ಪರಿಸರದ ಬಗ್ಗೆ ಮನುಷ್ಯ ತೋರುತ್ತಿರುವ ಗೌರವದ ಕೊರತೆಯಿಂದಾಗಿ, ನೈಸರ್ಗಿಕ ವಿಕೋಪಗಳು ಪದೇಪದೇ ಕಾಣಿಸಿಕೊಳ್ಳುತ್ತಿರುವುದು ಮಾತ್ರವಲ್ಲ, ತುಂಬಾ ಭೀಕರ ಪರಿಣಾಮವನ್ನೂ ಬೀರುತ್ತಿವೆ. ಅದರಲ್ಲೂ, ಭೌಗೋಳಿಕ ವೈವಿಧ್ಯತೆಗೆ ಹೆಸರಾಗಿರುವ ಭಾರತದಲ್ಲಿ, ಕೆಲವೊಂದು ಪ್ರದೇಶಗಳು ಒಂದಲ್ಲಾ ಒಂದು ನೈಸರ್ಗಿಕ ವಿಪತ್ತುಗಳ ಅಪಾಯ ಎದುರಿಸುತ್ತಲೇ ಇರುತ್ತವೆ. ಪರ್ವತ ಪ್ರದೇಶಗಳಲ್ಲಿ ಹಿಮಪಾತ ಮತ್ತು ಭೂಕುಸಿತದ ಸಮಸ್ಯೆಯಾದರೆ, ಕರಾವಳಿ ಪ್ರದೇಶಗಳಲ್ಲಿ ಸುನಾಮಿ ಮತ್ತು ಸೈಕ್ಲೋನ್‌ಗಳ ಹಾವಳಿ ಹೇಳತೀರದು. ಮಳೆಗಾಲ ಬಂದರೆ ಸಾಕು, ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ, ಭಾರತದ ಬಹುತೇಕ ರಾಜ್ಯಗಳು ಪ್ರವಾಹದಿಂದ ಬಳಲುತ್ತವೆ.
ಪ್ರವಾಹಗಳು ಜನಜೀವನವನ್ನು ಅಸ್ತವ್ಯಸ್ತ ಮಾಡಬಹುದು. ರಸ್ತೆ, ಬೆಳೆ ಮತ್ತು ಚರಂಡಿ ವ್ಯವಸ್ಥೆಗಳ ಹಾನಿಯ ಜೊತೆಗೆ, ಇದು ನಿಮ್ಮ ಮನೆ ಮತ್ತು ವಸ್ತುಗಳನ್ನು ಕೂಡ ಹಾನಿಗೊಳಿಸಬಹುದು. ಆದಾಗ್ಯೂ, ನಿಮ್ಮಲ್ಲಿ ಫ್ಲಡ್ ಇನ್ಶೂರೆನ್ಸ್ ಇದ್ದರೆ, (ಇದು ಸಾಮಾನ್ಯವಾಗಿ ಸಮಗ್ರ ಹೋಮ್ ಇನ್ಶೂರೆನ್ಸ್‌ನ ಭಾಗವಾಗಿರುತ್ತದೆ) ನೀವು ಪ್ರವಾಹದ ಬಗ್ಗೆ ಚಿಂತಿಸಬೇಕಾಗಿಲ್ಲ. ಅಂತಹ ಸಂದರ್ಭದಲ್ಲಿ ಬಹುತೇಕ ದುರಸ್ತಿ ವೆಚ್ಚಗಳನ್ನು ಮರುಪಾವತಿ ಮಾಡಲಾಗುತ್ತದೆ. ಫ್ಲಡ್ ಇನ್ಶೂರೆನ್ಸ್ ಬಗ್ಗೆ ಇಲ್ಲಿ ಇನ್ನಷ್ಟು ತಿಳಿಯಿರಿ.
ಭಾರತದಲ್ಲಿ, ಮನೆ ಕಟ್ಟಿಸಲು ದುಡ್ಡು ಹೊಂದಿಸುವುದಕ್ಕೆ ಸುಮಾರು ದಶಕಗಳೇ ಬೇಕಾಗುತ್ತವೆ. ಒಂದು ದೊಡ್ಡ ಪ್ರವಾಹ, ಆ ಶ್ರಮವನ್ನೆಲ್ಲಾ ಕೆಲವೇ ನಿಮಿಷಗಳಲ್ಲಿ ನೆಲಸಮ ಮಾಡುತ್ತದೆ. ಆದ್ದರಿಂದ, ಸಮಗ್ರ ಹೋಮ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವುದು ಕಡ್ಡಾಯವಾಗಿದೆ. ಫ್ಲಡ್ ಇನ್ಶೂರೆನ್ಸ್, ಅಂತಹ ಹೋಮ್ ಇನ್ಶೂರೆನ್ಸ್‌ನ ಉಪಭಾಗ. ನೀವು ಅದನ್ನು ಆಯ್ಕೆ ಮಾಡಿದಾಗ, ಪ್ರವಾಹದಿಂದ ಹಾನಿಯಾದ ಸಂದರ್ಭದಲ್ಲಿ ದುರಸ್ತಿಗಾಗಿ ಪರಿಹಾರ ಪಡೆಯಲು ಅರ್ಹರಾಗುತ್ತೀರಿ.
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನದಿ ನೀರಿನ ಹೆಚ್ಚಳ ಅಥವಾ ನಿರಂತರ ಮಳೆಯಿಂದ ಮುಳುಗಡೆ ಆಗುವುದು ಅಥವಾ ಬಿರುಗಾಳಿಯಿಂದಾಗಿ ಸಮುದ್ರದ ನೀರು ನಗರಕ್ಕೆ ನುಗ್ಗುವುದು, ಇತ್ಯಾದಿಗಳಿಂದ ಉಂಟಾದ ಪ್ರವಾಹದ ವಿರುದ್ಧ ನಿಮ್ಮನ್ನು ರಕ್ಷಿಸಲಾಗುತ್ತದೆ.
ಭಾರತವು ಅನೇಕ ನದಿಗಳನ್ನು ಹೊಂದಿದೆ. ರಾವಿ, ಯಮುನಾ, ಸಟ್ಲೆಜ್, ಗಂಗಾ, ಬ್ರಹ್ಮಪುತ್ರ, ಮಹಾನದಿ, ಗೋದಾವರಿ ಮುಂತಾದ ನದಿಗಳ ದಂಡೆಯಲ್ಲಿ ಹಲವಾರು ನಗರಗಳು ಮತ್ತು ಪಟ್ಟಣಗಳಿವೆ. ಈ ನದಿಗಳು ಅನೇಕ ಉಪನದಿಗಳನ್ನೂ ಹೊಂದಿವೆ. ಅದೇ ರೀತಿ, ಭಾರತ ಒಂದು ಉಪಖಂಡವಾಗಿದ್ದು, ಮೂರು ಬದಿಗಳಲ್ಲಿ ಸಮುದ್ರದಿಂದ ಸುತ್ತುವರೆದಿದೆ - ಪಶ್ಚಿಮಕ್ಕೆ ಅರಬ್ಬಿ ಸಮುದ್ರ, ದಕ್ಷಿಣಕ್ಕೆ ಹಿಂದೂ ಮಹಾಸಾಗರ ಮತ್ತು ಪೂರ್ವಕ್ಕೆ ಬಂಗಾಳ ಕೊಲ್ಲಿ
ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ (GSI) ಪ್ರಕಾರ, ದೇಶದ ಸುಮಾರು 12.5% ಪ್ರದೇಶ ಪ್ರವಾಹ-ಪೀಡಿತವಾಗಿದೆ. ಪಶ್ಚಿಮ ಬಂಗಾಳ, ಒರಿಸ್ಸಾ, ಅಸ್ಸಾಂ, ಬಿಹಾರ, ಆಂಧ್ರ ಪ್ರದೇಶ, ಕೇರಳ, ಗುಜರಾತ್, ಉತ್ತರ ಪ್ರದೇಶ, ಹರ್ಯಾಣ ಮತ್ತು ಪಂಜಾಬ್‌ನಂತಹ ಕೆಲವು ರಾಜ್ಯಗಳು ಆಗಾಗ್ಗೆ ಈ ಅನಾಹುತಗಳಿಗೆ ಸಾಕ್ಷಿಯಾಗುತ್ತವೆ. ಮಹಾರಾಷ್ಟ್ರದಂತಹ ರಾಜ್ಯಗಳು ಕುಂಭದ್ರೋಣ ಮಳೆ ಮತ್ತು ಭಾರೀ ಪ್ರವಾಹಕ್ಕೆ ತುತ್ತಾಗುತ್ತವೆ.
• ಮನೆಯೊಳಗೆ ನೀರು ನುಗ್ಗುವುದರಿಂದ ನೆಲಕ್ಕೆ ಆಗುವ ಹಾನಿ
• ನೀರಿನ ಸೋರಿಕೆಯಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದ ಆದ ಯಾವುದೇ ಹಾನಿ
• ನಿಮ್ಮ ಇನ್ಶೂರೆನ್ಸ್ ಪ್ಲಾನ್ ವೈಯಕ್ತಿಕ ವಸ್ತುಗಳನ್ನು ನಮೂದಿಸಿದರೆ, ಪೀಠೋಪಕರಣಗಳಿಗೆ ಹಾನಿ
ಗೋಡೆಯ ರಚನೆಯಿಂದ ಹಿಡಿದು ಅದರ ಬಣ್ಣದವರೆಗೆ ಆಗುವ ಹಾನಿ
ಮೇಲ್ಛಾವಣಿಯಿಂದ ನೀರಿನ ಸೋರಿಕೆ. ಬಿರುಕು ಹಾಗೂ ಸಂದುಗಳ ಮೂಲಕ ಸೋರುವ ನೀರು ಮಾತ್ರವಲ್ಲ, ಮೇಲ್ಛಾವಣಿಯಲ್ಲಿ ನಿಂತ ನೀರಿನಿಂದ ಕೂಡ ಕಟ್ಟಡ ದುರ್ಬಲವಾಗಬಹುದು
ಮಾಲೀಕರ ಉದ್ದೇಶಪೂರ್ವಕ ನಿರ್ಲಕ್ಷ್ಯದಿಂದ ಉಂಟಾದ ಹಾನಿಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ
ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ
ಪಾಲಿಸಿ ಖರೀದಿಸುವ ಸಮಯದಲ್ಲಿ, ಪ್ರಾಡಕ್ಟ್ ಬಗ್ಗೆ ವಿಮಾದಾರರು ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿಯನ್ನು ಒದಗಿಸಬೇಕು.
ಒಪ್ಪಂದದಲ್ಲಿ ಪಟ್ಟಿ ಮಾಡದ ಯಾವುದೇ ವಸ್ತುವನ್ನು ಕವರ್ ಮಾಡಲಾಗುವುದಿಲ್ಲ.
ತ್ಯಾಜ್ಯ ವಿಲೇವಾರಿಯನ್ನು ಪಾಲಿಸಿ ಕವರ್ ಮಾಡುವುದಿಲ್ಲ
ಹಾನಿಯ ಬಗ್ಗೆ ನೀವು ಸಮಯಕ್ಕೆ ಸರಿಯಾಗಿ ತಿಳಿಸದಿದ್ದರೆ
ಇನ್ಶೂರೆನ್ಸ್ ಅವಧಿಯ ನಂತರ ಉಂಟಾಗುವ ಹಾನಿಗಳಿಗೆ ಕವರೇಜ್ ಇರುವುದಿಲ್ಲ
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್
ಕ್ಲೈಮ್ ಸಮಯದಲ್ಲಿ, ಹಾನಿಯನ್ನು ನಿರ್ಣಯಿಸಲು ಇನ್ಶೂರೆನ್ಸ್ ಕಂಪನಿಯು ತಜ್ಞರನ್ನು ನಿಯೋಜಿಸುತ್ತದೆ. ಆದ್ದರಿಂದ, ನೀವು ಸರಿಯಾದ ಘೋಷಣೆ ಮಾಡಬೇಕು ಮತ್ತು ಹಾನಿಯನ್ನು ಸಾಬೀತುಪಡಿಸಲು ಸರಿಯಾದ ಡಾಕ್ಯುಮೆಂಟ್ಗಳು ಮತ್ತು ಸಾಕ್ಷಿ ಹೊಂದಿರಬೇಕು. ಹಾಗಾಗಿ, ಬಿಲ್ಗಳನ್ನು ಜೋಪಾನವಾಗಿ ಕಾಪಾಡಿಕೊಳ್ಳಿ. ಸಾಧ್ಯವಾದರೆ, ಸಾಕ್ಷಿಗಾಗಿ ಹಾನಿಯ ಫೋಟೋ ತೆಗೆದುಕೊಳ್ಳಿ. ಜೊತೆಗೆ, ಆದಷ್ಟು ಬೇಗ ವಿಮಾದಾತರಿಗೆ ತಿಳಿಸಿ.