ಕುಟುಂಬದೊಂದಿಗೆ ಪ್ರವಾಸ ಹೋಗುವುದು ಮೋಜು ಮತ್ತು ವೈಯಕ್ತಿಕ ವಿಷಯವಾಗಿದೆ. ಇದು ನಿಮ್ಮ ಆತ್ಮೀಯರ ಜೊತೆಗಿನ ಬಾಂಧವ್ಯವನ್ನು ಗಟ್ಟಿ ಮಾಡಲು ಮತ್ತು ಜೀವಮಾನದ ನೆನಪುಗಳನ್ನು ಸೃಷ್ಟಿಸಲು ಇರುವ ಉತ್ತಮ ಮಾರ್ಗ! ಬೀಚ್‌ನಲ್ಲಿ ಆಡುವುದಾಗಲಿ, ಪರ್ವತಗಳನ್ನು ಏರುವುದಾಗಲಿ, ಪ್ರಕೃತಿಯ ಮಡಿಲಿನಲ್ಲಿ ಅಥವಾ ಐಷಾರಾಮಿ ಹೋಟೆಲ್‌ನಲ್ಲಿ ಉಳಿಯುವುದಾಗಲಿ, ನಿಮ್ಮ ಕುಟುಂಬದೊಂದಿಗೆ ಅಮೂಲ್ಯ ಕ್ಷಣಗಳನ್ನು ಕಳೆಯುವ ಆನಂದವನ್ನು ವಿವರಿಸಲು ಸಾಧ್ಯವಿಲ್ಲ. ತುರ್ತು ಪರಿಸ್ಥಿತಿ ಅಥವಾ ಅನಿರೀಕ್ಷಿತ ಘಟನೆಯಿಂದ ನಿಮ್ಮ ಕುಟುಂಬ ಪ್ರವಾಸದ ಸಂತೋಷಕ್ಕೆ ಧಕ್ಕೆಯಾಗದಂತೆ ಖಚಿತಪಡಿಸಿಕೊಳ್ಳುವುದು ಸೂಕ್ತವಾಗಿದೆ. ನೆನಪಿಡಿ, ವೈದ್ಯಕೀಯ ತುರ್ತುಸ್ಥಿತಿಗಳು, ವಿಮಾನ ವಿಳಂಬಗಳು ಮತ್ತು ಬ್ಯಾಗೇಜ್ ಕಳ್ಳತನ ಅನಿರೀಕ್ಷಿತವಾಗಿ ಎದುರಾಗಬಹುದು. ಆದ್ದರಿಂದ, ಅಂತಾರಾಷ್ಟ್ರೀಯ ತಾಣದಲ್ಲಿ ಪ್ರವಾಸ ಮಾಡುವಾಗ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಹೊಂದಿರುವುದು ಜಾಣತನ. ನಿಮ್ಮ ಕುಟುಂಬದೊಂದಿಗೆ ಪ್ರಯಾಣಿಸುವಾಗ, ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಿ. ಇದು ನಿಮ್ಮ ಕುಟುಂಬದ ಎಲ್ಲಾ ಸದಸ್ಯರನ್ನು ಒಂದೇ ಬಾರಿಗೆ ಸುರಕ್ಷಿತಗೊಳಿಸುವ ಒಂದು ಇನ್ಶೂರೆನ್ಸ್ ಪ್ಲಾನ್! ಎಚ್‌ಡಿಎಫ್‌ಸಿ ಎರ್ಗೋ ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ನಿಮ್ಮ ಅಂತಾರಾಷ್ಟ್ರೀಯ ಪ್ರಯಾಣದ ಅವಧಿಯಲ್ಲಿ ಸಂಭವನೀಯ ಅಪಾಯಗಳು ಮತ್ತು ಅನಿಶ್ಚಿತತೆಗಳಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸುತ್ತದೆ.
ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.
ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.
ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.
ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.
ವಿಮಾನ ವಿಳಂಬ ಅಥವಾ ಕ್ಯಾನ್ಸಲೇಶನ್ ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಚಿಂತಿಸಬೇಡಿ, ನಮ್ಮ ವೆಚ್ಚ ತುಂಬಿಕೊಡುವಿಕೆ ಫೀಚರ್ ನಿಮಗೆ ಈ ಕಾರಣದಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.
ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ಪಾಸ್‌ಪೋರ್ಟ್ ಪ್ರತಿ ಮತ್ತು/ಅಥವಾ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಾವು ಮರುಪಾವತಿಸುತ್ತೇವೆ.
ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ಮರುಪಾವತಿ ಮಾಡಲಾಗದ ವಸತಿ ಸೌಲಭ್ಯ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.
ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ
ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.
ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.
ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.
ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್ ಓದಿ.
ಯುದ್ಧ, ಗಾಯ ಅಥವಾ ಕಾನೂನು ಉಲ್ಲಂಘನೆಯಿಂದ ಉಂಟಾದ ಯಾವುದೇ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆಗಳು.
ನೀವು ಮಾದಕ ಅಥವಾ ನಿಷೇಧಿತ ಪದಾರ್ಥಗಳನ್ನು ಬಳಸಿದರೆ, ಯಾವುದೇ ಕ್ಲೇಮ್‌ಗಳನ್ನು ಪಾಲಿಸಿಯು ಅವಕಾಶ ನೀಡುವುದಿಲ್ಲ.
ಪ್ರಯಾಣ ಮಾಡುವ ಮೊದಲು ನೀವು ರೋಗದಿಂದ ಬಳಲುತ್ತಿದ್ದರೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ನಾವು ಅದನ್ನು ಕವರ್ ಮಾಡುವುದಿಲ್ಲ.
ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆ ಪಡೆಯಲು ಇಚ್ಛಿಸಿದರೆ, ಪಾಲಿಸಿಯು ಅದನ್ನು ಕವರ್ ಮಾಡುವುದಿಲ್ಲ.
ನಿಮಗೆ ನೀವೇ ಹಾನಿ ಮಾಡಿಕೊಂಡರೆ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ತಲುಪಿದರೆ, ನಾವು ನಿಮಗೆ ಪಾಲಿಸಿಯಡಿ ಕವರ್ ನೀಡಲು ಸಾಧ್ಯವಿಲ್ಲ
ಸಾಹಸ ಕ್ರೀಡೆಯಿಂದ ಆದ ಯಾವುದೇ ಹಾನಿಯು ಪಾಲಿಸಿಯಡಿ ಕವರ್ ಆಗುವುದಿಲ್ಲ.
ಈ ಕೆಳಗಿನವುಗಳಿಂದ ಸೂಕ್ತ ಆಯ್ಕೆ ಮಾಡಿ, ನಿಮ್ಮ ವಿದೇಶ ಪ್ರಯಾಣಕ್ಕೆ ಎಲ್ಲ ರೀತಿಯಿಂದಲೂ ಸಿದ್ಧರಾಗಿರಿ
ಹೆಸರೇ ಸೂಚಿಸುವಂತೆ, ಸಿಂಗಲ್ ಟ್ರಿಪ್ ಇಂಟರ್ನ್ಯಾಷನಲ್ ಇನ್ಶೂರೆನ್ಸ್ ಒಂದೇ ಒಂದು ಸಲ ನಿರ್ದಿಷ್ಟ ವಿದೇಶಿ ಸ್ಥಳಕ್ಕೆ ಪ್ರವಾಸ ಮಾಡಲು ಬಯಸುವವರಿಗೆ ಸರಿಹೊಂದುತ್ತದೆ. ನೀವು ಜಾರ್ಜಿಯಾ ಅಥವಾ ಬಹಾಮಾಸ್‌ಗೆ ಸೋಲೋ ಬ್ಯಾಕ್‌ಪ್ಯಾಕಿಂಗ್ ಮಾಡಲು ಅಥವಾ U.S.Aಗೆ ಬಿಸಿನೆಸ್ ಕಾನ್ಫರೆನ್ಸ್‌ಗೆ ಹೋಗಲು ಬಯಸುವವರಾದರೆ, ಈ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ ಸೂಕ್ತವಾಗಿದೆ. ಒಂದು ವೇಳೆ ನೀವು ಸ್ನೇಹಿತರ ಗುಂಪಿನೊಂದಿಗೆ ಅಥವಾ ಕುಟುಂಬದೊಂದಿಗೆ ಪ್ರವಾಸ ಮಾಡಲು ಬಯಸುತ್ತಿದ್ದರೆ, ಇದು ಚೆನ್ನಾಗಿ ಹೊಂದುತ್ತದೆ. ಕಾಯಿಲೆ ಬಿದ್ದಾಗ ಅಥವಾ ಆಕಸ್ಮಿಕ ಗಾಯಗಳಾದಾಗ ವೈದ್ಯಕೀಯ ಕವರ್ ನೀಡುವ ಮೂಲಕ, ಎಚ್‌ಡಿಎಫ್‌ಸಿ ಎರ್ಗೋ ಸಮಗ್ರ ಪ್ರಯೋಜನಗಳನ್ನು ಒದಗಿಸುತ್ತದೆ.
ಯಾವಾಗಲೂ ಪ್ರವಾಸ ಮಾಡಲು ಮತ್ತು ಅನೇಕ ದೇಶಗಳಿಗೆ ಹೋಗಲು ಬಯಸುವವರಿಗೆ ಅಥವಾ ವರ್ಷಕ್ಕೆ ಅನೇಕ ಬಾರಿ ಒಂದೇ ದೇಶಕ್ಕೆ ಭೇಟಿ ನೀಡಲು ಬಯಸುವವರಿಗೆ, ಈ ಇನ್ಶೂರೆನ್ಸ್ ಸೂಕ್ತವಾಗಿದೆ. ಈ ಇನ್ಶೂರೆನ್ಸ್ ಅನೇಕ ನವೀಕರಣಗಳ ತೊಂದರೆಯಿಂದ ನಿಮ್ಮನ್ನು ಕಾಪಾಡುತ್ತದೆ. ನೀವು ಇದನ್ನು ಇಡೀ ವರ್ಷಕ್ಕೆ ಖರೀದಿಸಬಹುದು ಮತ್ತು ಪ್ರತಿಯೊಂದು ಪ್ರವಾಸಕ್ಕೂ ಟ್ರಾವೆಲ್ ಇನ್ಶೂರೆನ್ಸ್ ಪಡೆಯುವ ಬಗ್ಗೆ ಚಿಂತಿಸದೆ ಪ್ರಯಾಣ ಮಾಡಬಹುದು. ಪದೇಪದೇ ವಿಮಾನ ಪ್ರಯಾಣ ಮಾಡುವವರಿಗೆ ಇದು ಉತ್ತಮವಾಗಿದೆ!
ವೈದ್ಯಕೀಯ ಅಗತ್ಯತೆಗಳಿಗೆ ಈ ಟ್ರಾವೆಲ್ ಇನ್ಶೂರೆನ್ಸ್ ಕಡ್ಡಾಯವಾಗಿದೆ.! ಅಂತರರಾಷ್ಟ್ರೀಯ ಸ್ಥಳಗಳಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿ ಎಂದು ನಮಗೆಲ್ಲಾ ಗೊತ್ತು. ಸಣ್ಣ ಗಾಯ ಅಥವಾ ಜ್ವರದ ಚಿಕಿತ್ಸೆಯೂ ಕೂಡ ನಿಮ್ಮ ಟ್ರಿಪ್ ಬಜೆಟ್‌ಗೆ ಘಾಸಿ ಉಂಟುಮಾಡಬಹುದು.. ಆದ್ದರಿಂದ, ಮೆಡಿಕಲ್ ಕವರೇಜ್‌ಗಾಗಿ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ನಾವು ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತೇವೆ:
● ತುರ್ತು ವೈದ್ಯಕೀಯ ವೆಚ್ಚಗಳು
● ದಂತ ವೆಚ್ಚಗಳು
● ವೈಯಕ್ತಿಕ ಅಪಘಾತ
● ಆಸ್ಪತ್ರೆ ನಗದು
ಕಡ್ಡಾಯವಾಗಿ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿರುವ ಕೆಲವು ದೇಶಗಳು ಹೀಗಿವೆ: ಇದು ಅಂತಹ ದೇಶಗಳನ್ನು ಸೂಚಿಸುವ ಪಟ್ಟಿಯಷ್ಟೇ. ಹೊರಡುವ ಮೊದಲು ಪ್ರತ್ಯೇಕವಾಗಿ ಪ್ರತಿ ದೇಶದ ವೀಸಾ ಅವಶ್ಯಕತೆಯನ್ನು ಪರಿಶೀಲಿಸುವುದು ಒಳ್ಳೆಯದು.
ಮೂಲ: VisaGuide.World
ಹೌದು. ನಿಮಗಿಂತ ಕಿರಿಯ ವಯಸ್ಸಿನ ಸಂಗಾತಿಯು ಪ್ರಪೋಸರ್ ಆಗಬಹುದು.
ಹೌದು, ನಾವು ಟ್ರಿಪ್ ರದ್ದತಿಯನ್ನು ಕವರ್ ಮಾಡುತ್ತೇವೆ. ಟ್ರಿಪ್ ರದ್ದತಿಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ-ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ.
ಹೌದು. ನೀವು ಪಾಲಿಸಿಯ ವೈಯಕ್ತಿಕ ಹೊಣೆಗಾರಿಕೆ ವಿಭಾಗದ ಅಡಿಯಲ್ಲಿ ಇದನ್ನು ಕ್ಲೈಮ್ ಮಾಡಬಹುದು.
ಚೆಕ್-ಇನ್ ಆದ ಬ್ಯಾಗೇಜ್ ಕೈಸೇರಲು ವಿಳಂಬವಾದರೆ, ಈ ಪ್ರಯೋಜನವು ಇನ್ಶೂರ್ಡ್ ವ್ಯಕ್ತಿಗೆ ಟಾಯ್ಲೆಟ್ರಿಗಳು, ಬಟ್ಟೆ, ಔಷಧಿ, ಇತ್ಯಾದಿ ಅಗತ್ಯ ವೈಯಕ್ತಿಕ ವಸ್ತುಗಳ ಖರೀದಿಯ ವೆಚ್ಚವನ್ನು ಮರುಪಾವತಿಸುತ್ತದೆ.
ಚೆಕ್-ಇನ್ ಆದ ಬ್ಯಾಗೇಜ್ ಶಾಶ್ವತ ಹಾನಿಗೊಳಗಾಗಿದ್ದರೆ ಅಥವಾ ಕಳೆದುಹೋದರೆ, ಈ ಪ್ರಯೋಜನವು ಇನ್ಶೂರ್ಡ್ ವ್ಯಕ್ತಿಗೆ ತಮ್ಮ ವೈಯಕ್ತಿಕ ವಸ್ತುಗಳ ಬದಲಾವಣೆ ವೆಚ್ಚವನ್ನು ಮರುಪಾವತಿಸುತ್ತದೆ.
ಇಲ್ಲ. ಚೆಕ್-ಇನ್ ಆದ ನಂತರ ಬ್ಯಾಗೇಜ್ ಮತ್ತು/ಅಥವಾ ವೈಯಕ್ತಿಕ ವಸ್ತುಗಳು ಕಳೆದುಹೋದರೆ, ಬ್ಯಾಗೇಜ್ ವಿಳಂಬ ವಿಭಾಗದ ಅಡಿಯಲ್ಲಿ ಇನ್ಶೂರ್ಡ್ ವ್ಯಕ್ತಿಯು ಕ್ಲೇಮ್ ಮಾಡಿ, ಪಾವತಿ ಪಡೆದುಕೊಂಡಿರುವ ಯಾವುದೇ ಮೊತ್ತವನ್ನು, ಬ್ಯಾಗೇಜ್ ನಷ್ಟ ವಿಭಾಗದ ಅಡಿಯಲ್ಲಿ ಪಡೆದುಕೊಂಡಿರುವ ಯಾವುದೇ ಪಾವತಿಯಿಂದ ಕಡಿತಗೊಳಿಸಲಾಗುತ್ತದೆ.
ಹೌದು. ತುರ್ತು ದಂತ ಚಿಕಿತ್ಸೆಯು ಮರುಪಾವತಿ ಆಧಾರದಲ್ಲಿ ಪಾಲಿಸಿಯಲ್ಲಿ ಕವರ್ ಆಗಿದೆ.
ಚೆಕ್-ಇನ್ ಆದ ಬ್ಯಾಗೇಜ್ ವಿಳಂಬವಾದ ಸಂದರ್ಭದಲ್ಲಿ ವೈಯಕ್ತಿಕ ಅಗತ್ಯತೆಗಳ ವೆಚ್ಚವನ್ನು ತುಂಬಿಕೊಡುವುದರಿಂದ, ನೀವು ಮನೆಗೆ ಹಿಂತಿರುಗಿದ ಮೇಲೆ ಖರ್ಚಿನ ಬಗ್ಗೆ ಯೋಚಿಸುವ ಅಗತ್ಯ ಇರುವುದಿಲ್ಲ. ಚೆಕ್-ಇನ್ ಆದ ಬ್ಯಾಗೇಜ್ ನಷ್ಟವನ್ನು ಎರಡು ಕಡೆಯಲ್ಲಿಯೂ ಕವರ್ ಮಾಡಲಾಗುತ್ತದೆ. ಆದರೆ ಚೆಕ್-ಇನ್ ಆದ ಬ್ಯಾಗೇಜ್ ವಿಳಂಬದ ನಷ್ಟವನ್ನು, ವಿಳಂಬವಾದ ಮಾರ್ಗದಲ್ಲಿ ಮಾತ್ರ ಕವರ್ ಮಾಡಲಾಗುತ್ತದೆ.
ಹೆಸರೇ ಹೇಳುವಂತೆ, ಸಿಂಗಲ್ ಟ್ರಿಪ್ ಮಲ್ಟಿ ಇನ್ಶೂರೆನ್ಸ್ ಎಂಬುದು ಒಂದೇ ಟ್ರಿಪ್‌ನಲ್ಲಿ ಹಲವಾರು ಸ್ಥಳಗಳಿಗೆ ಭೇಟಿ ನೀಡುವ ಎಲ್ಲರಿಗೂ ಸೂಕ್ತವಾಗಿದೆ. ಅದು ಲೀಸರ್ ಟ್ರಿಪ್ ಆಗಿದ್ದರೂ ಸರಿ, ಬಿಸಿನೆಸ್ ಕಾನ್ಫರೆನ್ಸ್ ಆದರೂ ಸರಿ. ಸಾಮಾನ್ಯವಾಗಿ, ಮಲ್ಟಿ ಟ್ರಿಪ್ ಇನ್ಶೂರೆನ್ಸ್ ಅನ್ನು ವರ್ಷಕ್ಕೊಮ್ಮೆ ಖರೀದಿಸುತ್ತಾರೆ. ಆಗಾಗ್ಗೆ ವಿದೇಶ ಪ್ರಯಾಣ ಮಾಡುವ ಎಲ್ಲರಿಗೂ ಇದು ಸೂಕ್ತವಾಗುತ್ತದೆ. ಕೇವಲ ಒಂದು ಬಾರಿ ಪ್ರವಾಸ ಹೋಗುವವರಿಗಲ್ಲ, ಬದಲಿಗೆ ಹೆಚ್ಚಿಗೆ ಪ್ರಯಾಣ ಮಾಡುವವರಿಗೆ.. ಇದರ ಮೂಲಕ, ನೀವು ಪ್ರತಿ ಸಲ ವಿದೇಶಕ್ಕೆ ಹಾರುವಾಗಲೂ ಪಾಲಿಸಿ ನವೀಕರಿಸುವ ಮತ್ತು ಹೊಸ ಪಾಲಿಸಿ ಖರೀದಿಸುವ ಕಿರಿಕಿರಿ ತಪ್ಪಿಸಬಹುದು. ನೀವು ಒಂದು ಬಾರಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಿ ಮತ್ತು ವರ್ಷ ಪೂರ್ತಿ ಪ್ರಯಾಣ ಮಾಡುತ್ತಿರಿ.
ಅತ್ಯುತ್ತಮ ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ಬೇರೆಬೇರೆ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವಾಗ, ನೀವು ಕವರೇಜ್ ಮತ್ತು ಪ್ರೀಮಿಯಂ ಅನ್ನು ಹೋಲಿಕೆ ಮಾಡಬೇಕು. ಆಗ, ಕೈಗೆಟಕುವ ಪ್ರೀಮಿಯಂನಲ್ಲಿ ಗರಿಷ್ಠ ಕವರೇಜ್ ಸಿಗುತ್ತಿದೆಯೇ ಎಂಬುದನ್ನು ಕಂಡುಕೊಳ್ಳಬಹುದು.
ಎಲ್ಲಾ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳೂ ಒಂದಿಷ್ಟು ಕವರೇಜ್ ಮತ್ತು ಹೊರಪಡಿಕೆಗಳನ್ನು ಹೊಂದಿರುತ್ತವೆ. ಒಟ್ಟಿನಲ್ಲಿ, ವಿದೇಶ ಪ್ರವಾಸದ ವೇಳೆ ಆಗುವ ಅನಿರೀಕ್ಷಿತ ಗಾಯ ಅಥವಾ ಅನಾರೋಗ್ಯ, ಫ್ಲೈಟ್ ವಿಳಂಬ ಅಥವಾ ಲಗೇಜ್ ನಷ್ಟ, ಇತ್ಯಾದಿಗಳಿಂದ ಉಂಟಾಗುವ ತುರ್ತು ವೆಚ್ಚಗಳನ್ನು ಕವರ್ ಮಾಡುವ ಯಾವುದೇ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ತುಂಬಾ ಸೂಕ್ತವಾಗುತ್ತದೆ. ಆದಾಗ್ಯೂ, ಅತ್ಯುತ್ತಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವ ಮೊದಲು, ಬ್ರ್ಯಾಂಡ್ ಮತ್ತು ಮುಂಚಿತವಾಗಿ ಆ ಪಾಲಿಸಿ ಪಡೆದುಕೊಂಡಿದ್ದ ಗ್ರಾಹಕರ ಅಭಿಪ್ರಾಯವನ್ನೂ ಪರಿಶೀಲಿಸಿ.
ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ಎಚ್‌ಡಿಎಫ್‌ಸಿ ಎರ್ಗೋಗೆ ನೀವು ಈ ಕೆಳಗಿನ ವಿವರಗಳನ್ನು ಒದಗಿಸಬೇಕಾಗುತ್ತದೆ -
● ನಿಮ್ಮ ಹೆಸರು ಮತ್ತು ಸಂಪರ್ಕ ವಿವರಗಳು
● ನಿಮ್ಮೊಂದಿಗೆ ಪ್ರಯಾಣಿಸುತ್ತಿರುವ ಎಲ್ಲಾ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು
● ಪ್ರಯಾಣಿಸುವ ಸದಸ್ಯರೊಂದಿಗೆ ಸಂಬಂಧ
● ಭೇಟಿಯ ದೇಶಗಳು
● ಪ್ರಯಾಣದ ಅವಧಿ
● ನಿಮ್ಮ ಪಾಸ್‌ಪೋರ್ಟ್ ವಿವರಗಳು
● ನೀವು ಬಯಸುವ ಪ್ಲಾನ್ ರೂಪಾಂತರ
● ನೀವು ಅಥವಾ ಕುಟುಂಬದ ಯಾವುದೇ ಸದಸ್ಯರು ಮುಂಚಿತವಾಗಿ ಇರುವ ಯಾವುದೇ ಪರಿಸ್ಥಿತಿ ಅಥವಾ ಅನಾರೋಗ್ಯದಿಂದ ಬಳಲುತ್ತಿದ್ದರೆ
● ಇನ್ಶೂರೆನ್ಸ್ ಕಂಪನಿಗೆ ಅಗತ್ಯವಿರುವ ಯಾವುದೇ ಇತರ ವಿವರಗಳು
ಈ ವಿವರಗಳ ಆಧಾರದ ಮೇಲೆ, ನಿಮ್ಮ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಬರೆಯಲಾಗುತ್ತದೆ ಮತ್ತು ನೀಡಲಾಗುತ್ತದೆ.
ಇಲ್ಲ, ಎಚ್‌ಡಿಎಫ್‌ಸಿ ಎರ್ಗೋ 70 ವರ್ಷಗಳವರೆಗಿನ ವಯಸ್ಸಿನ ಸದಸ್ಯರಿಗೆ ಮಾತ್ರ ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುತ್ತದೆ.
ವೈದ್ಯಕೀಯ ತುರ್ತುಸ್ಥಿತಿಗಳ ಸಂದರ್ಭದಲ್ಲಿ, ನೀವು ಎಚ್‌ಡಿಎಫ್‌ಸಿ ಎರ್ಗೋದ TPA ಅಲಾಯನ್ಸ್ ಗ್ಲೋಬಲ್ ಅಸಿಸ್ಟ್ ಅನ್ನು ಸಂಪರ್ಕಿಸಬೇಕು. ನೀವು ಕ್ಲೈಮ್‌ಗಳ ನಗದುರಹಿತ ಸೆಟಲ್ಮೆಂಟ್ ಬಯಸಿದರೆ, ನೀವು TPA ಮತ್ತು ಇನ್ಶೂರೆನ್ಸ್ ಕಂಪನಿಯೊಂದಿಗೆ ಟೈ ಅಪ್ ಆಗಿರುವ ಆಸ್ಪತ್ರೆಗಳಿಗೆ ಭೇಟಿ ನೀಡಬೇಕು. ಮತ್ತೊಂದೆಡೆ, ನೀವು ಮರುಪಾವತಿ ಕ್ಲೈಮ್‌ಗಳನ್ನು ಒಪ್ಪುವುದಾದರೆ, ಯಾವುದೇ ಆಸ್ಪತ್ರೆಗೆ ಕೂಡಾ ಭೇಟಿ ನೀಡಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋದ TPA ಗೆ ತಿಳಿಸಿದ ನಂತರ, ಯಾವ ಆಸ್ಪತ್ರೆಗೆ ಭೇಟಿ ನೀಡಬೇಕು ಎಂಬುದರ ಬಗ್ಗೆ TPA ನಿಮಗೆ ಮಾರ್ಗದರ್ಶನ ನೀಡುತ್ತದೆ.
ಪ್ರಸ್ತುತ, ನಾವು ಪ್ರಯಾಣದ ವಿಸ್ತರಣೆಯನ್ನು ಒದಗಿಸುವುದಿಲ್ಲ
ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಪಡೆಯುವಾಗಲೇ, ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿದ್ದರೆ, ಅದನ್ನು ಮುಂಚಿತ- ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿ ಎಂದು ಕರೆಯಲಾಗುತ್ತದೆ. ಉದಾಹರಣೆಗೆ, ನೀವು ಅಥವಾ ಕುಟುಂಬದ ಯಾವುದೇ ಸದಸ್ಯರು ಸಕ್ಕರೆ ಕಾಯಿಲೆ ಅಥವಾ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿದ್ದರೆ ಅವುಗಳನ್ನು ಮುಂಚಿತ- ಅಸ್ತಿತ್ವದಲ್ಲಿರುವ ಕಾಯಿಲೆಗಳೆಂದು ಪರಿಗಣಿಸಲಾಗುತ್ತದೆ.
ಇಲ್ಲ, ಮುಂಚಿತ-ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳನ್ನು ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ. ಪ್ರಯಾಣದ ವೇಳೆ ಮುಂಚಿತ-ಅಸ್ತಿತ್ವದಲ್ಲಿರುವ ಸ್ಥಿತಿಯಿಂದಾಗಿ ನೀವು ಯಾವುದೇ ವೈದ್ಯಕೀಯ ಸಮಸ್ಯೆಯನ್ನು ಎದುರಿಸಿದರೆ, ಕವರೇಜ್ ನೀಡಲಾಗುವುದಿಲ್ಲ.
ಹೌದು, ಅದನ್ನು ಖರೀದಿಸಿದ ನಂತರ ನೀವು ನಿಮ್ಮ ಫ್ಯಾಮಿಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನ್ನು ರದ್ದು ಮಾಡಬಹುದು. ಆದಾಗ್ಯೂ, ಪ್ರಯಾಣ ಪ್ರಾರಂಭವಾಗುವ ಮೊದಲು, ನೀವು ಯೋಜನೆಯ ಮೇಲೆ ಯಾವುದೇ ಕ್ಲೈಮ್‌ಗಳನ್ನು ಮಾಡದಿದ್ದರೆ ಮಾತ್ರ ಈ ರದ್ದತಿಯನ್ನು ಅನುಮತಿಸಲಾಗುತ್ತದೆ. ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ರದ್ದುಪಡಿಸುವಾಗ ರದ್ದತಿ ಶುಲ್ಕಗಳು ಅನ್ವಯವಾಗುತ್ತವೆ ಎಂಬುದನ್ನು ಗಮನಿಸಿ.
ನಮ್ಮ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಅನೇಕ ಕುಟುಂಬ ಸಂಬಂಧಗಳನ್ನು ಕವರ್ ಮಾಡುತ್ತದೆ, ಆದ್ದರಿಂದ ನೀವು 12 ಕುಟುಂಬದ ಸದಸ್ಯರನ್ನು ಇನ್ಶೂರ್ ಮಾಡಬಹುದು
ಗ್ರಾಹಕರು ಈಗಾಗಲೇ ವಿದೇಶಕ್ಕೆ ಪ್ರಯಾಣಿಸಿದ್ದರೆ ಪಾಲಿಸಿಯನ್ನು ನೀಡಲಾಗುವುದಿಲ್ಲ.
ಹೌದು, ನೀವು US ನಿಂದ ನಿಮ್ಮ ಪೋಷಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು. ಆ ಪ್ಲಾನ್ ಮಾನ್ಯವಾಗಿರುತ್ತದೆ. ಆದಾಗ್ಯೂ, ಗಮನಿಸಬೇಕಾದ ಕೆಲವು ಅಂಶಗಳು ಇಲ್ಲಿವೆ
● ಪ್ರೀಮಿಯಂ ಅನ್ನು ₹ ನಲ್ಲಿ ಪಾವತಿಸಬೇಕು
● ಪೂರ್ವ-ಪ್ರವೇಶ ಆರೋಗ್ಯ ತಪಾಸಣೆಗಳ ಅಗತ್ಯವಿದ್ದರೆ, ನಿಮ್ಮ ಪೋಷಕರು ಭಾರತದಲ್ಲಿ ಅಂತಹ ತಪಾಸಣೆಗಳನ್ನು ಮಾಡಿಸಬೇಕು, ಅದರ ನಂತರ ಪಾಲಿಸಿಯನ್ನು ನೀಡಲಾಗುತ್ತದೆ
ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ನವೀಕರಿಸಬಹುದು. https://www.hdfcergo.com/renew-hdfc-ergo-policy ಗೆ ಭೇಟಿ ನೀಡಿ ಮತ್ತು ನಿಮ್ಮ ನೋಂದಾಯಿತ ಮೊಬೈಲ್ ನಂಬರ್, ಇಮೇಲ್ ID ಅಥವಾ ಪಾಲಿಸಿ ನಂಬರ್ ನಮೂದಿಸಿ. 'ಈಗಲೇ ನವೀಕರಿಸಿ' ಮೇಲೆ ಕ್ಲಿಕ್ ಮಾಡಿ ಮತ್ತು ನಿಮಿಷಗಳಲ್ಲಿ ಪ್ಲಾನ್ ನವೀಕರಣ ಪ್ರಕ್ರಿಯೆಯನ್ನು ಅನುಸರಿಸಿ. ಆದಾಗ್ಯೂ, ವಾರ್ಷಿಕ ಮಲ್ಟಿ-ಟ್ರಿಪ್ ಪಾಲಿಸಿಗಳಿಗೆ ಮಾತ್ರ ನವೀಕರಣವನ್ನು ಅನುಮತಿಸಲಾಗುತ್ತದೆ. ಸಿಂಗಲ್ ಟ್ರಿಪ್ ಪಾಲಿಸಿಗಳನ್ನು ನವೀಕರಿಸಲು ಸಾಧ್ಯವಿಲ್ಲ.