Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242
ಹೋಮ್ / ಹೋಮ್ ಇನ್ಶೂರೆನ್ಸ್ / ಬಿಲ್ಡಿಂಗ್ ಇನ್ಶೂರೆನ್ಸ್

ಬಿಲ್ಡಿಂಗ್ ಇನ್ಶೂರೆನ್ಸ್

ಈ ಹೊಸ ವರ್ಷವು ಬೆಂಕಿ ಕವರೇಜ್‌ನಿಂದ ಹಿಡಿದು ಅನಿರೀಕ್ಷಿತ ಹಾನಿಗಳ ವಿರುದ್ಧ ರಕ್ಷಣೆ ಒದಗಿಸುವ ಎಚ್‌ಡಿಎಫ್‌ಸಿ ಎರ್ಗೋದ ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ನಿಮ್ಮ ಕಟ್ಟಡವನ್ನು ರಕ್ಷಿಸಲು ಆಯ್ಕೆಮಾಡಿ. ನೀವು ವಸತಿ ಕಟ್ಟಡ ಅಥವಾ ವಾಣಿಜ್ಯ ಆಸ್ತಿಯನ್ನು ಹೊಂದಿದ್ದರೂ, ರಚನೆಯನ್ನು ದುರಸ್ತಿ ಮಾಡುವ ಅಥವಾ ಮರುನಿರ್ಮಿಸುವ ವೆಚ್ಚವನ್ನು ಇದು ಕವರ್ ಮಾಡುತ್ತದೆ. ಬಿಲ್ಡಿಂಗ್ ಇನ್ಶೂರೆನ್ಸ್ ಗಮನಾರ್ಹ ವೆಚ್ಚಗಳಿಗೆ ಕಾರಣವಾಗಬಹುದಾದ ಹಾನಿಗಳ ವೆಚ್ಚವನ್ನು ಕವರ್ ಮಾಡುವ ಮೂಲಕ ಹಣಕಾಸಿನ ಭದ್ರತೆಯನ್ನು ಒದಗಿಸುತ್ತದೆ. ಈ ರೀತಿಯ ಇನ್ಶೂರೆನ್ಸ್ ಸಾಮಾನ್ಯವಾಗಿ ಗೋಡೆಗಳು, ರೂಫ್‌ಗಳು, ಫ್ಲೋರ್‌ಗಳು ಮತ್ತು ಶಾಶ್ವತ ಫಿಕ್ಸ್‌ಚರ್‌ಗಳನ್ನು ಒಳಗೊಂಡಂತೆ ಭೌತಿಕ ರಚನೆಯನ್ನು ಕವರ್ ಮಾಡುತ್ತದೆ. ಕೆಲವು ಪಾಲಿಸಿಗಳು ಕಾನೂನು ಹೊಣೆಗಾರಿಕೆಗಳು ಅಥವಾ ಆಕಸ್ಮಿಕ ಹಾನಿಯ ವಿರುದ್ಧ ರಕ್ಷಣೆಯಂತಹ ಹೆಚ್ಚುವರಿ ಕವರೇಜ್ ಆಯ್ಕೆಗಳನ್ನು ಕೂಡ ಒಳಗೊಂಡಿರಬಹುದು. ಸಮಗ್ರ ಬಿಲ್ಡಿಂಗ್ ಇನ್ಶೂರೆನ್ಸ್ ಹೊಂದಿರುವುದರಿಂದ ನೀವು ಅನಿರೀಕ್ಷಿತ ಘಟನೆಗಳಿಗೆ ಸಿದ್ಧರಾಗಿದ್ದೀರಿ ಎಂಬುದನ್ನು ಖಚಿತಪಡಿಸುತ್ತದೆ, ನಿಮಗೆ ಮನಸ್ಸಿನ ಶಾಂತಿಯನ್ನು ನೀಡುತ್ತದೆ ಮತ್ತು ವಿಪತ್ತು ಸಂದರ್ಭದಲ್ಲಿ ತ್ವರಿತವಾಗಿ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಅಗತ್ಯಗಳಿಗೆ ಸರಿಹೊಂದುವ ಒಂದನ್ನು ಹುಡುಕಲು ಇಂದೇ ಎಚ್‌ಡಿಎಫ್‌ಸಿ ಎರ್ಗೋದಿಂದ ಬಿಲ್ಡಿಂಗ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಅನ್ವೇಷಿಸಿ.

ಬಿಲ್ಡಿಂಗ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು

• ಲೊಕೇಶನ್

ನಿಮ್ಮ ಕಟ್ಟಡವು ಪ್ರವಾಹ ಅಥವಾ ಭೂಕಂಪ ಪೀಡಿತ ಸ್ಥಳದಲ್ಲಿದ್ದರೆ, ನಿಮ್ಮ ಪ್ರೀಮಿಯಂ ಮೊತ್ತ ಸ್ವಲ್ಪ ಹೆಚ್ಚಾಗಿರಬಹುದು.

• ನಿಮ್ಮ ಕಟ್ಟಡದ ವಯಸ್ಸು ಮತ್ತು ರಚನೆ

ನಿಮ್ಮ ಕಟ್ಟಡವು ಸ್ವಲ್ಪ ಹಳೆಯದಾಗಿದ್ದರೆ ಮತ್ತು ರಚನಾತ್ಮಕ ಸವಾಲುಗಳನ್ನು ಹೊಂದಿದ್ದರೆ ಪ್ರೀಮಿಯಂ ಸ್ವಲ್ಪ ಹೆಚ್ಚಾಗಿರಬಹುದು.

• ಗೃಹ ಸುರಕ್ಷತೆ

ನಿಮ್ಮ ಕಟ್ಟಡವು ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಹೊಂದಿದ್ದರೆ, ಕಳ್ಳತನದ ಅವಕಾಶಗಳು ಕಡಿಮೆ ಇರುತ್ತದೆ. ಹಾಗಾಗಿ, ಅಂತಹ ಸಂದರ್ಭದಲ್ಲಿ ನಿಮ್ಮ ಪ್ರೀಮಿಯಂ ಕಡಿಮೆಯಾಗಬಹುದು.

• ಇರುವ ವಸ್ತುಗಳ ಮೊತ್ತ

ನೀವು ಇನ್ಶೂರ್ ಮಾಡಿಸಲು ಬಯಸುತ್ತಿರುವ ಒಂದಷ್ಟು ಅಮೂಲ್ಯ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ, ಆ ವಸ್ತುವಿನ ಮೌಲ್ಯವನ್ನು ಅವಲಂಬಿಸಿ ಪ್ರೀಮಿಯಂ ಮೊತ್ತವು ಏರುಪೇರಾಗಬಹುದು.

• ನಿಮ್ಮ ಮನೆಯ ವಿಮಾ ಮೊತ್ತ ಅಥವಾ ಒಟ್ಟು ಮೌಲ್ಯ

ಪ್ರೀಮಿಯಂ ನಿರ್ಧರಿಸುವ ಸಮಯದಲ್ಲಿ ನಿಮ್ಮ ಮನೆಯ ಒಟ್ಟಾರೆ ಮೌಲ್ಯ ಮಹತ್ವ ಪಡೆದುಕೊಳ್ಳುತ್ತದೆ. ನಿಮ್ಮ ಮನೆಯ ರಚನಾತ್ಮಕ ಮೌಲ್ಯ ಹೆಚ್ಚಾಗಿದ್ದರೆ, ಪ್ರೀಮಿಯಂ ದರ ಹೆಚ್ಚಾಗುತ್ತದೆ. ಇದನ್ನು ನಿಮ್ಮ ಮನೆಯ ಮಾರುಕಟ್ಟೆ ಮೌಲ್ಯ ಎಂದೂ ಹೇಳಬಹುದು. ಏಕೆಂದರೆ ನಿಮ್ಮ ಮನೆಯ ಮಾರುಕಟ್ಟೆ ಮೌಲ್ಯವು ಹೆಚ್ಚಾಗಿದ್ದರೆ ವಿಮಾ ಮೊತ್ತವೂ ಹೆಚ್ಚಾಗಿರುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಮೂಲಕ ನಿಮ್ಮ ಕಟ್ಟಡವನ್ನು ಇನ್ಶೂರ್ ಮಾಡಲು ಕಾರಣಗಳು

ಆನ್ಲೈನ್‌ನಲ್ಲಿ ಇನ್ಶೂರೆನ್ಸ್ ಬಿಲ್ಡ್ ಮಾಡುವ ಪ್ರಯೋಜನಗಳು
ಸಣ್ಣ ಅವಧಿಯೇ? ದೀರ್ಘ ಪ್ರಯೋಜನಗಳು

ನಿಮ್ಮ ಹೋಮ್ ಇನ್ಶೂರೆನ್ಸ್ ಉಪಯೋಗವಾಗದೆ ಹೋಗಬಹುದು ಎಂಬ ಚಿಂತೆಯೇ? ನಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳಲ್ಲಿ ಅವಧಿಯನ್ನು ಆಯ್ಕೆ ಮಾಡುವ ಅನುಕೂಲತೆ ಇದೆ. ನಮ್ಮ ಹೋಮ್ ಇನ್ಶೂರೆನ್ಸ್ ಪರಿಹಾರಗಳ ಅವಧಿಯು 1 ರಿಂದ 5 ವರ್ಷಗಳವರೆಗೆ ಇರುತ್ತದೆ.

45% ವರೆಗಿನ ರಿಯಾಯಿತಿ ಆನಂದಿಸಿ
45% ವರೆಗಿನ ರಿಯಾಯಿತಿ ಆನಂದಿಸಿ
ಈಗ ಎಚ್‌ಡಿಎಫ್‌ಸಿ ಎರ್ಗೋ ರೆಂಟರ್ಸ್ ಹೋಮ್ ಇನ್ಶೂರೆನ್ಸ್‌ನೊಂದಿಗೆ ನಿಮ್ಮ ಕನಸಿನ ಮನೆಗೆ ರಕ್ಷಣೆ ಪಡೆಯಿರಿ, ಭದ್ರತಾ ರಿಯಾಯಿತಿ, ಸಂಬಳದಾರರ ರಿಯಾಯಿತಿ, ಇಂಟರ್ಕಾಮ್ ರಿಯಾಯಿತಿ, ದೀರ್ಘಾವಧಿಯ ರಿಯಾಯಿತಿ - ಹೀಗೆ ಅಸಂಖ್ಯಾತ ರಿಯಾಯಿತಿಗಳನ್ನು ಪಡೆಯಿರಿ.
₹25 ಲಕ್ಷದವರೆಗೆ ಕವರ್ ಆಗುವ ವಸ್ತುಗಳು
₹25 ಲಕ್ಷದವರೆಗೆ ಕವರ್ ಆಗುವ ವಸ್ತುಗಳು
ನಿಮ್ಮ ವಸ್ತುಗಳು ಕೇವಲ ಭೌತಿಕ ಸ್ವತ್ತುಗಳಲ್ಲ. ಅವು ನೆನಪುಗಳನ್ನು, ಅಚ್ಚಳಿಯದ ಭಾವನಾತ್ಮಕ ನಂಟನ್ನು ಹೊಂದಿವೆ. ಮನೆಯ ವಸ್ತುಗಳ ನಿರ್ದಿಷ್ಟ ಪಟ್ಟಿ ಒದಗಿಸದೆ, ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು ನಿಮ್ಮ ಎಲ್ಲಾ ಸ್ವತ್ತುಗಳನ್ನು (₹25 ಲಕ್ಷದವರೆಗೆ) ಕವರ್ ಮಾಡುವ ಆಯ್ಕೆ ನೀಡುತ್ತವೆ.
ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್
ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು ಕವರ್ ಆಗುತ್ತವೆ
ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಲ್ಲದೆ ಜೀವನ ಹೇಗಿರುತ್ತದೆ ಎಂದು ಎಂದಾದರೂ ಯೋಚಿಸಿದ್ದೀರಾ? ನಿಮಗೆ ಆ ಪರಿಸ್ಥಿತಿ ಬರುವುದು ನಮಗಂತೂ ಇಷ್ಟವಿಲ್ಲ. ದಶಕಗಳ ನೆನಪು ಮತ್ತು ಬೆಲೆಬಾಳುವ ಮಾಹಿತಿ ಇರುವ ಲ್ಯಾಪ್ಟಾಪ್ ಅಥವಾ ಇತರ ಯಾವುದೇ ಎಲೆಕ್ಟ್ರಾನಿಕ್ ವಸ್ತು ಆಗಿರಬಹುದು, ಇನ್ನಷ್ಟು ಓದಿ...

ಏನನ್ನು ಒಳಗೊಂಡಿದೆ - ಬಿಲ್ಡಿಂಗ್ ಇನ್ಶೂರೆನ್ಸ್ ಪಾಲಿಸಿ ಕವರೇಜ್?

ಬೆಂಕಿ

ಬೆಂಕಿ

ನಿಮ್ಮ ಕನಸಿನ ಮನೆಯು ಬೆಂಕಿಗೆ ಆಹುತಿಯಾಗಬಹುದು.. ಬೆಂಕಿಯಿಂದ ಉಂಟಾದ ಹಾನಿಗಳನ್ನು ನಾವು ಕವರ್ ಮಾಡುತ್ತೇವೆ, ಇದರಿಂದ ನೀವು ಮತ್ತೆ ಮನೆ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.

ದರೋಡೆ ಮತ್ತು ಕಳ್ಳತನ

ದರೋಡೆ ಮತ್ತು ಕಳ್ಳತನ

ಕಳ್ಳರು ನಿಮ್ಮ ಅಮೂಲ್ಯ ಒಡವೆಗಳು, ಇತರೆ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಬಹುದು. ಅವುಗಳಿಗೆ ರಕ್ಷಣೆ ಒದಗಿಸಿ ನೀವು ನೆಮ್ಮದಿಯಿಂದ ಇರಬಹುದು

ವಿದ್ಯುತ್ ಅವಘಡ

ವಿದ್ಯುತ್ ಅವಘಡ

ಗೃಹೋಪಯೋಗಿ ವಸ್ತುಗಳಿಲ್ಲದೆ ನಮ್ಮ ಜೀವನವನ್ನು ಊಹಿಸಿಕೊಳ್ಳುವುದು ಸಾಧ್ಯವಿಲ್ಲ... ಅವು ಕೆಟ್ಟು ಹೋದಾಗ ಕವರೇಜ್ ಪಡೆಯಲು ಅವುಗಳನ್ನು ಇನ್ಶೂರ್ ಮಾಡಿಸಿ

ನೈಸರ್ಗಿಕ ವಿಕೋಪಗಳು

ನೈಸರ್ಗಿಕ ವಿಕೋಪಗಳು

ಭಾರತದ 68% ಭೂಮಿ ಬರಗಾಲಕ್ಕೆ, 60% ಭೂಕಂಪಗಳಿಗೆ, 12% ಪ್ರವಾಹಕ್ಕೆ ಮತ್ತು 8% ಸೈಕ್ಲೋನ್‌ಗಳಿಗೆ ಗುರಿಯಾಗುತ್ತದೆ ಎಂದು ನಿಮಗೆ ತಿಳಿದಿದೆಯೇ? ಗೊತ್ತಿರಲಿಕ್ಕಿಲ್ಲ  ಇನ್ನಷ್ಟು ಓದಿ...

ಮಾನವನಿರ್ಮಿತ ಅಪಾಯಗಳು

ಮಾನವನಿರ್ಮಿತ ಅಪಾಯಗಳು

ಸಂಕಷ್ಟದ ಸಮಯಗಳು ನಿಮ್ಮ ಮನೆ ಹಾಗೂ ಮನಸ್ಸಿನ ನೆಮ್ಮದಿಗಳೆರಡರ ಮೇಲೆಯೂ ಪ್ರಭಾವ ಬೀರಬಹುದು. ನಮ್ಮ ಹೋಮ್ ಇನ್ಶೂರೆನ್ಸ್ ಪರಿಹಾರಗಳೊಂದಿಗೆ ನಿಮ್ಮ ಮನೆಯನ್ನು ಮುಷ್ಕರ, ಗಲಭೆ, ಭಯೋತ್ಪಾದನೆ ಮತ್ತು ದುರುದ್ದೇಶಪೂರಿತ ಹಾನಿಯಿಂದ ರಕ್ಷಿಸಿ.

ಆಕ್ಸಿಡೆಂಟಲ್ ಹಾನಿ

ಆಕ್ಸಿಡೆಂಟಲ್ ಹಾನಿ

ಫಿಕ್ಸ್ಚರ್‌ಗಳು ಮತ್ತು ಸ್ಯಾನಿಟರಿ ಫಿಟ್ಟಿಂಗ್‌ಗಳಿಗೆ ಖರ್ಚು ಮಾಡಿದಿರಾ? ನಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ಅಪಘಾತದ ಹಾನಿಯ ವಿರುದ್ಧ ಅವುಗಳನ್ನು ಸುರಕ್ಷಿತವಾಗಿಸಿ ನಿಶ್ಚಿಂತೆಯಿಂದಿರಿ.

ಪರ್ಯಾಯ ವಸತಿ

ಪರ್ಯಾಯ ವಸತಿ

ಈ ಸಂದರ್ಭದಲ್ಲಿ ಮನೆ ಬದಲಾಯಿಸುವ ಖರ್ಚುಗಳು, ಪರ್ಯಾಯ/ಹೋಟೆಲ್ ವಸತಿಗಾಗಿ ಬಾಡಿಗೆ, ತುರ್ತಿನ ಖರೀದಿಗಳು, ಮತ್ತು ಬ್ರೋಕರೇಜ್ಇನ್ನಷ್ಟು ಓದಿ...

ಬಿಲ್ಡಿಂಗ್ ಇನ್ಶೂರೆನ್ಸ್ ಕವರೇಜ್‌ನಲ್ಲಿ ಏನನ್ನು ಒಳಗೊಂಡಿಲ್ಲ?

ಯುದ್ಧ

ಯುದ್ಧ

ಯುದ್ಧ, ಆಕ್ರಮಣ, ಅನ್ಯದೇಶದ ಶತ್ರುಗಳ ಚಟುವಟಿಕೆಗಳು, ಪ್ರತಿಕೂಲತೆ ಮುಂತಾದವುಗಳಿಂದ ಉಂಟಾಗುವ ನಷ್ಟ/ಹಾನಿಗಳು. ಕವರ್ ಆಗುವುದಿಲ್ಲ.

ಅಮೂಲ್ಯ ಸಂಗ್ರಾಹಕಗಳು

ಅಮೂಲ್ಯ ಸಂಗ್ರಾಹಕಗಳು

ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಮುಂತಾದವುಗಳಿಗೆ ಆದ ನಷ್ಟಗಳು ಕವರ್ ಆಗುವುದಿಲ್ಲ.

ಹಳೆಯ ವಸ್ತುಗಳು

ಹಳೆಯ ವಸ್ತುಗಳು

ನಿಮ್ಮ ಅಮೂಲ್ಯ ವಸ್ತುಗಳೊಂದಿಗೆ ನಿಮಗೆ ಭಾವನಾತ್ಮಕ ಸಂಬಂಧವಿರುತ್ತದೆ ಎಂಬುದು ನಮ್ಮ ಗಮನದಲ್ಲಿದೆ. ಆದರೆ 10 ವರ್ಷಕ್ಕಿಂತ ಹಳೆಯದಾದ ವಸ್ತುಗಳನ್ನು ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

ಅಡ್ಡ ಪರಿಣಾಮದಿಂದಾದ ನಷ್ಟ

ಅಡ್ಡ ಪರಿಣಾಮದಿಂದಾದ ನಷ್ಟ

ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ

ಉದ್ದೇಶಪೂರ್ವಕ ದುರ್ನಡತೆ

ಉದ್ದೇಶಪೂರ್ವಕ ದುರ್ನಡತೆ

ನಿಮ್ಮ ಅನಿರೀಕ್ಷಿತ ನಷ್ಟಗಳು ಖಂಡಿತವಾಗಿಯೂ ಕವರ್ ಆಗುತ್ತವೆ, ಆದರೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಕವರ್ ಆಗುವುದಿಲ್ಲ

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.

ಶಿಥಿಲಗೊಳ್ಳುವಿಕೆ

ಶಿಥಿಲಗೊಳ್ಳುವಿಕೆ

ಸಾಮಾನ್ಯ ಶಿಥಿಲಗೊಳ್ಳುವಿಕೆ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಹೋಮ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.

ಭೂಮಿಯ ವೆಚ್ಚ

ಭೂಮಿಯ ವೆಚ್ಚ

ಕೆಲವು ಸಂದರ್ಭಗಳಲ್ಲಿ, ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

ನಿರ್ಮಾಣ ಆಗುತ್ತಿರುವ ಕಟ್ಟಡ

ನಿರ್ಮಾಣ ಆಗುತ್ತಿರುವ ಕಟ್ಟಡ

ಹೋಮ್ ಇನ್ಶೂರೆನ್ಸ್ ಕವರ್ ನೀವು ವಾಸಿಸುತ್ತಿರುವ ಮನೆಗೆ ಕವರ್ ನೀಡುತ್ತದೆ, ನಿರ್ಮಾಣದ ಹಂತದಲ್ಲಿರುವ ಯಾವುದೇ ಆಸ್ತಿಯು ಕವರ್ ಆಗುವುದಿಲ್ಲ.

ಯುದ್ಧ

ಯುದ್ಧ

ಯುದ್ಧ, ಆಕ್ರಮಣ, ಅನ್ಯದೇಶದ ಶತ್ರುಗಳ ಚಟುವಟಿಕೆಗಳು, ಪ್ರತಿಕೂಲತೆ ಮುಂತಾದವುಗಳಿಂದ ಉಂಟಾಗುವ ನಷ್ಟ/ಹಾನಿಗಳು. ಕವರ್ ಆಗುವುದಿಲ್ಲ.

ಅಮೂಲ್ಯ ಸಂಗ್ರಾಹಕಗಳು

ಅಮೂಲ್ಯ ಸಂಗ್ರಾಹಕಗಳು

ಬೆಲೆಬಾಳುವ ಲೋಹದ ಗಟ್ಟಿಗಳು, ಸ್ಟ್ಯಾಂಪ್‌ಗಳು, ಕಲಾಕೃತಿಗಳು, ನಾಣ್ಯಗಳು ಮುಂತಾದವುಗಳಿಗೆ ಆದ ನಷ್ಟಗಳು ಕವರ್ ಆಗುವುದಿಲ್ಲ.

ಹಳೆಯ ವಸ್ತುಗಳು

ಹಳೆಯ ವಸ್ತುಗಳು

ನಿಮ್ಮ ಅಮೂಲ್ಯ ವಸ್ತುಗಳೊಂದಿಗೆ ನಿಮಗೆ ಭಾವನಾತ್ಮಕ ಸಂಬಂಧವಿರುತ್ತದೆ ಎಂಬುದು ನಮ್ಮ ಗಮನದಲ್ಲಿದೆ. ಆದರೆ 10 ವರ್ಷಕ್ಕಿಂತ ಹಳೆಯದಾದ ವಸ್ತುಗಳನ್ನು ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.

ಅಡ್ಡ ಪರಿಣಾಮದಿಂದಾದ ನಷ್ಟ

ಅಡ್ಡ ಪರಿಣಾಮದಿಂದಾದ ನಷ್ಟ

ಪರಿಣಾಮಕಾರಿ ನಷ್ಟಗಳು ಎಂದರೆ ಅನಾಹುತದಿಂದ ಪರೋಕ್ಷವಾಗಿ ಉಂಟಾದ ನಷ್ಟಗಳು. ಅಂತಹ ನಷ್ಟಗಳು ಕವರ್ ಆಗುವುದಿಲ್ಲ

ಉದ್ದೇಶಪೂರ್ವಕ ದುರ್ನಡತೆ

ಉದ್ದೇಶಪೂರ್ವಕ ದುರ್ನಡತೆ

ನಿಮ್ಮ ಅನಿರೀಕ್ಷಿತ ನಷ್ಟಗಳು ಖಂಡಿತವಾಗಿಯೂ ಕವರ್ ಆಗುತ್ತವೆ, ಆದರೆ ಉದ್ದೇಶಪೂರ್ವಕವಾಗಿ ಹಾನಿ ಮಾಡಿದ್ದರೆ ಅದು ಕವರ್ ಆಗುವುದಿಲ್ಲ

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ನಷ್ಟ

ಥರ್ಡ್ ಪಾರ್ಟಿ ನಿರ್ಮಾಣದ ಕೆಲಸಗಳಿಂದ ನಿಮ್ಮ ಆಸ್ತಿಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ.

ಶಿಥಿಲಗೊಳ್ಳುವಿಕೆ

ಶಿಥಿಲಗೊಳ್ಳುವಿಕೆ

ಸಾಮಾನ್ಯ ಶಿಥಿಲಗೊಳ್ಳುವಿಕೆ ಅಥವಾ ನಿರ್ವಹಣೆ/ನವೀಕರಣವನ್ನು ನಿಮ್ಮ ಹೋಮ್ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ.

ಭೂಮಿಯ ವೆಚ್ಚ

ಭೂಮಿಯ ವೆಚ್ಚ

ಕೆಲವು ಸಂದರ್ಭಗಳಲ್ಲಿ, ಈ ಹೋಮ್ ಇನ್ಶೂರೆನ್ಸ್ ಪಾಲಿಸಿ ಭೂಮಿಯ ವೆಚ್ಚವನ್ನು ಕವರ್ ಮಾಡುವುದಿಲ್ಲ.

ನಿರ್ಮಾಣ ಆಗುತ್ತಿರುವ ಕಟ್ಟಡ

ನಿರ್ಮಾಣ ಆಗುತ್ತಿರುವ ಕಟ್ಟಡ

ಹೋಮ್ ಇನ್ಶೂರೆನ್ಸ್ ಕವರ್ ನೀವು ವಾಸಿಸುತ್ತಿರುವ ಮನೆಗೆ ಕವರ್ ನೀಡುತ್ತದೆ, ನಿರ್ಮಾಣದ ಹಂತದಲ್ಲಿರುವ ಯಾವುದೇ ಆಸ್ತಿಯು ಕವರ್ ಆಗುವುದಿಲ್ಲ.

ಹೋಮ್ ಬಿಲ್ಡಿಂಗ್ ಇನ್ಶೂರೆನ್ಸ್ ಪಾಲಿಸಿ ಅಡಿ ಐಚ್ಛಿಕ ಕವರ್

ಪೋರ್ಟೆಬಲ್ ಎಲೆಕ್ಟ್ರಾನಿಕ್ ಉಪಕರಣಕ್ಕೆ ಕವರ್
ನೀವು ಎಲ್ಲೇ ಇದ್ದರೂ ಸರಿ, ನಿಮ್ಮ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ರಕ್ಷಣೆ ಒದಗಿಸಿ.

ಲ್ಯಾಪ್‌ಟಾಪ್, ಕ್ಯಾಮರಾ, ದುರ್ಬೀನು, ಸಂಗೀತದ ಉಪಕರಣಗಳು ಮುಂತಾದ ಪೋರ್ಟೆಬಲ್ ಎಲೆಕ್ಟ್ರಾನಿಕ್ ವಸ್ತುಗಳು; ಸ್ಪೋರ್ಟ್ಸ್ ಗೇರ್ ದುಬಾರಿಯಷ್ಟೇ ಅಲ್ಲದೆ ಅವುಗಳು ಇಲ್ಲದೆ ನಿಮ್ಮ ದಿನನಿತ್ಯದ ಜೀವನ ಕಷ್ಟವಾಗಬಹುದು, ಅವುಗಳನ್ನು ಇದರಲ್ಲಿ ಕವರ್ ಮಾಡಲಾಗಿದೆ. ಆದರೆ 10 ವರ್ಷಗಳಿಗಿಂತ ಹಳೆಯ ಉಪಕರಣಗಳಿಗೆ ಈ ಪಾಲಿಸಿಯು ಕವರೇಜ್ ನೀಡುವುದಿಲ್ಲ.


Suppose you go on a vacation and your camera gets accidentally damaged, we shall cover against this loss of camera however it should not be an intentional damage. A nominal policy excess and deductible shall be applicable Jewellery & Valuables’s nominal.
ಒಡವೆ ಮತ್ತು ಬೆಲೆಬಾಳುವ ವಸ್ತುಗಳು
ಈಗ, ನಿಮ್ಮ ಅಮೂಲ್ಯ ಒಡವೆಗಳು ಕಳ್ಳತನದ ಯಾವುದೇ ಅಪಾಯದಿಂದ ರಕ್ಷಿಸಲ್ಪಡುತ್ತವೆ

ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳೆಂದರೆ ಚಿನ್ನ, ಬೆಳ್ಳಿ ಅಥವಾ ಯಾವುದೇ ಬೆಲೆಬಾಳುವ ಲೋಹದಿಂದ ಮಾಡಿದ ಆಭರಣಗಳು, ವಜ್ರದ ಆಭರಣಗಳು, ಕಲಾಕೃತಿಗಳು ಮತ್ತು ವಾಚ್‌ಗಳು. ಈ ಆ್ಯಡ್ ಆನ್ ಕವರ್ ಅನ್ನು ನಿಮ್ಮ ಹೋಮ್ ಕಂಟೆಂಟ್ (ಮನೆ ವಸ್ತುಗಳು) ವಿಮಾ ಮೊತ್ತದ ಗರಿಷ್ಠ 20% ವರೆಗೆ ಆಯ್ಕೆ ಮಾಡಬಹುದು. ನಿಮ್ಮ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳಿಗೆ ಆದ ನಷ್ಟವನ್ನು ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಯ ಆಧಾರದ ಮೇಲೆ ಕವರ್ ಮಾಡಲಾಗುತ್ತದೆ


ಒಂದು ವೇಳೆ ನಿಮ್ಮ ವಸ್ತುಗಳ ವಿಮಾ ಮೊತ್ತವು ₹5 ಲಕ್ಷವಾಗಿದ್ದರೆ, ನಿಮ್ಮ ಒಡವೆಗಳು ಮತ್ತು ಬೆಲೆಬಾಳುವ ವಸ್ತುಗಳನ್ನು ₹1 ಲಕ್ಷದವರೆಗೆ ಸುರಕ್ಷಿತವಾಗಿಸಬಹುದು. ನೀವು ಮನೆಯಲ್ಲಿ ಇಲ್ಲದಿರುವಾಗ ನಿಮ್ಮ ಬೆಲೆಬಾಳುವ ಇನ್ಶೂರ್ಡ್ ಒಡವೆಗಳು ಕಳುವಾಗಿವೆ ಎಂದುಕೊಳ್ಳಿ, ಅಂತಹ ಸಂದರ್ಭದಲ್ಲಿ ಕ್ಲೈಮ್ ಪ್ರಕ್ರಿಯೆಗೊಳಿಸಲು ನೀವು ಒಡವೆಗಳ ಮೂಲ ರಸೀತಿ ಸಲ್ಲಿಸಬೇಕಾಗುತ್ತದೆ. ಹೆಚ್ಚುವರಿ ಹಾಗೂ ಕಡಿತ ಅನ್ವಯವಾಗುತ್ತವೆ.
ಪೆಡಲ್ ಸೈಕಲ್
₹5 ಲಕ್ಷದವರೆಗೆ ನಿಮ್ಮ ಪೆಡಲ್ ಸೈಕಲ್ ಕವರ್ ಮಾಡಿ

ಈ ಕವರ್ ಅಡಿಯಲ್ಲಿ ಸ್ಟ್ಯಾಟಿಕ್ ಎಕ್ಸರ್ಸೈಸ್ ಸೈಕಲ್ ಮತ್ತು ಗೇರ್ ಇರುವ ಅಥವಾ ಇಲ್ಲದ ಪೆಡಲ್ ಸೈಕಲ್‌ಗೆ ಆಗುವ ನಷ್ಟವನ್ನು ನಾವು ಇನ್ಶೂರ್ ಮಾಡುತ್ತೇವೆ. ಇದು ಬೆಂಕಿ, ವಿಕೋಪಗಳು, ಕಳ್ಳತನ ಮತ್ತು ಅಪಘಾತಗಳಿಂದ ಉಂಟಾದ ನಷ್ಟಗಳನ್ನು ಕವರ್ ಮಾಡುತ್ತದೆ. ನಿಮ್ಮ ಇನ್ಶೂರ್ಡ್ ಸೈಕಲ್‌ನಿಂದ ಯಾವುದೇ ವ್ಯಕ್ತಿ ಅಥವಾ ಆಸ್ತಿಗೆ ಆದ ಥರ್ಡ್ ಪಾರ್ಟಿ ಹೊಣೆಗಾರಿಕೆಗೆ ರಕ್ಷಣೆ ಒದಗಿಸುತ್ತೇವೆ. ಆದರೆ, ಕೇವಲ ನಿಮ್ಮ ಪೆಡಲ್ ಸೈಕಲ್ ಟೈರ್‌ಗಳು ಮಾತ್ರ ಕಳ್ಳತನವಾದರೆ ಅಥವಾ ಹಾನಿಗೊಳಗಾದರೆ ಅದು ಕವರ್ ಆಗುವುದಿಲ್ಲ.


ಇದು ಹೇಗೆ ಕೆಲಸ ಮಾಡುತ್ತದೆ?: ನಿಮ್ಮ ಮುಂದಿನ ಸೈಕಲ್ ಪ್ರಯಾಣದಲ್ಲಿ ರಸ್ತೆ ಆಕ್ಸಿಡೆಂಟ್‌ನಿಂದ ನಿಮ್ಮ ಸೈಕಲ್ ರಿಪೇರಿ ಮಾಡಲಾಗದಷ್ಟು ಹಾನಿಗೊಳಗಾಗಿ ಸಂಪೂರ್ಣ ನಷ್ಟಕ್ಕೆ ಒಳಗಾದರೆ, ಇಂತಹ ಸಂದರ್ಭಗಳಲ್ಲಿ ನಾವು ನಷ್ಟಗಳನ್ನು ಕವರ್ ಮಾಡುತ್ತೇವೆ. ಒಂದು ವೇಳೆ ಇನ್ಶೂರ್ಡ್ ಸೈಕಲ್‌ನಿಂದ ಆದ ಅಪಘಾತದಿಂದ ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಯು ಗಾಯಗೊಂಡರೆ ನಾವು ಥರ್ಡ್ ಪಾರ್ಟಿ ಕ್ಲೈಮ್ ಕೂಡ ಕವರ್ ಮಾಡುತ್ತೇವೆ. ಹೆಚ್ಚುವರಿ ಮತ್ತು ಕಡಿತಗಳು ಅನ್ವಯವಾಗುತ್ತವೆ.
ಭಯೋತ್ಪಾದನೆಗೆ ಕವರ್
ಭಯೋತ್ಪಾದನೆಯಿಂದ ನಿಮ್ಮ ಮನೆಗಾದ ಹಾನಿಯನ್ನು ಕವರ್ ಮಾಡುತ್ತದೆ

ಭಯೋತ್ಪಾದಕರ ದಾಳಿಯಿಂದ ನಿಮ್ಮ ಕಟ್ಟಡ/ಮನೆಯ ವಸ್ತುಗಳು ನಷ್ಟವಾದರೆ ನಾವು ಅದನ್ನು ಕವರ್ ಮಾಡುತ್ತೇವೆ


ಇದು ಹೇಗೆ ಕೆಲಸ ಮಾಡುತ್ತದೆ?: ಭಯೋತ್ಪಾದಕ ದಾಳಿಯಿಂದಾಗಿ ನಿಮ್ಮ ಮನೆಗೆ ಉಂಟಾದ ಯಾವುದೇ ಹಾನಿಯನ್ನು ಕವರ್ ಮಾಡಲಾಗುತ್ತದೆ. ಈ ಹಾನಿಯು ಭಯೋತ್ಪಾದಕರ ದಾಳಿಯಿಂದ ಅಥವಾ ಸರ್ಕಾರದ ರಕ್ಷಣಾತ್ಮಕ ಸೇವೆಗಳ ಚಟುವಟಿಕೆಗಳಿಂದಲೂ ಆಗಿರಬಹುದು.

ಬಿಲ್ಡಿಂಗ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಹೌದು, ನೀವು ಒಂದು ಕಟ್ಟಡದಲ್ಲಿ ವಾಸಿಸುತ್ತಿದ್ದರೆ ನಮ್ಮ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪ್ಲಾನ್‌ನೊಂದಿಗೆ ನಿಮ್ಮ ಮನೆಯನ್ನು ರಕ್ಷಿಸಬಹುದು. ಪ್ರೀಮಿಯಂ ದರಗಳನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ
ಖಂಡಿತ ಇಲ್ಲ, ಆದರೆ ನೈಸರ್ಗಿಕ ವಿಕೋಪಗಳು, ಬೆಂಕಿ ಅವಘಡ ಅಥವಾ ಕಳ್ಳತನದ ಸಂದರ್ಭದಲ್ಲಿ ನಿಮ್ಮ ಅತ್ಯಮೂಲ್ಯ ಆಸ್ತಿಯನ್ನು ರಕ್ಷಿಸಲು ಹೋಮ್ ಇನ್ಶೂರೆನ್ಸ್ ಪ್ಲಾನ್‌ ಖರೀದಿಸುವುದು ಒಳ್ಳೆಯದು.
ಯಾವ ಹೋಮ್ ಇನ್ಶೂರೆನ್ಸ್ ಅಥವಾ ಬಿಲ್ಡಿಂಗ್ ಕವರ್ ಅಗ್ಗವಾಗಿರುತ್ತದೆ ಎಂದು ಹೇಳುವುದು ಕಷ್ಟ. ನಿಮಗೆ ಸರಿಹೊಂದುವ ಕವರ್ ಪಡೆಯಲು, ನಮ್ಮ ಹೋಮ್ ಇನ್ಶೂರೆನ್ಸ್ ಪ್ರೀಮಿಯಂ ಮತ್ತು ಸೂಕ್ತ ಪ್ಲಾನ್‌ಗಳನ್ನು ಪರಿಶೀಲಿಸಿ.
ಹೌದು, ಫರ್ನಿಚರ್, ಅಮೂಲ್ಯ ವಸ್ತುಗಳು, ಪೋರ್ಟೆಬಲ್ ಎಲೆಕ್ಟ್ರಾನಿಕ್ಸ್‌, ಇತ್ಯಾದಿಗಳಿಗೆ ಕವರ್ ಒದಗಿಸುತ್ತೇವೆ.
ನಿಮ್ಮ ಮನೆಗೆ ರಚನಾತ್ಮಕ ಹಾನಿಯಾದ ಸಂದರ್ಭದಲ್ಲಿ ಪರ್ಯಾಯ ವಸತಿಗಾಗಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ. ಆದ್ದರಿಂದ ಪರ್ಯಾಯ ವಾಸದ ಸ್ಥಳಕ್ಕೆ ಹೋಗುವುದು, ಪ್ಯಾಕಿಂಗ್, ಬಾಡಿಗೆ ಮತ್ತು ಬ್ರೋಕರೇಜ್‌ಗಾಗಿ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.
ಮನೆಯ ನಿಜವಾದ ಮಾಲೀಕರ ಹೆಸರಿನಲ್ಲಿ ಆಸ್ತಿಯನ್ನು ಇನ್ಶೂರ್ ಮಾಡಿಸಬಹುದು. ಅಲ್ಲದೆ, ಮಾಲೀಕರು ಮತ್ತು ನಿಮ್ಮ ಹೆಸರಿನಲ್ಲಿ ಜಂಟಿಯಾಗಿ ಇನ್ಶೂರ್ ಮಾಡಿಸಬಹುದು.
ವೈಯಕ್ತಿಕ ವಸತಿ ನಿವೇಶನಗಳನ್ನು ಇನ್ಶೂರ್ ಮಾಡಿಸಬಹುದು. ಬಾಡಿಗೆದಾರರಾಗಿ ನಿಮ್ಮ ಮನೆಯ ವಸ್ತುಗಳನ್ನು ಕವರ್ ಮಾಡಬಹುದು.
ನಿರ್ಮಾಣಗೊಳ್ಳುತ್ತಿರುವ ಆಸ್ತಿಯನ್ನು ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ. ಹಾಗೆಯೇ, ಕಚ್ಚಾ ನಿರ್ಮಾಣವನ್ನೂ ಕವರ್ ಮಾಡಲಾಗುವುದಿಲ್ಲ.
ದರೋಡೆಗೆ ಸಂಬಂಧಪಟ್ಟ ಕ್ಲೈಮ್‌ಗಳಿಗೆ FIR ಕಡ್ಡಾಯ.
ನಿಮ್ಮ ಮನೆಯ ವಸ್ತುಗಳನ್ನು ರಿಪ್ಲೇಸ್‌ಮೆಂಟ್ ಆಧಾರದ ಮೇಲೆ ಪರಿಗಣಿಸಲಾಗುತ್ತದೆ, ಹಳೆಯ ವಸ್ತುಗಳಿಗೆ ಹೊಸ ವಸ್ತುಗಳು. ವಸ್ತುಗಳ ಬೆಲೆಯು ಇಂದಿನ ದಿನಾಂಕದ ಪ್ರಕಾರ ಅದೇ ರೀತಿಯ ಮೇಕ್, ಮಾಡೆಲ್ ಹಾಗೂ ಸಾಮರ್ಥ್ಯಗಳಿರುವ ಹೊಸ ವಸ್ತುವನ್ನು ಖರೀದಿಸುವ ವೆಚ್ಚಕ್ಕೆ ಸಮನಾಗಿರುತ್ತದೆ. ಅದನ್ನು ಮೊದಲಿಗೆ ಖರೀದಿಸಿದ ಬೆಲೆಗಿಂತ ಇದು ಹೆಚ್ಚು ಅಥವಾ ಕಡಿಮೆಯಾಗಿರಬಹುದು. ನಿಮ್ಮ ನಷ್ಟದ ಮಿತಿಯಲ್ಲಿ 10 ಲಕ್ಷದವರೆಗಿನ ವಿಮಾ ಮೊತ್ತಕ್ಕೆ ಕವರ್ ಮಾಡುತ್ತೇವೆ.
ಗ್ಯಾಸ್ ಸಿಲಿಂಡರ್‌ ಸಿಡಿತದಿಂದ ಸಂಭವಿಸಿದ ಬೆಂಕಿ ಅನಾಹುತವನ್ನು ಹೋಮ್ ಪಾಲಿಸಿ ಅಡಿಯಲ್ಲಿ ಕವರ್ ಮಾಡಲಾಗುತ್ತದೆ.
ಹೋಮ್ ಇನ್ಶೂರೆನ್ಸ್ ಪಾಲಿಸಿಗಳು ಸಾಮಾನ್ಯವಾಗಿ ಮರುನಿರ್ಮಾಣದ ವೆಚ್ಚಗಳನ್ನು ಕವರ್ ಮಾಡುತ್ತವೆ, ಆದರೆ ನಿಮ್ಮ ಆಸ್ತಿಯ ನಿಜವಾದ ಬೆಲೆ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಮೂಲಕ ನಿಮ್ಮ ಮನೆಯನ್ನು ನೋಂದಾಯಿತ ಒಪ್ಪಂದದ ಬೆಲೆ ಅಥವಾ ರೆಡಿ ರೆಕನರ್ ದರದಲ್ಲಿ ನೀಡುವ ಮೂಲಕ ನಿಮಗೆ ಸಮಗ್ರ ಕವರೇಜ್ ಒದಗಿಸುತ್ತೇವೆ.
ನಮ್ಮ ವೆಬ್‌ಸೈಟ್ hdfcergo.com ಮೂಲಕ ನಿಮ್ಮ ಪಾಲಿಸಿ ವಿವರಗಳನ್ನು ಆನ್ಲೈನ್‌ನಲ್ಲಿ ಬದಲಾಯಿಸಬಹುದು. ವೆಬ್‌ಸೈಟ್‌ನಲ್ಲಿರುವ 'ಸಹಾಯ' ವಿಭಾಗಕ್ಕೆ ಭೇಟಿ ನೀಡಿ ಕೋರಿಕೆ ಸಲ್ಲಿಸಿ. ಕೋರಿಕೆ ಮಾಡಲು ಅಥವಾ ಸೇವೆಗಳನ್ನು ಹುಡುಕಲು, ಇಲ್ಲಿ ಕ್ಲಿಕ್ ಮಾಡಿ
ಹೋಮ್ ಇನ್ಶೂರೆನ್ಸ್ ಬೇರ್ಪಟ್ಟ ಗ್ಯಾರೇಜುಗಳು ಮತ್ತು ಶೆಡ್‌ಗಳನ್ನು ರಕ್ಷಿಸುತ್ತದೆ. ಆದರೆ ಪ್ರಾಪರ್ಟಿ ಇನ್ಶೂರೆನ್ಸ್ ಇವುಗಳನ್ನು ಕವರ್ ಮಾಡುವುದಿಲ್ಲ. ಪೀಠೋಪಕರಣಗಳು, ಬಟ್ಟೆ, ದೊಡ್ಡ ಅಥವಾ ಸಣ್ಣ ಗೃಹೋಪಯೋಗಿ ಸಲಕರಣೆಗಳು ಮುಂತಾದ ವೈಯಕ್ತಿಕ ಸ್ವತ್ತುಗಳನ್ನು ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಮಾಡಲಾಗುತ್ತದೆ, ಪ್ರಾಪರ್ಟಿ ಇನ್ಶೂರೆನ್ಸ್ ಅಡಿಯಲ್ಲಿ ಅಲ್ಲ. ನಿಮ್ಮ ಮನೆ ಹಾನಿಗೊಳಗಾಗಿದ್ದರೆ ಹಾಗೂ ವಾಸಿಸಲು ಯೋಗ್ಯವಿಲ್ಲದಿದ್ದರೆ ಆ ಸಮಯದಲ್ಲಿ ಜೀವನ ನಡೆಸಲು ತಗುಲುವ ತಾತ್ಕಾಲಿಕ ಖರ್ಚುಗಳಿಗಾಗಿ ಹೋಮ್ ಇನ್ಶೂರೆನ್ಸ್ ಅಡಿಯಲ್ಲಿ ಮರುಪಾವತಿ ಮಾಡಲಾಗುತ್ತದೆ, ಪ್ರಾಪರ್ಟಿ ಇನ್ಶೂರೆನ್ಸ್ ಅಡಿಯಲ್ಲಿ ಅಲ್ಲ.
ಮನೆ ಎನ್ನುವುದು ನಿಸ್ಸಂದೇಹವಾಗಿ ಒಂದು ದುಬಾರಿಯಾದ ಆದರೆ ಅಮೂಲ್ಯವಾದ ಆಸ್ತಿಯಾಗಿದೆ. ಭೂಕಂಪ ಹಾಗೂ ಇತರ ನೈಸರ್ಗಿಕ ವಿಕೋಪಗಳಿಂದ ನಿಮ್ಮ ಮನೆ ಗಂಭೀರವಾಗಿ ಹಾನಿಗೊಳಗಾಗಬಹುದು. ಇದು ಈ ಅಪಾಯಗಳನ್ನು ಕವರ್ ಮಾಡುತ್ತದೆ: 1. ಅತಿಥಿಗಳಿಗೆ ಹಾಗೂ ಥರ್ಡ್ ಪಾರ್ಟಿಗಳಿಗೆ ಗಾಯಗಳಾದಾಗ ಬರುವ ಹೊಣೆಗಾರಿಕೆ. 2. ನೈಸರ್ಗಿಕ ವಿಪತ್ತುಗಳು ಹಾಗೂ ಮಾನವನಿರ್ಮಿತ ಘಟನೆಗಳು. 3.ತಾತ್ಕಾಲಿಕ ಜೀವನ ನಿರ್ವಹಣೆ ಖರ್ಚುಗಳು. 4. ಬೆಲೆಬಾಳುವ ವೈಯಕ್ತಿಕ ಸ್ವತ್ತುಗಳು ಹಾಗೂ ಅಮೂಲ್ಯ ವಸ್ತುಗಳಿಗೆ ಹಾನಿ
ನೀವು ಬಾಡಿಗೆ ಮನೆಯಲ್ಲಿದ್ದರೂ, ನಿಮ್ಮ ಸ್ವಂತದ ಬೆಲೆಬಾಳುವ ವಸ್ತುಗಳಿಗೆ ಕವರೇಜ್ ಹೊಂದಿರಬೇಕು. ಮನೆ ಮಾಲೀಕರು ಹೋಮ್ ಇನ್ಶೂರೆನ್ಸ್ ಹೊಂದಿದ್ದರೂ, ಅದರಲ್ಲಿ ನಿಮ್ಮ ವೈಯಕ್ತಿಕ ವಸ್ತುಗಳು ಕವರ್ ಆಗುವುದಿಲ್ಲ. ಆದ್ದರಿಂದ ನೈಸರ್ಗಿಕ ವಿಕೋಪಗಳು ಅಥವಾ ಮಾನವನಿರ್ಮಿತ ಘಟನೆಗಳ ವಿರುದ್ಧ ನಿಮ್ಮ ಬೆಲೆಬಾಳುವ ವಸ್ತುಗಳಿಗೆ ಕವರೇಜ್ ಪಡೆಯಲು ಹೋಮ್ ಇನ್ಶೂರೆನ್ಸ್ ಖರೀದಿಸಬೇಕು.
ಹೌದು, ಪ್ರತಿಯೊಬ್ಬರೂ ತಮ್ಮ ಭಾಗದ ಆಸ್ತಿಗೆ ಪ್ರತ್ಯೇಕ ಹೋಮ್ ಇನ್ಶೂರೆನ್ಸ್ ಪಡೆಯಬಹುದು.
ನೀವು ಪಾಲಿಸಿಯನ್ನು ಖರೀದಿಸಿದಾಗ ಕಟ್ಟಡದ ವಿಮಾ ಮೊತ್ತದ ಮಿತಿಯನ್ನು ಯಾವಾಗಲೂ ವಿಮಾದಾತರು ನಿಗದಿಪಡಿಸುತ್ತಾರೆ. ಇದು ಪಾಲಿಸಿಯ ಅಡಿಯಲ್ಲಿ ವಿಮಾದಾತರು ಪಾವತಿಸಲು ಜವಾಬ್ದಾರರಾಗಿರುವ ಮಿತಿಯಾಗಿದೆ. ಇದು ಇನ್ಶೂರೆನ್ಸ್‌ಗೆ ಪಾವತಿಸಬೇಕಾದ ಪ್ರೀಮಿಯಂ ಅನ್ನು ನಿರ್ಧರಿಸಲು ದರವನ್ನು ಅನ್ವಯಿಸುವ ಮೊತ್ತವಾಗಿದೆ. ವಿಮಾ ಮೊತ್ತವು ಸಾಮಾನ್ಯವಾಗಿ ಇನ್ಶೂರ್ ಮಾಡಬೇಕಾದ ಆಸ್ತಿಯ ನಿಜವಾದ ಮೌಲ್ಯವನ್ನು ಪ್ರತಿನಿಧಿಸುತ್ತದೆ. ವಿವಿಧ ಅಂಶಗಳನ್ನು ಅವಲಂಬಿಸಿ ಈ ಮೌಲ್ಯವು ಒಂದು ವಿಮಾದಾತರಿಂದ ಇನ್ನೊಬ್ಬರಿಗೆ ಭಿನ್ನವಾಗಿರಬಹುದು. ಎಚ್‌ಡಿಎಫ್‌ಸಿ ಎರ್ಗೋದ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು ಬಾಡಿಗೆ ನಷ್ಟ, ಪರ್ಯಾಯ ವಸತಿ ವೆಚ್ಚಗಳು ಮುಂತಾದ ಉಪಯುಕ್ತ ಆ್ಯಡ್-ಆನ್ ಕವರ್‌ಗಳೊಂದಿಗೆ ₹ 10 ಕೋಟಿಯವರೆಗಿನ ಮನೆ ರಚನೆಗಳು ಮತ್ತು ವಸ್ತುಗಳನ್ನು ಕವರ್ ಮಾಡುತ್ತವೆ.
ಕಟ್ಟಡದ ಇನ್ಶೂರ್ಡ್ ಮೌಲ್ಯವು ಆಸ್ತಿಯ ನಿಜವಾದ ಮೌಲ್ಯವಾಗಿದೆ. ವಿಮಾ ಮೊತ್ತದ ನಿಜವಾದ ಮೌಲ್ಯಕ್ಕೆ ನೀವು ನಿಮ್ಮ ಕಟ್ಟಡವನ್ನು ಗರಿಷ್ಠವಾಗಿ ಸುರಕ್ಷಿತಗೊಳಿಸಬಹುದು.

ಬಿಲ್ಡಿಂಗ್ ಇನ್ಶೂರೆನ್ಸ್ ಮೇಲಿನ ಇತ್ತೀಚಿನ ಬ್ಲಾಗ್‌ಗಳು

 

ಇತರ ಸಂಬಂಧಪಟ್ಟ ಲೇಖನಗಳು

 
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x