ಅನಿರೀಕ್ಷಿತ ಹಾನಿಗಳು ಅಥವಾ ನಷ್ಟಗಳ ವಿರುದ್ಧ ನಿಮ್ಮ ಅಗತ್ಯ ಮತ್ತು ಮೆಚ್ಚಿನ ಎಲೆಕ್ಟ್ರಾನಿಕ್ ಸಲಕರಣೆಗಳನ್ನು ರಕ್ಷಿಸಲು ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಕವರೇಜ್ ನಿಮಗೆ ಸಹಾಯ ಮಾಡುತ್ತದೆ. ಇಂದಿನ ಜಗತ್ತಿನಲ್ಲಿ, ಲ್ಯಾಪ್‌ಟಾಪ್‌ಗಳು, ಕಂಪ್ಯೂಟರ್‌ಗಳು, ಐಪ್ಯಾಡ್‌ಗಳು, ಟ್ಯಾಬ್ಲೆಟ್‌ಗಳು ಮುಂತಾದ ಗ್ಯಾಜೆಟ್‌ಗಳು ಪ್ರತಿ ಮನೆಯ ಭಾಗವಾಗಿವೆ. ಜೊತೆಗೆ, ರೆಫ್ರಿಜರೇಟರ್, ವಾಶಿಂಗ್ ಮಷೀನ್, ಏರ್ ಕಂಡೀಶನರ್, ಇತ್ಯಾದಿಗಳಿಲ್ಲದೆ ಯಾವುದೇ ಮನೆಯನ್ನು ಸಮರ್ಥವಾಗಿ ನಡೆಸಲಾಗುವುದಿಲ್ಲ. ಯಾವುದೇ ಎಲೆಕ್ಟ್ರಾನಿಕ್ ಸಲಕರಣೆಗಳ ಅಗತ್ಯತೆಗಳ ಪೂರೈಕೆಯನ್ನು ನಾವು ಎಲ್ಲರೂ ಖಚಿತಪಡಿಸುತ್ತೇವೆ, ಅಪಘಾತಗಳು ಮತ್ತು ಅನಿರೀಕ್ಷಿತ ಘಟನೆಗಳು ಸಂಭವಿಸುತ್ತವೆ. ಅಂತಹ ನಷ್ಟಗಳಿಗೆ ಸಿದ್ಧರಾಗಿರಲು ಎಲ್ಲಾ ಅಗತ್ಯ ಎಲೆಕ್ಟ್ರಾನಿಕ್ ಸಲಕರಣೆಗಳು/ಗ್ಯಾಜೆಟ್‌ಗಳು ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಕವರ್‌ನೊಂದಿಗೆ ಹೋಮ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಯಾಕೆಂದರೆ, ಅಂತಹ ಯಾವುದೇ ಡಿವೈಸ್‌ನ ಬ್ರೇಕ್‌ಡೌನ್ ಅಥವಾ ಹಾನಿಯು ನಿಮ್ಮ ಜೇಬಿಗೆ ಕತ್ತರಿ ಹಾಕುತ್ತದೆ.
ಎಲೆಕ್ಟ್ರಾನಿಕ್ ಸಲಕರಣೆಗಳು ಹಾನಿಗೆ ಹೆಚ್ಚು ಒಳಗಾಗುವುದಷ್ಟೇ ಅಲ್ಲದೆ ದುಬಾರಿಯಾಗಿವೆ ಮತ್ತು ಸುಲಭವಾಗಿ ಬದಲಾಯಿಸಲಾಗುವುದಿಲ್ಲ. ನಿಮ್ಮ ಹೋಮ್ ಪಾಲಿಸಿಯು ಕಳ್ಳತನ ಮತ್ತು ದರೋಡೆಯಿಂದ ನಿಮ್ಮ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಆಗುವ ನಷ್ಟವನ್ನೂ ಕವರ್ ಮಾಡಬೇಕು. ಆದ್ದರಿಂದ, ಹೋಮ್ ಇನ್ಶೂರೆನ್ಸ್ ತೆಗೆದುಕೊಳ್ಳುವಾಗ, ಪಾಲಿಸಿ ಕವರೇಜ್ ನಿಮ್ಮ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಸಾಧನಗಳಿಗೆ ಯಾವುದೇ ಆಕಸ್ಮಿಕ ಹಾನಿಯ ವಿರುದ್ಧ ನಿಮ್ಮನ್ನು ರಕ್ಷಿಸುತ್ತದೆಯೇ ಎಂದು ಪರಿಶೀಲಿಸಿ.
ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಪಡೆಯುವ ಮೂಲಕ, ನೀವು ಈ ಕೆಳಗಿನ ವಿಧಾನಗಳಲ್ಲಿ ಪ್ರಯೋಜನ ಪಡೆಯಬಹುದು:-
ಪ್ರಯೋಜನಗಳು | ವಿವರಗಳು |
ನೈಸರ್ಗಿಕ ವಿಕೋಪಗಳ ವಿರುದ್ಧ ರಕ್ಷಿಸುತ್ತದೆ | ಪ್ರವಾಹ, ಸಿಡಿಲು, ಭೂಕಂಪ ಇತ್ಯಾದಿಗಳಿಂದ ಉಂಟಾಗುವ ಆಕಸ್ಮಿಕ ಹಾನಿಗಳಿಂದ ನಿಮ್ಮ ಮನೆಯಲ್ಲಿರುವ ಅಮೂಲ್ಯ ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಸುರಕ್ಷಿತಗೊಳಿಸಲು ಇದು ಸಹಾಯ ಮಾಡುತ್ತದೆ. |
ಕಳ್ಳತನ/ದರೋಡೆಗಳನ್ನು ಕವರ್ ಮಾಡುತ್ತದೆ | ಕಳ್ಳತನ ಅಥವಾ ದರೋಡೆಯ ಸಂದರ್ಭಗಳು ಯಾರಿಗೂ ಸಂಭವಿಸಬಹುದು. ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಕಳ್ಳತನ ಅಥವಾ ದರೋಡೆಯಿಂದ ಉಂಟಾದ ಹಾನಿಗಳನ್ನು ಕವರ್ ಮಾಡುವ ಮೂಲಕ ನಿಮ್ಮ ಮೌಲ್ಯಯುತ ಎಲೆಕ್ಟ್ರಾನಿಕ್ಸ್ ಅನ್ನು ರಕ್ಷಿಸುತ್ತದೆ. |
ಸರಳ ಕ್ಲೈಮ್ ಪ್ರಕ್ರಿಯೆ | 24/7 ಬೆಂಬಲದೊಂದಿಗೆ ಸರಳವಾದ ಕ್ಲೈಮ್ ನೋಂದಣಿ ಮತ್ತು ತ್ವರಿತ ಸೆಟಲ್ಮೆಂಟ್‌ಗಳು ಅಂತಹ ಹಾನಿಗಳು ಅಥವಾ ನಷ್ಟಗಳನ್ನು ಸುಲಭವಾಗಿ ನಿರ್ವಹಿಸುತ್ತವೆ. |
ಕೈಗೆಟಕುವ ಕವರೇಜ್ | ಸಮಂಜಸವಾದ ಪ್ರೀಮಿಯಂ ದರಗಳಲ್ಲಿ ದೊಡ್ಡ ಕವರೇಜನ್ನು ಒದಗಿಸುತ್ತದೆ, ಇದು ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಅನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುತ್ತದೆ. |
ಮನಃಶಾಂತಿ | ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅಡಿಯಲ್ಲಿ ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್‌ನ ಹಣಕಾಸಿನ ಬೆಂಬಲದೊಂದಿಗೆ, ನೀವು ಮನಸ್ಸಿನ ಶಾಂತಿಯನ್ನು ಆನಂದಿಸಬಹುದು ಮತ್ತು ಬೀಟ್ ಸ್ಕಿಪ್ ಮಾಡದೆ ಮನೆ ಮಾಲೀಕರು/ ಬಾಡಿಗೆದಾರರಾಗಿರಬಹುದು. |
ಫೀಚರ್‌ಗಳು | ಪ್ರಯೋಜನಗಳು |
ವ್ಯಾಪಕ ಕವರ್ | ಇದು ನಿಮ್ಮ ಮನೆಯಲ್ಲಿ ಅನೇಕ ಅಗತ್ಯ ಎಲೆಕ್ಟ್ರಿಕಲ್ ಸಲಕರಣೆಗಳನ್ನು ಕವರ್ ಮಾಡಲು ಸಹಾಯ ಮಾಡುತ್ತದೆ, ಅವುಗಳಿಂದ ಉಂಟಾದ ಯಾವುದೇ ನಷ್ಟ ಅಥವಾ ಹಾನಿಯ ಸಂದರ್ಭದಲ್ಲಿ ಹಣಕಾಸಿನ ಅಪಾಯಗಳನ್ನು ಕಡಿಮೆ ಮಾಡುತ್ತದೆ. |
ಇಪ್ಪತ್ತನಾಲ್ಕು ಗಂಟೆಯ ಬೆಂಬಲ | 24/7 ಗ್ರಾಹಕ ಸಹಾಯದೊಂದಿಗೆ, ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವುದು ಮತ್ತು ಕ್ಲೈಮ್‌ಗಳನ್ನು ನೋಂದಾಯಿಸುವುದು ಸರಳ ಕಾರ್ಯವಾಗಿದೆ. |
ರಿಸ್ಟೋರೇಶನ್ ಮತ್ತು ಡೇಟಾ ನಷ್ಟವನ್ನು ಕವರ್ ಮಾಡುತ್ತದೆ | ರಿಪೇರಿ ಮತ್ತು ಬದಲಿಗೆ ಹೆಚ್ಚುವರಿಯಾಗಿ, ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಡೇಟಾ ನಷ್ಟ ಮತ್ತು ಡೇಟಾ ರಿಸ್ಟೋರೇಶನ್‌ಗೆ ಕವರೇಜನ್ನು ಒದಗಿಸುತ್ತದೆ. |
ಹಣಕಾಸಿನ ಸಹಾಯ | ಅನ್ವಯವಾಗುವ ಎಲೆಕ್ಟ್ರಿಕಲ್ ಸಲಕರಣೆಗಳಿಗೆ ನಷ್ಟ ಅಥವಾ ಹಾನಿಗಳ ಸಂದರ್ಭದಲ್ಲಿ, ಪಾಲಿಸಿಯು ಸೂಕ್ತ ಕವರೇಜನ್ನು ಒದಗಿಸುತ್ತದೆ, ಆದ್ದರಿಂದ ನೀವು ಪರಿಸ್ಥಿತಿಯನ್ನು ಆರ್ಥಿಕವಾಗಿ ನಿಭಾಯಿಸಬಹುದು. |
ಬೆಂಕಿ, ಸಿಡಿಲು, ಸ್ಫೋಟ, ಯುದ್ಧ, ಸೈಕ್ಲೋನ್, ಭೂಕಂಪ, ಪ್ರವಾಹ, ಭೂಕುಸಿತ, ಕಲ್ಲುಕುಸಿತ ಮುಂತಾದ ಎಲ್ಲಾ ಅಕಸ್ಮಿಕ ಹಾನಿಗಳು ಮತ್ತು ನೈಸರ್ಗಿಕ ವಿಕೋಪಗಳ ವಿರುದ್ಧ ಕವರೇಜ್.
ಯಾವುದೇ ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ಬ್ರೇಕ್‌ಡೌನ್ ಕಾರಣದಿಂದಾಗಿ ನಿಮ್ಮ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಉಂಟಾಗುವ ಯಾವುದೇ ಹಾನಿಯನ್ನು ಕವರ್ ಮಾಡಲಾಗುತ್ತದೆ.
ಎಕ್ಸ್‌ಟರ್ನಲ್ ಡೇಟಾ ಡ್ರೈವ್‌ಗಳಾದ ಟೇಪ್‌ಗಳು, ಡಿಸ್ಕ್‌ಗಳು, ಹಾರ್ಡ್ ಡ್ರೈವ್‌ಗಳು ಇತ್ಯಾದಿಗಳ ಕಳ್ಳತನ
ಡೇಟಾ ಮರುಸ್ಥಾಪನೆಯ ವೆಚ್ಚವನ್ನು ಇಲ್ಲಿ ಕವರ್ ಮಾಡಲಾಗುತ್ತದೆ
ದುರಸ್ತಿ ಮತ್ತು ಬದಲಿಗೆ ಕವರೇಜ್ ಒದಗಿಸಲಾಗುತ್ತದೆ
ಭಾಗಗಳು ಮತ್ತು ಫಿಟ್ಟಿಂಗ್‌ಗಳಿಗೆ ಕವರೇಜ್ ಒದಗಿಸಲಾಗಿದೆ
ಹವಾಮಾನ ಬದಲಾವಣೆಯಿಂದ ಬರುವ ಪ್ರವಾಹದಿಂದ ಉಂಟಾಗುವ ಹಾನಿ
ಪಾಲಿಸಿ ಅಡಿಯಲ್ಲಿ ಅನ್ವಯವಾಗುವ ಡಿಡಕ್ಟಿಬಲ್‌ಗಳನ್ನು ಹೊರತುಪಡಿಸಲಾಗಿದೆ
ಗಳಿಕಯಲ್ಲಿ ನಷ್ಟ ಹಾಗೂ ಯಾವುದೇ ರೀತಿಯ ಪರೋಕ್ಷ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ
ಆರ್ಕಿಟೆಕ್ಟ್, ಸರ್ವೇಯರ್ ಅಥವಾ ಕನ್ಸಲ್ಟಿಂಗ್ ಎಂಜಿನಿಯರ್‌ಗಳ ಶುಲ್ಕವನ್ನು (3% ಕ್ಲೈಮ್ ಮೊತ್ತಕ್ಕಿಂತ ಹೆಚ್ಚು) ಕವರ್ ಮಾಡಲಾಗುವುದಿಲ್ಲ
ತ್ಯಾಜ್ಯ ವಿಲೇವಾರಿಯನ್ನು ಪಾಲಿಸಿ ಕವರ್ ಮಾಡುವುದಿಲ್ಲ
ಬಾಡಿಗೆಯ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ
ಪರ್ಯಾಯ ವಸತಿಯ ಬಾಡಿಗೆ ಮೊತ್ತ, ಹೆಚ್ಚುವರಿ ವೆಚ್ಚವಾಗಿದ್ದು ಅದನ್ನು ಕವರ್ ಮಾಡಲಾಗುವುದಿಲ್ಲ
ಇನ್ಶೂರೆನ್ಸ್ ಅವಧಿಯ ನಂತರ ಉಂಟಾಗುವ ಹಾನಿಗಳಿಗೆ ಕವರೇಜ್ ಇರುವುದಿಲ್ಲ
ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಅಡಿಯಲ್ಲಿ ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಮೇಲೆ ವಿವಿಧ ಸಲಕರಣೆಗಳನ್ನು ಕವರ್ ಮಾಡಲಾಗುತ್ತದೆ. ಕೆಲವು ಉದಾಹರಣೆಗಳೆಂದರೆ ;
ಟೆಲಿವಿಷನ್‌ಗಳು ಅಥವಾ TV ಗಳು ಭಾರತೀಯ ಕುಟುಂಬಗಳ ಸಾಮಾನ್ಯ ಭಾಗವಾಗಿವೆ ಮತ್ತು ಮನರಂಜನೆ ಮತ್ತು ಸುದ್ದಿಗಳ ಅಗತ್ಯ ಮೂಲವಾಗಿದೆ. ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಅಡಿಯಲ್ಲಿ ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಅದರಿಂದ ಉಂಟಾದ ಯಾವುದೇ ಹಾನಿಗಳು ಅಥವಾ ನಷ್ಟವನ್ನು ಕವರ್ ಮಾಡುತ್ತದೆ.
ರೆಫ್ರಿಜರೇಟರ್‌ಗಳು ಅಡುಗೆಮನೆಯ ಜೀವಾಳವಾಗಿವೆ, ಆಹಾರಗಳು, ಸ್ನ್ಯಾಕ್ಸ್, ಐಸ್ ಕ್ರೀಮ್‌ಗಳು ಮತ್ತು ಮುಂತಾದವುಗಳನ್ನು ಸಂಗ್ರಹಿಸುತ್ತವೆ. ಈ ಪಾಲಿಸಿಯು ಈ ಸಲಕರಣೆಯನ್ನು ಕವರ್ ಮಾಡುತ್ತದೆ, ಇದರಿಂದಾಗಿ ನಿಮ್ಮ ಅಡುಗೆಮನೆ ಕೆಲಸದಲ್ಲಿ ಅಡ್ಡಿ ಎದುರಿಸದೇ ಇರಬಹುದು.
ಕೈಯಿಂದ ಬಟ್ಟೆಗಳನ್ನು ತೊಳೆಯುವ ದಿನಗಳು ಮುಗಿದಿವೆ. ವಾಶಿಂಗ್ ಮಷೀನ್‌ಗಳು ದುಬಾರಿಯಾಗಿವೆ ಮತ್ತು ಮನೆಗೆ ಅದು ಮುಖ್ಯವಾಗಿದೆ ಮತ್ತು ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಅದನ್ನು ಕವರ್ ಮಾಡುತ್ತದೆ.
ವರ್ಷ ಕಳೆಯುತ್ತಾ ಹೋದಂತೆ ಏರ್ ಕಂಡೀಶನರ್ ಇಲ್ಲದೆ ಬೇಸಿಗೆಯ ದಿನಗಳನ್ನು ಕಳೆಯುವುದು ತುಂಬಾ ಕಷ್ಟವಾಗುತ್ತಿದೆ. AC ಕಳ್ಳತನವಾಗಿದ್ದರೆ ಅಥವಾ ಹಾನಿಗೊಳಗಾಗಿದ್ದರೆ ಅದನ್ನು ರಿಪೇರಿ ಮಾಡಲು ಅಥವಾ ಬದಲಾಯಿಸಲು ನೀವು ಬಯಸಿದರೆ, ಈ ಪಾಲಿಸಿಯನ್ನು ಖರೀದಿಸಿ.
ಹಾಳಾಗಿರುವ ವ್ಯಾಕ್ಯೂಮ್ ಕ್ಲೀನರ್‌ನಿಂದ ದಿನನಿತ್ಯದ ಕೆಲಸಗಳನ್ನು ಪೂರ್ಣಗೊಳಿಸುವುದು ತುಂಬಾ ಕಷ್ಟವಾಗಬಹುದು. ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪಾಲಿಸಿಯ ಎಲೆಕ್ಟ್ರಾನಿಕ್ ಎಕ್ವಿಪ್‌ಮೆಂಟ್ ಇನ್ಶೂರೆನ್ಸ್ ಅನ್ನು ಪಡೆದುಕೊಳ್ಳಿ ಮತ್ತು ಆದಷ್ಟು ಬೇಗ ಅದನ್ನು ಸರಿಪಡಿಸಿಕೊಳ್ಳಿ/ಬದಲಾಯಿಸಿ.
ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಪಾಲಿಸಿಯನ್ನು ಯಾರು ತೆಗೆದುಕೊಳ್ಳಬಹುದು ಎಂಬುದು ಇಲ್ಲಿದೆ ;
1. ಮನೆ ಮಾಲೀಕರು: ಆಕಸ್ಮಿಕ ಹಾನಿಗಳಿಂದ ತಮ್ಮ ಮನೆಯ ವಸ್ತುಗಳು ಅಥವಾ ಮನೆಯ ವಸ್ತುಗಳು ಮತ್ತು ಕಟ್ಟಡವನ್ನು (ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಒಳಗೊಂಡು) ರಕ್ಷಿಸಲು ಬಯಸುವ ಸ್ವತಂತ್ರ ಕಟ್ಟಡ ಅಥವಾ ಅಪಾರ್ಟ್ಮೆಂಟ್ ಮಾಲೀಕರು ಈ ಎಲೆಕ್ಟ್ರಾನಿಕ್ ಎಕ್ವಿಪ್‌ಮೆಂಟ್ ಇನ್ಶೂರೆನ್ಸ್ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
2. ಬಾಡಿಗೆದಾರರು: ತಮ್ಮ ಮನೆಯ ಅಮೂಲ್ಯ ವಸ್ತುಗಳನ್ನು (ಮೌಲ್ಯಯುತ ಎಲೆಕ್ಟ್ರಾನಿಕ್ ಸಲಕರಣೆಗಳನ್ನು ಒಳಗೊಂಡು) ರಕ್ಷಿಸಲು ಬಯಸುವ ಬಾಡಿಗೆದಾರರು ಈ ಪಾಲಿಸಿಯನ್ನು ಪಡೆಯಬಹುದು.
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಎಲೆಕ್ಟ್ರಾನಿಕ್ ಸಲಕರಣೆಗಳ ಇನ್ಶೂರೆನ್ಸ್ ಪಾಲಿಸಿ ಕ್ಲೈಮ್ ನೋಂದಣಿ ಮಾಡುವುದು ತುಂಬಾ ಸರಳವಾಗಿದೆ. ಈ ಸರಳ ಕ್ರಮಗಳನ್ನು ಅನುಸರಿಸಿದರೆ ಸಾಕು ;
1. ಸಹಾಯವಾಣಿ ಸಂಖ್ಯೆ 022-6234 6234 ಗೆ ಕರೆ ಮಾಡುವ ಮೂಲಕ ಅಥವಾ care@hdfcergo.com ಗೆ ಇಮೇಲ್ ಕಳುಹಿಸುವ ಮೂಲಕ ವಿಮಾದಾತರಿಗೆ ತಕ್ಷಣವೇ ತಿಳಿಸಿ ಮತ್ತು ಕ್ಲೈಮ್ ನೋಂದಣಿ ಮಾಡಿ,
2. ಕ್ಲೈಮ್ ಪ್ರಕ್ರಿಯೆಗಾಗಿ ಸರಿಯಾಗಿ ಭರ್ತಿ ಮಾಡಿದ ಕ್ಲೈಮ್‌ಗಳ ಫಾರ್ಮ್, ನಿರ್ವಹಣಾ ಒಪ್ಪಂದದ ಪ್ರತಿ, ಇನ್ಶೂರೆನ್ಸ್ ಪಾಲಿಸಿಯ ಪ್ರತಿ, ಕೈಗೊಂಡ ಯಾವುದೇ ರಿಪೇರಿ ಕೆಲಸದ ಬಿಲ್‌ಗಳು, ಇನ್ಶೂರ್ಡ್ ಸಲಕರಣೆಗಳ ವಿವರಗಳು ಇತ್ಯಾದಿಗಳನ್ನು ಒಳಗೊಂಡಂತೆ ಅಗತ್ಯ ಡಾಕ್ಯುಮೆಂಟ್‌ಗಳನ್ನು ಸಲ್ಲಿಸಿ.,
3. ಹಾನಿ/ನಷ್ಟವನ್ನು ಪರಿಶೀಲಿಸಲು ಮತ್ತು ಮೌಲ್ಯಮಾಪನ ಮಾಡಲು ನೇಮಕಗೊಂಡ ಸಮೀಕ್ಷಕರಿಗೆ ಅಗತ್ಯವಿರುವ ಸಹಾಯ ಮಾಡಿ ಮತ್ತು ಸಹಕಾರವನ್ನು ಒದಗಿಸಿ ಮತ್ತು ಅವರು ವರದಿಯನ್ನು ಪೂರ್ಣಗೊಳಿಸುವವರೆಗೆ ಮತ್ತು ಅದನ್ನು ಸಲ್ಲಿಸುವವರೆಗೆ ಕಾಯಿರಿ,
4. ಹೆಚ್ಚಿನ ಸೂಚನೆಗಳಿಗಾಗಿ ಕಾಯಿರಿ (ಯಾವುದಾದರೂ ಇದ್ದಲ್ಲಿ).
ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ, ಅದು ಅನುಮೋದನೆಯಾದರೆ ವಿಮಾದಾತರು ನಿಮಗೆ ಕ್ಲೈಮ್ ಮೊತ್ತವನ್ನು ಪಾವತಿಸುತ್ತಾರೆ.
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್
ವಿಮಾ ಮೊತ್ತದ ಆಧಾರದ ಮೇಲೆ ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಮತ್ತೊಂದೆಡೆ, ವಿಮಾ ಮೊತ್ತವನ್ನು ಈ ಕೆಳಗಿನ ಅಂಶಗಳ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ –
● ವಿಮೆ ಮಾಡಬೇಕಾದ ಸಲಕರಣೆಗಳು
● ಸಲಕರಣೆಯ ವಯಸ್ಸು
● ಎಲೆಕ್ಟ್ರಾನಿಕ್ ಸಲಕರಣೆಗಳ ಒಟ್ಟು ಮೌಲ್ಯ
ಅದೇ ಮಾಡೆಲ್ ಮತ್ತು ಸ್ಥಿತಿಯ ಇತರ ಉಪಕರಣಗಳೊಂದಿಗೆ ಹಾನಿಗೊಳಗಾದ ಅಥವಾ ಕಳ್ಳತನವಾದ ಉಪಕರಣಗಳನ್ನು ಬದಲಾಯಿಸುವ ಒಟ್ಟು ವೆಚ್ಚವಾಗಿ ವಿಮಾ ಮೊತ್ತವನ್ನು ಪರಿಗಣಿಸಲಾಗುತ್ತದೆ.
ಒಮ್ಮೆ ವಿಮಾ ಮೊತ್ತವನ್ನು ನಿರ್ಧರಿಸಿದ ನಂತರ, ಪ್ರೀಮಿಯಂ ಅನ್ನು ಲೆಕ್ಕ ಹಾಕಲಾಗುತ್ತದೆ. ಇದನ್ನು ವಿಮಾ ಮೊತ್ತದ ಪ್ರತಿ ಮೈಲಿಗೆ ₹15 ಎಂದು ಲೆಕ್ಕ ಹಾಕಲಾಗುತ್ತದೆ. ಇನ್ಶೂರೆನ್ಸ್ ಮಾಡಿಸಿದ ಗರಿಷ್ಠ ಮೊತ್ತವು ಹೋಮ್ ಕಂಟೆಂಟ್ ವಿಮಾ ಮೊತ್ತದ 30% ವರೆಗೆ ಇರಬಹುದು. ಈ ಪ್ಲಾನ್ ನಿಮ್ಮ ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ವಿಶ್ವಾದ್ಯಂತ ಹೆಚ್ಚುವರಿ ಕವರೇಜನ್ನು ಒದಗಿಸುತ್ತದೆ. ನೀವು ಈ ಕವರೇಜನ್ನು ಆಯ್ಕೆ ಮಾಡಿದರೆ, ಪ್ರೀಮಿಯಂ 10% ಹೆಚ್ಚಾಗುತ್ತದೆ.