ಜ್ಞಾನ ಕೇಂದ್ರ
ಎಚ್‌ಡಿಎಫ್‌ಸಿ ಎರ್ಗೋ #1.6 ಕೋಟಿ+ ಸಂತೃಪ್ತ ಗ್ರಾಹಕರು
#1.6 ಕೋಟಿಗಳು

ಸಂತೋಷಭರಿತ ಗ್ರಾಹಕರು

ಎಚ್‌ಡಿಎಫ್‌ಸಿ ಎರ್ಗೋ 1 ಲಕ್ಷ+ ನಗದುರಹಿತ ಆಸ್ಪತ್ರೆಗಳು
1 ಲಕ್ಷ+

ನಗದುರಹಿತ ಆಸ್ಪತ್ರೆಗಳು

ಎಚ್‌ಡಿಎಫ್‌ಸಿ ಎರ್ಗೋ 24x7 ಇನ್-ಹೌಸ್ ಕ್ಲೇಮ್ ಸಹಾಯ
24x7 ಇನ್-ಹೌಸ್

ಕ್ಲೇಮ್ ಸಹಾಯ

ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಚೆಕಪ್ ಬೇಕಾಗುವುದಿಲ್ಲ
ಯಾವುದೇ ಹೆಲ್ತ್

ಚೆಕಪ್‌ಗಳು ಬೇಕಿಲ್ಲ

ಹೋಮ್ / ಟ್ರಾವೆಲ್ ಇನ್ಶೂರೆನ್ಸ್ / ಭಾರತದಿಂದ ಆನ್ಲೈನಿನಲ್ಲಿ UAE ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಿ

ಗಾಗಿ ಟ್ರಾವೆಲ್ ಇನ್ಶೂರೆನ್ಸ್ UAE

ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಆಧುನಿಕತೆ ಮತ್ತು ಸಾಂಪ್ರದಾಯಿಕತೆಯ ಸಮ್ಮಿಲನವಾಗಿದ್ದು, ತನ್ನ ಹೊಳೆಯುವ ಗಗನಚುಂಬಿ ಕಟ್ಟಡಗಳು, ಪ್ರಾಚೀನ ಕಡಲತೀರಗಳು ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯೊಂದಿಗೆ ಪ್ರಯಾಣಿಕರನ್ನು ಕೈಬೀಸಿ ಕರೆಯುತ್ತದೆ. ನೀವು ನಿಮ್ಮ UAE ಭೇಟಿಯನ್ನು ಯೋಜಿಸಿದಾಗ, ತೊಂದರೆ ರಹಿತ ಪ್ರಯಾಣಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಸುರಕ್ಷಿತಗೊಳಿಸುವುದು ಮುಖ್ಯವಾಗುತ್ತದೆ. UAE ಭೇಟಿ ವೀಸಾಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಾಗಿದೆ, ವೈದ್ಯಕೀಯ ತುರ್ತುಸ್ಥಿತಿಗಳು, ಟ್ರಿಪ್ ರದ್ದತಿಗಳು ಮತ್ತು ಬ್ಯಾಗೇಜ್ ನಷ್ಟಕ್ಕೆ ಕವರೇಜ್ ಒದಗಿಸುವುದು, ನೀವು ಉಳಿದುಕೊಳ್ಳುವಾಗ ಮನಸ್ಸಿನ ಶಾಂತಿಯನ್ನು ಖಚಿತಪಡಿಸುತ್ತದೆ.

ಈ ಕ್ರಿಯಾತ್ಮಕ ಭೂ ಪ್ರದೇಶದಲ್ಲಿ, UAE ಯಲ್ಲಿ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆಯ್ಕೆ ಮಾಡುವುದರಿಂದ ಕವರೇಜ್ ಅಗಲ, ಸ್ಪರ್ಧಾತ್ಮಕ ಪ್ರೀಮಿಯಂಗಳು ಮತ್ತು ಪ್ರಾಂಪ್ಟ್ ಕ್ಲೈಮ್ ಸೆಟಲ್ಮೆಂಟ್‌ಗಳಿಗೆ ಗಮನ ನೀಡಬೇಕು. ವೈದ್ಯಕೀಯ ಕವರೇಜ್ ಮಿತಿಗಳು ಮತ್ತು ಹೆಚ್ಚುವರಿ ಪ್ರಯೋಜನಗಳಂತಹ ಪಾಲಿಸಿ ನಿರ್ದಿಷ್ಟತೆಗಳನ್ನು ಅರ್ಥಮಾಡಿಕೊಳ್ಳುವುದು, ಪ್ರಯಾಣಿಕರಿಗೆ ತಮ್ಮ ಅವಶ್ಯಕತೆಗಳಿಗೆ ಅನುಗುಣವಾಗಿ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಲು ಅಧಿಕಾರ ನೀಡುತ್ತದೆ.

ಅನಿರೀಕ್ಷಿತ ಸಂದರ್ಭಗಳ ವಿರುದ್ಧ UAE ಭೇಟಿ ಸುರಕ್ಷತೆಗಾಗಿ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಗೆ ಆದ್ಯತೆ ನೀಡುವುದು, ಈ ರೋಮಾಂಚಕ ರಾಷ್ಟ್ರವು ನೀಡುವ ಅನುಭವಗಳನ್ನು ಸವಿಯಲು ನಿಮಗೆ ಅನುಮತಿ ನೀಡುತ್ತದೆ.

ಟ್ರಾವೆಲ್ ಇನ್ಶೂರೆನ್ಸ್ UAE ಯ ಪ್ರಮುಖ ಫೀಚರ್‌ಗಳು

ಪ್ರಮುಖ ಫೀಚರ್‌ಗಳು ವಿವರಗಳು
ವ್ಯಾಪಕ ಕವರೇಜ್ ವೈದ್ಯಕೀಯ, ಪ್ರಯಾಣ ಮತ್ತು ಬ್ಯಾಗೇಜ್ ಸಂಬಂಧಿತ ಸಮಸ್ಯೆಗಳನ್ನು ಕವರ್ ಮಾಡುತ್ತದೆ.
ನಗದುರಹಿತ ಪ್ರಯೋಜನಗಳು ಅನೇಕ ನೆಟ್ವರ್ಕ್ ಆಸ್ಪತ್ರೆಗಳ ಮೂಲಕ ನಗದುರಹಿತ ಪ್ರಯೋಜನಗಳನ್ನು ನೀಡುತ್ತದೆ.
ಕೋವಿಡ್-19 ಕವರೇಜ್ COVID-19-related ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡುತ್ತದೆ.
24x7 ಗ್ರಾಹಕ ಸಹಾಯ ದಿನವಿಡೀ ಪ್ರಾಂಪ್ಟ್ ಗ್ರಾಹಕ ಸಹಾಯ.
ತ್ವರಿತ ಕ್ಲೈಮ್ ಸೆಟಲ್ಮೆಂಟ್‌ಗಳು ವೇಗವಾದ ಕ್ಲೈಮ್ ಸೆಟಲ್ಮೆಂಟ್‌ಗಳಿಗಾಗಿ ಮೀಸಲಾದ ಕ್ಲೈಮ್‌ಗಳ ಅನುಮೋದನೆ ತಂಡ.
ವ್ಯಾಪಕ ಕವರೇಜ್ ಮೊತ್ತ ಒಟ್ಟಾರೆ ಕವರೇಜ್ ಮೊತ್ತ $40K ರಿಂದ $1000K.

UAE ಗಾಗಿ ಟ್ರಾವೆಲ್ ಇನ್ಶೂರೆನ್ಸ್ ವಿಧಗಳು

ನಿಮ್ಮ ಪ್ರಯಾಣದ ಅವಶ್ಯಕತೆಗಳಿಗೆ ಅನುಗುಣವಾಗಿ UAE ಗಾಗಿ ವಿವಿಧ ರೀತಿಯ ಟ್ರಾವೆಲ್ ಇನ್ಶೂರೆನ್ಸ್‌ಗಳಿಂದ ನೀವು ಆಯ್ಕೆ ಮಾಡಬಹುದು. ಪ್ರಮುಖ ಆಯ್ಕೆಗಳೆಂದರೆ ;

ಎಚ್‌ಡಿಎಫ್‌ಸಿ ಎರ್ಗೋದಿಂದ ವ್ಯಕ್ತಿಗಳಿಗೆ ಟ್ರಾವೆಲ್ ಪ್ಲಾನ್

ವೈಯಕ್ತಿಕ ಟ್ರಾವೆಲ್ ಪ್ಲಾನ್‌ಗಳು

ಸೋಲೋ ಅಲೆದಾಡುವವರು ಮತ್ತು ಥ್ರಿಲ್ ಬಯಸುವವರಿಗೆ

ಈ ರೀತಿಯ ಪಾಲಿಸಿಯು ತಮ್ಮ ಪ್ರಯಾಣದ ಸಮಯದಲ್ಲಿ ಎದುರಿಸಬಹುದಾದ ಆಕಸ್ಮಿಕ ಘಟನೆಗಳಿಂದ ಸೋಲೋ ಟ್ರಾವೆಲರ್‌ಗಳನ್ನು ರಕ್ಷಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ವೈಯಕ್ತಿಕ UAE ಟ್ರಾವೆಲ್ ಇನ್ಶೂರೆನ್ಸ್ ಅನ್ನು ವೈದ್ಯಕೀಯ ಮತ್ತು ವೈದ್ಯಕೀಯ ಅಲ್ಲದ ತುರ್ತುಸ್ಥಿತಿಗಳ ಸಂದರ್ಭದಲ್ಲಿ ಪ್ರಯಾಣಿಕರನ್ನು ಆರ್ಥಿಕವಾಗಿ ಕವರ್ ಮಾಡಲು ಸಾಕಷ್ಟು ಫೀಚರ್‌ಗಳು ಮತ್ತು ಪ್ರಯೋಜನಗಳೊಂದಿಗೆ ಪ್ಯಾಕ್ ಮಾಡಲಾಗಿದೆ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
ಎಚ್‌ಡಿಎಫ್‌ಸಿ ಎರ್ಗೋದಿಂದ ಕುಟುಂಬಗಳಿಗೆ ಟ್ರಾವೆಲ್ ಪ್ಲಾನ್

ಕುಟುಂಬಗಳಿಗೆ ಟ್ರಾವೆಲ್ ಪ್ಲಾನ್

ಒಟ್ಟಿಗೆ ಪ್ರಯಾಣಿಸುವ ಕುಟುಂಬಗಳಿಗೆ

ನಿಮ್ಮ ಕುಟುಂಬದೊಂದಿಗೆ ವಿದೇಶ ಪ್ರವಾಸಕ್ಕೆ ಹೋಗುವಾಗ, ನೀವು ಅವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಬಹಳಷ್ಟು ಅಂಶಗಳನ್ನು ಪರಿಗಣಿಸಬೇಕು. ಕುಟುಂಬಗಳಿಗೆ UAE ಟ್ರಾವೆಲ್ ಇನ್ಶೂರೆನ್ಸ್ ತಮ್ಮ ಪ್ರಯಾಣದ ಸಮಯದಲ್ಲಿ ಒಂದೇ ಪ್ಲಾನ್ ಅಡಿಯಲ್ಲಿ ಕುಟುಂಬದ ಅನೇಕ ಸದಸ್ಯರಿಗೆ ಕವರೇಜನ್ನು ಒದಗಿಸುತ್ತದೆ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
ಎಚ್‌ಡಿಎಫ್‌ಸಿ ಎರ್ಗೋದಿಂದ ವಿದ್ಯಾರ್ಥಿಗಳಿಗೆ ಟ್ರಾವೆಲ್ ಪ್ಲಾನ್

ವಿದ್ಯಾರ್ಥಿಗಳಿಗಾಗಿ ಟ್ರಾವೆಲ್ ಪ್ಲಾನ್

ತಮ್ಮ ಕನಸುಗಳನ್ನು ಪೂರೈಸುವ ವ್ಯಕ್ತಿಗಳಿಗೆ

ಈ ರೀತಿಯ ಪ್ಲಾನ್ ಅಧ್ಯಯನ/ಶಿಕ್ಷಣ ಸಂಬಂಧಿತ ಉದ್ದೇಶಗಳಿಗಾಗಿ UAE ಗೆ ಭೇಟಿ ನೀಡುವ ವಿದ್ಯಾರ್ಥಿಗಳಿಗೆ ಆಗಿದೆ. ಇದು ಬೈಲ್ ಬಾಂಡ್‌ಗಳು, ಕಂಪಾಶನೇಟ್ ಭೇಟಿಗಳು, ಪ್ರಾಯೋಜಕ ರಕ್ಷಣೆ ಮುಂತಾದ ಸ್ಟೇ ಸಂಬಂಧಿತ ಕವರೇಜ್‌ಗಳನ್ನು ಒಳಗೊಂಡಂತೆ ವಿವಿಧ ಆಕಸ್ಮಿಕ ಘಟನೆಗಳ ವಿರುದ್ಧ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ, ಆದ್ದರಿಂದ ವಿದೇಶದಲ್ಲಿ ನೀವು ನಿಮ್ಮ ಅಧ್ಯಯನಗಳ ಮೇಲೆ ಗಮನಹರಿಸಬಹುದು.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
ಎಚ್‌ಡಿಎಫ್‌ಸಿ ಎರ್ಗೋದಿಂದ ಮತ್ತೆ ಮತ್ತೆ ವಿಮಾನಯಾನ ಮಾಡುವವರಿಗೆ ಟ್ರಾವೆಲ್ ಪ್ಲಾನ್

ಫ್ರೀಕ್ವೆಂಟ್ ಫ್ಲೈಯರ್ ಟ್ರಾವೆಲ್ ಪ್ಲಾನ್

ಆಗಾಗ್ಗೆ ಫ್ಲೈ ಮಾಡುವವರಿಗಾಗಿ

ಈ ರೀತಿಯ ಪ್ಲಾನ್ ಅನ್ನು ಆಗಾಗ್ಗೆ ವಿಮಾನಯಾನ ಮಾಡುವವರಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದು ಒಂದು ಸಮಗ್ರ ಪಾಲಿಸಿಯ ಅಡಿಯಲ್ಲಿ ಅನೇಕ ಪ್ರಯಾಣಗಳಿಗೆ ಕವರೇಜ್ ಒದಗಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಫ್ರೀಕ್ವೆಂಟ್ ಫ್ಲೈಯರ್ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ, ನಿರ್ದಿಷ್ಟ ಪಾಲಿಸಿ ಕಾಲಾವಧಿಯೊಳಗೆ ಪ್ರತಿ ಪ್ರಯಾಣಕ್ಕೆ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ಬಗ್ಗೆ ಚಿಂತಿಸಬೇಕಾಗಿಲ್ಲ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ
ಹಿರಿಯ ನಾಗರಿಕರಿಗೆ ಟ್ರಾವೆಲ್ ಪ್ಲಾನ್

ಹಿರಿಯ ನಾಗರಿಕರಿಗೆ ಟ್ರಾವೆಲ್ ಪ್ಲಾನ್

ಚಿರ ಯುವಕರಿಗಾಗಿ

ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಸಂಭವಿಸಬಹುದಾದ ವಿವಿಧ ತೊಂದರೆಗಳ ವಿರುದ್ಧ ಹಿರಿಯ ನಾಗರಿಕರಿಗೆ ಕವರೇಜನ್ನು ಒದಗಿಸಲು ಈ ರೀತಿಯ ಯೋಜನೆಯನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. UAE ಗಾಗಿ ಎಚ್‌ಡಿಎಫ್‌ಸಿ ಎರ್ಗೋ ಹಿರಿಯ ನಾಗರಿಕ ಟ್ರಾವೆಲ್ ಇನ್ಶೂರೆನ್ಸ್ ಪ್ರಯಾಣದ ಸಮಯದಲ್ಲಿ ವೈದ್ಯಕೀಯ ಮತ್ತು ವೈದ್ಯಕೀಯ ಅಲ್ಲದ ಅನಿಶ್ಚಿತತೆಗಳ ಸಂದರ್ಭದಲ್ಲಿ ನೀವು ಕವರ್ ಆಗಿರುವುದನ್ನು ಖಚಿತಪಡಿಸುತ್ತದೆ.

ಪ್ಲಾನ್‌‌ಗಳನ್ನು ನೋಡಿ ಇನ್ನಷ್ಟು ತಿಳಿಯಿರಿ

ಟ್ರಾವೆಲ್ ಇನ್ಶೂರೆನ್ಸ್ UAE ಖರೀದಿಸುವ ಪ್ರಯೋಜನಗಳು

ಟ್ರಾವೆಲ್ ಇನ್ಶೂರೆನ್ಸ್ UAE ಪ್ಲಾನ್ ಪಡೆಯುವ ಪ್ರಯೋಜನಗಳು ಈ ಕೆಳಗಿನಂತಿವೆ:

1

ಟ್ರಿಪ್ ರದ್ಧತಿ

ಅನಿರೀಕ್ಷಿತ ಘಟನೆಗಳು ನಿಮ್ಮ ಪ್ರಯಾಣವನ್ನು ರದ್ದುಗೊಳಿಸುವಂತೆ ಅಥವಾ ವಿಳಂಬಗೊಳಿಸುವಂತೆ ಮಾಡಿದರೆ ನಿಮ್ಮ ವೆಚ್ಚಗಳನ್ನು ರಕ್ಷಿಸುತ್ತವೆ.

2

ವೈಯಕ್ತಿಕ ಹೊಣೆಗಾರಿಕೆಗೆ ಕವರೇಜ್

ನಿಮ್ಮ ಪ್ರಯಾಣದ ಸಮಯದಲ್ಲಿ ಉಂಟಾದ ಥರ್ಡ್ ಪಾರ್ಟಿ ಕ್ಲೈಮ್‌ಗಳು ಅಥವಾ ಹಾನಿಗಳ ವಿರುದ್ಧ ರಕ್ಷಣೆ ನೀಡುತ್ತದೆ.

3

ಮೆಡಿಕಲ್ ಕವರೇಜ್

ನಿಮ್ಮ UAE ಪ್ರಯಾಣದ ಸಮಯದಲ್ಲಿ ಅನಿರೀಕ್ಷಿತ ಅನಾರೋಗ್ಯಗಳು ಅಥವಾ ಗಾಯಗಳಿಗೆ ಸುರಕ್ಷಿತ ಸಹಾಯ, ಹಣಕಾಸಿನ ಹೊರೆಗಳನ್ನು ಸುಲಭಗೊಳಿಸುತ್ತದೆ.

4

ತುರ್ತು ಸಹಾಯ

ವೈದ್ಯಕೀಯ ಸ್ಥಳಾಂತರ ಸೇರಿದಂತೆ ತುರ್ತು ಪರಿಸ್ಥಿತಿಗಳಿಗೆ 24/7 ಬೆಂಬಲವನ್ನು ಅಕ್ಸೆಸ್ ಮಾಡಿ, ತ್ವರಿತ ಸಹಾಯವನ್ನು ಖಚಿತಪಡಿಸಿಕೊಳ್ಳಿ.

5

ಬ್ಯಾಗೇಜ್ ರಕ್ಷಣೆ

ಕಳೆದುಹೋದ, ಕಳ್ಳತನವಾದ ಅಥವಾ ಹಾನಿಗೊಳಗಾದ ಲಗೇಜ್‌ಗೆ ಮರುಪಾವತಿಯು ಚಿಂತೆ-ಮುಕ್ತ ಪ್ರಯಾಣದ ಅನುಭವವನ್ನು ಖಚಿತಪಡಿಸುತ್ತದೆ.

6

ಹೆಚ್ಚುವರಿ ಲಾಭಗಳು

ವಿಮಾನ ವಿಳಂಬದ ಪರಿಹಾರ ಮತ್ತು ಸಾಹಸ ಚಟುವಟಿಕೆಗಳಿಗೆ ಕವರೇಜ್‌ನಂತಹ ಹೆಚ್ಚುವರಿ ಲಾಭಗಳನ್ನು ಆನಂದಿಸಿ, ನಿಮ್ಮ ಪ್ರಯಾಣದ ಭದ್ರತೆಯನ್ನು ಹೆಚ್ಚಿಸಿ.

ನಿಮ್ಮ UAE ಟ್ರಿಪ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಹುಡುಕುತ್ತಿದ್ದೀರಾ? ಮುಂದೆ ನೋಡಬೇಕಾಗಿಲ್ಲ.

ಭಾರತದಿಂದ UAE ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನನ್ನು ಕವರ್ ಮಾಡಲಾಗುತ್ತದೆ

ಭಾರತದ UAE ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಸಾಮಾನ್ಯವಾಗಿ ಕವರ್ ಆಗುವ ಕೆಲವು ವಿಷಯಗಳು ಇಲ್ಲಿವೆ ;

ತುರ್ತು ವೈದ್ಯಕೀಯ ವೆಚ್ಚಗಳು

ತುರ್ತು ವೈದ್ಯಕೀಯ ವೆಚ್ಚಗಳು

ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ತುರ್ತು ದಂತ ಚಿಕಿತ್ಸೆಯ ವೆಚ್ಚಗಳ ಕವರೇಜ್

ದಂತ ಚಿಕಿತ್ಸೆಯ ವೆಚ್ಚಗಳು

ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ವೈಯಕ್ತಿಕ ಆಕ್ಸಿಡೆಂಟ್

ವೈಯಕ್ತಿಕ ಆಕ್ಸಿಡೆಂಟ್

ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.

ಪರ್ಸನಲ್ ಆಕ್ಸಿಡೆಂಟ್ : ಸಾಮಾನ್ಯ ಕ್ಯಾರಿಯರ್

ಪರ್ಸನಲ್ ಆಕ್ಸಿಡೆಂಟ್ : ಸಾಮಾನ್ಯ ಕ್ಯಾರಿಯರ್

ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ತಡವಾದ ವಿಮಾನದ ಕವರೇಜ್

ವಿಮಾನ ವಿಳಂಬ ಮತ್ತು ರದ್ದತಿ

ವಿಮಾನ ವಿಳಂಬ ಅಥವಾ ಕ್ಯಾನ್ಸಲೇಶನ್ ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಚಿಂತಿಸಬೇಡಿ, ನಮ್ಮ ವೆಚ್ಚ ತುಂಬಿಕೊಡುವಿಕೆ ಫೀಚರ್ ನಿಮಗೆ ಈ ಕಾರಣದಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.

ಪ್ರಯಾಣ ವಿಳಂಬ ಮತ್ತು ರದ್ದತಿ

ಪ್ರಯಾಣ ವಿಳಂಬ ಮತ್ತು ರದ್ದತಿ

ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ಬ್ಯಾಗ್ ಮತ್ತು ವೈಯಕ್ತಿಕ ಡಾಕ್ಯುಮೆಂಟ್‌ಗಳು ಕಳೆಯುವುದರ ವಿರುದ್ಧದ ಕವರೇಜ್

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ

ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ಪಾಸ್‌ಪೋರ್ಟ್ ಪ್ರತಿ ಮತ್ತು/ಅಥವಾ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಾವು ಮರುಪಾವತಿಸುತ್ತೇವೆ.

ಟ್ರಿಪ್ ಮೊಟಕುಗೊಳಿಸುವಿಕೆ

ಟ್ರಿಪ್ ಮೊಟಕುಗೊಳಿಸುವಿಕೆ

ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ಮರುಪಾವತಿ ಮಾಡಲಾಗದ ವಸತಿ ಸೌಲಭ್ಯ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ವೈಯಕ್ತಿಕ ಹೊಣೆಗಾರಿಕೆಯ ಕವರೇಜ್

ವೈಯಕ್ತಿಕ ಹೊಣೆಗಾರಿಕೆ

ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಟ್ರಿಪ್ ಮೊಟಕುಗೊಳಿಸುವಿಕೆ

ಇನ್ಶೂರೆನ್ಸ್ ಮಾಡಿದ ವ್ಯಕ್ತಿಗೆ ತುರ್ತು ಹೋಟೆಲ್ ವಸತಿ

ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ

ತಪ್ಪಿದ ವಿಮಾನ ಕನೆಕ್ಷನ್ ವಿಮಾನ

ತಪ್ಪಿಹೋದ ಫ್ಲೈಟ್ ಕನೆಕ್ಷನ್

ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ :

ಹೈಜಾಕ್ ಅಪಾಯದ ಭತ್ಯೆ

ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.

ಆಸ್ಪತ್ರೆ ನಗದು - ಆಕ್ಸಿಡೆಂಟ್ ಮತ್ತು ಅನಾರೋಗ್ಯ

ತುರ್ತು ನಗದು ಸಹಾಯ ಸೇವೆ

ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ಚೆಕ್-ಇನ್ ಆದ ಬ್ಯಾಗ್‌ಗಳು ಕಳೆಯುವುದರ ವಿರುದ್ಧದ ಕವರೇಜ್

ಚೆಕ್-ಇನ್ ಬ್ಯಾಗೇಜ್ ನಷ್ಟ

ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ನಿಂದ ಚೆಕ್-ಇನ್ ಆದ ಬ್ಯಾಗ್‌ಗಳು ತಡವಾಗಿ ಬರುವುದಕ್ಕೆ ಕವರೇಜ್

ಚೆಕ್-ಇನ್ ಬ್ಯಾಗೇಜ್ ವಿಳಂಬ

ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.

ಪಾಸ್‌ಪೋರ್ಟ್ ಮತ್ತು ಅಂತರರಾಷ್ಟ್ರೀಯ ಚಾಲನಾ ಪರವಾನಗಿಯ ನಷ್ಟ :

ಬ್ಯಾಗೇಜ್ ಮತ್ತು ಅದರ ವಸ್ತುಗಳ ಕಳ್ಳತನ

ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್ ಓದಿ.

ಭಾರತದಿಂದ UAE ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಏನನ್ನು ಕವರ್ ಮಾಡಲಾಗುವುದಿಲ್ಲ

ಭಾರತದ UAE ಗಾಗಿನ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್, ಇವುಗಳಿಗೆ ಕವರೇಜ್ ಒದಗಿಸದೇ ಇರಬಹುದು ;

ಕಾನೂನು ಉಲ್ಲಂಘನೆ

ಕಾನೂನು ಉಲ್ಲಂಘನೆ

ಯುದ್ಧ ಅಥವಾ ಕಾನೂನಿನ ಉಲ್ಲಂಘನೆಯಿಂದಾಗಿ ಉಂಟಾದ ಅಸ್ವಸ್ಥತೆ ಅಥವಾ ಆರೋಗ್ಯ ಸಮಸ್ಯೆಗಳನ್ನು ಪ್ಲಾನ್ ಕವರ್ ಮಾಡುವುದಿಲ್ಲ.

ಮಾದಕ ವಸ್ತುಗಳ ಸೇವನೆಯನ್ನು ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ

ಮಾದಕ ಪದಾರ್ಥಗಳ ಬಳಕೆ

ಯಾವುದೇ ಪ್ರಕಾರದ ಅಮಲಿನ ಪದಾರ್ಥಗಳು ಅಥವಾ ನಿಷೇಧಿತ ಪದಾರ್ಥಗಳನ್ನು ಸೇವಿಸಿದರೆ, ಪಾಲಿಸಿಯು ಯಾವುದೇ ಕ್ಲೇಮ್‌ಗಳನ್ನು ಸ್ವೀಕರಿಸುವುದಿಲ್ಲ.

ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ ಮೊದಲಿನಿಂದ ಇರುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ

ಮೊದಲೇ ಇದ್ದ ಕಾಯಿಲೆಗಳು

ಇನ್ಶೂರ್ಡ್ ಪ್ರಯಾಣ ಕೈಗೊಳ್ಳುವ ಮೊದಲು ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೆ ಹಾಗೂ ಹಾಗೆ ಮೊದಲೇ ಇದ್ದ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆದಿದ್ದರೆ, ಆ ಖರ್ಚುಗಳನ್ನು ಪಾಲಿಸಿ ಕವರ್ ಮಾಡುವುದಿಲ್ಲ.

ಕಾಸ್ಮೆಟಿಕ್ ಮತ್ತು ಬೊಜ್ಜಿನ ಚಿಕಿತ್ಸೆಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್‌ ಕವರ್ ಮಾಡುವುದಿಲ್ಲ

ಕಾಸ್ಮೆಟಿಕ್ ಮತ್ತು ಬೊಜ್ಜಿನ ಚಿಕಿತ್ಸೆ

ಇನ್ಶೂರ್ಡ್ ಪ್ರಯಾಣದ ಸಮಯದಲ್ಲಿ ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆ ಮಾಡಿಸಿಕೊಳ್ಳುವ ಆಯ್ಕೆ ಮಾಡಿದರೆ, ಅದರ ಖರ್ಚುಗಳು ಕವರ್ ಆಗುವುದಿಲ್ಲ.

ತಾವಾಗಿಯೇ ಮಾಡಿಕೊಂಡ ಗಾಯಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ

ತಾವೇ ಮಾಡಿಕೊಂಡ ಗಾಯಗಳು

ತಾವಾಗಿಯೇ ಮಾಡಿಕೊಂಡ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾದರೆ, ಆ ವೈದ್ಯಕೀಯ ಖರ್ಚುಗಳನ್ನು ನಮ್ಮ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಕವರ್ ಮಾಡುವುದಿಲ್ಲ.

UAE ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನಿನಲ್ಲಿ ಖರೀದಿಸುವುದು ಹೇಗೆ?

• ನಮ್ಮ ಪಾಲಿಸಿಯನ್ನು ಖರೀದಿಸಲು ಇಲ್ಲಿ ಲಿಂಕ್ ಕ್ಲಿಕ್ ಮಾಡಿ, ಅಥವಾ ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ವೆಬ್‌ಪೇಜಿಗೆ ಭೇಟಿ ನೀಡಿ.

• ಪ್ರಯಾಣಿಕರ ವಿವರಗಳು, ತಲುಪುವ ಮಾಹಿತಿ ಮತ್ತು ಪ್ರಯಾಣದ ಆರಂಭ ಮತ್ತು ಕೊನೆಯ ದಿನಾಂಕಗಳನ್ನು ನಮೂದಿಸಿ.

• ನಮ್ಮ ಮೂರು ರೂಪಿಸಲಾದ ಆಯ್ಕೆಗಳಿಂದ ನಿಮ್ಮ ಆದ್ಯತೆಯ ಪ್ಲಾನ್ ಅನ್ನು ಆಯ್ಕೆಮಾಡಿ.

• ನಿಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಿ.

• ಪ್ರಯಾಣಿಕರ ಬಗ್ಗೆ ಹೆಚ್ಚುವರಿ ವಿವರಗಳನ್ನು ಭರ್ತಿ ಮಾಡಿ ಮತ್ತು ಆನ್ಲೈನ್ ಪಾವತಿ ವಿಧಾನಗಳನ್ನು ಬಳಸಿ ಪಾವತಿಸಲು ಮುಂದುವರಿಯಿರಿ.

• ಅದನ್ನು ಮಾಡಲು ಉಳಿದಿರುವುದು ಏನೆಂದರೆ- ನಿಮ್ಮ ಪಾಲಿಸಿಯನ್ನು ತಕ್ಷಣವೇ ಡೌನ್ಲೋಡ್ ಮಾಡಿ!

ವಿದೇಶದಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳಿಗೆ ನಿಮ್ಮ ಪ್ರಯಾಣದ ಬಜೆಟ್‌ನಲ್ಲಿ ಕತ್ತರಿ ಹಾಕಲು ಬಿಡಬೇಡಿ. ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ತುರ್ತು ವೈದ್ಯಕೀಯ ಮತ್ತು ದಂತ ವೆಚ್ಚಗಳ ವಿರುದ್ಧ ನಿಮ್ಮನ್ನು ಆರ್ಥಿಕವಾಗಿ ಕವರ್ ಮಾಡಿಕೊಳ್ಳಿ.

UAE ಬಗ್ಗೆ ಆಸಕ್ತಿದಾಯಕ ಸಂಗತಿಗಳು

UAE ಗೆ ಪ್ರಯಾಣಿಸುವಾಗ ನೀವು ತಪ್ಪಿಸಿಕೊಳ್ಳಲಾಗದ ಕೆಲವು ಆಸಕ್ತಿದಾಯಕ ಅಂಶಗಳು ಇಲ್ಲಿವೆ.

ಕೆಟಗರಿಗಳು ನಿರ್ದಿಷ್ಟ ವಿವರಣೆ
ಮಾನವ ನಿರ್ಮಿತ ದ್ವೀಪಪಾಮ್ ಜುಮೇರಾ, ಒಂದು ಸಾಂಪ್ರದಾಯಿಕ ಕೃತಕ ದ್ವೀಪಸಮೂಹ, ಐಷಾರಾಮಿ ರೆಸಾರ್ಟ್‌ಗಳು ಮತ್ತು ವಸತಿ ಆಸ್ತಿಗಳನ್ನು ಪ್ರದರ್ಶಿಸುತ್ತದೆ.
ಎತ್ತರದ ಕಟ್ಟಡ ಬುರ್ಜ್ ಖಲೀಫಾ 828 ಮೀಟರ್‌ಗಳಷ್ಟು ಎತ್ತರವಿದ್ದು, ವಿಶ್ವದ ಅತ್ಯಂತ ಎತ್ತರವಾದ ಕಟ್ಟಡವಾಗಿದೆ.
ವರ್ಷಪೂರ್ತಿ ಸನ್‌ಶೈನ್ವರ್ಷವಿಡೀ ಶಾಶ್ವತವಾದ ಸೂರ್ಯನ ಬೆಳಕನ್ನು ಆನಂದಿಸಿ, ಇದು ಸೂರ್ಯನನ್ನು ನೋಡುವವರಿಗೆ ಸೂಕ್ತವಾದ ತಾಣವಾಗಿದೆ.
ಸಾಂಸ್ಕೃತಿಕ ವೈವಿಧ್ಯತೆUAE 200 ಕ್ಕೂ ಹೆಚ್ಚು ರಾಷ್ಟ್ರೀಯತೆಯನ್ನು ಹೊಂದಿರುವ ವೈವಿಧ್ಯಮಯ ಜನಸಂಖ್ಯೆಯನ್ನು ಹೊಂದಿದೆ.
ಪೊಲೀಸ್ ಫ್ಲೀಟ್ ದುಬೈನ ಪೊಲೀಸ್ ಪಡೆಯು ಲ್ಯಾಂಬೋರ್ಗಿನಿ ಮತ್ತು ಫೆರಾರಿಯಂತಹ ಐಷಾರಾಮಿ ಕಾರುಗಳನ್ನು ಒಳಗೊಂಡಿದ್ದು, ಸ್ಟೈಲ್ ಜೊತೆಗೆ ಕಾನೂನು ಪರಿಪಾಲನೆಯು ಜರುಗುತ್ತದೆ.
ಶೂನ್ಯ ಆದಾಯ ತೆರಿಗೆ ನಿವಾಸಿಗಳು ಶೂನ್ಯ ಆದಾಯ ತೆರಿಗೆಯ ಪ್ರಯೋಜನವನ್ನು ಆನಂದಿಸುತ್ತಾರೆ, ಇದು ಪ್ರವಾಸಿಗಳಿಗೆ ರಾಷ್ಟ್ರದ ನೇರವಾಗಿ ಕೊಡುಗೆ ನೀಡುತ್ತದೆ.

UAE ಪ್ರವಾಸಿ ವೀಸಾಕ್ಕೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು

UAE ಗೆ ಪ್ರಯಾಣಿಸಲು ನಿಮಗೆ ಪ್ರವಾಸಿ ವೀಸಾ ಅಗತ್ಯವಿದೆ. ನಿಮ್ಮ UAE ಪ್ರವಾಸಿ ವೀಸಾಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳು ಈ ಕೆಳಗಿನಂತಿವೆ:

• ನಿಮಗೆ ಸರಿಯಾದ ಪಾಸ್‌ಪೋರ್ಟ್ ಅಗತ್ಯವಿರುತ್ತದೆ (ಕನಿಷ್ಠ 6 ತಿಂಗಳ ಮಾನ್ಯತೆ).

• ಪೂರ್ಣಗೊಂಡ ಮತ್ತು ಸಹಿ ಮಾಡಲಾದ ದುಬೈ ವೀಸಾ ಅಪ್ಲಿಕೇಶನ್.

• ಪಾಸ್‌ಪೋರ್ಟ್ ಗಾತ್ರದ ಫೋಟೋಗಳು.

• ನಿಮ್ಮ ಟೂರ್ ಟಿಕೆಟ್‌ನ ಪ್ರತಿ.

• ನಿಮ್ಮ ವಾಸದ ವಿವರವಾದ ಮಾರ್ಗದರ್ಶಕ

• ನಿಮ್ಮ ಪ್ರಯಾಣದ ಕಾರ್ಯಕ್ರಮವನ್ನು ವಿವರಿಸುವ ಸಮಗ್ರ ಕವರ್ ಪತ್ರ.

• ಹೋಟೆಲ್ ಮತ್ತು ವಿಮಾನದ ಬುಕಿಂಗ್‌ಗಳ ಪುರಾವೆ.

• ವಿಳಾಸ ಪರಿಶೀಲನೆ.

• ದುಬೈನಲ್ಲಿ ಸ್ನೇಹಿತರು/ ಸಂಬಂಧಿಕರು ಹೋಸ್ಟ್ ಮಾಡಿದ್ದರೆ ಪ್ರಾಯೋಜಕರ ಪತ್ರ.

• ಸಾಕಷ್ಟು ಹಣಕಾಸು ಹೊಂದಿರುವುದನ್ನು ಸಾಬೀತುಪಡಿಸುವ ಬ್ಯಾಂಕ್ ಸ್ಟೇಟ್ಮೆಂಟ್ (ಕಳೆದ 6 ತಿಂಗಳು).

UAE ಗೆ ಭೇಟಿ ನೀಡಲು ಉತ್ತಮ ಸಮಯ

UAE ಗೆ ಭೇಟಿ ನೀಡಲು ಸೂಕ್ತ ಸಮಯವು ವೈಯಕ್ತಿಕ ಆದ್ಯತೆಗಳು ಮತ್ತು ಬಯಸಿದ ಅನುಭವಗಳನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಹವಾಮಾನವನ್ನು ಪರಿಗಣಿಸಿ, ಸಾಮಾನ್ಯವಾಗಿ ನವೆಂಬರ್ ಮತ್ತು ಮಾರ್ಚ್ ನಡುವೆ ಉತ್ತಮ ಸಮಯವಿರುತ್ತದೆ. ಈ ತಿಂಗಳುಗಳು ಸೌಮ್ಯ ತಾಪಮಾನಗಳನ್ನು ನೀಡುತ್ತವೆ, ಹೊರಾಂಗಣ ಚಟುವಟಿಕೆಗಳನ್ನು ಮತ್ತು ಅನ್ವೇಷಣೆಯನ್ನು ಹೆಚ್ಚು ಆನಂದಿಸಬಹುದು.

ಈ ಅವಧಿಯಲ್ಲಿ, ದಿನದ ಸಮಯದ ತಾಪಮಾನಗಳು ಸರಾಸರಿ 25-30°C (77-86°F) ಆಗಿದ್ದು, ಐಕಾನಿಕ್ ಲ್ಯಾಂಡ್‌ಮಾರ್ಕ್‌ಗಳನ್ನು ಅನ್ವೇಷಿಸಲು, ಮರುಭೂಮಿ ಸಫಾರಿಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಹೊರಾಂಗಣ ಸಾಹಸಗಳನ್ನು ಆನಂದಿಸಲು ಸೂಕ್ತ ಪರಿಸ್ಥಿತಿಗಳನ್ನು ಸೃಷ್ಟಿಸುತ್ತವೆ. ಇದಲ್ಲದೆ, ಈ ಕಾಲಾವಧಿಯು ದುಬೈ ಶಾಪಿಂಗ್ ಉತ್ಸವ ಮತ್ತು ಅಬು ಧಾಬಿ ಉತ್ಸವವನ್ನು ಒಳಗೊಂಡಂತೆ ಹಲವಾರು ಸಾಂಸ್ಕೃತಿಕ ಉತ್ಸವಗಳೊಂದಿಗೆ ಹೊಂದಿಕೊಳ್ಳುತ್ತದೆ, ಭೇಟಿ ನೀಡುವವರ ಅನುಭವವನ್ನು ಹೆಚ್ಚಿಸುತ್ತದೆ.

ಆದಾಗ್ಯೂ, ವಸತಿಗಳು ಮತ್ತು ಕಡಿಮೆ ಜನಸಂದಣಿಗಳ ಮೇಲೆ ರಿಯಾಯಿತಿ ದರಗಳನ್ನು ಬಯಸುವ ಪ್ರಯಾಣಿಕರಿಗೆ, ಏಪ್ರಿಲ್-ಮೇ ಮತ್ತು ಸೆಪ್ಟೆಂಬರ್-ಅಕ್ಟೋಬರ್‌ನ ಶೋಲ್ಡರ್ ಸೀಸನ್‌ಗಳು ಅನುಕೂಲಕರವಾಗಿರಬಹುದು. ಆದರೂ, ಈ ಸಮಯದಲ್ಲಿ 30-40°C (86-104°F) ಶ್ರೇಣಿಯವರೆಗಿನ ಬಿಸಿಯಾದ ತಾಪಮಾನಗಳಿಗೆ ಸಿದ್ಧರಾಗಿರಿ.

ಜೂನ್‌ನಿಂದ ಆಗಸ್ಟ್‌ವರೆಗೆ, ಬೇಸಿಗೆಯು ಸುಡುವ ತಾಪಮಾನವನ್ನು ಹೊಂದಿದ್ದು, ಸಾಮಾನ್ಯವಾಗಿ 40°C (104°F) ಮೀರುತ್ತದೆ. ಈ ಸಮಯದಲ್ಲಿ ಹೋಟೆಲ್‌ಗಳು ಉತ್ತಮ ಡೀಲ್‌ಗಳನ್ನು ನೀಡುವುದರೊಂದಿಗೆ, ತೀವ್ರ ಶಾಖದಿಂದಾಗಿ ಹೊರಾಂಗಣ ಚಟುವಟಿಕೆಗಳು ಸೀಮಿತವಾಗಿರಬಹುದು.

ಅಂತಿಮವಾಗಿ, UAE ಗೆ ಭೇಟಿ ನೀಡಲು ಉತ್ತಮ ಸಮಯವು ಹವಾಮಾನ ಆದ್ಯತೆಗಳು, ಬಜೆಟ್ ಪರಿಗಣನೆಗಳು ಮತ್ತು ಆದ್ಯತೆಯ ಚಟುವಟಿಕೆಗಳನ್ನು ಸರಿದೂಗಿಸುತ್ತದೆ, ಇದು ಸ್ಮರಣೀಯ ಮತ್ತು ಆರಾಮದಾಯಕ ಅನುಭವವನ್ನು ಖಾತ್ರಿಗೊಳಿಸುತ್ತದೆ.

UAE ಗೆ ಭೇಟಿ ನೀಡುವ ಮೊದಲು ಅತ್ಯುತ್ತಮ ಸಮಯ, ಹವಾಮಾನ, ತಾಪಮಾನ ಮತ್ತು ಇತರ ಅಂಶಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು UAE ಗೆ ಭೇಟಿ ನೀಡಲು ಉತ್ತಮ ಸಮಯ ಎಂಬ ನಮ್ಮ ಬ್ಲಾಗನ್ನು ಓದಿ.

UAE ಸುರಕ್ಷತೆ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು

UAE ಯಲ್ಲಿ ಪ್ರಯಾಣಿಸುವಾಗ, ಉತ್ತಮ ಅನುಭವವನ್ನು ಪಡೆಯಲು ಮತ್ತು ಪೂರ್ಣವಾಗಿ ಆನಂದಿಸಲು ಕೆಲವು ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೆನಪಿನಲ್ಲಿಟ್ಟುಕೊಳ್ಳಲು ಕೆಲವು ಇಲ್ಲಿವೆ:

• ಗೌರವವನ್ನು ತೋರಿಸಲು ಸ್ಥಳೀಯ ಪದ್ಧತಿಗಳು, ಡ್ರೆಸ್ ಕೋಡ್‌ಗಳು ಮತ್ತು ಸಾಮಾಜಿಕ ನಿಯಮಗಳನ್ನು ಅರ್ಥಮಾಡಿಕೊಳ್ಳಿ ಮತ್ತು ಅನುಸರಿಸಿ. ರಂಜಾನ್ ಸಮಯದಲ್ಲಿ, ಉಪವಾಸದ ಸಮಯಗಳನ್ನು ಗೌರವಿಸಿ ; ಉಪವಾಸವನ್ನು ಆಚರಿಸುವವರನ್ನು ಪರಿಗಣಿಸದೆ ಹಗಲು ಹೊತ್ತಿನಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ತಿನ್ನುವುದು, ಕುಡಿಯುವುದು ಅಥವಾ ಧೂಮಪಾನ ಮಾಡುವುದನ್ನು ತಪ್ಪಿಸಿ.

• ಪರಂಪರೆಯ ಪ್ರತೀಕವಾದ ಗಿಡುಗಗಳನ್ನು ಗೌರವಿಸಿ ; ಸರಿಯಾದ ಮಾರ್ಗದರ್ಶನವಿಲ್ಲದೆ ಅವುಗಳನ್ನು ಸಮೀಪಿಸುವುದನ್ನು ಅಥವಾ ತೊಂದರೆ ನೀಡುವುದನ್ನು ತಪ್ಪಿಸಿ.

• ಹೈಡ್ರೇಟೆಡ್ ಆಗಿರಿ ಮತ್ತು ಬಿಸಿ ತಿಂಗಳುಗಳಲ್ಲಿ ಸೂರ್ಯನಿಗೆ ದೀರ್ಘಕಾಲ ಒಡ್ಡಿಕೊಳ್ಳುವುದನ್ನು ತಪ್ಪಿಸಿ ; ಸನ್‌ಸ್ಕ್ರೀನ್ ಮತ್ತು ಸೂಕ್ತ ಬಟ್ಟೆಗಳನ್ನು ಬಳಸಿ.

• ಮರಳು ಚಂಡಮಾರುತದ ಸಮಯದಲ್ಲಿ, ನಿಮ್ಮ ಕಣ್ಣುಗಳನ್ನು ಕನ್ನಡಕದಿಂದ ರಕ್ಷಿಸಿ ಮತ್ತು ಧೂಳನ್ನು ಉಸಿರಾಡುವುದನ್ನು ತಡೆಯಲು ನಿಮ್ಮ ಮೂಗು ಮತ್ತು ಬಾಯಿಯನ್ನು ಮಾಸ್ಕ್ ಅಥವಾ ಬಟ್ಟೆಯಿಂದ ಮುಚ್ಚಿ.

• ನಿಯಮಾವಳಿಗಳು ಬದಲಾಗಬಹುದಾದ್ದರಿಂದ ಮಾಸ್ಕ್-ಧರಿಸುವುದು ಮತ್ತು ವ್ಯಾಕ್ಸಿನೇಶನ್ ಅವಶ್ಯಕತೆಗಳನ್ನು ಒಳಗೊಂಡಂತೆ ಪ್ರಸ್ತುತ ಆರೋಗ್ಯ ಮಾರ್ಗಸೂಚಿಗಳ ಬಗ್ಗೆ ಅಪ್ಡೇಟ್ ಪಡೆಯಿರಿ.

• ಕೆಲವು ಪ್ರದೇಶಗಳಲ್ಲಿ ಆಕ್ರಮಣಕಾರಿ ಎಂದು ಪರಿಗಣಿಸಬಹುದಾದ್ದರಿಂದ, ಸಾರ್ವಜನಿಕ ಪ್ರದರ್ಶನಗಳ ಬಗ್ಗೆ ಗಮನಹರಿಸಿ.

• ಸ್ಥಳೀಯ ನಿಯಮಾವಳಿಗಳನ್ನು ಅನುಸರಿಸಿ, ಸೈನಿಕ ವಲಯಗಳು ಮತ್ತು ನಿರ್ಬಂಧಿತ ಪ್ರದೇಶಗಳ ಸುತ್ತಲಿನ ಮಿತಿಗಳನ್ನು ಗೌರವಿಸಿ.

• ತುರ್ತು ಸಂಖ್ಯೆಗಳನ್ನು ಸುಲಭವಾಗಿ ಇರಿಸಿಕೊಳ್ಳಿ ಮತ್ತು ಸಹಾಯಕ್ಕಾಗಿ ಹತ್ತಿರದ ವೈದ್ಯಕೀಯ ಸೌಲಭ್ಯಗಳು ಅಥವಾ ರಾಯಭಾರಗಳ ಬಗ್ಗೆ ತಿಳಿದುಕೊಳ್ಳಿ.

• ಕರೆನ್ಸಿಯನ್ನು ತಪ್ಪಾಗಿ ನಿರ್ವಹಿಸುವುದನ್ನು ಅಥವಾ ಅಗೌರವ ತೋರಿಸುವುದನ್ನು ತಪ್ಪಿಸಿ, ಏಕೆಂದರೆ ಅದು ದೇಶದ ನಾಯಕರ ಚಿತ್ರಗಳನ್ನು ಹೊಂದಿದೆ ಮತ್ತು ಗೌರವದಿಂದ ಪರಿಗಣಿಸಬೇಕು.

UAE ಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಪಟ್ಟಿ

UAE ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ವಿವರ ಇಲ್ಲಿವೆ:

ನಗರ ವಿಮಾನ ನಿಲ್ದಾಣದ ಹೆಸರು
ಅಬು ಧಾಬಿಅಬು ಧಾಬಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (AUH)
ದುಬೈದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (DXB)
ಶಾರ್ಜಾಶಾರ್ಜಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (SHJ)
ದುಬೈ ವರ್ಲ್ಡ್ ಸೆಂಟ್ರಲ್ಅಲ್ ಮಕ್ತೌಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (DWC)
ರಾಸ್ ಅಲ್ ಖೈಮಾರಾಸ್ ಅಲ್ ಖೈಮಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (RKT)
ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ

ಮನಸ್ಸಿನ ಶಾಂತಿ ಮತ್ತು ಸುರಕ್ಷತೆಗಾಗಿ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಕನಸಿನ UAE ರಜಾದಿನವನ್ನು ಪ್ರಾರಂಭಿಸಿ.

UAE ಯಲ್ಲಿ ಜನಪ್ರಿಯ ತಾಣಗಳು

UAE ಸುತ್ತಮುತ್ತಲಿನ ಕೆಲವು ಕಡ್ಡಾಯ ಭೇಟಿ ನೀಡಬೇಕಾದ ತಾಣಗಳು ಇಲ್ಲಿವೆ:

1

ದುಬೈ

ಆಧುನಿಕತೆಯ ಸಾರ ತುಂಬಿಕೊಂಡಿರುವ ದುಬೈ, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದಂತಹ ವಾಸ್ತುಶಿಲ್ಪದ ಅದ್ಭುತಗಳನ್ನು ಪ್ರದರ್ಶಿಸುತ್ತದೆ. ಸಂದರ್ಶಕರು ಐತಿಹಾಸಿಕ ಅಲ್ ಫಾಹಿದಿ ನೆರೆಹೊರೆಯನ್ನು ಅನ್ವೇಷಿಸಬಹುದು, ದುಬೈ ಕ್ರೀಕ್‌ನ ಉದ್ದಕ್ಕೂ ವಿಹಾರ ಮಾಡಬಹುದು ಅಥವಾ ದುಬೈ ಮಾಲ್‌ನಲ್ಲಿ ಐಷಾರಾಮಿ ಶಾಪಿಂಗ್‌ನಲ್ಲಿ ಪಾಲ್ಗೊಳ್ಳಬಹುದು. ನಗರದ ರೋಮಾಂಚಕ ನೈಟ್‌ಲೈಫ್, ಮರುಭೂಮಿ ಸಫಾರಿಗಳು ಮತ್ತು ಐಕಾನಿಕ್ ಪಾಮ್ ಜುಮೇರಾ ಇದನ್ನು ಪ್ರಯಾಣಿಕರ ಸ್ವರ್ಗವಾಗಿಸಿದೆ. ಸಾಹಸಿ ಡ್ಯೂನ್-ಬಾಶಿಂಗ್ ಅನುಭವಗಳನ್ನು ತಪ್ಪಿಸಿಕೊಳ್ಳಬೇಡಿ.

2

ಶಾರ್ಜಾ

ಶಾರ್ಜಾವು ತನ್ನ ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿದೆ, ಶಾರ್ಜಾ ಆರ್ಟ್ ಮ್ಯೂಸಿಯಂ ಮತ್ತು ಶಾರ್ಜಾ ಮ್ಯೂಸಿಯಂ ಆಫ್ ಇಸ್ಲಾಮಿಕ್ ಸಿವಿಲೈಸೇಶನ್‌ನಂತಹ ಅನೇಕ ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಶಾರ್ಜಾ ಆರ್ಟ್ಸ್ ಪ್ರದೇಶವು ಕಲಾ ಉತ್ಸಾಹಿಗಳಿಗೆ ನೆಲೆಯಾಗಿದೆ, ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಕಲೆಗಳನ್ನು ಪ್ರದರ್ಶಿಸುತ್ತದೆ. ಎಮಿರೇಟ್ ಇತಿಹಾಸ ಮತ್ತು ಸಂಪ್ರದಾಯಗಳನ್ನು ಪರಿಶೀಲಿಸಲು ಶಾರ್ಜಾ ಪಾರಂಪರಿಕ ಪ್ರದೇಶವನ್ನು ಅನ್ವೇಷಿಸಿ.

3

ಅಬು ಧಾಬಿ

ರಾಜಧಾನಿ, ಅಬುಧಾಬಿ, ಶೇಖ್ ಜಾಯೇದ್ ಗ್ರ್ಯಾಂಡ್ ಮಾಸ್ಕ್ಯೂ ಮತ್ತು ಆಪ್ಯುಲೆಂಟ್ ಎಮಿರೇಟ್ಸ್ ಪ್ಯಾಲೇಸ್‌ನಂತಹ ಸಾಂಸ್ಕೃತಿಕ ಲ್ಯಾಂಡ್‌ಮಾರ್ಕ್‌ಗಳನ್ನು ಹೊಂದಿದೆ. ಯಾಸ್ ದ್ವೀಪವು ಫೆರಾರಿ ವರ್ಲ್ಡ್ ಮತ್ತು ಯಾಸ್ ವಾಟರ್‌ವರ್ಲ್ಡ್‌ನಂತಹ ರೋಮಾಂಚಕ ಆಕರ್ಷಣೆಗಳನ್ನು ಒದಗಿಸುತ್ತದೆ. ಕಾರ್ನಿಚ್ ಪ್ರೊಮೆನೇಡ್ ಕರಾವಳಿಯ ಅದ್ಭುತ ವೀಕ್ಷಣೆಗಳನ್ನು ಪ್ರಸ್ತುತಪಡಿಸುತ್ತದೆ. ಅದರ ವೈವಿಧ್ಯಮಯ ಕಲೆ ಸಂಗ್ರಹವನ್ನು ಆನಂದಿಸಲು ಲೂವರ್ ಅಬುಧಾಬಿಗೆ ಭೇಟಿ ನೀಡಿ. ನಗರವು ಸಂಪ್ರದಾಯ ಮತ್ತು ಆಧುನಿಕತೆಯ ಪರಿಪೂರ್ಣ ಸಂಯೋಜನೆಯಿಂದ ಕೂಡಿದೆ.

4

ಅಜ್ಮಾನ್

ಅಜ್ಮಾನ್, ಪ್ರಶಾಂತ ಎಮಿರೇಟ್, ಸುಂದರವಾದ ಬಿಳಿ ಮರಳಿನ ಕಡಲತೀರಗಳು ಮತ್ತು ಪ್ರಶಾಂತ ಕರಾವಳಿಯನ್ನು ಹೊಂದಿದೆ. ಅಜ್ಮಾನ್ ಮ್ಯೂಸಿಯಂ ಈ ಪ್ರದೇಶದ ಹಿನ್ನೆಲೆ ಬಗ್ಗೆ ಒಳನೋಟಗಳನ್ನು ಒದಗಿಸುತ್ತದೆ, ಆದರೆ ಅಜ್ಮಾನ್ ಧೋ ಯಾರ್ಡ್ ಸಾಂಪ್ರದಾಯಿಕ ಬೋಟ್-ನಿರ್ಮಾಣ ತಂತ್ರಗಳನ್ನು ಪ್ರದರ್ಶಿಸುತ್ತದೆ. ಭೇಟಿ ನೀಡುವವರು ಅಜ್ಮಾನ್ ಕಾರ್ನಿಚ್‌ನಲ್ಲಿ ವಿಶ್ರಾಂತಿ ಪಡೆಯಬಹುದು ಅಥವಾ ಅಧಿಕೃತ ಎಮಿರೇಟ್ ಅನುಭವಗಳಿಗಾಗಿ ರೋಮಾಂಚಕ ಸ್ಥಳೀಯ ಮಾರುಕಟ್ಟೆಗಳನ್ನು ಅನ್ವೇಷಿಸಬಹುದು.

5

ರಾಸ್ ಅಲ್ ಖೈಮಾ

ರಾಸ್ ಅಲ್ ಖೈಮಾ ತನ್ನ ಜೆಬೆಲ್ ಜೈಸ್ ಪರ್ವತ ಶ್ರೇಣಿಯೊಂದಿಗೆ ಸಾಹಸವನ್ನು ಹುಡುಕುವವರನ್ನು ಆಕರ್ಷಿಸುತ್ತದೆ, ಇದು ವಿಶ್ವದ ಅತಿ ಉದ್ದದ ಜಿಪ್‌ಲೈನ್‌ಗೆ ನೆಲೆಯಾಗಿದೆ. ಧಯಾಹ್ ಫೋರ್ಟ್ ನಗರದ ಪ್ಯಾನೋರಮಿಕ್ ವೀಕ್ಷಣೆಗಳನ್ನು ಪ್ರಸ್ತುತಪಡಿಸುತ್ತದೆ. ಪ್ರವಾಸಿಗರು ಅಲ್ ಹಮ್ರಾ ಬೀಚ್‌ನಲ್ಲಿ ವಿಶ್ರಾಂತಿ ಪಡೆಯಬಹುದು ಅಥವಾ ಬೆರಗುಗೊಳಿಸುವ ಸುತ್ತಮುತ್ತಲಿನ ಪ್ರದೇಶದ ನಡುವೆ ನೈಸರ್ಗಿಕ ಬಿಸಿನೀರಿನ ಬುಗ್ಗೆಗಳಲ್ಲಿ ವಿಶ್ರಾಂತಿ ಪಡೆಯಲು ಖಟ್ಟ್ ಸ್ಪ್ರಿಂಗ್ಸ್ ಅನ್ನು ಅನ್ವೇಷಿಸಬಹುದು.

6

ಫುಜೈರಾಹ್

ಅದ್ಭುತ ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಫುಜೈರಾ, ಪ್ರಿಸ್ಟಿನ್ ಬೀಚ್‌ಗಳ ಜೊತೆಗೆ ಕಠಿಣ ಪರ್ವತ ಭೂ ಪ್ರದೇಶವನ್ನು ಹೊಂದಿದೆ. ಫುಜೈರಾ ಫೋರ್ಟ್ ಈ ಪ್ರದೇಶದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಪ್ರವಾಸಿಗರು UAE ಯ ಅತ್ಯಂತ ಹಳೆಯ ಮಸೀದಿಯಾದ ಅಲ್ ಬದಿಯಾ ಮಸೀದಿಯನ್ನು ಅನ್ವೇಷಿಸಬಹುದು ಮತ್ತು ದಿಬ್ಬಾ ಮತ್ತು ಖೋರ್ ಫಕ್ಕನ್‌ನ ಕಡಲತೀರಗಳಲ್ಲಿ ಜಲ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು.


ಈ ಆಕರ್ಷಕ ನಗರಗಳನ್ನು ಅನ್ವೇಷಿಸುವ ಮೊದಲು, UAE ವಿಸಿಟ್ ವೀಸಾಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವುದನ್ನು ಖಚಿತಪಡಿಸಿಕೊಳ್ಳಿ, ಚಿಂತೆ-ಮುಕ್ತ ಮತ್ತು ಆನಂದದಾಯಕ ಪ್ರವಾಸಕ್ಕೆ ಸಮಗ್ರ ಕವರೇಜ್ ಒದಗಿಸುತ್ತದೆ. ಅನೇಕ ಪ್ರತಿಷ್ಠಿತ ವಿಮಾದಾತರು UAE ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಒದಗಿಸುತ್ತಾರೆ, ಇದು UAE ಯಲ್ಲಿ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಕಂಡುಹಿಡಿಯಲು ಭಾರತದ ಪ್ರಯಾಣಿಕರನ್ನು ಒಳಗೊಂಡಂತೆ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುತ್ತದೆ.

UAE ಯಲ್ಲಿ ಮಾಡಬೇಕಾದ ಸಂಗತಿಗಳು

UAE ಮೂಲಕ ಪ್ರಯಾಣಿಸುವಾಗ, ನಿಮಗೆ ದೊರಕುವ ಸಾಹಸಗಳ ಅನುಭವಕ್ಕೆ ಕೊನೆಯಿಲ್ಲ, ನೀವು ಅಲ್ಲಿರುವಾಗ ಮಾಡಬೇಕಾದ ಕೆಲವು ವಿಷಯಗಳು ಇಲ್ಲಿವೆ:

ಶೇಖ್ ಜಾಯೇದ್ ಗ್ರ್ಯಾಂಡ್ ಮಸೀದಿಗೆ ಭೇಟಿ ನೀಡಿ: ಸಂಕೀರ್ಣವಾದ ಇಸ್ಲಾಮಿಕ್ ವಿನ್ಯಾಸಗಳು ಮತ್ತು ಸೊಗಸಾದ ಕರಕುಶಲತೆಯನ್ನು ಪ್ರದರ್ಶಿಸುವ ಅಬುಧಾಬಿಯ ವಾಸ್ತುಶಿಲ್ಪದ ರತ್ನದ ಅದ್ಭುತವನ್ನು ನೋಡಿ.

ಡೆಸರ್ಟ್ ಸಫಾರಿ: ಬೆಡೋಯಿನ್ ಸಂಸ್ಕೃತಿಯಲ್ಲಿ ಮುಳುಗಿಹೋಗುವ ರೋಮಾಂಚಕ ಡ್ಯೂನ್ ಬಶಿಂಗ್, ಒಂಟೆ ಸವಾರಿಗಳು ಮತ್ತು ಮರುಭೂಮಿ ಶಿಬಿರಗಳನ್ನು ಅನುಭವಿಸಿ. UAE ಯ ವಿಶಾಲವಾದ ಮರುಭೂಮಿಗಳು ಸಾಹಸಮಯ ಅನುಭವವನ್ನು ನೀಡುತ್ತವೆ.

ದುಬೈ ಮರೀನಾ ಕ್ರೂಸ್: ರಾತ್ರಿಯ ಆಕಾಶದಲ್ಲಿ ಪ್ರಕಾಶಿಸುವ ಗಗನಚುಂಬಿ ಕಟ್ಟಡಗಳಿಗೆ ಸಾಕ್ಷಿಯಾಗಿ, ಬೆರಗುಗೊಳಿಸುವ ದುಬೈ ಮರೀನಾ ಮೂಲಕ ನೌಕಾಯಾನ ಮಾಡಿ.

ಯಾಸ್ ಐಲ್ಯಾಂಡ್ ಥೀಮ್ ಪಾರ್ಕ್‌ಗಳು: ಫೆರಾರಿ ವರ್ಲ್ಡ್‌ನಲ್ಲಿ ಅಡ್ರಿನಾಲಿನ್-ಪಂಪಿಂಗ್ ಅನುಭವಗಳು ಮತ್ತು ಯಾಸ್ ವಾಟರ್‌ವರ್ಲ್ಡ್‌ನಲ್ಲಿ ಜಲ ಸಾಹಸಗಳಲ್ಲಿ ತೊಡಗಿಸಿಕೊಳ್ಳಿ.

ಸೌಕ್ಸ್‌ನಲ್ಲಿ ಶಾಪಿಂಗ್ ಮಾಡಿ: ಗೋಲ್ಡ್ ಮತ್ತು ಸ್ಪೈಸ್ ಸೌಕ್ಸ್‌ನಂತಹ ಸಾಂಪ್ರದಾಯಿಕ ಮಾರುಕಟ್ಟೆಗಳನ್ನು ಅನ್ವೇಷಿಸಿ, ಪ್ರದೇಶದ ವ್ಯಾಪಾರ ಪರಂಪರೆಯ ಒಂದು ನೋಟವನ್ನು ನೀಡುತ್ತದೆ.

ಲೌವ್ರೆ ಅಬುಧಾಬಿ: ಪ್ರಪಂಚದಾದ್ಯಂತದ ವೈವಿಧ್ಯಮಯ ಪ್ರದರ್ಶನಗಳನ್ನು ಹೊಂದಿರುವ ಈ ವಾಸ್ತುಶಿಲ್ಪದ ಮೇರುಕೃತಿಯಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಅನ್ವೇಷಿಸಿ.

ಧೋ ಕ್ರೂಸ್‌ಗಳು: ದುಬೈ ಕ್ರೀಕ್ ಅಥವಾ ಅಬುಧಾಬಿಯ ಕರಾವಳಿ ತೀರದಲ್ಲಿ ಸಾಂಪ್ರದಾಯಿಕ ಧೋದಲ್ಲಿ ಪ್ರಯಾಣಿಸಿ, ಬೆರಗುಗೊಳಿಸುವ ನೋಟಗಳಲ್ಲಿ ಕಳೆದುಹೋಗಿ ಮತ್ತು ಸಾಂಸ್ಕೃತಿಕ ಅನುಭವವನ್ನು ಆನಂದಿಸಿ.

ಜೆಬೆಲ್ ಜೈಸ್ ಜಿಪ್‌ಲೈನ್: ರಾಸ್ ಅಲ್ ಖೈಮಾದಲ್ಲಿ ವಿಶ್ವದ ಅತಿ ಉದ್ದದ ಜಿಪ್‌ಲೈನ್ ಅಲ್ಲಿ ಸಾಗಿ, ಇದು ಒರಟಾದ ಹಜರ್ ಪರ್ವತಗಳ ನಡುವೆ ಮೇಲೇರುತ್ತದೆ.

ಸಮುದ್ರ ಚಟುವಟಿಕೆಗಳು: ಅಜ್ಮಾನ್, ಶಾರ್ಜಾ ಅಥವಾ ಫುಜೈರಾದ ಪ್ರಿಸ್ಟಿನ್ ಬೀಚ್‌ಗಳ ಮೇಲೆ ವಿಶ್ರಾಂತಿ ಪಡೆಯಿರಿ, ಇದು ನೀರಿನ ಕ್ರೀಡೆಗಳು ಮತ್ತು ಪ್ರಶಾಂತ ಸೂರ್ಯಾಸ್ತಗಳನ್ನು ನೋಡಲು ಅವಕಾಶಗಳನ್ನು ನೀಡುತ್ತದೆ.

ಹಜರ್ ಪರ್ವತಗಳಲ್ಲಿ ಹೈಕಿಂಗ್: ಫುಜೈರಾದ ಒರಟಾದ ಭೂಪ್ರದೇಶವು ಅದರ ರಮಣೀಯ ನೋಟಗಳನ್ನು ಅನ್ವೇಷಿಸಲು ಪಾದಯಾತ್ರೆಯ ಉತ್ಸಾಹಿಗಳನ್ನು ಆಹ್ವಾನಿಸುತ್ತದೆ.

UAE ನಲ್ಲಿ ಹಣ ಉಳಿತಾಯ ಸಲಹೆಗಳು

UAE ನಂತಹ ತಾಣಕ್ಕೆ ಭೇಟಿ ನೀಡುವಾಗ, ನೀವು ಅಲ್ಲಿರುವಾಗ ಎಲ್ಲಾ ಅತ್ಯುತ್ತಮ ಸ್ಥಳಗಳನ್ನು ಅನ್ವೇಷಿಸಲು ಹಣವನ್ನು ಉಳಿಸುವುದು ಮುಖ್ಯವಾಗಿದೆ.
ನೀವು UAE ಗೆ ಭೇಟಿ ನೀಡುವಾಗ ಪರಿಗಣಿಸಲು ಕೆಲವು ಹಣಕಾಸಿನ ಸಲಹೆಗಳು ಇಲ್ಲಿವೆ:

• ಹಾಸ್ಟೆಲ್‌ಗಳು ಅಥವಾ ಗೆಸ್ಟ್‌ಹೌಸ್‌ಗಳಂತಹ ಬಜೆಟ್-ಸ್ನೇಹಿ ವಸತಿಗಳಲ್ಲಿ ಉಳಿಯುವುದನ್ನು ಪರಿಗಣಿಸಿ, ವಿಶೇಷವಾಗಿ ದುಬೈನಲ್ಲಿ ಡೆಯ್ರಾ ಅಥವಾ ಶಾರ್ಜಾದಲ್ಲಿ ಕೈಗೆಟಕುವ ಹೋಟೆಲ್‌ಗಳಂತಹ ಪ್ರದೇಶಗಳನ್ನು ಪರಿಗಣಿಸಿ.

• ವಸತಿ ಮತ್ತು ಚಟುವಟಿಕೆಗಳ ಮೇಲೆ ಉತ್ತಮ ಡೀಲ್‌ಗಳನ್ನು ಹುಡುಕಲು ಶೋಲ್ಡರ್ ಸೀಸನ್‌ಗಳು ಅಥವಾ ಆಫ್-ಪೀಕ್ ತಿಂಗಳುಗಳಲ್ಲಿ (ಮೇಯಿಂದ ಆಗಸ್ಟ್‌) UAE ಗೆ ನಿಮ್ಮ ಪ್ರಯಾಣವನ್ನು ಪ್ಲಾನ್ ಮಾಡಿ.

• ಮೆಟ್ರೋ, ಬಸ್‌ಗಳು ಮತ್ತು ಟ್ರಾಮ್‌ಗಳು ಸೇರಿದಂತೆ ಸಾರ್ವಜನಿಕ ಸಾರಿಗೆಯಲ್ಲಿ ರಿಯಾಯಿತಿ ದರಗಳಿಗಾಗಿ ದುಬೈನಲ್ಲಿ ನೋಲ್ ಕಾರ್ಡ್‌ಗಳು ಅಥವಾ ಅಬುಧಾಬಿಯಲ್ಲಿ ಹಫಿಲಾತ್ ಕಾರ್ಡ್‌ಗಳನ್ನು ಆಯ್ಕೆಮಾಡಿ.

• ದುಬೈ ಫೌಂಟೈನ್ ಶೋ ಮತ್ತು ಜುಮೇರಾ ಬೀಚ್ ಕಾರ್ನಿಚ್‌ನಂತಹ ಉಚಿತ ಆಕರ್ಷಣೆಗಳನ್ನು ಹುಡುಕಿ, ಅಥವಾ ದುಬೈನಲ್ಲಿ ಬಸ್ತಾಕಿಯಾದಂತಹ ಐತಿಹಾಸಿಕ ಪ್ರದೇಶಗಳನ್ನು ಅನ್ವೇಷಿಸಿ.

• ಎಂಟರ್ಟೈನರ್ ವೌಚರ್‌ಗಳನ್ನು ಬಳಸಿ: ಡೈನಿಂಗ್, ಮನರಂಜನೆ ಮತ್ತು ಆಕರ್ಷಣೆಗಳ ಮೇಲೆ 'ಒಂದಕ್ಕೆ ಇನ್ನೊಂದು ಉಚಿತ ಪಡೆಯಿರಿ' ಡೀಲ್‌ಗಳನ್ನು ಒದಗಿಸುವ ಎಂಟರ್ಟೈನರ್ ಆ್ಯಪ್‌ ಬಳಸಿ.

• ಉನ್ನತ ಮಟ್ಟದ ರೆಸ್ಟೋರೆಂಟ್‌ಗಳಿಗೆ ಹೋಲಿಸಿದರೆ ಹೆಚ್ಚು ಸಮಂಜಸವಾದ ಬೆಲೆಯಲ್ಲಿ ಅಧಿಕೃತ ಎಮಿರಾಟಿ ಪಾಕಪದ್ಧತಿಯನ್ನು ನೀಡುವ ಸ್ಥಳೀಯ ಮಾರುಕಟ್ಟೆಗಳು ಮತ್ತು ಸಣ್ಣ ತಿನಿಸುಗಳನ್ನು ಅನ್ವೇಷಿಸಿ.

• ವಿಶಾಲ ಶ್ರೇಣಿಯ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿಗಳಿಗಾಗಿ ದುಬೈ ಶಾಪಿಂಗ್ ಫೆಸ್ಟಿವಲ್ ಮತ್ತು ಅಬು ಧಾಬಿ ಬೇಸಿಗೆಯ ಸೀಸನ್‌ನಂತಹ ಮೆಗಾ ಶಾಪಿಂಗ್ ಫೆಸ್ಟಿವಲ್‌ಗಳ ಪ್ರಯೋಜನವನ್ನು ಪಡೆಯಿರಿ.

• ದುಬಾರಿ ಪಾನೀಯಗಳು ಮತ್ತು ಪ್ರವಾಸಿ ಸ್ಥಳಗಳಲ್ಲಿ ಆಹಾರದ ಖರ್ಚುಗಳನ್ನು ತಪ್ಪಿಸಲು ಪ್ರವಾಸ ಮಾಡುವಾಗ ನಿಮ್ಮ ನೀರಿನ ಬಾಟಲ್ ಮತ್ತು ಸ್ನ್ಯಾಕ್ಸ್ ಅನ್ನು ಕೊಂಡೊಯ್ಯಿರಿ.

• ಅರ್ಲಿ ಬರ್ಡ್ ರಿಯಾಯಿತಿಗಳಿಂದ ಪ್ರಯೋಜನ ಪಡೆಯಲು ಆಕರ್ಷಣೆಗಳು, ಪ್ರವಾಸಗಳು ಮತ್ತು ಚಟುವಟಿಕೆಗಳಿಗೆ ಆನ್ಲೈನಿನಲ್ಲಿ ಟಿಕೆಟ್‌ಗಳನ್ನು ಪಡೆದುಕೊಳ್ಳಿ.

• ನಿಮ್ಮ ಪ್ರಯಾಣದ ಮೊದಲು, ಭಾರತ ಅಥವಾ ಇತರ ದೇಶಗಳಿಂದ UAE ಗೆ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಹೋಲಿಕೆ ಮಾಡಿ ಮತ್ತು ಆಯ್ಕೆ ಮಾಡಿ, ಸ್ಪರ್ಧಾತ್ಮಕ ದರಗಳಲ್ಲಿ ನಿಮ್ಮ ಅಗತ್ಯಗಳಿಗೆ ಅನುಗುಣವಾದ ಕವರೇಜನ್ನು ಖಚಿತಪಡಿಸಿಕೊಳ್ಳಿ. UAE ಟ್ರಾವೆಲ್ ಇನ್ಶೂರೆನ್ಸ್‌ಗಾಗಿ ಆನ್ಲೈನ್‌ನಲ್ಲಿ ಆಯ್ಕೆಗಳನ್ನು ಅನ್ವೇಷಿಸುವುದರಿಂದ ಅನಿರೀಕ್ಷಿತ ಸಂದರ್ಭಗಳ ವಿರುದ್ಧ ಸಮಗ್ರ ರಕ್ಷಣೆ ಪಡೆಯಲು ಸಹಾಯ ಮಾಡುತ್ತದೆ, ನಿಮ್ಮನ್ನು ಅನಿರೀಕ್ಷಿತ ವೆಚ್ಚಗಳಿಂದ ರಕ್ಷಿಸುತ್ತದೆ.

UAE ಯಲ್ಲಿ ಪ್ರಸಿದ್ಧ ಭಾರತೀಯ ರೆಸ್ಟೋರೆಂಟ್‌ಗಳ ಪಟ್ಟಿ

ನಿಮ್ಮ ತಿನ್ನುವ ಬಯಕೆಗಳನ್ನು ಪೂರೈಸಲು UAE ಯ ಕೆಲವು ಪ್ರಸಿದ್ಧ ಭಾರತೀಯ ರೆಸ್ಟೋರೆಂಟ್‌ಗಳು ಇಲ್ಲಿವೆ:

• ಇಂಡಿಗೋ ಬೈ ವಿನೀತ್
ವಿಳಾಸ: ಬೀಚ್ ರೋತನ, ಅಬು ಧಾಬಿ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಬಟರ್ ಚಿಕನ್

• ರಂಗ್ ಮಹಲ್ - ಬ್ಯಾಂಕಾಕ್
ವಿಳಾಸ: ರೆಂಬ್ರಾಂಡ್ ಹೋಟೆಲ್, 19 ಸುಖುಮ್ವಿಟ್ ಎಸ್‌ಒಐ 18, ಬ್ಯಾಂಕಾಕ್
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಬಟರ್ ಚಿಕನ್

• ರಂಗೋಲಿ
ವಿಳಾಸ: ಯಾಸ್ ದ್ವೀಪ, ಅಬು ಧಾಬಿ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಬಿರಿಯಾನಿ.

• ಕಾಮತ್ ರೆಸ್ಟೋರೆಂಟ್
ವಿಳಾಸ: ಬುರ್ಜುಮನ್ ಕೇಂದ್ರದ ಎದುರು, ದುಬೈ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಮಸಾಲ ದೋಸ.

• ಘರಾನಾ
ವಿಳಾಸ: ಹಾಲಿಡೇ ಇನ್, ಅಲ್ ಬರ್ಷಾ, ದುಬೈ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಪನೀರ್ ಟಿಕ್ಕಾ.

• ಚಪ್ಪನ್ ಭೋಗ್
ವಿಳಾಸ: ಕರಮ ಪಾರ್ಕ್ ಎದುರು, ದುಬೈ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಥಾಲಿ ಮೀಲ್ಸ್.

• ಲಿಟಲ್ ಇಂಡಿಯಾ ರೆಸ್ಟೋರೆಂಟ್ ಆಂಡ್ ಕೆಫೆ
ವಿಳಾಸ: ಅಲ್ ನಖೀಲ್ ರೋಡ್, ರಾಸ್ ಅಲ್ ಖೈಮಾ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಚಿಕನ್ ಟಿಕ್ಕ ಮಸಾಲಾ.

• ಪಿಂಡ್ ದಾ ಧಾಬಾ
ವಿಳಾಸ: ಶೇಖ್ ಜಾಯೇದ್ ರೋಡ್, ದುಬೈ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ದಾಲ್ ಮಖನಿ.

• ಬಾಂಬೆ ಚೌಪಟ್ಟಿ
ವಿಳಾಸ: ಅಲ್ ರಿಗ್ಗಾ ರೋಡ್, ದುಬೈ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಪಾವ್ ಭಾಜಿ.

• ಸರವಣ ಭವನ್
ವಿಳಾಸ: ಅಲ್ ಕರಮ, ದುಬೈ.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಮಿನಿ ಟಿಫಿನ್.

• ಕುಲ್ಚಾ ಕಿಂಗ್
ವಿಳಾಸ: ದುಬೈ ಮತ್ತು ಶಾರ್ಜಾದಲ್ಲಿ ಅನೇಕ ಶಾಖೆಗಳು.
ಕಡ್ಡಾಯವಾಗಿ ಪ್ರಯತ್ನಿಸಬೇಕಾದ ಡಿಶ್‌ಗಳು: ಅಮೃತಸರಿ ಕುಲ್ಚಾ.

ಸ್ಥಳೀಯ ಕಾನೂನು ಮತ್ತು ಶಿಷ್ಟಾಚಾರ UAE

UAE ಯಲ್ಲಿರುವಾಗ, ಪ್ರಯಾಣ ಮಾಡುವಾಗ ಈ ಸ್ಥಳೀಯ ಕಾನೂನುಗಳು ಮತ್ತು ಶಿಷ್ಟಾಚಾರವನ್ನು ಗಮನದಲ್ಲಿಟ್ಟುಕೊಳ್ಳಿ:

• ಎಮಿರಾಟಿ ಸಂಸ್ಕೃತಿ ಸಭ್ಯತೆಗೆ ಮಹತ್ವ ನೀಡುತ್ತದೆ ; ವಿಶೇಷವಾಗಿ ಧಾರ್ಮಿಕ ಸೈಟ್ ಭೇಟಿಗಳ ಸಮಯದಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಭ್ಯ ಉಡುಗೆ ಧರಿಸಿ.

• ಪ್ರೀತಿಯ ಸಾರ್ವಜನಿಕ ಪ್ರದರ್ಶನಗಳನ್ನು ವಿರೋಧಿಸಲಾಗುತ್ತದೆ, ಸಾರ್ವಜನಿಕವಾಗಿ ವಿವೇಚನೆಯನ್ನು ಕಾಪಾಡಿಕೊಳ್ಳಿ.

• ಸಾರ್ವಜನಿಕವಾಗಿ ಕುಡಿಯುವುದು ಕಾನೂನುಬಾಹಿರವಾಗಿದೆ, ಮತ್ತು ಹೋಟೆಲ್‌ಗಳು ಮತ್ತು ಬಾರ್‌ಗಳಂತಹ ಪರವಾನಗಿ ಪಡೆದ ಸ್ಥಳಗಳಿಗೆ ಸೀಮಿತವಾಗಿದೆ.

• ರಂಜಾನ್ ಸಮಯದಲ್ಲಿ, ಹಗಲು ಹೊತ್ತಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಿನ್ನುವುದು, ಕುಡಿಯುವುದು ಅಥವಾ ಧೂಮಪಾನ ಮಾಡುವುದನ್ನು ತಪ್ಪಿಸಿಕೊಳ್ಳಿ.

• ಅನುಮತಿಯಿಲ್ಲದೆ, ವಿಶೇಷವಾಗಿ ಮಹಿಳೆಯರಲ್ಲಿ ಮತ್ತು ಸರ್ಕಾರಿ ಕಟ್ಟಡಗಳ ಮೇಲೆ ವ್ಯಕ್ತಿಗಳ ಫೋಟೋಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ.

• ಶುಕ್ರವಾರದ ಪ್ರಾರ್ಥನೆಯ ಸಮಯಗಳನ್ನು ಗಮನದಲ್ಲಿಟ್ಟುಕೊಳ್ಳಿ ; ಈ ಸಮಯದಲ್ಲಿ ಕೆಲವು ಬಿಸಿನೆಸ್‌ಗಳು ತಾತ್ಕಾಲಿಕವಾಗಿ ಮುಚ್ಚಬಹುದು.

• UAE ಕಾನೂನುಗಳು ಅಧಿಕಾರಕ್ಕೆ ಗೌರವವನ್ನು ಬಯಸುತ್ತವೆ ; ಮತ್ತು ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿಗಳಿಂದ ಸೂಚನೆಗಳನ್ನು ಅನುಸರಿಸಿ.

• ಕಟ್ಟುನಿಟ್ಟಾದ ಡ್ರಗ್ಸ್ -ನಿರೋಧಕ ಕಾನೂನುಗಳು ; ಮಾದಕವಸ್ತುಗಳ ಸ್ವಾಧೀನ ಅಥವಾ ಕಳ್ಳಸಾಗಣೆ ಜೈಲು ಅಥವಾ ಗಡೀಪಾರು ಸೇರಿದಂತೆ ತೀವ್ರ ದಂಡನೆಗೆ ಕಾರಣವಾಗಬಹುದು

• ಶುಭಾಶಯಗಳಿಗಾಗಿ ಅಥವಾ ಉಡುಗೊರೆಗಳನ್ನು ಸ್ವೀಕರಿಸುವಾಗ ಬಲಗೈಯನ್ನು ಬಳಸಿ, ಎಮಿರಾಟಿ ಸಂಸ್ಕೃತಿಯಲ್ಲಿ ಎಡಗೈಯನ್ನು ಅಶುದ್ಧವೆಂದು ಪರಿಗಣಿಸಲಾಗುತ್ತದೆ.

UAE ಯಲ್ಲಿ ಭಾರತೀಯ ರಾಯಭಾರಗಳು

ನೀವು UAE ಮೂಲಕ ಪ್ರಯಾಣಿಸುವಾಗ ನೆನಪಿನಲ್ಲಿಟ್ಟುಕೊಳ್ಳಲು ಎಲ್ಲಾ UAE ಮೂಲದ ಭಾರತೀಯ ರಾಯಭಾರ ಕಚೇರಿ ಇಲ್ಲಿದೆ:

UAE-ಆಧಾರಿತ ಭಾರತೀಯ ರಾಯಭಾರ ಕೆಲಸದ ಸಮಯ ವಿಳಾಸ
ಭಾರತದ ಕನ್ಸುಲೇಟ್ ಜನರಲ್, ಅಬು ಧಾಬಿಭಾನುವಾರ: 8:30 AM - 5:30 PMಪ್ಲಾಟ್ ನಂಬರ್ 10, ಸೆಕ್ಟರ್ W-59/02, ಡಿಪ್ಲೊಮ್ಯಾಟಿಕ್ ಏರಿಯಾ, ಅಬು ಧಾಬಿ
ಭಾರತದ ಕನ್ಸುಲೇಟ್ ಜನರಲ್, ದುಬೈಭಾನುವಾರ: 8 AM - 4:30 PMಅಲ್ ಹಮ್ರಿಯಾ, ಡಿಪ್ಲೊಮ್ಯಾಟಿಕ್ ಎಂಕ್ಲೇವ್, ದುಬೈ
ಭಾರತದ ಕನ್ಸುಲೇಟ್ ಜನರಲ್, ಶಾರ್ಜಾಭಾನುವಾರ: 9 AM - 5 PMಅಲ್ ತಾವುನ್ ಏರಿಯಾ, ಶಾರ್ಜಾ
ಭಾರತದ ಕನ್ಸುಲೇಟ್ ಜನರಲ್, ದುಬೈ (ಪಾಸ್‌ಪೋರ್ಟ್ ಮತ್ತು ವೀಸಾ ಸೇವೆಗಳ ವಿಭಾಗ)ಭಾನುವಾರ: 8 AM - 1 PM (ವೀಸಾ ಸೇವೆಗಳು);
3 PM - 5 PM (ಪಾಸ್‌ಪೋರ್ಟ್ ಸೇವೆಗಳು)
ಅಲ್ ಹಮ್ರಿಯಾ, ಡಿಪ್ಲೊಮ್ಯಾಟಿಕ್ ಎಂಕ್ಲೇವ್, ದುಬೈ

ಹೆಚ್ಚಾಗಿ ಭೇಟಿ ನೀಡಿದ ದೇಶಗಳಿಗೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್

ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ

ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ವಿಮಾನ ವಿಳಂಬಗಳು, ಬ್ಯಾಗೇಜ್ ನಷ್ಟ ಮತ್ತು ಇತರ ಪ್ರಯಾಣ ಸಂಬಂಧಿತ ಅನಾನುಕೂಲತೆಗಳ ಬಗ್ಗೆ ಹೆಚ್ಚು ಚಿಂತೆಗೀಡು ಮಾಡದೆ ನಿರಾಳವಾಗಿರುವಂತೆ ಮಾಡುತ್ತದೆ.

ಇತ್ತೀಚಿನ ಟ್ರಾವೆಲ್ ಇನ್ಶೂರೆನ್ಸ್ ಬ್ಲಾಗ್‌ ಗಳನ್ನು ಓದಿ

slider-right
ಡೆನ್‌ಪಾಸರ್‌ನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳು: ಅಲ್ಟಿಮೇಟ್ ಗೈಡ್

ಡೆನ್‌ಪಾಸರ್‌ನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳು: ಅಲ್ಟಿಮೇಟ್ ಗೈಡ್

ಇನ್ನಷ್ಟು ಓದಿ
18 ಡಿಸೆಂಬರ್, 2024 ರಂದು ಪ್ರಕಟಿಸಲಾಗಿದೆ
ಫಿನ್‌ಲ್ಯಾಂಡ್‌ನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳು: ಅಲ್ಟಿಮೇಟ್ ಗೈಡ್

ಫಿನ್‌ಲ್ಯಾಂಡ್‌ನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳು: ಅಲ್ಟಿಮೇಟ್ ಗೈಡ್

ಇನ್ನಷ್ಟು ಓದಿ
18 ಡಿಸೆಂಬರ್, 2024 ರಂದು ಪ್ರಕಟಿಸಲಾಗಿದೆ
ಕುಟಾದಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳು: ಅಲ್ಟಿಮೇಟ್ ಗೈಡ್

ಕುಟಾದಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳು: ಅಲ್ಟಿಮೇಟ್ ಗೈಡ್

ಇನ್ನಷ್ಟು ಓದಿ
18 ಡಿಸೆಂಬರ್, 2024 ರಂದು ಪ್ರಕಟಿಸಲಾಗಿದೆ
ಇಸ್ತಾಂಬುಲ್‌ನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳು

ಇಸ್ತಾಂಬುಲ್‌ನಲ್ಲಿ ಭೇಟಿ ನೀಡಬೇಕಾದ ಅತ್ಯುತ್ತಮ ಸ್ಥಳಗಳು

ಇನ್ನಷ್ಟು ಓದಿ
26 ನವೆಂಬರ್, 2024 ರಂದು ಪ್ರಕಟಿಸಲಾಗಿದೆ
ಮಾಲ್ಟಾ ವೀಸಾ ಸಂದರ್ಶನ ಪ್ರಶ್ನೆಗಳು

ಅಗತ್ಯ ಮಾಲ್ಟಾ ವೀಸಾ ಸಂದರ್ಶನ ಪ್ರಶ್ನೆಗಳು ಮತ್ತು ಸಲಹೆಗಳು

ಇನ್ನಷ್ಟು ಓದಿ
26 ನವೆಂಬರ್, 2024 ರಂದು ಪ್ರಕಟಿಸಲಾಗಿದೆ
ಸ್ಲೈಡರ್-ಎಡ

UAE ಟ್ರಾವೆಲ್ ಇನ್ಶೂರೆನ್ಸ್ ಬಗ್ಗೆ ಆಗಾಗ್ಗೆ ಕೇಳುವ ಪ್ರಶ್ನೆಗಳು

ಹೌದು, UAE ಭೇಟಿ ವೀಸಾಗಳಿಗೆ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಸಲಹೆ ನೀಡಲಾಗುತ್ತದೆ. ಇದು ನಿಮ್ಮ ವಾಸ್ತವ್ಯದಲ್ಲಿ ವೈದ್ಯಕೀಯ ತುರ್ತುಸ್ಥಿತಿಗಳು, ಪ್ರಯಾಣ ರದ್ದತಿಗಳು ಮತ್ತು ಇತರ ಅನಿರೀಕ್ಷಿತ ಸಂದರ್ಭಗಳಿಗೆ ಕವರೇಜನ್ನು ಒದಗಿಸುತ್ತದೆ.

ಹೌದು, ಹೆಚ್ಚಿನ ರಾಷ್ಟ್ರೀಯತೆಗಳಿಗೆ ವೀಸಾ ಅಗತ್ಯವಿದೆ. ನಿಮ್ಮ ರಾಷ್ಟ್ರೀಯತೆ ಮತ್ತು ನಿಮ್ಮ ಭೇಟಿಯ ಉದ್ದೇಶದ ಆಧಾರದ ಮೇಲೆ ವೀಸಾ ಅವಶ್ಯಕತೆಗಳಿಗಾಗಿ UAE ಸರ್ಕಾರದ ವೆಬ್‌ಸೈಟ್ ಪರಿಶೀಲಿಸಿ ಅಥವಾ ರಾಯಭಾರದೊಂದಿಗೆ ಸಮಾಲೋಚನೆ ಮಾಡಿ.

ಹೌದು, ವೀಸಾ ಮತ್ತು ಮಾಸ್ಟರ್ ಕಾರ್ಡ್‌ನಂತಹ ಪ್ರಮುಖ ಕ್ರೆಡಿಟ್ ಕಾರ್ಡ್‌ಗಳನ್ನು ಹೆಚ್ಚಿನ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಅಂಗೀಕರಿಸಲಾಗುತ್ತದೆ, ಆದರೆ ಸಣ್ಣ ಮಾರಾಟಗಾರರು ಅಥವಾ ಸ್ಥಳೀಯ ಮಾರುಕಟ್ಟೆಗಳಿಗೆ ಕೆಲವು ನಗದನ್ನು ಕೊಂಡೊಯ್ಯುವುದು ಕೂಡ ಉತ್ತಮ.

ಸಾಮಾನ್ಯವಾಗಿ, UAE ಅನ್ನು ಸೋಲೋ ಪ್ರಯಾಣಿಕರಿಗೆ ಸುರಕ್ಷಿತವೆಂದು ಪರಿಗಣಿಸಲಾಗುತ್ತದೆ, ಆದರೆ ಯಾವುದೇ ತಾಣದಂತೆ, ವಿಶೇಷವಾಗಿ ರಾತ್ರಿಯಲ್ಲಿ ನಿಮ್ಮ ಸುತ್ತಮುತ್ತಲಿನ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತವಾಗಿದೆ.

ನಿಮ್ಮ ಪ್ರಯಾಣವನ್ನು ನೆನಪಿಡಲು ಅರೇಬಿಯನ್ ಪರ್ಫ್ಯೂಮ್‌ಗಳು, ಅರೇಬಿಕ್ ಕಾಫಿ ಸೆಟ್‌ಗಳು, ಕಠಿಣ ಕರಕುಶಲ ವಸ್ತುಗಳು ಅಥವಾ ಸ್ಥಳೀಯವಾಗಿ ತಯಾರಿಸಿದ ಖರ್ಜೂರ ಮತ್ತು ಸಿಹಿಗಳನ್ನು ಅನನ್ಯ ಸ್ಮರಣಿಕೆಗಳಾಗಿ ಖರೀದಿಸಲು ಪರಿಗಣಿಸಿ.

ಮಚ್ಬೂಸ್ (ಮಾಂಸದೊಂದಿಗೆ ಮಸಾಲೆಯುಕ್ತ ಅಕ್ಕಿ), ಲುಕೈಮತ್ (ಸಿಹಿ ಡಂಪ್ಲಿಂಗ್ಸ್), ಅಥವಾ ಶ್ವಾರ್ಮ (ಪಿಟಾ ಬ್ರೆಡ್‌ನಲ್ಲಿ ಗ್ರಿಲ್ ಮಾಡಿದ ಮಾಂಸ) ದಂತಹ ಆಹಾರಗಳನ್ನು ಪ್ರಯತ್ನಿಸುವ ಮೂಲಕ ಎಮಿರೇಟ್ಸ್ ಪಾಕಪದ್ಧತಿಯನ್ನು ಅನ್ವೇಷಿಸಿ.

UAE ಹೆಚ್ಚಿನ ಮಟ್ಟದ ಆರೋಗ್ಯ ಮಾನದಂಡಗಳನ್ನು ನಿರ್ವಹಿಸುತ್ತದೆ, ಯಾವುದೇ ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡಲು UAE ಭೇಟಿ ವೀಸಾಗಳಿಗಾಗಿ ನೀವು ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಹೊಂದಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೆಚ್ಚುವರಿಯಾಗಿ, ಬಾಟಲ್ ನೀರನ್ನು ಕುಡಿಯಿರಿ ಮತ್ತು ಆಹಾರದ ಶುಚಿತ್ವದ ಬಗ್ಗೆ ಎಚ್ಚರಿಕೆಯಿಂದಿರಿ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ

BFSI ನಾಯಕತ್ವ ಪ್ರಶಸ್ತಿ 2022 - ವರ್ಷದ ಉತ್ಪನ್ನ ನಾವೀನ್ಯಕಾರ (ಆಪ್ಟಿಮಾ ಸೆಕ್ಯೂರ್)

ETBFSI ಎಕ್ಸಲೆನ್ಸ್ ಅವಾರ್ಡ್ಸ್ 2021

FICCI ಇನ್ಶೂರೆನ್ಸ್ ಉದ್ಯಮ
ಪ್ರಶಸ್ತಿಗಳು ಸೆಪ್ಟೆಂಬರ್ 2021

ICAI ಅವಾರ್ಡ್ಸ್ 2015-16

SKOCH ಆರ್ಡರ್-ಆಫ್-ಮೆರಿಟ್

ಅತ್ಯುತ್ತಮ ಗ್ರಾಹಕ ಅನುಭವ
ವರ್ಷದ ಅವಾರ್ಡ್

ICAI ಪ್ರಶಸ್ತಿಗಳು 2014-15

CMS ಔಟ್‌ಸ್ಟ್ಯಾಂಡಿಂಗ್ ಅಫಿಲಿಯೇಟ್ ವರ್ಲ್ಡ್-ಕ್ಲಾಸ್ ಸರ್ವೀಸ್ ಅವಾರ್ಡ್

iAAA ರೇಟಿಂಗ್

ISO ಪ್ರಮಾಣೀಕರಣ

ಖಾಸಗಿ ವಲಯದಲ್ಲಿ ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ - ಜನರಲ್ 2014

slider-right
ಸ್ಲೈಡರ್-ಎಡ
ಎಲ್ಲಾ ಪ್ರಶಸ್ತಿಗಳನ್ನು ನೋಡಿ
ಎಚ್‌ಡಿಎಫ್‌ಸಿ ಎರ್ಗೋದಿಂದ ಆನ್ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಿ

ಪೂರ್ತಿಯಾಗಿ ಓದಿದಿರಾ? ಟ್ರಾವೆಲ್ ಪ್ಲಾನ್ ಖರೀದಿಸಲು ಬಯಸುತ್ತಿದ್ದೀರಾ?