ದೂರದರ್ಶನ ನಮ್ಮೆಲ್ಲರ ಜೀವನದ ಅವಿಭಾಜ್ಯ ಭಾಗವಾಗಿದೆ. LED ಮತ್ತು ಸ್ಮಾರ್ಟ್ ಟಿವಿಗಳಿಂದ ಹಿಡಿದು ಹೋಮ್ ಥಿಯೇಟರ್ ಸಿಸ್ಟಮ್‌ಗಳವರೆಗೆ, ನಮ್ಮ ಮನೆಯಲ್ಲಿದ್ದು ಮನರಂಜನೆ ನೀಡುತ್ತಿರುವ ಈ ಸಾಧನಗಳನ್ನು ಬದಲಾಯಿಸಲು ಅಥವಾ ರಿಪೇರಿ ಮಾಡಿಸಲು ತುಂಬಾ ಖರ್ಚಾಗುತ್ತದೆ. ನಿಮ್ಮ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗೆ TV ಇನ್ಶೂರೆನ್ಸ್‌ನಂತಹ ಆ್ಯಡ್-ಆನ್ ಹೊಂದಿರುವುದು ನಿಮ್ಮ ಹೈ-ಟೆಕ್ ಮನರಂಜನಾ ವ್ಯವಸ್ಥೆಯನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ. ಇದು ಬ್ರೇಕ್‌ಡೌನ್, ಕಳ್ಳತನ ಅಥವಾ ಹಾನಿಯ ವಿರುದ್ಧ ಪರಿಪೂರ್ಣ ರಕ್ಷಣೆಯಾಗಿ ಕೆಲಸ ಮಾಡುತ್ತದೆ.
ಅನೇಕ ಪಾಲಿಸಿಗಳು ಸಾಗಣೆ ಸಮಯದಲ್ಲಿ ಉಂಟಾಗುವ ಸಮಸ್ಯೆಗಳು ಮತ್ತು ಮನೆಯೊಳಗೆ ಸಂಭವಿಸುವ ಹಾನಿಗಳಿಗೆ ಹೊಂದಿಕೊಳ್ಳುವ ಕವರೇಜನ್ನು ಒದಗಿಸುತ್ತವೆ, ಜೊತೆಗೆ ರಿಮೋಟ್ ಕಂಟ್ರೋಲ್‌ಗಳು ಅಥವಾ ಸೌಂಡ್ ಸಿಸ್ಟಮ್‌ಗಳಂತಹ ಹೆಚ್ಚುವರಿ ಅಕ್ಸೆಸರಿಗಳನ್ನು ಕವರ್ ಮಾಡುವ ಆಯ್ಕೆಗಳನ್ನು ಒದಗಿಸುತ್ತವೆ. ಎಚ್‌ಡಿಎಫ್‌ಸಿ ಎರ್ಗೋದ ಸಮಗ್ರ ಹೋಮ್ ಇನ್ಶೂರೆನ್ಸ್ ಪ್ಲಾನ್‌ಗಳು, 24/7 ಸಹಾಯ ಮತ್ತು ತ್ವರಿತ ಸೇವೆ ಆಯ್ಕೆಗಳೊಂದಿಗೆ, TV ಇನ್ಶೂರೆನ್ಸ್ ನಿಮ್ಮ ಮನರಂಜನಾ ವ್ಯವಸ್ಥೆಯು ಯಾವುದೇ ಅಡೆತಡೆಯಿಲ್ಲದೆ ನಡೆಯುವುದನ್ನು ಖಚಿತಪಡಿಸುತ್ತವೆ.
ಸಾಮಾನ್ಯವಾಗಿ ಸಾಕಷ್ಟು ಹಣ ಖರ್ಚು ಮಾಡಿ TV ಖರೀದಿಸಿರುತ್ತಾರೆ. ಆದ್ದರಿಂದ, ಆಕಸ್ಮಿಕ ಹಾನಿ ಅಥವಾ ನಷ್ಟದ ಸಂದರ್ಭದಲ್ಲಿ ನಿಮಗೆ ಬೇಕಾಗುವ ರಕ್ಷಣೆ ಪಡೆಯಲು ಅದನ್ನು ಉತ್ತಮ ರೀತಿಯಲ್ಲಿ ಇನ್ಶೂರ್ ಮಾಡಿಸುವುದು ಸೂಕ್ತ. TV ಗಳಿಗಾಗಿ ಸಮಗ್ರ ಇನ್ಶೂರೆನ್ಸ್ ಪಾಲಿಸಿ ತೆಗೆದುಕೊಳ್ಳುವುದು ಕೆಳಗೆ ಪಟ್ಟಿ ಮಾಡಿದ ಅನೇಕ ಪ್ರಯೋಜನಗಳನ್ನು ಹೊಂದಿದೆ:
ಮೊತ್ತವು ಪ್ರೀಮಿಯಂ ವೆಚ್ಚ ಮತ್ತು ಅದರೊಂದಿಗೆ ಬರುವ ಕವರೇಜ್ ಅನ್ನು ಪ್ರಭಾವಿಸುವ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಅದರ ವಿವರ ಹೀಗಿದೆ:
ಬೆಂಕಿಯಿಂದ ಉಂಟಾಗುವ ಯಾವುದೇ ಹಾನಿಯ ವಿರುದ್ಧ ಟೆಲಿವಿಷನ್‌ಗೆ ಕವರೇಜ್ ನೀಡಲಾಗುತ್ತದೆ.
TV ಕಳುವಾಗುವುದರ ಬಗ್ಗೆ ಯೋಚಿಸುವುದೂ ಕಷ್ಟ. ಕಳ್ಳತನ ಅಥವಾ ದರೋಡೆಗಳ ಸಂದರ್ಭದಲ್ಲಿ ಹಣಕಾಸಿನ ಕವರೇಜ್ ನೀಡಲಾಗುತ್ತದೆ
ಹೊರಾಂಗಣದಲ್ಲಿ ಆದ ಯಾವುದೇ ಆಕ್ಸಿಡೆಂಟ್‌ನಿಂದಾಗಿ ಉಂಟಾದ ಹಾನಿಗಳು ಅಥವಾ ಟೆಲಿವಿಷನ್ ಸಾಗಿಸುವಾಗ (ವಿಮಾನದ ಮೂಲಕ ಅಲ್ಲ) ಉಂಟಾದ ಯಾವುದೇ ಹಾನಿಗಳನ್ನು ಟೆಲಿವಿಷನ್ ಇನ್ಶೂರೆನ್ಸ್‌ನಿಂದ ಕವರ್ ಮಾಡಲಾಗುತ್ತದೆ
ಯಾವುದೇ ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಿಕಲ್ ದೋಷದಿಂದ ಆಗುವ ಬ್ರೇಕ್‌ಡೌನ್‌ಗೆ ಕವರೇಜ್. ಈ ಸಂದರ್ಭದಲ್ಲಿ ರಿಪೇರಿ ಮತ್ತು ಬದಲಾವಣೆ ವೆಚ್ಚವನ್ನು ಕವರ್ ಮಾಡಲಾಗುತ್ತದೆ
ಸ್ವಾಭಾವಿಕ ಸವೆತ ಅಥವಾ ರಿಪೇರಿಯಿಂದ ಆಗುವ ನಷ್ಟಗಳನ್ನು ಕವರ್ ಮಾಡಲಾಗುವುದಿಲ್ಲ
ಉತ್ಪಾದನಾ ದೋಷಗಳು ಅಥವಾ ಉತ್ಪಾದಕರು ಮಾಡಿದ ತಪ್ಪಿನಿಂದ ಉಂಟಾಗುವ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ. ಈ ಸಂದರ್ಭದಲ್ಲಿ ವಿಮಾದಾರರು ಉತ್ಪಾದಕರ ವಿರುದ್ಧ ಕ್ಲೈಮ್ ಸಲ್ಲಿಸಬೇಕಾಗುತ್ತದೆ
ನೀವೇ ಖುದ್ದಾಗಿ ರಿಪೇರಿ ಮಾಡಿ ಕ್ಲೈಮ್ ಸಲ್ಲಿಸಿದರೆ, ನಿಮ್ಮ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ
ಗೀರುಗಳು, ಕಲೆಗಳು ಮತ್ತು ಮೆಟೀರಿಯಲ್ ಗುಣಮಟ್ಟಕ್ಕೆ ಸಂಬಂಧಿಸಿದ ಯಾವುದೇ ದೋಷಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ
ಯುದ್ಧ ಅಥವಾ ಪರಮಾಣು ವಿಪತ್ತುಗಳ ಸಂದರ್ಭದಲ್ಲಿ ನಿಮ್ಮ TVಗೆ ಆಗುವ ಯಾವುದೇ ಹಾನಿಯ ವೆಚ್ಚವನ್ನು ಕವರ್ ಮಾಡುತ್ತದೆ
ಖರೀದಿಯ ದಿನಾಂಕದಿಂದ 365 ದಿನಗಳಿಗಿಂತ ಹೆಚ್ಚು ಹಳೆಯದಾದ ಟೆಲಿವಿಷನ್‌ಗಳಿಗೆ, ಇನ್ಶೂರೆನ್ಸ್ ಮಾನ್ಯವಾಗಿರುವುದಿಲ್ಲ. ಏಕೆಂದರೆ ಈ ಪಾಲಿಸಿಯನ್ನು, TV ಖರೀದಿಸಿದ ಒಂದು ವರ್ಷದೊಳಗೆ ತೆಗೆದುಕೊಳ್ಳಬೇಕು
ಪಾಲಿಸಿ ಖರೀದಿಸುವ ಸಮಯದಲ್ಲಿ, ಪ್ರಾಡಕ್ಟ್ ಬಗ್ಗೆ ವಿಮಾದಾರರು ಪಾರದರ್ಶಕವಾಗಿ ಮತ್ತು ಸರಿಯಾಗಿ ಮಾಹಿತಿಯನ್ನು ಒದಗಿಸಬೇಕು. ಒಂದು ವೇಳೆ ಯಾವುದಾದರೂ ಪ್ರಮುಖ ಮಾಹಿತಿಯನ್ನು ಒದಗಿಸದಿದ್ದರೆ ಅಥವಾ ಬೇಕೆಂತಲೇ ಮರೆಮಾಚಿದ್ದರೆ, ಅದನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ
ಮಾಲೀಕರು ಉದ್ದೇಶಪೂರ್ವಕವಾಗಿ ಮಾಡಿದ ಹಾನಿಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ. ಕೈ ಜಾರಿ ನೆಲಕ್ಕೆ ಬೀಳುವುದು ಸೇರಿದಂತೆ, ಯಾವುದೇ ಅಪಘಾತದಿಂದ ಪ್ರಾಡಕ್ಟ್‌ನ ಭಾಗಗಳು ಮುರಿದರೆ ಅಥವಾ ಹಾನಿಯಾದರೆ, ಅದು ಕವರ್ ಆಗುವುದಿಲ್ಲ
ವಿಮೆ ಮಾಡಿಸಿದ ನಂತರ, ಮಾಲೀಕರ ಅಜಾಗರೂಕತೆಯಿಂದ ಉಂಟಾದ ಯಾವುದೇ ಹಾನಿಗಳನ್ನು ಈ ಇನ್ಶೂರೆನ್ಸ್ ಕವರ್ ಮಾಡುವುದಿಲ್ಲ. ತಪ್ಪಾದ ನಿರ್ವಹಣೆ ಅಥವಾ ದುರುಪಯೋಗ ಸೇರಿದಂತೆ ಮಾಲೀಕರ ನಿರ್ಲಕ್ಷ್ಯದಿಂದ ಉಂಟಾದ ಯಾವುದೇ ಹಾನಿಗಳನ್ನು ಕವರ್ ಮಾಡಲಾಗುವುದಿಲ್ಲ
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್