ಮನೆಯೇ ಮಂತ್ರಾಲಯ ಎಂಬ ಮಾತು ಅಪ್ಪಟ ಸತ್ಯ. ಏಕೆಂದರೆ, ಅಲ್ಲಿ ನಿಮಗೆ ಸುರಕ್ಷತೆ ಮತ್ತು ನೆಮ್ಮದಿಯ ಅನುಭವ ಸಿಗುತ್ತದೆ. ಇಂತಹ ಮನೆಯ ನಿರ್ಮಾಣ, ಫರ್ನಿಶಿಂಗ್ ಮತ್ತು ಅಲಂಕಾರಕ್ಕೆ ಸಾಕಷ್ಟು ಹಣ ಖರ್ಚಾಗುತ್ತದೆ. ಆದ್ದರಿಂದ, ಬಹುತೇಕ ಜನರು ತಮ್ಮ ಮನೆಗಳನ್ನು ಹೋಮ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಸುರಕ್ಷಿತವಾಗಿರಿಸಲು ಬಯಸುತ್ತಾರೆ. ನಿಮ್ಮ ಹೋಮ್ ಇನ್ಶೂರೆನ್ಸ್ ಅನ್ನು ಹೆಚ್ಚು ಸಮಗ್ರವಾಗಿಸಲು, ವರ್ಷದ ಬಹುತೇಕ ಕಾಲ ಬಿಸಿ ಮತ್ತು ಆರ್ದ್ರ ಹವಾಮಾನ ಹೊಂದಿರುವ ಭಾರತದಲ್ಲಿ, ಏರ್ ಕಂಡೀಶನರ್ ಒಂದು ಮೂಲಭೂತ ಅಗತ್ಯ ಎಂದೇ ಪರಿಗಣಿಸಲಾಗುತ್ತದೆ. ಜೀವನವನ್ನು ಇನ್ನಷ್ಟು ಆರಾಮದಾಯಕವಾಗಿಸಲು ಅಳವಡಿಸುವ ಪ್ರತಿ AC ಯೂನಿಟ್‌ನೊಂದಿಗೆ, ಖರ್ಚಿನ ಪ್ರಮಾಣವೂ ಹೆಚ್ಚಾಗುತ್ತದೆ.
ಈ ACಗಳ ದುಬಾರಿ ಬೆಲೆ ಮತ್ತು ತಂತ್ರಜ್ಞಾನ ಕ್ರಾಂತಿಯಿಂದ ನಿರಂತರವಾಗಿ ಸುಧಾರಿಸುತ್ತಿರುವ ಫೀಚರ್‌ಗಳ ದೃಷ್ಟಿಯಿಂದ, ಈ ಅತ್ಯಮೂಲ್ಯ ವಸ್ತುಗಳನ್ನು ಕಳ್ಳತನ ಮತ್ತು ಹಾನಿಯಿಂದ ರಕ್ಷಿಸುವ ಅಗತ್ಯವಿದೆ. ಈಗ ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ನಿಮ್ಮ ಏರ್ ಕಂಡೀಶನರ್‌ಗಳನ್ನು ಇನ್ಶೂರ್ ಮಾಡಿಸಿ, ಟೆನ್ಶನ್-ಇಲ್ಲದ ಜೀವನ ನಡೆಸಬಹುದು
ಈಗಂತೂ ಪ್ರತಿ ಕುಟುಂಬದಲ್ಲಿ ಒಂದಾದರೂ ಏರ್ ಕಂಡೀಶನರ್ ಇದ್ದು, ಅವುಗಳು ಬಹಳಷ್ಟು ಬಿಲ್ಟ್-ಇನ್ ಫೀಚರ್‌ಗಳನ್ನು ಹೊಂದಿವೆ. ಇವುಗಳು ಖರೀದಿ ಮತ್ತು ನಿರ್ವಹಣೆ ತುಂಬಾ ದುಬಾರಿಯಾಗಿದೆ. ಏರ್ ಕಂಡೀಶನರ್ ಅನ್ನು ಕವರ್ ಮಾಡುವ ಸಮಗ್ರ ಹೋಮ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನ ಪ್ರಯೋಜನಗಳನ್ನು ಹೊಂದಿದೆ
ನಿಮ್ಮ ಏರ್ ಕಂಡೀಶನರ್‌ನ ಇನ್ಶೂರೆನ್ಸ್ ಪಾಲಿಸಿಯ ಪ್ರೀಮಿಯಂ ಮೊತ್ತವು ಪ್ರೀಮಿಯಂ ವೆಚ್ಚ ಮತ್ತು ಕವರೇಜ್ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅದರ ವಿವರ ಹೀಗಿದೆ:
ಬೆಂಕಿ, ಸಿಡಿಲು, ನೀರಿನ ಟ್ಯಾಂಕ್ ಸ್ಪೋಟ ಅಥವಾ ಓವರ್‌ಫ್ಲೋ, ನೈಸರ್ಗಿಕ ವಿಕೋಪಗಳು, ಮುಂತಾದ ಅನಿರೀಕ್ಷಿತ ಅಥವಾ ಹಠಾತ್ ಅವಘಢಗಳಿಂದ ಆಗುವ ಹಾನಿಗಳು.
ಕಳ್ಳತನ, ಸುಲಿಗೆ, ದರೋಡೆ, ದಾಂಧಲೆ, ಗಲಭೆ ಮತ್ತು ಮುಷ್ಕರಗಳಂತಹ ಸಮಾಜಘಾತುಕ ಚಟುವಟಿಕೆಗಳಿಂದ ಆಗುವ ಹಣಕಾಸು ನಷ್ಟ.
ಯಾವುದೇ ಬಾಹ್ಯ ಅಪಘಾತ ಅಥವಾ ಏರ್ ಕಂಡೀಶನರ್ ಸಾಗಾಣಿಕೆಯ ಸಮಯದಲ್ಲಿ ಉಂಟಾದ ಹಾನಿಗಳನ್ನು ಏರ್ ಕಂಡೀಶನರ್ ಇನ್ಶೂರೆನ್ಸ್‌ನಿಂದ ಕವರ್ ಮಾಡಲಾಗುತ್ತದೆ.
ಯಾವುದೇ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ಸಮಸ್ಯೆಗಳಿಂದಾಗಿ ಬ್ರೇಕ್‌ಡೌನ್‌ಗಳು. ರಿಪೇರಿ ಮತ್ತು ಬದಲಾವಣೆ ವೆಚ್ಚವನ್ನು ಮರುಪಾವತಿಸಲಾಗುತ್ತದೆ.
ಇನ್ಶೂರೆನ್ಸ್ ಮಾಡಿಸಿದ ನಂತರ ಮಾಲೀಕರ ಅಜಾಗರೂಕತೆಯಿಂದ ಉಂಟಾಗುವ ಹಾನಿಗಳು. ತಪ್ಪಾದ ನಿರ್ವಹಣೆ ಅಥವಾ ದುರುಪಯೋಗ ಸೇರಿದಂತೆ ಮಾಲೀಕರ ನಿರ್ಲಕ್ಷ್ಯದಿಂದ ಉಂಟಾದ ಯಾವುದೇ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ
ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡುವುದಿಲ್ಲ. ಕೈಜಾರಿ ಬಿದ್ದಾಗ ಅದರ ಭಾಗಗಳು ಅಕಸ್ಮಾತಾಗಿ ಮುರಿದರೆ ಅಥವಾ ಹಾನಿಗೊಳಗಾದರೆ, ಅದನ್ನು ಕವರ್ ಮಾಡಲಾಗುವುದಿಲ್ಲ
ಪಾಲಿಸಿ ತೆಗೆದುಕೊಳ್ಳುವ ಸಮಯದಲ್ಲಿ, ವಿಮಾದಾರರು ಉತ್ಪನ್ನದ ಬಗ್ಗೆ ಪಾರದರ್ಶಕವಾಗಿ ಸರಿಯಾದ ಮಾಹಿತಿಯನ್ನು ಒದಗಿಸುವುದು ಅಗತ್ಯವಾಗಿದೆ. ಒಂದು ವೇಳೆ ಯಾವುದಾದರೂ ಪ್ರಮುಖ ಮಾಹಿತಿಯನ್ನು ಒದಗಿಸದೇ ಇದ್ದರೆ ಅಥವಾ ಮರೆಮಾಚಿದ್ದರೆ, ಅದನ್ನು ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ
ಉತ್ಪಾದಕರ ಕಣ್ತಪ್ಪಿನಿಂದ ಆದ ಉತ್ಪಾದನೆ ಅಥವಾ ಇತರೆ ದೋಷಗಳನ್ನು ಕವರ್ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ ವಿಮಾದಾರರು ಉತ್ಪಾದಕರ ವಿರುದ್ಧ ಕ್ಲೈಮ್ ಸಲ್ಲಿಸಬೇಕಾಗುತ್ತದೆ
ಖರೀದಿಯ ದಿನಾಂಕದಿಂದ 365 ದಿನಗಳಿಗಿಂತ ಹಳೆಯದಾದ ಏರ್ ಕಂಡೀಶನರ್‌ಗಳಿಗೆ ಇನ್ಶೂರೆನ್ಸ್ ಮಾನ್ಯವಾಗಿರುವುದಿಲ್ಲ. ಏರ್ ಕಂಡೀಶನರ್ ಖರೀದಿಸಿದ ವರ್ಷವೇ ಇನ್ಶೂರೆನ್ಸ್ ಪಡೆದುಕೊಳ್ಳಬೇಕು.
ಸ್ವಾಭಾವಿಕ ಸವೆತ ಹಾಗೂ ದುರಸ್ತಿಯಿಂದ ಉಂಟಾಗುವ ನಷ್ಟಗಳು ಈ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುವುದಿಲ್ಲ
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್