ಹೋಮ್ / ಹೋಮ್ ಇನ್ಶೂರೆನ್ಸ್ / ಮಳೆಗಾಲಕ್ಕಾಗಿ ಹೋಮ್ ಇನ್ಶೂರೆನ್ಸ್

ನಿಮ್ಮ ಮನೆಗೆ ಮಾನ್ಸೂನ್ ಇನ್ಶೂರೆನ್ಸ್ ಕವರೇಜ್

ಮಳೆಗಾಲದಲ್ಲಿ ನಿಮ್ಮ ಮನೆಯ ರಕ್ಷಣೆಯ ಬಗ್ಗೆ ಚಿಂತಿಸುತ್ತಿದ್ದೀರಾ? ಮಳೆಯಿಂದ ರಕ್ಷಣೆ ಪಡೆಯಲು ನೀವು ಮುಂಜಾಗ್ರತೆಯಿಂದ ಛತ್ರಿಯನ್ನು ತೆಗೆದುಕೊಂಡುಹೋಗುವಂತೆ, ಪ್ರತಿ ವರ್ಷ ಮಳೆಗಾಲದಲ್ಲಿ ಉಂಟಾಗುವ ನೈಸರ್ಗಿಕ ವಿಕೋಪಗಳ ವಿರುದ್ಧ ನಿಮ್ಮ ಮನೆಗೂ ಛತ್ರಿಯಂತಹ ರಕ್ಷಣೆ ಬೇಕು. ನಿಮ್ಮ ಮನೆಗೆ ಕೂಡ ಪ್ರವಾಹ, ಬಿರುಗಾಳಿ, ಸೈಕ್ಲೋನ್‌, ಭೂಕಂಪ ಹಾಗೂ ಭಾರಿ ಮಳೆಯಿಂದ ರಕ್ಷಣೆ ಬೇಕು. ಈ ಎಲ್ಲಾ ವಿಕೋಪಗಳಿಂದ ನಿಮ್ಮ ಮನೆ ನಿಮಗೆ ರಕ್ಷಣೆ ನೀಡುತ್ತದೆ. ಹಾಗಾಗಿ ಮಳೆಗಾಲದಲ್ಲಿ ಉಂಟಾಗಬಹುದಾದ ಹಾನಿಯ ವಿರುದ್ಧ ನಿಮ್ಮ ಮನೆಯನ್ನು ರಕ್ಷಿಸಲು ಹೋಮ್ ಇನ್ಶೂರೆನ್ಸ್ ಖರೀದಿಸಿ.

ಮಳೆಗಾಲಕ್ಕೆ ಸಂಬಂಧಿಸಿದ ವಿಕೋಪಗಳಿಗೆ ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಇನ್ಶೂರೆನ್ಸ್ ಖರೀದಿಸುವ ಕಾರಣಗಳು

ಸಣ್ಣ ಅವಧಿಯೇ? ದೀರ್ಘ ಪ್ರಯೋಜನಗಳು
ಸಣ್ಣ ಅವಧಿಯೇ? ದೀರ್ಘ ಪ್ರಯೋಜನಗಳು
ನಿಮ್ಮ ಹೋಮ್ ಇನ್ಶೂರೆನ್ಸ್ ಉಪಯೋಗವಾಗದೆ ಹೋಗಬಹುದು ಎಂಬ ಚಿಂತೆಯೇ? ನಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಅವಧಿಯನ್ನು ಆಯ್ಕೆ ಮಾಡುವ ಅನುಕೂಲತೆ ಇದೆ. ನಮ್ಮ ಹೋಮ್ ಇನ್ಶೂರೆನ್ಸ್ ಪರಿಹಾರಗಳ ಅವಧಿಯು 1 ರಿಂದ 5 ವರ್ಷಗಳವರೆಗೆ ಇರುತ್ತದೆ.
45% ವರೆಗಿನ ರಿಯಾಯಿತಿ ಆನಂದಿಸಿ
45% ವರೆಗಿನ ರಿಯಾಯಿತಿ ಆನಂದಿಸಿ
ಈಗ ಎಚ್‌ಡಿಎಫ್‌ಸಿ ಎರ್ಗೋ ರೆಂಟರ್ಸ್ ಹೋಮ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಕನಸಿನ ಮನೆಗೆ ರಕ್ಷಣೆ ಪಡೆಯಿರಿ, ಭದ್ರತಾ ರಿಯಾಯಿತಿ, ಸಂಬಳದಾರರ ರಿಯಾಯಿತಿ, ಇಂಟರ್ಕಾಮ್ ರಿಯಾಯಿತಿ, ದೀರ್ಘಾವಧಿಯ ರಿಯಾಯಿತಿ - ಹೀಗೆ ಅಸಂಖ್ಯಾತ ರಿಯಾಯಿತಿಗಳನ್ನು ಪಡೆಯಿರಿ.
₹25 ಲಕ್ಷದವರೆಗೆ ಕವರ್ ಆಗುವ ವಸ್ತುಗಳು
₹25 ಲಕ್ಷದವರೆಗೆ ಕವರ್ ಆಗುವ ವಸ್ತುಗಳು
ನಿಮ್ಮ ವಸ್ತುಗಳು ಕೇವಲ ಭೌತಿಕ ಸ್ವತ್ತುಗಳಲ್ಲ. ಅವು ನೆನಪುಗಳನ್ನು, ಅಚ್ಚಳಿಯದ ಭಾವನಾತ್ಮಕ ನಂಟನ್ನು ಹೊಂದಿವೆ. ಮನೆಯ ವಸ್ತುಗಳ ನಿರ್ದಿಷ್ಟ ಪಟ್ಟಿ ಒದಗಿಸದೆ, ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು ನಿಮ್ಮ ಎಲ್ಲಾ ಸ್ವತ್ತುಗಳನ್ನು (₹25 ಲಕ್ಷದವರೆಗೆ) ಕವರ್ ಮಾಡುವ ಆಯ್ಕೆ ನೀಡುತ್ತವೆ.
ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು ಕವರ್ ಆಗುತ್ತವೆ
ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು ಕವರ್ ಆಗುತ್ತವೆ
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಲ್ಲದೆ ಜೀವನ ಹೇಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ನಿಮಗೆ ಆ ಪರಿಸ್ಥಿತಿ ಬರುವುದು ನಮಗಂತೂ ಇಷ್ಟವಿಲ್ಲ. ದಶಕಗಳ ನೆನಪು ಮತ್ತು ಬೆಲೆಬಾಳುವ ಮಾಹಿತಿ ಇರುವ ಲ್ಯಾಪ್ಟಾಪ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ವಸ್ತು ಆಗಿರಬಹುದು,

ಮಳೆಗಾಲದ ಹೋಮ್ ಇನ್ಶೂರೆನ್ಸ್‌ನಲ್ಲಿ ಏನಿದೆ?

ನೆಲಕ್ಕೆ ಆಗುವ ಹಾನಿ
ನೆಲಕ್ಕೆ ಆಗುವ ಹಾನಿ

ಮನೆಯೊಳಗೆ ನೀರು ನುಗ್ಗುವುದರಿಂದ ನೆಲಕ್ಕೆ ಆಗುವ ಹಾನಿ

 

ಶಾರ್ಟ್ ಸರ್ಕ್ಯೂಟ್
ಶಾರ್ಟ್ ಸರ್ಕ್ಯೂಟ್

ನೀರಿನ ಸೋರಿಕೆಯಿಂದ ಉಂಟಾದ ಶಾರ್ಟ್ ಸರ್ಕ್ಯೂಟ್‌ನಿಂದಾದ ಹಾನಿ

 

ಪೀಠೋಪಕರಣಗಳಿಗೆ ಉಂಟಾಗುವ ಹಾನಿ
ಪೀಠೋಪಕರಣಗಳಿಗೆ ಉಂಟಾಗುವ ಹಾನಿ

ನಿಮ್ಮ ಇನ್ಶೂರೆನ್ಸ್ ಪ್ಲಾನ್ ವೈಯಕ್ತಿಕ ವಸ್ತುಗಳನ್ನು ನಮೂದಿಸಿದರೆ, ಪೀಠೋಪಕರಣಗಳಿಗೆ ಹಾನಿ

 

ಕಟ್ಟಡಕ್ಕೆ ಆಗುವ ಹಾನಿ
ಕಟ್ಟಡಕ್ಕೆ ಆಗುವ ಹಾನಿ

ಗೋಡೆಯ ರಚನೆಯಿಂದ ಹಿಡಿದು ಅದರ ಬಣ್ಣದವರೆಗೆ ಆಗುವ ಹಾನಿ

ನೀರಿನ ಸೋರಿಕೆ
ನೀರಿನ ಸೋರಿಕೆ

ಮೇಲ್ಛಾವಣಿಯಿಂದ ನೀರಿನ ಸೋರಿಕೆ. ಬಿರುಕು ಹಾಗೂ ಸಂದುಗಳ ಮೂಲಕ ಸೋರುವ ನೀರು ಮಾತ್ರವಲ್ಲ, ಮೇಲ್ಛಾವಣಿಯಲ್ಲಿ ನಿಂತ ನೀರಿನಿಂದ ಕೂಡ ಕಟ್ಟಡ ದುರ್ಬಲವಾಗಬಹುದು

ಬೆಲೆ ಬಾಳುವ ವಸ್ತುಗಳು
ಬೆಲೆ ಬಾಳುವ ವಸ್ತುಗಳು

ಮನೆಯಲ್ಲಿರುವ ಬೆಲೆಬಾಳುವ ವಸ್ತುಗಳಿಗೆ ಆಗುವ ಹಾನಿಯ ವಿರುದ್ಧ ಕವರೇಜ್

ಪ್ರವಾಹ
ಪ್ರವಾಹ

ಪ್ರವಾಹದಿಂದ ಉಂಟಾಗುವ ಯಾವುದೇ ಹಾನಿಯನ್ನು ಕವರ್ ಮಾಡಲಾಗುತ್ತದೆ

ಮರುಸ್ಥಾಪನೆ
ಮರುಸ್ಥಾಪನೆ

ಎಲೆಕ್ಟ್ರಾನಿಕ್ ಮತ್ತು ಗೃಹೋಪಯೋಗಿ ವಸ್ತುಗಳ ದುರಸ್ತಿ ಮತ್ತು ಬದಲಾವಣೆ ವೆಚ್ಚ

ಬದಲಿಸುವಿಕೆ
ಬದಲಿಸುವಿಕೆ

ಸಿಡಿಲು ಬಡಿದ ನಂತರ ಮನೆಯ ದುರಸ್ಥಿ ಆಗುವವರೆಗೂ ಪರ್ಯಾಯ ವಸತಿ ವ್ಯವಸ್ಥೆ

ಬೆಂಕಿ
ಬೆಂಕಿ

ಮನೆಯ ಭಾಗಗಳು ಹಾಗೂ ಎಲೆಕ್ಟ್ರಿಕಲ್ ಸಲಕರಣೆಗಳು, ಇನ್ನಿತರ ಫಿಕ್ಸ್‌ಚರ್‌ಗಳು ಮತ್ತು ಫಿಟ್ಟಿಂಗ್‌ಗಳಿಗೆ ಕವರೇಜ್

ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಬ್ರೇಕ್‌ಡೌನ್
ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಬ್ರೇಕ್‌ಡೌನ್

ವಿದ್ಯುತ್ ಏರುಪೇರು, ಶಾರ್ಟ್ ಸರ್ಕ್ಯೂಟ್ ಅಥವಾ ಸಿಡಿಲಿನಿಂದ ಉಂಟಾದ ಹಾನಿ

ಏನನ್ನು ಒಳಗೊಂಡಿಲ್ಲ?

ಉದ್ದೇಶಪೂರ್ವಕ ನಿರ್ಲಕ್ಷ್ಯ
ಉದ್ದೇಶಪೂರ್ವಕ ನಿರ್ಲಕ್ಷ್ಯ

ವಿಮೆ ಮಾಡಿಸಿದ ನಂತರ, ಮಾಲೀಕರ ಅಜಾಗರೂಕತೆಯಿಂದ ಉಂಟಾದ ಯಾವುದೇ ಹಾನಿಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ. ತಪ್ಪಾದ ನಿರ್ವಹಣೆ ಅಥವಾ ದುರುಪಯೋಗ ಸೇರಿದಂತೆ ಮಾಲೀಕರ ನಿರ್ಲಕ್ಷ್ಯದಿಂದ ಉಂಟಾದ ಯಾವುದೇ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ

cov-acc
ಅಮೂಲ್ಯ ವಸ್ತುಗಳು

ಅಮೂಲ್ಯ ಲೋಹದ ಗಟ್ಟಿಗಳು, ನಾಣ್ಯಗಳು, ಕಲಾಕೃತಿಗಳು ಇತ್ಯಾದಿ

10 ವರ್ಷಕ್ಕಿಂತ ಹಳೆಯ ವಸ್ತುಗಳು
10 ವರ್ಷಕ್ಕಿಂತ ಹಳೆಯ ವಸ್ತುಗಳು

ಖರೀದಿಯ ದಿನಾಂಕದಿಂದ 365 ದಿನಗಳಿಗಿಂತ ಹೆಚ್ಚು ಹಳೆಯದಾದ ಟೆಲಿವಿಷನ್‌ಗಳಿಗೆ, ಇನ್ಶೂರೆನ್ಸ್ ಮಾನ್ಯವಾಗಿರುವುದಿಲ್ಲ. ಏಕೆಂದರೆ ಈ ಪಾಲಿಸಿಯನ್ನು, TV ಖರೀದಿಸಿದ ಒಂದು ವರ್ಷದೊಳಗೆ ತೆಗೆದುಕೊಳ್ಳಬೇಕು

ಇತರೆ ಕಾರಣಗಳು
ಇತರೆ ಕಾರಣಗಳು

ಸಿಡಿಲಿನ ಹೊರತಾಗಿ ಬೇರೆ ಕಾರಣದಿಂದ ಬೆಂಕಿ ಹೊತ್ತಿಕೊಂಡಿದ್ದರೆ

ದೋಷದ ಬಗ್ಗೆ ತಿಳಿಸದೇ ಇರುವುದು
ದೋಷದ ಬಗ್ಗೆ ತಿಳಿಸದೇ ಇರುವುದು

ಪಾಲಿಸಿ ಖರೀದಿಸುವ ಸಮಯದಲ್ಲಿ, ಪ್ರಾಡಕ್ಟ್ ಬಗ್ಗೆ ವಿಮಾದಾರರು ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿಯನ್ನು ಒದಗಿಸಬೇಕು. ಒಂದು ವೇಳೆ ಯಾವುದಾದರೂ ಪ್ರಮುಖ ಮಾಹಿತಿಯನ್ನು ಒದಗಿಸದಿದ್ದರೆ ಅಥವಾ ಬೇಕೆಂತಲೇ ಮರೆಮಾಚಿದ್ದರೆ, ಅದನ್ನು ಈ ಇನ್ಶೂರೆನ್ಸ್‌ ಕವರ್ ಮಾಡುವುದಿಲ್ಲ

ಉದ್ದೇಶಪೂರ್ವಕ ವಿಧ್ವಂಸ
ಉದ್ದೇಶಪೂರ್ವಕ ವಿಧ್ವಂಸ

ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ. ಕೈ ಜಾರಿ ನೆಲಕ್ಕೆ ಬೀಳುವುದು ಸೇರಿದಂತೆ, ಯಾವುದೇ ಅಪಘಾತದಿಂದ ಪ್ರಾಡಕ್ಟ್‌ನ ಭಾಗಗಳು ಮುರಿದರೆ ಅಥವಾ ಹಾನಿಯಾದರೆ, ಅದು ಕವರ್ ಆಗುವುದಿಲ್ಲ

ಹೋಮ್ ಇನ್ಶೂರೆನ್ಸ್ ಪಾಲಿಸಿಯ ವಿಮಾ ಮೊತ್ತ ಹಾಗೂ ಪ್ರೀಮಿಯಂ ಮೊತ್ತವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?

ಅಂಡರ್‌ರೈಟಿಂಗ್ ತಂಡವು ನಿರ್ಧರಿಸಿದ ಅನೇಕ ಅಂಶಗಳು ಹಾಗೂ ಮಾರ್ಗಸೂಚಿಗಳ ಆಧಾರದ ಮೇಲೆ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಕಾರ್ಯನಿರ್ವಹಿಸುತ್ತದೆ. ನಿಮ್ಮ ಹಳೆಯ ಮನೆಗೆ ಹಾಗೂ ಹೊಸದಾಗಿ ಖರೀದಿಸಿದ ಮನೆಗೆ ನೀವು ಹೋಮ್ ಇನ್ಶೂರೆನ್ಸ್ ಖರೀದಿಸಬಹುದು. ಹೋಮ್ ಲೋನ್ ನೀಡುವವರು ಹೋಮ್ ಲೋನ್‌ನೊಂದಿಗೆ ಹೋಮ್ ಇನ್ಶೂರೆನ್ಸ್ ಅನ್ನು ಕಡ್ಡಾಯಗೊಳಿಸುತ್ತಾರೆ. ಇಲ್ಲಿ ವಿಮಾ ಮೊತ್ತ ಲೋನ್ ಮೊತ್ತ ಅಥವಾ ಮನೆಯ ಮರುಸ್ಥಾಪನೆಯ ಮೊತ್ತದಷ್ಟು ಇರಬಹುದು. ಸಾಮಾನ್ಯವಾಗಿ, ವಿಮಾ ಮೊತ್ತ ಮರುಸ್ಥಾಪನೆಯ ಮೊತ್ತ(ಮನೆಯ ಮರುನಿರ್ಮಾಣದ ವೆಚ್ಚ)ದಷ್ಟು ಇರುತ್ತದೆ. ಆದಾಗ್ಯೂ, ಮಾರುಕಟ್ಟೆಯ ಬೆಲೆಗೆ ಕವರೇಜ್ ನೀಡುವ ಎಚ್‌ಡಿಎಫ್‌ಸಿ ಎರ್ಗೋದಂತಹ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ.

ಮಳೆಗಾಲದ ವಿಕೋಪಗಳಿಗಾಗಿ ಹೋಮ್ ಇನ್ಶೂರೆನ್ಸ್ ಖರೀದಿಸಲು ಕಾರಣಗಳು

45% ವರೆಗಿನ ರಿಯಾಯಿತಿ ಆನಂದಿಸಿ
ಈಗ, ಎಚ್‌ಡಿಎಫ್‌ಸಿ ಎರ್ಗೋ ರೆಂಟರ್ಸ್ ಹೋಮ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಕನಸಿನ ಮನೆಯನ್ನು ಸುರಕ್ಷಿತವಾಗಿರಿಸಿ. ಭದ್ರತಾ ರಿಯಾಯಿತಿ, ಸಂಬಳಗಾರರ ರಿಯಾಯಿತಿ, ಇಂಟರ್‌ಕಾಮ್ ರಿಯಾಯಿತಿ, ದೀರ್ಘಾವಧಿ ರಿಯಾಯಿತಿ ಮುಂತಾದ ಅನೇಕ ರಿಯಾಯಿತಿಗಳನ್ನು ಪಡೆಯಿರಿ.
ನೈಸರ್ಗಿಕ ವಿಕೋಪಗಳ ವಿರುದ್ಧ ಮನೆಯ ಕಟ್ಟಡ ಹಾಗೂ ವಸ್ತುಗಳಿಗೆ ಕವರೇಜ್ ನೀಡುತ್ತದೆ
ಭೂಕಂಪ, ಪ್ರವಾಹ, ಬಿರುಗಾಳಿ, ಸೈಕ್ಲೋನ್ ಮತ್ತು ಭೂ ಕುಸಿತಗಳಂತಹ ನೈಸರ್ಗಿಕ ವಿಕೋಪಗಳ ವಿರುದ್ಧ ನಿಮ್ಮ ಮನೆಗೆ ಕವರೇಜ್ ನೀಡುತ್ತೇವೆ.
₹25 ಲಕ್ಷದವರೆಗೆ ಕವರ್ ಆಗುವ ವಸ್ತುಗಳು
ನಿಮ್ಮ ವಸ್ತುಗಳು ಕೇವಲ ಭೌತಿಕ ಸ್ವತ್ತುಗಳಲ್ಲ. ಅವು ನೆನಪುಗಳನ್ನು, ಅಚ್ಚಳಿಯದ ಭಾವನಾತ್ಮಕ ನಂಟನ್ನು ಹೊಂದಿವೆ. ಮನೆಯ ವಸ್ತುಗಳ ನಿರ್ದಿಷ್ಟ ಪಟ್ಟಿ ಒದಗಿಸದೆ, ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು ನಿಮ್ಮ ಎಲ್ಲಾ ಸ್ವತ್ತುಗಳನ್ನು (₹25 ಲಕ್ಷದವರೆಗೆ) ಕವರ್ ಮಾಡುವ ಆಯ್ಕೆ ನೀಡುತ್ತವೆ.

ಹೋಮ್ ಇನ್ಶೂರೆನ್ಸ್‌ನ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು ಯಾವುವು?

ಬೆಂಕಿ ಅಥವಾ ಕಳ್ಳತನದಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ವಿಮಾದಾತರು ನಿಮ್ಮ ಮನೆಯನ್ನು ಮತ್ತೆ ಯಥಾಸ್ಥಿತಿಗೆ ತರುತ್ತಾರೆ. ಆದಾಗ್ಯೂ, ಹೋಮ್ ಇನ್ಶೂರೆನ್ಸ್‌ನ ಪ್ರೀಮಿಯಂ ಅನ್ನು ನಿರ್ಧರಿಸುವ ಹಲವಾರು ಅಂಶಗಳಿವೆ. ಕೆಳಗೆ ನಮೂದಿಸಿದ ಅಂಶಗಳು ಪ್ರೀಮಿಯಂ ನಿರ್ಧರಿಸಲು ಸಹಾಯಕವಾಗಿವೆ.

1. ಕವರೇಜ್ ಮೊತ್ತ: ಕವರೇಜ್ ಅಥವಾ ಇನ್ಶೂರೆನ್ಸ್ ಮೊತ್ತ ಹೆಚ್ಚಿದ್ದಾಗ ಪ್ರೀಮಿಯಂ ಹೆಚ್ಚಿರುತ್ತದೆ, ಹಾಗೆಯೇ ಅವು ಕಡಿಮೆ ಇದ್ದಾಗ ಪ್ರೀಮಿಯಂ ಕಡಿಮೆ ಇರುತ್ತದೆ. 1 ಕೋಟಿ ಮೌಲ್ಯದ ಫ್ಲಾಟ್‌ಗಿಂತ 5 ಕೋಟಿ ಮೌಲ್ಯದ ಫ್ಲಾಟ್‌ಗೆ ಖಂಡಿತವಾಗಿಯೂ ಹೆಚ್ಚಿನ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಇರುತ್ತದೆ.

2. ಸ್ಥಳ: ನಿಮ್ಮ ಮನೆ ತಗ್ಗು ಪ್ರದೇಶದಲ್ಲಿದ್ದು ಪ್ರವಾಹದ ಅಪಾಯವಿದ್ದರೆ, ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರಬಹುದು. ನಿಮ್ಮ ಮನೆ ಇರುವ ಸ್ಥಳ ಪ್ರೀಮಿಯಂ ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ನಿಮ್ಮ ಮನೆ ಪ್ರಮುಖ ಸ್ಥಳದಲ್ಲಿದ್ದರೆ, ಕಟ್ಟಡದ ಮೌಲ್ಯ ಹೆಚ್ಚಿದ್ದು ಹೆಚ್ಚಿನ ಪ್ರೀಮಿಯಂಗೆ ಕಾರಣವಾಗುತ್ತದೆ.

3. ಭದ್ರತಾ ವ್ಯವಸ್ಥೆಗಳು: ನಿಮ್ಮ ಮನೆ ಅಥವಾ ಅಪಾರ್ಟ್ಮೆಂಟ್ ಸುರಕ್ಷಿತ ಸ್ಥಳದಲ್ಲಿ ಇದ್ದರೆ ಅಥವಾ ಎಲ್ಲಾ ಆಧುನಿಕ ಭದ್ರತಾ ಸಲಕರಣೆಗಳನ್ನು ಹೊಂದಿದ್ದರೆ, ಕಳ್ಳತನ ಆಗುವ ಸಂಭವ ಕಡಿಮೆ. ಮನೆಯಲ್ಲಿ ಸುರಕ್ಷತಾ ಗ್ಯಾಜೆಟ್‌ಗಳನ್ನು ಅಳವಡಿಸಿದ್ದರೆ, ದರೋಡೆ ಅಥವಾ ಕಳ್ಳತನದ ಸಾಧ್ಯತೆಗಳು ಕಡಿಮೆಯಾಗುತ್ತವೆ. ಅಪಾಯ ಕಡಿಮೆ ಇರುವುದರಿಂದ, ನಿಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಕೂಡ ಕಡಿಮೆಯಾಗುತ್ತದೆ.

4. ವಸ್ತುಗಳ ಮೌಲ್ಯ: ನಿಮ್ಮ ಮನೆಯಲ್ಲಿ ಅನೇಕ ದುಬಾರಿ ಪೀಠೋಪಕರಣಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಿದ್ದರೆ, ನಿಮ್ಮ ಪ್ರೀಮಿಯಂ ಸ್ವಲ್ಪ ಹೆಚ್ಚಾಗಬಹುದು. ಹೆಚ್ಚುವರಿ ಪ್ರೀಮಿಯಂನೊಂದಿಗೆ ಆಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳಿಗೆ ಕೂಡ ಕವರೇಜ್ ನೀಡಬಹುದು.

ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ 4 ಪ್ರಮುಖ ಕಾರಣಗಳು

ಅನುಕೂಲಕರ
ನಿಮ್ಮ ಬಳಿ ಯಾರಾದರೂ ಬಂದು ಪಾಲಿಸಿಯನ್ನು ವಿವರಿಸುತ್ತಾರೆ ಎಂದು ಕಾಯುವ ದಿನಗಳು ಮುಗಿದಿವೆ, ಈಗ ಖರೀದಿಯ ನಿರ್ಧಾರದ ಹೊಣೆ ನಿಮ್ಮದೇ. ವಿಶ್ವವಿಡೀ ಡಿಜಿಟಲ್‌ಮಯವಾಗುತ್ತಿರುವ ಈ ಕಾಲದಲ್ಲಿ ಜಗತ್ತಿನ ಯಾವುದೇ ಮೂಲೆಯಿಂದ ಹೋಮ್ ಇನ್ಶೂರೆನ್ಸ್ ಖರೀದಿಸುವ ಅವಕಾಶವಿದೆ. ಇದು ಸಾಕಷ್ಟು ಸಮಯ, ಶ್ರಮ ಹಾಗೂ ಶಕ್ತಿಯನ್ನು ಉಳಿಸಲು ಸಹಾಯ ಮಾಡುತ್ತದೆ.
ಸುರಕ್ಷಿತ ಪಾವತಿ ವಿಧಾನಗಳು
ನೀವು ನಗದು ಅಥವಾ ಚೆಕ್‌ನಲ್ಲಿ ಪ್ರೀಮಿಯಂ ಪಾವತಿಸಬೇಕಾಗಿಲ್ಲ! ಅನೇಕ ಸುರಕ್ಷಿತ ಪಾವತಿ ವಿಧಾನಗಳ ಮೂಲಕ ಆನ್ಲೈನ್‌ನಲ್ಲಿ ಪಾವತಿ ಮಾಡಲು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿ.
ತ್ವರಿತ ಪಾಲಿಸಿ ವಿತರಣೆ
ಪಾಲಿಸಿ ಡಾಕ್ಯುಮೆಂಟ್‌ಗಳನ್ನು ಪಡೆಯಲು ಇನ್ನು ಕೊರಿಯರ್‌ಗಾಗಿ ಕಾಯಬೇಕಾಗಿಲ್ಲ. ಕೆಲವೇ ಕ್ಷಣಗಳಲ್ಲಿ ನಿಮ್ಮ ಮೇಲ್ ಬಾಕ್ಸ್‌ನಲ್ಲಿ ಪಾಲಿಸಿ ಪಡೆಯುತ್ತೀರಿ.
ತ್ವರಿತವಾಗಿ ಪ್ರೀಮಿಯಂ ಲೆಕ್ಕ ಹಾಕುವುದು
ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು, ಆನ್ಲೈನ್‌ನಲ್ಲಿ ನಿಮ್ಮ ಬೆರಳಂಚಿನಲ್ಲಿ ಪ್ರೀಮಿಯಂಗಳನ್ನು ತ್ವರಿತವಾಗಿ ಲೆಕ್ಕ ಹಾಕಬಹುದು, ಸಂಖ್ಯೆಗಳನ್ನು ಸೇರಿಸಿ, ಕಳೆದು ನಿಮಗೆ ಬೇಕಾದ ಹಾಗೆ ಪ್ಲಾನ್‌ಗಳನ್ನು ರಚಿಸಿಕೊಳ್ಳಬಹುದು, ಕವರೇಜ್ ಬಗ್ಗೆ ತಿಳಿದುಕೊಳ್ಳಬಹುದು.

ಹೋಮ್ ಇನ್ಶೂರೆನ್ಸ್‌ಗಾಗಿ ಆ್ಯಡ್-ಆನ್ ಕವರ್‌ಗಳು - ಮಾನ್ಸೂನ್ ಕವರೇಜ್

ನಿಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್ ಕವರೇಜ್‌ ನೀಡದ ಕೆಲವು ವಿಷಯಗಳಿಗಾಗಿಯೇ ಆ್ಯಡ್ ಆನ್ ಕವರ್‌ಗಳನ್ನು ವಿನ್ಯಾಸಗೊಳಿಸಲಾಗಿದೆ. ನೀವು ಆಯ್ಕೆ ಮಾಡುವ ಹೋಮ್ ಇನ್ಶೂರೆನ್ಸ್ ಆ್ಯಡ್-ಆನ್ ನಿಮ್ಮ ಅಗತ್ಯಗಳು ಮತ್ತು ಸಂದರ್ಭಗಳಿಗೆ ತಕ್ಕಂತೆ ಇರಬೇಕು. ನೀವು ಹೆಚ್ಚುವರಿ ಪ್ರೀಮಿಯಂ ಪಾವತಿಸಬೇಕಾಗುತ್ತದೆ, ಆದರೆ ಅದು ಅಗತ್ಯ. ಹೋಮ್ ಕವರ್ ಖರೀದಿಸುವಾಗ ಈ ಹೋಮ್-ಇನ್ಶೂರೆನ್ಸ್ ಆ್ಯಡ್-ಆನ್‌ಗಳನ್ನು ಗಮನಿಸಿ.

1. ಪೋರ್ಟೆಬಲ್ ಎಲೆಕ್ಟ್ರಾನಿಕ್ ಎಕ್ವಿಪ್‌ಮೆಂಟ್ ಕವರ್: ನೀವು ದುಬಾರಿ ಗ್ಯಾಜೆಟ್‌ಗಳು ಅಥವಾ ಉಪಕರಣಗಳನ್ನು ಖರೀದಿಸುವ ಗ್ಯಾಜೆಟ್ ಫ್ರೀಕ್ ಆಗಿದ್ದೀರಾ? ಹಾಗಾದರೆ ನಿಮ್ಮ ಹೋಮ್ ಇನ್ಶೂರೆನ್ಸ್ ಪೋರ್ಟ್‌ಫೋಲಿಯೋದಲ್ಲಿ ಈ ಕವರೇಜ್‌ನ ಅಗತ್ಯವಿದೆ. ಈ ಆ್ಯಡ್-ಆನ್ ಮೂಲಕ ನೀವು ಪ್ರಯಾಣ ಮಾಡುವಾಗಲೂ ನಿಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಸುರಕ್ಷಿತವಾಗಿರಿಸಬಹುದು. ವಿವರವಾಗಿ ಹೇಳುವುದಾದರೆ, ಲ್ಯಾಪ್‌ಟಾಪ್, ಕ್ಯಾಮರಾ, ಸಂಗೀತ ಸಲಕರಣೆಗಳು, ಕ್ರೀಡಾ ಸಲಕರಣೆಗಳು ಮುಂತಾದ ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳಿಗೆ ಈ ಆ್ಯಡ್ ಆನ್ ಕವರ್ ಅಡಿಯಲ್ಲಿ ಕವರೇಜ್‌ ನೀಡಲಾಗುತ್ತದೆ.

2 ಜ್ಯುವೆಲ್ಲರಿ ಮತ್ತು ಮೌಲ್ಯಯುತ ವಸ್ತುಗಳ ಕವರ್: ನಿಮ್ಮ ಅಮೂಲ್ಯ ಆಭರಣ ಅಥವಾ ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇಡುತ್ತೀರಾ? ಹಾಗಾದರೆ ಇದು ಅಪಾಯ! ನಿಮ್ಮ ಮನೆ ಅಷ್ಟೇನೂ ಸುರಕ್ಷಿತವಲ್ಲ. ಕಳ್ಳತನ ಅಥವಾ ದರೋಡೆಯಿಂದ ನಿಮಗೆ ದೊಡ್ಡ ನಷ್ಟ ಉಂಟಾಗಬಹುದು. ಹೆದರಬೇಡಿ, ಏಕೆಂದರೆ ಜ್ಯುವೆಲ್ಲರಿ ಮತ್ತು ಮೌಲ್ಯಯುತ ವಸ್ತುಗಳ ಆ್ಯಡ್ ಆನ್ ಕವರ್ ನಿಮ್ಮ ಚಿಂತೆಗಳಿಗೆ ಉತ್ತರವಾಗಿದೆ.

3. ಪೆಡಲ್ ಸೈಕಲ್ ಕವರ್: ಸೈಕ್ಲಿಂಗ್ ಸವಾರಿ ಹೋಗಲು ಅಥವಾ ನಿಮ್ಮ ಸ್ಟ್ಯಾಟಿಕ್ ಎಕ್ಸರ್ಸೈಸ್ ಸೈಕಲ್‌ನಲ್ಲಿ ವ್ಯಾಯಾಮ ಮಾಡಲು ಬಯಸುತ್ತೀರಾ? ಹಾಗಾದರೆ, ಈ ಆ್ಯಡ್ ಆನ್ ಕವರ್ ಮೂಲಕ ನಿಮ್ಮ ಪ್ರೀತಿಯ ಪೆಡಲ್ ಸೈಕಲ್‌ಗೆ ಸಂಬಂಧಿಸಿದ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಚಿಂತೆ ಅಥವಾ ನಿಮ್ಮ ವಿಶ್ವಾಸಾರ್ಹ ಸ್ಟ್ಯಾಟಿಕ್ ಎಕ್ಸರ್ಸೈಸ್ ಸೈಕಲ್‌ಗೆ ಹಾನಿಯಾಗುವ ಚಿಂತೆ ಇಲ್ಲವಾಗಿಸಿ. ನೆಮ್ಮದಿಯಾಗಿ ಸೈಕಲ್ ಮಾಡಿ.

4. ಭಯೋತ್ಪಾದನೆಯ ಕವರ್:ಭಯೋತ್ಪಾದನೆ ವಿಶ್ವವ್ಯಾಪಿಯಾಗಿ ಆತಂಕ ಹುಟ್ಟಿಸುತ್ತಿದೆ. ಭಯೋತ್ಪಾದಕ ದಾಳಿಗಳಿಂದಾಗಿ ಅನೇಕ ಮನೆಗಳು ಧ್ವಂಸವಾಗಿವೆ. ಈ ದುರದೃಷ್ಟಕರ ಪರಿಸ್ಥಿತಿಯನ್ನು ಎದುರಿಸಿದವರ ನೋವಿನ ಅರಿವು ನಮಗಿದೆ. ಈ ಆ್ಯಡ್-ಆನ್ ಕವರ್‌ನಿಂದ ಅಂತಹ ಹಾನಿಗಳಿಂದಾಗುವ ನಷ್ಟವನ್ನು ಕಡಿಮೆ ಮಾಡಬಹುದು. ಭಯೋತ್ಪಾದಕ ಕೃತ್ಯ ಅಥವಾ ದಾಳಿಯಿಂದಾಗಿ ನಿಮ್ಮ ಮನೆ ಅಥವಾ ಮನೆಯ ವಸ್ತುಗಳು ನಾಶವಾದರೆ ಅದಕ್ಕೆ ಕವರೇಜ್ ಒದಗಿಸಬಹುದು.

ಮಳೆಗಾಲದಲ್ಲಿ ನಿಮ್ಮ ಮನೆಯನ್ನು ಸುರಕ್ಷಿತವಾಗಿರಿಸುವುದು ಹೇಗೆ?

ಪ್ರೊಆ್ಯಕ್ಟಿವ್ ಚೆಕ್

ಮೇಲ್ಛಾವಣಿ ಹಾಗೂ ತಾರಸಿಗಳನ್ನು ಆಗಾಗ ಪರೀಕ್ಷಿಸಿ ಮಳೆಗಾಲ ಆರಂಭವಾಗುವ ಮುನ್ನ ಬಿರುಕುಗಳನ್ನು ತಕ್ಷಣ ದುರಸ್ತಿ ಮಾಡಿ.

ವಾಟರ್‌ಪ್ರೂಫಿಂಗ್ ಮಾಡಿಸುವುದು ಸೂಕ್ತ

ನಿಮ್ಮ ಮನೆ ಹಾಗೂ ನೆಮ್ಮದಿಯನ್ನು ಕಾಪಾಡಲು ತಾರಸಿಗಳ ವಾಟರ್‌ಪ್ರೂಫಿಂಗ್ ಬಹಳ ಮುಖ್ಯ.

ಚೆನ್ನಾಗಿ ಪಾಲಿಶ್ ಮಾಡಿದ ನೆಲ

ಮಳೆಗಾಲದಲ್ಲಿ ಮರದ ಬಾಗಿಲು ಹಾಗೂ ನೆಲ ಹಿಗ್ಗಬಹುದು. ಆದ್ದರಿಂದ ಅವುಗಳನ್ನು ಚೆನ್ನಾಗಿ ಪಾಲಿಶ್ ಮಾಡಿಸಿ ಹಾಗೂ ಶುಷ್ಕವಾಗಿರಿಸಿ.

ಪೇಂಟ್ ಮಾಡಿಸಿ

5. ಮಳೆಗಾಲದಲ್ಲಿ ಕಬ್ಬಿಣದ ಗ್ರಿಲ್‌ಗಳು ತುಕ್ಕು ಹಿಡಿಯುತ್ತವೆ. ಮಳೆಗಾಲ ಆರಂಭವಾಗುವ ಮೊದಲೇ ಇವುಗಳಿಗೆ ಪೇಂಟ್ ಮಾಡಿಸಿ ಆಗಾಗ ಸ್ವಚ್ಛಗೊಳಿಸುತ್ತಿರಿ.

ತಾಜಾತನವನ್ನು ಹಾಗೇ ಕಾಪಾಡಿಕೊಳ್ಳಿ

4. ಮನೆಯಲ್ಲಿ ತೇವಾಂಶ ಹೆಚ್ಚಾದರೆ ದುರ್ವಾಸನೆ ಉಂಟಾಗುತ್ತದೆ. ಅಷ್ಟೇ ಅಲ್ಲ ಬಟ್ಟೆ ಹಾಗೂ ಚರ್ಮದ ಉತ್ಪನ್ನಗಳು ಸಹ ಹಾಳಾಗುತ್ತವೆ. ಕರ್ಪೂರ, ಬೇವಿನ ಎಲೆಗಳು ಅಥವಾ ಸುಲಭವಾಗಿ ದೊರೆಯುವ ಡಿಹ್ಯೂಮಿಡಿಫೈಯರ್‌ಗಳನ್ನು ಇರಿಸಿ. ಇದು ನಿಮ್ಮ ಬಟ್ಟೆಗಳನ್ನು ರಕ್ಷಿಸಿ ಬ್ಯಾಗ್‌ ಹಾಗೂ ಚಪ್ಪಲಿಗಳು ಕಿತ್ತುಬರದಂತೆ ತಡೆಯುತ್ತದೆ. ಮನೆಯಲ್ಲಿ ಡಿಹ್ಯೂಮಿಡಿಫೈಯರ್ ಹೆಚ್ಚುವರಿ ತೇವಾಂಶವನ್ನು ಹೀರಿ ಮನೆಯನ್ನು ತಾಜಾವಾಗಿ ಇರಿಸುತ್ತದೆ.

ಅವಾರ್ಡ್ಸ್ ಮತ್ತು ಗುರುತಿಸುವಿಕೆ
x