ಪೋಷಕರಿಗೆ ವಯಸ್ಸಾದಂತೆ ಅವರು ವಿವಿಧ ಕಾಯಿಲೆಗಳು, ಗಾಯಗಳು ಮತ್ತು ಸೋಂಕುಗಳಿಗೆ ಈಡಾಗುವ ಸಾಧ್ಯತೆ ಹೆಚ್ಚಿದ್ದು, ಅನಿರೀಕ್ಷಿತ ಆಸ್ಪತ್ರೆ ದಾಖಲಾತಿಗಳು ಅಥವಾ ಯೋಜಿತ ವೈದ್ಯಕೀಯ ಚಿಕಿತ್ಸೆಗಳ ಖರ್ಚಿಗೆ ಕಾರಣವಾಗಬಹುದು. ಹೆಚ್ಚುತ್ತಿರುವ ಆರೋಗ್ಯ ವೆಚ್ಚಗಳು ಅಂತಹ ಸಮಯದಲ್ಲಿ ನಿಮಗೆ ಮತ್ತು ನಿಮ್ಮ ಪೋಷಕರಿಗೆ ಗಮನಾರ್ಹ ಹಣಕಾಸಿನ ಒತ್ತಡವನ್ನು ಉಂಟುಮಾಡಬಹುದು. ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಹೊಂದಿರುವುದರಿಂದ ಈ ಹೊರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪೋಷಕರಿಗಾಗಿ ವಿನ್ಯಾಸಗೊಳಿಸಲಾದ ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳು ಆಸ್ಪತ್ರೆ ದಾಖಲಾತಿ ವೆಚ್ಚಗಳು, ಡೇಕೇರ್ ಚಿಕಿತ್ಸೆ, ಡಯಾಗ್ನಸ್ಟಿಕ್ ಟೆಸ್ಟ್‌ಗಳು ಮತ್ತು ಆಂಬ್ಯುಲೆನ್ಸ್ ಶುಲ್ಕಗಳನ್ನು ಒಳಗೊಂಡಂತೆ ಹಲವಾರು ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತವೆ ಮತ್ತು ಅವುಗಳು ಸಾಮಾನ್ಯವಾಗಿ ಇತರ ಪ್ರಯೋಜನಗಳ ಜೊತೆಗೆ ನಗದುರಹಿತ ಆಸ್ಪತ್ರೆ ದಾಖಲಾತಿಯನ್ನು ಒದಗಿಸುತ್ತವೆ. ಎಚ್‌ಡಿಎಫ್‌ಸಿ ಎರ್ಗೋ ಪೋಷಕರಿಗೆ ರೂಪಿಸಲಾದ ವಿವಿಧ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಒದಗಿಸುವ ಮೂಲಕ, ನಿಮ್ಮ ಮತ್ತು ಅವರ ಮನಸ್ಸಿನ ಶಾಂತಿಯನ್ನು ಖಚಿತಪಡಿಸುತ್ತದೆ.
ಹೆಚ್ಚುತ್ತಿರುವ ವೈದ್ಯಕೀಯ ಅಗತ್ಯಗಳು ಹಾಗೂ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ಪೋಷಕರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ವಿಳಾಸ
C-1/15A ಯಮುನಾ ವಿಹಾರ್, ಪಿನ್‌ಕೋಡ್-110053
ವೃದ್ಧಾವಸ್ಥೆಯಲ್ಲಿ, ಆಗಾಗ ಆಸ್ಪತ್ರೆಗೆ ದಾಖಲಾಗಬೇಕಾದ ಅಗತ್ಯತೆ ಬರಬಹುದು ಮತ್ತು ನರ್ಸಿಂಗ್ ಶುಲ್ಕಗಳು, ICU ಶುಲ್ಕಗಳು ಮತ್ತು ರೂಮ್ ವೆಚ್ಚಗಳಂತಹ ಹಲವಾರು ವಿಭಿನ್ನ ವೆಚ್ಚಗಳಿಗೆ ಕಾರಣವಾಗಬಹುದು. ಆಸ್ಪತ್ರೆಗೆ ದಾಖಲಾತಿಯ ಎಲ್ಲಾ ವೆಚ್ಚಗಳನ್ನು ಈ ಪಾಲಿಸಿ ಕವರ್ ಮಾಡುತ್ತದೆ.
ಪೋಷಕರ ಮಾನಸಿಕ ಆರೋಗ್ಯ ರಕ್ಷಣೆಯು ದೈಹಿಕ ಅನಾರೋಗ್ಯ ಅಥವಾ ಗಾಯದಿಂದಾಗಿ ಆಸ್ಪತ್ರೆಗೆ ದಾಖಲಾಗುವಷ್ಟೇ ಪ್ರಮುಖವಾಗಿದೆ ಎಂದು ನಾವು ನಂಬುತ್ತೇವೆ; ಆದ್ದರಿಂದ, ಮಾನಸಿಕ ಅನಾರೋಗ್ಯದ ಕವರೇಜ್‌ಗಳಿಗೆ ಚಿಕಿತ್ಸೆ ನೀಡಲು ಉಂಟಾದ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ನಾವು ಕವರ್ ಮಾಡುತ್ತೇವೆ.
ಕೆಲವೊಮ್ಮೆ ಚಿಕಿತ್ಸೆಯ ವಿಧಾನವನ್ನು ನಿರ್ಧರಿಸಲು ಹಲವಾರು ಡಯಾಗ್ನಸ್ಟಿಕ್ ಟೆಸ್ಟ್‌ಗಳನ್ನು ಮಾಡಬೇಕಾಗುತ್ತದೆ, ಈ ವೆಚ್ಚಗಳು ಕುಟುಂಬಕ್ಕೆ ಹಣಕಾಸಿನ ಒತ್ತಡ ಉಂಟು ಮಾಡಬಹುದು. ಆ ಒತ್ತಡವನ್ನು ಕಡಿಮೆ ಮಾಡಲು, ಆಸ್ಪತ್ರೆಗೆ ದಾಖಲಾಗುವ ಮುಂಚಿತ 60 ದಿನಗಳ ಮತ್ತು ಆಸ್ಪತ್ರೆ ದಾಖಲಾತಿಯ 180 ದಿನಗಳ ನಂತರದ ಎಲ್ಲಾ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುತ್ತದೆ.
ವೈದ್ಯಕೀಯ ತಂತ್ರಜ್ಞಾನದ ಪ್ರಗತಿಯಿಂದಾಗಿ ಕೆಲವು ಚಿಕಿತ್ಸೆಗಳಿಗೆ ಬೇಕಾಗುವ ಸಮಯ ಸಾಕಷ್ಟು ಕಡಿಮೆಯಾಗಿದೆ. ಈ ಪಾಲಿಸಿಯು 24 ಗಂಟೆಗಳಿಗಿಂತ ಕಡಿಮೆ ಸಮಯದ ವೈದ್ಯಕೀಯ ಚಿಕಿತ್ಸೆಯನ್ನು ಕವರ್ ಮಾಡುತ್ತದೆ.
ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯವಿಲ್ಲದ ಸಂದರ್ಭದಲ್ಲಿ, ವೈದ್ಯರು ಮನೆಯಲ್ಲಿ ಚಿಕಿತ್ಸೆಯನ್ನು ಅನುಮೋದಿಸಿದರೆ, ಈ ಪ್ಲಾನ್ ಅಡಿಯಲ್ಲಿ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ. ಆದ್ದರಿಂದ, ನಿಮ್ಮ ಮನೆಯೊಳಗೆ ಆರಾಮದಾಯಕವಾಗಿ ನೀವು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯುತ್ತೀರಿ.
ಈ ಪ್ರಯೋಜನವು ಮ್ಯಾಜಿಕಲ್ ಬ್ಯಾಕಪ್‌ನಂತೆ ಕಾರ್ಯನಿರ್ವಹಿಸುತ್ತಾ, ನೀವು ಮುಂದಿನ ಬಾರಿ ಆಸ್ಪತ್ರೆಗೆ ದಾಖಲಾದಾಗ ನಿಮ್ಮ ಮುಗಿದ ಹೆಲ್ತ್ ಕವರ್ ರಿಚಾರ್ಜ್ ಮಾಡುತ್ತದೆ.. ಇದು ಅಗತ್ಯವಿರುವ ಸಮಯದಲ್ಲಿ ತಡೆರಹಿತ ವೈದ್ಯಕೀಯ ಕವರೇಜನ್ನು ಖಚಿತಪಡಿಸುತ್ತದೆ.
ನಿಮಗೆ ಸೂಕ್ತವಾದ ಅಂಗ-ದಾನಿ ಸಿಕ್ಕರೆ, ವೆಚ್ಚಗಳ ಬಗ್ಗೆ ಚಿಂತಿಸದೆ ಮುಂದುವರೆಯಿರಿ. ಏಕೆಂದರೆ, ಈ ಪಾಲಿಸಿಯು ಅಂಗ-ದಾನಿಯ ವೆಚ್ಚಗಳನ್ನು ಕವರ್ ಮಾಡುತ್ತದೆ.
10 ದಿನಗಳನ್ನು ಮೀರಿದ ವಿಸ್ತರಿಸುವ ಆಸ್ಪತ್ರೆ ದಾಖಲಾತಿಗಾಗಿ, ಆಸ್ಪತ್ರೆ ದಾಖಲಾತಿಯಿಂದಾಗಿ ಮನೆಯಲ್ಲಿ ಸಂಭವಿಸಿರಬಹುದಾದ ಇತರ ಹಣಕಾಸಿನ ನಷ್ಟಗಳಿಗೆ ಈ ಪ್ಲಾನ್ ಪರಿಹಾರ ನೀಡುತ್ತದೆ. ಆಸ್ಪತ್ರೆಗೆ ದಾಖಲಾಗುವುದನ್ನು ಹೊರತುಪಡಿಸಿ ಬೇರೆ ವೆಚ್ಚಗಳನ್ನು ನೋಡಿಕೊಳ್ಳಲು ಇದು ಸಹಾಯ ಮಾಡುತ್ತದೆ.
ನಿಮ್ಮ ಪೋಷಕರಿಗೆ ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿಯಂತಹ ಪರ್ಯಾಯ ಚಿಕಿತ್ಸೆಗಳನ್ನು ನೀವು ಆಯ್ಕೆ ಮಾಡಲು ಬಯಸಿದರೆ, ನಾವು ಆಯುಷ್ ಚಿಕಿತ್ಸೆಯ ವೆಚ್ಚಗಳನ್ನು ಕೂಡ ಕವರ್ ಮಾಡುತ್ತೇವೆ.
ನಿಮ್ಮ ಪೋಷಕರು ತಮ್ಮ ಆರೋಗ್ಯ ಗುರಿಗಳೊಂದಿಗೆ ಟ್ರ್ಯಾಕ್‌ನಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಲು, ನಮ್ಮಲ್ಲಿ ನಿಮ್ಮ ಪಾಲಿಸಿಯನ್ನು ನವೀಕರಿಸಿದ 60 ದಿನಗಳ ಒಳಗೆ ನಾವು ಉಚಿತ ಆರೋಗ್ಯ ತಪಾಸಣೆಯನ್ನು ಒದಗಿಸುತ್ತೇವೆ.
ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನಿಂದ ಒಮ್ಮೆ ನೀವು ನಿಮ್ಮನ್ನು ಸುರಕ್ಷಿತವಾಗಿಸಿಕೊಂಡಮೇಲೆ, ಹಿಂದೆ ನೋಡುವ ಪ್ರಶ್ನೆಯೇ ಇಲ್ಲಾ.. ನಮ್ಮ ಹೆಲ್ತ್ ಪ್ಲಾನ್ ಬ್ರೇಕ್-ಫ್ರೀ ನವೀಕರಣಗಳಲ್ಲಿ ಜೀವಮಾನದ ನಿಮ್ಮ ವೈದ್ಯಕೀಯ ವೆಚ್ಚಗಳನ್ನು ಸುರಕ್ಷಿತಗೊಳಿಸುವುದನ್ನು ಮುಂದುವರೆಸುತ್ತದೆ.
ಮೊದಲ ವರ್ಷದಲ್ಲಿ ಯಾವುದೇ ಕ್ಲೈಮ್ ಇಲ್ಲದಿದ್ದರೆ, ವಿಮಾ ಮೊತ್ತವು ಮುಂದಿನ ಪಾಲಿಸಿ ವರ್ಷದಲ್ಲಿ 50% ರಷ್ಟು ಹೆಚ್ಚಾಗುತ್ತದೆ. ಅಂದರೆ, ₹ 5 ಲಕ್ಷದ ಬದಲಾಗಿ, ಎರಡನೇ ವರ್ಷಕ್ಕೆ ನಿಮ್ಮ ವಿಮಾ ಮೊತ್ತವು ₹ 7.5 ಲಕ್ಷ ಆಗಿರುತ್ತದೆ.
ನಮ್ಮ ಕೆಲವು ಹೆಲ್ತ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಲಾದ ಕವರೇಜ್ ಲಭ್ಯವಿಲ್ಲದಿರಬಹುದು. ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಪಾಲಿಸಿ ವಾಕ್ಯಗಳು, ಬ್ರೋಶರ್ ಮತ್ತು ವಿವರಣೆ ಓದಿ.
ರೋಚಕತೆಯ ಅನುಭವ ಪಡೆಯಲು ಒಂದಷ್ಟು ಜನರು ಸಾಹಸ ಕ್ರೀಡೆಗಳನ್ನು ಆಡಲು ಬಯಸುತ್ತಾರೆ. ಆದಾಗ್ಯೂ, ಸಾಹಸ ಕ್ರೀಡೆಯಿಂದ ಉಂಟಾಗುವ ಹಾನಿಯನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ.
ಸ್ವಯಂಕೃತ ಹಾನಿಯಿಂದ ಇಡೀ ಕುಟುಂಬಕ್ಕೆ ದುಃಖ ಆಗಬಹುದು, ಆದರೆ ಅದು ಪಾಲಿಸಿ ಅಡಿಯಲ್ಲಿ ಕವರ್ ಆಗುವುದಿಲ್ಲ.
ಹಲವಾರು ಕಾರಣಗಳಿಂದ ಯುದ್ಧ ಶುರುವಾಗಬಹುದು. ಅದು ಯಾವತ್ತಿಗೂ ಒಬ್ಬನೇ ವ್ಯಕ್ತಿಯ ನಿರ್ಧಾರ ಆಗಿರುವುದಿಲ್ಲ. ಯುದ್ಧದಿಂದ ಉಂಟಾದ ದೈಹಿಕ ಹಾನಿಯನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ.
ನೀವು ರಕ್ಷಣೆ (ಸೇನೆ/ನೌಕಾಪಡೆ/ವಾಯುಪಡೆ) ಕಾರ್ಯಾಚರಣೆಗಳಲ್ಲಿ ಭಾಗವಹಿಸುವಾಗ ಆಗುವ ಆಕಸ್ಮಿಕ ಹಾನಿಗಳನ್ನು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರ್ ಮಾಡುವುದಿಲ್ಲ.
ಗುಪ್ತಾಂಗದ ಮತ್ತು ಲೈಂಗಿಕ ರೋಗಗಳ ಗಂಭೀರತೆ ನಮಗೆ ಅರ್ಥ ಆಗುತ್ತದೆ, ಆದರೆ ಅಂತಹ ರೋಗಗಳ ಚಿಕಿತ್ಸೆ ಈ ಪಾಲಿಸಿ ಅಡಿ ಕವರ್ ಆಗುವುದಿಲ್ಲ.
ಬೊಜ್ಜನ್ನು ಕಡಿಮೆಗೊಳಿಸುವ ಚಿಕಿತ್ಸೆ ಕೆಲವರಿಗೆ ಅನಿವಾರ್ಯ ಆಗಿರಬಹುದು. ಆದರೆ, ಬೊಜ್ಜಿನ ಚಿಕಿತ್ಸೆ ಹಾಗೂ ಕಾಸ್ಮೆಟಿಕ್ ಶಸ್ತ್ರಚಿಕಿತ್ಸೆಯನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ.
ನಿಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಮಾಡಿಸುವುದು ಆಸ್ಪತ್ರೆಗೆ ದಾಖಲಾಗುವ ಸಮಯದಲ್ಲಿ ಅಥವಾ ತುರ್ತುಸ್ಥಿತಿಯಲ್ಲಿ ನಿಮ್ಮನ್ನು ಹಣಕಾಸಿನ ಒತ್ತಡದಿಂದ ಹೇಗೆ ಕಾಪಾಡುತ್ತದೆ ಎಂಬುದು ಇಲ್ಲಿದೆ
ಔಷಧಿಯಲ್ಲಿ ತಾಂತ್ರಿಕ ಪ್ರಗತಿಯೊಂದಿಗೆ, ವೈದ್ಯಕೀಯ ಚಿಕಿತ್ಸೆ ಮತ್ತು ಸೌಲಭ್ಯಗಳ ವೆಚ್ಚವೂ ಹೆಚ್ಚಾಗಿದೆ. ಅನಿರೀಕ್ಷಿತ ವೈದ್ಯಕೀಯ ತುರ್ತುಸ್ಥಿತಿಯಲ್ಲಿ ನಿಮ್ಮ ಉಳಿತಾಯದ ಮೇಲೆ ದೊಡ್ಡ ಪರಿಣಾಮ ಬೀರಲು ಅಷ್ಟು ಸಾಕು. ಅಂತಹ ಪರಿಸ್ಥಿತಿಗಳನ್ನು ತಪ್ಪಿಸಲು, ನಿಮ್ಮ ಪೋಷಕರಿಗೆ ಆರಂಭಿಕ ವಯಸ್ಸಿನಲ್ಲಿ ವ್ಯಾಪಕ ಶ್ರೇಣಿಯ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ನಲ್ಲಿ ಹೂಡಿಕೆ ಮಾಡಲು ಸಲಹೆ ನೀಡಲಾಗುತ್ತದೆ.
ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರ್‌ನಲ್ಲಿ ಆಸ್ಪತ್ರೆಗೆ ದಾಖಲಾಗುವ ವೆಚ್ಚಕ್ಕಿಂತ ಹೆಚ್ಚಿನದನ್ನು ಒದಗಿಸುತ್ತದೆ. ಆಂಬ್ಯುಲೆನ್ಸ್ ಕವರೇಜ್, ಡೇ-ಕೇರ್ ಸರ್ಜರಿ ಮತ್ತು ನಿಯತಕಾಲಿಕ ಹೆಲ್ತ್ ಚೆಕ್-ಅಪ್ ಕವರೇಜ್ ಮುಂತಾದ ಆಸ್ಪತ್ರೆಗೆ ದಾಖಲಾಗುವ ಮೊದಲು ಮತ್ತು ನಂತರದ ವೆಚ್ಚಗಳನ್ನು ಕೂಡ ಇದು ಕವರ್ ಮಾಡುತ್ತದೆ. ಕೆಲವು ಸಮಗ್ರ ಹೆಲ್ತ್ ಪ್ಲಾನ್‌ಗಳು ಪ್ಲಾನ್‌ನ ಭಾಗವಾಗಿ ಡಯಾಗ್ನಸ್ಟಿಕ್ ಟೆಸ್ಟ್‌ಗಳು ಮತ್ತು ಔಷಧಿಗಳ ವೆಚ್ಚಗಳನ್ನು ಕೂಡ ಕವರ್ ಮಾಡುತ್ತವೆ.
ಜೀವನಶೈಲಿಯ ಬದಲಾವಣೆಗಳು ಒತ್ತಡವನ್ನು ಹೆಚ್ಚಿಸಿವೆ ಮತ್ತು ಆಧುನಿಕ ಜೀವನದಿಂದಾಗಿ ಒತ್ತಡವನ್ನು ಉಂಟುಮಾಡುತ್ತಿವೆ. ಇದು ಅನಾರೋಗ್ಯಗಳ ಸಾಧ್ಯತೆಯನ್ನು ಹೆಚ್ಚಿಸಿದೆ, ಇದು ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಇದು ವಯಸ್ಸು ಹೆಚ್ಚಾದಂತೆ ಉಂಟಾಗುತ್ತದೆ. ಆದ್ದರಿಂದ, ನಮ್ಮ ಪ್ರೀತಿಪಾತ್ರರನ್ನು ರಕ್ಷಿಸಲು ಆರಂಭಿಕ ಹಂತದಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನಿನಲ್ಲಿ ಹೂಡಿಕೆ ಮಾಡುವುದು ಮುಖ್ಯವಾಗಿದೆ.
ಪೋಷಕರ ಪಾಲಿಸಿಯ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80D ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ನಿಮಗೆ ಮತ್ತು 60 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿಮ್ಮ ಪೋಷಕರಿಗೆ ಪಾವತಿಸಿದ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳ ಮೇಲೆ ₹50,000 ಗಳಷ್ಟು ತೆರಿಗೆ ಪ್ರಯೋಜನದ ಉಳಿತಾಯ ಮಾಡಿ. ನಿಮ್ಮ ಪೋಷಕರು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಮಿತಿಯು ₹ 75,000 ವರೆಗೆ ವಿಸ್ತರಿಸುತ್ತದೆ. ಆದಾಗ್ಯೂ, ಅನ್ವಯವಾಗುವ ತೆರಿಗೆ ಮಿತಿಗಳ ಪ್ರಕಾರ ಇದು ಬದಲಾಗಬಹುದು.
ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳ ಅಡಿಯಲ್ಲಿ ಕವರೇಜ್ ನೀವು ಖರೀದಿಸುವ ಪಾಲಿಸಿಯ ವಿಧವನ್ನು ಅವಲಂಬಿಸಿರುತ್ತದೆ. ಸಾಮಾನ್ಯವಾಗಿ, ನೀವು ಈ ಕೆಳಗಿನವುಗಳಿಗೆ ಕವರೇಜ್ ಪಡೆಯುತ್ತೀರಿ –
ಹೆಚ್ಚಿನ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳು ಮೊದಲೇ ಅಸ್ತಿತ್ವದಲ್ಲಿರುವ ವೈದ್ಯಕೀಯ ಪರಿಸ್ಥಿತಿಗಳಿಗೆ ಕಡ್ಡಾಯ ಕಾಯುವ ಅವಧಿಯನ್ನು ಹೊಂದಿವೆ. ನಿಮ್ಮ ಪೋಷಕರು ಹಿರಿಯ ನಾಗರಿಕರಾಗಿದ್ದರೆ, ಕಾಯುವ ಅವಧಿಯು ಸುಮಾರು 2-3 ವರ್ಷಗಳಾಗಿರಬಹುದು, ಆ ಸಮಯದಲ್ಲಿ ಮುಂಚಿತ-ಅಸ್ತಿತ್ವದಲ್ಲಿರುವ ವೈದ್ಯಕೀಯ ಸ್ಥಿತಿಗೆ ಲಿಂಕ್ ಆದ ಯಾವುದೇ ಪ್ರಕ್ರಿಯೆಯನ್ನು ಕವರ್ ಮಾಡಲಾಗುವುದಿಲ್ಲ. ಆದ್ದರಿಂದ, ನಿಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ, ಇದನ್ನು ಗಮನದಲ್ಲಿರಿಸುವುದು ಮುಖ್ಯವಾಗಿದೆ.
ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗೆ ಸಾಮಾನ್ಯವಾಗಿ ಗರಿಷ್ಠ ಅಥವಾ ನಿರ್ಗಮನ ವಯಸ್ಸಿನ ಮಿತಿ ಇರುತ್ತದೆ. ನಿರ್ಗಮನ ಪಾಲಿಸಿಗಳು ಸಾಮಾನ್ಯವಾಗಿ ಸುಮಾರು 75-80 ವರ್ಷಗಳಾಗಿರುತ್ತವೆ, ಇದರ ನಂತರ ಪಾಲಿಸಿಯ ನವೀಕರಣಕ್ಕೆ ಅನುಮತಿಯಿಲ್ಲ. ಆದ್ದರಿಂದ, ನಿಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸುವಾಗ ಪಾಲಿಸಿಯ ವಯಸ್ಸಿನ ಮಿತಿಯನ್ನು ಯಾವಾಗಲೂ ನೋಡಿ.
ನಿರ್ದಿಷ್ಟ ಅವಧಿಗೆ ಯಾವುದೇ ಕ್ಲೈಮ್‌ಗಳಿಲ್ಲದಿದ್ದರೆ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ನೋ ಕ್ಲೈಮ್ ಬೋನಸ್ (NCB) ಷರತ್ತು ಪಾವತಿಸಬೇಕಾದ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡುತ್ತದೆ. ನಿರ್ದಿಷ್ಟ ಅವಧಿಯಲ್ಲಿ ಯಾವುದೇ ಕ್ಲೈಮ್‌ಗಳಿಲ್ಲದಿದ್ದರೆ ಪಾವತಿಸಬೇಕಾದ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡುವ ಬದಲು ಹಲವಾರು ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರು ವಿಮಾ ಮೊತ್ತದ ಹೆಚ್ಚಳಕ್ಕೆ ಅನುಮತಿ ನೀಡುತ್ತಾರೆ.
ನಿಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವಾಗ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಪಟ್ಟಿ:
ಹೆಚ್ಚಿನ ಇನ್ಶೂರೆನ್ಸ್ ಕಂಪನಿಗಳು ಪ್ರವೇಶದ ವಯಸ್ಸನ್ನು ಹೊಂದಿರುವುದರಿಂದ, ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಸಮಯದಲ್ಲಿ ಇದು ಅಗತ್ಯವಿರುವ ಪ್ರಮುಖ ಡಾಕ್ಯುಮೆಂಟ್ ಆಗಿದೆ. ಈ ಕೆಳಗಿನ ಯಾವುದೇ ಡಾಕ್ಯುಮೆಂಟ್‌ಗಳ ಪ್ರತಿಯನ್ನು ನೀವು ನೀಡಬಹುದು:
• PAN ಕಾರ್ಡ್
• ವೋಟರ್ ಐಡಿ ಕಾರ್ಡ್
• ಆಧಾರ್ ಕಾರ್ಡ್
• ಪಾಸ್‌ಪೋರ್ಟ್
• ಡ್ರೈವಿಂಗ್ ಲೈಸೆನ್ಸ್
• ಜನನ ಪ್ರಮಾಣ ಪತ್ರ
ಸಂವಹನ ಉದ್ದೇಶಗಳಿಗಾಗಿ, ಹೆಲ್ತ್ ಇನ್ಶೂರೆನ್ಸ್ ಪೂರೈಕೆದಾರರು ಪಾಲಿಸಿದಾರರ ಅಂಚೆ ವಿಳಾಸವನ್ನು ತಿಳಿದುಕೊಳ್ಳಬೇಕು. ಪಾಲಿಸಿದಾರರು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬಹುದು:
• ಡ್ರೈವಿಂಗ್ ಲೈಸೆನ್ಸ್
• ರೇಶನ್ ಕಾರ್ಡ್
• PAN ಕಾರ್ಡ್
• ಆಧಾರ್ ಕಾರ್ಡ್
• ಫೋನ್ ಬಿಲ್, ವಿದ್ಯುತ್ ಬಿಲ್ ಮುಂತಾದ ಯುಟಿಲಿಟಿ ಬಿಲ್‌ಗಳು.
• ಅನ್ವಯವಾದರೆ ಬಾಡಿಗೆ ಅಗ್ರೀಮೆಂಟ್
ಗುರುತಿನ ಪುರಾವೆಗಳು ಪಾಲಿಸಿದಾರರಿಗೆ ಪ್ರಸ್ತಾಪಿಸಲಾದ ಸೇರ್ಪಡೆಯ ವಿಧವನ್ನು ಪ್ರತ್ಯೇಕಿಸಲು ಇನ್ಶೂರೆನ್ಸ್ ಕಂಪನಿಗೆ ಸಹಾಯ ಮಾಡುತ್ತವೆ. ಪಾಲಿಸಿದಾರರು ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬಹುದು:
• ಪಾಸ್‌ಪೋರ್ಟ್
• ವೋಟರ್ ಐಡಿ ಕಾರ್ಡ್
• ಡ್ರೈವಿಂಗ್ ಲೈಸೆನ್ಸ್
• ಆಧಾರ್ ಕಾರ್ಡ್
• ವೈದ್ಯಕೀಯ ವರದಿಗಳು (ಇನ್ಶೂರೆನ್ಸ್ ಕಂಪನಿಯಿಂದ ಕೇಳಲಾದ ಸಂದರ್ಭದಲ್ಲಿ)
• ಪಾಸ್‌ಪೋರ್ಟ್ ಗಾತ್ರದ ಫೋಟೋ
• ಸರಿಯಾಗಿ ಭರ್ತಿ ಮಾಡಲಾದ ಮತ್ತು ಸಹಿ ಮಾಡಲಾದ ಪ್ರಪೋಸಲ್ ಫಾರ್ಮ್
ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಏಕೈಕ ಉದ್ದೇಶವೆಂದರೆ, ವೈದ್ಯಕೀಯ ತುರ್ತುಸ್ಥಿತಿಯ ಸಮಯದಲ್ಲಿ ಹಣಕಾಸಿನ ನೆರವು ಪಡೆಯುವುದಾಗಿದೆ. ಆದ್ದರಿಂದ, ನಗದುರಹಿತ ಕ್ಲೈಮ್‌ಗಳು ಮತ್ತು ವೆಚ್ಚ ತುಂಬಿಕೊಡುವ ಕ್ಲೈಮ್ ಕೋರಿಕೆಗಳಿಗೆ ಹೆಲ್ತ್ ಇನ್ಶೂರೆನ್ಸ್ ಕ್ಲೈಮ್ ಪ್ರಕ್ರಿಯೆಯು ಹೇಗೆ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಈ ಕೆಳಗಿನ ಹಂತಗಳನ್ನು ಓದುವುದು ಮುಖ್ಯವಾಗಿದೆ.
ನಗದುರಹಿತ ಅನುಮೋದನೆಗಾಗಿ ನೆಟ್ವರ್ಕ್ ಆಸ್ಪತ್ರೆಯಲ್ಲಿ ಪೂರ್ವ ದೃಢೀಕೃತ ಫಾರ್ಮ್ ಭರ್ತಿ ಮಾಡಿ
ಆಸ್ಪತ್ರೆಯಿಂದ ನಮಗೆ ಮಾಹಿತಿ ಬಂದ ನಂತರ, ನಾವು ನಿಮಗೆ ಸ್ಟೇಟಸ್ ಅಪ್ಡೇಟ್ ಕಳುಹಿಸುತ್ತೇವೆ
ಪೂರ್ವ ದೃಢೀಕೃತ ಅನುಮೋದನೆಯ ಆಧಾರದಲ್ಲಿ ಆಸ್ಪತ್ರೆಗೆ ದಾಖಲಾತಿ ಮಾಡಬಹುದು
ಡಿಸ್ಚಾರ್ಜ್ ಸಮಯದಲ್ಲಿ, ನಾವು ನೇರವಾಗಿ ಆಸ್ಪತ್ರೆಯೊಂದಿಗೆ ಕ್ಲೈಮ್ ಸೆಟಲ್ಮೆಂಟ್ ಮಾಡುತ್ತೇವೆ
ನೀವು ಆರಂಭದ ಬಿಲ್‌ಗಳನ್ನು ಪಾವತಿಸಿ, ಮೂಲ ರಸೀತಿಗಳನ್ನು ನಿಮ್ಮ ಬಳಿಯಲ್ಲೇ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ, ನಮಗೆ ನಿಮ್ಮ ಎಲ್ಲಾ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಕಳುಹಿಸಿಕೊಡಿ
ನಾವು ನಿಮ್ಮ ಕ್ಲೈಮ್ ಸಂಬಂಧಿತ ರಸೀತಿಗಳನ್ನು ಮತ್ತು ಚಿಕಿತ್ಸೆಯ ಡಾಕ್ಯುಮೆಂಟ್‌ಗಳನ್ನು ಪರಿಶೀಲನೆ ಮಾಡುತ್ತೇವೆ
ನಾವು ನಿಮ್ಮ ಬ್ಯಾಂಕ್ ಅಕೌಂಟಿಗೆ ಅನುಮೋದಿತ ಕ್ಲೈಮ್ ಮೊತ್ತವನ್ನು ಕಳುಹಿಸುತ್ತೇವೆ.
ಇತ್ತೀಚಿನ ಆದಾಯ ತೆರಿಗೆ ಕಾನೂನುಗಳ ಪ್ರಕಾರ, ಬಹು ವರ್ಷಗಳ ಪ್ಲಾನ್‍ಗೆ ಇಡಿಯಾಗಿ ಪಾವತಿಸಿದ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವು ಸೆಕ್ಷನ್ 80D ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿರುತ್ತದೆ. ಹಾಗೂ ತೆರಿಗೆಯಲ್ಲಿ ಕಡಿತವಾಗುವ ಈ ಮೊತ್ತವು ಪಾಲಿಸಿ ಅವಧಿಗೆ ಪಾವತಿಸುವ ಸಂಪೂರ್ಣ ಪ್ರೀಮಿಯಂ ಮೊತ್ತದ ಮೇಲೆ ಅವಲಂಬಿತವಾಗಿರುತ್ತದೆ. ಇದು ಸಂದರ್ಭಕ್ಕನುಗುಣವಾಗಿ ₹25,000 ಅಥವಾ ₹ 50,000ದ ಮಿತಿಗಳಿಗೆ ಒಳಪಡುತ್ತದೆ.
ನಿಮ್ಮ ಪೋಷಕರಿಗೆ ಖರೀದಿಸಿದ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಅನ್ನು ₹50,000 ದವರೆಗಿನ ತೆರಿಗೆ ಕಡಿತಕ್ಕಾಗಿ ಕ್ಲೇಮ್ ಮಾಡಬಹುದು. ಅಲ್ಲದೆ, ಹಿರಿಯ ನಾಗರಿಕರ ನಿರ್ದಿಷ್ಟ ಕಾಯಿಲೆಗಳ ಮೇಲಿನ ವೆಚ್ಚಗಳಿಗೆ ತೆರಿಗೆ ಕಡಿತದ ಮಿತಿ ₹1 ಲಕ್ಷದವರೆಗೆ ಇರುತ್ತದೆ.
ಮತ್ತೂ ಓದಿ : ಆದಾಯ ತೆರಿಗೆ ರಿಟರ್ನ್ಸ್
ಪ್ರಿವೆಂಟಿವ್ ಹೆಲ್ತ್ ಚೆಕಪ್‍ಗಳಿಗೆ ಉಂಟಾದ ವೆಚ್ಚಗಳು ಕೂಡ ತೆರಿಗೆ ಪ್ರಯೋಜನಗಳಿಗೆ ಅರ್ಹವಾಗಿವೆ. ಆದರೆ, ಬಹುತೇಕ ತೆರಿಗೆ ಪಾವತಿದಾರರು ಅದನ್ನು ತಾವಾಗಿಯೇ ಪಾವತಿಸಿಬಿಡುತ್ತಾರೆ. ತೆರಿಗೆ ವಿನಾಯಿತಿ ಮಿತಿ ₹5,000.
ಆಸ್ಪತ್ರೆ ದಾಖಲಾತಿ ವೆಚ್ಚಗಳ ಜೊತೆಗೆ, ಹೊರರೋಗಿ ವಿಭಾಗ ಅಥವಾ OPD ಸಮಾಲೋಚನೆ ಶುಲ್ಕಗಳು ಮತ್ತು ಡಯಾಗ್ನಸಿಸ್ ಪರೀಕ್ಷೆಗಳ ಮೇಲೆ ಉಂಟಾದ ವೆಚ್ಚಗಳ ಮೇಲೆ ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಒದಗಿಸಲಾಗುತ್ತದೆ. ನಗದು ಪಾವತಿಗಳ ಮೇಲೆಯೂ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದು. ಇದು ತೆರಿಗೆ ವಿನಾಯಿತಿ ಪ್ರಯೋಜನಗಳನ್ನು ಪಡೆಯಲು ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, ಚೆಕ್ ಅಥವಾ ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಗಳ ಅವಶ್ಯಕತೆ ಇರುವ ಇತರೆ ವೈದ್ಯಕೀಯ ವೆಚ್ಚಗಳ ಹಾಗಲ್ಲ.
ಮೇಲೆ ತಿಳಿಸಲಾದ ಪ್ರಯೋಜನಗಳು, ದೇಶದಲ್ಲಿ ಚಾಲ್ತಿಯಲ್ಲಿರುವ ಪ್ರಸ್ತುತ ತೆರಿಗೆ ಕಾನೂನುಗಳ ಪ್ರಕಾರ ಇವೆ ಎಂಬುದನ್ನು ದಯವಿಟ್ಟು ಗಮನಿಸಿ. ನಿಮ್ಮ ತೆರಿಗೆ ಪ್ರಯೋಜನಗಳು ತೆರಿಗೆ ಕಾನೂನುಗಳಿಗೆ ಒಳಪಟ್ಟು ಬದಲಾಗಬಹುದು. ನಿಮ್ಮ ತೆರಿಗೆ ಸಲಹೆಗಾರರೊಂದಿಗೆ ಅದನ್ನೇ ಮರು ದೃಢೀಕರಿಸಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಇದು ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂ ಮೌಲ್ಯದಿಂದ ಮುಕ್ತವಾಗಿದೆ.
ನಿಮ್ಮ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡುವಾಗ, ಯಾವುದು ಅತ್ಯುತ್ತಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಎನ್ನುವ ಸಂದೇಹವೇ? ಆನ್ಲೈನ್‌ನಲ್ಲಿ ಅತ್ಯುತ್ತಮ ಹೆಲ್ತ್ ಪ್ಲಾನ್ ಆಯ್ಕೆ ಮಾಡುವುದು ಹೇಗೆ? ಅದು ಯಾವ ಕವರೇಜ್ ಹೊಂದಿರಬೇಕು? ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಲು ಇನ್ನಷ್ಟು ಓದಿ ಸರಿಯಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಪಡೆಯಲು ಇರುವ ಹ್ಯಾಕ್‌ಗಳನ್ನು ಡೀಕೋಡ್ ಮಾಡೋಣ.
ನೀವು ಮೆಟ್ರೋ ನಗರಗಳಲ್ಲಿ ವಾಸಿಸುತ್ತಿದ್ದರೆ ಚಿಕಿತ್ಸೆಯ ವೆಚ್ಚ ಹೆಚ್ಚಾಗಿರುತ್ತದೆ. ಆದ್ದರಿಂದ, ಒಬ್ಬ ವ್ಯಕ್ತಿಯು 7 ಲಕ್ಷದಿಂದ 10 ಲಕ್ಷಗಳ ನಡುವೆ ವೈಯಕ್ತಿಕ ವಿಮಾ ಮೊತ್ತವನ್ನು ಹೊಂದಿರುವುದು ಉತ್ತಮವಾಗಿದೆ. ನೀವು ನಿಮ್ಮ ಸಂಗಾತಿಯನ್ನು ಮತ್ತು ಮಕ್ಕಳನ್ನು ಇನ್ಶೂರ್ ಮಾಡಲು ಫ್ಯಾಮಿಲಿ ಕವರ್ ಹುಡುಕುತ್ತಿದ್ದರೆ, ಫ್ಲೋಟರ್ ಆಧಾರದಲ್ಲಿ 8 ಲಕ್ಷದಿಂದ 15 ಲಕ್ಷಗಳ ನಡುವಿನ ವಿಮಾ ಮೊತ್ತವನ್ನು ಹೊಂದಿರುವುದು ಉತ್ತಮವಾಗಿದೆ. ಒಂದು ವರ್ಷದಲ್ಲಿ ಆಗಬಹುದಾದ ಒಂದಕ್ಕಿಂತ ಹೆಚ್ಚಿನ ಆಸ್ಪತ್ರೆ ದಾಖಲಾತಿಯನ್ನು ಕವರ್ ಮಾಡುವುದಕ್ಕೆ ಇಷ್ಟು ಸಾಕಾಗುತ್ತದೆ.
ನೀವು ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗೆ ಕಡಿಮೆ ಪ್ರೀಮಿಯಂಗಳನ್ನು ಪಾವತಿಸಲು ಬಯಸಿದರೆ, ನಿಮ್ಮ ಆಸ್ಪತ್ರೆ ಬಿಲ್‌ಗಳನ್ನು ಸಹ-ಪಾವತಿಸಿ. ನೀವು ನಿಮ್ಮ ಹೆಲ್ತ್ ಇನ್ಶೂರರ್ ಅವರೊಂದಿಗೆ ವೈದ್ಯಕೀಯ ವೆಚ್ಚಗಳನ್ನು ಹಂಚಿಕೊಳ್ಳುತ್ತಾ ಇರುವುದರಿಂದ, ಭಾರಿ ಪ್ರೀಮಿಯಂ ಪಾವತಿಸಬೇಕಾಗಿರುವುದಿಲ್ಲ. ನೀವು ಮಾಸಿಕ, ಅರ್ಧ ವಾರ್ಷಿಕ, ತ್ರೈಮಾಸಿಕ ಮತ್ತು ವಾರ್ಷಿಕ ಆಧಾರದ ಮೇಲೆ ಕಂತು ಪಾವತಿಸುವ ಸೌಲಭ್ಯ ಒದಗಿಸುವ ಮೈ:ಹೆಲ್ತ್ ಸುರಕ್ಷಾ ಹೆಲ್ತ್ ಇನ್ಶೂರೆನ್ಸ್ ಕೂಡ ಖರೀದಿಸಬಹುದು.
ಇನ್ಶೂರೆನ್ಸ್ ಕಂಪನಿಯು ಹೆಚ್ಚಿನ ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿ ಹೊಂದಿದೆಯೇ ಎಂಬುದನ್ನು ಯಾವಾಗಲೂ ಪರಿಶೀಲಿಸಿ. ಹತ್ತಿರದ ಆಸ್ಪತ್ರೆ ಅಥವಾ ವೈದ್ಯಕೀಯ ಸೌಲಭ್ಯ ಕೇಂದ್ರವನ್ನು ಇನ್ಶೂರೆನ್ಸ್ ಕಂಪನಿಯು ಪಟ್ಟಿ ಮಾಡಿದ್ದರೇ, ಅದು ನಗದುರಹಿತ ಚಿಕಿತ್ಸೆಯನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ, ನಾವು 16000+ ನಗದುರಹಿತ ಹೆಲ್ತ್ ಕೇರ್ ಸೆಂಟರ್‌ಗಳ ದೊಡ್ಡ ನೆಟ್ವರ್ಕ್ ಹೊಂದಿದ್ದೇವೆ.
ಸಾಮಾನ್ಯವಾಗಿ ನಿಮ್ಮ ವೈದ್ಯಕೀಯ ವೆಚ್ಚಗಳು, ನಿಮ್ಮ ರೂಮ್ ಬಗೆ ಮತ್ತು ಕಾಯಿಲೆಯನ್ನು ಅವಲಂಬಿಸಿರುತ್ತವೆ. ಆಸ್ಪತ್ರೆ ರೂಮ್ ಬಾಡಿಗೆಯ ಮೇಲೆ ಉಪಮಿತಿಗಳನ್ನು ಹೊಂದಿರದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ಶಿಫಾರಸು ಮಾಡಲಾಗುತ್ತದೆ. ಇದರಿಂದಾಗಿ, ನೀವು ನಿಮಗೆ ಆರಾಮದಾಯಕ ಎನ್ನಿಸುವ ಆಸ್ಪತ್ರೆ ಕೊಠಡಿಯನ್ನು ಆಯ್ಕೆ ಮಾಡಬಹುದು. ನಮ್ಮ ಹೆಚ್ಚಿನ ಪಾಲಿಸಿಗಳು ಕಾಯಿಲೆ ಉಪಮಿತಿ ಸೂಚಿಸುವುದಿಲ್ಲ; ಇದು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಒಂದು ಪ್ರಮುಖ ಅಂಶವಾಗಿದೆ.
ನೀವು ಕಾಯುವಿಕೆ ಅವಧಿಯನ್ನು ಪೂರ್ಣಗೊಳಿಸದೆ ಇರುವಾಗ, ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಚಾಲ್ತಿಗೆ ಬರುವುದಿಲ್ಲ. ಆನ್ಲೈನ್‌ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸುವ ಮೊದಲು, ಪಾಲಿಸಿ-ಪೂರ್ವದ ಕಾಯಿಲೆಗಳಿಗೆ ಮತ್ತು ತಾಯ್ತನದ ಪ್ರಯೋಜನಗಳಿಗಾಗಿ ಕಡಿಮೆ ಕಾಯುವಿಕೆ ಅವಧಿಗಳನ್ನು ಹೊಂದಿರುವ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳನ್ನು ಯಾವಾಗಲೂ ಪರಿಶೀಲಿಸಿ.
ಮಾರುಕಟ್ಟೆಯಲ್ಲಿ ಒಳ್ಳೆಯ ಹೆಸರನ್ನು ಸಂಪಾದಿಸಿರುವ ಹೆಲ್ತ್ ಇನ್ಶೂರೆನ್ಸ್ ಕಂಪನಿಯನ್ನು ಯಾವಾಗಲೂ ಆಯ್ಕೆ ಮಾಡಿ. ನೀವು ಭವಿಷ್ಯದಲ್ಲಿ ಮಾಡಬಹುದಾದ ಕ್ಲೈಮ್‌ಗಳನ್ನು ಬ್ರ್ಯಾಂಡ್ ಅನುಮೋದಿಸುತ್ತದೆಯೇ ಎಂಬುದನ್ನು ತಿಳಿದುಕೊಳ್ಳಲು, ನೀವು ಕಸ್ಟಮರ್ ಬೇಸ್ ಮತ್ತು ಕ್ಲೈಮ್ ಪಾವತಿ ಸಾಮರ್ಥ್ಯವನ್ನು ಗಮನಿಸಬೇಕು.
ನೀವು ಮನೆಯಲ್ಲೇ ಆರಾಮಾಗಿ ಕುಳಿತು ಇಂಟರ್‍ನೆಟ್‍ನಲ್ಲಿ ಕಣ್ಣು ಹಾಯಿಸುತ್ತಾ ಪ್ಲಾನ್‍ಗಳನ್ನು ಹುಡುಕಬಹುದು. ಇನ್ಶೂರೆನ್ಸ್ ಕಂಪನಿಯ ಆಫೀಸ್‍ಗೆ ಹೋಗುವ ಅಥವಾ ಏಜೆಂಟ್ ಒಬ್ಬರು ನಿಮ್ಮನ್ನು ಭೇಟಿ ಮಾಡುವ ಸಮಯ ಹಾಗೂ ಶ್ರಮ ಉಳಿಸುತ್ತೀರಿ. ನೀವು ಎಲ್ಲಿಂದಲಾದರೂ ಮತ್ತು ಯಾವುದೇ ಸಮಯದಲ್ಲಿ ಸುರಕ್ಷಿತ ಟ್ರಾನ್ಸಾಕ್ಷನ್‌ಗಳನ್ನು ಮಾಡಬಹುದು. ಅಲ್ಲದೆ, ಕೊನೆಯ ಕ್ಷಣದಲ್ಲಿ ಯಾವುದೇ ಪ್ರಕಾರದ ಆಶ್ಚರ್ಯಗಳನ್ನು ತಪ್ಪಿಸಲು ಪಾಲಿಸಿ ನಿಯಮಾವಳಿಗಳನ್ನು ಆನ್ಲೈನ್‍ನಲ್ಲಿ ಯಾವಾಗ ಬೇಕಾದರೂ ಓದುವ ಅವಕಾಶವಿರುತ್ತದೆ.
ನಿಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗೆ ನೀವು ನಗದು ಅಥವಾ ಚೆಕ್‌ನಲ್ಲಿ ಪ್ರೀಮಿಯಂಗಳನ್ನು ಪಾವತಿಸಬೇಕಾಗಿಲ್ಲ! ಡಿಜಿಟಲ್ ಆಗಿ ಪಾವತಿಸಿ! ಅನೇಕ ಸುರಕ್ಷಿತ ಪಾವತಿ ವಿಧಾನಗಳ ಮೂಲಕ ಆನ್ಲೈನ್‌ನಲ್ಲಿ ಪಾವತಿ ಮಾಡಲು ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಬಳಸಿ.
ಆನ್ಲೈನ್ನಲ್ಲಿ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಲು ನೀವು ತಕ್ಷಣವೇ ಪ್ರೀಮಿಯಂ ಲೆಕ್ಕ ಹಾಕಬಹುದು, ಸದಸ್ಯರನ್ನು ಸೇರಿಸಬಹುದು ಅಥವಾ ತೆಗೆದುಹಾಕಬಹುದು, ಪ್ಲಾನ್‌ಗಳನ್ನು ಕಸ್ಟಮೈಜ್ ಮಾಡಬಹುದು ಮತ್ತು ನಿಮ್ಮ ಬೆರಳತುದಿಯಲ್ಲಿ ಕವರೇಜ್ ಅನ್ನು ಪರಿಶೀಲಿಸಬಹುದು.
ನೀವು ಇನ್ನು ಮುಂದೆ ಭೌತಿಕ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಡಾಕ್ಯುಮೆಂಟ್‌ಗಳಿಗಾಗಿ ಕಾಯಬೇಕಾಗಿಲ್ಲ. ನೀವು ಪ್ರೀಮಿಯಂ ಅನ್ನು ಆನ್ಲೈನ್‌ನಲ್ಲಿ ಪಾವತಿಸಿದ ತಕ್ಷಣ, ನಿಮ್ಮ ಪಾಲಿಸಿಯ PDF ಪ್ರತಿ ನಿಮ್ಮ ಮೇಲ್‌ಬಾಕ್ಸಿಗೆ ಬರುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ನೀವು ನಿಮ್ಮ ಪಾಲಿಸಿಯನ್ನು ಪಡೆದುಕೊಳ್ಳುತ್ತೀರಿ.
ನಮ್ಮ ಮೈ:ಹೆಲ್ತ್ ಸರ್ವೀಸಸ್ ಮೊಬೈಲ್ ಅಪ್ಲಿಕೇಶನ್‌ನಲ್ಲಿ ನಿಮ್ಮ ಪಾಲಿಸಿ ಡಾಕ್ಯುಮೆಂಟ್‌ಗಳು, ಬ್ರೋಶರ್ ಮತ್ತು ಇತರ ದಾಖಲೆಗಳಿಗೆ ಅಕ್ಸೆಸ್ ಪಡೆಯಿರಿ. ಆನ್ಲೈನ್ ಕನ್ಸಲ್ಟೇಷನ್‌ಗಳನ್ನು ಬುಕ್ ಮಾಡಲು, ನಿಮ್ಮ ಆಹಾರ ಸೇವನೆಯ ಕ್ಯಾಲೋರಿ ಮತ್ತು BMI ಕೂಡಾ ಟ್ರ್ಯಾಕ್ ಮಾಡಲು ನಮ್ಮ ವೆಲ್ನೆಸ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
ನಿಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸುವ ಸುಲಭ ಮತ್ತು ಅನುಕೂಲಕರ ಮಾರ್ಗವೆಂದರೆ ಅದನ್ನು ಆನ್ಲೈನಿನಲ್ಲಿ ಖರೀದಿಸುವುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಹೇಗೆ ಖರೀದಿಸಬಹುದು ಎಂಬುದು ಇಲ್ಲಿದೆ:
• ಎಚ್‌ಡಿಎಫ್‌ಸಿ ಎರ್ಗೋದ ಹೆಲ್ತ್ ಇನ್ಶೂರೆನ್ಸ್ ಪುಟಕ್ಕೆ ಭೇಟಿ ನೀಡಿ.
• ಮೇಲ್ಭಾಗದಲ್ಲಿ, ನಿಮಗೆ ಫಾರ್ಮ್ ಸಿಗುತ್ತದೆ. ಸಂಪರ್ಕ ವಿವರಗಳು, ಪ್ಲಾನ್ ಪ್ರಕಾರ ಮುಂತಾದ ನಿಮ್ಮ ಮೂಲಭೂತ ಮಾಹಿತಿಯನ್ನು ಟೈಪ್ ಮಾಡಿ. ನಂತರ ಪ್ಲಾನ್‌ಗಳನ್ನು ನೋಡಿ ಬಟನ್ ಮೇಲೆ ಕ್ಲಿಕ್ ಮಾಡಿ
• ಒಮ್ಮೆ ನೀವು ಪ್ಲಾನ್‌ಗಳನ್ನು ನೋಡಿದ ನಂತರ, ಆದ್ಯತೆಯ ವಿಮಾ ಮೊತ್ತ, ಪಾಲಿಸಿ ನಿಯಮಗಳು ಮತ್ತು ಇತರ ಮಾಹಿತಿಯನ್ನು ಆಯ್ಕೆ ಮಾಡುವ ಮೂಲಕ ನಿಮ್ಮ ಪಾಲಿಸಿಯನ್ನು ಕಸ್ಟಮೈಜ್ ಮಾಡಿ.
• ಆನ್ಲೈನ್ ಪಾವತಿ ವಿಧಾನವನ್ನು ಆಯ್ಕೆ ಮಾಡಿ ಮತ್ತು ನಮ್ಮ ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಪಾವತಿ ಮಾಡಿ.
ನಾವು ಚಿಕ್ಕವರಾಗಿದ್ದಾಗ ನಮ್ಮ ಪೋಷಕರು ನಮ್ಮ ಕಾಳಜಿ ವಹಿಸಿದ್ದರು. ಅವರ ಜೀವನದ ಕೊನೆಗಾಲದಲ್ಲಿ ಅವರನ್ನು ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಹೆಚ್ಚುತ್ತಿರುವ ವೈದ್ಯಕೀಯ ಅಗತ್ಯಗಳು ಮತ್ತು ಹಣದುಬ್ಬರದ ಈ ದಿನಗಳಲ್ಲಿ, ನಿಮ್ಮ ಪೋಷಕರಿಗಾಗಿ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಅತ್ಯಗತ್ಯ.
ಅಂತರ್ಜಾಲ ಮತ್ತು ತಂತ್ರಜ್ಞಾನದ ಬಳಕೆಯಿಂದಾಗಿ ಹಲವಾರು ಕೆಲಸಗಳು ಸುಲಭವಾಗುತ್ತಿವೆ. ನಿಮ್ಮ ಪೋಷಕರಿಗೆ ಹೆಲ್ತ್ ಇನ್ಶೂರೆನ್ಸ್ ಖರೀದಿಸುವುದು ಸರಳ ಮತ್ತು ಅನುಕೂಲಕರ, ಇದನ್ನು ಕೆಲವೇ ಕ್ಲಿಕ್‌ಗಳಲ್ಲಿ ಮಾಡಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಪುಟಕ್ಕೆ ಭೇಟಿ ನೀಡಿ, ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಪ್ಲಾನ್ ಆಯ್ಕೆ ಮಾಡಿದರಾಯ್ತು. ನಂತರ ಆನ್ಲೈನ್‌ನಲ್ಲೇ ಪ್ರೀಮಿಯಂ ಲೆಕ್ಕ ಮಾಡಿ, ಕವರೇಜ್ ಪರಿಶೀಲಿಸಿ, ನಿಮ್ಮ ಪೋಷಕರಿಗೆ ಸೂಕ್ತವಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಖರೀದಿಸಬಹುದು.
ಹೆಲ್ತ್ ಕ್ಲೇಮ್ ಅನ್ನು ಎರಡು ರೀತಿಯಲ್ಲಿ ಸಲ್ಲಿಸಬಹುದು. ನಗದುರಹಿತ ಕ್ಲೇಮ್ ಮತ್ತು ಮರುಪಾವತಿ ಕ್ಲೇಮ್
ನಗದುರಹಿತ ಕ್ಲೈಮ್ ಸಲ್ಲಿಸಲು ಈ ಸರಳ ವಿಧಾನ ಅನುಸರಿಸಿ
• ನಗದುರಹಿತ ಕ್ಲೇಮ್ ಮಾಡಲು, ನೀವು ನೆಟ್ವರ್ಕ್ ಆಸ್ಪತ್ರೆಯನ್ನು ಆಯ್ಕೆ ಮಾಡಬೇಕು.ಮರುಪಾವತಿ ಕ್ಲೈಮ್ ಮಾಡಲು, ನೀವು ಈ ವಿಧಾನ ಅನುಸರಿಸಬೇಕು
• ಮೊದಲು, ನೀವು ಆಸ್ಪತ್ರೆಗೆ ಕೈಯಾರೆ ಹಣ ಪಾವತಿ ಮಾಡಬೇಕು.ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ, ಗರಿಷ್ಠ ಪ್ರವೇಶಾತಿ ವಯಸ್ಸನ್ನು ನಮೂದಿಸಲಾಗುತ್ತದೆ. ಹೆಲ್ತ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಆಜೀವ ನವೀಕರಣದ ಸೌಲಭ್ಯವೂ ಇದೆ
ಹೌದು, ನಿಮ್ಮ ಪೋಷಕರಿಗೆ ಪಾಲಿಸಿ-ಪೂರ್ವ ಕಾಯಿಲೆ ಇದ್ದರೂ ಸಹ ನೀವು ಹೆಲ್ತ್ ಇನ್ಶೂರೆನ್ಸ್ ಖರೀದಿಸಬಹುದು. ಅಂತಹ ಕಾಯಿಲೆ ಇದ್ದ ಸಂದರ್ಭದಲ್ಲಿ, ಕ್ಲೇಮ್ ಮಾಡುವ ಮುಂಚೆ ನೀವು ಒಂದು ನಿರ್ದಿಷ್ಟ ನಿರೀಕ್ಷಣಾ ಅವಧಿಯವರೆಗೆ ಕಾಯಬೇಕಾಗುತ್ತದೆ. ಯಾವ ಇನ್ಶೂರೆನ್ಸ್ ಖರೀದಿಸಬೇಕು ಎಂದು ನಿರ್ಧರಿಸುವಾಗ, ಅತಿಕಡಿಮೆ ನಿರೀಕ್ಷಣಾ ಅವಧಿ ಹೊಂದಿರುವ ಇನ್ಶೂರೆನ್ಸ್ ಆಯ್ಕೆ ಮಾಡುವುದು ಉತ್ತಮ. ಇದು ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಹೌದು, ಸೆಕ್ಷನ್ 80D ಅಡಿಯಲ್ಲಿ ಹೆಲ್ತ್ ಇನ್ಶೂರೆನ್ಸ್‌ಗೆ ಪಾವತಿಸಲಾದ ಪ್ರೀಮಿಯಂ ಮೊತ್ತವು ತೆರಿಗೆ ವಿನಾಯಿತಿಗೆ ಅರ್ಹವಾಗಿದೆ. ಈ ತೆರಿಗೆ ವಿನಾಯಿತಿಯು ಪಾಲಿಸಿ ಅವಧಿಯಲ್ಲಿ ಪಾವತಿಸಲಾದ ಒಟ್ಟು ಪ್ರೀಮಿಯಂ ಮೊತ್ತವನ್ನು ಆಧರಿಸಿದೆ. ಈ ತೆರಿಗೆ ವಿನಾಯಿತಿಗಳು ಆದಾಯ ತೆರಿಗೆ ಕಾಯ್ದೆಯ ನಿಯಮಗಳು ಮತ್ತು ನಿಬಂಧನೆಗಳಿಗೆ ಒಳಪಟ್ಟಿರುತ್ತವೆ.
ಎಚ್‌ಡಿಎಫ್‌ಸಿ ಎರ್ಗೋ ನೀಡುವ ಪೋಷಕರ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಏಕೆ ಆಯ್ಕೆ ಮಾಡಬೇಕು ಎಂಬುದಕ್ಕೆ ಹಲವಾರು ಕಾರಣಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
• ಹೆಚ್ಚುವರಿ 5% ಆನ್ಲೈನ್ ರಿಯಾಯಿತಿ