ಜ್ಞಾನ ಕೇಂದ್ರ
ಎಚ್‌ಡಿಎಫ್‌ಸಿ ಎರ್ಗೋ 1 ಲಕ್ಷ+ ನಗದುರಹಿತ ಆಸ್ಪತ್ರೆಗಳು
1 ಲಕ್ಷ+

ನಗದುರಹಿತ ಆಸ್ಪತ್ರೆಗಳು

ಎಚ್‌ಡಿಎಫ್‌ಸಿ ಎರ್ಗೋ 24x7 ಇನ್-ಹೌಸ್ ಕ್ಲೇಮ್ ಸಹಾಯ
24x7 ಇನ್-ಹೌಸ್

ಕ್ಲೇಮ್ ಸಹಾಯ

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಚೆಕಪ್ ಬೇಕಾಗುವುದಿಲ್ಲ
ಯಾವುದೇ ಹೆಲ್ತ್

ಚೆಕಪ್‌ಗಳು ಬೇಕಿಲ್ಲ

ಹೋಮ್ / ಟ್ರಾವೆಲ್ ಇನ್ಶೂರೆನ್ಸ್ / ಹಿರಿಯ ನಾಗರಿಕರಿಗೆ ಟ್ರಾವೆಲ್‌ ಇನ್ಶೂರೆನ್ಸ್

ಹಿರಿಯ ನಾಗರಿಕರು ವಿದೇಶಿ ಪ್ರಯಾಣಕ್ಕಾಗಿ ಟ್ರಾವೆಲ್ ಇನ್ಶೂರೆನ್ಸ್

ಟ್ರಾವೆಲ್ ಇನ್ಶೂರೆನ್ಸ್

ಪ್ರಯಾಣವು ನಿಮ್ಮ ವಯಸ್ಸು ಇನ್ನಷ್ಟು ಕಿರಿದಾಗಿದೆ ಎಂಬ ಭಾವನೆಯನ್ನು ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ನೆನಪಿಡಿ, ಪ್ರಯಾಣದ ಸಂತೋಷಗಳು ಸಾಟಿಯಿಲ್ಲದವುಗಳಾಗಿವೆ ಮತ್ತು ನಿಮ್ಮ ವಯಸ್ಸು, ವಿಶ್ವದ ಅದ್ಭುತಗಳನ್ನು ಅನ್ವೇಷಿಸುವುದರಿಂದ ನಿಮ್ಮನ್ನು ಎಂದಿಗೂ ನಿಲ್ಲಿಸಬಾರದು. ಹಾಗಾಗಿ, ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿರಿಸಲು, ಹಿರಿಯ ನಾಗರಿಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಪಡೆಯಿರಿ, ಇದು ವೈದ್ಯಕೀಯ ತುರ್ತುಸ್ಥಿತಿಗಳು, ಚೆಕ್-ಇನ್ ಬ್ಯಾಗೇಜ್‌ ಕಳೆದುಹೋಗುವುದು ಅಥವಾ ವಿಳಂಬ, ವಿದೇಶದಲ್ಲಿ ಕಳ್ಳತನ ಅಥವಾ ದರೋಡೆಯಂತಹ ಯಾವುದೇ ಅನಿರೀಕ್ಷಿತ ಘಟನೆಗಳಿಂದ ನಿಮ್ಮ ಬಕೆಟ್ ಲಿಸ್ಟಿನಿಂದ ನಿಮ್ಮ ತಲುಪುವ ತಾಣಗಳನ್ನು ಚೆಕ್-ಔಟ್ ಮಾಡಲು ಅಗತ್ಯವಿರುವ ಬೆಂಬಲವನ್ನು ನೀಡುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ಆಯ್ಕೆ ಮಾಡುವಾಗ, ಹಿರಿಯ ನಾಗರಿಕರಿಗೆ ವಿದೇಶಿ ಮೆಡಿಕಲ್ ಇನ್ಶೂರೆನ್ಸ್‌ಗೆ ಸಾಕಷ್ಟು ಕವರೇಜನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಆರೋಗ್ಯವು ಒಂದು ವಯಸ್ಸು ದಾಟಿದಂತೆ ಕಳಕಳಿಯ ವಿಷಯವಾಗಿರಬಹುದು. ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಲು ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಒದಗಿಸುತ್ತದೆ. ಆದ್ದರಿಂದ, ನೀವು ನಿಮ್ಮ ಆತ್ಮೀಯರನ್ನು ಭೇಟಿ ಮಾಡಲು, ಕೆಲಸ ಅಥವಾ ವಿರಾಮಕ್ಕಾಗಿ ವಿದೇಶಕ್ಕೆ ಪ್ರಯಾಣಿಸುತ್ತಿದ್ದರೆ, ಹಿರಿಯ ನಾಗರಿಕರಿಗೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅನ್ನು ತೆಗೆದುಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಿರಬೇಕು.

ಇಂದು ನೀವು ಎಲ್ಲಿಗೆ ಹೋಗಲು ಬಯಸುತ್ತೀರಿ?

ಏಷ್ಯಾ

ಏಷ್ಯಾ

ನಮ್ಮ ಟ್ರಾವೆಲ್‌ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ಒಂದಿಷ್ಟೂ ಚಿಂತೆ ಮಾಡದೆ ಏಷ್ಯಾದ ವೈವಿಧ್ಯತೆಯ ಅನುಭವ ಪಡೆದುಕೊಳ್ಳಿ. ಏಷ್ಯಾ ಖಂಡದ ಗಡಿ ಭಾಗಗಳಿಗೆ ಪ್ರವಾಸ ಕೈಗೊಂಡಾಗ, ಮೆಡಿಕಲ್ ಇನ್ಶೂರೆನ್ಸ್ ಕವರೇಜ್ ನಿಜವಾಗಿಯೂ ಪ್ರಯೋಜನಕ್ಕೆ ಬರುತ್ತದೆ.
ಷೆಂಗೆನ್ ದೇಶಗಳು

ಷೆಂಗೆನ್ ದೇಶಗಳು

ಷೆಂಗೆನ್ ವೀಸಾ ಹೊಂದಲು ಟ್ರಾವೆಲ್‌ ಇನ್ಶೂರೆನ್ಸ್ ಪಡೆಯುವುದು ಕಡ್ಡಾಯವಾಗಿದೆ ಮಾತ್ರವಲ್ಲದೆ; ನೀವು ಹೊರಟಿರುವ ದಾರಿಯ ಪ್ರತಿ ಹೆಜ್ಜೆಯಲ್ಲಿಯೂ ಕಾಯುವವರೊಬ್ಬರು ಇದ್ದಾಗ, ಇನ್ನಷ್ಟು ಅದ್ಭುತ ಜಾಗಗಳಿಗೆ ಹೋಗಿ, ಖುಷಿಯಾಗಿ ಮಜಾ ಮಾಡಬಹುದು!
ಜಗತ್ತಿನಾದ್ಯಂತ, USA ಮತ್ತು ಕೆನಡಾ ಹೊರತುಪಡಿಸಿ

ಜಗತ್ತಿನಾದ್ಯಂತ, USA ಮತ್ತು ಕೆನಡಾ ಹೊರತುಪಡಿಸಿ

ಒಂದು ದೇಶದಿಂದ ಇನ್ನೊಂದಕ್ಕೆ ನಿರಂತರವಾಗಿ ಪ್ರವಾಸ ಮಾಡುವವರಿಗೆ, ಸಮಗ್ರ ಟ್ರಾವೆಲ್‌ ಇನ್ಶೂರೆನ್ಸ್ ಪ್ಲಾನ್ ಯಾವುದೇ ತೊಂದರೆಗಳಿಲ್ಲದೆ ವಿಶ್ವದ ಯಾವುದೇ ಭಾಗಕ್ಕೆ ಪ್ರಯಾಣ ಮಾಡುವಂತಹ ಸುರಕ್ಷತೆ ಮತ್ತು ಮನಃಶಾಂತಿ ಒದಗಿಸುತ್ತದೆ.
ಜಗತ್ತಿನಾದ್ಯಂತ ಕವರೇಜ್

ಜಗತ್ತಿನಾದ್ಯಂತ ಕವರೇಜ್

ಪ್ರತಿ ವಾರ ಬೇರೆ ದೇಶದಿಂದ ಸೂರ್ಯೋದಯವನ್ನು ನೋಡುವುದು ಸುಂದರವಾಗಿದೆ, ಆದರೆ ಜಾಗತಿಕವಾಗಿ, ನೀವು ನಿಮ್ಮ ಸುರಕ್ಷತೆಗೂ ಕೂಡ ಆದ್ಯತೆ ನೀಡಬೇಕು. ನಾವು ನಿಮ್ಮನ್ನು ಮತ್ತು ನಿಮಗೆ ಪ್ರಿಯವಾದ ಎಲ್ಲವನ್ನೂ ರಕ್ಷಿಸುತ್ತಿರುವುದರಿಂದ, ಯಾವುದೇ ಭಯವಿಲ್ಲದೆ ಜಗತ್ತನ್ನು ಸುತ್ತಿ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಏನನ್ನು ಕವರ್ ಮಾಡುತ್ತದೆ?

ತುರ್ತು ವೈದ್ಯಕೀಯ ವೆಚ್ಚಗಳು

ತುರ್ತು ವೈದ್ಯಕೀಯ ವೆಚ್ಚಗಳು

ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ತುರ್ತು ದಂತ ಚಿಕಿತ್ಸೆಯ ವೆಚ್ಚಗಳ ಕವರೇಜ್

ದಂತ ಚಿಕಿತ್ಸೆಯ ವೆಚ್ಚಗಳು

ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ವೈಯಕ್ತಿಕ ಆಕ್ಸಿಡೆಂಟ್

ವೈಯಕ್ತಿಕ ಆಕ್ಸಿಡೆಂಟ್

ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.

ಪರ್ಸನಲ್ ಆಕ್ಸಿಡೆಂಟ್ : ಸಾಮಾನ್ಯ ಕ್ಯಾರಿಯರ್

ಪರ್ಸನಲ್ ಆಕ್ಸಿಡೆಂಟ್ : ಸಾಮಾನ್ಯ ಕ್ಯಾರಿಯರ್

ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ತಡವಾದ ವಿಮಾನದ ಕವರೇಜ್

ವಿಮಾನ ವಿಳಂಬ ಮತ್ತು ರದ್ದತಿ

ವಿಮಾನ ವಿಳಂಬ ಅಥವಾ ಕ್ಯಾನ್ಸಲೇಶನ್ ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಚಿಂತಿಸಬೇಡಿ, ನಮ್ಮ ವೆಚ್ಚ ತುಂಬಿಕೊಡುವಿಕೆ ಫೀಚರ್ ನಿಮಗೆ ಈ ಕಾರಣದಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.

ಪ್ರಯಾಣ ವಿಳಂಬ ಮತ್ತು ರದ್ದತಿ

ಪ್ರಯಾಣ ವಿಳಂಬ ಮತ್ತು ರದ್ದತಿ

ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ಬ್ಯಾಗ್ ಮತ್ತು ವೈಯಕ್ತಿಕ ಡಾಕ್ಯುಮೆಂಟ್‌ಗಳು ಕಳೆಯುವುದರ ವಿರುದ್ಧದ ಕವರೇಜ್

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ

ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ಪಾಸ್‌ಪೋರ್ಟ್ ಪ್ರತಿ ಮತ್ತು/ಅಥವಾ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಾವು ಮರುಪಾವತಿಸುತ್ತೇವೆ.

ಟ್ರಿಪ್ ಮೊಟಕುಗೊಳಿಸುವಿಕೆ

ಟ್ರಿಪ್ ಮೊಟಕುಗೊಳಿಸುವಿಕೆ

ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ಮರುಪಾವತಿ ಮಾಡಲಾಗದ ವಸತಿ ಸೌಲಭ್ಯ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ವೈಯಕ್ತಿಕ ಹೊಣೆಗಾರಿಕೆಯ ಕವರೇಜ್

ವೈಯಕ್ತಿಕ ಹೊಣೆಗಾರಿಕೆ

ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಟ್ರಿಪ್ ಮೊಟಕುಗೊಳಿಸುವಿಕೆ

ಇನ್ಶೂರೆನ್ಸ್ ಮಾಡಿದ ವ್ಯಕ್ತಿಗೆ ತುರ್ತು ಹೋಟೆಲ್ ವಸತಿ

ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ

ತಪ್ಪಿದ ವಿಮಾನ ಕನೆಕ್ಷನ್ ವಿಮಾನ

ತಪ್ಪಿಹೋದ ಫ್ಲೈಟ್ ಕನೆಕ್ಷನ್

ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ :

ಹೈಜಾಕ್ ಅಪಾಯದ ಭತ್ಯೆ

ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ತುರ್ತು ನಗದು ಸಹಾಯ ಸೇವೆ

ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ಚೆಕ್-ಇನ್ ಆದ ಬ್ಯಾಗ್‌ಗಳು ಕಳೆಯುವುದರ ವಿರುದ್ಧದ ಕವರೇಜ್

ಚೆಕ್-ಇನ್ ಬ್ಯಾಗೇಜ್ ನಷ್ಟ

ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ಚೆಕ್-ಇನ್ ಆದ ಬ್ಯಾಗ್‌ಗಳು ತಡವಾಗಿ ಬರುವುದಕ್ಕೆ ಕವರೇಜ್

ಚೆಕ್-ಇನ್ ಬ್ಯಾಗೇಜ್ ವಿಳಂಬ

ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ :

ಬ್ಯಾಗೇಜ್ ಮತ್ತು ಅದರ ವಸ್ತುಗಳ ಕಳ್ಳತನ

ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್ ಓದಿ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಏನನ್ನು ಕವರ್ ಮಾಡುವುದಿಲ್ಲ?

ಕಾನೂನು ಉಲ್ಲಂಘನೆ

ಕಾನೂನು ಉಲ್ಲಂಘನೆ

ಯುದ್ಧ, ಗಾಯ ಅಥವಾ ಕಾನೂನು ಉಲ್ಲಂಘನೆಯಿಂದ ಉಂಟಾದ ಯಾವುದೇ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆಗಳು.

ಮಾದಕ ವಸ್ತುಗಳ ಸೇವನೆಯನ್ನು ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ

ಮಾದಕ ಪದಾರ್ಥಗಳ ಬಳಕೆ

ನೀವು ಮಾದಕ ಅಥವಾ ನಿಷೇಧಿತ ಪದಾರ್ಥಗಳನ್ನು ಬಳಸಿದರೆ, ಯಾವುದೇ ಕ್ಲೇಮ್‌ಗಳನ್ನು ಪಾಲಿಸಿಯು ಅವಕಾಶ ನೀಡುವುದಿಲ್ಲ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ ಮೊದಲಿನಿಂದ ಇರುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ

ಮೊದಲೇ ಇದ್ದ ಕಾಯಿಲೆಗಳು

ಪ್ರಯಾಣ ಮಾಡುವ ಮೊದಲು ನೀವು ರೋಗದಿಂದ ಬಳಲುತ್ತಿದ್ದರೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ನಾವು ಅದನ್ನು ಕವರ್ ಮಾಡುವುದಿಲ್ಲ.

ಕಾಸ್ಮೆಟಿಕ್ ಮತ್ತು ಬೊಜ್ಜಿನ ಚಿಕಿತ್ಸೆಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ ಕವರ್ ಮಾಡುವುದಿಲ್ಲ

ಕಾಸ್ಮೆಟಿಕ್ ಮತ್ತು ಬೊಜ್ಜಿನ ಚಿಕಿತ್ಸೆ

ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆ ಪಡೆಯಲು ಇಚ್ಛಿಸಿದರೆ, ಪಾಲಿಸಿಯು ಅದನ್ನು ಕವರ್ ಮಾಡುವುದಿಲ್ಲ.

ತಾವಾಗಿಯೇ ಮಾಡಿಕೊಂಡ ಗಾಯಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ

ತಾವೇ ಮಾಡಿಕೊಂಡ ಗಾಯಗಳು

ನಿಮಗೆ ನೀವೇ ಹಾನಿ ಮಾಡಿಕೊಂಡರೆ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ತಲುಪಿದರೆ, ನಾವು ನಿಮಗೆ ಪಾಲಿಸಿಯಡಿ ಕವರ್ ನೀಡಲು ಸಾಧ್ಯವಿಲ್ಲ

ತಾವಾಗಿಯೇ ಮಾಡಿಕೊಂಡ ಗಾಯಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ

ಸಾಹಸ ಕ್ರೀಡೆಗಳು

ಸಾಹಸ ಕ್ರೀಡೆಯಿಂದ ಆದ ಯಾವುದೇ ಹಾನಿಯು ಪಾಲಿಸಿಯಡಿ ಕವರ್ ಆಗುವುದಿಲ್ಲ.

ಹೆಚ್ಚಾಗಿ ಭೇಟಿ ನೀಡಿದ ದೇಶಗಳಿಗೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್

ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ

ಹಿರಿಯ ನಾಗರಿಕರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು

ಪ್ರಯಾಣದ ಅವಧಿ ಮತ್ತು ಟ್ರಾವೆಲ್ ಇನ್ಶೂರೆನ್ಸ್

ಹಿರಿಯ ನಾಗರಿಕರ ಸಿಂಗಲ್ ಟ್ರಿಪ್ ಇಂಟರ್ನ್ಯಾಷನಲ್ ಇನ್ಶೂರೆನ್ಸ್

ಹೆಸರೇ ಸೂಚಿಸುವಂತೆ, ಸಿಂಗಲ್‌ ಟ್ರಿಪ್ ಇಂಟರ್‌ನ್ಯಾಷನಲ್ ಇನ್ಶೂರೆನ್ಸ್ ಒಂದೇ ಒಂದು ಸಲ ನಿರ್ದಿಷ್ಟ ವಿದೇಶಿ ಸ್ಥಳಕ್ಕೆ ಪ್ರವಾಸ ಮಾಡಲು ಬಯಸುವವರಿಗೆ ಸರಿಹೊಂದುತ್ತದೆ. ನೀವು ಜಾರ್ಜಿಯಾ ಅಥವಾ ಬಹಾಮಾಸ್‌ಗೆ ಸೋಲೋ ಬ್ಯಾಕ್‌ಪ್ಯಾಕಿಂಗ್ ಮಾಡಲು ಅಥವಾ U.S.Aಗೆ ಬಿಸಿನೆಸ್ ಕಾನ್ಫರೆನ್ಸ್‌ಗೆ ಹೋಗಲು ಬಯಸುವವರಾದರೆ, ಈ ಟ್ರಾವೆಲ್‌ ಇನ್ಶೂರೆನ್ಸ್ ನಿಮಗೆ ಸೂಕ್ತವಾಗಿದೆ. ಒಂದು ವೇಳೆ ನೀವು ಸ್ನೇಹಿತರ ಗುಂಪಿನೊಂದಿಗೆ ಅಥವಾ ಕುಟುಂಬದೊಂದಿಗೆ ಪ್ರವಾಸ ಮಾಡಲು ಬಯಸುತ್ತಿದ್ದರೆ, ಇದು ಚೆನ್ನಾಗಿ ಹೊಂದುತ್ತದೆ. ಕಾಯಿಲೆ ಬಿದ್ದಾಗ ಅಥವಾ ಆಕಸ್ಮಿಕ ಗಾಯಗಳಾದಾಗ ವೈದ್ಯಕೀಯ ಕವರ್ ನೀಡುವ ಮೂಲಕ, ಎಚ್‌ಡಿಎಫ್‌ಸಿ ಎರ್ಗೋ ಸಮಗ್ರ ಪ್ರಯೋಜನಗಳನ್ನು ಒದಗಿಸುತ್ತದೆ.


ಪ್ರಯಾಣದ ಸ್ಥಳ ಮತ್ತು ಟ್ರಾವೆಲ್ ಇನ್ಶೂರೆನ್ಸ್

ಹಿರಿಯ ನಾಗರಿಕರ ಮಲ್ಟಿ ಟ್ರಿಪ್ ಇಂಟರ್ನ್ಯಾಷನಲ್ ಇನ್ಶೂರೆನ್ಸ್

ಯಾವಾಗಲೂ ಪ್ರವಾಸ ಮಾಡಲು ಮತ್ತು ಅನೇಕ ದೇಶಗಳಿಗೆ ಹೋಗಲು ಬಯಸುವವರಿಗೆ ಅಥವಾ ವರ್ಷಕ್ಕೆ ಅನೇಕ ಬಾರಿ ಒಂದೇ ದೇಶಕ್ಕೆ ಭೇಟಿ ನೀಡಲು ಬಯಸುವವರಿಗೆ, ಈ ಇನ್ಶೂರೆನ್ಸ್ ಸೂಕ್ತವಾಗಿದೆ. ಈ ಇನ್ಶೂರೆನ್ಸ್‌ ಅನೇಕ ನವೀಕರಣಗಳ ತೊಂದರೆಯಿಂದ ನಿಮ್ಮನ್ನು ಕಾಪಾಡುತ್ತದೆ. ನೀವು ಇದನ್ನು ಇಡೀ ವರ್ಷಕ್ಕೆ ಖರೀದಿಸಬಹುದು ಮತ್ತು ಪ್ರತಿಯೊಂದು ಪ್ರವಾಸಕ್ಕೂ ಟ್ರಾವೆಲ್‌ ಇನ್ಶೂರೆನ್ಸ್ ಪಡೆಯುವ ಬಗ್ಗೆ ಚಿಂತಿಸದೆ ಪ್ರಯಾಣ ಮಾಡಬಹುದು. ಪದೇಪದೇ ವಿಮಾನ ಪ್ರಯಾಣ ಮಾಡುವವರಿಗೆ ಇದು ಉತ್ತಮವಾಗಿದೆ!


ಕವರೇಜ್ ಮೊತ್ತ ಮತ್ತು ಟ್ರಾವೆಲ್ ಇನ್ಶೂರೆನ್ಸ್

ಹಿರಿಯ ನಾಗರಿಕರ ಟ್ರಾವೆಲ್ ಮೆಡಿಕಲ್ ಇನ್ಶೂರೆನ್ಸ್

ವೈದ್ಯಕೀಯ ಅಗತ್ಯತೆಗಳಿಗೆ ಈ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿದೆ.! ಅಂತರರಾಷ್ಟ್ರೀಯ ಸ್ಥಳಗಳಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿ ಎಂದು ನಮಗೆಲ್ಲಾ ಗೊತ್ತು. ಸಣ್ಣ ಗಾಯ ಅಥವಾ ಜ್ವರದ ಚಿಕಿತ್ಸೆಯೂ ಕೂಡ ನಿಮ್ಮ ಟ್ರಿಪ್‌ ಬಜೆಟ್‌ಗೆ ಘಾಸಿ ಉಂಟುಮಾಡಬಹುದು.. ಆದ್ದರಿಂದ, ಮೆಡಿಕಲ್ ಕವರೇಜ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ನಾವು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತೇವೆ:

● ತುರ್ತು ವೈದ್ಯಕೀಯ ವೆಚ್ಚಗಳು

● ದಂತ ವೆಚ್ಚಗಳು

● ವೈಯಕ್ತಿಕ ಅಪಘಾತ

● ಆಸ್ಪತ್ರೆ ನಗದು


ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿರುವ ದೇಶಗಳ ಪಟ್ಟಿ

ಕಡ್ಡಾಯವಾಗಿ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿರುವ ಕೆಲವು ದೇಶಗಳು ಹೀಗಿವೆ: ಇದು ಅಂತಹ ದೇಶಗಳನ್ನು ಸೂಚಿಸುವ ಪಟ್ಟಿಯಷ್ಟೇ. ಹೊರಡುವ ಮೊದಲು ಪ್ರತ್ಯೇಕವಾಗಿ ಪ್ರತಿ ದೇಶದ ವೀಸಾ ಅವಶ್ಯಕತೆಯನ್ನು ಪರಿಶೀಲಿಸುವುದು ಒಳ್ಳೆಯದು.

ಮೈ:ಹೆಲ್ತ್ ಮೆಡಿಶ್ಯೂರ್ ಸೂಪರ್ ಟಾಪ್-ಅಪ್ ಪ್ಲಾನ್

ಷೆಂಗೆನ್ ದೇಶಗಳು

  • ಫ್ರಾನ್ಸ್
  • ಸ್ಪೇನ್
  • ಬೆಲ್ಜಿಯಂ
  • ಆಸ್ಟ್ರಿಯಾ
  • ಇಟಲಿ
  • ಸ್ವೀಡನ್
  • ಲಿಥುವೇನಿಯಾ
  • ಜರ್ಮನಿ
  • ನೆದರ್‌ಲ್ಯಾಂಡ್ಸ್
  • ಪೋಲೆಂಡ್
  • ಫಿನ್ಲ್ಯಾಂಡ್
  • ನಾರ್ವೆ
  • ಮಾಲ್ಟಾ
  • ಪೋರ್ಚುಗಲ್
  • ಸ್ವಿಜರ್ಲ್ಯಾಂಡ್
  • ಎಸ್ಟೋನಿಯಾ
  • ಡೆನ್ಮಾರ್ಕ್
  • ಗ್ರೀಸ್
  • ಐಸ್‌ಲ್ಯಾಂಡ್
  • ಸ್ಲೊವಾಕಿಯಾ
  • ಜೆಕಿಯಾ
  • ಹಂಗೇರಿ
  • ಲಾಟ್ವಿಯಾ
  • ಸ್ಲೊವೇನಿಯಾ
  • ಲಿಕ್ಟೆನ್‌ಸ್ಟೈನ್ ಮತ್ತು ಲಕ್ಸೆಂಬರ್ಗ್
ಮೈ:ಹೆಲ್ತ್ ಮೆಡಿಶ್ಯೂರ್ ಸೂಪರ್ ಟಾಪ್-ಅಪ್ ಪ್ಲಾನ್

ಇತರ ದೇಶಗಳು

  • ಕ್ಯೂಬಾ
  • ಈಕ್ವೆಡಾರ್
  • ಇರಾನ್
  • ಟರ್ಕಿ
  • ಮೊರಾಕೊ
  • ಥಾಯ್ಲ್ಯಾಂಡ್
  • UAE
  • ಟೋಗೊ
  • ಆಲ್ಜೀರಿಯಾ
  • ರೊಮೇನಿಯಾ
  • ಕ್ರೊಯೇಷಿಯಾ
  • ಮೊಲ್ಡೊವಾ
  • ಜಾರ್ಜಿಯಾ
  • ಅರುಬಾ
  • ಕಾಂಬೋಡಿಯ
  • ಲೆಬನಾನ್
  • ಸೇಶೆಲ್ಸ್
  • ಅಂಟಾರ್ಟಿಕಾ

ಮೂಲ: VisaGuide.World

ನಮ್ಮ ಸಂತೃಪ್ತ ಗ್ರಾಹಕರ ಅನುಭವ ಕೇಳಿ

4.4/5 ಸ್ಟಾರ್‌ಗಳು
ಶ್ರೇಣಿ

ನಮ್ಮ ಗ್ರಾಹಕರು ಸ್ಟಾರ್‌ ರೇಟಿಂಗ್‌ ನೀಡಿದ್ದಾರೆ

slider-right
ಕೋಟ್-ಐಕಾನ್‌ಗಳು
ಹೆಂಗಸಿನ-ಮುಖ
ಜಾಗೃತಿ ದಹಿಯಾ

ವಿದ್ಯಾರ್ಥಿ ಸುರಕ್ಷಾ ಸಾಗರೋತ್ತರ ಟ್ರಾವೆಲ್

10 ಸೆಪ್ಟೆಂಬರ್ 2021

ಸೇವೆಯಿಂದ ಸಂತೋಷವಾಗಿದೆ

ಕೋಟ್-ಐಕಾನ್‌ಗಳು
ಗಂಡಸಿನ-ಮುಖ
ವೈದ್ಯನಾಥನ್ ಗಣೇಶನ್

ನನ್ನ:ಸಿಂಗಲ್ ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್

05 ಜುಲೈ 2019

ಎಚ್‌ಡಿಎಫ್‌‌ಸಿ ಇನ್ಶೂರೆನ್ಸ್ ಆಯ್ಕೆ ಮಾಡುವ ಮೊದಲು, ನಾನು ಕೆಲವು ಬೇರೆಬೇರೆ ಇನ್ಶೂರೆನ್ಸ್ ಪಾಲಿಸಿಗಳನ್ನೂ ನೋಡಿದ್ದೇನೆ. ಪ್ರತಿ ತಿಂಗಳು ನನ್ನ ಕಾರ್ಡ್‌ನಿಂದ ನಿಗದಿತ ಮೊತ್ತ ಸ್ವಯಂ ಕಡಿತವಾಗುವ ಜೊತೆಗೆ, ಗಡುವು ದಿನಾಂಕದ ರಿಮೈಂಡರ್ ಸಹ ಕಳುಹಿಸಲಾಗುತ್ತದೆ. ಇವರ ಆ್ಯಪ್‌ ಬಳಸಲು ಸುಲಭವಾಗಿದ್ದು, ಬೇರೆ ಇನ್ಶೂರೆನ್ಸ್ ಕಂಪನಿಗಳಿಗೆ ಹೋಲಿಸಿದರೆ, ನನಗೆ ಉತ್ತಮ ಅನುಭವ ನೀಡುತ್ತಿದೆ.

ಕೋಟ್-ಐಕಾನ್‌ಗಳು
ಹೆಂಗಸಿನ-ಮುಖ
ಸಾಕ್ಷಿ ಅರೋರಾ

ನನ್ನ:ಸಿಂಗಲ್ ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್

05 ಜುಲೈ 2019

ಒಳ್ಳೆಯ ಅಂಶಗಳು: - ಅತ್ಯುತ್ತಮ ಬೆಲೆ: ಕಳೆದ ಮೂರು ನಾಲ್ಕು ವರ್ಷಗಳಿಂದ ಬೇರೆ ವಿಮಾದಾತರು ಕೋಟ್‌ ಮಾಡಿದ ಬೆಲೆಯು ಎಲ್ಲಾ ರೀತಿಯ ರಿಯಾಯಿತಿಗಳು ಮತ್ತು ಸದಸ್ಯತ್ವದ ಪ್ರಯೋಜನಗಳನ್ನು ಒಳಗೊಂಡ ಮೇಲೂ, 50-100% ಹೆಚ್ಚಾಗಿತ್ತು - ಅತ್ಯುತ್ತಮ ಸೇವೆ: ಬಿಲ್ಲಿಂಗ್, ಪಾವತಿ, ಡಾಕ್ಯುಮೆಂಟೇಶನ್ ಆಯ್ಕೆಗಳು ಸಿಗುತ್ತವೆ - ಅತ್ಯುತ್ತಮ ಗ್ರಾಹಕ ಸೇವೆ: ಕಾಲಕಾಲಕ್ಕೆ ಸುದ್ದಿಪತ್ರಗಳು, ಪ್ರತಿನಿಧಿಗಳಿಂದ ತ್ವರಿತ ಮತ್ತು ವೃತ್ತಿಪರ ಉತ್ತರಗಳು ಸಿಗುತ್ತವೆ. ಕೆಟ್ಟ ಅಂಶಗಳು: - ಇಲ್ಲಿಯವರೆಗೂ ಯಾವುದೂ ಇಲ್ಲ

ಸ್ಲೈಡರ್-ಎಡ

ಇತ್ತೀಚಿನ ಟ್ರಾವೆಲ್ ಇನ್ಶೂರೆನ್ಸ್ ಬ್ಲಾಗ್‌ ಗಳನ್ನು ಓದಿ

slider-right
ಟ್ರಾವೆಲ್ ಇನ್ಶೂರೆನ್ಸ್ ಹೊಂದಿರಬೇಕಾದ ನಿರ್ಣಾಯಕ ಪ್ರಯೋಜನಗಳು

ಟ್ರಾವೆಲ್ ಇನ್ಶೂರೆನ್ಸ್ ಹೊಂದಿರಬೇಕಾದ ನಿರ್ಣಾಯಕ ಪ್ರಯೋಜನಗಳು

ಇನ್ನಷ್ಟು ಓದಿ
27 ಸೆಪ್ಟೆಂಬರ್, 2023 ರಂದು ಪ್ರಕಟಿಸಲಾಗಿದೆ

ಫ್ರಾನ್ಸ್‌ನಲ್ಲಿ UPI ಬಳಸುವುದು: ಇದು ಹೇಗೆ ಕೆಲಸ ಮಾಡುತ್ತದೆ, ಶುಲ್ಕಗಳು ಮತ್ತು ಇನ್ನಷ್ಟು

ಇನ್ನಷ್ಟು ಓದಿ
27 ಸೆಪ್ಟೆಂಬರ್, 2023 ರಂದು ಪ್ರಕಟಿಸಲಾಗಿದೆ
ಭಾರತದ ಹಿರಿಯ ನಾಗರಿಕರಿಗೆ ಪಾಸ್‌ಪೋರ್ಟ್

ಭಾರತದ ಹಿರಿಯ ನಾಗರಿಕರಿಗೆ ಪಾಸ್‌ಪೋರ್ಟ್

ಇನ್ನಷ್ಟು ಓದಿ
27 ಸೆಪ್ಟೆಂಬರ್, 2023 ರಂದು ಪ್ರಕಟಿಸಲಾಗಿದೆ
ಸಾಮಾನ್ಯ ಪ್ರವಾಸಿ ವಂಚನೆಗಳು ಮತ್ತು ಅವುಗಳನ್ನು ತಪ್ಪಿಸುವುದು ಹೇಗೆ

ಸಾಮಾನ್ಯ ಪ್ರವಾಸಿ ವಂಚನೆಗಳು ಮತ್ತು ಅವುಗಳನ್ನು ತಪ್ಪಿಸುವುದು ಹೇಗೆ

ಇನ್ನಷ್ಟು ಓದಿ
26 ಸೆಪ್ಟೆಂಬರ್, 2023 ರಂದು ಪ್ರಕಟಿಸಲಾಗಿದೆ
ಸ್ಲೈಡರ್-ಎಡ

ಆಗಾಗ ಕೇಳುವ ಪ್ರಶ್ನೆಗಳು

ಎಚ್‌ಡಿಎಫ್‌ಸಿ ಎರ್ಗೋ ಹಿರಿಯ ನಾಗರಿಕರು ತೆಗೆದುಕೊಳ್ಳಬಹುದಾದ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ಒದಗಿಸುತ್ತದೆ. ಈ ಪಾಲಿಸಿಯ ಅಡಿಯಲ್ಲಿ, ಪ್ರವೇಶದ ವಯಸ್ಸು 70 ವರ್ಷಗಳವರೆಗೆ ಇರುತ್ತದೆ. ಆದಾಗ್ಯೂ, ಪ್ಲಾನನ್ನು ವೈಯಕ್ತಿಕ ಕವರೇಜ್ ಆಧಾರದ ಮೇಲೆ ಮಾತ್ರ ತೆಗೆದುಕೊಳ್ಳಬಹುದು, ಅಂದರೆ, ಕೇವಲ ಒಂದು ವ್ಯಕ್ತಿಯನ್ನು ಕವರ್ ಮಾಡುತ್ತದೆ.

ನಿಮ್ಮ ಹಿರಿಯ ನಾಗರಿಕ ಟ್ರಾವೆಲ್ ಇನ್ಶೂರೆನ್ಸ್ ಕವರೇಜ್, ಟ್ರಿಪ್ ಆರಂಭವಾದ ದಿನಾಂಕದಿಂದ ಆರಂಭವಾಗುತ್ತದೆ. ನಿಮ್ಮ ಟ್ರಿಪ್ ಮುಗಿಯುವಾಗ ಕವರೇಜ್ ಕೂಡ ಮುಗಿಯುತ್ತದೆ. ಆದಾಗ್ಯೂ, ಪ್ರಯಾಣದ ಅವಧಿಯು ಅನುಮತಿ ನೀಡಲಾದ ಕವರೇಜ್ ಅವಧಿಯ ಮಿತಿಯೊಳಗೆ ಇರಬೇಕು.

ನೀವು ವಿದೇಶದಲ್ಲಿ ಅಪಘಾತವನ್ನು ಎದುರಿಸಿದಾಗ, ನೀವು ಕಂಪನಿಗೆ ತಿಳಿಸಬೇಕು ಮತ್ತು ಕ್ಲೈಮ್ ನೋಂದಣಿ ಮಾಡಬೇಕು. ಪ್ರಕ್ರಿಯೆಯು ಈ ರೀತಿಯಾಗಿದೆ -

● ನಗದುರಹಿತ ಕ್ಲೈಮ್‌ಗಳಿಗಾಗಿ, ನೀವು ಎಚ್‌ಡಿಎಫ್‌ಸಿ ಎರ್ಗೋದ TPA ಅಲಾಯನ್ಸ್ ಗ್ಲೋಬಲ್ ಅಸಿಸ್ಟ್ ಅನ್ನು ಸಂಪರ್ಕಿಸಬೇಕಾಗುತ್ತದೆ

● ನಿಮ್ಮ ಕ್ಲೈಮ್ ಮಾಡಲು ನೀವು ಆನ್ಲೈನ್ ಕ್ಲೈಮ್ ಫಾರ್ಮ್ ಭರ್ತಿ ಮಾಡಬೇಕು

● ನಂತರ, ಭರ್ತಿ ಮಾಡಲಾದ ಕ್ಲೈಮ್ ಫಾರ್ಮ್ ಮತ್ತು ROMIF ಫಾರ್ಮ್ ಅನ್ನು TPA ಗೆ medical.services@allianz.com ರಲ್ಲಿ ಮೇಲ್ ಮಾಡಬೇಕು

● ನಂತರ, ಆಸ್ಪತ್ರೆಯು ನಗದುರಹಿತ ಸೌಲಭ್ಯವನ್ನು ಅನುಮತಿಸುತ್ತದೆಯೇ ಮತ್ತು ನಗದುರಹಿತ ಚಿಕಿತ್ಸೆಗಳನ್ನು ವ್ಯವಸ್ಥೆ ಮಾಡುತ್ತದೆಯೇ ಎಂಬುದನ್ನು TPA ಪರಿಶೀಲಿಸುತ್ತದೆ. ಪ್ರಕ್ರಿಯೆಯು ಸುಮಾರು 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ

● ಈ ಲಿಂಕ್ ಮೂಲಕ ನೀವು ವಿದೇಶದಲ್ಲಿ ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿಯನ್ನು ಕೂಡ ಪರಿಶೀಲಿಸಬಹುದು - https://www.hdfcergo.com/locators/travel-medi-assist-detail

ನೀವು +800 08250825 ಟೋಲ್-ಫ್ರೀ ನಂಬರಿಗೆ ಕೂಡ ಕರೆ ಮಾಡಬಹುದು. ನೀವು ಕರೆ ಮಾಡಿದಾಗ ನಂಬರ್‌ಗಿಂತ ಮೊದಲು ದೇಶದ ಕೋಡನ್ನು ಅಟ್ಯಾಚ್ ಮಾಡಿ.

ಇಲ್ಲ, ಅನೇಕ ದೇಶಗಳಿಗೆ ಪ್ರಯಾಣಿಸಲು ನೀವು ಒಂದು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನನ್ನು ಮಾತ್ರ ಖರೀದಿಸಬಹುದು. ಆದಾಗ್ಯೂ, ಪ್ಲಾನ್ ಖರೀದಿಸುವಾಗ, ಸರಿಯಾದ ಕವರೇಜ್ ಪಡೆಯಲು ನೀವು ಪ್ರಯಾಣಿಸುತ್ತಿರುವ ದೇಶಗಳನ್ನು ನಿರ್ದಿಷ್ಟಪಡಿಸಿ.

ಹೌದು, ಹಿರಿಯ ನಾಗರಿಕ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ಪಾಸ್‌ಪೋರ್ಟ್ ನಷ್ಟವನ್ನು ಕವರ್ ಮಾಡಲಾಗುತ್ತದೆ. ಆದಾಗ್ಯೂ, ನಿರ್ದಿಷ್ಟ ಮಿತಿಯವರೆಗೆ ಕವರೇಜನ್ನು ಅನುಮತಿಸಲಾಗುತ್ತದೆ. ಇದಲ್ಲದೆ, ನಿಮ್ಮಿಂದ ಪಾವತಿಸಲಾಗುವ ಕಡಿತ ಇರುತ್ತದೆ. ಇನ್ಶೂರೆನ್ಸ್ ಕಂಪನಿಯು ಕಡಿತಗೊಳಿಸಬಹುದಾದ ಹೆಚ್ಚುವರಿ ಕ್ಲೈಮ್ ಅನ್ನು ಪಾವತಿಸುತ್ತದೆ.

ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನನ್ನು ಡಿಜಿಟಲ್ ಫಾರ್ಮ್ಯಾಟಿನಲ್ಲಿ ಸಂಗ್ರಹಿಸಬಹುದು, ಈ ಸಂದರ್ಭದಲ್ಲಿ ನೀವು ಪಾಲಿಸಿಯನ್ನು ಕೊಂಡೊಯ್ಯಲು ಮರೆತಿದ್ದರೂ ಅದು ವಿಷಯವಾಗುವುದಿಲ್ಲ. ನೀವು ಪಾಲಿಸಿ ನಂಬರನ್ನು ನೆನಪಿಟ್ಟುಕೊಳ್ಳಬೇಕು, ಇದರಿಂದ ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಅದರ ಸಹಾಯವಾಣಿಗೆ ಕರೆ ಮಾಡುವ ಮೂಲಕ ಪಾಲಿಸಿ ವಿವರಗಳನ್ನು ಪಡೆಯಬಹುದು. ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಕೊಂಡೊಯ್ಯಲು ನೀವು ಮರೆತಿದ್ದರೂ ಕವರೇಜಿಗೆ ಅನುಮತಿ ನೀಡಲಾಗುತ್ತದೆ.

ಹಿರಿಯ ನಾಗರಿಕರು ಬೇರೆ ರಾಷ್ಟ್ರಗಳಿಗೆ ಪ್ರಯಾಣಿಸುವಾಗ ವೈದ್ಯಕೀಯ ಸಮಸ್ಯೆಗಳ ಹೆಚ್ಚಿನ ಅಪಾಯದಲ್ಲಿರುತ್ತಾರೆ. ವೈದ್ಯಕೀಯ ಗಮನದ ಅಗತ್ಯವಿರುವ ರೀತಿಯಲ್ಲಿ ಪ್ರಯಾಣದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಬಹುದು ಅಥವಾ ಗಾಯವಾಗಬಹುದು. ವಿದೇಶಗಳಲ್ಲಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುವುದು ನಿಮ್ಮ ಹಣಕಾಸಿನ ಮೇಲೆ ಒತ್ತಡವನ್ನು ಉಂಟುಮಾಡುವ ದುಬಾರಿ ಕಾರ್ಯವಾಗಿದೆ ಎಂದು ಸಾಬೀತುಪಡಿಸಬಹುದು. ಅಂತೆಯೇ, ವೈದ್ಯಕೀಯ ತುರ್ತುಸ್ಥಿತಿಯ ಹಣಕಾಸಿನ ತೊಂದರೆಗಳನ್ನು ಕವರ್ ಮಾಡಲು ಹಿರಿಯ ನಾಗರಿಕ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ಅಗತ್ಯವಿದೆ. ಈ ಪ್ಲಾನ್ ಪ್ರವಾಸದ ಸಮಯದಲ್ಲಿ ಉಂಟಾಗುವ ವೈದ್ಯಕೀಯ ತುರ್ತುಸ್ಥಿತಿಗಳನ್ನು ಕವರ್ ಮಾಡುತ್ತದೆ ಮತ್ತು ಹಣಕಾಸಿನ ಭದ್ರತೆಯನ್ನು ಒದಗಿಸುತ್ತದೆ.

ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ, ಹಿರಿಯ ನಾಗರಿಕರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು ಇವುಗಳನ್ನು ಒಳಗೊಂಡಿರುವ ಹಲವಾರು ಕವರೇಜ್ ಪ್ರಯೋಜನಗಳನ್ನು ಒದಗಿಸುತ್ತವೆ -

● ತುರ್ತು ದಂತ ಚಿಕಿತ್ಸೆಗಳು

● ಪಾಸ್‌ಪೋರ್ಟ್ ನಷ್ಟ

● ಟ್ರಿಪ್ ರದ್ದತಿ ಅಥವಾ ಮೊಟಕುಗೊಳಿಸುವಿಕೆ

● ಪರ್ಸನಲ್ ಆಕ್ಸಿಡೆಂಟ್ ಕವರ್

● ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವುದು

● ಥರ್ಡ್-ಪಾರ್ಟಿ ಕಾನೂನು ಹೊಣೆಗಾರಿಕೆ

● ಹೈಜಾಕ್ ಭತ್ಯೆ

● ಚೆಕ್-ಇನ್ ಮಾಡಲಾದ ಬ್ಯಾಗೇಜ್ ನಷ್ಟ ಅಥವಾ ವಿಳಂಬ

● ತುರ್ತುಸ್ಥಿತಿಯಲ್ಲಿ ಹಣಕಾಸಿನ ನೆರವು

ಈ ಎಲ್ಲಾ ಕವರೇಜ್ ಫೀಚರ್‌ಗಳು ನೀವು ಪ್ರಯಾಣದಲ್ಲಿ ಎದುರಿಸಬಹುದಾದ ತುರ್ತು ಪರಿಸ್ಥಿತಿಗಳನ್ನು ಕವರ್ ಮಾಡಲಾಗುತ್ತದೆ ಎಂಬುದನ್ನು ಖಚಿತಪಡಿಸುತ್ತವೆ. ಈ ತುರ್ತುಸ್ಥಿತಿಗಳಲ್ಲಿ, ನೀವು ಹಣಕಾಸಿನ ನೆರವು ಪಡೆಯುತ್ತೀರಿ.

ಇದಲ್ಲದೆ, ಹಿರಿಯ ನಾಗರಿಕ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳು ಎಲ್ಲಾ ದೇಶಗಳನ್ನು ಕವರ್ ಮಾಡುತ್ತವೆ ಮತ್ತು ಕೈಗೆಟಕುವ ದರಗಳಲ್ಲಿ ತೆಗೆದುಕೊಳ್ಳಬಹುದು.

ಹೀಗಾಗಿ, ನಿಮ್ಮ ಟ್ರಿಪ್ ಅನ್ನು ಆರ್ಥಿಕವಾಗಿ ಸುರಕ್ಷಿತಗೊಳಿಸಲು, ಹಿರಿಯ ನಾಗರಿಕ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಶಿಫಾರಸು ಮಾಡಲಾಗುತ್ತದೆ.

ಇಲ್ಲ, ಹಿರಿಯ ನಾಗರಿಕ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ಮುಂಚಿತ-ಅಸ್ತಿತ್ವದಲ್ಲಿರುವ ಷರತ್ತುಗಳನ್ನು ಕವರ್ ಮಾಡಲಾಗುವುದಿಲ್ಲ. ಮುಂಚಿತ-ಅಸ್ತಿತ್ವದಲ್ಲಿರುವ ಪರಿಸ್ಥಿತಿಗಳಿಂದ ಉಂಟಾಗುವ ವೈದ್ಯಕೀಯ ಸಮಸ್ಯೆಗಳನ್ನು ನೀವು ಎದುರಿಸಿದರೆ, ಕವರೇಜಿನ ಅನುಮತಿ ಇಲ್ಲ.

ಹೌದು, ಮುಂಚಿತ-ಅನುಮೋದನೆಯು ನಗದುರಹಿತ ಚಿಕಿತ್ಸೆಗಳನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ನೀವು ಎಚ್‌ಡಿಎಫ್‌ಸಿ ಎರ್ಗೋದ ಟಿಪಿಎ, ಅಲಾಯನ್ಸ್ ಗ್ಲೋಬಲ್ ಅಸಿಸ್ಟ್ ಅನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಕ್ಲೈಮ್ ಅನ್ನು ತಿಳಿಸಬಹುದು. 24 ಗಂಟೆಗಳ ಒಳಗೆ ಮುಂಚಿತ-ಅನುಮೋದನೆಯನ್ನು ಪಡೆಯಿರಿ ಮತ್ತು ನೀವು ನಗದುರಹಿತ ಚಿಕಿತ್ಸೆಗಳನ್ನು ಪಡೆಯಬಹುದು.

ಇಲ್ಲ, ಹಿರಿಯ ನಾಗರಿಕ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ಫ್ರೀ ಲುಕ್ ಅವಧಿ ಲಭ್ಯವಿಲ್ಲ.

ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ
ಹಾಗಾದರೆ ನೀವು ಬೇರೆ ಪ್ಲಾನ್‌ಗಳೊಂದಿಗೆ ಹೋಲಿಸಿ ನಿಮಗೆ ಹೆಚ್ಚು ಸೂಕ್ತವಾಗುವ ಪ್ಲಾನ್ ಆರಿಸಿಕೊಂಡಿರುವಿರಾ?

ಅವಾರ್ಡ್ಸ್ ಮತ್ತು ಗುರುತಿಸುವಿಕೆ

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಪ್ರಶಸ್ತಿಗಳು 2014-15

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್

iAAA ರೇಟಿಂಗ್

ISO ಪ್ರಮಾಣೀಕರಣ

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

slider-right
ಸ್ಲೈಡರ್-ಎಡ
ಎಲ್ಲಾ ಪ್ರಶಸ್ತಿಗಳನ್ನು ನೋಡಿ
ಎಚ್‌ಡಿಎಫ್‌ಸಿ ಎರ್ಗೋದಿಂದ ಆನ್ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ

ಪೂರ್ತಿಯಾಗಿ ಓದಿದಿರಾ? ಟ್ರಾವೆಲ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?