ಕಾಂಟಾಕ್ಟ್-ಬ್ಯಾನರ್
 

ಟ್ರಾವೆಲ್ ಇನ್ಶೂರೆನ್ಸ್ ಗ್ರಾಹಕರ ಅನಿಸಿಕೆಗಳು

4.2

23696 ರಿವ್ಯೂಗಳು
5
70% ಪೂರ್ಣಗೊಂಡಿದೆ
11661
4
70% ಪೂರ್ಣಗೊಂಡಿದೆ
8626
3
70% ಪೂರ್ಣಗೊಂಡಿದೆ
1406
2
70% ಪೂರ್ಣಗೊಂಡಿದೆ
820
1
70% ಪೂರ್ಣಗೊಂಡಿದೆ
1183
5

ಟ್ರಾವೆಲ್ ಇನ್ಶೂರೆನ್ಸ್‌ ವಿಷಯದಲ್ಲಿ ಎಚ್‌ಡಿಎಫ್‌ಸಿ ಎರ್ಗೋವನ್ನು ಮೆಚ್ಚಲೇಬೇಕು. ಮೌತ್‌ಶಟ್‌ನಲ್ಲಿ ಬರೀ ಕೆಟ್ಟ ಅನುಭವಗಳನ್ನೇ ಹಂಚಿಕೊಂಡಿರುವ ಹಿನ್ನೆಲೆಯಲ್ಲಿ, ಎಚ್‌ಡಿಎಫ್‌ಸಿ ಎರ್ಗೋ ಜೊತೆಗಿನ ಈ ತೃಪ್ತಿದಾಯಕ ಕ್ಲೈಮ್ ಅನುಭವವನ್ನು ಹಂಚಿಕೊಳ್ಳಲೇಬೇಕು ಎನಿಸಿತು. ಇದು 100% ಅಸಲಿ - ಸುಮಾರು 100,000 ಡಾಲರ್‌ಗಳ ತುರ್ತು ಶಸ್ತ್ರಚಿಕಿತ್ಸೆ ಕ್ಲೈಮ್ ಅನ್ನು ಅವರು ಸಂಪೂರ್ಣವಾಗಿ ಮರುಪಾವತಿ ಮಾಡಿದರು - ಇಡೀ ಪ್ರಕ್ರಿಯೆ ಸರಾಗವಾಗಿತ್ತು ಮತ್ತು 2-3 ತಿಂಗಳ ಒಳಗೆ ಮುಗಿಯಿತು. ನಿರಂತರ ಫಾಲೋ-ಅಪ್‌ಗಳು, ವೈದ್ಯರ ಭೇಟಿ ಇತ್ಯಾದಿ ಸೌಲಭ್ಯಗಳೂ ಸಿಕ್ಕಿದವು. ಬೇರೆ ವಿಮಾದಾತರು ಇವರಿಗಿಂತ ಕಡಿಮೆ ಬೆಲೆಯ ಇನ್ಶೂರೆನ್ಸ್ ಪ್ಲಾನ್‌ಗಳನ್ನು ನೀಡಬಹುದು. ಆದರೆ ನಿಮ್ಮ ಇನ್ಶೂರೆನ್ಸ್ ಪೂರೈಕೆದಾರರನ್ನು ಆಯ್ಕೆ ಮಾಡುವ ಮೊದಲು ಅನಿಸಿಕೆ/ರಿವ್ಯೂಗಳನ್ನು ಪರಿಶೀಲಿಸುವುದನ್ನು ಮರೆಯಬೇಡಿ. ನನ್ನ ಪ್ರವಾಸಕ್ಕಾಗಿ ಎಚ್‌ಡಿಎಫ್‌ಸಿ ಎರ್ಗೋ ಆಯ್ಕೆ ಮಾಡಿದ್ದು ತುಂಬಾ ಸಂತಸಕರ ಆಯ್ಕೆ ಎನಿಸಿತು. ಎಲ್ಲರಿಗೂ ಇದನ್ನೇ ಶಿಫಾರಸು ಮಾಡುತ್ತೇನೆ.

ಸೌಭಾಗ್ಯ ಸಾಹೂ, 13-JUL-2019 | ಸಿಂಗಲ್ ಟ್ರಿಪ್

5

ನಾನು ಮಾರುತಿ ಕಾರ್ ಇನ್ಶೂರೆನ್ಸ್ ಪಾಲಿಸಿ ಪಡೆದಿದ್ದ 12 ಕಂಪನಿಗಳ ಪೈಕಿ ಇವರಿಂದ ಪ್ರಾಮಾಣಿಕ ಮತ್ತು ತ್ವರಿತ ಸೇವೆ ಪಡೆದಿದ್ದೇನೆ. ಹಾಗಾಗಿ, ಎಚ್‌ಡಿಎಫ್‌ಸಿ ಎರ್ಗೋ ಅನ್ನು ನನ್ನ ಆದ್ಯತೆಯ ಬ್ಯಾಂಕರ್ ಇನ್ಶೂರೆನ್ಸ್ ಪೂರೈಕೆದಾರ ಎಂದು ಹೇಳಲು ಬಯಸುತ್ತೇನೆ. ಪಾಲಿಸಿ ಡಾಕ್ಯುಮೆಂಟ್‌ಗಳು, RC ಬುಕ್, ಡ್ರೈವಿಂಗ್ ಲೈಸೆನ್ಸ್ ಸಲ್ಲಿಸಿದ ನಂತರ ಯಾವುದೇ ಅಡಚಣೆ ಅಥವಾ ವಿಳಂಬವಿಲ್ಲದೆ ಕಾರ್ ಇನ್ಶೂರೆನ್ಸ್ ಕ್ಲೈಮ್ ಅನ್ನು ತ್ವರಿತವಾಗಿ ಸೆಟಲ್ ಮಾಡಿದರು. ಕಾರು, ಮನೆ, ಪರ್ಸನಲ್, ಹೆಲ್ತ್, ವೆಲ್ನೆಸ್ ಸೇರಿದಂತೆ ಯಾವುದೇ ಇನ್ಶೂರೆನ್ಸ್‌ಗೆ ಎಚ್‌ಡಿಎಫ್‌ಸಿ ಎರ್ಗೋನೇ ನನ್ನ ಮೊದಲ ಆಯ್ಕೆ. ಜನರಲ್ ಪರ್ಸನಲ್ ಇನ್ಶೂರೆನ್ಸ್‌ ವಿಷಯದಲ್ಲಿ ಎಚ್‌ಡಿಎಫ್‌ಸಿ ಎರ್ಗೋದ ಕಾರ್ಯವೈಖರಿ ನನಗೆ ಬಹಳ ಇಷ್ಟವಾಗುತ್ತದೆ.

ಮನುಭಾಯಿ ಪಂಚಾಲ್, 12-JUL-2019 | ಸಿಂಗಲ್ ಟ್ರಿಪ್

5

ನಾನು ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಅನ್ನು ತುಂಬಾ ಇಷ್ಟಪಡುತ್ತೇನೆ ಮತ್ತು ಎಲ್ಲರಿಗೂ ಶಿಫಾರಸು ಮಾಡುತ್ತೇನೆ. ಇತ್ತೀಚೆಗೆ ಟರ್ಕಿಗೆ ಹೋದಾಗ ನಾನು ಇನ್ಶೂರೆನ್ಸ್ ತೆಗೆದುಕೊಂಡಿದ್ದೆ. ಮುಂದಿನ ಪ್ರಯಾಣಕ್ಕೆ ಖರೀದಿಸುತ್ತೇನೆ. ಇದರ ಸುಲಭ ಲಭ್ಯತೆ ಮತ್ತು ಅನುಕೂಲಕರ ನಿಯಮಗಳು ನನ್ನಂತೆ ಆಗಾಗ್ಗೆ ಪ್ರಯಾಣಿಸುವವರಿಗೆ ತುಂಬಾ ಅನುಕೂಲಕರ. ಪ್ರಯಾಣದ ಅವಧಿ ಮತ್ತು ಭೇಟಿ ನೀಡುತ್ತಿರುವ ದೇಶಕ್ಕೆ ತಕ್ಕಂತೆ ಬೆಲೆ ನಿಗದಿಯಾಗುವುದರಿಂದ, ಕೊಟ್ಟ ಹಣಕ್ಕೆ ಮೋಸವಿಲ್ಲ.

ಇಕಿತಾ ಪೋಖರ್ಣ, 07-JUL-2019 | ಸಿಂಗಲ್ ಟ್ರಿಪ್

5

ನಾನು ಟ್ರಾವೆಲ್ ಪ್ಲಾನ್ ಮಾಡಿದಾಗೆಲ್ಲಾ, ಎಚ್‌ಡಿಎಫ್‌ಸಿ ಎರ್ಗೋಗೆ ಆದ್ಯತೆ ನೀಡುತ್ತೇನೆ. ಇದನ್ನು ನನಗಿಂತ ಮುಂಚೆ ಬಳಸಿ, ಒಳ್ಳೆಯ ಅನುಭವ ಪಡೆದಿದ್ದ ನನ್ನ ಸಹೋದರ ಇದರ ಬಗ್ಗೆ ನನಗೆ ಹೇಳಿದ. ಇಲ್ಲಿಯವರೆಗೆ ನಾನು ಇದನ್ನು 5 ಸಲ ಖರೀದಿಸಿದ್ದೇನೆ. ಅದರಲ್ಲೂ ಆಗ್ನೇಯ ಏಷ್ಯಾ ಮತ್ತು ಜಪಾನ್ ಪ್ರವಾಸದ ಸಂದರ್ಭದಲ್ಲಿ. ಇದರ ಖರೀದಿ ಬಹಳ ಸುಲಭ. ಇವರ ವೆಬ್‌ಸೈಟ್ ತುಂಬಾ ಅಚ್ಚುಕಟ್ಟಾಗಿದೆ. ಹಾಗಾಗಿ ಕೆಲವೇ ನಿಮಿಷಗಳಲ್ಲಿ ಪಾಲಿಸಿ ಖರೀದಿಸಬಹುದು. ನನ್ನ ವಿಯೆಟ್ನಾಂ ಪ್ರವಾಸದ ಸಮಯದಲ್ಲಿ, ಫ್ಲೈಟ್ ಇನ್ನೇನು ಟೇಕಾಫ್ ಆಗುತ್ತೆ ಎನ್ನುವಾಗ ಪಾಲಿಸಿ ಖರೀದಿಸಿದ್ದೆ. ಅಷ್ಟೊಂದು ವೇಗದ ಪ್ರಕ್ರಿಯೆ ಇದು. ಇನ್ನೊಂದು ವಿಶೇಷವೆಂದರೆ ಇವರ ಗ್ರಾಹಕಸೇವೆ. ಅವರು ನಿಮ್ಮ ಇಷ್ಟದ ಪಾಲಿಸಿಯನ್ನು ಆಯ್ಕೆ ಮಾಡಲು ನೆರವಾಗುತ್ತಾರೆ. ಇವರ ಬಳಿ ಹಲವಾರು ಪ್ಯಾಕೇಜ್‌ಗಳಿವೆ. ಯಾವುದನ್ನು ಕೊಳ್ಳಬೇಕೆಂಬ ಗೊಂದಲ್ಲ ಇದ್ದಾಗ ನಿಮ್ಮ ಫೋನ್ ನಂಬರ್ ಕೊಟ್ಟರೆ ಸಾಕು. ಅವರೇ ನಿಮ್ಮನ್ನು ಸಂಪರ್ಕಿಸಿ, ಸೂಕ್ತ ಪಾಲಿಸಿ ಖರೀದಿಸಲು ನೆರವಾಗುತ್ತಾರೆ. ಅದಲ್ಲದೇ, ಇವರಿಂದ ಇಲ್ಲಿಯವರೆಗೂ ಯಾವುದೇ ಬೇಕಾಬಿಟ್ಟಿ ಮಾರ್ಕೆಟಿಂಗ್ ಕಾಲ್‌ಗಳು ಬಂದಿಲ್ಲ. ಹಾಗಾಗಿ, ನಿಶ್ಚಿಂತೆಯಿಂದ ನಂಬರ್ ಕೊಡಿ. ನಿಮ್ಮ ಪ್ರಯಾಣದ ಎಲ್ಲಾ ಮೂಲಭೂತ ಅಂಶಗಳನ್ನು ಈ ಪಾಲಿಸಿಯು ಕವರ್ ಮಾಡುತ್ತದೆ. ಹಾಗಾಗಿ ವಿದೇಶದಲ್ಲೂ ನೀವು ಸುರಕ್ಷಿತವಾಗಿರುತ್ತೀರಿ. ಏನಾದರೂ ತೊಂದರೆ ಆದಾಗ ಆತಂಕ ಪಡುವ ಅಗತ್ಯ ಇರುವುದಿಲ್ಲ. ನಾನಂತೂ ಇಲ್ಲಿಯವರೆಗೂ ಯಾವುದೇ ಕ್ಲೈಮ್ ಸಲ್ಲಿಸಿಲ್ಲ. ಆದರೆ ನನ್ನ ಸಹೋದರನ ಕ್ಲೈಮ್ ಅನ್ನು ಸಮಯಕ್ಕೆ ಸರಿಯಾಗಿ ಅಂಗೀಕರಿಸಿ, ಬಹಳ ಬೇಗ ಸೆಟಲ್ ಮಾಡಿದರು ಎಂದು ಕೇಳಿಪಟ್ಟಿದ್ದೇನೆ. ವೆಬ್‌ಸೈಟ್ ಅನ್ನು ಚೆನ್ನಾಗಿ ಡಿಸೈನ್ ಮಾಡಿದ್ದಾರೆ. ಇದು ಬಳಕೆದಾರ ಸ್ನೇಹಿಯಾಗಿದೆ ಮತ್ತು ಇಂಟರ್ನೆಟ್ ಬಳಕೆ ಬಗ್ಗೆ ಅಲ್ಪಸ್ವಲ್ಪ ಗೊತ್ತಿದ್ದವರೂ ಸುಲಭವಾಗಿ ಪಾಲಿಸಿ ಖರೀದಿಸಬಹುದು. ಪಾಲಿಸಿಯಲ್ಲಿ ನಾಮಿನೇಟ್ ಮಾಡುವ ಆಯ್ಕೆಯೂ ಇದೆ. ನೀವು ನಿಮ್ಮ ಸಂಗಾತಿ ಅಥವಾ ಪೋಷಕರಿಗೂ ಸುಲಭವಾಗಿ ಪಾಲಿಸಿ ಖರೀದಿಸಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ಸಿಂಗಲ್, ವೈಯಕ್ತಿಕ ಮತ್ತು ಫ್ಯಾಮಿಲಿ ಪ್ಲಾನ್ ಆಯ್ಕೆ ಮಾಡಬಹುದು. ಒಟ್ಟಾರೆಯಾಗಿ, ಒಂದಲ್ಲ, ಎರಡಲ್ಲ. 5 ಸಲ ಆಹ್ಲಾದಕರ ಅನುಭವ ಪಡೆದಿದ್ದೇನೆ. ಪಾಲಿಸಿ ಪಡೆಯುವುದು ಬಹಳ ಸುಲಭ. ಇಲ್ಲಿಯವರೆಗೆ ಕ್ಲೈಮ್ ಮಾಡದಿದ್ದರೂ, ಅದು ಸುಲಭ ಮತ್ತು ಸರಾಗವಾಗಿ ಇರುತ್ತದೆ ಎಂಬ ನಂಬಿಕೆಯಿದೆ. ಈ ಪಾಲಿಸಿ ಖರೀದಿಸಿ, ನಿಮ್ಮ ವಿದೇಶ ಪ್ರಯಾಣಗಳಲ್ಲಿ ಸುರಕ್ಷಿತವಾಗಿರಿ.

ಹರ್ಷಲ್ ಅಗರ್ವಾಲ್, 07-JUL-2019 | ಸಿಂಗಲ್ ಟ್ರಿಪ್

5

ಎಚ್‌ಡಿಎಫ್‌ಸಿ ಎರ್ಗೋದ ಜನರು ಸ್ನೇಹಿತನಂತೆ ಸಹಾಯ ಮಾಡಿದರು. ನಮಗೆ ಪ್ರಾಮುಖ್ಯತೆ ನೀಡುವುದರ ಜೊತೆಗೆ, ಅವರು ಉತ್ತಮ ಸೇವೆ ಒದಗಿಸುತ್ತಾರೆ. ಅವರೇಕೆ ಉತ್ತಮ ಮತ್ತು ಅತ್ಯುತ್ತಮ ಇನ್ಶೂರೆನ್ಸ್ ಕಂಪನಿ ಎಂಬುದನ್ನು ನಿರೂಪಿಸುತ್ತಾರೆ! ಯಾವಾಗಲು ಜನಸ್ನೇಹಿ ಆಗಿರುತ್ತಾರೆ. ನಿಮಗೆ ಸಾಕಷ್ಟು ಸಮಯ ಕೊಟ್ಟು, ಏಜೆಂಟ್‌ ನಿಮ್ಮ ಎಲ್ಲಾ ಪ್ರಶ್ನೆಗಳಿಗೂ ಸಮಾಧಾನದಿಂದ ಉತ್ತರಿಸುತ್ತಾರೆ. ನನಗೆ ಎಲ್ಲಾ ರೀತಿಯಲ್ಲೂ ಸುರಕ್ಷತೆ ನೀಡುವ ಸರಿಯಾದ ಇನ್ಶೂರೆನ್ಸ್ ಅನ್ನು ಕಂಡುಕೊಂಡಿದ್ದಕ್ಕೆ ನನಗೆ ನಿಜವಾಗಿಯೂ ಖುಷಿಯಿದೆ. ಅವರು ಗ್ರಾಹಕರಿಗೆ ಸಾಕಷ್ಟು ಮಹತ್ವ ನೀಡುತ್ತಾರೆ. ಪ್ರತಿ ಬಾರಿ ನನಗೆ ಸಿಗುವ ಉತ್ತಮ ಗ್ರಾಹಕ ಸೇವೆಗೆ ನನ್ನ ಮೆಚ್ಚುಗೆ ಇದೆ!!

ಸಂದೀಪ್ ಥೋರಟ್, 05-JUL-2019 | ಸಿಂಗಲ್ ಟ್ರಿಪ್

5

ಎಚ್‌ಡಿಎಫ್‌‌ಸಿ ಇನ್ಶೂರೆನ್ಸ್ ಆಯ್ಕೆ ಮಾಡುವ ಮೊದಲು, ನಾನು ಕೆಲವು ಬೇರೆಬೇರೆ ಇನ್ಶೂರೆನ್ಸ್ ಪಾಲಿಸಿಗಳನ್ನೂ ನೋಡಿದ್ದೇನೆ. ಪ್ರತಿ ತಿಂಗಳು ನನ್ನ ಕಾರ್ಡ್‌ನಿಂದ ನಿಗದಿತ ಮೊತ್ತ ಸ್ವಯಂ ಕಡಿತವಾಗುವ ಜೊತೆಗೆ, ಗಡುವು ದಿನಾಂಕದ ರಿಮೈಂಡರ್ ಸಹ ಕಳುಹಿಸಲಾಗುತ್ತದೆ. ಇವರ ಆ್ಯಪ್‌ ಬಳಸಲು ಸುಲಭವಾಗಿದ್ದು, ಬೇರೆ ಇನ್ಶೂರೆನ್ಸ್ ಕಂಪನಿಗಳಿಗೆ ಹೋಲಿಸಿದರೆ, ನನಗೆ ಉತ್ತಮ ಅನುಭವ ನೀಡುತ್ತಿದೆ.

ವೈದ್ಯನಾಥನ್ ಗಣೇಶನ್, 05-JUL-2019 | ಸಿಂಗಲ್ ಟ್ರಿಪ್

5

ಮಾರುಕಟ್ಟೆಯಲ್ಲಿ ಹಲವಾರು ಇನ್ಶೂರೆನ್ಸ್ ಕಂಪನಿಗಳು ಮತ್ತು ಲೆಕ್ಕವಿಲ್ಲದಷ್ಟು ಪಾಲಿಸಿಗಳು ಸಿಗುತ್ತವೆ. ಅವುಗಳ ಪೈಕಿ, ಅತ್ಯುತ್ತಮ ಜನರಲ್ ಇನ್ಶೂರೆನ್ಸ್ ಕಂಪನಿ ಎಂದರೆ ಎಚ್‌ಡಿಎಫ್‌ಸಿ ಎರ್ಗೋ. ಯಾವುದೇ ತೊಂದರೆಯಿಲ್ಲದ ಸರಾಗ ಆನ್ಲೈನ್ ನವೀಕರಣ. ಅವರ ಪ್ರತಿನಿಧಿ ನನಗೆ ಕರೆ ಮಾಡಿ, ಯೋಜನೆಯ ಬಗ್ಗೆ ಚೆನ್ನಾಗಿ ಅರ್ಥವಾಗುವಂತೆ ವಿವರಿಸಿದರು. ಅಂತಹ ಇನ್ಶೂರೆನ್ಸ್ ಕಂಪನಿ ಸಿಕ್ಕಿದ್ದಕ್ಕೆ ಸಂತೋಷ ಆಗುತ್ತಿದೆ. ನಾನು ನನ್ನ ಕಾರ್ ಇನ್ಶೂರೆನ್ಸ್, ಟರ್ಮ್ ಇನ್ಶೂರೆನ್ಸ್, ಹೆಲ್ತ್ ಇನ್ಶೂರೆನ್ಸ್, ಎಲ್ಲವನ್ನೂ ಇವರಿಂದಲೇ ಖರೀದಿಸಿದ್ದೇನೆ.

ಅತುಲ್ ಶಾ, 05-JUL-2019 | ಸಿಂಗಲ್ ಟ್ರಿಪ್

5

ಪಾರದರ್ಶಕ, ಸುಲಭ ನೋಂದಣಿ, ಪಾಲಿಸಿಯ ತ್ವರಿತ ವಿಲೇವಾರಿ, ವ್ಯಾಪಕ ಶ್ರೇಣಿಯ ಕವರೇಜ್. ವಿದೇಶಕ್ಕೆ ಹೊರಡಬೇಕು ಎಂದುಕೊಂಡಾಗಲೆಲ್ಲಾ ಈ ಅನಿಶ್ಚಿತತೆ ಮತ್ತು ದುರ್ಘಟನೆಗಳೇ ಕಣ್ಣ ಮುಂದೆ ಬಂದು, ಪ್ರಯಾಣದ ಖುಷಿಯೆಲ್ಲಾ ಹಾಳಾಗುತ್ತಿತ್ತು. ಆದರೆ ನಗದುರಹಿತ ಆಸ್ಪತ್ರೆ ದಾಖಲಾತಿ, ಆಕ್ಸಿಡೆಂಟ್ ಕವರ್, ಕಡಿಮೆ ಬಜೆಟ್‌ನಲ್ಲಿ ಹೋಟೆಲ್ ವ್ಯವಸ್ಥೆ, ಮುಂತಾದ ವ್ಯಾಪಕ ಶ್ರೇಣಿಯ ಪ್ರಯೋಜನಗಳನ್ನು ಒದಗಿಸುವ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಚಿಂತೆಗಳನ್ನು ದೂರ ಮಾಡುತ್ತದೆ. ಟ್ರಾವೆಲ್ ಇನ್ಶೂರೆನ್ಸ್‌ನಲ್ಲಿ ಇನ್ನೇನು ಬೇಕು? ಅತ್ಯುತ್ತಮ ಪ್ರಾಡಕ್ಟ್‌ ಇದು. ಧನ್ಯವಾದ ಟೀಮ್ ಎರ್ಗೋ

ಶಾಶ್ವತ್ ಶುಕ್ಲಾ, 05-JUL-2019 | ಸಿಂಗಲ್ ಟ್ರಿಪ್

5

ಸಿಬ್ಬಂದಿ ತುಂಬಾ ಆತ್ಮೀಯವಾಗಿದ್ದರು. ಕೆಲಸ ತೊಂದರೆಯಿಲ್ಲದೇ ಮುಗಿಯಿತು. ಅವರು ಗ್ರಾಹಕರೊಂದಿಗೆ ವ್ಯವಹರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಳಸುತ್ತಾರೆ. ಗ್ರಾಹಕರ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ಸೂಕ್ತ ಪರಿಹಾರ ನೀಡುತ್ತಾರೆ. ಕೆಲಸ ಬೇಗ ಮುಗಿಯಿತು. ಅವರು ಎಲ್ಲಾ ಗ್ರಾಹಕರನ್ನು ಸಮಾನವಾಗಿ ಪರಿಗಣಿಸುತ್ತಾರೆ. ತುಂಬಾ ಚುರುಕಾದ ಮತ್ತು ಅಪ್ಡೇಟ್ ಆದ ಸಿಬ್ಬಂದಿ. ನಗುಮುಖದಿಂದ ಬರಮಾಡಿಕೊಂಡು, ಸ್ನೇಹಿತರಂತೆ ಮಾತಾಡಿಸುತ್ತಾರೆ

ನಾಗರಾಜ ಮಠ, 05-JUL-2019 | ಸಿಂಗಲ್ ಟ್ರಿಪ್

5

ನನ್ನ ಎಲ್ಲಾ ಇನ್ಶೂರೆನ್ಸ್ ಅಗತ್ಯತೆಗಳಿಗೂ ನಾನು ಎಚ್‌ಡಿಎಫ್‌ಸಿ ಎರ್ಗೋಗೆ ಆದ್ಯತೆ ನೀಡುತ್ತೇನೆ. ಸರಳ ಪ್ರಕ್ರಿಯೆ, ಅತ್ಯುತ್ತಮ ಗುಣಮಟ್ಟದ ಗ್ರಾಹಕಸೇವೆ ಹಾಗೂ ಎಚ್‌ಡಿಎಫ್‌ಸಿಯಂತಹ ವಿಶ್ವಾಸಾರ್ಹ ಬ್ರ್ಯಾಂಡ್‌ - ಇದೇ ನನ್ನ ಆದ್ಯತೆಗೆ ಮೂಲ ಕಾರಣ. ಇನ್ಶೂರೆನ್ಸ್‌ಗಾಗಿ ವಿಂಡೋ-ಶಾಪಿಂಗ್ ಮಾಡಿದಾಗ ಕೆಲವು ಕಂಪನಿಗಳು ಅತ್ಯುತ್ತಮ ದರಗಳನ್ನು ನೀಡಬಹುದು. ಎಚ್‌ಡಿಎಫ್‌ಸಿ ಎರ್ಗೋದ ಇನ್ಶೂರೆನ್ಸ್‌ಗಳು ಒದಗಿಸುವ ಪ್ರಮುಖ ಫೀಚರ್ ಯಾವುದು ಗೊತ್ತಾ? ಮನಶ್ಶಾಂತಿ !!

ನಮಿಂದರ್ ಧೀರ್, 05-JUL-2019 | ಸಿಂಗಲ್ ಟ್ರಿಪ್

108 ರಲ್ಲಿ ಪೇಜ್ 1
x