ಸಮಗ್ರ ಕಾರ್ ಇನ್ಶೂರೆನ್ಸ್ ಅನಿರೀಕ್ಷಿತ ಘಟನೆಗಳಿಂದಾಗಿ ವಾಹನದ ಹಾನಿಯನ್ನು ಕವರ್ ಮಾಡುತ್ತದೆ. ಸಮಗ್ರ ಕವರ್‌ನೊಂದಿಗೆ, ಪಾಲಿಸಿದಾರರು ತಮ್ಮ ವಾಹನಕ್ಕೆ ಸಮಗ್ರ ಕವರೇಜನ್ನು ಪಡೆಯುತ್ತಾರೆ, ಇದು ಸ್ವಂತ ಹಾನಿಗಳು ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಒಳಗೊಂಡಿರುತ್ತದೆ. ಬೆಂಕಿ, ಕಳ್ಳತನ, ಅಪಘಾತಗಳು, ಗಲಭೆಗಳು, ನೈಸರ್ಗಿಕ ವಿಪತ್ತುಗಳು ಮುಂತಾದ ಇನ್ಶೂರೆಬಲ್ ಅಪಾಯಗಳು ಭಾರಿ ರಿಪೇರಿ ಬಿಲ್‌ಗಳಿಗೆ ಕಾರಣವಾಗಬಹುದು. ಆದ್ದರಿಂದ, ಸಮಗ್ರ ಇನ್ಶೂರೆನ್ಸ್‌ನೊಂದಿಗೆ ಸಂಪೂರ್ಣ ರಕ್ಷಣೆಯನ್ನು ಪಡೆಯಿರಿ.
ಸಮಗ್ರ ಕಾರ್ ಇನ್ಶೂರೆನ್ಸ್, ಕಾರು ಅಪಘಾತದಲ್ಲಿ ಗಾಯಗೊಂಡರೆ ಅಥವಾ ಮರಣ ಹೊಂದಿದರೆ ಕಾರಿನ ಮಾಲೀಕ-ಚಾಲಕರಿಗೆ ₹ 15 ಲಕ್ಷ~* ವರೆಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ಅನ್ನು ಒದಗಿಸುತ್ತದೆ. ಎಂಜಿನ್ ಗೇರ್‌ಬಾಕ್ಸ್ ರಕ್ಷಣೆ, ಶೂನ್ಯ ಸವಕಳಿ, ತುರ್ತು ರಸ್ತೆಬದಿಯ ನೆರವು ಮುಂತಾದ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡುವ ಮೂಲಕ ನೀವು ನಿಮ್ಮ ಸಮಗ್ರ ಇನ್ಶೂರೆನ್ಸ್ ಪಾಲಿಸಿಯನ್ನು ಕಸ್ಟಮೈಜ್ ಮಾಡಬಹುದು. ಇದು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಪಾಲಿಸಿ ಕವರೇಜನ್ನು ರೂಪಿಸಲು ಸಹಾಯ ಮಾಡುತ್ತದೆ, ಇದರಿಂದಾಗಿ ನಿಮ್ಮ ವಾಹನಕ್ಕೆ ಸಂಪೂರ್ಣ ರಕ್ಷಣೆ ಒದಗಿಸುತ್ತದೆ.
ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯು ವಾಹನಕ್ಕೆ ಥರ್ಡ್ ಪಾರ್ಟಿ ಹಾನಿಗಳು ಮತ್ತು ಸ್ವಂತ ಹಾನಿಗಳನ್ನು ಕವರ್ ಮಾಡುತ್ತದೆ. ಕಾರಿಗೆ ಸಮಗ್ರ ಇನ್ಶೂರೆನ್ಸ್ ಅಡಿಯಲ್ಲಿ ಯಾವುದೇ ಇನ್ಶೂರ್ಡ್ ಅಪಾಯದಿಂದಾಗಿ ನಿಮ್ಮ ವಾಹನಕ್ಕೆ ಹಾನಿಯಾದ ಸಂದರ್ಭದಲ್ಲಿ, ವಿಮಾದಾತರು ದುರಸ್ತಿ ವೆಚ್ಚವನ್ನು ಭರಿಸುತ್ತಾರೆ. ಕಳ್ಳತನದ ಸಂದರ್ಭದಲ್ಲಿ, ನೀವು ಎದುರಿಸುತ್ತಿರುವ ಹಣಕಾಸಿನ ನಷ್ಟವನ್ನು ಕವರ್ ಮಾಡುವ ಒಟ್ಟು ಮೊತ್ತದ ಪ್ರಯೋಜನವನ್ನು ವಿಮಾದಾತರು ಪಾವತಿಸುತ್ತಾರೆ. ನೀವು ನೆಟ್ವರ್ಕ್ ಗ್ಯಾರೇಜಿನಲ್ಲಿ ನಿಮ್ಮ ಕಾರನ್ನು ದುರಸ್ತಿ ಮಾಡಿದರೆ ಸಮಗ್ರ ಇನ್ಶೂರೆನ್ಸ್ ಅಡಿಯಲ್ಲಿ ನಗದುರಹಿತ ಕ್ಲೈಮ್ ಮಾಡಬಹುದು.
ಉದಾಹರಣೆ: ಪ್ರವಾಹದಿಂದಾಗಿ ಮಿ. ಎ ವಾಹನವು ಹಾನಿಗೊಳಗಾದರೆ ವಿಮಾದಾತರು ದುರಸ್ತಿ ವೆಚ್ಚವನ್ನು ಭರಿಸುತ್ತಾರೆ.ಮತ್ತೊಂದೆಡೆ, ಇನ್ಶೂರೆನ್ಸ್ ಮಾಡಿದ ವಾಹನದಿಂದ ಯಾವುದೇ ಥರ್ಡ್ ಪಾರ್ಟಿಯು ದೈಹಿಕವಾಗಿ ಗಾಯಗೊಂಡರೆ ಅಥವಾ ಮರಣ ಹೊಂದಿದರೆ ಅಥವಾ ಯಾವುದೇ ಥರ್ಡ್ ಪಾರ್ಟಿ ಆಸ್ತಿಯು ಹಾನಿಗೊಳಗಾಗಿದ್ದರೆ, ಪಾಲಿಸಿದಾರರು ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಈ ಹಾನಿಗಳಿಗೆ ವೆಚ್ಚಗಳನ್ನು ಕ್ಲೈಮ್ ಮಾಡಬಹುದು. ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ನೀವು ಉಂಟಾದ ಹಣಕಾಸಿನ ನಷ್ಟಕ್ಕಾಗಿ ಥರ್ಡ್ ಪಾರ್ಟಿಗೆ ಪಾವತಿಸಬೇಕಾದ ಪರಿಹಾರವನ್ನು ವಿಮಾದಾತರು ನೋಡಿಕೊಳ್ಳುತ್ತಾರೆ.
ಕಾರ್‌ಗೆ ಆಕ್ಸಿಡೆಂಟ್ ಆಯಿತೇ? ಚಿಂತೆ ಮಾಡಬೇಡಿ. ಆಕ್ಸಿಡೆಂಟ್‌ನಲ್ಲಿ ನಿಮ್ಮ ಕಾರಿಗೆ ಆದ ಹಾನಿಗಳನ್ನು ನಾವು ಕವರ್ ಮಾಡುತ್ತೇವೆ.
ಯಾವುದೋ ಬೆಂಕಿ ಅಥವಾ ಸ್ಪೋಟ ನಿಮ್ಮ ಹಣವನ್ನು ಬೂದಿ ಮಾಡಲು ನಾವು ಬಿಡುವುದಿಲ್ಲ. ನಾವು ನಿಮ್ಮ ಕಾರ್‌ಗೆ ಕವರೇಜ್ ನೀಡುವುದಂತೂ ಖಚಿತ.
ಕಾರು ಕಳ್ಳತನ ನಿಮ್ಮ ಅತಿ ಕೆಟ್ಟ ಕನಸೊಂದು ನನಸಾದಂತೆಯೇ ಸರಿ. ಆದರೆ ಇಂತಹ ಸಮಯದಲ್ಲಿ ನಿಮ್ಮ ಮನಃಶಾಂತಿ ಹಾಳಾಗದಂತೆ ನಾವು ನೋಡಿಕೊಳ್ಳುತ್ತೇವೆ.
ವಿಪತ್ತುಗಳು ಸರ್ವನಾಶ ಮಾಡಬಲ್ಲವು ಹಾಗೂ ನಿಮ್ಮ ಕಾರುಗಳನ್ನು ವಿಪತ್ತುಗಳಿಂದ ಕಾಪಾಡಲಾಗದು. ಆದರೆ, ನಿಮ್ಮ ಹಣಕಾಸನ್ನು ಖಂಡಿತ ಕಾಪಾಡಬಹುದು.!
ನಿಮ್ಮ ಸುರಕ್ಷತೆಯೇ ನಮ್ಮ ಆದ್ಯತೆ. ಒಂದು ವೇಳೆ ಕಾರ್ ಅಪಘಾತದಿಂದ ನಿಮಗೆ ಗಾಯಗಳಾದರೆ ಚಿಕಿತ್ಸೆಯ ಶುಲ್ಕಗಳನ್ನು ನಾವೇ ಕವರ್ ಮಾಡುತ್ತೇವೆ.
ನಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಮೂಲಕ ಥರ್ಡ್ ಪಾರ್ಟಿ ಆಸ್ತಿಗೆ ಅಥವಾ ಥರ್ಡ್ ಪಾರ್ಟಿ ವ್ಯಕ್ತಿಗೆ ಉಂಟಾದ ಹಾನಿಗಳನ್ನು ನಾವು ಕವರ್ ಮಾಡುತ್ತೇವೆ.
ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯ ಕೆಲವು ಪ್ರಮುಖ ಫೀಚರ್‌ಗಳು ಮತ್ತು ಪ್ರಯೋಜನಗಳು ಇಲ್ಲಿವೆ
ಪ್ರತಿ ವರ್ಷ ಕಾರಿನ ಮೌಲ್ಯದಲ್ಲಿ ಇಳಿಕೆಯಾಗುತ್ತಾ ಹೋಗುತ್ತದೆ. ಆದರೆ, ಶೂನ್ಯ ಸವಕಳಿ ಕವರ್‌ನಲ್ಲಿ ಕ್ಲೈಮ್ ಮಾಡಿದಾಗಲೂ ಸಹ ಈ ಇಳಿಕೆಗಳನ್ನು ಕಳೆಯಲಾಗುವುದಿಲ್ಲ, ಹಾಗೂ ನಿಮಗೆ ಸಂಪೂರ್ಣ ಮೊತ್ತ ಸಿಗುತ್ತದೆ.
ಕ್ಲೇಮ್ ಮಾಡಿದ ಮೇಲೆ ನಿಮ್ಮ NCB ರಿಯಾಯಿತಿಯ ಬಗ್ಗೆ ಚಿಂತೆಯೆ? ಚಿಂತಿಸಬೇಡಿ, ಈ ಆ್ಯಡ್ ಆನ್ ಕವರ್ ಇದುವರೆಗೆ ಗಳಿಸಿರುವ ನಿಮ್ಮ ನೋ ಕ್ಲೇಮ್ ಬೋನಸ್ ಅನ್ನು ರಕ್ಷಿಸುವುದಲ್ಲದೆ, ಅದನ್ನು ಮುಂದಿನ NCB ಸ್ಲ್ಯಾಬ್‌ಗೆ ಕೊಂಡೊಯ್ಯುತ್ತದೆ. ಇದರಿಂದ ನಿಮಗೆ ಪ್ರೀಮಿಯಂ ಮೇಲೆ ಗಮನಾರ್ಹ ರಿಯಾಯಿತಿ ದೊರೆಯುತ್ತದೆ.
ನಿಮ್ಮ ಕಾರಿನ ಯಾವುದೇ ತಾಂತ್ರಿಕ ಅಥವಾ ಯಾಂತ್ರಿಕ ಬ್ರೇಕ್‌ಡೌನ್ ಸಮಸ್ಯೆಗಳನ್ನು ನಿರ್ವಹಿಸಲು ನಾವು ನಿಮಗೆ ಸದಾಕಾಲ ಸಹಾಯ ಒದಗಿಸುತ್ತೇವೆ.
ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಈ ಆ್ಯಡ್-ಆನ್ ಅನ್ನು ಆಯ್ಕೆ ಮಾಡುವ ಮೂಲಕ ಗ್ರೀಸ್, ಲೂಬ್ರಿಕೆಂಟ್‌ಗಳು, ಎಂಜಿನ್ ಆಯಿಲ್, ಆಯಿಲ್ ಫಿಲ್ಟರ್, ಬ್ರೇಕ್ ಆಯಿಲ್ ಮುಂತಾದ ಬಳಕೆ ಮಾಡಬಹುದಾದ ವಸ್ತುಗಳಿಗೆ ನೀವು ಕವರೇಜ್ ಪಡೆಯಬಹುದು.
ಅಪಘಾತದಿಂದಾಗಿ ನಿಮ್ಮ ಕಾರಿನ ಟೈರ್ ಅಥವಾ ಟ್ಯೂಬ್ ಹಾನಿಗೊಳಗಾದರೆ ಈ ಆ್ಯಡ್-ಆನ್ ಕವರ್ ಉಪಯುಕ್ತವಾಗಿರುತ್ತದೆ. ಟೈರ್ ಸೆಕ್ಯೂರ್ ಕವರ್ ಇನ್ಶೂರೆನ್ಸ್ ಮಾಡಿದ ವಾಹನದ ಟೈರ್‌ಗಳು ಮತ್ತು ಟ್ಯೂಬ್‌ಗಳ ಬದಲಿ ವೆಚ್ಚಗಳಿಗೆ ಕವರೇಜನ್ನು ಒದಗಿಸುತ್ತದೆ.
ನಿಮ್ಮ ಕಾರನ್ನು ತುಂಬಾ ಇಷ್ಟಪಡುವಿರಾ? ನಿಮ್ಮ ಕಾರಿಗೆ ಈ ಆ್ಯಡ್ ಆನ್ ಕವರ್ ನೀಡಿ ಕಾರ್ ಕಳುವಾದ ಅಥವಾ ಸಂಪೂರ್ಣ ನಷ್ಟವಾದ ಸಂದರ್ಭದಲ್ಲಿ ಇನ್ವಾಯ್ಸ್ ಮೊತ್ತವನ್ನು ಮರಳಿಪಡೆಯಿರಿ.
ಎಂಜಿನ್ ಕಾರಿನ ಹೃದಯವಿದ್ದಂತೆ. ಅದನ್ನು ರಕ್ಷಿಸುವುದು ಬಹಳ ಮುಖ್ಯ. ಈ ಕವರ್, ಕಾರ್ ಎಂಜಿನ್‌ಗೆ ಆದ ಹಾನಿಯಿಂದ ಎದುರಾಗುವ ಹಣಕಾಸು ನಷ್ಟದಿಂದ ಪಾರು ಮಾಡುತ್ತದೆ.
ಕಾರು ಗ್ಯಾರೇಜ್‌ನಲ್ಲಿದೆಯೇ? ನಿಮ್ಮ ಕಾರು ರಿಪೇರಿ ಆಗುತ್ತಿರುವಾಗ ನಿಮ್ಮ ದೈನಂದಿನ ಪ್ರಯಾಣಕ್ಕಾಗಿ ಬಳಸುವ ಕ್ಯಾಬ್‌ಗಳಿಗೆ ತಗುಲುವ ವೆಚ್ಚಗಳನ್ನು ಭರಿಸಲು ಈ ಕವರ್ ಸಹಾಯ ಮಾಡುತ್ತದೆ.
ಈ ಆ್ಯಡ್-ಆನ್ ಕವರ್‌ನೊಂದಿಗೆ ನಿಮ್ಮ ಸಮಗ್ರ ಇನ್ಶೂರೆನ್ಸ್ ಪಾಲಿಸಿಯನ್ನು ಕಸ್ಟಮೈಸ್ ಮಾಡುವುದರಿಂದ ಲ್ಯಾಪ್‌ಟಾಪ್, ವಾಹನ ಡಾಕ್ಯುಮೆಂಟ್‌ಗಳು, ಸೆಲ್‌ಫೋನ್‌ಗಳು ಮುಂತಾದ ನಿಮ್ಮ ವೈಯಕ್ತಿಕ ವಸ್ತುಗಳ ನಷ್ಟಕ್ಕೆ ನೀವು ಕವರೇಜ್ ಪಡೆಯಬಹುದು.
ನೀವು ಡ್ರೈವ್ ಮಾಡಿದಷ್ಟು ಪಾವತಿಸಿ, ಆ್ಯಡ್-ಆನ್ ಕವರ್ ಪಾಲಿಸಿ ವರ್ಷದ ಕೊನೆಯಲ್ಲಿ ಸ್ವಂತ-ಹಾನಿ ಪ್ರೀಮಿಯಂನಲ್ಲಿ ಪ್ರಯೋಜನಗಳನ್ನು ಪಡೆಯಲು ನಿಮಗೆ ಅವಕಾಶ ನೀಡುತ್ತದೆ. ನೀವು 10,000km ಗಿಂತ ಕಡಿಮೆ ಡ್ರೈವ್ ಮಾಡಿದರೆ ಪಾಲಿಸಿ ಅವಧಿಯ ಕೊನೆಯಲ್ಲಿ ಬೇಸಿಕ್ ಸ್ವಂತ-ಹಾನಿಯ ಪ್ರೀಮಿಯಂನ 25% ವರೆಗೆ ಪ್ರಯೋಜನಗಳನ್ನು ಕ್ಲೈಮ್ ಮಾಡಬಹುದು.
ಸಮಗ್ರ ಇನ್ಶೂರೆನ್ಸ್ ವೈಯಕ್ತಿಕ ಅಪಘಾತ ಕವರ್ ಅನ್ನು ಕವರ್ ಮಾಡುವುದಿಲ್ಲ. ಪರ್ಸನಲ್ ಆಕ್ಸಿಡೆಂಟ್ ಕವರ್ ಮಾಲೀಕ-ಚಾಲಕರಿಗೆ ಇರುವ ಸೌಲಭ್ಯವಾಗಿದೆ. ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ವಾಹನದ ಮಾಲೀಕರು ತೆಗೆದುಕೊಳ್ಳಬೇಕಾದ ಕಡ್ಡಾಯ ವಿಸ್ತರಣೆಯಾಗಿದೆ. ಮೋಟಾರ್ ಇನ್ಶೂರೆನ್ಸ್ ಅಡಿಯಲ್ಲಿ ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯನ್ನು ವಾಹನದ ಮಾಲೀಕರ ಹೆಸರಿನಲ್ಲಿ ನೀಡಲಾಗುತ್ತದೆ. ನೀವು ಪರ್ಸನಲ್ ಆಕ್ಸಿಡೆಂಟ್ ಕವರ್ ಹೊಂದಿಲ್ಲದಿದ್ದರೆ, ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ ನೀವು ಅದನ್ನು ಆಯ್ಕೆ ಮಾಡಬಹುದು.
ಮಳೆ ಬರುವಾಗ ಒಂದು ಕಡೆ ಛತ್ರಿ, ಗಮ್ ಬೂಟುಗಳು ಹಾಗೂ ರೇನ್‌ಕೋಟ್ ಇದ್ದು, ಮತ್ತೊಂದು ಕಡೆ ಒಂದು ಹಾಳಾದ ಜಾಕೆಟ್ ಇಟ್ಟರೆ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ? ಈ ಆಯ್ಕೆ ಮಾಡಲು ನಿಮಗೆ ಸ್ವಲ್ಪವೂ ಸಮಯ ಬೇಕಿಲ್ಲ. ಏಕೆಂದರೆ ಮೊದಲ ಆಯ್ಕೆಯೇ ಹೆಚ್ಚು ಸೂಕ್ತ ಹಾಗೂ ಸುರಕ್ಷಿತ. ಅಲ್ಲವೇ?. ನಿಮ್ಮ ಕಾರಿಗೆ ಸಮಗ್ರ ಇನ್ಶೂರೆನ್ಸ್ ಅಥವಾ ಥರ್ಡ್ ಪಾರ್ಟಿ ಕವರ್ ಆಯ್ಕೆ ಮಾಡುವುದು ಕೂಡಾ ಅದೇ ರೀತಿ. ನಿಮ್ಮ ಕಾರಿಗೆ 360 ಡಿಗ್ರಿ ರಕ್ಷಣೆ ನೀಡುವ ಸಮಗ್ರ ಕಾರ್ ಇನ್ಶೂರೆನ್ಸ್ ಬದಲು, ಕೇವಲ ಥರ್ಡ್ ಪಾರ್ಟಿ ಹೊಣೆಗಾರಿಕೆಗಳ ವಿರುದ್ಧದ ರಕ್ಷಣೆಯನ್ನು ಮಾತ್ರ ಆರಿಸಿಕೊಂಡರೆ, ನೀವು ಹಲವಾರು ಅಪಾಯಗಳಿಗೆ ಹಾಗೂ ಹಣಕಾಸು ನಷ್ಟಕ್ಕೆ ಈಡಾಗುತ್ತೀರಿ. ಇನ್ನೂ ಯೋಚಿಸುತ್ತಿದ್ದೀರಾ? ನಾವು ನಿಮಗೆ ಈ ಎರಡರ ಸಾಧಕ ಬಾಧಕಗಳ ಬಗ್ಗೆ ಮಾಹಿತಿ ನೀಡುತ್ತೇವೆ:
80% ಗ್ರಾಹಕರು ಇದನ್ನೇ ಆಯ್ಕೆಮಾಡುತ್ತಾರೆ | ||
---|---|---|
ಸಮಗ್ರ ಕವರ್ | ಥರ್ಡ್ ಪಾರ್ಟಿ ಹೊಣೆಗಾರಿಕೆ ಮಾತ್ರದ ಕವರ್ | |
ನೈಸರ್ಗಿಕ ವಿಕೋಪಗಳಿಂದಾದ ಹಾನಿ - ಭೂಕಂಪ, ಸೈಕ್ಲೋನ್, ಪ್ರವಾಹ ಇತ್ಯಾದಿ. | ಒಳಗೊಂಡಿದೆ | ಸೇರುವುದಿಲ್ಲ |
ಬೆಂಕಿ, ಕಳ್ಳತನ, ವಿಧ್ವಂಸಕ ಕೃತ್ಯ ಇತ್ಯಾದಿಗಳಿಂದಾದ ಹಾನಿ. | ಒಳಗೊಂಡಿದೆ | ಸೇರುವುದಿಲ್ಲ |
₹15 ಲಕ್ಷಗಳ ಪರ್ಸನಲ್ ಆಕ್ಸಿಡೆಂಟ್ ಕವರ್ | ಒಳಗೊಂಡಿದೆ | ಒಳಗೊಂಡಿದೆ |
ದೊರೆಯುವ ಆ್ಯಡ್-ಆನ್‌ಗಳು - ಶೂನ್ಯ ಸವಕಳಿ, NCB ರಕ್ಷಣೆ ಇತ್ಯಾದಿ. | ಒಳಗೊಂಡಿದೆ | ಸೇರುವುದಿಲ್ಲ |
ಥರ್ಡ್ ಪಾರ್ಟಿ ವಾಹನ/ಆಸ್ತಿಗೆ ಹಾನಿ | ಒಳಗೊಂಡಿದೆ | ಒಳಗೊಂಡಿದೆ |
ಥರ್ಡ್ ಪಾರ್ಟಿ ವ್ಯಕ್ತಿಗಾದ ದೈಹಿಕ ಗಾಯ | ಒಳಗೊಂಡಿದೆ | ಒಳಗೊಂಡಿದೆ |
ಮಾನ್ಯ ಪಾಲಿಸಿ ಇದ್ದರೆ ಹೆಚ್ಚಿನ ದಂಡ ಬೀಳುವುದಿಲ್ಲ | ಒಳಗೊಂಡಿದೆ | ಒಳಗೊಂಡಿದೆ |
ಕಾರ್ ಮೌಲ್ಯದ ಕಸ್ಟಮೈಸೇಶನ್ | ಒಳಗೊಂಡಿದೆ | ಸೇರುವುದಿಲ್ಲ |
ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವಾಗ, ಅದರ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ಹಂತವಾರು ಮಾರ್ಗದರ್ಶಿ ಇಲ್ಲಿದೆ
ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಲ್ಲಿ ಸಮಗ್ರ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ಸರಳ ಮತ್ತು ಸುಲಭ. ನಿಮ್ಮ ಅನುಕೂಲಕ್ಕಾಗಿ ನೀವು ನಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಅನ್ನು ಕೂಡ ಬಳಸಬಹುದು.
ಈ ಕೆಳಗಿನ ಕಾರಣಗಳಿಗಾಗಿ ಎಚ್‌ಡಿಎಫ್‌ಸಿ ಎರ್ಗೋ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸಲು ಸಲಹೆ ನೀಡಲಾಗುತ್ತದೆ:
ಸಮಗ್ರ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಥರ್ಡ್ ಪಾರ್ಟಿ ಕಾರ್ ಇನ್ಶೂರೆನ್ಸ್ ಪ್ಲಾನಿಗಿಂತ ಹೆಚ್ಚಾಗಿದೆ. ಹೆಚ್ಚಿನ ಪ್ರೀಮಿಯಂ ಅನ್ನು ಪಾವತಿಸಿದರೂ ಪಾಲಿಸಿಯ ವಿಸ್ತರಿತ ಕವರೇಜ್ ವ್ಯಾಪ್ತಿಯನ್ನು ನೀಡಲಾಗುತ್ತದೆ. ಇದಲ್ಲದೆ, ಸಮಗ್ರ ಪಾಲಿಸಿಯ ಪ್ರೀಮಿಯಂ ಬಹಳಷ್ಟು ಅಂಶಗಳನ್ನು ಅವಲಂಬಿಸಿರುತ್ತದೆ. ಕವರೇಜ್‌ಗಾಗಿ ನೀವು ಎಷ್ಟು ಪಾವತಿಸಬೇಕು ಎಂಬುದನ್ನು ಈ ಅಂಶಗಳು ನಿರ್ಧರಿಸುತ್ತವೆ. ಅಂಶಗಳನ್ನು ಕೆಳಗೆ ಚರ್ಚಿಸಲಾಗಿದೆ
ಸಮಗ್ರ ಇನ್ಶೂರೆನ್ಸ್ ಕ್ಲೈಮ್ ಮಾಡುವುದು ತುಲನಾತ್ಮಕವಾಗಿ ಸುಲಭ. ಕೇವಲ ಇನ್ಶೂರೆನ್ಸ್ ಕಂಪನಿಗೆ ತಿಳಿಸಿ ಮತ್ತು ಪ್ರಕ್ರಿಯೆಯನ್ನು ಅನುಸರಿಸಿ ಮತ್ತು ನಿಮ್ಮ ಕ್ಲೈಮ್ ಅನ್ನು ತ್ವರಿತವಾಗಿ ಸೆಟಲ್ ಮಾಡಲಾಗುತ್ತದೆ. ಆದಾಗ್ಯೂ, ಕ್ಲೈಮ್ ಮಾಡುವಾಗ ನೀವು ಪರಿಗಣಿಸಬೇಕಾದ ಕೆಲವು ಅಂಶಗಳು ಇಲ್ಲಿವೆ -
• ಕ್ಲೈಮ್ ಮಾಡಿದ ತಕ್ಷಣವೇ ವಿಮಾದಾತರಿಗೆ ತಿಳಿಸಿ. ಇದು ಕಂಪನಿಗೆ ಕ್ಲೈಮ್ ನೋಂದಣಿ ಮಾಡಲು ಮತ್ತು ನಿಮಗೆ ಕ್ಲೈಮ್ ರೆಫರೆನ್ಸ್ ನಂಬರ್ ನೀಡಲು ಅನುವು ಮಾಡಿಕೊಡುತ್ತದೆ. ಭವಿಷ್ಯದ ಕ್ಲೈಮ್ ಸಂಬಂಧಿತ ಸಂವಹನಗಳಲ್ಲಿ ನಂಬರ್ ಅಗತ್ಯವಾಗಿದೆ.
• ಥರ್ಡ್ ಪಾರ್ಟಿ ಕ್ಲೈಮ್ ಅಥವಾ ಕಳ್ಳತನದ ಸಂದರ್ಭದಲ್ಲಿ, ಪೋಲೀಸ್ FIR ಕಡ್ಡಾಯವಾಗಿದೆ..
• ಪಾಲಿಸಿಯು ಕೆಲವು ಸಂದರ್ಭಗಳನ್ನು ಕವರ್ ಮಾಡುವುದಿಲ್ಲ. ತಿರಸ್ಕಾರಗಳನ್ನು ತಪ್ಪಿಸಲು ಪಾಲಿಸಿ ಹೊರಗಿಡುವಿಕೆಗಳಿಗೆ ನೀವು ಕ್ಲೈಮ್ ಮಾಡದಿರುವುದನ್ನು ಖಚಿತಪಡಿಸಿಕೊಳ್ಳಿ.
• ನೀವು ನಗದುರಹಿತ ಗ್ಯಾರೇಜಿನಲ್ಲಿ ನಿಮ್ಮ ಕಾರನ್ನು ದುರಸ್ತಿ ಮಾಡದಿದ್ದರೆ, ನೀವು ದುರಸ್ತಿ ವೆಚ್ಚಗಳಿಗೆ ಪಾವತಿಸಬೇಕಾಗುತ್ತದೆ. ನಂತರ, ಇನ್ಶೂರೆನ್ಸ್ ಕಂಪನಿಯೊಂದಿಗೆ ಕ್ಲೈಮ್ ಸಲ್ಲಿಸುವ ಮೂಲಕ ನೀವು ವೆಚ್ಚಗಳ ಮರುಪಾವತಿಯನ್ನು ಪಡೆಯಬಹುದು.
• ನೀವು ಮಾಡುವ ಪ್ರತಿ ಕ್ಲೈಮ್‌ನಲ್ಲಿ ಕಡಿತ ಮಾಡಬಹುದಾದ ವೆಚ್ಚವನ್ನು ನೀವು ಭರಿಸಬೇಕಾಗುತ್ತದೆ.
ಕೇವಲ 4 ಹಂತದ ಪ್ರಕ್ರಿಯೆ ಮತ್ತು ಕ್ಲೈಮ್ ಸಂಬಂಧಿತ ಚಿಂತೆಗಳನ್ನು ದೂರ ಮಾಡುವ ಕ್ಲೈಮ್ ಸೆಟಲ್ಮೆಂಟ್ ದಾಖಲೆಗಳ ಮೂಲಕ, ಈಗ ಕ್ಲೈಮ್ ಸಲ್ಲಿಕೆ ಇನ್ನಷ್ಟು ಸುಲಭವಾಗಿದೆ!
NCB ಎಂದರೆ ನೋ ಕ್ಲೈಮ್ ಬೋನಸ್. ನೀವು ಪಾಲಿಸಿ ವರ್ಷದಲ್ಲಿ ಕ್ಲೈಮ್ ಮಾಡದಿದ್ದರೆ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಈ ಬೋನಸ್ ಗಳಿಸುತ್ತೀರಿ. NCB ಯೊಂದಿಗೆ, ಇನ್ಶೂರ್ಡ್ ವ್ಯಕ್ತಿಯು ಈ ಕೆಳಗಿನ ಪಾಲಿಸಿ ವರ್ಷದಲ್ಲಿ ತಮ್ಮ ಇನ್ಶೂರೆನ್ಸ್ ಅನ್ನು ನವೀಕರಿಸಿದಾಗ ತಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ರಿಯಾಯಿತಿ ಪಡೆಯುತ್ತಾರೆ. ಪ್ರತಿ ಕ್ಲೈಮ್-ಮುಕ್ತ ವರ್ಷದ ನಂತರವೂ NCB ದರವು ಹೆಚ್ಚಾಗುತ್ತದೆ. ಮೊದಲ ವರ್ಷದಲ್ಲಿ, ಪಾಲಿಸಿದಾರರು ಮೊದಲ ಪಾಲಿಸಿ ವರ್ಷಕ್ಕೆ ಯಾವುದೇ ಕ್ಲೈಮ್‌ಗಳನ್ನು ಮಾಡದಿದ್ದರೆ 20% NCB ರಿಯಾಯಿತಿಯನ್ನು ಪಡೆಯುತ್ತಾರೆ.
ಪರಿಣಾಮವಾಗಿ, ಯಾವುದೇ ಕ್ಲೈಮ್‌ಗಳನ್ನು ಮಾಡದೇ ಇರುವ ಎರಡನೇ ವರ್ಷದಿಂದ ಪಾಲಿಸಿದಾರರು ಹೆಚ್ಚುವರಿ 5% ಗಳಿಸುತ್ತಿರುತ್ತಾರೆ. ಆದಾಗ್ಯೂ, ನೀವು ಕ್ಲೈಮ್ ಮಾಡಿದ ನಂತರ, ಸಂಗ್ರಹಿಸಿದ NCB ಶೂನ್ಯವಾಗುತ್ತದೆ. ಅದರ ನಂತರ, ನೀವು ಮುಂದಿನ ಪಾಲಿಸಿ ವರ್ಷದಿಂದ NCB ಗಳಿಸಲು ಆರಂಭಿಸುತ್ತೀರಿ.
ನವೀಕರಣಗಳ ಮೇಲೆ NCB ನಿಮಗೆ ಪ್ರೀಮಿಯಂ ರಿಯಾಯಿತಿಯನ್ನು ನೀಡುತ್ತದೆ. NCB ದರವು ಈ ರೀತಿಯಾಗಿದೆ:
ಕ್ಲೈಮ್- ಮುಕ್ತ ವರ್ಷಗಳ ಸಂಖ್ಯೆ | ಅನುಮತಿಸಲಾದ NCB |
ಮೊದಲ ಕ್ಲೈಮ್ ಮುಕ್ತ ವರ್ಷದ ನಂತರ | 20% |
ಎರಡು ಸತತ ಕ್ಲೈಮ್ ಮುಕ್ತ ವರ್ಷಗಳ ನಂತರ | 25% |
ಮೂರು ಸತತ ಕ್ಲೈಮ್ ಮುಕ್ತ ವರ್ಷಗಳ ನಂತರ | 35% |
ನಾಲ್ಕು ಸತತ ಕ್ಲೈಮ್ ಮುಕ್ತ ವರ್ಷಗಳ ನಂತರ | 45% |
ಐದು ಸತತ ಕ್ಲೈಮ್ ಮುಕ್ತ ವರ್ಷಗಳ ನಂತರ | 50% |
ಸಮಗ್ರ ಕಾರ್ ಇನ್ಶೂರೆನ್ಸ್‌ನಲ್ಲಿ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಎಂದರೆ ವಾಹನದ ರಿಪೇರಿ ಸಾಧ್ಯವಿಲ್ಲದಷ್ಟು ಹಾನಿಗೆ ಒಳಗಾದರೆ ಅಥವಾ ಕಳ್ಳತನವಾದಾಗ ಪಾಲಿಸಿದಾರರು ವಿಮಾದಾತರಿಂದ ಪಡೆಯುವ ಗರಿಷ್ಠ ಮೊತ್ತವಾಗಿದೆ. IDV ಎಂಬುದು ಕಾರಿನ ಅಂದಾಜು ಮಾರುಕಟ್ಟೆ ಮೌಲ್ಯವಾಗಿದೆ ಮತ್ತು ಇದು ಸವಕಳಿಯಿಂದಾಗಿ ಪ್ರತಿ ವರ್ಷ ಬದಲಾಗುತ್ತದೆ. ಉದಾಹರಣೆಗೆ, ನೀವು ಪಾಲಿಸಿಯನ್ನು ಖರೀದಿಸಿದಾಗ ಮತ್ತು ಅದು ಕಳ್ಳತನವಾದಾಗ ನಿಮ್ಮ ಕಾರಿನ IDV ರೂ. 10 ಲಕ್ಷ ಆಗಿದ್ದರೆ, ನಿಮ್ಮ ವಿಮಾದಾತರು ರೂ. 10 ಲಕ್ಷದ ಮೊತ್ತವನ್ನು ವಿತರಿಸುತ್ತಾರೆ. ಪಾಲಿಸಿದಾರರು ಅದನ್ನು ಇನ್ಶೂರ್ ಮಾಡುವಾಗ IDV ಯನ್ನು ಘೋಷಿಸುತ್ತಾರೆ. ಇದು ಸಮಗ್ರ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. IDV ಹೆಚ್ಚಾದಷ್ಟೂ, ಪ್ರೀಮಿಯಂ ಹೆಚ್ಚಾಗುತ್ತದೆ.
IDV ಯನ್ನು ಈ ಕೆಳಗಿನಂತೆ ಲೆಕ್ಕ ಹಾಕಲಾಗುತ್ತದೆ - IDV = (ಕಾರಿನ ವಯಸ್ಸಿನ ಆಧಾರದ ಮೇಲೆ ತಯಾರಕರು ನಿರ್ಧರಿಸಿದ ಕಾರಿನ ಬೆಲೆ - ಸವಕಳಿ) + (ಕಾರಿಗೆ ಸೇರಿಸಲಾದ ಅಕ್ಸೆಸರಿಗಳ ವೆಚ್ಚ - ಅಂತಹ ಅಕ್ಸೆಸರಿಗಳ ವಯಸ್ಸಿನ ಆಧಾರದ ಮೇಲೆ ಸವಕಳಿ)
ಸವಕಳಿ ದರವನ್ನು ಮೊದಲೇ ನಿರ್ಧರಿಸಲಾಗಿದೆ. ಇದು ಈ ರೀತಿಯಾಗಿದೆ –
ಎಷ್ಟು ವರ್ಷಗಳ ಕಾರ್ | ಸವಕಳಿ ದರ |
6 ತಿಂಗಳವರೆಗೆ | 5% |
ಆರು ತಿಂಗಳಿಗಿಂತ ಹೆಚ್ಚು ಆದರೆ ಒಂದು ವರ್ಷಕ್ಕಿಂತ ಕಡಿಮೆ | 15% |
ಒಂದು ವರ್ಷಕ್ಕಿಂತ ಹೆಚ್ಚು ಆದರೆ ಎರಡು ವರ್ಷಗಳಿಗಿಂತ ಕಡಿಮೆ | 20% |
ಎರಡು ವರ್ಷಗಳಿಗಿಂತ ಹೆಚ್ಚು ಆದರೆ ಮೂರು ವರ್ಷಗಳಿಗಿಂತ ಕಡಿಮೆ | 30% |
ಮೂರು ವರ್ಷಗಳಿಗಿಂತ ಹೆಚ್ಚು ಆದರೆ ನಾಲ್ಕು ವರ್ಷಗಳಿಗಿಂತ ಕಡಿಮೆ | 40% |
ನಾಲ್ಕು ವರ್ಷಗಳಿಗಿಂತ ಹೆಚ್ಚು ಆದರೆ ಐದು ವರ್ಷಗಳಿಗಿಂತ ಕಡಿಮೆ | 50% |
ನಿಯಮಿತ ಕಾರ್ ಇನ್ಶೂರೆನ್ಸ್‌ಗೆ ಹೋಲಿಸಿದರೆ ಮಾರ್ಪಾಡು ಮಾಡಿದ ಕಾರುಗಳಿಗೆ ಇನ್ಶೂರೆನ್ಸ್ ಪ್ರೀಮಿಯಂಗಳು ಹೆಚ್ಚಾಗಿರುತ್ತವೆ. ಏಕೆಂದರೆ ಮಾರ್ಪಾಡುಗಳು ನಿಮ್ಮ ವಾಹನದ ಕಳ್ಳತನ ಅಥವಾ ದಕ್ಷತೆಯ ಅಪಾಯವನ್ನು ಹೆಚ್ಚಿಸಬಹುದು. ಉದಾಹರಣೆಗೆ, ಟರ್ಬೋ ಎಂಜಿನ್‌ನೊಂದಿಗೆ ನೀವು ನಿಮ್ಮ ವಾಹನಕ್ಕೆ ಫಿಟ್ ಆಗಿದ್ದರೆ, ನಿಮ್ಮ ಕಾರಿನ ವೇಗವು ಹೆಚ್ಚಾಗುತ್ತದೆ, ಅದರರ್ಥ ಅಪಘಾತಕ್ಕೆ ಒಳಗಾಗುವ ಹೆಚ್ಚಿನ ಅಪಾಯವೂ ಕೂಡ ಇರುತ್ತದೆ. ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರು ಈ ಎಲ್ಲಾ ಸಂಭಾವ್ಯತೆಗಳನ್ನು ಪರಿಗಣಿಸುತ್ತಾರೆ ಮತ್ತು ನೀವು ನಿಮ್ಮ ವಾಹನವನ್ನು ಮಾರ್ಪಾಡು ಮಾಡಿದಾಗ ನಿಮ್ಮ ಪ್ರೀಮಿಯಂ ಮೊತ್ತವು ಹೆಚ್ಚಾಗುತ್ತದೆ. ಮತ್ತೊಂದೆಡೆ, ನೀವು ನಿಮ್ಮ ಕಾರಿನಲ್ಲಿ ಪಾರ್ಕಿಂಗ್ ಸೆನ್ಸಾರ್‌ಗಳನ್ನು ಹಾಕಿದರೆ, ರಿವರ್ಸ್ ಮಾಡುವಾಗ ನಿಮ್ಮ ವಾಹನ ಒಡೆಯುವ ಅಪಾಯವು ಕಡಿಮೆಯಾಗುವುದರಿಂದ ಪ್ರೀಮಿಯಂ ಕಡಿಮೆಯಾಗುತ್ತದೆ.
ಮೋಟಾರ್ ವಾಹನ ಕಾಯ್ದೆ, 1988 ರ ಪ್ರಕಾರ, ನೀವು ಮಾರಾಟಗಾರರಾಗಿ ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಮಾರಾಟವಾದ 14 ದಿನಗಳ ಒಳಗೆ ಕಾರಿನ ಹೊಸ ಮಾಲೀಕರಿಗೆ ವರ್ಗಾಯಿಸಬೇಕು. ಕಾರುಗಳ ವಿನಿಮಯ ಅಥವಾ ಖರೀದಿ-ಮಾರಾಟದ ಪ್ರಮುಖ ಭಾಗವೆಂದರೆ, ಹಿಂದಿನ ಮಾಲೀಕರಿಂದ ಮುಂದಿನ ಮಾಲೀಕರಿಗೆ ಇನ್ಶೂರೆನ್ಸ್ ಪಾಲಿಸಿಯ ವಿನಿಮಯ ಅಥವಾ ವರ್ಗಾವಣೆ ಆಗಿದೆ. ಅನಿರೀಕ್ಷಿತ ಅಪಾಯಗಳಿಂದ ನಿಮ್ಮ ಕಾರನ್ನು ಆರ್ಥಿಕವಾಗಿ ಸುರಕ್ಷಿತವಾಗಿರಿಸಲು ನೀವು ಇನ್ಶೂರೆನ್ಸ್ ಖರೀದಿಸುತ್ತೀರಿ. ನೀವು ಕಾರು ಹೊಂದಿಲ್ಲದಿದ್ದರೆ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಇಟ್ಟುಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ. ಆದ್ದರಿಂದ ಹೊಸ ಕಾರು ಮಾಲೀಕರ ಹೆಸರಿಗೆ ಇನ್ಶೂರೆನ್ಸ್ ಪಾಲಿಸಿಯನ್ನು ಟ್ರಾನ್ಸ್‌ಫರ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ನೀವು ಬೇರೊಬ್ಬರಿಂದ ಕಾರನ್ನು ಖರೀದಿಸಿದರೆ, ಪಾಲಿಸಿಯನ್ನು ನಿಮ್ಮ ಹೆಸರಿಗೆ ಟ್ರಾನ್ಸ್‌ಫರ್ ಮಾಡಿಸುವುದನ್ನು ಖಚಿತಪಡಿಸಿಕೊಳ್ಳಿ.
ಸಮಗ್ರ ಕಾರ್ ಇನ್ಶೂರೆನ್ಸ್ ಖರೀದಿಸುವುದು ಕಡ್ಡಾಯವಲ್ಲ. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಥರ್ಡ್ ಪಾರ್ಟಿ ಕವರ್ ಖರೀದಿಸುವುದು ಕಡ್ಡಾಯವಾಗಿದೆ. ಆದಾಗ್ಯೂ, ಸಮಗ್ರ ಇನ್ಶೂರೆನ್ಸ್‌ನೊಂದಿಗೆ ನೀವು ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜ್ ಪಡೆಯುತ್ತೀರಿ, ಆದರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್‌ನಲ್ಲಿ ಥರ್ಡ್ ಪಾರ್ಟಿ ನಷ್ಟಗಳಿಗೆ ಮಾತ್ರ ಇನ್ಶೂರರ್ ಹಣಕಾಸಿನ ಹೊರೆಯನ್ನು ಭರಿಸುತ್ತಾರೆ.
ನೀವು ಯಾವುದೇ ಸಮಯದಲ್ಲಿ ಆನ್ಲೈನ್‌ನಲ್ಲಿ ನಿಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಬಹುದು. ಎಚ್‌ಡಿಎಫ್‌ಸಿ ಎರ್ಗೋದಂತಹ ಇನ್ಶೂರೆನ್ಸ್ ಪೂರೈಕೆದಾರರು ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತಾರೆ.
ನಿಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ನವೀಕರಿಸುವುದು ತುಂಬಾ ಸುಲಭವಾದ ಪ್ರಕ್ರಿಯೆಯಾಗಿದೆ. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಹೋಗಿ, ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ನಿಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ನಿಮಿಷಗಳಲ್ಲಿ ನವೀಕರಿಸಿ.
ಯಾವುದೇ ಸನ್ನಿವೇಶಗಳಲ್ಲಿ ಸಮಗ್ರ ಕಾರ್ ಇನ್ಶೂರೆನ್ಸ್ ಕ್ಲೈಮ್ ಮಾಡಲು ಅಗತ್ಯವಿರುವ ಅತ್ಯಂತ ಸಾಮಾನ್ಯ ಡಾಕ್ಯುಮೆಂಟ್‌ಗಳೆಂದರೆ FIR ರಿಪೋರ್ಟ್, ವಾಹನದ ನೋಂದಣಿ ಪ್ರಮಾಣಪತ್ರ, ಡ್ರೈವಿಂಗ್ ಲೈಸೆನ್ಸ್, ಕಾರ್ ಇನ್ಶೂರೆನ್ಸ್ ಕಾಪಿ, ಕ್ಲೈಮ್ ಫಾರ್ಮ್. ಕಳ್ಳತನದ ಸಂದರ್ಭದಲ್ಲಿ RTO ನಿಂದ ಕಳ್ಳತನದ ಘೋಷಣೆ ಮತ್ತು ಉಪಕ್ರಮ ಪತ್ರದ ಅಗತ್ಯವಿದೆ. ಥರ್ಡ್ ಪಾರ್ಟಿ ಕ್ಲೈಮ್‌ಗಾಗಿ, ನೀವು ಇನ್ಶೂರೆನ್ಸ್ ಕಾಪಿ, FIR ಮತ್ತು RC ಮತ್ತು ಡ್ರೈವಿಂಗ್ ಲೈಸೆನ್ಸ್ ಕಾಪಿಯೊಂದಿಗೆ ಕ್ಲೈಮ್ ಫಾರ್ಮ್ ಸಲ್ಲಿಸಬೇಕು.
ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಸ ಕಾರು ಮಾಲೀಕರಿಗೆ, ನಿರಂತರ ರಸ್ತೆ ಪ್ರವಾಸ ಹೋಗುವವರಿಗೆ ಮತ್ತು ಮೆಟ್ರೋಪಾಲಿಟನ್ ಸಿಟಿ ಕಾರು ಮಾಲೀಕರಿಗೆ ಶಿಫಾರಸು ಮಾಡಲಾಗಿದೆ.
ಸಮಗ್ರ ಕಾರ್ ಇನ್ಶೂರೆನ್ಸ್‌ನ ಮಾನ್ಯತೆ ಸಾಮಾನ್ಯವಾಗಿ ಒಂದು ವರ್ಷವಾಗಿರುತ್ತದೆ. ಆದಾಗ್ಯೂ, ನೀವು ದೀರ್ಘಾವಧಿಯ ಪಾಲಿಸಿಯನ್ನು ಆಯ್ಕೆ ಮಾಡಿದರೆ, ಪಾಲಿಸಿಯನ್ನು ಖರೀದಿಸುವಾಗ ನೀವು ಆಯ್ಕೆ ಮಾಡುವ ವರ್ಷಗಳ ಸಂಖ್ಯೆಯ ಆಧಾರದ ಮೇಲೆ ಕವರೇಜ್ ವಿಸ್ತರಿಸುತ್ತದೆ.
NCB ಪ್ರಯೋಜನವನ್ನು ಕಳೆದುಕೊಳ್ಳದೆ ನೀವು ಒಂದು ಇನ್ಶೂರೆನ್ಸ್ ಕಂಪನಿಯಿಂದ ಇನ್ನೊಂದಕ್ಕೆ ನಿಮ್ಮ NCB ಪ್ರಯೋಜನವನ್ನು ಟ್ರಾನ್ಸ್‌ಫರ್ ಮಾಡಬಹುದು. ನಿಮ್ಮ ಇನ್ಶೂರೆನ್ಸ್ ಕಂಪನಿಯು ಬದಲಾದರೆ ಮತ್ತು NCB ಯ ಪ್ರಯೋಜನವನ್ನು ನಿಮ್ಮ ಹೊಸ ವಿಮಾದಾತರೊಂದಿಗೆ ಬಳಸಿದರೆ NCB ಮಾನ್ಯವಾಗಿರುತ್ತದೆ. ಆದಾಗ್ಯೂ, ಗಡುವು ಮುಗಿದ 90 ದಿನಗಳ ಒಳಗೆ ನೀವು ಪಾಲಿಸಿಯನ್ನು ನವೀಕರಿಸದಿದ್ದರೆ, ನೋ ಕ್ಲೈಮ್ ಬೋನಸ್ (NCB) ಅಮಾನ್ಯವಾಗುತ್ತದೆ.
ಥರ್ಡ್ ಪಾರ್ಟಿ ಮತ್ತು ಸಮಗ್ರ ಇನ್ಶೂರೆನ್ಸ್ ನಡುವಿನ ಪ್ರಾಥಮಿಕ ಭಿನ್ನತೆಯು ಒದಗಿಸಲಾದ ಕವರೇಜ್ ವಿಧವಾಗಿದೆ. ಸಮಗ್ರ ಕಾರ್ ಇನ್ಶೂರೆನ್ಸ್ ನಿಮ್ಮ ಸ್ವಂತ ಹಾನಿಗಳು ಮತ್ತು ಥರ್ಡ್ ಪಾರ್ಟಿ ನಷ್ಟಗಳನ್ನು ಕವರ್ ಮಾಡುತ್ತದೆ, ಆದರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಮಾತ್ರ ಕವರ್ ಮಾಡುತ್ತದೆ. ಭಾರತದಲ್ಲಿ 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಕನಿಷ್ಠ ಮೂಲಭೂತ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೊಂದಿರುವುದು ಕಾನೂನು ಅವಶ್ಯಕತೆಯಾಗಿದೆ. ಇಲ್ಲದಿದ್ದರೆ ದಂಡ ವಿಧಿಸಬಹುದು.
ಹೌದು, ನೀವು ನಿಮ್ಮ ಕಾರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಥರ್ಡ್ ಪಾರ್ಟಿ ಹೊಣೆಗಾರಿಕೆಯಿಂದ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಗೆ ಬದಲಾಯಿಸಬಹುದು. ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಅಪಘಾತಗಳು, ಘರ್ಷಣೆಗಳು, ಮಾನ್ಸೂನ್ ಪ್ರವಾಹಗಳು, ಬೆಂಕಿ ಮತ್ತು ಮುಂತಾದ ಅನಿರೀಕ್ಷಿತ ಘಟನೆಗಳಿಂದಾಗಿ ನಿಮ್ಮ ಸ್ವಂತ ಕಾರ್‌ಗೆ ಆಗುವ ಹಾನಿಗಳು ಮತ್ತು ನಷ್ಟಗಳಿಗೆ ನೀವು ಕವರೇಜ್ ಪಡೆಯುತ್ತೀರಿ. ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯು ಪ್ರತ್ಯೇಕ ವೈಯಕ್ತಿಕ ಅಪಘಾತ ಪಾಲಿಸಿಯನ್ನು ಖರೀದಿಸುವ ಅಗತ್ಯವನ್ನು ನಿವಾರಿಸುತ್ತದೆ ಏಕೆಂದರೆ ಇದು ಎಲ್ಲವನ್ನೂ ಕವರ್ ಮಾಡುತ್ತದೆ. ಗಮನಿಸಿ: ನೀವು ಈಗಾಗಲೇ ಥರ್ಡ್ ಪಾರ್ಟಿ ಹೊಣೆಗಾರಿಕೆ ಪಾಲಿಸಿಯನ್ನು ಹೊಂದಿದ್ದರೆ, ನಿಮ್ಮ ವಾಹನದ ಸ್ವಂತ ಹಾನಿಯನ್ನು ಕವರ್ ಮಾಡಲು ನೀವು ಪ್ರತ್ಯೇಕ ಸ್ಟ್ಯಾಂಡ್ಅಲೋನ್ ಸ್ವಂತ ಹಾನಿ ಪಾಲಿಸಿಯನ್ನು ಕೂಡ ಪಡೆಯಬಹುದು.
ಆ್ಯಂಟಿ ಥೆಫ್ಟ್ ಡಿವೈಸ್‌ಗಳನ್ನು ಇನ್‌ಸ್ಟಾಲ್ ಮಾಡುವ ಮೂಲಕ, ಕಡಿತಗಳನ್ನು ಹೆಚ್ಚಿಸುವ ಮೂಲಕ, ಅನಗತ್ಯ ಕ್ಲೈಮ್‌ಗಳನ್ನು ಸಲ್ಲಿಸದೆ ನೋ ಕ್ಲೈಮ್ ಬೋನಸ್ ಪ್ರಯೋಜನಗಳನ್ನು ಸಂಗ್ರಹಿಸುವ ಮೂಲಕ ನೀವು ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಮಾಡಬಹುದು. ಕೊನೆಯದಾಗಿ, ನಿಮ್ಮ ವಾಹನಕ್ಕೆ ಯಾವುದೇ ಮಾರ್ಪಾಡು ಮಾಡುವುದನ್ನು ನೀವು ತಪ್ಪಿಸಬೇಕು ಏಕೆಂದರೆ ಇದು ನಿಮ್ಮ ಪ್ರೀಮಿಯಂ ಹೆಚ್ಚಿಸುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ಸೆಕೆಂಡ್‌ಹ್ಯಾಂಡ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಬಹುದು. ನೀವು ನಮ್ಮ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಬಳಸಬಹುದು. ನೀವು ನಮ್ಮ ಕಾರ್ ಇನ್ಶೂರೆನ್ಸ್ ಪುಟಕ್ಕೆ ಭೇಟಿ ನೀಡಬಹುದು, ನಿಮ್ಮ ವಾಹನದ ನೋಂದಣಿ ಸಂಖ್ಯೆ, ಹಿಂದಿನ ಪಾಲಿಸಿ ವಿವರಗಳನ್ನು ನಮೂದಿಸಿ, ಸಮಗ್ರ, ಥರ್ಡ್ ಪಾರ್ಟಿ ಮತ್ತು ಸ್ವಂತ ಹಾನಿ ಕವರ್‌ನಿಂದ ಒಂದು ಪ್ಲಾನ್ ಆಯ್ಕೆ ಮಾಡಬಹುದು. ನೀವು ಸಮಗ್ರ ಅಥವಾ ಸ್ವಂತ ಡ್ಯಾಮೇಜ್ ಕವರ್ ಖರೀದಿಸಿದರೆ ಆ್ಯಡ್-ಆನ್‌ಗಳನ್ನು ಆಯ್ಕೆಮಾಡಿ ಅಥವಾ ತೆಗೆದುಹಾಕಿ. ಸಲ್ಲಿಸಿ ಬಟನ್ ಮೇಲೆ ಕ್ಲಿಕ್ ಮಾಡಿ, ನಂತರ ನೀವು ನಿಮ್ಮ ಸೆಕೆಂಡ್‌ಹ್ಯಾಂಡ್ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ನೋಡಬಹುದು.
ಹೌದು, ಸಮಗ್ರ ಕಾರ್ ಇನ್ಶೂರೆನ್ಸ್ ನೈಸರ್ಗಿಕ ವಿಪತ್ತುಗಳನ್ನು ಕವರ್ ಮಾಡುತ್ತದೆ. ಒಂದು ವೇಳೆ ನೀವು ನೈಸರ್ಗಿಕ ವಿಕೋಪಗಳಿಂದ ಹಾನಿಗಳನ್ನು ಎದುರಿಸಿದ್ದರೆ, ಉಂಟಾದ ಹಾನಿಯ ಫೋಟೋಗ್ರಾಫಿಕ್ ಸಾಕ್ಷ್ಯವನ್ನು ನೀವು ಸಂಗ್ರಹಿಸಬೇಕು. ಇನ್ಶೂರೆನ್ಸ್ ಕಂಪನಿಗೆ ಸಲ್ಲಿಸಲು ಎಲ್ಲಾ ಸಾಕ್ಷ್ಯಗಳನ್ನು ಸ್ಪಷ್ಟವಾಗಿ ಸಂಗ್ರಹಿಸಿ. ಸಾಕ್ಷ್ಯದೊಂದಿಗೆ, ಕ್ಲೈಮ್ ಫೈಲ್ ಮಾಡಲು ನಿಮ್ಮ ಇನ್ಶೂರರ್ ಅನ್ನು ತಕ್ಷಣ ಸಂಪರ್ಕಿಸಿ. ಅನೇಕ ಪಾಲಿಸಿದಾರರು ಅದನ್ನು ಮಾಡಬಹುದಾದ್ದರಿಂದ ತಕ್ಷಣದ ಕ್ರಮವನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ತಾಳ್ಮೆಯಿಂದಿರಿ. ನೈಸರ್ಗಿಕ ವಿಕೋಪದಲ್ಲಿ, ಅನೇಕ ಜನರ ಕ್ಲೈಮ್‌ಗಳ ಮೇಲೆ ಕೆಲಸ ಮಾಡಲು ಇರಬಹುದು.
ನೀವು ಬಹು-ವಾರ್ಷಿಕ ಪಾಲಿಸಿಯನ್ನು (3 ವರ್ಷಗಳು) ಆಯ್ಕೆ ಮಾಡದ ಹೊರತು ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿ ಅವಧಿಯು ಸಾಮಾನ್ಯವಾಗಿ ಒಂದು ವರ್ಷ ಆಗಿರುತ್ತದೆ. ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ಕಾರ್ ಇನ್ಶೂರೆನ್ಸ್‌ನಲ್ಲಿ 3 ವರ್ಷಗಳವರೆಗೆ ಬಹು-ವರ್ಷದ ಅಥವಾ ದೀರ್ಘಾವಧಿಯ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನೀಡಲು ಜನರಲ್ ಇನ್ಶೂರೆನ್ಸ್ ಕಂಪನಿಗಳಿಗೆ ಅಧಿಕಾರ ನೀಡಿದೆ.