ಅಪಘಾತಗಳು ಭಾವನಾತ್ಮಕವಾಗಿ, ದೈಹಿಕವಾಗಿ ಮತ್ತು ಆರ್ಥಿಕವಾಗಿ ಜನರನ್ನು ಜರ್ಜರಿತರನ್ನಾಗಿ ಮಾಡುವ ಜೊತೆಗೆ ಜೀವಮಾನದ ಉಳಿತಾಯವನ್ನು ಖಾಲಿ ಮಾಡುತ್ತವೆ. ಅಂತಹ ಆಘಾತಕಾರಿ ಸಮಯಗಳಲ್ಲಿ ಹಣಕಾಸಿನ ನೆರವು ನೀಡಲು, ನಾವು ಎಚ್‌ಡಿಎಫ್‌ಸಿ ಎರ್ಗೋದ ಒಂದು ಪ್ರಮಾಣಿತ ವೈಯಕ್ತಿಕ ಅಪಘಾತ ಯೋಜನೆಯಾದ ಸರಳ್ ಸುರಕ್ಷಾ ಬಿಮಾ ಪ್ಲಾನ್ ಅನ್ನು ಒದಗಿಸುತ್ತೇವೆ. ಈ ಹೆಲ್ತ್ ಇನ್ಶೂರೆನ್ಸ್ ಪಾಲಿಸಿ ಆಕಸ್ಮಿಕ ಸಾವು, ಶಾಶ್ವತ ಸಂಪೂರ್ಣ ಅಂಗವೈಕಲ್ಯ ಅಥವಾ ಶಾಶ್ವತ ಭಾಗಶಃ ಅಂಗವೈಕಲ್ಯವನ್ನು ಕವರ್ ಮಾಡಲು ಒಟ್ಟು ಮೊತ್ತದ ಪರಿಹಾರವನ್ನು ಒದಗಿಸುತ್ತದೆ. ನಿಮ್ಮ ಅನುಪಸ್ಥಿತಿಯಲ್ಲಿ ನಿಮ್ಮ ಕುಟುಂಬದ ದಿನನಿತ್ಯದ ಕೆಲಸಗಳನ್ನು ಸುರಕ್ಷಿತಗೊಳಿಸಲು, ಎಚ್‌ಡಿಎಫ್‌ಸಿ ಎರ್ಗೋದ ಸರಳ್ ಸುರಕ್ಷಾ ಬಿಮಾ ಪಡೆಯುವುದು ಅಗತ್ಯವಾಗಿದೆ.
ಒಂದು ಪ್ರಮುಖ ಅಪಘಾತದಿಂದ ಸಾವು ಸಂಭವಿಸಬಹುದು. ಇನ್ಶೂರ್ಡ್ ವ್ಯಕ್ತಿಯು ಆಕ್ಸಿಡೆಂಟ್‌ನಲ್ಲಿ ಮರಣ ಹೊಂದಿದರೆ ನಮ್ಮ ಪಾಲಿಸಿಯು ವಿಮಾ ಮೊತ್ತದ 100% ವರೆಗೆ ಕವರ್ ಒದಗಿಸುತ್ತದೆ.
ಪ್ರಮುಖ ಅಪಘಾತಗಳು ಭವಿಷ್ಯವನ್ನೇ ನಿರ್ಧರಿಸುತ್ತವೆ. ಅಪಘಾತದಿಂದಾದ ಶಾಶ್ವತ ಸಂಪೂರ್ಣ ಅಂಗವಿಕಲತೆಗೆ ನಾವು ಮೂಲ ವಿಮಾ ಮೊತ್ತದ 100% ಹಣವನ್ನು ನೀಡುತ್ತೇವೆ.
ಅಪಘಾತವು ಇನ್ಶೂರ್ಡ್ ವ್ಯಕ್ತಿಯ ಶಾಶ್ವತ ಭಾಗಶಃ ಅಂಗವೈಕಲ್ಯಕ್ಕೆ ಕಾರಣವಾದರೆ, ಅಂತಹ ಸಂದರ್ಭದಲ್ಲಿ, ಈ ಪಾಲಿಸಿ PPD ಟೇಬಲ್ ಪ್ರಕಾರ ಪ್ರಯೋಜನಗಳನ್ನು ಒದಗಿಸುತ್ತದೆ.
ಆಯುಷ್ ವೈದ್ಯ ಪದ್ಧತಿ ಅಡಿಯಲ್ಲಿ ರೂಮ್, ಬೋರ್ಡಿಂಗ್, ನರ್ಸಿಂಗ್ ವೆಚ್ಚಗಳು, ICU ಮತ್ತು ಕನ್ಸಲ್ಟೇಶನ್, ಸರ್ಜನ್ ಶುಲ್ಕಗಳು, ರೋಗನಿರ್ಣಯಗಳ ಜೊತೆಗೆ ಅಪಘಾತದಿಂದಾಗುವ ಆಸ್ಪತ್ರೆ ದಾಖಲಾತಿ ವೆಚ್ಚಗಳೆಲ್ಲ ಕವರ್ ಆಗುವಂತೆ ಮೂಲ ವಿಮಾ ಮೊತ್ತದ 10% ವರೆಗೆ ಪರಿಹಾರ ಧನದ ರೂಪದಲ್ಲಿ ಪಡೆದುಕೊಳ್ಳಿ.
ತಾತ್ಕಾಲಿಕ ಸಂಪೂರ್ಣ ಅಂಗವೈಕಲ್ಯದ ಸಂದರ್ಭದಲ್ಲಿ ಒಂದು ವಾರಕ್ಕೆ ಮೂಲ ವಿಮಾ ಮೊತ್ತದ 0.2% ಹಣವನ್ನು, ಗರಿಷ್ಠ 100 ವಾರಗಳವರೆಗೆ ಪಡೆಯಿರಿ. ಇದು ನಿಮ್ಮ ವಾಸ್ತವಿಕ ವಿಮಾ ಮೊತ್ತಕ್ಕಿಂತ ಹೆಚ್ಚಾಗಿದೆ.
ಅಪಘಾತದಿಂದಾಗುವ ಆಸ್ಪತ್ರೆ ದಾಖಲಾತಿ ವೆಚ್ಚಗಳ ಅಡಿಯಲ್ಲಿ ದಂತ ಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಡೇಕೇರ್ ಚಿಕಿತ್ಸೆಗಳಿಂದಾಗುವ ಅಗತ್ಯವಿರುವ ಇತರ ವೆಚ್ಚಗಳಿಗೆ ಕವರ್ ಪಡೆಯಿರಿ
ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಲು ಪ್ರತಿ ಮಗುವಿಗೆ ಮೂಲ ವಿಮಾ ಮೊತ್ತದ 10% ಅನ್ನು ನಾವು ನಿಮಗೆ ನೀಡುತ್ತೇವೆ.
ಪ್ರತಿ ಕ್ಲೈಮ್ ಇಲ್ಲದ ವರ್ಷಕ್ಕೆ ಮೂಲ ವಿಮಾ ಮೊತ್ತದ 5% ಇಂದ ಗರಿಷ್ಠ 50% ವರೆಗೆ ಪಡೆಯಿರಿ.
ಪ್ರತಿ ಆಸ್ಪತ್ರೆ ದಾಖಲಾತಿಯ ಆಂಬ್ಯುಲೆನ್ಸ್ ಸೌಲಭ್ಯಗಳಿಗಾಗಿ ಗರಿಷ್ಠ ₹ 2000 ವರೆಗೆ ಪಡೆಯಿರಿ.
ಯುದ್ಧ, ಯುದ್ಧದಂತಹ ಘಟನೆ ಅಥವಾ ದಾಳಿ, ವಿದೇಶಿ ಶತ್ರುಗಳ ಕುಕೃತ್ಯ, ಶತ್ರುತ್ವಗಳು, ಆಂತರಿಕ ಯುದ್ಧ, ಬಂಡಾಯ, ಕ್ರಾಂತಿಗಳು, ಗಲಭೆಗಳು, ದಂಗೆಗಳು, ಮಿಲಿಟರಿ ಕಿತ್ತುಕೊಂಡ ಅಧಿಕಾರ, ವಶ, ಹಿಡಿತ, ಬಂಧನ, ನಿರ್ಬಂಧಗಳು ಮತ್ತು ಎಲ್ಲಾ ರೀತಿಯ ಸೆರೆಗೆ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.
ಉದ್ದೇಶಪೂರ್ವಕ ಸ್ವಂತ ಹಾನಿ, ಆತ್ಮಹತ್ಯೆ ಅಥವಾ ಆತ್ಮಹತ್ಯೆಯ ಪ್ರಯತ್ನದಿಂದ ಉಂಟಾದ ಗಾಯಗಳು ಅಥವಾ ಸಾವನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.
ಅಯಾನೀಕರಿಸುವ ವಿಕಿರಣದಿಂದ ಅಥವಾ ಯಾವುದೇ ನ್ಯೂಕ್ಲಿಯರ್ ಇಂಧನದ ರೇಡಿಯೋ ಆ್ಯಕ್ಟಿವಿಟಿಯಿಂದ ಅಥವಾ ನ್ಯೂಕ್ಲಿಯರ್ ಇಂಧನದ ದಹನದಿಂದ ಉಂಟಾದ ನ್ಯೂಕ್ಲಿಯರ್ ತ್ಯಾಜ್ಯದಿಂದ ಆಗುವ ಮಾಲಿನ್ಯದಿಂದ ಆಗುವ ಗಾಯಗಳು ಅಥವಾ ಸಾವನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.
ಇನ್ಶೂರ್ಡ್ ವ್ಯಕ್ತಿಯು ಸ್ವಯಂ ಪ್ರೇರಣೆಯಿಂದ ತೊಡಗಿಕೊಳ್ಳುವ ಕಾನೂನುಬಾಹಿರ ಚಟುವಟಿಕೆಗಳು ಅಥವಾ ಯಾವುದೇ ಕಾನೂನು ಉಲ್ಲಂಘನೆ ಅಥವಾ ಕಾನೂನು ಉಲ್ಲಂಘನೆಯ ಪ್ರಯತ್ನದಿಂದ ಆಗುವ ಸಾವು ಆಥವಾ ಹಾನಿಗಳನ್ನು ನಾವು ಕವರ್ ಮಾಡುವುದಿಲ್ಲ.
ಎಚ್‌ಡಿಎಫ್‌ಸಿ ಎರ್ಗೋದ ಸರಳ್ ಸುರಕ್ಷಾ ಬಿಮಾ UIN: HDFPAIP21624V012021
ಪ್ರಾಡಕ್ಟ್ ಬಗ್ಗೆ ಇನ್ನಷ್ಟು ತಿಳಿಯಲು ಅಥವಾ ಖರೀದಿಸಲು 022 6242 6242 ನಂಬರ್‌ಗೆ ಕರೆ ಮಾಡಿ
ಮೇಲೆ ತಿಳಿಸಲಾದ ಸೇರ್ಪಡೆಗಳು, ಪ್ರಯೋಜನಗಳು, ಹೊರತುಪಡಿಸುವಿಕೆಗಳು ಮತ್ತು ಕಾಯುವ ಅವಧಿಗಳು ಸಾರಾಂಶ ರೂಪದಲ್ಲಿವೆ ಮತ್ತು ವಿವರಣಾತ್ಮಕ ಉದ್ದೇಶಕ್ಕಾಗಿ ಮಾತ್ರ ನೀಡಲ್ಪಟ್ಟಿವೆ. ಈ ಪ್ರಾಡಕ್ಟ್, ಅದರ ಕಾಯುವ ಅವಧಿಗಳು ಮತ್ತು ವೈದ್ಯಕೀಯ ಚಿಕಿತ್ಸೆಗಳ ವಿಮಾ ಮೊತ್ತದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು, ದಯವಿಟ್ಟು ಪಾಲಿಸಿ ದಾಖಲೆಗಳನ್ನು ನೋಡಿ.