃತಿಕ ಸ್ಥಳಗಳಿಗೆ ಭೇಟಿ ನೀಡುವಾಗ ಸಾಂಪ್ರದಾಯಿಕವಾಗಿ ಉಡುಗೆ ಧರಿಸಿ
• ಹೊರಾಂಗಣ ತಿರುಗಾಟದ ಸಮಯದಲ್ಲಿ ದುಬೈನ ತೀವ್ರ ಬಿಸಿಲನ್ನು ಎದುರಿಸಲು ಸನ್‌ಸ್ಕ್ರೀನ್, ಸನ್‌ಗ್ಲಾಸ್‌ಗಳು ಮತ್ತು ಹ್ಯಾಟ್.
• ದಿನವಿಡೀ ಹೈಡ್ರೇಟೆಡ್ ಆಗಿರಲು ಮರುಬಳಕೆ ಮಾಡಬಹುದಾದ ನೀರಿನ ಬಾಟಲ್‌ಗಳು.
• ನಿಮ್ಮ ಸಂಪೂರ್ಣ ಉಳಿದುಕೊಳ್ಳುವಿಕೆ, ಟ್ರಾವೆಲ್ ಅಡಾಪ್ಟರ್ ಮತ್ತು ವೋಲ್ಟೇಜ್ ಕನ್ವರ್ಟರ್‌ನ ಮಾನ್ಯತೆಯನ್ನು ಖಚಿತಪಡಿಸುವ ಪ್ರಮುಖ ಟ್ರಾವೆಲ್ ಡಾಕ್ಯುಮೆಂಟ್‌ಗಳು.
ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳು ದುಬೈನಲ್ಲಿ ನಿಮ್ಮ ಪ್ರವಾಸವನ್ನು ಸುಗಮವಾಗಿಸುತ್ತವೆ. ನಿಮಗಾಗಿ ತ್ವರಿತ ಮಾರ್ಗದರ್ಶಿ ಇಲ್ಲಿದೆ:
• ದುಬೈನಲ್ಲಿ ಬಿಸಿಲು ತೀವ್ರವಾಗಿದೆ ; ಆದ್ದರಿಂದ, ಸಾಕಷ್ಟು ನೀರು ಕುಡಿಯಿರಿ ಮತ್ತು ಬಿಸಿಲಿನಲ್ಲಿ ತುಂಬಾ ಸಮಯ ಕಳೆಯುವುದನ್ನು ತಪ್ಪಿಸಿ.
• ನಿಮ್ಮ ಬೆಲೆಬಾಳುವ ವಸ್ತುಗಳು ಯಾವಾಗಲೂ ಹೋಟೆಲ್ ಲಾಕರ್‌ಗಳಲ್ಲಿ ಇರಿಸಿ ಮತ್ತು ನೀವು ಸಾರ್ವಜನಿಕ ಸ್ಥಳಕ್ಕೆ ಹೋದಾಗ ನಿಮ್ಮ ಸುತ್ತಮುತ್ತಲಿನ ಬಗ್ಗೆ ಎಚ್ಚರ ವಹಿಸಿ.
• ನಗರದಲ್ಲಿ ಸುರಕ್ಷಿತವಾಗಿ ಸುತ್ತಾಡಲು, ಪರವಾನಗಿ ಪಡೆದ ಟ್ಯಾಕ್ಸಿಗಳು ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಿ.
• ಯಾವುದೇ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವಾಗ, ಸಭ್ಯ ಉಡುಗೆ ಧರಿಸುವ ಮೂಲಕ ಸ್ಥಳೀಯರಿಗೆ ಗೌರವ ನೀಡಿ.
• ಸಾರ್ವಜನಿಕ ನಡವಳಿಕೆ ಮತ್ತು ಮದ್ಯಪಾನಕ್ಕೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಯಮಗಳು ಇರುವುದರಿಂದ ನೀವು ಯಾವುದೇ ಕಾನೂನು ಸಮಸ್ಯೆಗಳನ್ನು ಎದುರಿಸದಿರಲು ಸ್ಥಳೀಯ ಕಾನೂನುಗಳು ಮತ್ತು ನಿಯಮಗಳ ಕುರಿತು ತಿಳಿದುಕೊಳ್ಳಿ.
• ವೈದ್ಯಕೀಯ ತುರ್ತುಸ್ಥಿತಿಗಳಿಂದ ಹಿಡಿದು ಪ್ರಯಾಣ ರದ್ದತಿಗಳು ಅಥವಾ ಅಡೆತಡೆಗಳವರೆಗೆ ಅನಿರೀಕ್ಷಿತ ಘಟನೆಗಳ ವಿರುದ್ಧ ನಿಮ್ಮನ್ನು ರಕ್ಷಿಸಬಹುದಾದ ದುಬೈ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ಮರೆಯಬೇಡಿ.
• ಸ್ಥಳೀಯ ಪೊಲೀಸ್ ಮತ್ತು ನಿಮ್ಮ ರಾಯಭಾರ ಕಚೇರಿ ಸೇರಿದಂತೆ ತುರ್ತು ಸಂಪರ್ಕಗಳ ಪಟ್ಟಿಯನ್ನು ನಿಮ್ಮೊಂದಿಗೆ ಒಯ್ಯಿರಿ.
• ಈ ಹಿಂದೆ ನೀವು ಅನಾರೋಗ್ಯಕ್ಕೆ ತುತ್ತಾಗಿದ್ದರೆ, ಸಂಬಂಧಿತ ಔಷಧಿಯನ್ನು ನಿಮ್ಮೊಂದಿಗೆ ಒಯ್ಯುವುದು ಮತ್ತು ಪ್ರಯಾಣ ಹೊರಡುವ ಮೊದಲು ನಿಮ್ಮ ಡಾಕ್ಟರ್ ಅನ್ನು ಸಂಪರ್ಕಿಸುವುದು ಅಗತ್ಯವಾಗಿದೆ.
• ವಿಶೇಷವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ, ಜನರ ಅನುಮತಿಯಿಲ್ಲದೆ ಅವರ ಫೋಟೋ ತೆಗೆಯಬೇಡಿ.
• ಸಾರ್ವಜನಿಕವಾಗಿ ಪ್ರೀತಿಯನ್ನು ತೋರಿಸುವುದು ತಪ್ಪಾಗುತ್ತದೆ ಮತ್ತು ಅದು ದಂಡ ಅಥವಾ ಕಾನೂನು ಪರಿಣಾಮಗಳನ್ನು ಕೂಡ ಆಕರ್ಷಿಸಬಹುದು.
ಮುಖ್ಯ ವಿಮಾನ ನಿಲ್ದಾಣವು ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಥವಾ DXB ಆಗಿದೆ ಮತ್ತು ಹೆಚ್ಚಿನ ಅಂತರರಾಷ್ಟ್ರೀಯ ವಿಮಾನಗಳಿಗೆ ಪ್ರಮುಖ ಕೇಂದ್ರವಾಗಿದೆ. ಇನ್ನೊಂದು ವಿಮಾನ ನಿಲ್ದಾಣವು ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಇದನ್ನು DWC ಎಂದು ಕೂಡ ಕರೆಯಲಾಗುತ್ತದೆ. ಇದು ಮುಖ್ಯವಾಗಿ ಕಾರ್ಗೋ ಮತ್ತು ಸಣ್ಣ ಪ್ರಯಾಣಿಕರ ವಿಮಾನಗಳೊಂದಿಗೆ ವ್ಯವಹರಿಸುವ ವಿಮಾನ ನಿಲ್ದಾಣವಾಗಿದೆ.
ವಿಮಾನ ನಿಲ್ದಾಣ | ನಗರ | IATA ಕೋಡ್ |
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | ದುಬೈ | DXB |
ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ | ದುಬೈ | DWC |
ವೈದ್ಯಕೀಯ ತುರ್ತುಸ್ಥಿತಿಗಳಿಂದಾಗಿ ವಿಸ್ತರಿತ ಹೋಟೆಲ್‌ನಿಂದ ಉಂಟಾಗುವ ಹೆಚ್ಚುವರಿ ವೆಚ್ಚಗಳನ್ನು ಟ್ರಾವೆಲ್ ಇನ್ಶೂರೆನ್ಸ್ ನಿರ್ವಹಿಸಲು ಅವಕಾಶ ನೀಡಿ. ಹೆಚ್ಚು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ!
ನೋಡಲು ಮತ್ತು ಮಾಡಲು ತುಂಬಾ ಅವಕಾಶ ಇರುವುದರಿಂದ, ದುಬೈ ಅದ್ಭುತ ತಾಣಗಳನ್ನು ಹೊಂದಿದೆ. ನಿಮ್ಮ ಪ್ರಯಾಣದಲ್ಲಿ ನೀವು ನಿಜವಾಗಿಯೂ ಭೇಟಿ ನೀಡಬೇಕಾದ ಕೆಲವು ಪ್ರಮುಖ ಸ್ಥಳಗಳನ್ನು ಕೆಳಗೆ ನೀಡಲಾಗಿದೆ:
ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾವನ್ನು ನೋಡದೆ ನಿಮ್ಮ ದುಬೈ ಪ್ರವಾಸ ಪೂರ್ಣಗೊಳ್ಳಲು ಸಾಧ್ಯವಿಲ್ಲ. 828 ಮೀಟರ್ ಎತ್ತರವಿರುವ ಈ ಕಟ್ಟಡವು 148 ಮತ್ತು 125ನೇ ಮಹಡಿಗಳಲ್ಲಿನ ವೀಕ್ಷಣಾ ಡೆಕ್‌ಗಳಿಂದ ರೋಮಾಂಚಕ ದೃಶ್ಯವನ್ನು ಒದಗಿಸುತ್ತದೆ. ನಗರ ಮತ್ತು ಮರುಭೂಮಿಯ ಅದ್ಭುತವಾದ ವಿಹಂಗಮ ನೋಟಕ್ಕಾಗಿ ಕಡ್ಡಾಯವಾಗಿ ಇಲ್ಲಿಗೆ ಭೇಟಿ ನೀಡಬೇಕು. ನಿಮಗೆ ಯಾವುದೇ ಸಮಯದಲ್ಲಿ ತುರ್ತು ಸಹಾಯದ ಅಗತ್ಯ ಎದುರಾಗಬಹುದಾದ್ದರಿಂದ ಪ್ರಯಾಣಕ್ಕೂ ಮೊದಲು ನಿಮ್ಮ ದುಬೈ ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ಮರೆಯಬೇಡಿ.
ಇದು ಪಾಮ್ ಮರದ ಆಕಾರದಲ್ಲಿ ಅಭಿವೃದ್ಧಿಪಡಿಸಲಾದ ಅದ್ಭುತ ಮಾನವ ನಿರ್ಮಿತ ದ್ವೀಪವಾಗಿದೆ. ಕೆಲವು ಉನ್ನತ ದರ್ಜೆಯ ಹೋಟೆಲ್‌ಗಳು ಅದರಲ್ಲಿದ್ದು, ಅವುಗಳಲ್ಲಿ ಅಟ್ಲಾಂಟಿಸ್ ದಿ ಪಾಮ್ ಅತ್ಯಂತ ಪ್ರಸಿದ್ಧವಾಗಿದೆ. ಬೋರ್ಡ್‌ವಾಕ್ ಉದ್ದಕ್ಕೂ ಆರಾಮಾಗಿ ನಡೆಯಿರಿ, ಬೀಚ್‌ಗಳಲ್ಲಿ ವಿಶ್ರಾಂತಿ ಪಡೆಯಿರಿ ಅಥವಾ ಯಾವುದೇ ಐಷಾರಾಮಿ ರೆಸ್ಟೋರೆಂಟ್‌ನಲ್ಲಿ ಊಟವನ್ನು ಆನಂದಿಸಿ. ದಿ ಪಾಮ್ ಅನ್ನು ದುಬೈನ ಮಹತ್ವಾಕಾಂಕ್ಷೆ ಮತ್ತು ನಾವೀನ್ಯತೆಯ ಸಂಕೇತ ಎಂದು ಪರಿಗಣಿಸಲಾಗುತ್ತದೆ.
ಇದು ಬುರ್ಜ್ ಖಲೀಫಾ ಸಮೀಪವಿದೆ ಮತ್ತು ಶಾಪಿಂಗ್ ಆರ್ಕೇಡ್‌ಗಿಂತ ಹೆಚ್ಚಿನದ್ದಾಗಿದೆ. ಇದು ಒಳಾಂಗಣ ಐಸ್ ಸ್ಕೇಟಿಂಗ್ ರಿಂಕ್, ದೊಡ್ಡ ಅಕ್ವೇರಿಯಂ ಮತ್ತು ಹಲವಾರು ಡೈನಿಂಗ್ ಆಯ್ಕೆಗಳನ್ನು ಒಳಗೊಂಡಿದೆ. ಶಾಪಿಂಗ್ ಮತ್ತು ಡೈನಿಂಗ್‌ನಿಂದ ಹಿಡಿದು ಸುಮ್ಮನೆ ಸುತ್ತಾಡುವವರಿಗೆ, ಇಲ್ಲಿ ಎಲ್ಲರಿಗೂ ಏನಾದರೊಂದು ಆಯ್ಕೆ ಇದ್ದೇ ಇದೆ. ಬಿರು ಬಿಸಿಲಿನಿಂದ ಹೊರಬರಲು ಮತ್ತು ಮೋಜು ಮಾಡಲು ಇದು ಅತ್ಯುತ್ತಮ ಮಾರ್ಗವಾಗಿದೆ.
ನೀವು ದುಬೈನ ಐತಿಹಾಸಿಕ ಮುಖವನ್ನು ನೋಡಲು ಬಯಸಿದರೆ, ಈ ಸ್ಥಳಕ್ಕೆ ಭೇಟಿ ನೀಡಿ. ಅಬ್ರಾ ಅಥವಾ ಮರದ ದೋಣಿಯಲ್ಲಿ ಕ್ರೀಕ್‌ನಲ್ಲಿ (ಸಣ್ಣ ನದಿ) ಪ್ರಯಾಣ ಮಾಡಿ, ಪ್ರಾಚೀನ ಮಾರುಕಟ್ಟೆಗಳಲ್ಲಿ ಸುತ್ತಾಡಿ ಮತ್ತು ಅಲ್ ಫಹಿದಿ ಕೋಟೆಯ ಒಳಗೆ ಇರುವ ದುಬೈ ಮ್ಯೂಸಿಯಂಗೆ ಭೇಟಿ ನೀಡಿ. ಇದು ನಗರದ ಆಧುನಿಕತೆಗೆ ವ್ಯತಿರಿಕ್ತವಾಗಿದೆ ಮತ್ತು ದುಬೈನ ಇತಿಹಾಸದ ಬಗ್ಗೆ ನಿಮಗೆ ಉತ್ತಮ ಕಲ್ಪನೆಯನ್ನು ನೀಡುತ್ತದೆ.
ವಿಭಿನ್ನ ಅನುಭವಕ್ಕಾಗಿ ಮರಳುಗಾಡಿಗೆ ಭೇಟಿ ನೀಡಿ. ಹೆಚ್ಚಿನ ಮರುಭೂಮಿ ಸಫಾರಿಗಳು ಡ್ಯೂನ್ ಬ್ಯಾಶಿಂಗ್, ಒಂಟೆ ಸವಾರಿ ಮತ್ತು ನಕ್ಷತ್ರಗಳ ಅಡಿಯಲ್ಲಿ ಬೆಡೋಯಿನ್ ಶೈಲಿಯ ಭೋಜನದಂಥ ಹೆಚ್ಚುವರಿ ಚಟುವಟಿಕೆಗಳನ್ನು ಕೂಡ ಒಳಗೊಂಡಿವೆ. ಸಂಸ್ಕೃತಿಯ ಅನುಭವ ಪಡೆಯುವ ಜೊತೆಗೆ ಮರುಭೂಮಿ ಮತ್ತು ಅದರ ನೈಸರ್ಗಿಕ ಸೌಂದರ್ಯವನ್ನು ಪ್ರಶಂಸಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ.
ಉತ್ಸಾಹದ ಚಿಲುಮೆಯಾಗಿರುವ ಈ ಜಿಲ್ಲೆಯು ನೀರಿನ ಉದ್ದಕ್ಕೂ ಮಾಡುವ ವಾಯುವಿಹಾರಕ್ಕೆ, ಸಂಜೆ ವಿಹಾರದ ದೋಣಿ ಪ್ರವಾಸಕ್ಕೆ ಮತ್ತು/ಅಥವಾ ಮರೀನಾದ ಅದ್ಭುತ ನೋಟಗಳ ಜೊತೆಗಿನ ಭೋಜನಕ್ಕೆ ಹೆಸರಾಗಿದೆ. ಈ ಸ್ಥಳವು ಅದ್ಭುತ ಗಗನಚುಂಬಿ ಕಟ್ಟಡಗಳಿಗೆ ಮತ್ತು ಸ್ಮರಣೀಯ ರಾತ್ರಿಜೀವನದ ಆಯ್ಕೆಗೆ ಪ್ರಸಿದ್ಧಿ ಹೊಂದಿದೆ.
ನೀವು ದುಬೈನಲ್ಲಿದ್ದಾಗ, ನಿಮ್ಮ ಪ್ರಯಾಣವನ್ನು ಸ್ಮರಣೀಯಗೊಳಿಸುವ ವಿಷಯಗಳಿಗೆ ಯಾವುದೇ ಕೊರತೆ ಇಲ್ಲ. ನೀವು ಖಂಡಿತವಾಗಿಯೂ ತಪ್ಪಿಸಿಕೊಳ್ಳಬಾರದ ಕೆಲವು ಆಕರ್ಷಕ ಚಟುವಟಿಕೆಗಳು ಇಲ್ಲಿವೆ:
ಬುರ್ಜ್ ಖಲೀಫಾದಿಂದ ನಿಮ್ಮ ಸುತ್ತಾಟವನ್ನು ಆರಂಭಿಸಿ, 148 ಮತ್ತು 125ನೇ ಮಹಡಿಗಳಲ್ಲಿ ಇರುವ ವೀಕ್ಷಣಾ ಡೆಕ್‌ನಲ್ಲಿ ನಗರ ಮತ್ತು ದೂರದ ಅದ್ಭುತ ನೋಟವನ್ನು ಆನಂದಿಸಿ. ದುಬೈಯನ್ನು ಭವ್ಯವಾಗಿ ಪರಿಚಯಿಸಿಕೊಳ್ಳಲು ಇದು ಅತ್ಯುತ್ತಮ ಮಾರ್ಗವಾಗಿದೆ. ದುಬೈನಲ್ಲಿ ಪ್ರಯಾಣಿಸಲು ನೀವು ಇನ್ಶೂರೆನ್ಸ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ, ಇದರಿಂದಾಗಿ ನೀವು ಹೊರಗೆ ಸುತ್ತಾಡುವಾಗ ಯಾವುದೇ ಸಹಾಯದ ಅಗತ್ಯ ಎದುರಾದರೆ ಅದಕ್ಕೆ ಕವರೇಜ್ ಪಡೆಯಬಹುದು.
ಇದು ಕೇವಲ ಶಾಪಿಂಗ್ ತಾಣ ಮಾತ್ರವಲ್ಲ. ಇದು ಮನರಂಜನೆಯ ಪ್ರಪಂಚವಾಗಿದೆ. ದುಬೈ ಅಕ್ವೇರಿಯಂನಿಂದ ಐಸ್ ರಿಂಕ್ ಮತ್ತು VR ಪಾರ್ಕ್‌ವರೆಗೆ, ಎಲ್ಲರಿಗೂ ಇಷ್ಟವಾಗುವ ಅನೇಕ ವಿಷಯಗಳಿವೆ. ಶಾಪಿಂಗ್ ಮಾಡುವುದಿರಲಿ, ಊಟ ಮಾಡುವುದಿರಲಿ ಅಥವಾ ಸುಮ್ಮನೆ ತಿರುಗುವುದಿರಲಿ ಕೆಲವು ಗಂಟೆಗಳ ಕಾಲ ಕಳೆಯಲು ಇದು ಉತ್ತಮ ಸ್ಥಳವಾಗಿದೆ.
ಇದು ಬುರ್ಜ್ ಖಲೀಫಾದ ಕೆಳಗೆ ಇದೆ ಮತ್ತು ಸಂಗೀತ ಮತ್ತು ಬೆಳಕಿನಲ್ಲಿ ನೀರಿನ ಮನಮೋಹಕ ನೃತ್ಯವನ್ನು ಪ್ರಸ್ತುತಪಡಿಸುತ್ತದೆ. ಇದು ಮಾಂತ್ರಿಕ ದೃಶ್ಯವಾಗಿದೆ, ಅದರಲ್ಲೂ ವಿಶೇಷವಾಗಿ ಸಂಜೆಯ ಸಮಯದಲ್ಲಿ ನಗರದ ಸ್ಕೈಲೈನ್‌ನ ಹೊಳಪಿನ ವಿರುದ್ಧ ಪ್ರಕಾಶಿಸಿಸುವಾಗ ಅದ್ಭುತವಾಗಿ ಕಾಣುತ್ತದೆ.
ನೀವು ಬಿಸಿಲು ಮತ್ತು ಮರಳಿನಲ್ಲಿ ಮೋಜು ಮಾಡುವವರಾದರೆ, ಜುಮೇರಾ ಬೀಚ್ ನಿಮಗೆ ಸೂಕ್ತವಾದ ಆಯ್ಕೆಯಾಗಿದೆ. ಇಲ್ಲಿ ಆರಾಮಾಗಿ ತಿರುಗಾಡಿ, ಈಜಿ ಅಥವಾ ಮರಳಿನಲ್ಲಿ ನಡೆದು ಹಗುರಾಗಬಹುದು. ಇದು ಸಮುದ್ರದಿಂದ ಬುರ್ಜ್ ಅಲ್ ಅರಬ್‌ನ ಅದ್ಭುತ ನೋಟವನ್ನು ನೀಡುತ್ತದೆ.
ಮರುಭೂಮಿ ಸಫಾರಿಯು ಅತ್ಯಂತ ಅದ್ಭುತ ಸಾಹಸವಾಗಿದೆ. ನೀವು 4x4 ರಲ್ಲಿ ಡೂನ್ ಬ್ಯಾಶಿಂಗ್ ಮಾಡುತ್ತೀರಿ, ಒಂಟೆ ಸವಾರಿ ಮಾಡುತ್ತೀರಿ ಮತ್ತು ನಕ್ಷತ್ರಗಳ ಅಡಿಯಲ್ಲಿ ಸಾಂಪ್ರದಾಯಿಕ ಬೆಡೋಯಿನ್-ಶೈಲಿಯ ರಾತ್ರಿ ಊಟವನ್ನು ಆನಂದಿಸುತ್ತೀರಿ. ಮರುಭೂಮಿಯ ಅದ್ಭುತ ಸೌಂದರ್ಯವನ್ನು ಆನಂದಿಸಲು ಮತ್ತು ಸ್ಥಳೀಯ ಸಂಸ್ಕೃತಿಯೊಂದಿಗೆ ಮೋಜು ಮಾಡಲು ಇರುವ ಉತ್ತಮ ಮಾರ್ಗ ಇದಾಗಿದೆ.
ವೇಗದ ಬದಲಾವಣೆಗಾಗಿ, ದುಬೈನ ಐತಿಹಾಸಿಕ ಭಾಗವನ್ನು ಅನ್ವೇಷಿಸಿ. ಅಲ್ ಫಹಿದಿ ಐತಿಹಾಸಿಕ ಜಿಲ್ಲೆಯಲ್ಲಿ ಸುತ್ತಾಡಿ, ದುಬೈ ಮ್ಯೂಸಿಯಂಗೆ ಭೇಟಿ ನೀಡಿ ಮತ್ತು ದುಬೈ ಕ್ರೀಕ್‌ನಲ್ಲಿ ಅಬ್ರಾ ರೈಡ್ ಮಾಡಿ. ನಗರದ ಶ್ರೀಮಂತ ಪರಂಪರೆಯ ಬಗ್ಗೆ ತಿಳಿಯಲು ಇದು ಸರಿಯಾದ ದಾರಿಯಾಗಿದೆ.
ನೀವು ದುಬೈ ಅನ್ನು ಅನ್ವೇಷಿಸುವಾಗ, ಉಳಿತಾಯವನ್ನು ಖರ್ಚು ಮಾಡದೆ ಉತ್ತಮ ಸಮಯವನ್ನು ಹೊಂದಬೇಕು. ನಿಮ್ಮ ಬಜೆಟ್ ಅನ್ನು ಉತ್ತಮವಾಗಿ ಯೋಜಿಸಲು ನಿಮಗೆ ಸಹಾಯ ಮಾಡಲು ಹಣ ಉಳಿತಾಯದ ಕೆಲವು ಸಲಹೆಗಳು ಇಲ್ಲಿವೆ:
ದುಬೈನಲ್ಲಿ ಊಟೋಪಚಾರಕ್ಕೆ ಬಹಳಷ್ಟು ಅದ್ಧೂರಿ ಆಯ್ಕೆಗಳಿವೆ, ಆದರೆ ಗಮನಾರ್ಹವಾಗಿ ಅಗ್ಗದ ಬೆಲೆಗಳಲ್ಲಿ ನೀವು ಉತ್ತಮ ಆಹಾರವನ್ನು ಪಡೆಯಬಹುದು. ಸ್ಥಳೀಯ ರೆಸ್ಟೋರೆಂಟ್‌ಗಳು ಅಥವಾ ಫುಡ್ ಸ್ಟಾಲ್‌ಗಳನ್ನು ಹುಡುಕಿ ಮತ್ತು ಮಾಲ್‌ಗಳು ಮತ್ತು ಮಾರುಕಟ್ಟೆಗಳಲ್ಲಿ ಊಟ ಮಾಡಲು ಪ್ರಯತ್ನಿಸಿ, ಯಾಕೆಂದರೆ ಅಲ್ಲಿ ಕಡಿಮೆ ಬೆಲೆಗಳಲ್ಲಿ ಊಟ-ತಿಂಡಿ ಲಭ್ಯ.
ದುಬೈನ ಸಾರ್ವಜನಿಕ ಸಾರಿಗೆ ಸೌಕರ್ಯವು ದಕ್ಷ ಮತ್ತು ಅಗ್ಗವಾಗಿದೆ. ಮೆಟ್ರೋ, ಬಸ್‌ಗಳು ಮತ್ತು ವಾಟರ್ ಟ್ಯಾಕ್ಸಿಗಳು ಪ್ರಯಾಣದ ಉತ್ತಮ ಮಾರ್ಗಗಳಾಗಿವೆ. ಎಲ್ಲಾ ಸಾರ್ವಜನಿಕ ಸಾರಿಗೆಯಲ್ಲಿ ಸ್ವೀಕಾರಾರ್ಹವಾದ ನೋಲ್ ಕಾರ್ಡ್ ಅನ್ನು ಬಳಸುವುದು ತುಂಬಾ ಅನುಕೂಲಕರ ಮತ್ತು ವೆಚ್ಚ-ಪರಿಣಾಮಕಾರಿಯಾಗಿದೆ.
ನೀವು ಶಾಪಿಂಗ್ ಮಾಡಲು ಯೋಚಿಸಿದರೆ, ಹೆಚ್ಚು ವಿಶಿಷ್ಟವಾದ ಮತ್ತು ಸಾಮಾನ್ಯವಾಗಿ ಅಗ್ಗವಾಗಿ ಸಿಗುವ ವಸ್ತುಗಳಿಗಾಗಿ ಸ್ಥಳೀಯ ಮಾರುಕಟ್ಟೆಗೆ ಹೋಗುವುದು ಉತ್ತಮ. ವಿಶೇಷವಾಗಿ, ಗೋಲ್ಡ್ ಸೂಕ್ ಮತ್ತು ಸ್ಪೈಸ್ ಸೂಕ್‌ನಲ್ಲಿ ಚೆನ್ನಾಗಿ ಚೌಕಾಸಿ ಮಾಡಬಹುದು. ಇದಲ್ಲದೆ, ದುಬೈ ನಗರವು ವಿಶೇಷವಾಗಿ ಶಾಪಿಂಗ್ ಮಾಲ್‌ಗಳಲ್ಲಿ ಅನೇಕ ಮಾರಾಟ ಮತ್ತು ರಿಯಾಯಿತಿ ಅವಧಿಗಳನ್ನು ನಡೆಸುತ್ತದೆ.
ನೀವು ಅನೇಕ ಉಚಿತ ಅಥವಾ ಕಡಿಮೆ ವೆಚ್ಚದ ಆಕರ್ಷಣೆಗಳನ್ನು ಆನಂದಿಸಬಹುದು. ಜುಮೇರಾ ಬೀಚ್‌ನಂತಹ ಸಾರ್ವಜನಿಕ ಬೀಚ್‌ಗಳನ್ನು ಅನ್ವೇಷಿಸಿ, ದುಬೈ ಮರೀನಾ ಸುತ್ತ ತಿರುಗಾಡಿ ಅಥವಾ ಅಲ್ ಫಹಿದಿ ಐತಿಹಾಸಿಕ ಜಿಲ್ಲೆಗೆ ಭೇಟಿ ನೀಡಿ. ದುಬೈನ ಅನೇಕ ಸಾಂಸ್ಕೃತಿಕ ತಾಣಗಳು ಮತ್ತು ಹೊರಾಂಗಣ ಪ್ರದೇಶಗಳನ್ನು ಉಚಿತವಾಗಿ ನೋಡಬಹುದು.
ನೀವು ಮುಂಚಿತವಾಗಿ ಬುಕ್ ಮಾಡಿದರೆ ಅಥವಾ ಕಡಿಮೆ ಬ್ಯುಸಿ ಇರುವ ಸಮಯದಲ್ಲಿ ಭೇಟಿ ನೀಡಿದರೆ ಅನೇಕ ಆಕರ್ಷಣೆಗಳು ಮತ್ತು ರೆಸ್ಟೋರೆಂಟ್‌ಗಳು ನೀಡುವ ವಿಶೇಷ ಆಫರ್‌ಗಳು ಮತ್ತು ರಿಯಾಯಿತಿಗಳ ಮೇಲೆ ಗಮನಹರಿಸಿ.
ಇದು ಹೆಚ್ಚುವರಿ ವೆಚ್ಚದಂತೆ ಕಾಣಬಹುದು, ಆದರೆ ದುಬೈ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದರಿಂದ ದೀರ್ಘಾವಧಿಯಲ್ಲಿ ನಿಮ್ಮ ಹಣವನ್ನು ಉಳಿಸಬಹುದು. ಇದು ವೈದ್ಯಕೀಯ ತುರ್ತುಸ್ಥಿತಿಗಳು, ಪ್ರಯಾಣ ರದ್ದತಿಗಳು ಮತ್ತು ಇತರ ಅನಿರೀಕ್ಷಿತ ಘಟನೆಗಳನ್ನು ಕವರ್ ಮಾಡುವ ಮೂಲಕ, ಗಮನಾರ್ಹವಾದ ಹೆಚ್ಚುವರಿ ಖರ್ಚುಗಳನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.
ಈ ಕೆಳಗಿನ ರೆಸ್ಟೋರೆಂಟ್‌ಗಳು ವಿವಿಧ ಸ್ವಾದಿಷ್ಟ ಭಾರತೀಯ ತಿನಿಸುಗಳನ್ನು ಒದಗಿಸುತ್ತವೆ, ನೀವು ದುಬೈನಲ್ಲಿ ಭಾರತೀಯ ಆಹಾರವನ್ನು ಹುಡುಕುತ್ತಿರುವಾಗ ಇವು ನಿಮಗೆ ಭಾರತದ ಶ್ರೀಮಂತ ಪಾಕಶಾಸ್ತ್ರ ಪರಂಪರೆಯ ರುಚಿಯನ್ನು ಉಣ ಬಡಿಸುತ್ತವೆ.
ರೆಸ್ಟೋರೆಂಟ್ | ಪ್ರಯತ್ನಿಸಬೇಕಾದ ಡಿಶ್‌ಗಳು | ವಿಳಾಸ |
ರವಿ ರೆಸ್ಟೋರೆಂಟ್ | ಚಿಕನ್ ಕರಿ, ನಿಹಾರಿ | ಅಲ್ ಸತ್ವಾ, ದುಬೈ, UAE |
ಬಿರಿಯಾನಿ ಪಾಟ್ | ಹೈದರಾಬಾದಿ ಬಿರಿಯಾನಿ, ಮಟನ್ ಕೂರ್ಮಾ | ದಿ ಮರೀನಾ, ದುಬೈ, UAE |
ಮುಮ್ತಾಜ್ ಮಹಲ್ | ಬಟರ್ ಚಿಕನ್, ಪನೀರ್ ಟಿಕ್ಕಾ | ಗ್ರ್ಯಾಂಡ್ ಹಯಾತ್ ದುಬೈ, ಶೇಖ್ ರಶೀದ್ ರೋಡ್, ದುಬೈ |
ಇಂಡಿಗೋ ಬೈ ವಿನೀತ್ | ಲಾಬ್ಸ್ಟರ್ ಕರಿ, ಲ್ಯಾಂಬ್ ಶ್ಯಾಂಕ್ | ಗ್ರೋವೆನಾರ್ ಹೌಸ್, ದುಬೈ ಮರೀನಾ, ದುಬೈ |
ಅಮೃತಸರ್ | ಅಮೃತಸರಿ ತಂದೂರಿ, ಚೋಲೆ ಭಟೂರೆ | ಅಲ್ ಕರಮ, ದುಬೈ, UAE |
ಸ್ಯಾಫ್ರನ್ | ಪ್ರಾನ್ ಮಸಾಲಾ, ಲ್ಯಾಂಬ್ ಬಿರಿಯಾನಿ | ಅಟ್ಲಾಂಟಿಸ್ ದಿ ಪಾಮ್, ದುಬೈ |
ನೀವು ದುಬೈನಲ್ಲಿರುವಾಗ, ಸುಗಮ ಮತ್ತು ಆನಂದದಾಯಕ ಭೇಟಿಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಕಾನೂನುಗಳು ಮತ್ತು ಶಿಷ್ಟಾಚಾರವನ್ನು ಗೌರವಿಸುವುದು ಮುಖ್ಯವಾಗಿದೆ. ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ:
• ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯ ಉಡುಗೆ ಧರಿಸಿ ಮತ್ತು ವಿಶೇಷವಾಗಿ ಮಾಲ್‌ಗಳು, ಮಾರುಕಟ್ಟೆಗಳು ಮತ್ತು ಧಾರ್ಮಿಕ ಸ್ಥಳಗಳಲ್ಲಿ ಪ್ರಚೋದನಕಾರಿ ಬಟ್ಟೆಗಳನ್ನು ಧರಿಸಬೇಡಿ.
• ಚುಂಬನ ಅಥವಾ ಅಪ್ಪಿಕೊಳ್ಳುವುದು ಮುಂತಾದ ಪ್ರೀತಿಯ ಸಾರ್ವಜನಿಕ ಪ್ರದರ್ಶನಗಳಿಂದ ದೂರವಿರಿ ; ಈ ಕೃತ್ಯಗಳನ್ನು ಪ್ರೋತ್ಸಾಹಿಸಲಾಗುವುದಿಲ್ಲ ಮತ್ತು ಕಾನೂನು ಸಮಸ್ಯೆಗಳನ್ನು ಆಹ್ವಾನಿಸುತ್ತವೆ.
• ಹೆಚ್ಚಿನ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನವನ್ನು ನಿಷೇಧಿಸಲಾಗಿದೆ. ದಂಡ ಪಾವತಿಯನ್ನು ತಪ್ಪಿಸಲು ಧೂಮಪಾನ ವಲಯಗಳನ್ನು ಹುಡುಕಿ.
• ರಂಜಾನ್ ಸಮಯದಲ್ಲಿ ನೀವು ಅಲ್ಲಿದ್ದರೆ, ಹಗಲಿನ ವೇಳೆ ಸಾರ್ವಜನಿಕವಾಗಿ ತಿನ್ನಬೇಡಿ, ಕುಡಿಯಬೇಡಿ ಅಥವಾ ಧೂಮಪಾನ ಮಾಡಬೇಡಿ. ಉಪವಾಸ ಮಾಡುತ್ತಿರುವವರನ್ನು ಪರಿಗಣಿಸಿ.
• ಪರವಾನಗಿ ಪಡೆದ ಆವರಣದೊಳಗೆ ಮಾತ್ರ ಮದ್ಯಪಾನ ಮಾಡಬೇಕು. ಸಾರ್ವಜನಿಕವಾಗಿ ಮದ್ಯಪಾನ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಮತ್ತು ಗಂಭೀರ ದಂಡಗಳಿಗೆ ಗುರಿಯಾಗಬಹುದು.
• ಸಂಪೂರ್ಣ ವಾಸ್ತವ್ಯದಲ್ಲಿ ಆರಾಮಾಗಿ ಇರಲು ಕಾನೂನು ಗೊಂದಲ ಅಥವಾ ತುರ್ತುಸ್ಥಿತಿಯಂತಹ ಎಲ್ಲಾ ಅನಿರೀಕ್ಷಿತ ಪರಿಸ್ಥಿತಿಗಳನ್ನು ಕವರ್ ಮಾಡುವ ಸರಿಯಾದ ದುಬೈ ಟ್ರಾವೆಲ್ ಇನ್ಶೂರೆನ್ಸ್ ಪಡೆಯಿರಿ.
• ಶುಭಾಶಯ ಹೇಳುವಾಗ ಅಥವಾ ವಸ್ತುಗಳನ್ನು ಹಸ್ತಾಂತರಿಸುವಾಗ ನಿಮ್ಮ ಬಲಗೈಯನ್ನು ಬಳಸಿ, ಯಾಕೆಂದರೆ ಎಡಗೈಯನ್ನು ಅಗೌರವ ಎಂದು ಪರಿಗಣಿಸಲಾಗುತ್ತದೆ.
• ಬೈಯುವುದು ಅಥವಾ ಆಕ್ರಮಣಕಾರಿ ಭಾಷೆಯನ್ನು ಬಳಸುವುದು ಕಾನೂನು ತೊಂದರೆಗೆ ಕಾರಣವಾಗಬಹುದು. ನಿಮ್ಮ ಸಂಭಾಷಣೆಗಳನ್ನು ಸಭ್ಯ ಮತ್ತು ಗೌರವಾನ್ವಿತವಾಗಿ ಇರಿಸಿ.
ಶುಕ್ರವಾರ ಮತ್ತು ಶನಿವಾರದಂದು ರಾಯಭಾರ ಕಚೇರಿಯನ್ನು ಮುಚ್ಚಲಾಗುತ್ತದೆ. ಯಾವುದೇ ಅಪ್ಡೇಟ್‌ಗಳು ಅಥವಾ ಅವರ ಸಮಯದಲ್ಲಿನ ಬದಲಾವಣೆಗಳಿಗಾಗಿ ಅವರ ಅಧಿಕೃತ ವೆಬ್‌ಸೈಟ್ ಪರಿಶೀಲಿಸುವುದು ಅಥವಾ ನೇರವಾಗಿ ಅವರನ್ನು ಸಂಪರ್ಕಿಸುವುದು ಯಾವಾಗಲೂ ಒಳ್ಳೆಯದು.
ದುಬೈ-ಮೂಲದ ಭಾರತೀಯ ರಾಯಭಾರ | ಕೆಲಸದ ಸಮಯ | ವಿಳಾಸ |
ಭಾರತೀಯ ಕಾನ್ಸುಲೇಟ್ ಜನರಲ್ | ಭಾನುವಾರದಿಂದ ಗುರುವಾರ: 9:00 AM - 5:30 PM | 24ನೇ ಫ್ಲೋರ್, ಅಲ್ ಜವಾದ್ ಟವರ್ 2, ಶೇಖ್ ಜಾಯೇದ್ ರೋಡ್, ದುಬೈ, UAE |
ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ
ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ವಿಮಾನ ವಿಳಂಬಗಳು, ಬ್ಯಾಗೇಜ್ ನಷ್ಟ ಮತ್ತು ಇತರ ಪ್ರಯಾಣ ಸಂಬಂಧಿತ ಅನಾನುಕೂಲತೆಗಳ ಬಗ್ಗೆ ಹೆಚ್ಚು ಚಿಂತೆಗೀಡು ಮಾಡದೆ ನಿರಾಳವಾಗಿರುವಂತೆ ಮಾಡುತ್ತದೆ.
ಹೌದು, ದುಬೈ ಪ್ರವೇಶಿಸಲು ಭಾರತೀಯ ನಾಗರಿಕರು ವೀಸಾ ಹೊಂದಿರಬೇಕು. ಪ್ರವಾಸಿ ವೀಸಾಗಾಗಿ ಆನ್ಲೈನ್ ಅಪ್ಲಿಕೇಶನ್ ಅಥವಾ ನಿಮ್ಮ ಟ್ರಾವೆಲ್ ಏಜೆಂಟ್ ಕೂಡ ಇದನ್ನು ಸುಲಭಗೊಳಿಸಬಹುದು, ಆದರೆ ತಡೆರಹಿತ ವೀಸಾ ಪ್ರಕ್ರಿಯೆಗಾಗಿ ಅರ್ಜಿದಾರರು ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳು ಮತ್ತು ದುಬೈ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ಸಿದ್ಧರಾಗಿರಬೇಕು.
ವಿಶೇಷವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ನೀವು ವಿನಮ್ರವಾಗಿ ಉಡುಗೆ ಧರಿಸಬೇಕು. ಸಾಮಾನ್ಯವಾಗಿ ಹೊರ ಹೋಗಲು ಕ್ಯಾಶುಯಲ್ ಧಿರಿಸು ಉತ್ತಮವಾಗಿದೆ, ಆದರೆ ಮೈ ಭಾಗ ಹೆಚ್ಚು ತೋರಿಸುವುದನ್ನು ತಪ್ಪಿಸಬೇಕು. ಮುಂದೆ ಧಾರ್ಮಿಕ ಅಥವಾ ಸಾಂಪ್ರದಾಯಿಕತೆ ವಿಷಯಕ್ಕೆ ಬಂದಾಗ, ಸಾಂಪ್ರದಾಯಿಕ ಬಟ್ಟೆಗಳನ್ನು ಬಳಸುವುದು ಉತ್ತಮ.
ದುಬೈ ಅನ್ನು ಪ್ರವಾಸಿಗರಿಗೆ ವಿಶ್ವದ ಸುರಕ್ಷಿತ ನಗರಗಳಲ್ಲಿ ಒಂದಾಗಿ ರೇಟ್ ಮಾಡಲಾಗಿದೆ. ಇದು ತುಂಬಾ ಕಡಿಮೆ ಅಪರಾಧಗಳನ್ನು ದಾಖಲಿಸುವ ನಗರವಾಗಿದೆ ಮತ್ತು ಕಠಿಣ ಶಾಸನದ ಅಡಿಯಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡುತ್ತದೆ. ಆದಾಗ್ಯೂ, ಯಾವುದೇ ಹಠಾತ್ ತುರ್ತುಸ್ಥಿತಿ ಅಥವಾ ಅಪಘಾತವನ್ನು ಎದುರಿಸಲು ದುಬೈ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದು ಯಾವಾಗಲೂ ಉತ್ತಮ ಮಾರ್ಗವಾಗಿರುತ್ತದೆ.
ಟಿಪ್ಪಿಂಗ್ ಪ್ರಶಂಸನೀಯವಾಗಿದೆ ಆದರೆ ಕಡ್ಡಾಯವಲ್ಲ. ರೆಸ್ಟೋರೆಂಟ್‌ಗಳಲ್ಲಿ, ಸೇವೆಯನ್ನು ನಿಮ್ಮ ಬಿಲ್ಲಿನಲ್ಲಿ ಸೇರಿಸದಿದ್ದರೆ ಸುಮಾರು 10% ರ ಟಿಪ್ ವಾಡಿಕೆಯಾಗಿದೆ. ಟ್ಯಾಕ್ಸಿಗಳಿಗೆ, ಶುಲ್ಕವನ್ನು ರೌಂಡ್ ಅಪ್ ಮಾಡುವುದು ಉತ್ತಮ ನಿಲುವು ಆಗಿದೆ.
ವೈದ್ಯಕೀಯ ತುರ್ತುಸ್ಥಿತಿಯ ಸಂದರ್ಭದಲ್ಲಿ, ತಕ್ಷಣದ ಸಹಾಯಕ್ಕಾಗಿ 999 ಡಯಲ್ ಮಾಡಿ. ಯಾವುದೇ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು ಮತ್ತು ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ಸುರಕ್ಷಿತವಾಗಿದ್ದೀರಿ ಎಂದು ಖಚಿತಪಡಿಸಿಕೊಳ್ಳಲು ದುಬೈ ಟ್ರಾವೆಲ್ ಇನ್ಶೂರೆನ್ಸ್ ಹೊಂದುವುದು ಮುಖ್ಯವಾಗಿದೆ.
ದುಬೈ ಸಾಮಾನ್ಯವಾಗಿ ಫೋಟೋಜೆನಿಕ್ ಆಗಿದ್ದರೂ, ನೀವು ಸರ್ಕಾರಿ ಕಟ್ಟಡಗಳು, ಮಿಲಿಟರಿ ಸ್ಥಾಪನೆಗಳು ಮತ್ತು ಸ್ಥಳೀಯ ಜನರ ಫೋಟೋಗಳನ್ನು ಅವರ ಅನುಮತಿಯಿಲ್ಲದೆ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು. ವಿಶೇಷವಾಗಿ ಹೆಚ್ಚು ಖಾಸಗಿ ಅಥವಾ ಧಾರ್ಮಿಕ ಪ್ರದೇಶಗಳಲ್ಲಿ ಯಾರದಾದರೂ ಫೋಟೋ ತೆಗೆಯುವ ಮೊದಲು ಯಾವಾಗಲೂ ಕೇಳಿ.
ಇಂಗ್ಲಿಷ್ ಅನ್ನು ವ್ಯಾಪಕವಾಗಿ ಮಾತನಾಡುತ್ತಾರೆ ಮತ್ತು ಅರ್ಥಮಾಡಿಕೊಳ್ಳುತ್ತಾರೆ, ಆದರೂ ಕೆಲವು ಮೂಲಭೂತ ಅರೇಬಿಕ್ ವಾಕ್ಯಗಳನ್ನು ಕಲಿಯುವುದು ಸಹಾಯಕವಾಗಬಹುದು. ಸರಳ ಶುಭಾಶಯಗಳು ಮತ್ತು ವಿನಮ್ರ ಮಾತುಗಳು ಸ್ಥಳೀಯರೊಂದಿಗೆ ನಿಮ್ಮ ಸಂವಹನಗಳನ್ನು ಸುಧಾರಿಸಬಹುದು.