ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ ಎಂದು ಅಧಿಕೃತವಾಗಿ ಕರೆಯಲ್ಪಡುವ ಜರ್ಮನಿಯು ಯುರೋಪಿನ ಕೇಂದ್ರ ಪ್ರದೇಶದ ದೇಶವಾಗಿದೆ. ಇದು ವಿಶ್ವದ ಅಗ್ರ ಅಂತರರಾಷ್ಟ್ರೀಯ ರಜಾ ತಾಣಗಳಲ್ಲಿ ಒಂದಾಗಿದ್ದು, ಅದರ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳಿಗೆ ಹೆಸರುವಾಸಿಯಾಗಿದೆ. ನೀವು ಸುಂದರ ಹಳ್ಳಿ ಪ್ರದೇಶದಲ್ಲಿ ಸ್ವಲ್ಪ ಸಮಯವನ್ನು ಕಳೆಯಲು ಬಯಸಿದರೆ ಅಥವಾ ವಿವಿಧ ಐತಿಹಾಸಿಕ ಮತ್ತು ನೈಸರ್ಗಿಕ ಲ್ಯಾಂಡ್‌ಮಾರ್ಕ್‌ಗಳ ಪ್ರವಾಸವನ್ನು ಮಾಡಲು ಬಯಸಿದರೆ, ದೇಶವು ತನ್ನನ್ನು ಭೇಟಿ ನೀಡುವವರಿಗೆ ಹಲವಾರು ಸೈಟ್‌ಸೀಯಿಂಗ್ ಅವಕಾಶಗಳನ್ನು ಒದಗಿಸುತ್ತದೆ. ಈ ದೇಶಕ್ಕೆ ನಿಮ್ಮ ಮುಂದಿನ ಯುರೋಪಿಯನ್ ರಜಾದಿನವನ್ನು ಯೋಜಿಸುವಾಗ, ಉತ್ತಮ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ನಲ್ಲಿ ಹೂಡಿಕೆ ಮಾಡುವುದನ್ನು ಪರಿಗಣಿಸಿ.
ಜರ್ಮನಿಯ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಪ್ರಯಾಣದ ಸಮಯದಲ್ಲಿ ಸಂಭವಿಸಬಹುದಾದ ಹಲವಾರು ಆಕಸ್ಮಿಕ ಘಟನೆಗಳ ವಿರುದ್ಧ ನಿಮ್ಮನ್ನು ಆರ್ಥಿಕವಾಗಿ ಕವರ್ ಮಾಡುತ್ತದೆ. ಈ ವಿಷಯದ ಬಗ್ಗೆ ಹೆಚ್ಚುವರಿ ಮಾಹಿತಿಗಾಗಿ ಇನ್ನಷ್ಟು ಓದುವುದನ್ನು ಮುಂದುವರಿಸಿ.
ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್‌ನ ಕೆಲವು ಪ್ರಮುಖ ಫೀಚರ್‌ಗಳ ಪಟ್ಟಿ ಇಲ್ಲಿದೆ ;
ಪ್ರಮುಖ ಫೀಚರ್‌ಗಳು | ವಿವರಗಳು |
ಗರಿಷ್ಠ ಕವರೇಜ್ | ವೈದ್ಯಕೀಯ, ಪ್ರಯಾಣ ಮತ್ತು ಬ್ಯಾಗೇಜ್ ಸಂಬಂಧಿತ ತುರ್ತುಸ್ಥಿತಿಗಳಂತಹ ವಿವಿಧ ಅನಿರೀಕ್ಷಿತ ಘಟನೆಗಳ ವಿರುದ್ಧ ಕವರೇಜನ್ನು ಒದಗಿಸುತ್ತದೆ. |
ನಿರಂತರ ಬೆಂಬಲ | 24x7 ಗ್ರಾಹಕ ಸಹಾಯವಾಣಿ ಮತ್ತು ಇನ್-ಹೌಸ್ ಕ್ಲೈಮ್ ಸೆಟಲ್ಮೆಂಟ್ ಮೂಲಕ ಇಪ್ಪತ್ತನಾಲ್ಕು ಗಂಟೆಗಳ ಸಹಾಯ. |
ಸುಲಭ ನಗದುರಹಿತ ಕ್ಲೈಮ್ಗಳು | ಅನೇಕ ನೆಟ್ವರ್ಕ್ ಆಸ್ಪತ್ರೆಗಳ ಮೂಲಕ ಅಕ್ಸೆಸ್ ಮಾಡಬಹುದಾದ ನಗದುರಹಿತ ಕ್ಲೈಮ್‌ಗಳ ಪ್ರಯೋಜನಗಳನ್ನು ಒದಗಿಸುತ್ತದೆ. |
ಕೋವಿಡ್-19 ಕವರೇಜ್ | ಕೋವಿಡ್-19 ಕಾರಣದಿಂದಾಗಿ ಆಸ್ಪತ್ರೆಗೆ ದಾಖಲಾಗುವ ವೆಚ್ಚಗಳಿಗೆ ಕವರೇಜ್. |
ದೊಡ್ಡ ಕವರ್ ಮೊತ್ತ | $40k ರಿಂದ $1000K ವರೆಗಿನ ವ್ಯಾಪಕ ಕವರೇಜ್ ಶ್ರೇಣಿ. |
ನೀವು ಆಯ್ಕೆ ಮಾಡಿದ ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್ ಪ್ರಕಾರವು ನಿಮ್ಮ ಪ್ರಯಾಣದ ಅವಶ್ಯಕತೆಯ ಆಧಾರದ ಮೇಲೆ ಇರಬೇಕು. ನೀಡಲಾಗುವ ಮುಖ್ಯ ಆಯ್ಕೆಗಳು ಇಲ್ಲಿವೆ ;
ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡುವುದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಕೆಲವು ನಿರ್ಣಾಯಕ ಅಂಶಗಳನ್ನು ಕೆಳಗೆ ವಿವರಿಸಲಾಗಿದೆ:
ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅನಿರೀಕ್ಷಿತ ಸಂದರ್ಭಗಳಿಗೆ ಕವರೇಜ್ ಒದಗಿಸುವ ಮೂಲಕ, ಒತ್ತಡ ಮತ್ತು ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವ ಮೂಲಕ ಹಣಕಾಸಿನ ಶಾಂತಿಯನ್ನು ಒದಗಿಸುತ್ತದೆ.
ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್ ನಗದುರಹಿತ ವೈದ್ಯಕೀಯ ಸಹಾಯವನ್ನು ಒಳಗೊಂಡಿದೆ, ಮುಂಗಡ ಪಾವತಿಗಳ ಬಗ್ಗೆ ಚಿಂತಿಸದೆ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ನೀವು ಚಿಕಿತ್ಸೆಯನ್ನು ಪಡೆಯಬಹುದು ಎಂದು ಖಚಿತಪಡಿಸುತ್ತದೆ.
ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ 24x7 ಗ್ರಾಹಕ ಸಹಾಯ ಮತ್ತು ದಕ್ಷ ಕ್ಲೈಮ್‌ಗಳ ಪ್ರಕ್ರಿಯೆಯನ್ನು ಆನಂದಿಸಿ, ತೊಂದರೆ ರಹಿತ ಪ್ರವಾಸವನ್ನು ಖಚಿತಪಡಿಸಿಕೊಳ್ಳಿ.
ಜರ್ಮನಿ ಟ್ರಿಪ್ ಇನ್ಶೂರೆನ್ಸ್ ಖರೀದಿಸುವ ಮೂಲಕ ನಿಮ್ಮ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ವಿಳಂಬ, ನಷ್ಟ ಅಥವಾ ಹಾನಿಯಿಂದ ನಿಮ್ಮ ವಸ್ತುಗಳನ್ನು ರಕ್ಷಿಸಿ.
ತುರ್ತು ವೈದ್ಯಕೀಯ ಆರೈಕೆ, ದಂತ ವೆಚ್ಚಗಳು, ಸ್ಥಳಾಂತರ, ದೇಹ ವಾಪಸಾತಿ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಂತೆ ವಿವಿಧ ವೈದ್ಯಕೀಯ ವೆಚ್ಚಗಳನ್ನು ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್ ಕವರ್ ಮಾಡುತ್ತದೆ.
ವಿಮಾನ ವಿಳಂಬಗಳು, ವೈಯಕ್ತಿಕ ಹೊಣೆಗಾರಿಕೆ ಮತ್ತು ಹೈಜಾಕ್ ಡಿಸ್ಟ್ರೆಸ್ ಭತ್ಯೆಯಂತಹ ಅನಿರೀಕ್ಷಿತ ಪರಿಸ್ಥಿತಿಗಳಿಗೆ ಕವರೇಜ್ ಪಡೆಯಿರಿ, ನಿಮ್ಮ ಪ್ರಯಾಣದ ಅನುಭವವನ್ನು ಸುಧಾರಿಸಿ.
ಸಾಮಾನ್ಯವಾಗಿ ಭಾರತದಿಂದ ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುವ ಕೆಲವು ವಿಷಯಗಳು ಇಲ್ಲಿವೆ ;
ನಮ್ಮ ಪಾಲಿಸಿಯು ವೈದ್ಯಕೀಯ ತುರ್ತುಸ್ಥಿತಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡುತ್ತದೆ, ಆದ್ದರಿಂದ ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ನಿಮ್ಮ ಜೇಬಿನಿಂದ ಕೊಡಬೇಕಾಗಿಲ್ಲ.
ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್ ನೀವು ಎದುರಿಸಬಹುದಾದ ದಂತ ತುರ್ತು ಪರಿಸ್ಥಿತಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಕೂಡ ಕವರ್ ಮಾಡುತ್ತದೆ.
ತಕ್ಷಣದ ಆರೈಕೆಯ ಅಗತ್ಯವಿರುವ ವೈದ್ಯಕೀಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ, ನಮ್ಮ ಪಾಲಿಸಿಯು ಹತ್ತಿರದ ಆರೋಗ್ಯ ಕೇಂದ್ರಕ್ಕೆ ವಿಮಾನ/ಭೂ ವೈದ್ಯಕೀಯ ಸ್ಥಳಾಂತರಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡುವ ಮೂಲಕ ಸಹಾಯ ಮಾಡುತ್ತದೆ.
ನಮ್ಮ ಪಾಲಿಸಿಯು ನಿಮಗೆ ಸಣ್ಣ ಆಸ್ಪತ್ರೆ ದಾಖಲಾತಿ ಸಂಬಂಧಿತ ವೆಚ್ಚಗಳನ್ನು ನೋಡಿಕೊಳ್ಳಲು ಸಹಾಯ ಮಾಡುತ್ತದೆ, ಆದ್ದರಿಂದ ನೀವು ನಿಮ್ಮ ಪ್ರಯಾಣದ ಬಜೆಟ್ ಅನ್ನು ಮೀರಬೇಕಾಗಿಲ್ಲ.
ಸಾವಿನ ದುಃಖದ ಸಂದರ್ಭದಲ್ಲಿ, ನಮ್ಮ ಪಾಲಿಸಿಯು ಒಬ್ಬರ ದೇಹದ ಅವಶೇಷವನ್ನು ತಮ್ಮ ದೇಶಕ್ಕೆ ವರ್ಗಾಯಿಸುವ ವೆಚ್ಚವನ್ನು ಕವರ್ ಮಾಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.
ಪ್ರಯಾಣ ಮಾಡುವಾಗ ಆಕಸ್ಮಿಕ ಸಾವಿನ ದುರದೃಷ್ಟಕರ ಸಂದರ್ಭದಲ್ಲಿ, ನಮ್ಮ ಪಾಲಿಸಿಯು ನಿಮ್ಮ ಕುಟುಂಬಕ್ಕೆ ಒಟ್ಟು ಮೊತ್ತದ ಪರಿಹಾರವನ್ನು ಒದಗಿಸುತ್ತದೆ.
ಅನಿರೀಕ್ಷಿತ ಸಂಭವದ ಸಂದರ್ಭದಲ್ಲಿ ಶಾಶ್ವತ ಅಂಗವಿಕಲತೆಗೆ ಕಾರಣವಾದರೆ, ನಿಮ್ಮ ಹೊರೆಯನ್ನು ಕಡಿಮೆ ಮಾಡಲು, ಪಾಲಿಸಿಯು ನಿಮಗೆ ಒಟ್ಟು ಮೊತ್ತದ ಪರಿಹಾರವನ್ನು ಒದಗಿಸುತ್ತದೆ.
ನೀವು ವಿದೇಶದಲ್ಲಿ ಥರ್ಡ್ ಪಾರ್ಟಿ ಹಾನಿಗೆ ಜವಾಬ್ದಾರರಾಗಿದ್ದರೆ, ಆ ನಷ್ಟಗಳಿಗೆ ಪರಿಹಾರ ನೀಡುವುದನ್ನು ನಮ್ಮ ಪಾಲಿಸಿಯು ಸರಳಗೊಳಿಸುತ್ತದೆ.
ಕಳ್ಳತನ ಅಥವಾ ದರೋಡೆಯಿಂದ ಉಂಟಾದ ನಗದು ತೊಂದರೆಯನ್ನು ನೀವು ಅನುಭವಿಸಿದರೆ, ನಮ್ಮ ಪಾಲಿಸಿಯು ಭಾರತದಿಂದ ತುರ್ತು ಫಂಡ್ ಟ್ರಾನ್ಸ್‌ಫರ್‌ಗಳನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.
ಒಂದು ವೇಳೆ ನಿಮ್ಮ ವಿಮಾನವು ಹೈಜಾಕ್ ಆದರೆ, ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ವಹಿಸುವಾಗ ನಿಮಗೆ ಉಂಟಾಗುವ ತೊಂದರೆಗೆ ಪರಿಹಾರವನ್ನು ನೀಡುವ ಮೂಲಕ ನಾವು ನಮ್ಮ ಪಾಲಿನ ಕೆಲಸ ನಿರ್ವಹಿಸುತ್ತೇವೆ.
ನಮ್ಮ ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್ ವೆಚ್ಚ ಮರಳಿ ನೀಡುವ ಫೀಚರ್ ಅನ್ನು ಒದಗಿಸುತ್ತದೆ, ಇದು ವಿಮಾನ ವಿಳಂಬದಿಂದ ಉಂಟಾಗುವ ಅಗತ್ಯ ಖರೀದಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡಲು ನಿಮಗೆ ಸಹಾಯ ಮಾಡುತ್ತದೆ.
ವೈದ್ಯಕೀಯ ತುರ್ತುಸ್ಥಿತಿಯಿಂದಾಗಿ ನಿಮ್ಮ ಹೋಟೆಲ್ ವಾಸ್ತವ್ಯವನ್ನು ನೀವು ವಿಸ್ತರಿಸಬೇಕಾದ ಸಂದರ್ಭದಲ್ಲಿ, ನಮ್ಮ ಪಾಲಿಸಿಯು ಆ ಹೆಚ್ಚುವರಿ ವೆಚ್ಚಗಳನ್ನು ಕವರ್ ಮಾಡುತ್ತದೆ.
ನಮ್ಮ ಜರ್ಮನಿ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ಕಳೆದುಹೋದ ಅಥವಾ ಕಳ್ಳತನವಾದ ವೈಯಕ್ತಿಕ ಡಾಕ್ಯುಮೆಂಟ್‌ಗಳು ಮತ್ತು ವಸ್ತುಗಳನ್ನು ಬದಲಾಯಿಸಿ ಪಡೆಯುವ ವೆಚ್ಚಕ್ಕಾಗಿ ನಿಮ್ಮನ್ನು ಕವರ್ ಮಾಡಲಾಗುತ್ತದೆ.
ಚೆಕ್-ಇನ್ ಆದ ಬ್ಯಾಗೇಜ್ ಕಳೆದುಹೋದ ಸಂದರ್ಭದಲ್ಲಿ ನಮ್ಮ ಪಾಲಿಸಿಯು ನಿಮಗೆ ಪರಿಹಾರವನ್ನು ನೀಡುತ್ತದೆ. ಆದ್ದರಿಂದ, ನಿಮ್ಮ ಅಗತ್ಯ ವಸ್ತುಗಳ ಅನುಪಸ್ಥಿತಿಯಲ್ಲಿ ನಿಮ್ಮ ಜರ್ಮನಿ ಪ್ರಯಾಣಕ್ಕೆ ಖರ್ಚು ಮಾಡುವ ಬಗ್ಗೆ ಚಿಂತಿಸಬೇಡಿ.
ಒಂದು ವೇಳೆ ನಿಮ್ಮ ಚೆಕ್-ಇನ್ ಬ್ಯಾಗೇಜ್ ವಿಳಂಬವಾದರೆ, ನಮ್ಮ ಪಾಲಿಸಿಯು ವಿಷಯಗಳು ಇತ್ಯರ್ಥವಾಗುವವರೆಗೆ ಅಗತ್ಯ ಖರೀದಿಗಳನ್ನು ಕವರ್ ಮಾಡುತ್ತದೆ.
ಭಾರತದಿಂದ ಜರ್ಮನಿಗಾಗಿನ ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಇವುಗಳಿಗೆ ಕವರೇಜ್ ಒದಗಿಸದೇ ಇರಬಹುದು;
ಯುದ್ಧ, ಭಯೋತ್ಪಾದನೆ ಅಥವಾ ಕಾನೂನು ಉಲ್ಲಂಘನೆಯಿಂದಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ನೀವು ಮಾದಕದ್ರವ್ಯ ಅಥವಾ ನಿಷೇಧಿತ ಪದಾರ್ಥಗಳನ್ನು ಬಳಸಿದರೆ, ಜರ್ಮನಿ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಯಾವುದೇ ಕವರೇಜನ್ನು ಒದಗಿಸುವುದಿಲ್ಲ.
ಪ್ರಯಾಣದ ಮೊದಲು ನೀವು ವೈದ್ಯಕೀಯ ಪರಿಸ್ಥಿತಿಯನ್ನು ಹೊಂದಿದ್ದರೆ ಅಥವಾ ಮುಂಚಿತ-ಅಸ್ತಿತ್ವದಲ್ಲಿರುವ ರೋಗಕ್ಕೆ ಚಿಕಿತ್ಸೆಯನ್ನು ಪಡೆದರೆ, ಈ ಪ್ಲಾನ್ ಆ ವೆಚ್ಚಗಳನ್ನು ಕವರ್ ಮಾಡುವುದಿಲ್ಲ.
ಭಯೋತ್ಪಾದನೆ ಅಥವಾ ಯುದ್ಧದಿಂದಾಗಿ ಉಂಟಾದ ಗಾಯಗಳು ಅಥವಾ ಆರೋಗ್ಯ ಸಮಸ್ಯೆಗಳು.
ಉದ್ದೇಶಪೂರ್ವಕ ಹಾನಿ ಅಥವಾ ಆತ್ಮಹತ್ಯೆಯ ಪ್ರಯತ್ನಗಳ ಪರಿಣಾಮವಾಗಿ ಉಂಟಾದ ಗಾಯಗಳನ್ನು ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ಅಪಾಯಕಾರಿ ಚಟುವಟಿಕೆಗಳು ಮತ್ತು ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವ ಪರಿಣಾಮವಾಗಿ ಉಂಟಾಗುವ ಗಾಯಗಳು ಮತ್ತು ಆಸ್ಪತ್ರೆ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುವುದಿಲ್ಲ.
ವಿದೇಶ ಪ್ರವಾಸದ ಸಮಯದಲ್ಲಿ, ನೀವು ಅಥವಾ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆಯನ್ನು ಪಡೆಯಲು ಆಯ್ಕೆ ಮಾಡಿದರೆ, ಆ ಸಂಬಂಧಿತ ವೆಚ್ಚಗಳನ್ನು ಪ್ಲಾನ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
• ನಮ್ಮ ಪಾಲಿಸಿಯನ್ನು ಖರೀದಿಸಲು ಇಲ್ಲಿ ಲಿಂಕ್ ಕ್ಲಿಕ್ ಮಾಡಿ ಅಥವಾ ಎಚ್‌ಡಿಎಫ್‌ಸಿ ಎರ್ಗೋ ಟ್ರಾವೆಲ್ ಇನ್ಶೂರೆನ್ಸ್ ವೆಬ್‌ಪೇಜ್‌ಗೆ ಭೇಟಿ ನೀಡಿ.
• ಪ್ರಯಾಣಿಕರ ವಿವರಗಳು, ತಲುಪುವ ಮಾಹಿತಿ ಮತ್ತು ಪ್ರಯಾಣದ ಆರಂಭ ಮತ್ತು ಕೊನೆಯ ದಿನಾಂಕಗಳನ್ನು ನಮೂದಿಸಿ.
• ನಮ್ಮ ಮೂರು ರೂಪಿಸಲಾದ ಆಯ್ಕೆಗಳಿಂದ ನಿಮ್ಮ ಆದ್ಯತೆಯ ಪ್ಲಾನ್ ಅನ್ನು ಆಯ್ಕೆಮಾಡಿ.
• ನಿಮ್ಮ ವೈಯಕ್ತಿಕ ವಿವರಗಳನ್ನು ಒದಗಿಸಿ.
• ಪ್ರಯಾಣಿಕರ ಬಗ್ಗೆ ಹೆಚ್ಚುವರಿ ವಿವರಗಳನ್ನು ಭರ್ತಿ ಮಾಡಿ ಮತ್ತು ಆನ್ಲೈನ್ ಪಾವತಿ ವಿಧಾನಗಳನ್ನು ಬಳಸಿ ಪಾವತಿಸಲು ಮುಂದುವರಿಯಿರಿ.
• ಅದನ್ನು ಮಾಡಲು ಉಳಿದಿರುವುದು ಏನೆಂದರೆ- ನಿಮ್ಮ ಪಾಲಿಸಿಯನ್ನು ತಕ್ಷಣವೇ ಡೌನ್ಲೋಡ್ ಮಾಡಿ!
ಕೆಟಗರಿಗಳು | ನಿರ್ದಿಷ್ಟ ವಿವರಣೆ |
ಸಾಂಸ್ಕೃತಿಕ ಪರಂಪರೆ | ಜರ್ಮನಿಯ ಐತಿಹಾಸಿಕ ನಗರಗಳ ಶತಮಾನಗಳ-ಹಳೆಯ ಆಕರ್ಷಣೆ ಆಧುನಿಕ ಆಕರ್ಷಣೆಯೊಂದಿಗೆ ತಡೆರಹಿತವಾಗಿ ಬೆರೆತು ಹೋಗಿದೆ. |
ದಕ್ಷತೆ ಮತ್ತು ಎಂಜಿನಿಯರಿಂಗ್ | ಆಟೋಮೋಟಿವ್ ದೈತ್ಯ ಕಂಪನಿಗಳಿಗೆ ಮೂಲ ನೆಲೆಯಾಗಿರುವ, ಜರ್ಮನಿಯು ನಿಖರವಾದ ಎಂಜಿನಿಯರಿಂಗ್ ಮತ್ತು ನಾವೀನ್ಯತೆಯಲ್ಲಿ ಜಾಗತಿಕ ಮಾನದಂಡಗಳನ್ನು ಸೆಟ್ ಮಾಡುತ್ತದೆ. |
ದೃಶ್ಯಾವಳಿಗಳ ಭೂಪ್ರದೇಶಗಳು | ಬ್ಲ್ಯಾಕ್ ಫಾರೆಸ್ಟ್‌ನ ಸುಂದರವಾದ ಹಳ್ಳಿಗಳು, ದಟ್ಟವಾದ ಕಾಡುಪ್ರದೇಶಗಳು ಮತ್ತು ಎಂದಿಗೂ ಮಾಸದ ಕಳೆಯನ್ನು ಹತ್ತಿರದಿಂದ ನೋಡಿ. |
ರುಚಿಕರ ಪಾಕ ಪದ್ಧತಿಗಳು | ಅಪ್ಪಟ ಜರ್ಮನ್ ಪಾಕಶಾಸ್ತ್ರದ ಅನುಭವ ಪಡೆಯಲು ಹಾರ್ಟಿ ಸ್ಟ್ಯೂಸ್, ಸಾಸೇಜಸ್ ಮತ್ತು ಐಕಾನಿಕ್ ಪ್ರಟ್ಝೆಲ್ಸ್ ಸವಿಯಿರಿ. |
ನಾವೀನ್ಯತೆಗಳು ಮತ್ತು ತಂತ್ರಜ್ಞಾನ | ಸಂಶೋಧನೆ ಮತ್ತು ಅಭಿವೃದ್ಧಿಗೆ ಜರ್ಮನಿಯ ಬದ್ಧತೆಯು ಅದನ್ನು ತಾಂತ್ರಿಕ ಪ್ರಗತಿಗಳ ಮುಂಚೂಣಿಯಲ್ಲಿ ಇರಿಸುತ್ತದೆ. |
ಐತಿಹಾಸಿಕ ಲ್ಯಾಂಡ್‌ಮಾರ್ಕ್‌ಗಳು | ಬ್ರಾಂಡೆನ್‌ಬರ್ಗ್ ಗೇಟ್ ಜರ್ಮನ್ ಏಕತೆಯ ಅಪ್ರತಿಮ ಸಂಕೇತವಾಗಿದೆ, ಆದರೆ ನ್ಯೂಶ್ವಾನ್‌ಸ್ಟೈನ್ ಕ್ಯಾಸಲ್ ಕಾಲ್ಪನಿಕ ಕಥೆಯ ಆಕರ್ಷಣೆಯಿಂದ ಆಕರ್ಷಿಸುತ್ತದೆ. |
ಜರ್ಮನಿ ಪ್ರವಾಸಿ ವೀಸಾಗಾಗಿ ನೀವು ನೀಡಬೇಕಾದ ಡಾಕ್ಯುಮೆಂಟ್‌ಗಳ ಉದಾಹರಣೆಗಳು ಇಲ್ಲಿವೆ ;
• ಸಂಪೂರ್ಣವಾಗಿ ಪೂರ್ಣಗೊಳಿಸಲಾದ ಮತ್ತು ಸಹಿ ಮಾಡಲಾದ ಜರ್ಮನಿ ಪ್ರವಾಸಿ ವೀಸಾ ಅಪ್ಲಿಕೇಶನ್ ಫಾರ್ಮ್,
• ಮಾನ್ಯ ಪಾಸ್ಪೋರ್ಟ್,
• ಇತ್ತೀಚಿನ ಕೆಲವು ಪಾಸ್‌ಪೋರ್ಟ್ ಸೈಜ್ ಫೋಟೋಗಳು,
• ವಸತಿ ಪುರಾವೆ,
• ರೌಂಡ್‌ಟ್ರಿಪ್ ಪ್ರಯಾಣದ ಅಥವಾ ರಿಸರ್ವೇಶನ್ ಪುರಾವೆ,
• ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್,
• ಜರ್ಮನಿಯಲ್ಲಿರುವ ನಿಮ್ಮ ಹೋಸ್ಟ್‌ನಿಂದ ಆಹ್ವಾನ ಪತ್ರ,
• ಹಣಕಾಸು ವಿಷಯಗಳ ಪುರಾವೆ,
• ಉದ್ಯೋಗ ಸ್ಥಿತಿಯ ಪುರಾವೆ,
• ಪೋಷಕರಿಂದ ಹುಟ್ಟಿದ ಪ್ರಮಾಣಪತ್ರ ಮತ್ತು ಸಮ್ಮತಿ ಪತ್ರ (ಅಪ್ರಾಪ್ತರಿಗೆ ಮಾತ್ರ), ಮತ್ತು
• ಹೆಚ್ಚುವರಿ ಡಾಕ್ಯುಮೆಂಟ್‌ಗಳು (ಅಗತ್ಯವಿದ್ದರೆ).
ಸಾಮಾನ್ಯವಾಗಿ, ಪ್ರವಾಸೋದ್ಯಮ ಉದ್ದೇಶಗಳಿಗಾಗಿ ಜರ್ಮನಿಗೆ ಭೇಟಿ ನೀಡಲು ವಸಂತ ಕಾಲ ಮತ್ತು ಬೇಸಿಗೆ ಎರಡನ್ನೂ ಉತ್ತಮ ಸಮಯವೆಂದು ಪರಿಗಣಿಸಲಾಗುತ್ತದೆ. ದೇಶದ ವಸಂತ ಕಾಲ ಮಾರ್ಚ್‌ನಿಂದ ಮೇವರೆಗೆ ಇರುತ್ತದೆ, ಚಳಿಗಾಲದ ಅವಧಿಯ ನಂತರ ಹವಾಮಾನಕ್ಕೆ ಬೆಚ್ಚಗಿನ ಸ್ಪರ್ಶವನ್ನು ತರುತ್ತದೆ. ತಾಪಮಾನವು ಏಪ್ರಿಲ್ ಮಧ್ಯದಲ್ಲಿ ಸುಮಾರು 14°C ಮತ್ತು ಮೇಯಲ್ಲಿ ಸುಮಾರು 19°C ಗೆ ಮೇಲ್ಮಟ್ಟದಲ್ಲಿ ಇರುತ್ತದೆ. ಟ್ರೆಕ್ಕಿಂಗ್, ಹೈಕಿಂಗ್, ಪರ್ವತ ಬೈಕಿಂಗ್ ಮುಂತಾದ ಅನ್ವೇಷಣೆ, ಸೈಟ್‌ಸೀಯಿಂಗ್ ಮತ್ತು ಸಾಹಸ ಚಟುವಟಿಕೆಗಳಿಗೆ ಇದು ಉತ್ತಮ ಸಮಯವಾಗಿದೆ. ಪೂರ್ಣವಾಗಿ ಅರಳುವ ಚೆರ್ರಿ ಹೂವುಗಳು ವಸಂತ ಕಾಲದಲ್ಲಿ ಜರ್ಮನಿಗೆ ಪ್ರಯಾಣಿಸಲು ಮತ್ತೊಂದು ಪ್ರಮುಖ ಅಂಶವಾಗಿದೆ.
ಜೂನ್‌ನಿಂದ ಆಗಸ್ಟ್‌ಗೆ ವಿಸ್ತರಿಸುವ ಬೇಸಿಗೆ, ಒಟ್ಟಾರೆ ತಾಪಮಾನ ಮತ್ತು ಹವಾಮಾನ ಪರಿಸ್ಥಿತಿಗಳನ್ನು ಹೆಚ್ಚು ಆಹ್ಲಾದಕರವಾಗಿಸುತ್ತದೆ. ಬಾಲ್ಟಿಕ್ ಸಮುದ್ರದ ಬೀಸುವ ಗಾಳಿಯಿಂದಾಗಿ ಉತ್ತರದ ಪ್ರದೇಶವು ಸ್ವಲ್ಪ ತಂಪಾಗಿರುತ್ತದೆ, ಆದರೆ ದಕ್ಷಿಣದ ಪ್ರದೇಶವು ತುಲನಾತ್ಮಕವಾಗಿ ಬೆಚ್ಚಗಿರುತ್ತದೆ. ಜರ್ಮನಿಯ ದೇಶಗಳನ್ನು ನೋಡಲು ಮತ್ತು ಅನ್ವೇಷಿಸಲು ಇದು ಉತ್ತಮ ಸಮಯವಾಗಿದೆ. ಬರ್ಲಿನ್ ಸಂಸ್ಕೃತಿ ಉತ್ಸವ ಮತ್ತು ಕಾರ್ನಿವಲ್, ಸ್ಕಟ್ಜೆನ್‌ಫೆಸ್ಟ್ ಹ್ಯಾನೋವರ್, ಫ್ರೀಬರ್ಗ್ ವೈನ್ ಫೆಸ್ಟಿವಲ್ ಮುಂತಾದ ಪ್ರಸಿದ್ಧ ಕಾರ್ಯಕ್ರಮಗಳನ್ನು ಈ ಅವಧಿಯಲ್ಲಿ ನಡೆಸಲಾಗುತ್ತದೆ.
ಜರ್ಮನಿಗೆ ಭೇಟಿ ನೀಡುವ ಮೊದಲು ಅತ್ಯುತ್ತಮ ಸಮಯ, ಹವಾಮಾನ, ತಾಪಮಾನ ಮತ್ತು ಇತರ ಅಂಶಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜರ್ಮನಿಗೆ ಭೇಟಿ ನೀಡಲು ಅತ್ಯುತ್ತಮ ಸಮಯ ನಮ್ಮ ಬ್ಲಾಗ್ ಓದಿ.
1. ಅಗತ್ಯವಿದ್ದರೆ ಷೆಂಗೆನ್ ವೀಸಾ ಮತ್ತು ಟ್ರಾವೆಲ್ ಇನ್ಶೂರೆನ್ಸ್ ಮಾಹಿತಿಯನ್ನು ಒಳಗೊಂಡಂತೆ ಪಾಸ್‌ಪೋರ್ಟ್ ಮತ್ತು ಟ್ರಾವೆಲ್ ಡಾಕ್ಯುಮೆಂಟ್‌ಗಳು.
2. ನಗರಗಳು ಮತ್ತು ಪ್ರವಾಸಿ ತಾಣಗಳನ್ನು ಅನ್ವೇಷಿಸಲು ಆರಾಮದಾಯಕ ನಡೆಯುವ ಶೂಗಳು.
3. ಬೇಸಿಗೆಗಾಗಿ ಸನ್‌ಗ್ಲಾಸ್‌ಗಳು ಮತ್ತು ಸನ್‌ಸ್ಕ್ರೀನ್.
4. ಹೈಡ್ರೇಟೆಡ್ ಆಗಿರಲು ಮರುಬಳಕೆ ಮಾಡಬಹುದಾದ ನೀರಿನ ಬಾಟಲ್.
5. ಕ್ಯಾಮರಾ ಮತ್ತು ಎಲೆಕ್ಟ್ರಾನಿಕ್ ಚಾರ್ಜರ್‌ಗಳು/ಅಡಾಪ್ಟರ್‌ಗಳು.
6. ಹಗುರವಾದ ಎಸ್‌ಪಿಎಫ್ ಸನ್‌ಸ್ಕ್ರೀನ್, ಬೇಸಿಗೆಗಾಗಿ ಗಾಳಿಯಾಡಬಲ್ಲ ಬಟ್ಟೆ ಮತ್ತು ಸ್ಯಾಂಡಲ್‌ಗಳು.
7. ಬೆಚ್ಚಗಿರಲು ತಂಪಾದ ಸಂಜೆಗಾಗಿ ಲೈಟ್ ಜಾಕೆಟ್, ಸ್ಕಾರ್ಫ್ ಅಥವಾ ಕಾರ್ಡಿಗನ್.
• ನಿಮ್ಮ ಸುತ್ತಮುತ್ತಲಿನ ಬಗ್ಗೆ ಎಚ್ಚರಿಕೆಯಿಂದಿರಿ.
• ನಿಮ್ಮ ಪರ್ಸ್‌ಗಳು, ವೈಯಕ್ತಿಕ ಡಾಕ್ಯುಮೆಂಟ್‌ಗಳು ಮತ್ತು ಇತರ ಮೌಲ್ಯಯುತ ವಸ್ತುಗಳನ್ನು, ವಿಶೇಷವಾಗಿ ಜನಸಂದಣಿಯ ಪ್ರವಾಸಿ ಪ್ರದೇಶಗಳಲ್ಲಿ ಸುರಕ್ಷಿತವಾಗಿರಿಸಿಕೊಳ್ಳಿ.
• ಅಧಿಕೃತವಾಗಿ ಗುರುತಿಸಲಾದ ಟ್ಯಾಕ್ಸಿಗಳನ್ನು ಮಾತ್ರ ಬಳಸಿ
• ಭಾರತೀಯ ದೂತವಾಸದ ಸಂಪರ್ಕ ವಿವರಗಳನ್ನು ಯಾವಾಗಲೂ ನಿಮ್ಮೊಂದಿಗೆ ಕೊಂಡೊಯ್ಯಿರಿ.
• ನಗರದ 'ಸುರಕ್ಷಿತ' ಮತ್ತು 'ಸುರಕ್ಷಿತವಲ್ಲದ' ಪ್ರದೇಶಗಳ ಬಗ್ಗೆ ಅಪ್-ಟು-ಡೇಟ್ ಮಾಹಿತಿಗಾಗಿ, ನಿಮ್ಮ ಹೋಟೆಲ್ ಮ್ಯಾನೇಜರ್ ಅಥವಾ ಸ್ಥಳೀಯ ಪ್ರವಾಸಿ ಮಾಹಿತಿ ಅಧಿಕಾರಿಯೊಂದಿಗೆ ಸಮಾಲೋಚಿಸಿ.
ಕೋವಿಡ್-19 ಪ್ರಯಾಣದ ನಿರ್ದಿಷ್ಟ ಪ್ರಯಾಣದ ಮಾರ್ಗಸೂಚಿಗಳು
• ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರ್ವಜನಿಕ ಸಾರಿಗೆಯನ್ನು ಬಳಸುವಾಗ ಫೇಸ್ ಮಾಸ್ಕ್ ಧರಿಸಿ.
• ಜನಸಂದಣಿಯ ಪ್ರವಾಸಿ ಪ್ರದೇಶಗಳಲ್ಲಿ ವೈಯಕ್ತಿಕ ಶುಚಿತ್ವ ಮತ್ತು ಸುರಕ್ಷಿತ ಅಂತರವನ್ನು ನಿರ್ವಹಿಸಿ.
• ಇತ್ತೀಚಿನ ಪ್ರಾದೇಶಿಕ ಕೋವಿಡ್-19 ಮಾರ್ಗಸೂಚಿಗಳು ಮತ್ತು ನಿಯಮಗಳ ಬಗ್ಗೆ ತಿಳಿಯಿರಿ ಮತ್ತು ಅವುಗಳನ್ನು ಅನುಸರಿಸಿ.
• ನೀವು ಯಾವುದೇ ಲಕ್ಷಣಗಳನ್ನು ಹೊಂದಿದ್ದರೆ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ.
ನಗರ | ವಿಮಾನ ನಿಲ್ದಾಣದ ಹೆಸರು |
ಫ್ರ್ಯಾಂಕ್‌ಫರ್ಟ್ | ಫ್ರ್ಯಾಂಕ್‌ಫರ್ಟ್ ಇಂಟರ್ನ್ಯಾಷನಲ್ ಏರ್ಪೋರ್ಟ್ |
ಬರ್ಲಿನ್ | ಬರ್ಲಿನ್ ಟೆಗೆಲ್ ಏರ್ಪೋರ್ಟ್ |
ಹ್ಯಾಂಬರ್ಗ್ | ಹ್ಯಾಂಬರ್ಗ್ ಏರ್ಪೋರ್ಟ್ |
ಡಾರ್ಟ್ಮಂಡ್ | ಡಾರ್ಟ್ಮಂಡ್ ಏರ್ಪೋರ್ಟ್ |
ಕಲೋನ್ | ಕಲೋನ್ ಬಾನ್ ಏರ್ಪೋರ್ಟ್ |
ಜರ್ಮನಿಯಲ್ಲಿ ನೀವು ನಿಮ್ಮ ಟ್ರಿಪ್ ಕಾರ್ಯಕ್ರಮಕ್ಕೆ ಸೇರಿಸಬಹುದಾದ ಕೆಲವು ಜನಪ್ರಿಯ ಪ್ರಯಾಣ ತಾಣಗಳು ಇಲ್ಲಿವೆ ;
ಬರ್ಲಿನ್ ಜರ್ಮನಿಯ ಅತಿದೊಡ್ಡ ಮತ್ತು ರಾಜಧಾನಿ ನಗರವಾಗಿದೆ. 3.7 ಮಿಲಿಯನ್‌ಗಿಂತ ಹೆಚ್ಚು ವ್ಯಕ್ತಿಗಳಿಗೆ ನೆಲೆಯ ಪ್ರದೇಶವಾಗಿದೆ, ಇದು ಸಾಮಾನ್ಯವಾಗಿ ಹೆಚ್ಚಿನ ಜರ್ಮನಿ ಟ್ರಾವೆಲ್ ಪ್ಲಾನ್‌ಗಳ ಆರಂಭಿಕ ಜಾಗವಾಗಿದೆ. ಬರ್ಲಿನ್ ಇತಿಹಾಸದಿಂದ ಆವೃತಗೊಂಡಿರುವ ನಗರವಾಗಿದೆ ಮತ್ತು ಹಲವಾರು ಪ್ರಸಿದ್ಧ ಪ್ರವಾಸಿ ಸೈಟ್‌ಗಳು ಮತ್ತು ಸಾಂಸ್ಕೃತಿಕ ಆಕರ್ಷಣೆಗಳನ್ನು ಹೊಂದಿದೆ. ಸುಂದರವಾದ ಬರ್ಲಿನ್ ಕ್ಯಾಥೆಡ್ರಲ್‌ನ ಪ್ರವಾಸದಿಂದ ಹಿಡಿದು ಅನೇಕ ಹೆಸರಾಂತ ಬಾರ್‌ಗಳಲ್ಲಿ ಒಂದು ಗ್ಲಾಸ್ ತಣ್ಣಗಿನ ಬಿಯರ್ ಅನ್ನು ಸೇವಿಸುವವರೆಗೆ, ಈ ನಗರಕ್ಕೆ ನಿಮ್ಮ ಭೇಟಿಯ ಸಮಯದಲ್ಲಿ ನೀವು ಮಾಡಬಹುದಾದ ಬಹಳಷ್ಟು ಕೆಲಸಗಳಿವೆ. ಬರ್ಲಿನ್‌ನ ಪ್ರಮುಖ ಪ್ರವಾಸಿ ಆಕರ್ಷಣೆಗಳೆಂದರೆ ರಿಚ್‌ಸ್ಟ್ಯಾಗ್, ಮ್ಯೂಸಿಯಂ ದ್ವೀಪ, ಜೆಂಡರ್‌ಮೆನ್‌ಮಾರ್ಕ್ಟ್, ವಿಕ್ಟರಿ ಕಾಲಮ್, ಬರ್ಲಿನ್ ವಾಲ್ ಮೆಮೋರಿಯಲ್ ಇತ್ಯಾದಿ.
ಸುಂದರ ಐಸಾರ್ ನದಿಯ ತಟದಲ್ಲಿ ನೆಲೆಸಿರುವ, ಮ್ಯೂನಿಚ್ ಇದು ದೇಶದ ಮೂರನೇ ಅತಿದೊಡ್ಡ ನಗರವಾಗಿದೆ. ಇದು ಜರ್ಮನಿಯಲ್ಲಿ ಸೂಕ್ತವಾದ ಸ್ಥಳವಾಗಿದ್ದು, ಇಲ್ಲಿ ನೀವು ಶ್ರೀಮಂತ ಇತಿಹಾಸ, ಸಂಸ್ಕೃತಿ, ಸಂಪ್ರದಾಯಗಳು ಮತ್ತು ಆಧುನಿಕ ಅಭಿವೃದ್ಧಿಯ ವಿಶಿಷ್ಟ ಮಿಶ್ರಣವನ್ನು ಕಂಡುಕೊಳ್ಳಬಹುದು. ವಿಶ್ವ ದರ್ಜೆಯ ಫುಟ್‌ಬಾಲ್ ಕ್ಲಬ್, FC ಬೇಯರ್ನ್ ಮ್ಯೂನಿಚ್ ಮತ್ತು BMW ನ ಕೇಂದ್ರ ಪ್ರಧಾನ ಕಛೇರಿ, ಮ್ಯೂನಿಚ್ ಜರ್ಮನಿಯಲ್ಲಿ ಅತಿ ಹೆಚ್ಚು ಭೇಟಿ ನೀಡುವ ನಗರಗಳಲ್ಲಿ ಒಂದಾಗಿದೆ. ನಗರದ ಇತರ ಪ್ರವಾಸಿ ಆಕರ್ಷಣೆಗಳೆಂದರೆ ಸ್ಕ್ಲೋಸ್ ನಿಂಫೆನ್‌ಬರ್ಗ್, ಡಾಯ್ಚ್ ಮ್ಯೂಸಿಯಂ, ಪೀಟರ್‌ಸ್ಕರ್ಚ್, ರೆಸಿಡೆಂಜ್, ಅಸಂಕ್ರಿಚ್ ಇತ್ಯಾದಿ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಭಾರತದಿಂದ ಜರ್ಮನಿಗೆ ಕಡಿಮೆ ಬೆಲೆಯ ಟ್ರಾವೆಲ್ ಇನ್ಶೂರೆನ್ಸ್ ಪಡೆಯಿರಿ.
ಫ್ರಾಂಕ್‌ಫರ್ಟ್, ಅಧಿಕೃತವಾಗಿ ಫ್ರಾಂಕ್‌ಫರ್ಟ್ ಆಮ್ ಮೈನ್ ಎಂದು ಕರೆಯಲ್ಪಡುತ್ತದೆ, ಇದು ಈ ಪ್ರದೇಶದಲ್ಲಿ ಇತಿಹಾಸ ಮತ್ತು ಧರ್ಮದ ಪ್ರಮುಖ ಕೇಂದ್ರವಾಗಿದೆ. ಆಧುನಿಕ ಗಗನಚುಂಬಿ ಕಟ್ಟಡಗಳು ಮತ್ತು ಮಧ್ಯಕಾಲೀನ ರಚನೆಗಳ ಉಪಸ್ಥಿತಿಯಿಂದಾಗಿ ನಗರದೃಶ್ಯದ ವ್ಯತಿರಿಕ್ತ ದೃಶ್ಯಗಳು ಪ್ರಪಂಚದಾದ್ಯಂತದ ಬೃಹತ್ ಪ್ರವಾಸಿಗರ ಗಮನವನ್ನು ಸೆಳೆಯುತ್ತವೆ.. ಫ್ರ್ಯಾಂಕ್‌ಫರ್ಟ್‌ನಲ್ಲಿ ಮತ್ತು ಸುತ್ತಮುತ್ತಲಿನ ಕೆಲವು ಗಮನಾರ್ಹ ಆಕರ್ಷಣೆಗಳೆಂದರೆ ರೋಮರ್, ಫ್ರ್ಯಾಂಕ್‌ಫರ್ಟ್ ಹಳೆಯ ಪಟ್ಟಣ, ಪಾಲ್ಸ್‌ಕಿರ್ಚ್, ಕೈಸರ್ಡಮ್ ಸೇಂಟ್ ಬಾರ್ಥೋಲೋಮಾಸ್, ಐಸರ್ನರ್ ಸ್ಟೆಗ್, ಜೂ ಫ್ರ್ಯಾಂಕ್‌ಫರ್ಟ್ ಇತ್ಯಾದಿ.
ದೇಶದ ಪಶ್ಚಿಮ ಭಾಗದಲ್ಲಿರುವ ಕಲೋನ್, ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಈ ಸುಂದರ ನಗರವು ಈ ಪ್ರದೇಶದ ಅತ್ಯಂತ ಪ್ರಮುಖ ಸಾಂಸ್ಕೃತಿಕ ಕೇಂದ್ರಗಳಲ್ಲಿ ಒಂದಾಗಿದೆ, ಹಲವಾರು ಗ್ಯಾಲರಿಗಳು, ಸಂಗ್ರಹಾಲಯಗಳು, ಐತಿಹಾಸಿಕ ಸೈಟ್‌ಗಳು ಇತ್ಯಾದಿಗಳಿಗೆ ನೆಲೆಯಾಗಿದೆ. ಜರ್ಮನಿಯ ಕಲೋನ್‌ಗೆ ನಿಮ್ಮ ಭೇಟಿಯ ಸಮಯದಲ್ಲಿ, ಕಲೋನ್ ಕ್ಯಾಥೆಡ್ರಲ್, ಓಲ್ಡ್ ಟೌನ್ ಕಲೋನ್, ಕಲೋನ್ ಸಿಟಿ ಹಾಲ್ ಇತ್ಯಾದಿಗಳ ಕಡೆ ಭೇಟಿ ನೀಡುವುದನ್ನು ಖಚಿತಪಡಿಸಿಕೊಳ್ಳಿ.
ಬರ್ಲಿನ್ ನಂತರ ಹ್ಯಾಂಬರ್ಗ್ ಜರ್ಮನಿಯ ಎರಡನೇ ಅತಿದೊಡ್ಡ ನಗರವಾಗಿದೆ. ಇದು ಪ್ರದೇಶದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ ಮತ್ತು ಕಲೆ, ಇತಿಹಾಸ, ಸಂಸ್ಕೃತಿ, ಮನರಂಜನೆ ಮತ್ತು ವಾಣಿಜ್ಯಕ್ಕಾಗಿ ದೊಡ್ಡ ಕೇಂದ್ರವಾಗಿದೆ. ಅದರ ಕೆಲವು ಮುಖ್ಯ ಆಕರ್ಷಣೆಗಳೆಂದರೆ ಸ್ಪೀಚರ್‌ಸ್ಟಾಡ್ಟ್, ಹ್ಯಾಫೆನ್ಸಿಟಿ, ಮರಿಟೈಮ್ ಮ್ಯೂಸಿಯಂ ಹ್ಯಾಂಬರ್ಗ್, ಪ್ಲಾಂಟನ್ ಅನ್ ಬ್ಲೋಮನ್ ಹ್ಯಾಂಬರ್ಗ್ ಇತ್ಯಾದಿ.
ನೆಕ್ಕರ್ ನದಿಯ ಉದ್ದಕ್ಕೂ ನೆಲೆಸಿರುವ ಹಿಡೆಲ್ಬರ್ಗ್ ತನ್ನ ರೋಮ್ಯಾಂಟಿಕ್ ಸೆಟ್ಟಿಂಗ್ ಮತ್ತು ಐಕಾನಿಕ್ ಹಿಡೆಲ್ಬರ್ಗ್ ಕ್ಯಾಸಲ್‌ಗೆ ಹೆಸರುವಾಸಿಯಾಗಿದೆ. ಆಕರ್ಷಕ ಬರೊಕ್ ವಾಸ್ತುಶಿಲ್ಪದ ಅದರ ಐತಿಹಾಸಿಕ ಓಲ್ಡ್ ಟೌನ್ ಸುತ್ತಾಡಿ, ಜರ್ಮನಿಯ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯಕ್ಕೆ ಭೇಟಿ ನೀಡಿ ಮತ್ತು ಫಿಲಾಸಫರ್ಸ್ ವಾಕ್‌ನಿಂದ ವಿಹಂಗಮ ನೋಟಗಳನ್ನು ಆನಂದಿಸಿ. ಪಟ್ಟಣದ ಆಕರ್ಷಕ ಮೋಡಿ, ಸಾಂಸ್ಕೃತಿಕ ಪರಂಪರೆ, ಮತ್ತು ಪ್ರಶಾಂತವಾದ ನದಿ ತೀರವು ಮರೆಯಲಾಗದ ಅನುಭವವನ್ನು ಸೃಷ್ಟಿಸುತ್ತದೆ.
ಜರ್ಮನಿಗೆ ನಿಮ್ಮ ಟ್ರಿಪ್ ಸಮಯದಲ್ಲಿ, ಈ ವಿಷಯಗಳನ್ನು ಪ್ರಯತ್ನಿಸುವುದನ್ನು ಖಚಿತಪಡಿಸಿಕೊಳ್ಳಿ ;
• 368 ಮೀಟರ್‌ಗಳ ಎತ್ತರದಿಂದ ನಗರದ ಅತ್ಯುತ್ತಮ ವಿಹಂಗಮ ನೋಟಗಳನ್ನು ಕಣ್ತುಂಬಿಕೊಳ್ಳಲು ಬರ್ಲಿನ್ TV ಟವರ್‌ಗೆ ಭೇಟಿ ನೀಡಿ.
• ಜರ್ಮನಿಯ ಹಲವಾರು ನಗರಗಳಲ್ಲಿ ನೀಡಲಾಗುವ ವೈನ್-ಟೇಸ್ಟಿಂಗ್ ಪ್ರವಾಸಕ್ಕೆ ಹೋಗಿ.
• ಜರ್ಮನಿಯ ಟಾಪ್ ಪ್ರೊಫೆಶನಲ್ ಫುಟ್ಬಾಲ್ ಲೀಗ್, ಬಂಡೆಸ್ಲಿಗಾದಲ್ಲಿ ಫುಟ್‌ಬಾಲ್‌ನ ರೋಮಾಂಚನಕಾರಿ ಲೈವ್ ಆಟವನ್ನು ನೋಡಿ.
• ದೇಶಾದ್ಯಂತ ಇರುವ ಆಕರ್ಷಕ ನಗರಗಳಿಗೆ ಮಾರ್ಗದರ್ಶಿ ಪ್ರವಾಸವನ್ನು ತೆಗೆದುಕೊಳ್ಳಿ.
• ನಿಮ್ಮ ಪ್ರೀತಿಪಾತ್ರರೊಂದಿಗೆ ಸಾಹಸಿ ರೈನ್ ರಿವರ್‌ಬೋಟ್ ರೈಡ್ ಆನಂದಿಸಿ.
• ಇತಿಹಾಸದ ಬಗ್ಗೆ ಇನ್ನಷ್ಟು ತಿಳಿಯಲು, ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾದ ಮ್ಯೂಸಿಯಂ ದ್ವೀಪವನ್ನು ಪರಿಶೀಲಿಸಿ.
• ಕಲೋನ್‌ನಲ್ಲಿ ಶಿಲ್ಡರ್‌ಗ್ಯಾಸ್, ಫ್ರ್ಯಾಂಕ್‌ಫರ್ಟ್‌ನಲ್ಲಿ ಜೀಲ್, ಬರ್ಲಿನ್‌ನಲ್ಲಿ ಕು'ಡ್ಯಾಮ್, ಡಸೆಲ್‌ಡಾರ್ಫ್‌ನಲ್ಲಿ ಕೊನಿಗ್‌ಸಲ್ಲಿ ಮುಂತಾದ ಜರ್ಮನಿಯ ಪ್ರಮುಖ ಮಾರುಕಟ್ಟೆಗಳಲ್ಲಿ ಶಾಪಿಂಗ್‌ಗೆ ಹೋಗಿ.
ಜರ್ಮನಿಯಲ್ಲಿ ಪ್ರಯಾಣಿಸುವುದು ತುಂಬಾ ದುಬಾರಿಯಾಗಿರಬಹುದು, ಆದಾಗ್ಯೂ, ನೀವು ಹೆಚ್ಚಿನ ಹಣವನ್ನು ಉಳಿಸಬಹುದಾದ ಹಲವಾರು ಮಾರ್ಗಗಳಿವೆ. ಉದಾಹರಣೆಗೆ ;
• ನಿಮ್ಮ ಜರ್ಮನಿ ಪ್ರವಾಸದ ಸಮಯದಲ್ಲಿ ಹಣವನ್ನು ಉಳಿಸಲು ಉತ್ತಮ ಮಾರ್ಗವೆಂದರೆ ಪೀಕ್ ಅಲ್ಲದ ಅವಧಿಯಲ್ಲಿ ನಿಮ್ಮ ಭೇಟಿಯನ್ನು ನಿಗದಿಪಡಿಸುವುದು. ಈ ಸಮಯದಲ್ಲಿ ವಸತಿ ಸೌಕರ್ಯಗಳು, ಸಾರಿಗೆಗಳು ಮತ್ತು ಇತರ ಸೇವೆಗಳ ಬೆಲೆಗಳು ಕಡಿಮೆ ಪ್ರವಾಸಿಗರ ಜನಸಂದಣಿಯಿಂದಾಗಿ ತುಲನಾತ್ಮಕವಾಗಿ ಅಗ್ಗವಾಗಿರುತ್ತವೆ.
• ಜರ್ಮನಿಯಲ್ಲಿ ಪ್ರಯಾಣಿಸುವಾಗ ಟ್ಯಾಕ್ಸಿಗಳು ಅಥವಾ ಬಾಡಿಗೆಗಳನ್ನು ಪಡೆಯುವುದನ್ನು ಕಡಿಮೆ ಮಾಡಲು ಪ್ರಯತ್ನಿಸಿ ಏಕೆಂದರೆ ಅವುಗಳು ತುಂಬಾ ದುಬಾರಿಯಾಗಬಹುದು. ಟ್ರಾಮ್‌ಗಳು, ಬಸ್‌ಗಳು, ರೈಲುಗಳು ಇತ್ಯಾದಿಗಳಂತಹ ಸ್ಥಳೀಯ ಸಾರ್ವಜನಿಕ ಸಾರಿಗೆ ಆಯ್ಕೆ ಮಾಡಿ, ಏಕೆಂದರೆ ಅವುಗಳು ಸಮಾನವಾಗಿ ವಿಶ್ವಾಸಾರ್ಹವಾಗಿರುತ್ತವೆ ಮತ್ತು ಹೋಲಿಕೆಯಲ್ಲಿ ಹೆಚ್ಚು ಅಗ್ಗವಾಗಿರುತ್ತವೆ.
• ಜರ್ಮನಿಯಲ್ಲಿರುವಾಗ ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ಅಲ್ಲಿ ಎಲ್ಲವೂ ತುಂಬಾ ದುಬಾರಿಯಾಗಿವೆ, ಮತ್ತು ಚೌಕಾಸಿ ಹೆಚ್ಚಿನ ಸ್ಥಳಗಳಲ್ಲಿ ಕೆಲಸ ಮಾಡುವುದಿಲ್ಲ.
• ಜರ್ಮನಿಯಲ್ಲಿ ಹೊರಗಡೆ ತಿನ್ನುವಾಗ ಹಣವನ್ನು ಉಳಿಸಲು ಸ್ಥಳೀಯ ರೆಸ್ಟೋರೆಂಟ್‌ಗಳಲ್ಲಿ ಡೈನಿಂಗ್ ಅನ್ನು ಪರಿಗಣಿಸಿ. ಇಲ್ಲದಿದ್ದರೆ, ಲಗ್ಸುರಿ ರೆಸ್ಟೋರೆಂಟ್‌ಗಳಲ್ಲಿ ಆಹಾರದ ವೆಚ್ಚವು ನಿಮ್ಮ ಪ್ರಯಾಣದ ಬಜೆಟ್‌ಗೆ ಹೊರೆಯಾಗಬಹುದು.
• ಜರ್ಮನಿಯ ವಿವಿಧ ಸ್ಥಳಗಳಲ್ಲಿ ನೀಡಲಾಗುವ ಉಚಿತ ಚಟುವಟಿಕೆಗಳು ಮತ್ತು ಮ್ಯೂಸಿಯಂ ಪ್ರವಾಸಗಳ ಪ್ರಯೋಜನವನ್ನು ಖಚಿತವಾಗಿ ಪಡೆದುಕೊಳ್ಳಿ. ಸೈಟ್‌ಸೀಯಿಂಗ್ ಮಾಡುವಾಗ ಹಣವನ್ನು ಉಳಿಸಲು ಇದು ಉತ್ತಮ ಮಾರ್ಗವಾಗಿದೆ.
• ಜರ್ಮನಿಗಾಗಿ ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಅನಿರೀಕ್ಷಿತ ಘಟನೆಗಳ ವಿರುದ್ಧ ನಿಮ್ಮನ್ನು ಆರ್ಥಿಕವಾಗಿ ಸುರಕ್ಷಿತವಾಗಿರಿಸಬಹುದು. ನಿಮ್ಮ ಜರ್ಮನಿ ಪ್ರವಾಸದ ಸಮಯದಲ್ಲಿ ಹಣವನ್ನು ಉಳಿಸಲು ನೀವು ತೆಗೆದುಕೊಳ್ಳಬಹುದಾದ ಉತ್ತಮ ಮುನ್ನೆಚ್ಚರಿಕೆಯ ಹಂತವಾಗಿದೆ. ಇಲ್ಲಿ ಕ್ಲಿಕ್ ಮಾಡುವ ಮೂಲಕ ಜರ್ಮನಿಗೆ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಪಡೆಯಿರಿ.
ನಿಮ್ಮ ಪ್ರಯಾಣದ ಸಮಯದಲ್ಲಿ ನೀವು ಭೇಟಿ ನೀಡಬಹುದಾದ ಜರ್ಮನಿಯ ಕೆಲವು ಅತ್ಯುತ್ತಮ ಭಾರತೀಯ ರೆಸ್ಟೋರೆಂಟ್‌ಗಳು ಇಲ್ಲಿವೆ ;
• ಬಾಂಬೆ ಪ್ಯಾಲೇಸ್
ವಿಳಾಸ: ಡಾರ್ಮ್ಸ್ಟೆಡ್ಟರ್ ಲ್ಯಾಂಡ್ಸ್ಟ್ರೇಸ್ 6, 60594 ಫ್ರಾಂಕ್‌ಫರ್ಟ್ ಆಮ್ ಮೇನ್, ಜರ್ಮನಿ
ಪ್ರಯತ್ನಿಸಲೇಬೇಕು: ಲಸ್ಸಿ
• ಇಂಡಿಯಾ ಕ್ಲಬ್
ವಿಳಾಸ: ಬೆಹ್ರೆನ್ಸ್ಟ್ರೇಜ್ 72, 10117 ಬರ್ಲಿನ್, ಜರ್ಮನಿ
ಪ್ರಯತ್ನಿಸಲೇಬೇಕು: ಪಿಂಡಿ ಚೋಲೆ ಕುಲ್ಚಾ
• ಸಿಂಗ್ ಇಂಡಿಯನ್ ರೆಸ್ಟೋರೆಂಟ್
ವಿಳಾಸ: ಸ್ಟೀನ್‌ಡ್ಯಾಮ್ 35, 20099 ಹ್ಯಾಂಬರ್ಗ್, ಜರ್ಮನಿ
ಪ್ರಯತ್ನಿಸಲೇಬೇಕು: ಶಾಹಿ ಪನೀರ್
• ದೆಹಲಿ 6 ರೆಸ್ಟೋರೆಂಟ್
ವಿಳಾಸ:ಫ್ರೆಡ್ರಿಕ್ಸ್ಟ್ರಾಸ್ಸೆ 237, 10969 ಬರ್ಲಿನ್, ಜರ್ಮನಿ
ಪ್ರಯತ್ನಿಸಲೇಬೇಕು: ಕಡಾಯಿ ಪನೀರ್
ಪ್ರವಾಸಿಗಳು ಅನುಸರಿಸಬೇಕಾದ ಕೆಲವು ಪ್ರಮುಖ ಸ್ಥಳೀಯ ಕಾನೂನುಗಳು ಮತ್ತು ಜರ್ಮನಿಯ ಶಿಷ್ಟಾಚಾರಗಳು ಇಲ್ಲಿವೆ ;
• ಜರ್ಮನಿಯಲ್ಲಿ ಜೇವಾಕಿಂಗ್ ಕಾನೂನುಬಾಹಿರ ಮತ್ತು ದಂಡನೀಯ ಅಪರಾಧವಾಗಿದೆ. ಜೀಬ್ರಾ ಕ್ರಾಸಿಂಗ್ ಮೇಲೆ ಹೋಗುವ ಮೊದಲು ರೋಡ್-ಕ್ರಾಸಿಂಗ್ ಲೈಟ್ ಹಸಿರಿಗೆ ಬದಲಾಗುವುದಕ್ಕೆ ಕಾಯುವುದನ್ನು ಖಚಿತಪಡಿಸಿಕೊಳ್ಳಿ.
• ನೀವು ಭೇಟಿ ನೀಡುವ ಮೊದಲು, ಜರ್ಮನಿಯಲ್ಲಿ ತ್ಯಾಜ್ಯವನ್ನು ಮರುಬಳಕೆ ಮಾಡಲು ಸರಿಯಾದ ಮಾರ್ಗದ ಬಗ್ಗೆ ತಿಳಿದುಕೊಳ್ಳಿ. ಈ ಪ್ರದೇಶದಲ್ಲಿ ಅಸಮರ್ಪಕ ತ್ಯಾಜ್ಯ ವಿಲೇವಾರಿಯನ್ನು ಒಪ್ಪುವುದಿಲ್ಲ.
• ಮನೆ ಪ್ರವೇಶಿಸುವ ಮೊದಲು ಮನೆಯೊಳಗೆ ಶೂಗಳನ್ನು ಧರಿಸಲು ಅನುಮತಿ ಇದೆಯೇ ಎಂಬುದನ್ನು ವಿಚಾರಿಸುವುದನ್ನು ಖಚಿತಪಡಿಸಿಕೊಳ್ಳಿ.
• ಸೈಕಲ್ ಲೇನ್ ಅನ್ನು ಫುಟ್‌ಪಾಥ್ ಎಂದು ಗೊಂದಲಗೊಳ್ಳಬೇಡಿ ಏಕೆಂದರೆ ನೀವು ಸೈಕ್ಲಿಸ್ಟ್‌ಗಳ ಮಾರ್ಗವನ್ನು ಬ್ಲಾಕ್ ಮಾಡುತ್ತೀರಿ. ಇದು ಅಪಾಯಕಾರಿ ಮತ್ತು ಪ್ರಮುಖ ಟ್ರಾಫಿಕ್ ಅಪರಾಧವಾಗಿದೆ.
• ಜರ್ಮನಿಯಲ್ಲಿ ಯಾರನ್ನಾದರೂ, ವಿಶೇಷವಾಗಿ ಅಪರಿಚಿತರನ್ನು ಅಭಿನಂದಿಸುವಾಗ, ಅವರನ್ನು ಔಪಚಾರಿಕವಾಗಿ ಸಂಬೋಧಿಸಲು ಮರೆಯದಿರಿ.
• ಯಾರಿಗಾದರೂ ಶುಭಾಶಯ ನೀಡುವ ಉದ್ದೇಶಕ್ಕಾಗಿ ನೀವು ಗುಟೆನ್ ಟ್ಯಾಗ್ (ಗುಡ್ ಡೇ) ಮತ್ತು ಹ್ಯಾಲೋ (ಹಲೋ) ಎರಡನ್ನೂ ಬಳಸಬಹುದು. ಮತ್ತು ಗುಡ್‌ಬೈ ಹೇಳಲು, "ಚುಸ್" ಎಂದು ಹೇಳಿ.
ಜರ್ಮನಿಯ ಭಾರತೀಯ ದೂತವಾಸದ ವಿವರಗಳು ಈ ಕೆಳಗಿನಂತಿವೆ ;
ಜರ್ಮನಿ ಆಧಾರಿತ ಭಾರತೀಯ ದೂತವಾಸ | ಕೆಲಸದ ಸಮಯ | ವಿಳಾಸ |
ಭಾರತೀಯ ದೂತವಾಸ | ಸೋಮ-ಶುಕ್ರ, 9:00 AM - 5:30 PM | ಟೈರ್ಗಾರ್ಟೆನ್ಸ್ಟ್ರಾಸ್ಸೆ 17, 10785 ಬರ್ಲಿನ್, ಜರ್ಮನಿ |
ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ
ಹೌದು. ಜರ್ಮನಿಗಾಗಿ ಷೆಂಗೆನ್ ವೀಸಾಗಾಗಿ ಅಪ್ಲೈ ಮಾಡಲು, ನೀವು ಮಾನ್ಯ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರಬೇಕು.
ಪ್ರಯಾಣದ ಅವಧಿ, ಒಟ್ಟು ಪ್ರಯಾಣಿಕರು ಮತ್ತು ಅವರ ಆಯಾ ವಯಸ್ಸು, ಆಯ್ದ ಕವರೇಜ್ ಪ್ರಕಾರ ಇತ್ಯಾದಿಗಳಂತೆ ಜರ್ಮನಿಯ ಟ್ರಾವೆಲ್ ಇನ್ಶೂರೆನ್ಸ್ ವೆಚ್ಚದ ಮೇಲೆ ಅನೇಕ ಅಂಶಗಳು ಪರಿಣಾಮ ಬೀರಬಹುದು. ಭಾರತದಿಂದ ಜರ್ಮನಿಗೆ ಅಗ್ಗದ ಟ್ರಾವೆಲ್ ಇನ್ಶೂರೆನ್ಸ್‌ಗಾಗಿ ನೀವು ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
ಟ್ರಾವೆಲ್ ಇನ್ಶೂರೆನ್ಸ್‌ಗೆ ಮೆಡಿಕಲ್ ಚೆಕ್-ಅಪ್ ಅವಶ್ಯಕತೆ ಸಂಪೂರ್ಣವಾಗಿ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಅವಲಂಬಿಸಿರುತ್ತದೆ. ಉದಾಹರಣೆಗೆ, ಎಚ್‌ಡಿಎಫ್‌ಸಿ ಎರ್ಗೋ ಒದಗಿಸುವ ಟ್ರಾವೆಲ್ ಇನ್ಶೂರೆನ್ಸ್ ಜರ್ಮನಿ ಪ್ಲಾನ್‌ಗಳೊಂದಿಗೆ, ಪ್ರಯಾಣದ ಮೊದಲು ನಿಮಗೆ ಕಡ್ಡಾಯ ಹೆಲ್ತ್ ಚೆಕ್-ಅಪ್ ಮಾಡುವ ಅಗತ್ಯವಿಲ್ಲ.
ಸಾಮಾನ್ಯವಾಗಿ, ಹೆಚ್ಚಿನ ಜರ್ಮನ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಅದರ ರಕ್ಷಣೆಯ ಅಡಿಯಲ್ಲಿ ಮೊದಲೇ ಇರುವ ಅನಾರೋಗ್ಯಗಳನ್ನು ಕವರ್ ಮಾಡುವುದಿಲ್ಲ.
ನೀವು ಸುಲಭವಾಗಿ ಜರ್ಮನಿಗಾಗಿ ಇಂಟರ್ನ್ಯಾಷನಲ್ ಟ್ರಾವೆಲ್ ಇನ್ಶೂರೆನ್ಸ್ ಅನ್ನು ಆನ್ಲೈನ್ ಅಥವಾ ಆಫ್ಲೈನ್‌ನಲ್ಲಿ ಖರೀದಿಸಬಹುದು. ಉದಾಹರಣೆಗೆ, ಈ ಪುಟದಲ್ಲಿ ನಮೂದಿಸಿದ ಹಂತವಾರು ವಿಧಾನವನ್ನು ನೀವು ಅನುಸರಿಸಬಹುದು ಅಥವಾ ಎಚ್‌ಡಿಎಫ್‌ಸಿ ಎರ್ಗೋದಿಂದ ಜರ್ಮನಿಗಾಗಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ಹೇಗೆ ಎಂಬುದರ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಬಹುದು.
ಜರ್ಮನಿಗೆ ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಎಲ್ಲಾ ಮೂಲಭೂತ ಅಗತ್ಯಗಳನ್ನು ಕವರ್ ಮಾಡುವ ಪಾಲಿಸಿಯಾಗಿದೆ, ಇದು ಹಲವಾರು ಪ್ರಯೋಜನಗಳು ಮತ್ತು ಫೀಚರ್‌ಗಳನ್ನು ಹೊಂದಿದೆ ಮತ್ತು ಸಮಂಜಸವಾದ ಬೆಲೆ ಟ್ಯಾಗ್‌ನಲ್ಲಿ ಬರುತ್ತದೆ. ನೀವು ಭಾರತದಿಂದ ಜರ್ಮನಿಗೆ ಎಚ್‌ಡಿಎಫ್‌ಸಿ ಎರ್ಗೋ ದಲ್ಲಿ ಅಗ್ಗದ ಟ್ರಾವೆಲ್ ಇನ್ಶೂರೆನ್ಸ್ ಕಂಡುಕೊಳ್ಳಬಹುದು.
ಕನಿಷ್ಠ ಜರ್ಮನ್ ಟ್ರಾವೆಲ್ ಹೆಲ್ತ್ ಇನ್ಶೂರೆನ್ಸ್ ಕವರೇಜ್ 30,000 EUR ಆಗಿರಬೇಕು, ಮತ್ತು ಇದು ಎಲ್ಲಾ ಷೆಂಗೆನ್ ಸದಸ್ಯ ರಾಜ್ಯಗಳಿಗೆ ಅನ್ವಯವಾಗುತ್ತದೆ.