ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ನಿಶ್ಚಿಂತರಾಗಿ ಮತ್ತು ಆರಾಮಾಗಿ ವಿದೇಶವನ್ನು ಸುತ್ತಾಡಲು ಭದ್ರತೆ ಮತ್ತು ನೆಮ್ಮದಿಯನ್ನು ನೀಡುತ್ತದೆ. ವಿದೇಶಿ ನೆಲದಲ್ಲಿ ಹೊಸ ಸಂಸ್ಕೃತಿ ಮತ್ತು ಅಲ್ಲಿನ ಜನರ ವಿಶಿಷ್ಟತೆಯನ್ನು ಅನುಭವಿಸುತ್ತಾ ನೀವು ನೆನಪುಗಳನ್ನು ಸೃಷ್ಟಿಸುತ್ತಿರುವಾಗ, ಯಾವುದೇ ಅನಿರೀಕ್ಷಿತ ಘಟನೆಯ ವಿರುದ್ಧ ನೀವು ಆರ್ಥಿಕವಾಗಿ ಸುರಕ್ಷಿತರಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನೆನಪಿಡಿ, ವೈದ್ಯಕೀಯ ಮತ್ತು ದಂತ ತುರ್ತುಸ್ಥಿತಿಗಳು ಯಾವಾಗ ಬೇಕಾದರೂ ಎದುರಾಗಬಹುದು ಮತ್ತು ನಿಮ್ಮ ರಜಾದಿನದಲ್ಲಿಯೂ ಅದು ಕಾಡಬಹುದು. ವಿದೇಶದಲ್ಲಿ ಅಂತಹ ವೆಚ್ಚಗಳು ನಿಮಗೆ ದುಬಾರಿ ಆಗಬಹುದು. ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಥವಾ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಅಂತಹ ಸಂಕಟದಿಂದ ನಿಮ್ಮನ್ನು ರಕ್ಷಿಸಬಹುದು.
ವೈದ್ಯಕೀಯ ತುರ್ತುಸ್ಥಿತಿಗಳನ್ನು ಹೊರತುಪಡಿಸಿ, ವಿಮಾನ ಅಥವಾ ಬ್ಯಾಗೇಜ್ ವಿಳಂಬಗಳಂತಹ ಇತರ ದುರದೃಷ್ಟಕರ ಘಟನೆಗಳು ನಿಮ್ಮ ಸಂತೋಷವನ್ನು ಹಾಳು ಮಾಡಬಹುದು. ಅಂತಾರಾಷ್ಟ್ರೀಯ ಪ್ರಯಾಣದ ಸಮಯದಲ್ಲಿ, ಚೆಕ್-ಇನ್ ಬ್ಯಾಗೇಜ್ ನಷ್ಟ ತುಂಬಾ ಸಾಮಾನ್ಯವಾಗಿದೆ. ಈ ಪರಿಸ್ಥಿತಿಗಳು ಹೆಚ್ಚುವರಿ ವೆಚ್ಚಗಳಿಗೆ ಕಾರಣವಾಗಬಹುದು ಮತ್ತು ನಿಮ್ಮ ಪ್ರಯಾಣದ ಬಜೆಟ್ ಅನ್ನು ಹೆಚ್ಚಿಸಬಹುದು. ಆದರೆ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್‌ನ ಭರವಸೆಯೊಂದಿಗೆ, ಅಂತಹ ದುರ್ಘಟನೆಗಳ ಬಗ್ಗೆ ಚಿಂತಿಸದೆ ನೀವು ನಿಮ್ಮ ರಜಾದಿನಗಳನ್ನು ಆನಂದಿಸಬಹುದು. ಇದಲ್ಲದೆ, ಪಾಸ್‌ಪೋರ್ಟ್‌ನಂಥ ಅಗತ್ಯ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದು ಅಥವಾ ಕಳ್ಳತನ ಅಥವಾ ದರೋಡೆಯಂಥ ಸಂದರ್ಭದಲ್ಲಿ, ಅಗತ್ಯವಿರುವ ಕವರ್ ಮತ್ತು ಭದ್ರತೆಯನ್ನು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ನೀಡುತ್ತದೆ. ನೀವು ಕೆಲಸ ಅಥವಾ ವಿರಾಮಕ್ಕಾಗಿ ವಿದೇಶಿ ಪ್ರವಾಸವನ್ನು ಯೋಜಿಸುತ್ತಿದ್ದರೆ ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಆಯ್ಕೆ ಮಾಡಿ ಮತ್ತು ನಿಮ್ಮ ಮನೆಯಿಂದಲೇ ಆರಾಮಾಗಿ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸಿ.
ವಿದೇಶದಲ್ಲಿ ಪ್ರಯಾಣಿಸುವಾಗ, ಈ ಹಿಂದೆ ಯೋಜಿಸಿದ ಪ್ರವಾಸವು ಕಾರ್ಯರೂಪಕ್ಕೆ ಬರದಿದ್ದರೆ ನಿಮ್ಮ ಸಮಯದ ಸದುಪಯೋಗ ಪಡೆಯಲು ಬ್ಯಾಕಪ್ ಪ್ಲಾನ್ ಸಿದ್ಧವಾಗಿ ಇರಿಸಿಕೊಳ್ಳಿ. ಕಳೆದುಹೋದ ಲಗೇಜ್, ವಿಮಾನದ ವಿಳಂಬಗಳು, ಸರಕು ವಿಳಂಬಗಳು ಅಥವಾ ಯಾವುದೇ ಅನಿರೀಕ್ಷಿತ ಘಟನೆಗಳ ವಿರುದ್ಧ ನಷ್ಟಕ್ಕೆ ಸಾಗರೋತ್ತರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಕವರೇಜನ್ನು ಒದಗಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಸುಲಭವಾಗಿ ಸೆಟಲ್ ಮಾಡಲು 1 ಲಕ್ಷ+ ನಗದುರಹಿತ ಆಸ್ಪತ್ರೆಗಳ ನೆಟ್ವರ್ಕ್ ಮತ್ತು 24x7 ಬೆಂಬಲವನ್ನು ಒದಗಿಸುತ್ತದೆ.
ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಾಗಿ ಈ ಕೆಳಗಿನ ಸಂದರ್ಭಗಳಲ್ಲಿ ನಿಮಗೆ ಸುರಕ್ಷಿತವಾಗಿರುತ್ತದೆ:
ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.
ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.
ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.
ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.
ವಿಮಾನ ವಿಳಂಬ ಅಥವಾ ಕ್ಯಾನ್ಸಲೇಶನ್ ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಚಿಂತಿಸಬೇಡಿ, ನಮ್ಮ ವೆಚ್ಚ ತುಂಬಿಕೊಡುವಿಕೆ ಫೀಚರ್ ನಿಮಗೆ ಈ ಕಾರಣದಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.
ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ಪಾಸ್‌ಪೋರ್ಟ್ ಪ್ರತಿ ಮತ್ತು/ಅಥವಾ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಾವು ಮರುಪಾವತಿಸುತ್ತೇವೆ.
ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ಮರುಪಾವತಿ ಮಾಡಲಾಗದ ವಸತಿ ಸೌಲಭ್ಯ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.
ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ
ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.
ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.
ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.
ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್ ಓದಿ.
ಯುದ್ಧ ಅಥವಾ ಕಾನೂನಿನ ಉಲ್ಲಂಘನೆಯಿಂದಾಗಿ ಉಂಟಾದ ಅಸ್ವಸ್ಥತೆ ಅಥವಾ ಆರೋಗ್ಯ ಸಮಸ್ಯೆಗಳನ್ನು ಪ್ಲಾನ್ ಕವರ್ ಮಾಡುವುದಿಲ್ಲ.
ಯಾವುದೇ ಪ್ರಕಾರದ ಅಮಲಿನ ಪದಾರ್ಥಗಳು ಅಥವಾ ನಿಷೇಧಿತ ಪದಾರ್ಥಗಳನ್ನು ಸೇವಿಸಿದರೆ, ಪಾಲಿಸಿಯು ಯಾವುದೇ ಕ್ಲೇಮ್‌ಗಳನ್ನು ಸ್ವೀಕರಿಸುವುದಿಲ್ಲ.
ಇನ್ಶೂರ್ಡ್ ಪ್ರಯಾಣ ಕೈಗೊಳ್ಳುವ ಮೊದಲು ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇದ್ದರೆ ಹಾಗೂ ಹಾಗೆ ಮೊದಲೇ ಇದ್ದ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆದಿದ್ದರೆ, ಆ ಖರ್ಚುಗಳನ್ನು ಪಾಲಿಸಿ ಕವರ್ ಮಾಡುವುದಿಲ್ಲ.
ಇನ್ಶೂರ್ಡ್ ಪ್ರಯಾಣದ ಸಮಯದಲ್ಲಿ ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆ ಮಾಡಿಸಿಕೊಳ್ಳುವ ಆಯ್ಕೆ ಮಾಡಿದರೆ, ಅದರ ಖರ್ಚುಗಳು ಕವರ್ ಆಗುವುದಿಲ್ಲ.
ತಾವಾಗಿಯೇ ಮಾಡಿಕೊಂಡ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾದರೆ, ಆ ವೈದ್ಯಕೀಯ ಖರ್ಚುಗಳನ್ನು ನಮ್ಮ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಕವರ್ ಮಾಡುವುದಿಲ್ಲ.
ಪ್ರಮುಖ ಫೀಚರ್‌ಗಳು | ಪ್ರಯೋಜನಗಳು |
ನಗದುರಹಿತ ಆಸ್ಪತ್ರೆಗಳು | ವಿಶ್ವದಾದ್ಯಂತ 1,00,000+ ನಗದುರಹಿತ ಆಸ್ಪತ್ರೆಗಳು. |
ಒಳಗೊಂಡಿರುವ ದೇಶಗಳು | 25 ಷೆಂಗೆನ್ ದೇಶಗಳು + 18 ಇತರೆ ದೇಶಗಳು. |
ವಿಮಾ ಮೊತ್ತ | $40K ರಿಂದ $1000K |
ಹೆಲ್ತ್ ಚೆಕ್-ಅಪ್ ಅವಶ್ಯಕತೆ | ಪ್ರಯಾಣದ ಮೊದಲು ಯಾವುದೇ ಹೆಲ್ತ್ ಚೆಕ್-ಅಪ್ ಅಗತ್ಯವಿಲ್ಲ. |
ಕೋವಿಡ್-19 ಕವರೇಜ್ | ಕೋವಿಡ್-19 ಆಸ್ಪತ್ರೆ ದಾಖಲಾತಿಗೆ ಕವರೇಜ್. |
ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಹೊಂದುವ ಕೆಲವು ಪ್ರಯೋಜನಗಳು ಇಲ್ಲಿವೆ -
ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ಒಂದು ಕ್ಲಿಕ್ ದೂರದಲ್ಲಿದೆ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ ನಿಮ್ಮ ಮನೆ ಅಥವಾ ಕಚೇರಿಯಿಂದ ಆರಾಮದಿಂದ ಮಾಡಬಹುದು. ಆದ್ದರಿಂದ, ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳ ಆನ್ಲೈನ್ ಖರೀದಿಯು ಹೆಚ್ಚಾಗುತ್ತಿದೆ ಮತ್ತು ಪ್ರತಿ ದಿನವೂ ಬೆಳೆಯುತ್ತಿದೆ.
• ನಮ್ಮ ಪಾಲಿಸಿಯನ್ನು ಖರೀದಿಸಲು ಇಲ್ಲಿ ಲಿಂಕ್ ಕ್ಲಿಕ್ ಮಾಡಿ, ಅಥವಾ ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ವೆಬ್‌ಪೇಜಿಗೆ ಭೇಟಿ ನೀಡಿ.
• ಪ್ರಯಾಣಿಕರ ವಿವರಗಳು, ತಲುಪುವ ಮಾಹಿತಿ ಮತ್ತು ಪ್ರಯಾಣದ ಆರಂಭ ಮತ್ತು ಕೊನೆಯ ದಿನಾಂಕಗಳನ್ನು ನಮೂದಿಸಿ.
• ನಮ್ಮ ಮೂರು ರೂಪಿಸಲಾದ ಆಯ್ಕೆಗಳಿಂದ ನಿಮ್ಮ ಆದ್ಯತೆಯ ಪ್ಲಾನ್ ಅನ್ನು ಆಯ್ಕೆಮಾಡಿ.
• ನಿಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಿ.
• ಪ್ರಯಾಣಿಕರ ಬಗ್ಗೆ ಹೆಚ್ಚುವರಿ ವಿವರಗಳನ್ನು ಭರ್ತಿ ಮಾಡಿ ಮತ್ತು ಆನ್ಲೈನ್ ಪಾವತಿ ವಿಧಾನಗಳನ್ನು ಬಳಸಿ ಪಾವತಿಸಲು ಮುಂದುವರಿಯಿರಿ.
• ಅದನ್ನು ಮಾಡಲು ಉಳಿದಿರುವುದು ಏನೆಂದರೆ- ನಿಮ್ಮ ಪಾಲಿಸಿಯನ್ನು ತಕ್ಷಣವೇ ಡೌನ್ಲೋಡ್ ಮಾಡಿ!
ಪ್ರಪಂಚವು ಸಾಮಾನ್ಯ ಸ್ಥಿತಿಗೆ ವಾಪಸಾದಾಗ ಮತ್ತು ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಮತ್ತೆ ಸಜ್ಜಾಗುತ್ತಿರುವಾಗ, ಕೋವಿಡ್-19 ಭಯವು ನಮ್ಮನ್ನು ಇನ್ನೂ ದೊಡ್ಡದಾಗಿ ಕಾಡುತ್ತಿದೆ. ಇತ್ತೀಚೆಗೆ ಹೊಸ ರೂಪಾಂತರದ ಹೊರಹೊಮ್ಮುವಿಕೆ - ಆರ್ಕ್ಟರಸ್ ಕೋವಿಡ್ ರೂಪಾಂತರಿ - ಸಾರ್ವಜನಿಕ ಮತ್ತು ಆರೋಗ್ಯ ತಜ್ಞರಲ್ಲಿ ಹೆಚ್ಚಿನ ಕಳಕಳಿಯನ್ನು ಉಂಟುಮಾಡಿದೆ. ಹೆಚ್ಚಿನ ದೇಶಗಳು ಕೋವಿಡ್-19 ಗೆ ಸಂಬಂಧಿಸಿದ ತಮ್ಮ ಟ್ರಾವೆಲ್ ಪ್ರೋಟೋಕಾಲ್‌ಗಳನ್ನು ಸಡಿಲಗೊಳಿಸಿದರೂ, ಮುನ್ನೆಚ್ಚರಿಕೆ ಮತ್ತು ಎಚ್ಚರಿಕೆಯು ಇನ್ನೊಂದು ಅಲೆಯನ್ನು ತಡೆಯಲು ನಮಗೆ ಸಹಾಯ ಮಾಡುತ್ತದೆ. ಸವಾಲಿನ ಅಂಶವೆಂದರೆ ಹೊಸ ರೂಪಾಂತರದ ಯಾವುದೇ ಹೊರಹೊಮ್ಮುವಿಕೆಯು ಹಿಂದಿನ ತಳಿಗಳಿಗಿಂತ ಹೆಚ್ಚು ಹರಡುತ್ತದೆ ಎಂಬ ವರದಿಯಿದೆ. ಈ ಅನಿಶ್ಚಿತತೆಯ ಅರ್ಥವೇನೆಂದರೆ, ನಾವು ಏನನ್ನೂ ನಿರ್ಲಕ್ಷಿಸಲು ಸಾಧ್ಯವಿಲ್ಲ ಮತ್ತು ಸೋಂಕು ಪ್ರಸರಣವನ್ನು ತಡೆಯಲು ಮೂಲಭೂತ ಮುನ್ನೆಚ್ಚರಿಕೆಗಳನ್ನು ಅನುಸರಿಸಲೇಬೇಕು. ಮಾಸ್ಕ್‌ಗಳು, ಸ್ಯಾನಿಟೈಸರ್‌ಗಳು ಮತ್ತು ಕಡ್ಡಾಯ ಸ್ವಚ್ಛತೆಯು ಈಗಲೂ ನಮ್ಮ ಆದ್ಯತೆಯಾಗಿದೆ.
ಹೊಸ ರೂಪಾಂತರವು ಅದರ ಉಪಸ್ಥಿತಿಯನ್ನು ತೋರಿದಾಗ, ಭಾರತ ಮತ್ತು ವಿದೇಶದಲ್ಲಿ ಕೋವಿಡ್ ಪ್ರಕರಣಗಳು ವ್ಯಾಕ್ಸಿನೇಶನ್‌ಗಳು ಮತ್ತು ಬೂಸ್ಟರ್ ಡೋಸ್‌ಗಳ ಪ್ರಾಮುಖ್ಯತೆಯನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ನೀವು ಇದುವರೆಗೂ ವ್ಯಾಕ್ಸಿನ್ ಪಡೆಯದಿದ್ದರೆ, ನಿಮಗೆ ತಗಲುವ ಸಾಧ್ಯತೆಯು ಹೆಚ್ಚಾಗಿದೆ. ನಿಮ್ಮ ಬೂಸ್ಟರ್ ಡೋಸ್‌ಗಳನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಲು ನೆನಪಿಡಿ. ನೀವು ಅಗತ್ಯ ಡೋಸ್‌ಗಳನ್ನು ತೆಗೆದುಕೊಳ್ಳದಿದ್ದರೆ ಅಂತಾರಾಷ್ಟ್ರೀಯ ಭೇಟಿಗಳಿಗೆ ಅಡಚಣೆ ಉಂಟಾಗಬಹುದು, ಏಕೆಂದರೆ ಇದು ವಿದೇಶಿ ಪ್ರಯಾಣದ ಅಗತ್ಯತೆಗಳಲ್ಲಿ ಒಂದಾಗಿದೆ. ವಿಶೇಷವಾಗಿ ನೀವು ಅಂತಾರಾಷ್ಟ್ರೀಯ ಪ್ರಯಾಣವನ್ನು ಯೋಜಿಸುತ್ತಿದ್ದರೆ ಅಥವಾ ವಿದೇಶಿ ತಾಣದಲ್ಲಿದ್ದರೆ ಕೆಮ್ಮು, ಜ್ವರ, ಆಯಾಸ, ವಾಸನೆ ಅಥವಾ ರುಚಿ ನಷ್ಟ ಮತ್ತು ಉಸಿರಾಟದ ತೊಂದರೆಗಳನ್ನು ನೋಡಿ, ಇದು ಕಳಕಳಿಯ ವಿಷಯವಾಗಿರಬಹುದು ಮತ್ತು ಆದಷ್ಟು ಬೇಗ ಪರೀಕ್ಷಿಸಿಕೊಳ್ಳಿ. ವಿದೇಶದಲ್ಲಿ ವೈದ್ಯಕೀಯ ವೆಚ್ಚಗಳು ದುಬಾರಿಯಾಗಬಹುದು, ಆದ್ದರಿಂದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಸಹಾಯವನ್ನು ಹೊಂದುವುದು ತುಂಬಾ ಸಹಾಯಕವಾಗಬಹುದು. ಎಚ್‌ಡಿಎಫ್‌ಸಿ ಎರ್ಗೋದ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ನೀವು ಕೋವಿಡ್-19 ಅನ್ನು ಹೊಂದಿದ್ದರೆ ನಿಮ್ಮನ್ನು ರಕ್ಷಿಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.
ಕೋವಿಡ್-19 ಗಾಗಿ ಟ್ರಾವೆಲ್ ಮೆಡಿಕಲ್ ಇನ್ಶೂರೆನ್ಸ್ ಅಡಿಯಲ್ಲಿ ಏನು ಕವರ್ ಆಗುತ್ತದೆ ಎಂಬುದು ಇಲ್ಲಿದೆ -
• ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳು
• ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಚಿಕಿತ್ಸೆ
• ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ದೈನಂದಿನ ನಗದು ಭತ್ಯೆ
• ವೈದ್ಯಕೀಯ ಸ್ಥಳಾಂತರ
• ಚಿಕಿತ್ಸೆಗಾಗಿ ವಿಸ್ತರಿತ ಹೋಟೆಲ್ ಸ್ಟೇ
• ಚಿಕಿತ್ಸೆ ಮತ್ತು ಮೃತದೇಹದ ವಾಪಸಾತಿ
ನೀವು ಸುರಕ್ಷಿತ ಅಥವಾ ಆರ್ಥಿಕವಾಗಿ ಹೆಚ್ಚು ಸ್ಥಿರವಾದ ದೇಶಕ್ಕೆ ಪ್ರಯಾಣಿಸುತ್ತಿದ್ದರೆ, ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆಯಾಗುತ್ತದೆ. ಅಲ್ಲದೆ, ತಲುಪುವ ಸ್ಥಳವು ನಿಮ್ಮ ಮನೆಯಿಂದ ಹೆಚ್ಚು ದೂರ ಇದ್ದರೆ, ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚಾಗಿರುತ್ತದೆ.
ನೀವು ಹೆಚ್ಚು ಸಮಯದಿಂದ ದೂರವಿದ್ದರೆ, ನೀವು ಅನಾರೋಗ್ಯಕ್ಕೆ ಒಳಗಾಗುವ ಅಥವಾ ಗಾಯವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ, ನಿಮ್ಮ ಪ್ರಯಾಣದ ಅವಧಿಯು ಹೆಚ್ಚಾಗಿದ್ದರೆ, ಪ್ರೀಮಿಯಂ ಅಧಿಕವಾಗಿರುತ್ತದೆ.
ಪ್ರೀಮಿಯಂ ನಿರ್ಧರಿಸುವಲ್ಲಿ ವಿಮಾದಾರರ ವಯಸ್ಸು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹಿರಿಯ ನಾಗರಿಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಪ್ರೀಮಿಯಂಗಳು ಸ್ವಲ್ಪ ಹೆಚ್ಚಾಗಿರಬಹುದು ಏಕೆಂದರೆ ಅವರ ಅನಾರೋಗ್ಯ ಮತ್ತು ಗಾಯದ ಅಪಾಯವು ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ.
ಇನ್ಶೂರೆನ್ಸ್ ಮಾಡಿದ ವ್ಯಕ್ತಿಯು ತಮ್ಮ ಪಾಲಿಸಿಯ ಪ್ರೀಮಿಯಂ ಅನ್ನು ನಿರ್ಧರಿಸುವ ಟ್ರಾವೆಲ್ ಇನ್ಶೂರೆನ್ಸ್ ಕವರೇಜ್ ವಿಧ. ಹೆಚ್ಚು ಸಮಗ್ರ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಹೆಚ್ಚಿನ ಪ್ರಾಥಮಿಕ ಕವರೇಜ್‌ಗಿಂತ ನೈಸರ್ಗಿಕವಾಗಿ ಹೆಚ್ಚಿನ ವೆಚ್ಚವನ್ನು ಹೊಂದಿರುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ಕ್ಲೇಮ್ ಪ್ರಕ್ರಿಯೆಯು ನೇರವಾಗಿದೆ. ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನಗದುರಹಿತವಾಗಿ ಹಾಗೂ ವೆಚ್ಚ ತುಂಬಿಕೊಡುವ ಆಧಾರದ ಮೇಲೆ ಕ್ಲೇಮ್ ಮಾಡಬಹುದು.
travelclaims@hdfcergo.com ಗೆ ಬರೆದು ಕ್ಲೇಮ್ ಬಗ್ಗೆ ತಿಳಿಸಿ ಮತ್ತು TPA ನಿಂದ ನಮ್ಮ ನೆಟ್ವರ್ಕ್‌ಗೆ ಒಳಪಡುವ ಆಸ್ಪತ್ರೆಗಳ ಪಟ್ಟಿ ಪಡೆಯಿರಿ.
Medical.services@allianz.com ನಗದುರಹಿತ ಕ್ಲೇಮ್‌ಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುತ್ತದೆ.
ROMIF ನೊಂದಿಗೆ ಡಿಜಿಟಲ್ ಕ್ಲೈಮ್ ಫಾರ್ಮ್ ಅನ್ನು medical.services@allianz.comಗೆ ಕಳುಹಿಸಿ.
ಕ್ಲೇಮ್ ಬಗ್ಗೆ travelclaims@hdfcergo.comಗೆ ತಿಳಿಸಿ ಅಥವಾ ಗ್ಲೋಬಲ್ ಟೋಲ್-ಫ್ರೀ ನಂಬರ್: +800 08250825 ಗೆ ಕರೆ ಮಾಡಿ
Travelclaims@hdfcergo.comಮರುಪಾವತಿಗಾಗಿ ಅಗತ್ಯ ಚೆಕ್‌ಲಿಸ್ಟ್/ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುತ್ತದೆ
ಕ್ಲೇಮ್ ಫಾರ್ಮ್ ಜೊತೆಗೆ ಕ್ಲೇಮ್ ಡಾಕ್ಯುಮೆಂಟ್‌ಗಳನ್ನುtravelclaims@hdfcergo.com ಅಥವಾ processing@hdfergo.com ಗೆ ಕಳಿಸಬೇಕು
ಆಯಾ ಕ್ಲೇಮ್ ವ್ಯವಸ್ಥೆಯಲ್ಲಿ ಎಚ್‌ಡಿಎಫ್‌ಸಿ ಎರ್ಗೋ ಗ್ರಾಹಕ ಸಹಾಯವಾಣಿ ಕಾರ್ಯನಿರ್ವಾಹಕರು ಕ್ಲೇಮ್ ನೋಂದಣಿ ಮಾಡಿಕೊಳ್ಳುತ್ತಾರೆ.
ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ
USಗೆ ಪ್ರಯಾಣ ಮಾಡುತ್ತಿದ್ದೀರಾ?
1 ಲಕ್ಷ+ ನಗದುರಹಿತ ಆಸ್ಪತ್ರೆಗಳ ವಿಶಾಲ ನೆಟ್ವರ್ಕ್‌ನಿಂದ ಪೂರಕವಾದ 24x7 ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್ ಸೇವೆಗಳು ಎಚ್‌ಡಿಎಫ್‌ಸಿ ಎರ್ಗೋದ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್‌ನ ವಿಶೇಷ ಫೀಚರ್ ಆಗಿದೆ
ಟ್ರಾವೆಲ್ ಇನ್ಶೂರೆನ್ಸ್ ಮೇಲಿನ ಪ್ರೀಮಿಯಂ ನಿಮ್ಮ ತಲುಪುವ ಸ್ಥಳ ಮತ್ತು ನಿಮ್ಮ ವಾಸ್ತವ್ಯದ ಅವಧಿಯನ್ನು ಅವಲಂಬಿಸಿರುತ್ತದೆ. ವಿಮಾದಾರರ ವಯಸ್ಸು ಮತ್ತು ಆಯ್ಕೆ ಮಾಡಿದ ವಿವಿಧ ರೀತಿಯ ಯೋಜನೆಗಳು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯ ವೆಚ್ಚವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.
ನಿಮ್ಮ ಪಾಲಿಸಿ ಕವರ್ ನಿಮ್ಮ ದೇಶದ ಇಮಿಗ್ರೇಶನ್ ಕೌಂಟರ್‌ನಿಂದ ಆರಂಭವಾಗುತ್ತದೆ ಮತ್ತು ನಿಮ್ಮ ರಜಾದಿನದ ನಂತರ ನೀವು ಹಿಂದಿರುಗಿದ ನಂತರ ಮತ್ತು ನಿಮ್ಮ ಇಮಿಗ್ರೇಶನ್ ಕಾರ್ಯಗಳನ್ನು ಪೂರ್ಣಗೊಳಿಸಿದ ನಂತರ ಕೊನೆಗೊಳ್ಳುತ್ತದೆ. ಇದಕ್ಕಾಗಿಯೇ ನೀವು ವಿದೇಶದಲ್ಲಿದ್ದಾಗ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಸಾಧ್ಯವಿಲ್ಲ. ಆದ್ದರಿಂದ, ಪ್ರಯಾಣ ಆರಂಭದ ನಂತರ ಖರೀದಿಸಿದ ಟ್ರಾವೆಲ್ ಇನ್ಶೂರೆನ್ಸನ್ನು ಮಾನ್ಯ ಎಂದು ಪರಿಗಣಿಸಲಾಗುವುದಿಲ್ಲ.
ವಿದೇಶ ತಲುಪಿದ ಮೇಲೆ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಇನ್ನೂ ಮಾನ್ಯವಾಗಿದ್ದರೆ ನೀವು ಪಾಲಿಸಿಯನ್ನು ವಿಸ್ತರಿಸಬಹುದು. ಆದಾಗ್ಯೂ, ನೀವು ನಿಮ್ಮ ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ಮಾತ್ರ ವಿಸ್ತರಿಸಬಹುದು ಎಂಬುದನ್ನು ನೆನಪಿಡಿ. ನೀವು ವಿದೇಶದಲ್ಲಿ ಇರುವಾಗ ಪಾಲಿಸಿಯನ್ನು ಖರೀದಿಸಲು ಸಾಧ್ಯವಿಲ್ಲ.
ಹೌದು, ನೀವು ಕೊನೆಯ ನಿಮಿಷದಲ್ಲಿಯೂ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಬಹುದು. ಆದ್ದರಿಂದ ಅದು ನಿಮ್ಮ ನಿರ್ಗಮನ ದಿನವಾಗಿದ್ದರೂ ನೀವು ಇನ್ಶೂರ್ ಮಾಡಿಲ್ಲದಿದ್ದರೂ, ನೀವು ಟ್ರಾವೆಲ್ ಇನ್ಶೂರೆನ್ಸ್ ಕವರ್ ಖರೀದಿಸಬಹುದು.
ಹೌದು, ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳು ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವುದರಿಂದ ನೀವು ವಿದೇಶದಲ್ಲಿರುವಾಗ ವೈದ್ಯರ ಸಹಾಯವನ್ನು ಪಡೆಯಬಹುದು.
ನೀವು ಷೆಂಗೆನ್ ದೇಶಗಳಿಗೆ ಪ್ರಯಾಣಿಸುತ್ತಿದ್ದರೆ, ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ವೀಸಾ ಪಡೆಯಲು ಕಡ್ಡಾಯವಾಗಿದೆ. ಇದಲ್ಲದೆ, ಅನೇಕ ದೇಶಗಳು ವೀಸಾ ಪಡೆಯಲು ಕಡ್ಡಾಯ ಟ್ರಾವೆಲ್ ಇನ್ಶೂರೆನ್ಸ್ ಹೊಂದಿವೆ. ಆದ್ದರಿಂದ, ಪ್ರಯಾಣ ಮಾಡುವ ಮೊದಲು ಪ್ರತಿ ದೇಶದ ವೀಸಾ ಅವಶ್ಯಕತೆಯನ್ನು ಪರಿಶೀಲಿಸುವುದಕ್ಕೆ ಸಲಹೆ ನೀಡಲಾಗುತ್ತದೆ.
ಹೌದು, ಅನಿರೀಕ್ಷಿತ ಪರಿಸ್ಥಿತಿಗಳಾದ ಮನೆಯಲ್ಲಿ ತುರ್ತುಸ್ಥಿತಿ, ಕುಟುಂಬದ ಸದಸ್ಯರ ಹಠಾತ್ ಮರಣ, ರಾಜಕೀಯ ಪ್ರಕ್ಷುಬ್ಧತೆ ಅಥವಾ ಭಯೋತ್ಪಾದಕ ದಾಳಿಯಂತಹ ಅನಿರೀಕ್ಷಿತ ಪರಿಸ್ಥಿತಿಗಳಿಂದಾಗಿ ನೀವು ನಿರ್ಗಮನ ದಿನಾಂಕದ ಮೊದಲು ಪ್ರಯಾಣವನ್ನು ರದ್ದುಗೊಳಿಸಿದರೆ ನೀವು ಟ್ರಿಪ್ ರದ್ದತಿಗಾಗಿ ರಿಫಂಡ್ ಅನ್ನು ಪಡೆಯಬಹುದು. ಪಾಲಿಸಿಯನ್ನು ರದ್ದುಪಡಿಸಿದ ನಂತರ ಅಂತಹ ಸಂದರ್ಭಗಳಲ್ಲಿ ನಿಮ್ಮ ಪ್ರೀಮಿಯಂನ ಸಂಪೂರ್ಣ ರಿಫಂಡ್ ಸಾಧ್ಯವಾಗುತ್ತದೆ.
ವಿಸ್ತರಣೆಗಳು ಸೇರಿದಂತೆ ಒಟ್ಟು ಪಾಲಿಸಿ ಅವಧಿಯು 360 ದಿನಗಳನ್ನು ಮೀರುವುದಿಲ್ಲ.
ಹೌದು, ವಿದೇಶದಲ್ಲಿ ವಿಮಾನವನ್ನು ಬುಕ್ ಮಾಡುವ ಮೊದಲು ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ನಿಮ್ಮ ಪ್ರಯಾಣವನ್ನು ಸುರಕ್ಷಿತಗೊಳಿಸುವುದನ್ನು ಸಲಹೆ ನೀಡಲಾಗುತ್ತದೆ. ನೀವು ಪ್ರತಿ ಬಾರಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವ ತೊಂದರೆಯಿಂದ ನಿಮ್ಮನ್ನು ಉಳಿಸುವ ಮಲ್ಟಿ ಟ್ರಿಪ್ ಇನ್ಶೂರೆನ್ಸ್ ಪ್ಲಾನ್ ಅನ್ನು ಆರಿಸುವ ಮೂಲಕ ನೀವು ಇದನ್ನು ಮಾಡಬಹುದು ಮತ್ತು ಇದು ವೆಚ್ಚ-ಪರಿಣಾಮಕಾರಿಯಾಗಿದೆ ಎಂಬುದನ್ನು ಕೂಡ ಸಾಬೀತುಪಡಿಸುತ್ತದೆ.
ಹೌದು, ನಿಮ್ಮ ನಿರ್ಗಮನದ ದಿನದಂದು ವಿಮಾನವನ್ನು ಬುಕ್ ಮಾಡಿದ ನಂತರವೂ ನೀವು ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಖರೀದಿಸಬಹುದು. ಆದಾಗ್ಯೂ, ನಿಮ್ಮ ರಜಾದಿನವನ್ನು ಬುಕ್ ಮಾಡಿದ 14 ದಿನಗಳ ಒಳಗೆ ಟ್ರಾವೆಲ್ ಇನ್ಶೂರೆನ್ಸ್ ಕವರ್ ಖರೀದಿಸಲು ಸಲಹೆ ನೀಡಲಾಗುತ್ತದೆ.
ನೀವು ನಿಮ್ಮ ಪಾಲಿಸಿಯನ್ನು ಉಚಿತವಾಗಿ ರಿಶೆಡ್ಯೂಲ್ ಮಾಡಬಹುದು; ಆದಾಗ್ಯೂ, ಪಾಲಿಸಿಯ ವಿಸ್ತರಣೆಯು ವೆಚ್ಚದ ಮೇಲೆ ಪರಿಣಾಮ ಬೀರುತ್ತದೆ. ವೆಚ್ಚದ ಹೆಚ್ಚಳವು ನೀವು ವಿಸ್ತರಿಸುವ ದಿನಗಳ ಸಂಖ್ಯೆಯನ್ನು ಅವಲಂಬಿಸಿರುತ್ತದೆ.
ಇಲ್ಲ, ನಿಗದಿತ ದಿನಾಂಕಕ್ಕಿಂತ ಮೊದಲು ನೀವು ಭಾರತಕ್ಕೆ ಹಿಂತಿರುಗಿದರೆ ನೀವು ಭಾಗಶಃ ರಿಫಂಡ್ ಅನ್ನು ಪಡೆಯುವುದಿಲ್ಲ.
ಹೌದು, ಇದು ದಂತ ಚಿಕಿತ್ಸೆಯ ವೆಚ್ಚವನ್ನು ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಪಘಾತದ ಗಾಯದಿಂದ ಉಂಟಾಗುವ ತುರ್ತು ದಂತ ಕೆಲಸದ ವೆಚ್ಚಗಳನ್ನು $500* ವರೆಗೆ ಕವರ್ ಮಾಡುತ್ತದೆ.
ಹೌದು, ಇದು ಶಿಪ್ ಅಥವಾ ವಿದೇಶದಲ್ಲಿ ರೈಲು ಪ್ರಯಾಣ ಮಾಡುವಾಗ ಉಂಟಾದ ಗಾಯಕ್ಕೆ ಕವರೇಜನ್ನು ಒದಗಿಸುತ್ತದೆ.
ವೈದ್ಯಕೀಯ ತುರ್ತುಸ್ಥಿತಿ, ಅಪಘಾತ ಅಥವಾ ಗಾಯದಿಂದಾಗಿ ನಿಮ್ಮ ಪ್ರಯಾಣದ ಕೊನೆಯ ದಿನದಂದು ನೀವು ನಿಮ್ಮ ವಾಸ್ತವ್ಯವನ್ನು ವಿಸ್ತರಿಸುತ್ತೀರಿ ಎಂದು ಭಾವಿಸೋಣ. ಆ ಸಂದರ್ಭದಲ್ಲಿ, ಯಾವುದೇ ಪ್ರೀಮಿಯಂ ಪಾವತಿಸದೆ ನೀವು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು 7 ರಿಂದ 15 ದಿನಗಳವರೆಗೆ ವಿಸ್ತರಿಸಬಹುದು.
ಹೌದು, ಭಾರತಕ್ಕೆ ಹಿಂತಿರುಗಿದ ನಂತರ ಕ್ಲೈಮ್ ಫೈಲ್ ಮಾಡುವುದು ಸಾಧ್ಯ. ಆದಾಗ್ಯೂ, ನಿಮ್ಮ ವಿಮಾದಾತರು ಹೇಳಿರುವುದನ್ನು ಹೊರತುಪಡಿಸಿ, ವೈದ್ಯಕೀಯ ತುರ್ತುಸ್ಥಿತಿ ಅಥವಾ ಡಾಕ್ಯುಮೆಂಟ್‌ಗಳ ನಷ್ಟದಂತಹ ಯಾವುದೇ ದುರದೃಷ್ಟಕರ ಘಟನೆ ನಡೆದ 90 ದಿನಗಳ ಒಳಗೆ ನೀವು ಕ್ಲೈಮ್ ಫೈಲ್ ಮಾಡಬೇಕು ಎಂಬುದನ್ನು ನೆನಪಿಡಿ.
ನಿಮಗೆ ಮೇಲ್ ಮಾಡಲಾದ ವಿಮಾದಾತರ ಸಾಫ್ಟ್ ಕಾಪಿಯು ನಿಮ್ಮ ಟ್ರಾವೆಲ್ ಇನ್ಶೂರೆನ್ಸ್‌ಗೆ ಪುರಾವೆಯಾಗಿ ಕೆಲಸ ಮಾಡಲು ಸಾಕಾಗುತ್ತದೆ. ಆದಾಗ್ಯೂ, ನಿಮ್ಮ ಪಾಲಿಸಿ ಸಂಖ್ಯೆಯನ್ನು ಬರೆದಿಡಲು ಸಲಹೆ ನೀಡಲಾಗುತ್ತದೆ ಮತ್ತು, ಹೆಚ್ಚು ಪ್ರಮುಖವಾಗಿ, ನಿಮ್ಮೊಂದಿಗೆ ನಮ್ಮ 24-ಗಂಟೆಗಳ ಸಹಾಯ ಸೇವೆ ಒದಗಿಸುವ ಟೆಲಿಫೋನ್ ನಂಬರನ್ನು ಹೊಂದಿರಿ, ಆದ್ದರಿಂದ ನೀವು ದೂರವಿರುವಾಗ ನಮ್ಮ ಸಹಾಯದ ಅಗತ್ಯವಿದ್ದರೆ ನೀವು ನಮ್ಮನ್ನು ಸಂಪರ್ಕಿಸಬಹುದು.
ನಿಮ್ಮ ಪ್ರಯಾಣದ ಸಮಯದಲ್ಲಿ ಪ್ರಯಾಣ, ವೈದ್ಯಕೀಯ ಸಲಹೆ ಮತ್ತು ಸಹಾಯಕ್ಕಾಗಿ 24-ಗಂಟೆಯ ಅಲಾರಂ ಕೇಂದ್ರದಲ್ಲಿ ನಮ್ಮ ತುರ್ತು ಪ್ರಯಾಣ ಸಹಾಯ ಪಾಲುದಾರರಿಗೆ ಕರೆ ಮಾಡಿ.
• ಇ-ಮೇಲ್: travelclaims@hdfcergo.com
• ಟೋಲ್ ಫ್ರೀ ನಂಬರ್ (ಜಾಗತಿಕವಾಗಿ): +80008250825
• ಲ್ಯಾಂಡ್‌ಲೈನ್ (ಶುಲ್ಕ ವಿಧಿಸಲಾಗುತ್ತದೆ):+91-120-4507250
ಗಮನಿಸಿ: ಸಂಪರ್ಕ ಸಂಖ್ಯೆಯನ್ನು ಡಯಲ್ ಮಾಡುವಾಗ ದಯವಿಟ್ಟು ದೇಶದ ಕೋಡನ್ನು ಸೇರಿಸಿ.
ಟ್ರಾವೆಲ್ ಇನ್ಶೂರೆನ್ಸ್ ಕವರೇಜ್ ದೇಶದ ಇಮಿಗ್ರೇಶನ್ ಕೌಂಟರಿನಲ್ಲಿ ಪ್ರಾರಂಭವಾಗುತ್ತದೆ ಮತ್ತು ದೇಶಕ್ಕೆ ಹಿಂತಿರುಗಿದ ನಂತರ ಇಮಿಗ್ರೇಶನ್ ಪೂರ್ಣಗೊಳ್ಳುವವರೆಗೆ ಮುಂದುವರಿಯುತ್ತದೆ.