ಆಸ್ತಿ ಇನ್ಶೂರೆನ್ಸ್ ಅನಿರೀಕ್ಷಿತ ಅಪಾಯಗಳ ವಿರುದ್ಧ ಕವರೇಜನ್ನು ಒದಗಿಸುತ್ತದೆ, ಮನಸ್ಸಿನ ಶಾಂತಿಯನ್ನು ಮತ್ತು ಭದ್ರತೆಯನ್ನು ನೀಡುತ್ತದೆ. ಹೋಮ್ ಓನರ್ಸ್ ಇನ್ಶೂರೆನ್ಸ್ ಎಂದೂ ಕರೆಯಲ್ಪಡುವ ಆಸ್ತಿ ಇನ್ಶೂರೆನ್ಸ್ ಮನೆ ಮಾಲೀಕರು ಮತ್ತು ಆಸ್ತಿ ಹೂಡಿಕೆದಾರರಿಗೆ ಮುಖ್ಯವಾಗಿದೆ, ಏಕೆಂದರೆ ಇದು ವ್ಯಾಪಕ ಶ್ರೇಣಿಯ ಅಪಾಯಗಳ ವಿರುದ್ಧ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ. ಪ್ರವಾಹ, ಬೆಂಕಿ ಅಥವಾ ಬಿರುಗಾಳಿಯಂತಹ ನೈಸರ್ಗಿಕ ವಿಪತ್ತುಗಳಿಂದ ಅಥವಾ ಕಳ್ಳತನ ಮತ್ತು ವಿಧ್ವಂಸಕ ಕೃತ್ಯಗಳಂತಹ ಮಾನವ ನಿರ್ಮಿತ ಅಪಾಯಗಳಿಂದ ಉಂಟಾದ ಹಾನಿಯಾಗಿರಲಿ, ಆಸ್ತಿ ಇನ್ಶೂರೆನ್ಸ್ ರಿಪೇರಿಗಳು ಅಥವಾ ಮರುನಿರ್ಮಾಣದ ವೆಚ್ಚವನ್ನು ಕವರ್ ಮಾಡುವ ಮೂಲಕ ನಿಮ್ಮ ಹೂಡಿಕೆಯನ್ನು ರಕ್ಷಿಸುತ್ತದೆ, ಸಂಪೂರ್ಣ ಹಣಕಾಸಿನ ಹೊರೆಯನ್ನು ಹೊತ್ತುಕೊಳ್ಳದೆ ಅನಿರೀಕ್ಷಿತ ಘಟನೆಗಳಿಂದ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಭೌತಿಕ ರಚನೆಯನ್ನು ರಕ್ಷಿಸುವುದರ ಜೊತೆಗೆ, ಪ್ರಾಪರ್ಟಿ ಇನ್ಶೂರೆನ್ಸ್ ಆಸ್ತಿಗೆ ಸಂಬಂಧಿಸಿದ ವೈಯಕ್ತಿಕ ವಸ್ತುಗಳು ಮತ್ತು ಹೊಣೆಗಾರಿಕೆಗಳನ್ನು ಕೂಡ ಕವರ್ ಮಾಡಬಹುದು.
ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಮನೆ ಮಾಲೀಕರು ಮನಸ್ಸಿನ ಶಾಂತಿಯನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಮ್ಮ ಹೂಡಿಕೆಯು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ಸುರಕ್ಷಿತವಾಗಿದೆ ಎಂದು ತಿಳಿದುಕೊಳ್ಳಲು ಕೈಗೆಟಕುವ ಪ್ರೀಮಿಯಂಗಳೊಂದಿಗೆ ನಾವು ಕಸ್ಟಮೈಜ್ ಮಾಡಬಹುದಾದ ಕವರೇಜ್ ಆಯ್ಕೆಗಳನ್ನು ಒದಗಿಸುತ್ತೇವೆ. ನಿಮ್ಮ ಅಗತ್ಯಗಳಿಗೆ ಸೂಕ್ತವಾದದನ್ನು ಕಂಡುಹಿಡಿಯಲು ಮತ್ತು ಸಮಗ್ರ ಕವರೇಜನ್ನು ಖಚಿತಪಡಿಸಿಕೊಳ್ಳಲು ವಿವಿಧ ರೀತಿಯ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಗಳನ್ನು ಅನ್ವೇಷಿಸಿ. ಸರಿಯಾದ ಪ್ರಾಪರ್ಟಿ ಇನ್ಶೂರೆನ್ಸ್ ಹೊಂದುವುದು ನಿಮ್ಮ ಭವಿಷ್ಯ ಮತ್ತು ನಿಮ್ಮ ಹೂಡಿಕೆಗಳನ್ನು ಸುರಕ್ಷಿತವಾಗಿರಿಸಲು ಜಾಣ, ಸಕ್ರಿಯ ಹಂತವಾಗಿದೆ.
ಆಸ್ತಿಯು ಕೇವಲ ನಿಮ್ಮ ಮನೆ ಅಥವಾ ಕಟ್ಟಡವಲ್ಲ ; ಇದು ನಿಮ್ಮ ಮಳಿಗೆ ಅಥವಾ ಯಂತ್ರೋಪಕರಣಗಳು, ಕಾರ್ಖಾನೆ ಅಥವಾ ಕಚೇರಿಯಾಗಿರಬಹುದು. ಪ್ರಾಪರ್ಟಿ ಇನ್ಶೂರೆನ್ಸ್‌ನ ವಿವಿಧ ಫೀಚರ್‌ಗಳು:
ಅವಧಿ | ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ ಕವರೇಜ್ ಅವಧಿಯನ್ನು ಆಯ್ಕೆ ಮಾಡುವ ಫ್ಲೆಕ್ಸಿಬಿಲಿಟಿಯನ್ನು ನಿಮಗೆ ಒದಗಿಸುತ್ತದೆ. ನೀವು ಕನಿಷ್ಠ 1 ವರ್ಷದ ಕಾಲಾವಧಿಯನ್ನು ಆಯ್ಕೆ ಮಾಡಬಹುದು, ಇದರಿಂದಾಗಿ ಯಾವುದೇ ಬದಲಾವಣೆಗಳು, ಸ್ಥಳ ಬದಲಾವಣೆ ಅಥವಾ ಆಸ್ತಿಯ ವರ್ಗಾವಣೆಯ ಸಂದರ್ಭದಲ್ಲಿ, ನಿಮ್ಮ ಪ್ರೀಮಿಯಂ ಮೊತ್ತವು ವ್ಯರ್ಥವಾಗುವುದಿಲ್ಲ. |
ಭಾರಿ ರಿಯಾಯಿತಿಗಳು | ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ 45% ವರೆಗಿನ ಆಕರ್ಷಕ ಪ್ರೀಮಿಯಂ ರಿಯಾಯಿತಿಗಳನ್ನು ಒದಗಿಸುತ್ತದೆ. ಸಂಬಳ ಪಡೆಯುವ ಉದ್ಯೋಗಿಗಳಿಗೆ ಮತ್ತು ದೀರ್ಘಾವಧಿಯ ಪಾಲಿಸಿಗಳಿಗೆ ಆನ್ಲೈನ್ ಪಾಲಿಸಿ ಖರೀದಿಗಳ ಮೇಲೆ ರಿಯಾಯಿತಿಗಳಿವೆ. |
ನಿಮ್ಮ ವಸ್ತುಗಳನ್ನು ಸುರಕ್ಷಿತಗೊಳಿಸಿ | ನಷ್ಟ ಅಥವಾ ಹಾನಿಗಳಿಂದ ನೀವು ರಕ್ಷಿಸಲು ಬಯಸುವ ನಿಮ್ಮ ಸ್ವತ್ತುಗಳನ್ನು ಪಟ್ಟಿ ಮಾಡುವ ಬಗ್ಗೆ ನೀವು ಒತ್ತಡ ಹೊಂದಿದ್ದೀರಾ? ಚಿಂತಿಸಬೇಡಿ. ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ ಯಾವುದೇ ನಿರ್ದಿಷ್ಟ ಕಂಟೆಂಟ್‌ಗಳ ಪಟ್ಟಿಯನ್ನು ಹಂಚಿಕೊಳ್ಳದೆ ಫ್ಲಾಟ್ 25 ಲಕ್ಷಗಳ ಗರಿಷ್ಠ ಕವರೇಜನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವನ್ನು ನಿಮಗೆ ನೀಡುತ್ತದೆ. |
ಪೋರ್ಟೆಬಲ್ ಗ್ಯಾಜೆಟ್‌ಗಳ ಕವರೇಜ್ | ಲ್ಯಾಪ್ಟಾಪ್ ಇಲ್ಲದೆ ಅಥವಾ CCTV ಕ್ಯಾಮರಾಗಳಿಲ್ಲದೆ ನೀವು ಆಫೀಸ್ ಅಥವಾ ಮಳಿಗೆಯನ್ನು ಊಹಿಸಿಕೊಳ್ಳಲು ಸಾಧ್ಯವೇ? ಟೆಲಿವಿಷನ್‌ಗಳು, ಸೆಲ್ ಫೋನ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಲ್ಯಾಪ್‌ಟಾಪ್‌ಗಳಂತಹ ಪ್ರತಿಯೊಂದು ಎಲೆಕ್ಟ್ರಾನಿಕ್ಸ್‌ಗಳಿಗೆ ರಿಪೇರಿ ಮತ್ತು ಬದಲಿ ವೆಚ್ಚಗಳನ್ನು ಪ್ರಾಪರ್ಟಿ ಇನ್ಶೂರೆನ್ಸ್‌ನಿಂದ ಸಂಪೂರ್ಣವಾಗಿ ಕವರ್ ಮಾಡಲಾಗುತ್ತದೆ. ಇವು ದುಬಾರಿ ಗ್ಯಾಜೆಟ್‌ಗಳಾಗಿರುವುದರಿಂದ ಮತ್ತು ಬದಲಾಯಿಸಲು ಕಷ್ಟವಾಗುವುದರಿಂದ ಇದು ದೊಡ್ಡ ಹಣಕಾಸಿನ ಪರಿಹಾರವಾಗಿದೆ. |
ಆ್ಯಡ್-ಆನ್ ಕವರೇಜ್ | ನೈಸರ್ಗಿಕ ವಿಕೋಪಗಳು, ಕಳ್ಳತನಗಳು ಮತ್ತು ಬೆಂಕಿಯ ಕವರೇಜ್‌ನೊಂದಿಗೆ, ನೀವು ಸಾಮಾಜಿಕವಾಗಿ ಅಪಾಯಕಾರಿ ಪ್ರದೇಶಗಳಲ್ಲಿ ವಾಸಿಸುತ್ತಿದ್ದರೆ ಐಚ್ಛಿಕ ಆ್ಯಡ್-ಆನ್ ಕವರೇಜ್‌ಗಳನ್ನು ಆಯ್ಕೆ ಮಾಡುವ ಸೌಲಭ್ಯವಿದೆ. ಭಯೋತ್ಪಾದಕ ದಾಳಿಗಳು ಮತ್ತು ಸೇನೆಯಿಂದ ಉಂಟಾದ ಹಾನಿಯಿಂದ ನಿಮ್ಮ ವಸ್ತುಗಳನ್ನು ರಕ್ಷಿಸುವ ಭಯೋತ್ಪಾದನಾ ಕವರೇಜ್ ಇದೆ. ಮನೆಯ ವಸ್ತುಗಳ ವಿಮಾ ಮೊತ್ತದ 20% ಕ್ಕೆ ಸಮನಾದ ಆ್ಯಡ್-ಆನ್ ಕವರ್‌ನೊಂದಿಗೆ ನೀವು ನಿಮ್ಮ ಚಿನ್ನ, ಬೆಳ್ಳಿ ಮತ್ತು ವಜ್ರದ ಆಭರಣ ಅಥವಾ ವಸ್ತುಗಳನ್ನು ಕೂಡ ರಕ್ಷಿಸಬಹುದು. |
ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ ಆಸ್ತಿ ರಚನೆ ಮತ್ತು ಅದರಲ್ಲಿನ ಆಸ್ತಿಗಳನ್ನು ಬೆಂಕಿ, ಭೂಕಂಪ, ಗಲಭೆಗಳು, ಪ್ರವಾಹ ಇತ್ಯಾದಿಗಳಿಂದ ಉಂಟಾಗುವ ಹಾನಿಗಳಿಂದ ಕವರ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ರಕ್ಷಿಸುತ್ತದೆ. ನೀವು ಆನಂದಿಸಬಹುದಾದ ವಿವಿಧ ಪ್ರಯೋಜನಗಳು:
ಸಮಗ್ರ ಕವರೇಜ್ | ಇದು ಸಮಗ್ರ ಇನ್ಶೂರೆನ್ಸ್ ಕವರ್ ಆಗಿದೆ ಮತ್ತು ಅದು ಹೊಂದಿರುವ ರಚನೆ ಮತ್ತು ವಸ್ತುಗಳು ಎರಡನ್ನೂ ರಕ್ಷಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡುವುದರಿಂದ ನೀವು ಕೇವಲ ಗೃಹಸ್ಥರಾಗಿದ್ದರೆ ಅಥವಾ ಉದ್ಯಮಿಯಾಗಿದ್ದರೆ ದೊಡ್ಡ ಹಣಕಾಸಿನ ಪರಿಹಾರವನ್ನು ನಿಮಗೆ ನೀಡಬಹುದು. |
ಹಣಕಾಸಿನ ಭದ್ರತೆ | ಇದು ನಿಮ್ಮ ಅಮೂಲ್ಯ ಆಭರಣಗಳು ಮತ್ತು ಲೋಹದ ಕಲಾಕೃತಿಗಳಿಗೆ ಯಾವುದೇ ಕಳ್ಳತನ ಅಥವಾ ನಷ್ಟದಿಂದ ಅಗತ್ಯವಿರುವ ಭದ್ರತೆಯನ್ನು ಒದಗಿಸುತ್ತದೆ. |
ಖಾಲಿ ಆಸ್ತಿಯ ಕವರೇಜ್ | ಖಾಲಿ ಆಸ್ತಿಗಳನ್ನೂ ಸಹ ಈ ರೀತಿಯ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಬಹುದು. ನೀವು ಆವರಣದ ಒಳಗೆ ಇಲ್ಲದಿದ್ದರೂ, ಅದನ್ನು ವಿಮಾದಾತರು ಕವರ್ ಮಾಡುತ್ತಾರೆ. |
ಬಾಡಿಗೆದಾರರ ವೈಯಕ್ತಿಕ ವಸ್ತುಗಳಿಗೆ ರಕ್ಷಣೆ | ಬಾಡಿಗೆ ಆಸ್ತಿಗಳಲ್ಲಿ ವಾಸಿಸುವವರಿಗೂ ಕೂಡ ಪ್ರಾಪರ್ಟಿ ಇನ್ಶೂರೆನ್ಸ್ ಬೇಕಾಗುತ್ತದೆ, ಬಾಡಿಗೆದಾರರಿಗೆ ಸೇರಿದ ವಸ್ತುಗಳಿಗೆ ಕವರೇಜ್ ಒದಗಿಸುತ್ತದೆ. |
ಕಂಟೆಂಟ್‌ಗಳ ಕವರೇಜ್ | ನಿಮ್ಮ ದುಬಾರಿ ಫಿಟ್ಟಿಂಗ್‌ಗಳು ಮತ್ತು ಫಿಕ್ಸ್‌ಚರ್‌ಗಳಿಗೆ ಆಕ್ಸಿಡೆಂಟಲ್ ಹಾನಿಯನ್ನು ಕೂಡ ಪ್ರಾಪರ್ಟಿ ಇನ್ಶೂರೆನ್ಸ್ ಕವರೇಜ್‌ನಲ್ಲಿ ಸೇರಿಸಬಹುದು. |
ನಿಮ್ಮ ಕನಸಿನ ಆಸ್ತಿ ಬೆಂಕಿಗೆ ಸಿಕ್ಕಿ ಬೂದಿಯಾಗಬಹುದು. ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್, ಬೆಂಕಿ ಅನಾಹುತಗಳ ವಿರುದ್ಧ ಕವರೇಜ್ ಒದಗಿಸಿ, ನಿಮ್ಮ ಮನೆಯನ್ನು ಮರುನಿರ್ಮಿಸಲು ನೆರವಾಗುತ್ತದೆ.
ನಿಮ್ಮ ಬೆಲೆಬಾಳುವ ಒಡವೆ ಅಥವಾ ಇತರ ಅಮೂಲ್ಯ ವಸ್ತುಗಳು ಕಳ್ಳಕಾಕರ ಪಾಲಾಗಬಹುದು. ಅವುಗಳಿಗೆ ರಕ್ಷಣೆ ಒದಗಿಸಿ ನೀವು ನೆಮ್ಮದಿಯಿಂದ ಇರಬಹುದು.
ಉಪಕರಣಗಳಿಲ್ಲದೆ ನಮ್ಮ ಜೀವನವನ್ನು ಊಹಿಸಲೂ ಸಾಧ್ಯವಿಲ್ಲ! ಎಲೆಕ್ಟ್ರಿಕಲ್ ಬ್ರೇಕ್‌ಡೌನ್ ಸಂದರ್ಭದಲ್ಲಿ ಕವರೇಜ್ ಪಡೆಯಲು ಅವುಗಳನ್ನು ಇನ್ಶೂರ್ ಮಾಡಿ.
ನಿಮ್ಮ ಆಸ್ತಿಯು ಸೈಕ್ಲೋನ್, ಭೂಕಂಪ, ಪ್ರವಾಹ ಇತ್ಯಾದಿಗಳಿಂದ ಹಾನಿಗೊಳಗಾದರೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ! ಜೊತೆಗೆ, ಮುಷ್ಕರ, ಗಲಭೆ, ಭಯೋತ್ಪಾದನೆ ಮತ್ತು ದುರುದ್ದೇಶಪೂರಿತ ಹಾನಿಯ ವಿರುದ್ಧ ನಿಮ್ಮ ಮನೆಗೆ ರಕ್ಷಣೆ ಒದಗಿಸುತ್ತೇವೆ.
ಇನ್ಶೂರೆಬಲ್ ಅಪಾಯದಿಂದ ಇನ್ಶೂರ್ಡ್ ಆಸ್ತಿಗೆ ಹಾನಿಯಾಗಿದ್ದು, ಆ ಆಸ್ತಿಯು ವಾಸಯೋಗ್ಯವಲ್ಲ ಎಂದು ಪರಿಗಣಿಸಲ್ಪಟ್ಟರೆ, ಆಸ್ತಿ ಮಾಲೀಕರಿಗೆ ವಿಮಾದಾತರು ತಾತ್ಕಾಲಿಕ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸುತ್ತಾರೆ.
ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ, ದುಬಾರಿ ಫಿಟ್ಟಿಂಗ್‌ಗಳು ಮತ್ತು ಫಿಕ್ಸ್‌ಚರ್‌ನಂತಹ ಅಮೂಲ್ಯ ವಸ್ತುಗಳಿಗೆ ಆಕಸ್ಮಿಕ ಹಾನಿಯಾದ ಸಂದರ್ಭದಲ್ಲಿ ಕವರೇಜ್ ನೀಡಲಾಗುತ್ತದೆ.
ಯುದ್ಧ, ಆಕ್ರಮಣ, ವಿದೇಶಿ ಆಕ್ರಮಣ, ಇತ್ಯಾದಿಗಳಿಂದ ಉಂಟಾಗುವ ನಷ್ಟ/ಹಾನಿಗಳನ್ನು ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಕವರ್ ಮಾಡಲಾಗುವುದಿಲ್ಲ.
ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಮುಂತಾದವುಗಳಿಗೆ ಆದ ನಷ್ಟಗಳು ಕವರ್ ಆಗುವುದಿಲ್ಲ.
ನಿಮ್ಮ ಎಲ್ಲಾ ಅಮೂಲ್ಯ ವಸ್ತುಗಳ ಜೊತೆ ನಿಮಗೆ ಭಾವನಾತ್ಮಕ ನಂಟಿದೆ ಎಂದು ನಮಗೆ ಗೊತ್ತು. ಆದರೆ 10 ವರ್ಷಕ್ಕಿಂತ ಹಳೆಯ ವಸ್ತುಗಳನ್ನು ಈ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡುವುದಿಲ್ಲ.
ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ.
ಅನಿರೀಕ್ಷಿತ ನಷ್ಟಗಳನ್ನು ನಾವು ಖಂಡಿತ ಕವರ್ ಮಾಡುತ್ತೇವೆ. ಆದರೆ ಉದ್ದೇಶಪೂರ್ವಕ ಹಾನಿಗೆ ಯಾವುದೇ ಕವರೇಜ್ ನೀಡಲಾಗುವುದಿಲ್ಲ.
ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.
ಸ್ವಾಭಾವಿಕ ಸವೆತ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.
ಈ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯು ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.
ಈ ಪ್ರಾಪರ್ಟಿ ಇನ್ಶೂರೆನ್ಸ್ ಕವರ್ ನೀವು ವಾಸಿಸುವ ಸ್ವಂತ ಮನೆಗೆ ಮಾತ್ರ. ನಿರ್ಮಾಣ ಹಂತದಲ್ಲಿರುವ ಸ್ವತ್ತನ್ನು ಇದು ಕವರ್ ಮಾಡುವುದಿಲ್ಲ.
ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್
ಒಡವೆ ಮತ್ತು ಬೆಲೆಬಾಳುವ ವಸ್ತುಗಳು
ಪೆಡಲ್ ಸೈಕಲ್
ಭಯೋತ್ಪಾದನೆಗೆ ಕವರ್
ಎಚ್‌ಡಿಎಫ್‌ಸಿ ಎರ್ಗೋದ ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ, ಲ್ಯಾಪ್‌ಟಾಪ್, ಕ್ಯಾಮರಾ, ಮ್ಯೂಸಿಕಲ್ ಸಲಕರಣೆಗಳು ಮುಂತಾದ ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳಿಗೆ ಆ್ಯಡ್-ಆನ್ ಕವರೇಜ್ ಪಡೆಯಿರಿ. ಆದಾಗ್ಯೂ, 10 ವರ್ಷಕ್ಕಿಂತ ಹಳೆಯ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಯಾವುದೇ ಕವರೇಜ್ ಪ್ರಯೋಜನ ದೊರೆಯುವುದಿಲ್ಲ.
ನೀವು ರಜೆಯ ಮಜಾ ನೋಡಲು ಹೋಗಿದ್ದಾಗ ನಿಮ್ಮ ಕ್ಯಾಮರಾ ಇದ್ದಕ್ಕಿದ್ದಂತೆ ಕೆಟ್ಟುಹೋಯಿತು ಎಂದುಕೊಳ್ಳಿ. ಅದರ ರಿಪೇರಿ ಖರ್ಚನ್ನು ನಾವು ಕವರ್ ಮಾಡುತ್ತೇವೆ. ಆದರೆ ಅದು ಉದ್ದೇಶಪೂರ್ವಕ ಹಾನಿ ಆಗಿರಬಾರದು.
ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ ಅನ್ನು ವೆಬ್‌ಸೈಟ್‌ನಿಂದ ಸುಲಭವಾಗಿ ಆನ್‌ಲೈನ್‌ನಲ್ಲಿ ಖರೀದಿಸಬಹುದು. ನವೀಕರಣವನ್ನು ಕೂಡ ಅನುಕೂಲಕರ ರೀತಿಯಲ್ಲಿ ಆನ್ಲೈನಿನಲ್ಲಿ ಮಾಡಬಹುದು. ಕೇವಲ ನಿಮ್ಮ ಪಾಲಿಸಿ ನಂಬರ್, ನೋಂದಾಯಿತ ಇಮೇಲ್ ID ಅಥವಾ ಮೊಬೈಲ್ ನಂಬರ್ ನಮೂದಿಸಿ ಮತ್ತು ನಿಮ್ಮ ಪಾವತಿಯನ್ನು ಪೂರ್ಣಗೊಳಿಸಲು ಹಂತಗಳನ್ನು ಅನುಸರಿಸಿ. ಪಾಲಿಸಿಯ ವಿವರಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಲು 24*7 ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸಹಾಯ ಲಭ್ಯವಿದೆ.
ಬೆಂಕಿ, ಗಲಭೆ, ನೈಸರ್ಗಿಕ ವಿಕೋಪಗಳು ಮತ್ತಿತರ ಅನಿರೀಕ್ಷಿತ ಘಟನೆಗಳಿಂದ ನಿಮ್ಮ ಮನೆಯ ವಸ್ತುಗಳು/ಭಾಗಗಳಿಗೆ ಆದ ಹಾನಿಯಿಂದ ಉಂಟಾಗಬಹುದಾದ ಯಾವುದೇ ಹಣಕಾಸು ಹೊರೆಯನ್ನು ತಪ್ಪಿಸಲು, ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸುವುದು ಅಗತ್ಯವಾಗಿದೆ. ಇದಲ್ಲದೆ, ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸಲು ಇನ್ನೂ ಹಲವಾರು ಕಾರಣಗಳಿವೆ. ಅವನ್ನು ಈ ಕೆಳಗೆ ಚರ್ಚಿಸಲಾಗಿದೆ
1. ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಮನೆಯ ವಸ್ತುಗಳು ಮತ್ತು ಭಾಗಗಳು, ಎರಡಕ್ಕೂ ಸಮಗ್ರ ಕವರೇಜ್ ಪಡೆಯಬಹುದು.
2. ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ಗಳು ಯಾವುದೇ ಅಪಘಾತದಿಂದ ನಿಮ್ಮ ಅಮೂಲ್ಯ ಆಸ್ತಿಯನ್ನು ಕಾಪಾಡಲು ಸಹಾಯ ಮಾಡುತ್ತವೆ.
3. ನಿಮ್ಮ ಇನ್ಶೂರ್ಡ್ ಆಸ್ತಿಗೆ ಯಾವುದಾದರೂ ಹಾನಿಯಾದಾಗ, ಅದರ ರಿಪೇರಿ ವೆಚ್ಚವನ್ನು ಪ್ರಾಪರ್ಟಿ ಇನ್ಶೂರೆನ್ಸ್ ಕವರ್ ಮಾಡುತ್ತದೆ.
4. ಪ್ರಾಪರ್ಟಿ ಇನ್ಶೂರೆನ್ಸ್ ಖಾಲಿ ಮನೆಗಳಿಗೂ ಕವರೇಜ್ ನೀಡುತ್ತದೆ. ನೀವು ಮನೆಯಿಂದ ದೂರವಿದ್ದರೂ ರಿಪೇರಿ/ಮರುನಿರ್ಮಾಣದ ವೆಚ್ಚವನ್ನು ಕವರ್ ಮಾಡಲಾಗುತ್ತದೆ.
5. ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುವ ಜನರಿಗೆ ಪ್ರಾಪರ್ಟಿ ಇನ್ಶೂರೆನ್ಸ್ ಪ್ರಯೋಜನಕಾರಿಯಾಗಿದೆ. ಏಕೆಂದರೆ ಇದು ವಸ್ತುಗಳಿಗೂ ಕವರೇಜ್ ಒದಗಿಸುತ್ತದೆ ಮತ್ತು ಹೀಗೆ ಹಣಕಾಸಿನ ಒತ್ತಡವನ್ನು ತಪ್ಪಿಸುತ್ತದೆ.
6. ಯಾವುದೇ ತೊಂದರೆಯಿಲ್ಲದೆ ಆನ್ಲೈನ್‌ನಲ್ಲಿ ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸಬಹುದು ಮತ್ತು ನಿಮ್ಮ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು ಅಥವಾ ನಿಮ್ಮ ಆಯಾ ಇನ್ಶೂರೆನ್ಸ್ ಪ್ಲಾನ್‌ಗೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ ಉತ್ತರ ಪಡೆಯಲು ನಮ್ಮ ಗ್ರಾಹಕ ಸಹಾಯ ತಂಡವು 24x7 ಲಭ್ಯವಿದೆ.
ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ಉಪಯೋಗವಾಗದೆ ಇರಬಹುದು ಎಂದು ಚಿಂತಿಸುತ್ತಿದ್ದೀರಾ? ನಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ನಿಮ್ಮ ಅಗತ್ಯಕ್ಕೆ ತಕ್ಕ ಅವಧಿಯನ್ನು ಆಯ್ಕೆ ಮಾಡುವ ಅನುಕೂಲತೆಯನ್ನು ಒದಗಿಸುತ್ತದೆ. ಆದರೆ, ಇದು ಕನಿಷ್ಠ ಒಂದು ವರ್ಷವಾಗಿರಲೇಬೇಕು.
ಎಚ್‌ಡಿಎಫ್‌ಸಿ ಎರ್ಗೋದ ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ, ಪ್ರೀಮಿಯಂಗಳ ಮೇಲೆ ಆಕರ್ಷಕ ರಿಯಾಯಿತಿಗಳೊಂದಿಗೆ ನಿಮ್ಮ ಮನೆಯನ್ನು ಇನ್ಶೂರ್ಡ್ ಮಾಡಬಹುದು. ಆನ್ಲೈನ್‌ನಲ್ಲಿ ಪಾಲಿಸಿ ಖರೀದಿಸುವ ಸಂಬಳದಾರರು, ದೀರ್ಘಾವಧಿ ಪಾಲಿಸಿ, ಇತ್ಯಾದಿಗಳಿಗೆ ವಿಶೇಷ ರಿಯಾಯಿತಿ ಸಿಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋದ ಪ್ರಾಪರ್ಟಿ ಇನ್ಶೂರೆನ್ಸ್ ಯಾವುದೇ ನಿರ್ದಿಷ್ಟ ಮನೆಯ ವಸ್ತುಗಳ ಪಟ್ಟಿಯನ್ನು ಹಂಚಿಕೊಳ್ಳದೆ, ನಿಮ್ಮ ಸ್ವಾಧೀನದಲ್ಲಿರುವ ಎಲ್ಲಾ ವಸ್ತುಗಳನ್ನೂ (₹25 ಲಕ್ಷಗಳವರೆಗೆ) ಕವರ್ ಮಾಡುವ ಆಯ್ಕೆ ನೀಡುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಪ್ರಾಪರ್ಟಿ ಇನ್ಶೂರೆನ್ಸ್‌ನೊಂದಿಗೆ ಲ್ಯಾಪ್‌ಟಾಪ್, ಸೆಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಇನ್ಶೂರ್ ಮಾಡಿಸಿ ಮತ್ತು ಈ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಉಂಟಾದ ಹಾನಿಯಿಂದಾಗಿ ಬರುವ ಹಣಕಾಸು ನಷ್ಟಗಳನ್ನು ತಪ್ಪಿಸಿ.
ನಿಮ್ಮ ಆಸ್ತಿಯು ಪ್ರವಾಹ ಪೀಡಿತ ಪ್ರದೇಶದಲ್ಲಿ ಅಥವಾ ಆಗಾಗ್ಗೆ ತುಂಬಾ ಭೂಕಂಪವಾಗುವ ಸ್ಥಳದಲ್ಲಿದ್ದರೆ ನಿಮ್ಮ ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರಬಹುದು.
ನಿಮ್ಮ ಆಸ್ತಿಯು ಸ್ವಲ್ಪ ಹಳೆಯದಾಗಿದ್ದರೆ ಮತ್ತು ಕಟ್ಟಡದ ಸ್ಥಿತಿಯು ಆಕ್ಷೇಪಾರ್ಹವಾಗಿದ್ದರೆ ನಿಮ್ಮ ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರಬಹುದು.
ನಿಮ್ಮ ಆಸ್ತಿಯು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಹೊಂದಿದ್ದು ಕಳ್ಳತನವಾಗುವ ಸಾಧ್ಯತೆ ಕಡಿಮೆ ಇದ್ದರೆ ಅಂತಹ ಸಂದರ್ಭದಲ್ಲಿ ನಿಮ್ಮ ಪ್ರೀಮಿಯಂ ಕಡಿಮೆಯಾಗಬಹುದು.
ನಿಮ್ಮ ಆಸ್ತಿಯು ಬೆಲೆಬಾಳುವ ಹಲವು ವಸ್ತುಗಳನ್ನು ಹೊಂದಿದ್ದು, ನೀವು ಅವುಗಳನ್ನು ಇನ್ಶೂರ್ ಮಾಡಿಸುವ ಆಯ್ಕೆ ಮಾಡಿದರೆ ನಿಮ್ಮ ಪ್ರೀಮಿಯಂ ನೀವು ಇನ್ಶೂರ್ ಮಾಡಿಸಲು ಬಯಸುವ ವಸ್ತುಗಳ ಬೆಲೆಯನ್ನು ಅವಲಂಬಿಸುತ್ತದೆ.
ಪ್ರೀಮಿಯಂ ನಿರ್ಧರಿಸುವ ಸಮಯದಲ್ಲಿ ನಿಮ್ಮ ಆಸ್ತಿಯ ಒಟ್ಟು ಮೌಲ್ಯವು ಪರಿಗಣನೆಗೆ ಬರುತ್ತದೆ. ಒಂದು ವೇಳೆ ನಿಮ್ಮ ಆಸ್ತಿಯ ರಚನಾತ್ಮಕ ಮೌಲ್ಯವು ಹೆಚ್ಚಾಗಿದ್ದರೆ ಪ್ರೀಮಿಯಂ ಹೆಚ್ಚಾಗುತ್ತದೆ, ಕಡಿಮೆ ಇದ್ದರೆ ಕಡಿಮೆಯಾಗುತ್ತದೆ. ಇದನ್ನು ನಿಮ್ಮ ಮನೆಯ ಮಾರುಕಟ್ಟೆ ಮೌಲ್ಯವೆಂದು ಕೂಡ ಕರೆಯಬಹುದು. ಏಕೆಂದರೆ ನಿಮ್ಮ ಆಸ್ತಿಯ ಮಾರುಕಟ್ಟೆ ಮೌಲ್ಯವು ಹೆಚ್ಚಾಗಿದ್ದರೆ ವಿಮಾ ಮೊತ್ತವೂ ಹೆಚ್ಚಾಗಿರುತ್ತದೆ.
ಆಸ್ತಿಯ ವಿಧ, ಅದರ ಕಂಟೆಂಟ್‌ಗಳ ಮೌಲ್ಯ, ಪ್ರತಿ ಚದರ ಅಡಿಯ ರಚನೆಯ ಮೌಲ್ಯ, ಆಸ್ತಿಯ ಸ್ಥಳ ಇತ್ಯಾದಿ ಅಂಶಗಳು ಪ್ರೀಮಿಯಂ ಮೇಲೆ ಪರಿಣಾಮ ಬೀರುತ್ತವೆ. ಈ ಮೌಲ್ಯಗಳು ಆನ್ಲೈನಿನಲ್ಲಿ ಲಭ್ಯವಿರುವ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್‌ಗೆ ಇನ್ಪುಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಈ ಕ್ಯಾಲ್ಕುಲೇಟರ್‌ಗಳ ಮೂಲಕ ನಿಮ್ಮ ಪ್ರೀಮಿಯಂನ ಅಂದಾಜು ಮೌಲ್ಯವನ್ನು ಯಾವುದೇ ತೊಂದರೆಯಿಲ್ಲದೆ ಲೆಕ್ಕ ಹಾಕಬಹುದು. ಮೊದಲು, ನೀವು ಯಾವುದನ್ನು ಖಚಿತಪಡಿಸಿಕೊಳ್ಳಬೇಕು ಎಂಬುದನ್ನು ಆಯ್ಕೆ ಮಾಡಬೇಕು - ಸ್ಟ್ರಕ್ಚರ್, ಕಂಟೆಂಟ್ ಅಥವಾ ಎರಡೂ. ಎರಡನೇ ಹಂತದಲ್ಲಿ, ಅಗತ್ಯವಿರುವ ಎಲ್ಲಾ ಆಸ್ತಿ ವಿವರಗಳನ್ನು ನೀವು ನಮೂದಿಸಬೇಕಾಗುತ್ತದೆ. ಮುಂದಿನ ಹಂತದಲ್ಲಿ, ನೀವು ವಿಮಾ ಮೊತ್ತವನ್ನು ಆಯ್ಕೆ ಮಾಡುತ್ತೀರಿ ಅಥವಾ ಸಮಗ್ರ ಕವರ್ ಆಗಿ ನೀವು ಹೊಂದಲು ಬಯಸುವ ಕವರ್ ಅನ್ನು ಆಯ್ಕೆ ಮಾಡುತ್ತೀರಿ. ಈ ಕೊನೆಯ ಹಂತದಲ್ಲಿ, ಕ್ಯಾಲ್ಕುಲೇಟರ್ ನಿಮಗೆ ಪಾವತಿಸಬೇಕಾದ ಪ್ರೀಮಿಯಂ ಅನ್ನು ನೀಡುತ್ತದೆ.
ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಎಂದಿಗೂ ಇಷ್ಟು ಸುಲಭವಾಗಿರಲಿಲ್ಲ. ಇದಕ್ಕೆ ಬೇಕಾಗುವುದು ಕೇವಲ 4 ತ್ವರಿತ ಹಂತಗಳು.
ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಪಡೆಯಲು ನಿರ್ಧರಿಸುವ ಮೊದಲು, ನೀವು ಪರಿಶೀಲಿಸಬೇಕಾದ ಕೆಲವು ನಿರ್ಣಾಯಕ ಅಂಶಗಳಿವೆ. ಪಾಲಿಸಿಗೆ ನೀವು ಅರ್ಹರಾಗುವಂತೆ ಮಾಡುವ ಅಂಶಗಳು
• ಇದನ್ನು ಮನೆ ಮಾಲೀಕರು, ಬಾಡಿಗೆದಾರರು, ಮಳಿಗೆದಾರರು, ಫ್ಯಾಕ್ಟರಿ ಮಾಲೀಕರು ಮುಂತಾದವರು ಖರೀದಿಸಬಹುದು.
• ಭಾರತದ ನಿವಾಸಿಗಳಾಗಿರಬೇಕು.
• ಆಸ್ತಿಯು ನಿರ್ಮಾಣ ಹಂತದಲ್ಲಿರಬಾರದು ಅಥವಾ ವಿವಾದಿತ ಆಸ್ತಿಯಾಗಿರಬಾರದು.
• ಪಾಲಿಸಿಯನ್ನು ನೀಡುವಾಗ ನಿಮ್ಮ ಕ್ರೆಡಿಟ್ ಇತಿಹಾಸ ಮತ್ತು ಮುಂಚಿತ ಕ್ಲೈಮ್‌ಗಳನ್ನು ಕೂಡ ಪರಿಗಣಿಸಲಾಗುತ್ತದೆ.
• ಆಸ್ತಿಯ ಸ್ಥಳ, ಭೌಗೋಳಿಕ ಪ್ರದೇಶ ಮತ್ತು ಹವಾಮಾನದ ಪರಿಸ್ಥಿತಿಗಳು ಕೂಡ ಪಾಲಿಸಿ ವಿತರಣೆಯ ನಿರ್ಧಾರಗಳ ಮೇಲೆ ಪರಿಣಾಮ ಬೀರುತ್ತವೆ.
• ಅಸ್ತಿತ್ವದಲ್ಲಿರುವ ಆಸ್ತಿ ಪರಿಸ್ಥಿತಿಗಳು, ನಿಮ್ಮ ಆಸ್ತಿಯ ನಿರ್ವಹಣೆ ಮತ್ತು ಅದರ ವಯಸ್ಸನ್ನು ಕೂಡ ಪಾಲಿಸಿ ವಿತರಣೆಯಲ್ಲಿ ಪರಿಗಣಿಸಬಹುದು.
• ಅಲಾರಂಗಳು, ಕ್ಯಾಮರಾಗಳು ಮತ್ತು ಡಿಟೆಕ್ಟರ್‌ಗಳಂತಹ ನಿಮ್ಮ ಆಸ್ತಿಯ ಭದ್ರತಾ ವ್ಯವಸ್ಥೆಗಳನ್ನು ವಿಮಾದಾತರು ಪರಿಶೀಲಿಸುತ್ತಾರೆ.
ನಿಮ್ಮ ವಸ್ತುಗಳೊಂದಿಗೆ ಕಟ್ಟಡಗಳು, ಕಚೇರಿಗಳು, ಕಾರ್ಖಾನೆಗಳು, ಅಂಗಡಿಗಳು ಮುಂತಾದ ನಿಮ್ಮ ಸ್ಥಿರ ಆಸ್ತಿಗಳಿಗೆ ನೈಸರ್ಗಿಕ ಮತ್ತು ಮಾನವ ನಿರ್ಮಿತ ಅಪಾಯಗಳಿಂದ ಉಂಟಾಗುವ ಹಾನಿಗಳಿಗೆ ಪ್ರಾಪರ್ಟಿ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ. ಇದು ಹೆಚ್ಚುವರಿ ಭದ್ರತೆಗಾಗಿ ಪೂಲ್‌ಗಳು, ಗ್ಯಾರೇಜ್‌ಗಳು, ಶೆಡ್‌ಗಳು, ಫೆನ್ಸ್‌ಗಳು ಮುಂತಾದ ಔಟ್‌ಬಿಲ್ಡಿಂಗ್‌ಗಳನ್ನು ಕೂಡ ಕವರ್ ಮಾಡುತ್ತದೆ. ನಿಮ್ಮ ಆಸ್ತಿಯಲ್ಲಿ ಗಾಯಗೊಂಡ ಥರ್ಡ್ ಪಾರ್ಟಿಗೆ ವೈದ್ಯಕೀಯ ವೆಚ್ಚಗಳು ಮತ್ತು ಕಾನೂನು ಶುಲ್ಕಗಳನ್ನು ಕೂಡ ಕೆಲವು ಪಾಲಿಸಿಗಳಲ್ಲಿ ಕವರ್ ಮಾಡಲಾಗುತ್ತದೆ.
ನೀವು ಸಹಾಯವಾಣಿ ನಂಬರ್ 022 6158 2020 ಗೆ ಕರೆ ಮಾಡುವ ಮೂಲಕ ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ನಿಮ್ಮ ಕ್ಲೈಮ್‌ಗಳನ್ನು ನೋಂದಾಯಿಸಿ ಅಥವಾ care@hdfcergo.com ಮೂಲಕ ಗ್ರಾಹಕ ಸಹಾಯವಾಣಿಗೆ ಇಮೇಲ್ ಮಾಡಿದರೆ ಸಾಕು. ಎಚ್‌ಡಿಎಫ್‌ಸಿ ಎರ್ಗೋ ತಂಡವು ನೋಂದಣಿಯಿಂದ ಹಿಡಿದು ನಿಮ್ಮ ಕ್ಲೈಮ್‌ಗಳ ಸೆಟಲ್ಮೆಂಟ್‌ವರೆಗೆ ಪ್ರತಿ ಹಂತದಲ್ಲೂ ನಿಮ್ಮೊಂದಿಗೆ ಇರುತ್ತದೆ. ತೊಂದರೆ ರಹಿತ ಕ್ಲೈಮ್ ಸೆಟಲ್ಮೆಂಟ್ ಪಡೆಯಲು ನೋಂದಣಿ ಮಾಡುವಾಗ ಕೆಲವು ಸ್ಟ್ಯಾಂಡರ್ಡ್ ಡಾಕ್ಯುಮೆಂಟ್‌ಗಳನ್ನು ಸಿದ್ಧವಾಗಿರಿಸಿಕೊಳ್ಳಿ:
• ಪಾಲಿಸಿಯನ್ನು ನೀಡಿದ ನಂತರ ಸಂಪೂರ್ಣ ಪಾಲಿಸಿ ಡಾಕ್ಯುಮೆಂಟ್ ಬುಕ್ಲೆಟ್ ಅನ್ನು ಪಡೆಯಲಾಗುತ್ತದೆ.
• ಅನ್ವಯವಾಗುವಂತೆ ಹಾನಿಗಳ ಅಥವಾ ಕಳೆದುಹೋದ ವಸ್ತುಗಳ ಮತ್ತು ರಶೀದಿಗಳ ಫೋಟೋಗಳು.
• ಕ್ಲೈಮ್ ಫಾರ್ಮ್ ವಿವರಗಳನ್ನು ಭರ್ತಿ ಮಾಡಿ ಮತ್ತು ಸೈನ್ ಆಫ್ ಮಾಡಿ.
• ಆಸ್ತಿ ನೋಂದಣಿ ಮತ್ತು ಕ್ಯಾಪಿಟಲೈಸ್ಡ್ ಐಟಂಗಳ ಪಟ್ಟಿ.
• ಯಾವುದಾದರೂ ರಿಪೇರಿ ಮತ್ತು ಮರು-ಖರೀದಿ ರಶೀದಿಗಳನ್ನು ಸಿದ್ಧವಾಗಿರಿಸಿಕೊಳ್ಳಿ.
• ಅನ್ವಯವಾಗುವ ಎಲ್ಲಾ ಮತ್ತು ಮಾನ್ಯ ಪ್ರಮಾಣಪತ್ರಗಳನ್ನು ನಿಮ್ಮೊಂದಿಗೆ ಇಟ್ಟುಕೊಳ್ಳಬೇಕು.
• ಪಾಲಿಸಿ ಅವಶ್ಯಕತೆಗಳ ಪ್ರಕಾರ ಅನ್ವಯವಾಗುವ ಪ್ರಕರಣಗಳಲ್ಲಿ FIR ನ ಪ್ರತಿಯನ್ನು ಸಲ್ಲಿಸಬೇಕು.
ಒಮ್ಮೆ ತಂಡವು ತನಿಖೆಯನ್ನು ಪೂರ್ಣಗೊಳಿಸಿ ಸಲ್ಲಿಸಿದ ಡಾಕ್ಯುಮೆಂಟ್‌ಗಳೊಂದಿಗೆ ತೃಪ್ತಿ ಹೊಂದಿದ ನಂತರ, ನೀವು ಪಾಲಿಸಿಗೆ ಅಪ್ಲೈ ಮಾಡುವಾಗ ಸಲ್ಲಿಸಿದ ಬ್ಯಾಂಕ್ ಅಕೌಂಟ್ ವಿವರಗಳಿಗೆ ನಿಮ್ಮ ಕ್ಲೈಮ್ ಫಂಡ್‌ಗಳನ್ನು ನೇರವಾಗಿ ಕ್ರೆಡಿಟ್ ಮಾಡಲಾಗುತ್ತದೆ. ಅಂತಹ ಪಾವತಿಗಳ ಮೊದಲು ನಿಮ್ಮ ಹಿಂದಿನ ಕ್ಲೈಮ್‌ಗಳು ಮತ್ತು ಪಾಲಿಸಿ ಪ್ರೀಮಿಯಂ ಪಾವತಿಗಳನ್ನು ಪರಿಶೀಲಿಸಲಾಗುತ್ತದೆ, ಆದ್ದರಿಂದ ನಿಮ್ಮ ಪ್ರೀಮಿಯಂ ಮುಂದುವರಿಕೆಯೊಂದಿಗೆ ಅಪ್ಡೇಟ್ ಆಗುವುದನ್ನು ಖಚಿತಪಡಿಸಿಕೊಳ್ಳಿ.
ಕ್ಲೈಮ್ ನೋಂದಣಿ ಮಾಡಲು ಅಥವಾ ತಿಳಿಸಲು, ನೀವು ಸಹಾಯವಾಣಿ ನಂಬರ್ 022 6158 2020 ಗೆ ಕರೆ ಮಾಡಬಹುದು ಅಥವಾ care@hdfcergo.com ನಲ್ಲಿ ನಮ್ಮ ಗ್ರಾಹಕ ಸೇವಾ ಡೆಸ್ಕ್‌ಗೆ ಇಮೇಲ್ ಮಾಡಬಹುದು. ಕ್ಲೈಮ್ ನೋಂದಣಿಯ ನಂತರ, ನಮ್ಮ ತಂಡವು ಪ್ರತಿ ಹಂತದಲ್ಲಿ ನಿಮಗೆ ಮಾರ್ಗದರ್ಶನ ನೀಡುತ್ತದೆ ಮತ್ತು ಯಾವುದೇ ತೊಂದರೆಯಿಲ್ಲದೆ ನಿಮ್ಮ ಕ್ಲೈಮ್‌ಗಳನ್ನು ಸೆಟಲ್ ಮಾಡಲು ನಿಮಗೆ ಸಹಾಯ ಮಾಡುತ್ತದೆ. ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸಲು ಈ ಕೆಳಗಿನ ಸ್ಟ್ಯಾಂಡರ್ಡ್ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ:
- ಪಾಲಿಸಿ /ಅಂಡರ್‌ರೈಟಿಂಗ್ ಡಾಕ್ಯುಮೆಂಟ್‌ಗಳು
- ಛಾಯಾಚಿತ್ರಗಳು
- ಕ್ಲೈಮ್ ಫಾರ್ಮ್
- ಲಾಗ್ ಬುಕ್ / ಆಸ್ತಿ ನೋಂದಣಿ / ಕ್ಯಾಪಿಟಲೈಸ್ ಮಾಡಿಕೊಂಡ ವಸ್ತುಗಳ ಪಟ್ಟಿ (ಅನ್ವಯವಾಗುವಲ್ಲಿ)
- ರಸೀತಿಯೊಂದಿಗೆ ರಿಪೇರಿ / ರಿಪ್ಲೇಸ್‌ಮೆಂಟ್ ಇನ್ವಾಯ್ಸ್‌ಗಳು
- ಕ್ಲೈಮ್ ಫಾರ್ಮ್
- ಎಲ್ಲಾ ಅನ್ವಯವಾಗುವ ಮಾನ್ಯ ಪ್ರಮಾಣಪತ್ರಗಳು
- FIR ಕಾಪಿ (ಅನ್ವಯವಾದರೆ)
ಭಾರತದಲ್ಲಿ ಪ್ರಾಪರ್ಟಿ ಇನ್ಶೂರೆನ್ಸ್ ಮಾರುಕಟ್ಟೆಯು ಶೀಘ್ರದಲ್ಲೇ ಗಮನಾರ್ಹ ಹೆಚ್ಚಳವನ್ನು ಕಾಣಲು ಸಿದ್ಧವಾಗಿದೆ. 2022 ರ ಪ್ರಕಾರ, ಭಾರತದಲ್ಲಿ ಪ್ರಾಪರ್ಟಿ ಇನ್ಶೂರೆನ್ಸ್ ಪ್ರವೇಶ ದರವು 11 ಪ್ರತಿಶತವಾಗಿದೆ (ಮೂಲ: ಸ್ಟ್ಯಾಟಿಸ್ಟಾ ಮಾರ್ಕೆಟ್ ಇನ್‌ಸೈಟ್ಸ್). ಮಾರ್ಚ್ 2024 ರ ಒಳಗೆ ಒಟ್ಟು ಲಿಖಿತ ಪ್ರೀಮಿಯಂನ ರೆಕಾರ್ಡ್ ಮೊತ್ತವನ್ನು $2.98 ಬಿಲಿಯನ್‌ಗೆ ತಲುಪಿಸಲು ಯೋಜಿಸಲಾಗುತ್ತದೆ (ಮೂಲ: ಸ್ಟ್ಯಾಟಿಸ್ಟಾ ಮಾರ್ಕೆಟ್ ಇನ್‌ಸೈಟ್ಸ್). ಮಾರುಕಟ್ಟೆಯ ವಿವಿಧ ಕಂಪನಿಗಳು ಒದಗಿಸಿದ ರಕ್ಷಣಾತ್ಮಕ ಕವರ್ ಲಭ್ಯತೆಯ ಬೆಳವಣಿಗೆ ಮತ್ತು ಜಾಗೃತಿಯಿಂದಾಗಿ ಈ ವಿಭಾಗವು ಭರವಸೆಯ ಭವಿಷ್ಯವನ್ನು ಹೊಂದಿದೆ. ವಿಮಾದಾತರು ಸಾಮಾನ್ಯವಾಗಿ ಉತ್ಪನ್ನಗಳನ್ನು ರಚಿಸಲು ಪರಿಗಣಿಸುವ ಈ ವಿಭಾಗದ ವಿವಿಧ ಮಾರುಕಟ್ಟೆ ಚಾಲಿತರಾಗಿದ್ದಾರೆ:
ನೀವು ನಿಮ್ಮ ಕನಸುಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದೀರಿ, ಆದರೆ ಅದನ್ನು ಸುರಕ್ಷಿತಗೊಳಿಸುವ ವಿಷಯಕ್ಕೆ ಬಂದಾಗ, ವೆಚ್ಚಗಳು ನಿಮ್ಮನ್ನು ನಾಶಪಡಿಸುತ್ತವೆ ಎಂಬ ಸಂಗತಿ ತಿಳಿದರೆ ನೀವು ಅಚ್ಚರಿ ಪಡುತ್ತೀರಿ. ಅಂತಹ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಈ ಪ್ರಾಡಕ್ಟ್‌ಗಾಗಿ ಜಾಗೃತಿ ಮೂಡಿಸಲು IRDAI ಕೈಗೆಟುಕುವ ಪ್ರೀಮಿಯಂಗಳೊಂದಿಗೆ ಪ್ರಮಾಣಿತ ಹೋಮ್ ಇನ್ಶೂರೆನ್ಸ್ ಪಾಲಿಸಿಯನ್ನು ರಚಿಸಲು ಮಾರ್ಗದರ್ಶಿ ಸೂತ್ರಗಳನ್ನು ನೀಡಿದೆ, ಇದನ್ನು ಭಾರತ ಗೃಹ ರಕ್ಷಾ (BGR) ಪಾಲಿಸಿ ಎಂದು ಕರೆಯಲಾಗುತ್ತದೆ, ಇದು ಮುಖ್ಯವಾಗಿ ವಸತಿ ಆಸ್ತಿಗಳನ್ನು ರಕ್ಷಿಸುತ್ತದೆ. ನಿಯಂತ್ರಕ ಅವಶ್ಯಕತೆಗಳ ಅಡಿಯಲ್ಲಿ ಬರುವುದರಿಂದ, ಎಲ್ಲಾ ಕಂಪನಿಗಳು ಅದನ್ನು ಪಾಲಿಸುವುದು ಕಡ್ಡಾಯವಾಗಿದೆ.
ಪ್ರೀಮಿಯಂಗಳೊಂದಿಗೆ ಹೋಮ್ ಇನ್ಶೂರೆನ್ಸ್‌ನ ಅಪ್ಲಿಕೇಶನ್ ಮತ್ತು ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಕಠಿಣ ಪೇಪರ್‌ವರ್ಕ್ ಅಂಶವು ಸಾಮಾನ್ಯ ವ್ಯಕ್ತಿಗೆ ಮಿತಿಗೊಳಿಸುತ್ತದೆ. ಖರೀದಿಯಿಂದ ಹಿಡಿದು ಕ್ಲೈಮ್ ಸೆಟಲ್ಮೆಂಟ್‌ವರೆಗೆ ಈಗ ಎಲ್ಲಾ ವಿಮಾದಾತರ ವೆಬ್‌ಸೈಟ್‌ಗಳಲ್ಲಿ ಎಲ್ಲವೂ ಸುಲಭವಾಗಿ ಆನ್‌ಲೈನ್‌ನಲ್ಲಿ ಲಭ್ಯವಿದೆ. 24*7 ಗ್ರಾಹಕ ಸಹಾಯ ಕೇಂದ್ರದಿಂದ ಬೆಂಬಲಿತವಾದ, ಸಂಪೂರ್ಣ ಪ್ರಕ್ರಿಯೆಯು ಯಾವುದೇ ಥರ್ಡ್ ಪಾರ್ಟಿ ಏಜೆಂಟ್ ಒಳಗೊಳ್ಳುವಿಕೆಯಿಲ್ಲದೇ ಅನುಕೂಲಕರ ಮತ್ತು ಪಾರದರ್ಶಕವಾಗಿದೆ.
ಮಾರುಕಟ್ಟೆಯಲ್ಲಿನ ಅತ್ಯಂತ ಪ್ರಮುಖ ಕಂಪನಿಗಳು ಸಮಗ್ರ ಆಸ್ತಿ ಮತ್ತು ಹೋಮ್ ಇನ್ಶೂರೆನ್ಸ್ ಹೊರತುಪಡಿಸಿ ಈ ರೀತಿಯ ಪ್ರಾಡಕ್ಟ್ ಅನ್ನು ಒದಗಿಸುತ್ತಾರೆ. ಇದನ್ನು ಮನೆ ಮಾಲೀಕರು ಮತ್ತು ಬಾಡಿಗೆ ಆಸ್ತಿಗಳಲ್ಲಿ ವಾಸಿಸುವ ಬಾಡಿಗೆದಾರರು ಖರೀದಿಸಬಹುದು. ನೈಸರ್ಗಿಕ ವಿಕೋಪಗಳು ಮತ್ತು ಸಾಮಾಜಿಕ-ವಿರೋಧಿ ಚಟುವಟಿಕೆಗಳನ್ನು ಹೊರತುಪಡಿಸಿ, ಇದು ವಾಹನಗಳು ಮತ್ತು ಏರೋಪ್ಲೇನ್‌ಗಳೊಂದಿಗೆ ನೇರ ಸಂಪರ್ಕದಿಂದ ಉಂಟಾದ ಹಾನಿಯನ್ನು ಕೂಡ ಕವರ್ ಮಾಡುತ್ತದೆ, ನೀರಿನ ಟ್ಯಾಂಕ್‌ಗಳನ್ನು ಸ್ಫೋಟಿಸುವುದು ಮತ್ತು ಕಟ್ಟಡದ ಸುತ್ತಮುತ್ತಲಿನ ಪೈಪ್ ಫಿಟ್ಟಿಂಗ್‌ಗಳು, ಭೂಕುಸಿತಗಳು, ಮಿಸೈಲ್ ಟೆಸ್ಟಿಂಗ್ ಕಾರ್ಯಾಚರಣೆಗಳು ಮತ್ತು ಸ್ವಯಂಚಾಲಿತ ಸ್ಪ್ರಿಂಕ್ಲರ್ ಇನ್‌ಸ್ಟಾಲೇಶನ್‌ಗಳಿಂದಾದ ಸೋರಿಕೆಯನ್ನು ಕೂಡ ಕವರ್ ಮಾಡುತ್ತದೆ.
ನಗರಗಳಲ್ಲಿ ಹೆಚ್ಚು ಎತ್ತರದ ಮತ್ತು ಗಗನಚುಂಬಿ ಕಟ್ಟಡಗಳ ಪ್ರಬಲತೆಯಿಂದಾಗಿ, ಒಂದು ಕಾಮನ್ ಪ್ರಾಡಕ್ಟ್‌ನೊಂದಿಗೆ ಹೋಮ್ ಇನ್ಶೂರೆನ್ಸ್‌ನ ಪ್ರವೇಶದ ಸುಧಾರಿತ ಸಾಧ್ಯತೆಯು ಲಭ್ಯವಿದೆ. ಸ್ಥಳವು ನೈಸರ್ಗಿಕ ಅಪಾಯಗಳಿಗೆ ಗುರಿಯಾಗುವುದು, ಬೆಂಕಿ ರಕ್ಷಣಾ ವ್ಯವಸ್ಥೆಗಳು, ಸರಿಯಾದ ಅಲಾರಂ ಮತ್ತು ಕಣ್ಗಾವಲು ಸ್ಥಾಪನೆಗಳು ಮತ್ತು ನಿಯಮಿತ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿರುವುದು ಮುಂತಾದ ಸಂಬಂಧಿತ ಅಪಾಯಗಳನ್ನು ಮೌಲ್ಯಮಾಪನ ಮಾಡಲು ಕೆಲವು ಕಂಪನಿಗಳು ಮಾನದಂಡಗಳನ್ನು ಪ್ರಮಾಣೀಕರಿಸುವ ಮೂಲಕ ಹೌಸಿಂಗ್ ಸೊಸೈಟಿಗಳು ಮತ್ತು ಕಾಲೋನಿಗಳನ್ನು ಗುರಿಯಾಗಿಸುವ ಪಾಲಿಸಿಗಳನ್ನು ಹೊಂದಿದ್ದಾರೆ. ಒಂದು ಏಕರೂಪದ ಪಾಲಿಸಿಯು ಒಂದೇ ಸಂಕೀರ್ಣವಾದ ಅನೇಕ ನಿವಾಸಿಗಳ ಎಲ್ಲಾ ಅವಶ್ಯಕತೆಗಳನ್ನು ಪೂರೈಸಬಹುದು.
ಈ ಉದ್ಯಮದಲ್ಲಿ ವಿಮಾದಾತರು ಮತ್ತು ಮಾರುಕಟ್ಟೆಯ ಇತರ ಕಂಪನಿಗಳ ಬೆಳೆಯುತ್ತಿರುವ ಗಮನವು ಅಪಾಯ ನಿರ್ವಹಣೆ ಮತ್ತು ಪರಿಸರ ಸ್ನೇಹಿ ಮನೆಗಳ ಮೇಲೆ ಕೇಂದ್ರೀಕರಿಸಿರುತ್ತದೆ. ಸೆನ್ಸಾರ್‌ಗಳು, ಡೇಟಾ ವಿಶ್ಲೇಷಣೆ ಮತ್ತು ಕೃತಕ ಬುದ್ಧಿಮತ್ತೆಯಂತಹ ಹಲವಾರು ಸುಧಾರಿತ ಅಪಾಯ ಮೌಲ್ಯಮಾಪನ ಸಾಧನಗಳನ್ನು, ಸಂಭಾವ್ಯ ಅಪಾಯಗಳನ್ನು ಗುರುತಿಸಲು ಮತ್ತು ಗ್ರಾಹಕರಿಗೆ ಅವುಗಳನ್ನು ಉತ್ತಮ ರೀತಿಯಲ್ಲಿ ಕಡಿಮೆ ಮಾಡಲು ತಿಳಿಸಲು ಬಳಸಲಾಗುತ್ತದೆ. ಇದಲ್ಲದೆ, ಗ್ರಾಹಕರು ಈಗ ತಮ್ಮ ಕಾರ್ಬನ್ ಹೆಜ್ಜೆಗುರುತುಗಳನ್ನು ಕಡಿಮೆ ಮಾಡಲು ಪರಿಸರ-ಸ್ನೇಹಿ ಮತ್ತು ಸುಸ್ಥಿರ ಸ್ಥಳಗಳನ್ನು ಆಯ್ಕೆ ಮಾಡಲು ಸಿದ್ಧರಾಗಿದ್ದಾರೆ. ಅಂತಹ ಅನೇಕ ಪ್ರಮುಖ ವಿಮಾದಾತರು ಅಂತಹ ವಸತಿ ಸ್ಥಳಗಳನ್ನು ಕವರ್ ಮಾಡಲು ವಿಶೇಷವಾಗಿ ವಿನ್ಯಾಸಗೊಳಿಸಲಾದ ಪ್ರಾಡಕ್ಟ್‌ಗಳೊಂದಿಗೆ ಬರುತ್ತಿದ್ದಾರೆ.
ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆ ಮತ್ತು ಸಮಯವು ಇನ್ಶೂರೆನ್ಸ್ ಪೂರೈಕೆದಾರರ ಆಯ್ಕೆಯಲ್ಲಿರುವ ಪ್ರಮುಖ ಅಂಶಗಳಾಗಿವೆ. ಈ ವಿಭಾಗವು ನಿಮ್ಮ ಮತ್ತು ನಿಮ್ಮ ಕುಟುಂಬದ ಸಂಪೂರ್ಣ ವಸ್ತುಗಳನ್ನು ಅಲ್ಪಾವಧಿಯಲ್ಲಿ ಕಳೆದುಕೊಳ್ಳುವುದನ್ನು ಒಳಗೊಂಡಿರುವುದರಿಂದ, ದೀರ್ಘಾವಧಿಯ ಪರಿಣಾಮಗಳೊಂದಿಗೆ, ತ್ವರಿತ ಮತ್ತು ದಕ್ಷ ಕ್ಲೈಮ್ ಸೆಟಲ್ಮೆಂಟ್ ಪ್ರಕ್ರಿಯೆಯನ್ನು ಹೊಂದಿರದೇ ಇದ್ದರೆ ಅದು ಡೀಲ್ ಬ್ರೇಕರ್ ಆಗಿರಬಹುದು. ಇಲ್ಲಿ ಮಾರುಕಟ್ಟೆಯ ಮುಂದಾಳುಗಳು ಭಾರತದಾದ್ಯಂತ ಸರ್ವೇ ನೆಟ್ವರ್ಕ್ ಅನ್ನು ಒದಗಿಸುವ ಮೂಲಕ, 48 ಗಂಟೆಗಳಲ್ಲಿ ಸರ್ವೇಯರ್ ನೇಮಿಸಿರುತ್ತಾರೆ ಮತ್ತು ನಿಮ್ಮ ಕ್ಲೈಮ್ ಸಂಬಂಧಿತ ಸಮಸ್ಯೆಗಳನ್ನು ಉಳಿಸಿಕೊಳ್ಳಲು ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್ ಅನ್ನು ನೀಡುತ್ತಾರೆ.
ನಿಮ್ಮ ಮನೆಯ ವಸ್ತುಗಳನ್ನು ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುತ್ತದೆ. ಈ ವಸ್ತುಗಳು ಈ ಕೆಳಗಿನವುಗಳನ್ನು ಒಳಗೊಂಡಿವೆ –
● ಫರ್ನಿಚರ್ ಮತ್ತು ಫಿಕ್ಸ್ಚರ್‌ಗಳು
● ಟೆಲಿವಿಷನ್ ಸೆಟ್‌ಗಳು
● ಹೋಮ್ ಅಪ್ಲಾಯನ್ಸ್‌ಗಳು
● ಕಿಚನ್ ಅಪ್ಲಾಯನ್ಸ್‌ಗಳು
● ನೀರಿನ ಸಂಗ್ರಹಣಾ ಸಲಕರಣೆ
● ಇತರ ಹೌಸ್‌ಹೋಲ್ಡ್ ಐಟಂಗಳು
ಇದಲ್ಲದೆ, ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಜ್ಯುವೆಲರಿ, ಪೀಸ್ ಆಫ್ ಆರ್ಟ್, ಕ್ಯೂರಿಯೋ, ಸಿಲ್ವರ್‌ವೇರ್, ಪೇಂಟಿಂಗ್‌ಗಳು, ಕಾರ್ಪೆಟ್‌ಗಳು, ಪ್ರಾಚೀನ ವಸ್ತುಗಳು ಮುಂತಾದ ನಿಮ್ಮ ಮೌಲ್ಯಯುತ ವಸ್ತುಗಳನ್ನು ಇನ್ಶೂರ್ ಮಾಡಬಹುದು.
ಇಲ್ಲ, ನಿಗದಿತ ಬ್ಯಾಂಕಿನಿಂದ ಪ್ರಾಪರ್ಟಿ ಇನ್ಶೂರೆನ್ಸ್ ಖರೀದಿಸುವುದು ಕಡ್ಡಾಯವಲ್ಲ. ಸಾಮಾನ್ಯವಾಗಿ, ಹೋಮ್ ಲೋನ್‌ಗಳಿಗೆ ಅನುಮತಿ ನೀಡುವ ಬ್ಯಾಂಕ್‌ಗಳು ಹೋಮ್ ಲೋನ್‌ನೊಂದಿಗೆ ಜೋಡಿಸಲಾದ ಪ್ರಾಪರ್ಟಿ ಇನ್ಶೂರೆನ್ಸ್ ಪಾಲಿಸಿಯನ್ನು ಆಫರ್ ಮಾಡಬಹುದು. ಆದಾಗ್ಯೂ, ಮಾರುಕಟ್ಟೆಯಲ್ಲಿ ಲಭ್ಯವಿರುವ ವಿವಿಧ ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ ಮತ್ತು ನಿಮ್ಮ ಅಗತ್ಯಕ್ಕೆ ಸೂಕ್ತವಾದ ಪ್ಲಾನನ್ನು ಆಯ್ಕೆಮಾಡಿ.
ಹೋಲಿಕೆ ಮಾಡಲು ನೀವು ಕವರೇಜ್ ಪ್ರಯೋಜನಗಳು, ವಿಮಾ ಮೊತ್ತ ಮತ್ತು ವಿಧಿಸಲಾದ ಪ್ರೀಮಿಯಂಗಳನ್ನು ನೋಡಬೇಕಾಗುತ್ತದೆ. ಅತ್ಯಂತ ಸಮಗ್ರ ಕವರ್ ವ್ಯಾಪ್ತಿಯನ್ನು ಒದಗಿಸುವ ಯೋಜನೆಯನ್ನು ಆಯ್ಕೆಮಾಡಿ, ಇದರಿಂದಾಗಿ ಅತ್ಯಂತ ಸಾಧ್ಯವಾದ ಹಾನಿಗಳನ್ನು ಇನ್ಶೂರ್ಡ್ ಮಾಡಲಾಗುತ್ತದೆ. ಇದಲ್ಲದೆ, ಪ್ರೀಮಿಯಂ ಸ್ಪರ್ಧಾತ್ಮಕವಾಗಿರಬೇಕು, ಇದರಿಂದಾಗಿ ನೀವು ಉತ್ತಮ ಡೀಲ್ ಪಡೆಯುತ್ತೀರಿ.
ಹೌದು, ನೀವು ಒಂದು ಕಟ್ಟಡದಲ್ಲಿ ವಾಸಿಸುತ್ತಿದ್ದರೆ ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ನಿಮ್ಮ ಮನೆಯನ್ನು ರಕ್ಷಿಸಬಹುದು. ಪ್ರೀಮಿಯಂ ದರಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಖಂಡಿತ ಇಲ್ಲ, ಆದರೆ ನೈಸರ್ಗಿಕ ವಿಕೋಪಗಳು, ಬೆಂಕಿ ಅವಘಡ ಅಥವಾ ಕಳ್ಳತನದ ಸಂದರ್ಭದಲ್ಲಿ ನಿಮ್ಮ ಅತ್ಯಮೂಲ್ಯ ಆಸ್ತಿಯನ್ನು ರಕ್ಷಿಸಲು ಹೋಮ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಒಳ್ಳೆಯದು.
ಹೌದು. ಫರ್ನಿಚರ್, ಬೆಲೆಬಾಳುವ ವಸ್ತುಗಳು ಮತ್ತು ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್ ಮುಂತಾದ ನಿಮ್ಮ ಮನೆಯ ವಸ್ತುಗಳನ್ನು ನಾವು ಸುರಕ್ಷಿತವಾಗಿರಿಸುತ್ತೇವೆ.
ನಿಮ್ಮ ಮನೆಗೆ ರಚನಾತ್ಮಕ ಹಾನಿಯಾದ ಸಂದರ್ಭದಲ್ಲಿ ಪರ್ಯಾಯ ವಸತಿಗಾಗಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ. ಆದ್ದರಿಂದ ಪರ್ಯಾಯ ವಾಸದ ಸ್ಥಳಕ್ಕೆ ಹೋಗುವುದು, ಪ್ಯಾಕಿಂಗ್, ಬಾಡಿಗೆ ಮತ್ತು ಬ್ರೋಕರೇಜ್‌ಗಾಗಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.
ಮನೆಯ ನಿಜವಾದ ಮಾಲೀಕರ ಹೆಸರಿನಲ್ಲಿ ಆಸ್ತಿಯನ್ನು ಇನ್ಶೂರ್ ಮಾಡಿಸಬಹುದು. ಅಲ್ಲದೆ, ಮಾಲೀಕರು ಮತ್ತು ನಿಮ್ಮ ಹೆಸರಿನಲ್ಲಿ ಜಂಟಿಯಾಗಿ ಇನ್ಶೂರ್ ಮಾಡಿಸಬಹುದು.
ವೈಯಕ್ತಿಕ ವಸತಿ ನಿವೇಶನಗಳನ್ನು ಇನ್ಶೂರ್ ಮಾಡಿಸಬಹುದು. ಬಾಡಿಗೆದಾರರಾಗಿ ನಿಮ್ಮ ಮನೆಯ ವಸ್ತುಗಳನ್ನು ಕವರ್ ಮಾಡಬಹುದು.
ನಿರ್ಮಾಣಗೊಳ್ಳುತ್ತಿರುವ ಆಸ್ತಿಯನ್ನು ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ. ಹಾಗೆಯೇ, ಕಚ್ಚಾ ನಿರ್ಮಾಣವನ್ನೂ ಕವರ್ ಮಾಡಲಾಗುವುದಿಲ್ಲ.
ಡೆಬ್ರಿಸ್ ತೆಗೆದುಹಾಕಲು ವಿಮಾ ಮೊತ್ತದ 1% ವರೆಗೆ ಕ್ಲೈಮ್ ಮಾಡಬಹುದು.
ಇಲ್ಲ. ಭಾರತದಲ್ಲಿ ಪ್ರಾಪರ್ಟಿ ಇನ್ಶೂರೆನ್ಸ್ ಕಡ್ಡಾಯವಲ್ಲ. ಆದಾಗ್ಯೂ, ನಿಮ್ಮ ನಿಯಂತ್ರಣದಿಂದ ಹೊರಗಿರುವ ಯಾವುದೇ ಅನಿರೀಕ್ಷಿತ ಘಟನೆಗಳಿಂದ ಹೆಚ್ಚು ಅಗತ್ಯವಿರುವ ಕಷ್ಟಪಟ್ಟು ಗಳಿಸಿದ ಸ್ವತ್ತುಗಳನ್ನು ರಕ್ಷಿಸುವ ಏಕೈಕ ಉದ್ದೇಶಕ್ಕಾಗಿ ಪ್ರಾಪರ್ಟಿ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡಲು ಹೆಚ್ಚು ಸಲಹೆ ನೀಡಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಪ್ರಾಪರ್ಟಿ ಇನ್ಶೂರೆನ್ಸ್ ವೆಚ್ಚ ಅಥವಾ ಖರೀದಿಯ ಪ್ರೀಮಿಯಂ ಆಸ್ತಿಯ ಮೌಲ್ಯ, ಸ್ಥಳ, ಕಟ್ಟಡಗಳ ವಯಸ್ಸು ಮತ್ತು ರಚನೆ ಮತ್ತು ಪ್ರದೇಶದ ಭದ್ರತೆಯನ್ನು ಅವಲಂಬಿಸಿರುತ್ತದೆ. ಇದು ನೀವು ಆಯ್ಕೆ ಮಾಡಲು ಸಿದ್ಧರಿರುವ ಹೆಚ್ಚುವರಿ ಕವರೇಜ್‌ಗಳನ್ನು ಕೂಡ ಅವಲಂಬಿಸಿರುತ್ತದೆ.
ಪ್ರಾಪರ್ಟಿ ಇನ್ಶೂರೆನ್ಸ್‌ಗೆ ಅಪ್ಲೈ ಮಾಡಲು, ನೀವು ನಿಮ್ಮ ಮನೆ, ವಾಣಿಜ್ಯ ಸ್ಥಳ ಅಥವಾ ಭೂಮಿಯ ಕಾನೂನುಬದ್ಧ ಮಾಲೀಕತ್ವದ ಡಾಕ್ಯುಮೆಂಟರಿ ಪುರಾವೆಯನ್ನು ತೋರಿಸಬೇಕು. ನೀವು ಬಾಡಿಗೆ ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದರೆ, ನಿಮ್ಮ ವಸ್ತುಗಳು ಅಥವಾ ನಿಮ್ಮ ನಿವಾಸದ ವಸ್ತುಗಳನ್ನು ಇನ್ಶೂರ್ ಮಾಡಲು ನೀವು ಅರ್ಹರಾಗುತ್ತೀರಿ. ಪುನರಾವರ್ತಿತ ಕ್ಲೈಮ್ ಇತಿಹಾಸವು ಪ್ರಾಪರ್ಟಿ ಇನ್ಶೂರೆನ್ಸ್‌ನಲ್ಲಿ ಹೆಚ್ಚಿನ ಕವರೇಜ್ ಪಡೆಯುವ ನಿಮ್ಮ ಅರ್ಹತೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ.
ಇದನ್ನು ನಾಲ್ಕು ಸುಲಭ ಹಂತಗಳಲ್ಲಿ ಮಾಡಬಹುದು. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ. ನಂತರ, ನೀವು ಏನನ್ನು ಇನ್ಶೂರ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ: ಕಟ್ಟಡ ಅಥವಾ ಅದರ ವಸ್ತುಗಳು. ಪ್ರಸ್ತುತ ಮಾರುಕಟ್ಟೆ ಮೌಲ್ಯ, ಕಾರ್ಪೆಟ್ ಏರಿಯಾ, ಕಟ್ಟಡದ ವಯಸ್ಸು ಮುಂತಾದ ಕಟ್ಟಡ ಮತ್ತು ವಸ್ತುಗಳ ವಿವರಗಳನ್ನು ಭರ್ತಿ ಮಾಡಿ. ನಿಮಗೆ ಅಗತ್ಯವಿರುವ ವಿಮಾ ಮೊತ್ತವನ್ನು ಆಯ್ಕೆಮಾಡಿ, ಮತ್ತು ನಿಮ್ಮ ಪ್ರೀಮಿಯಂ ಅನ್ನು ನೀವು ತ್ವರಿತವಾಗಿ ತಿಳಿದುಕೊಳ್ಳುತ್ತೀರಿ. ನೀವು ಹೆಚ್ಚುವರಿ ಆಭರಣ ಅಥವಾ ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್ ಕವರ್‌ಗಳನ್ನು ಕೂಡ ಆಯ್ಕೆ ಮಾಡಬಹುದು ಮತ್ತು ಒಟ್ಟು ಪ್ರೀಮಿಯಂ ಅನ್ನು ತೋರಿಸಲು ಕೇಳಬಹುದು.
ನೀವು ನಿಮ್ಮ ಪ್ರಾಪರ್ಟಿ ಇನ್ಶೂರೆನ್ಸ್ ರದ್ದುಗೊಳಿಸಲು ನಿರ್ಧರಿಸಿದರೆ, ನಿಮ್ಮ ಪಾಲಿಸಿಯ ಅಡಿಯಲ್ಲಿ ಕವರ್ ಆಗದ ಅವಧಿಯನ್ನು ಅವಲಂಬಿಸಿ ಪ್ರೀಮಿಯಂ ಅನ್ನು ಅನುಪಾತದ ಆಧಾರದ ಮೇಲೆ ರಿಫಂಡ್ ಮಾಡಲಾಗುತ್ತದೆ. ಆರು ತಿಂಗಳ ನಂತರ ನೀವು ವಾರ್ಷಿಕ ಪಾಲಿಸಿಯನ್ನು ರದ್ದುಗೊಳಿಸಲು ಆಯ್ಕೆ ಮಾಡಿದರೆ, ನೀವು ಪಾವತಿಸಿದ ಪ್ರೀಮಿಯಂನ 50% ರಷ್ಟು ರಿಫಂಡ್‌ಗೆ ಅರ್ಹರಾಗಿರುತ್ತೀರಿ.
ಹೌದು, ಯಾವುದೇ ಸಮಯದಲ್ಲಿ ಹೋಮ್ ಇನ್ಶೂರೆನ್ಸ್ ರದ್ದತಿ ಸಾಧ್ಯವಾಗುತ್ತದೆ. ಆದಾಗ್ಯೂ, ಬಳಸದ ಮೊತ್ತವನ್ನು ಅವಲಂಬಿಸಿ ಪ್ರೀಮಿಯಂ ರಿಫಂಡ್ ಸಾಮಾನ್ಯವಾಗಿ ಅನುಪಾತದ ಪ್ರಕಾರ ಇರುತ್ತದೆ. ಕೆಲವು ಇನ್ಶೂರೆನ್ಸ್ ಕಂಪನಿಗಳು ಗಡುವು ದಿನಾಂಕಕ್ಕಿಂತ ಮೊದಲು ರದ್ದು ಮಾಡಲು ನೀವು ಆಯ್ಕೆ ಮಾಡಿದರೆ ಅಲ್ಪಾವಧಿಯ ರದ್ದತಿ ಶುಲ್ಕವನ್ನು ವಿಧಿಸಬಹುದು.
ಈಗ, ಪ್ರಾಪರ್ಟಿ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ನವೀಕರಿಸಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ನಿಮ್ಮ ಪಾಲಿಸಿ ನಂಬರ್, ನೋಂದಾಯಿತ ಮೊಬೈಲ್ ನಂಬರ್ ಅಥವಾ ಇಮೇಲ್ ID ಯೊಂದಿಗೆ ಲಾಗಿನ್ ಮಾಡಿ. ನಂತರ, ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಇತರ ಆನ್ಲೈನ್ ಪಾವತಿ ಆಯ್ಕೆಗಳ ಮೂಲಕ ಪ್ರೀಮಿಯಂ ಪಾವತಿ ಮಾಡಿ.
ನೀವು ನಿಮ್ಮ ಪಾಲಿಸಿಯನ್ನು ರದ್ದುಗೊಳಿಸಿದ ನಂತರ ಪ್ರೀಮಿಯಂ ಅನ್ನು ಅನುಪಾತದ ಆಧಾರದ ಮೇಲೆ ರಿಫಂಡ್ ಮಾಡಲಾಗುತ್ತದೆ. ಉಳಿದ ಅವಧಿ ಅಥವಾ ತಿಂಗಳ ಪ್ರೀಮಿಯಂ ಅನ್ನು ನಿಮಗೆ ಮರಳಿ ಪಾವತಿಸಲಾಗುತ್ತದೆ. ಕೆಲವೊಮ್ಮೆ, ಅಲ್ಪಾವಧಿಯ ರದ್ದತಿಗೆ ಸಣ್ಣ ಮೊತ್ತವನ್ನು ದಂಡವಾಗಿ ವಿಧಿಸಬಹುದು.
ನೀವು ಈಗ ಒಂದು ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಹೋಮ್ ಇನ್ಶೂರೆನ್ಸ್ ಖರೀದಿಸಬಹುದು. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ, ನೀವು ಏನನ್ನು ಇನ್ಶೂರ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆಮಾಡಿ. ನಂತರ, ಕಟ್ಟಡ ಅಥವಾ ಸ್ಟ್ರಕ್ಚರ್‌ನ ಅಗತ್ಯ ವಿವರಗಳನ್ನು ಭರ್ತಿ ಮಾಡಿ. ಅಂತಿಮವಾಗಿ, ಕವರೇಜ್ ಆಯ್ಕೆಮಾಡಿ, ಅದನ್ನು ರಿವ್ಯೂ ಮಾಡಿ ಮತ್ತು ಆನ್ಲೈನಿನಲ್ಲಿ ಪಾವತಿಸಿ. ಯಶಸ್ವಿ ಪಾವತಿಯ ನಂತರ, ಪಾಲಿಸಿ ಡಾಕ್ಯುಮೆಂಟನ್ನು ನಿಮ್ಮ ನೋಂದಾಯಿತ ಇಮೇಲ್ ಐಡಿಗೆ ಕಳುಹಿಸಲಾಗುತ್ತದೆ.
ಈಗ ಸಧ್ಯಕ್ಕೆ, ಎಚ್‌ಡಿಎಫ್‌ಸಿ ಎರ್ಗೋದಲ್ಲಿ 3 ಹೋಮ್ ಇನ್ಶೂರೆನ್ಸ್ ಪಾಲಿಸಿಗಳಿವೆ: ಎಚ್‌ಡಿಎಫ್‌ಸಿ ಎರ್ಗೋ-ಭಾರತ್ ಗೃಹ ರಕ್ಷಾ ಪಾಲಿಸಿ, ಹೋಮ್ ಕ್ರೆಡಿಟ್ ಅಶ್ಯೂರ್ ಮತ್ತು ಹೋಮ್ ಶೀಲ್ಡ್ ಇನ್ಶೂರೆನ್ಸ್.
ನೀವು ಸ್ಟ್ರಕ್ಚರ್, ಕಟ್ಟಡ ಅಥವಾ ಭೂಮಿಯ ಕಾನೂನುಬದ್ಧ ಮಾಲೀಕರಾಗಿರಬೇಕು. ನೀವು ಬಾಡಿಗೆದಾರರಾಗಿ ವಾಸಿಸುತ್ತಿದ್ದರೆ, ನೀವು ಕಂಟೆಂಟ್‌ಗಳು ಅಥವಾ ನಿಮ್ಮ ವಸ್ತುಗಳಿಗೆ ಇನ್ಶೂರೆನ್ಸ್ ಖರೀದಿಸಬಹುದು.
ನೀವು ಯಾವುದೇ ಇನ್ಶೂರೆನ್ಸ್ ಆಫೀಸ್‌ಗೆ ಹೋಗಬೇಕಾದ ಅಗತ್ಯವಿಲ್ಲ ಅಥವಾ ಡಾಕ್ಯುಮೆಂಟ್‌ಗಳ ಫೋಟೋಕಾಪಿಗಳನ್ನು ಸಲ್ಲಿಸಬೇಕಾಗಿಲ್ಲ ಆದ್ದರಿಂದ ಇದು ಅತ್ಯಂತ ಅನುಕೂಲಕರವಾಗಿದೆ ಮತ್ತು ಖರ್ಚು-ಕಡಿಮೆ ಮಾಡುತ್ತದೆ. ಯಾವುದೇ ಸಮಯದಲ್ಲಿ ನಿಮ್ಮ ಮನೆಯಿಂದಲೇ ಸುಲಭವಾಗಿ ಲಾಗಿನ್ ಮಾಡಿಕೊಂಡು UPI, ನೆಟ್ ಬ್ಯಾಂಕಿಂಗ್ ಮತ್ತು ಡೆಬಿಟ್ ಕಾರ್ಡ್‌ಗಳ ಮೂಲಕ ಪಾವತಿಗಳನ್ನು ಮಾಡಬಹುದು. ಅಷ್ಟೇ ಅಲ್ಲ, ಆನ್ಲೈನ್‌ನಲ್ಲಿ ಪಾಲಿಸಿಗಳನ್ನು ಖರೀದಿಸಿದರೆ ಎಚ್‌ಡಿಎಫ್‌ಸಿ ಎರ್ಗೋ ರಿಯಾಯಿತಿಗಳನ್ನು ಒದಗಿಸುತ್ತದೆ.
ಪ್ರಾಪರ್ಟಿ ಇನ್ಶೂರೆನ್ಸ್ ಸಾಮಾನ್ಯ ಕೋರ್ಸ್‌ನಲ್ಲಿ ಹಾನಿ ಮತ್ತು ದುರಸ್ತಿಯನ್ನು ಒಳಗೊಂಡಂತೆ ಯಾವುದೇ ನಿರ್ವಹಣಾ ವೆಚ್ಚಗಳನ್ನು ಕವರ್ ಮಾಡುವುದಿಲ್ಲ. ಇದಲ್ಲದೆ, ಯುದ್ಧ, ಆಕ್ರಮಣ, ಶತ್ರುತ್ವದ ಕಾರ್ಯ, ಅಥವಾ ಉದ್ದೇಶಪೂರ್ವಕ ದುರ್ನಡತೆಯಿಂದಾಗಿ ಉಂಟಾದ ನಷ್ಟ ಅಥವಾ ಹಾನಿಗಳು ಪಾಲಿಸಿಯ ಮೇಲ್ವಿಚಾರಣೆಯಲ್ಲಿ ಬರುವುದಿಲ್ಲ. ಸ್ಟ್ಯಾಂಪ್‌ಗಳು, ಬುಲಿಯನ್, ಕಲೆ ಮತ್ತು ನಾಣ್ಯಗಳು ಜೊತೆಗೆ 10 ವರ್ಷಗಳಿಗಿಂತ ಹಳೆಯ ಸಂಗ್ರಹಗಳಿಗೆ ಆಗುವ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ.
ಹೂಡಿಕೆ ಆಸ್ತಿಗೆ ಅತ್ಯುತ್ತಮ ಇನ್ಶೂರೆನ್ಸ್ ಪ್ರಾಪರ್ಟಿ ಇನ್ಶೂರೆನ್ಸ್ ಆಗಿದೆ, ಇದು ಸಾಮಾನ್ಯವಾಗಿ ಆಸ್ತಿ ಹಾನಿ, ಹೊಣೆಗಾರಿಕೆ ಮತ್ತು ಬಾಡಿಗೆ ಆದಾಯದ ನಷ್ಟವನ್ನು ಕವರ್ ಮಾಡುತ್ತದೆ. ಹೋಮ್ ಓನರ್ಸ್ ಇನ್ಶೂರೆನ್ಸ್‌ನಂತಲ್ಲದೆ, ಬಾಡಿಗೆದಾರರು ಹಾನಿಯನ್ನು ಉಂಟುಮಾಡಿದರೆ ಅಥವಾ ಪಾಲಿಸಿಯಲ್ಲಿ ನಮೂದಿಸಿದಂತೆ ಯಾವುದೇ ಘಟನೆಯಿಂದಾಗಿ ಆಸ್ತಿಯು ವಾಸಯೋಗ್ಯವಾಗಿರದಿದ್ದರೆ ಪ್ರಾಪರ್ಟಿ ಇನ್ಶೂರೆನ್ಸ್ ರಕ್ಷಣೆಯನ್ನು ಒದಗಿಸುತ್ತದೆ. ಅತ್ಯಂತ ಸಮಗ್ರ ಮತ್ತು ಸ್ಪರ್ಧಾತ್ಮಕವಾದವುಗಳಿಗಾಗಿ ನೀವು ಎಚ್‌ಡಿಎಫ್‌ಸಿ ಎರ್ಗೋದ ಪ್ರಾಪರ್ಟಿ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಪರಿಶೀಲಿಸಬಹುದು. ಅಗತ್ಯವಿದ್ದರೆ ಪ್ರವಾಹ ಅಥವಾ ಭೂಕಂಪದ ಇನ್ಶೂರೆನ್ಸ್‌ನಂತಹ ಸ್ಥಳಕ್ಕೆ ನಿರ್ದಿಷ್ಟವಾದ ಅಪಾಯಗಳನ್ನು ಪಾಲಿಸಿಯು ಕವರ್ ಮಾಡುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ. ನಿಮ್ಮ ಹೂಡಿಕೆಯನ್ನು ಸಂಪೂರ್ಣವಾಗಿ ರಕ್ಷಿಸಲು ಹೊಣೆಗಾರಿಕೆ ರಕ್ಷಣೆ ಮತ್ತು ಕಾನೂನು ವೆಚ್ಚಗಳಂತಹ ಬಾಡಿಗೆದಾರರ ಸಂಬಂಧಿತ ಸಮಸ್ಯೆಗಳಿಗೆ ನಿಮ್ಮ ಪಾಲಿಸಿಯು ಹೆಚ್ಚುವರಿ ಕವರೇಜನ್ನು ಒದಗಿಸುತ್ತದೆಯೇ ಎಂಬುದನ್ನು ಕೂಡ ಪರಿಶೀಲಿಸಿ.
ಮನೆ ಆಸ್ತಿಯಲ್ಲಿ ಹೂಡಿಕೆ ಮಾಡುವುದು ಉತ್ತಮ ಕಲ್ಪನೆಯಾಗಿರಬಹುದು, ಸಂಭಾವ್ಯ ದೀರ್ಘಾವಧಿಯ ಅನುಕೂಲ, ಬಾಡಿಗೆ ಆದಾಯ ಮತ್ತು ತೆರಿಗೆ ಪ್ರಯೋಜನಗಳನ್ನು ಒದಗಿಸುತ್ತದೆ. ರಿಯಲ್ ಎಸ್ಟೇಟ್ ಸಾಮಾನ್ಯವಾಗಿ ಸ್ಥಿರ ಆದಾಯವನ್ನು ಒದಗಿಸುತ್ತದೆ ಮತ್ತು ಕಾಲಕಾಲಕ್ಕೆ ಆಸ್ತಿ ಮೌಲ್ಯಗಳು ಹೆಚ್ಚಾಗುತ್ತವೆ. ಬಾಡಿಗೆ ಆಸ್ತಿಗಳು ಕ್ರಿಯೆ ರಹಿತ ಆದಾಯವನ್ನು ಸೃಷ್ಟಿಸುತ್ತವೆ, ಇದು ಸಂಪತ್ತು ನಿರ್ಮಾಣಕ್ಕೆ ಉತ್ತಮವಾಗಿದೆ. ಆದಾಗ್ಯೂ, ಇದಕ್ಕೆ ಗಮನಾರ್ಹ ಮುಂಗಡ ಬಂಡವಾಳ, ಚಾಲ್ತಿಯಲ್ಲಿರುವ ನಿರ್ವಹಣೆಯ ಅಗತ್ಯವಿದೆ ಮತ್ತು ಮಾರುಕಟ್ಟೆಯ ಏರಿಳಿತಗಳು ಅಥವಾ ಸ್ಥಳ-ನಿರ್ದಿಷ್ಟತೆಯ ಅಂಶಗಳಿಂದ ಪರಿಣಾಮ ಬೀರಬಹುದು. ಸ್ಥಳೀಯ ರಿಯಲ್ ಎಸ್ಟೇಟ್ ಟ್ರೆಂಡ್‌ಗಳನ್ನು ಸಂಶೋಧನೆ ಮಾಡುವುದು, ಆಸ್ತಿ ಮೌಲ್ಯದ ಬೆಳವಣಿಗೆಯನ್ನು ಮೌಲ್ಯಮಾಪನ ಮಾಡುವುದು ಮತ್ತು ಹೂಡಿಕೆ ಮಾಡುವ ಮೊದಲು ಸಂಭಾವ್ಯ ಅಪಾಯಗಳನ್ನು ಪರಿಗಣಿಸುವುದು ಮುಖ್ಯವಾಗಿದೆ. ನಿಮ್ಮ ಆಸ್ತಿಯನ್ನು ರಕ್ಷಿಸಲು ವ್ಯಾಪಕ ಶ್ರೇಣಿಯ ಸಂಭಾವ್ಯ ಅಪಾಯಗಳಿಂದ ಭದ್ರತೆಯನ್ನು ಒದಗಿಸುವ ಸಮಗ್ರ ಪ್ರಾಪರ್ಟಿ ಇನ್ಶೂರೆನ್ಸ್ ಪಡೆಯಿರಿ.