ಯಾವುದೇ ಕಾಯಿಲೆಯು ನಿಮ್ಮ ಜೀವನವನ್ನು ಕೊನೆಗೊಳಿಸಲು ಬಿಡದೇ, ಅದರ ವಿರುದ್ಧ ಹೋರಾಡಲು ಮತ್ತು ನಿಮ್ಮ ಹಣಕಾಸನ್ನು ಸುರಕ್ಷಿತಗೊಳಿಸಲು ಸಾಕಷ್ಟು ಸಿದ್ಧತೆ ನಡೆಸಿ. ನಿಮ್ಮ ಕುಟುಂಬದ ಯಾವುದೇ ಇತರ ಸದಸ್ಯರ ಆರೋಗ್ಯದಂತೆ ಮಹಿಳೆಯರ ಆರೋಗ್ಯವು ಮುಖ್ಯವಾಗಿದೆ. ಅದನ್ನು ಇಂದೇ ಸುರಕ್ಷಿತಗೊಳಿಸಿ ಮತ್ತು ಕ್ಯಾನ್ಸರ್, ಮೇಜರ್ ಕಾಯಿಲೆಗಳು, ಹೃದಯ ರೋಗಗಳು ಮತ್ತು ಇತರ ಮೇಜರ್ ಶಸ್ತ್ರಚಿಕಿತ್ಸೆಗಳಿಗೆ #1 ಕೋಟಿ+ ಗ್ರಾಹಕರು ವಿಶ್ವಾಸ ಹೊಂದಿರುವ ಬ್ರ್ಯಾಂಡ್ ಆದ ಎಚ್‌ಡಿಎಫ್‌ಸಿ ಎರ್ಗೋದಲ್ಲಿನ ಒಂದೇ ಪ್ಲಾನ್ ಅಡಿಯಲ್ಲಿ ರಕ್ಷಣೆ ಪಡೆದುಕೊಳ್ಳಿ.
ಕ್ಯಾನ್ಸರ್ ತಗುಲಿರುವ ಸೆಲ್‌ಗಳು ಹೆಚ್ಚಾಗಿ ನಿಮ್ಮ ದೇಹದ ಇತರ ಕೋಶಗಳಿಗೂ ಹರಡಲು ಆರಂಭಿಸಿದಾಗ ಅದನ್ನು ಮ್ಯಾಲಿಗ್ನೆಂಟ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಆ ರೀತಿಯ ಎಲ್ಲಾ ಮಹಿಳೆಯರ ನಿರ್ದಿಷ್ಟ ಕ್ಯಾನ್ಸರ್‌ಗೆ ನಾವು 100% ಇನ್ಶೂರೆನ್ಸ್ ಮೊತ್ತವನ್ನು ಒದಗಿಸುತ್ತೇವೆ. ಇನ್ನಷ್ಟು ತಿಳಿಯಿರಿ...
ಟಿಶ್ಯೂಗಳ ಅಸಮರ್ಪಕ ಬೆಳವಣಿಗೆ ನಿರ್ದಿಷ್ಟ ಸ್ಥಳದಲ್ಲಿದ್ದು, ದೇಹದ ಇತರ ಅಂಗಗಳಿಗೆ ಅಥವಾ ಟಿಶ್ಯೂಗಳಿಗೆ ಹರಡಿಲ್ಲದಿದ್ದರೆ, ಅದನ್ನು ಸಾಮಾನ್ಯವಾಗಿ ಆರಂಭಿಕ ಹಂತದ ಕಾರ್ಸಿನೋಮಾ ಎಂದು ಕರೆಯಲಾಗುತ್ತದೆ. ಈ ಹಂತದಲ್ಲಿ ಔಷಧಿ ಮತ್ತು ಚಿಕಿತ್ಸೆಯೊಂದಿಗೆ ಪರಿಣಾಮಕಾರಿಯಾಗಿ ನಿರ್ವಹಿಸಬಹುದಾಗಿದೆ. ನಾವು ಈ ಹಂತದಲ್ಲಿಯೂ ನಿಮಗೆ ಕವರ್ ನೀಡುತ್ತೇವೆ.ಇನ್ನಷ್ಟು ತಿಳಿಯಿರಿ...
ಸಿಸ್ಟಮಿಕ್ ಲೂಪಸ್ ಎರಿಥೆಮ್ಯಾಟಸ್ ಮತ್ತು ರುಮಾಟಾಯ್ಡ್ ಆರ್ಥ್ರೈಟಿಸ್ ಚಿಕಿತ್ಸೆಗೆ ಹಣಕಾಸಿನ ನೆರವು ನೀಡಲು, ನಾವು 100% ವಿಮಾ ಮೊತ್ತವನ್ನು ಒದಗಿಸುತ್ತೇವೆ. ಈ ರೋಗಗಳು ಭಯಾನಕವಾಗಿದ್ದು, ದೀರ್ಘಕಾಲದ ಚಿಕಿತ್ಸೆಯ ಅಗತ್ಯವಿರುವುದಲ್ಲದೆ, ಹಣಕಾಸಿನ ಅಪಾಯಗಳಿಗೆ ಕಾರಣವಾಗಬಹುದು.ಇನ್ನಷ್ಟು ತಿಳಿಯಿರಿ...
ಗಂಭೀರ ಆಸ್ಟಿಯೋಪೋರೋಸಿಸ್ ಒಂದು ಮೂಳೆ ಕಾಯಿಲೆಯಾಗಿದ್ದು, ಇದು ಸಾಮಾನ್ಯವಾಗಿ ಜೀವನದ ಕಡೆಯ ಹಂತದಲ್ಲಿ ಬಾಧಿಸುತ್ತದೆ. ಈ ವಿಮೆನ್ ಸುರಕ್ಷಾ ಕ್ಯಾನ್ಸರ್ ಪ್ಲಸ್ ಪ್ಲಾನ್‌ನೊಂದಿಗೆ, ನೀವು ಈ ಕಾಯಿಲೆಗೆ ವಿಮಾ ಮೊತ್ತದ ಗರಿಷ್ಠ 25% ಭಾಗ ಅಂದರೆ ₹10 ಲಕ್ಷದವರೆಗೂ ಕವರೇಜ್ ಪಡೆಯುತ್ತೀರಿ.
ನಿಸ್ಸಂಶಯವಾಗಿ, ಚಿಕಿತ್ಸೆ ತೆಗೆದುಕೊಳ್ಳುವಾಗ ಶಸ್ತ್ರಚಿಕಿತ್ಸೆ ಕಾರ್ಯವಿಧಾನಗಳಿಗೆ ಒಳಗಾಗುವುದು ಹಣದ ಖರ್ಚಿಗೆ ಪ್ರಮುಖ ಕಾರಣವಾಗುತ್ತವೆ. ಈ ರೀತಿಯ ಶಸ್ತ್ರಚಿಕಿತ್ಸೆ ಪ್ರಕ್ರಿಯೆಗಳಿಂದ ಉಂಟಾದ ಹಣಕಾಸಿನ ಹೊರೆಯನ್ನು ಕಡಿಮೆ ಮಾಡಲು ಇನ್ನಷ್ಟು ತಿಳಿಯಿರಿ...
ಈ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಸಾಮಾನ್ಯವಾಗಿವೆ! WHO ಪ್ರಕಾರ, ಕಾರ್ಡಿಯೋವಾಸ್ಕುಲರ್ ಕಾಯಿಲೆಗಳು (CVD) ಪ್ರಪಂಚದಾದ್ಯಂತ ಮತ್ತು ಭಾರತದಲ್ಲಿ ಆಗುತ್ತಿರುವ ಸಾವುಗಳಿಗೆ ಪ್ರಮುಖ ಕಾರಣವಾಗಿವೆ. ತೆರೆದ ಹೃದಯದ CABG, ಮೊದಲ ಹಾರ್ಟ್ ಅಟ್ಯಾಕ್, ಆಂಜಿಯೋಪ್ಲಾಸ್ಟಿ, ಪೇಸ್ ಮೇಕರ್ ಹಾಕಿಸಿಕೊಳ್ಳುವುದು ಮತ್ತು ಇನ್ನು ಹೆಚ್ಚಿನವುಗಳಿಗೆ ಕವರೇಜ್ ಪಡೆಯಿರಿ.
ಸಾಹಸ ಕ್ರೀಡೆಗಳು ನಿಮ್ಮ ಮನಸ್ಸನ್ನು ಉತ್ತೇಜಿಸಿದರೂ ಕೂಡ, ಆಕ್ಸಿಡೆಂಟ್‌ಗಳು ಆಗುವ ಸಂಭವ ಇರುವುದರಿಂದ, ಅವು ಅಪಾಯಕಾರಿಯಾಗಬಹುದು. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.
ನೀವು ನಿಮ್ಮ ದೇಹಕ್ಕೆ ಹಾನಿಯಾಗಬಹುದು ಎಂದು ಅಂದಾಜಿಸಿರಬಹುದು, ಆದರೆ ನಾವು ನಿಮಗೆ ನೀವೇ ಹಾನಿ ಮಾಡಿಕೊಳ್ಳುವುದನ್ನು ಬಯಸುವುದಿಲ್ಲ. ನಮ್ಮ ಪಾಲಿಸಿಯು ನೀವೇ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.
ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.
ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.
ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್ ಬ್ರೋಶರ್/ಪಾಲಿಸಿ ವಾಕ್ಯಗಳನ್ನು ನೋಡಿ
"ಮೇಜರ್" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 90 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.
"ಮೈನರ್" ಎಂದು ವರ್ಗೀಕರಿಸಲಾದ ಎಲ್ಲಾ ಕಾಯಿಲೆ/ಕಾರ್ಯವಿಧಾನಗಳಿಗೆ 180 ದಿನಗಳ ಕಾಯುವಿಕೆ ಅವಧಿ ಅನ್ವಯವಾಗುತ್ತದೆ
ಗರ್ಭಧಾರಣೆ ಮತ್ತು ನವಜಾತ ಶಿಶು ಸಮಸ್ಯೆಗಳ ಕವರ್ ಅಡಿ ಬರುವ ಎಲ್ಲಾ ಕ್ಲೈಮ್‌ಗಳಿಗೆ 1 ವರ್ಷದ ಕಾಯುವಿಕೆ ಅವಧಿ ಅನ್ವಯವಾಗುತ್ತದೆ.
ಹೆರಿಗೆ ಸಮಸ್ಯೆಗಳು ಸೇರಿದಂತೆ ಕಾಯಿಲೆಗಳು/ಕಾರ್ಯವಿಧಾನಗಳಿಗೆ 7 ದಿನಗಳ ಸರ್ವೈವಲ್ ಅವಧಿ ಅನ್ವಯಿಸುತ್ತದೆ
ನವಜಾತ ಶಿಶುವಿನ ಸಮಸ್ಯೆಗಳಿಗೆ ಹೆರಿಗೆ ಆದ ದಿನಾಂಕದಿಂದ 30 ದಿನಗಳ ಸರ್ವೈವಲ್ ಅವಧಿ ಇದ್ದು, ಮಗು ಡೆಲಿವರಿ ಆದ ಎರಡು ವರ್ಷಗಳ ಒಳಗೆ ಮಗುವಿಗೆ ಆದ ಸಮಸ್ಯೆಯ ಬಗ್ಗೆ ಡಯಾಗ್ನಸಿಸ್ ಮಾಡಿಸಬೇಕಾಗುತ್ತದೆ
ಕಾಯಿಲೆಗಳ ಗಂಭೀರತೆ ಮತ್ತು ಹಣಕಾಸಿನ ನೆರವಿನ ಅವಶ್ಯಕತೆಯನ್ನು ಅರ್ಥಮಾಡಿಕೊಳ್ಳುವುದರಿಂದ, ನಾವು ತ್ವರಿತ ಮತ್ತು ಲಂಪ್‌ಸಮ್ ಪಾವತಿಯನ್ನು, ಅಂದರೆ, ನಿಮ್ಮ ವಿಮಾ ಮೊತ್ತವನ್ನು ಒಂದು ವಹಿವಾಟಿನಲ್ಲಿ ಪಾವತಿಸಲಾಗುತ್ತದೆ.
3 ಲಕ್ಷದಿಂದ 1 ಕೋಟಿಯವರೆಗೆ, ನಿಮ್ಮ ಆರೋಗ್ಯ ಇತಿಹಾಸ ಮತ್ತು ಕೈಗೆಟುಕುವ ಪ್ರೀಮಿಯಂ ಗಮನದಲ್ಲಿಟ್ಟುಕೊಂಡು ಸರಿಯಾದ ವಿಮಾ ಮೊತ್ತದ ಪ್ಲಾನ್ ಆಯ್ಕೆ ಮಾಡಿ.
ಆನ್ಲೈನ್ ಪಾಲಿಸಿಗೆ 5% ವರೆಗೆ ರಿಯಾಯಿತಿ ಪಡೆಯಿರಿ. 2 ವರ್ಷ ಅವಧಿಯ ಪಾಲಿಸಿಗೆ 7.5% ಮತ್ತು 3 ವರ್ಷ ಅವಧಿಯ ಪಾಲಿಸಿಗೆ 12.5% ರಿಯಾಯಿತಿಯನ್ನು ಪಡೆಯುತ್ತೀರಿ.
ಈ ವೈಶಿಷ್ಟ್ಯ ಎಚ್‌ಡಿಎಫ್‌ಸಿ ಎರ್ಗೋ ಮಹಿಳಾ ಹೆಲ್ತ್ ಸುರಕ್ಷಾ ಅನ್ನು ನಿಮ್ಮ ಹೆಲ್ತ್ ಕೇರ್ ಪಾರ್ಟ್‌ನರ್ ಆಗಿಸಿ, ನಿಮಗೆ ಅನಿರ್ಬಂಧಿತ ಕವರೇಜ್ ಒದಗಿಸುತ್ತದೆ.
ಕಾಯಿಲೆಯನ್ನು ಮುಂಚಿತವಾಗಿ ಪತ್ತೆಮಾಡಿ ಖಚಿತಪಡಿಸಿಕೊಳ್ಳಲು, ಪ್ರತಿ ನವೀಕರಣದ ಸಮಯದಲ್ಲಿ ಉಚಿತ ರೋಗನಿರೋಧಕ ಆರೋಗ್ಯ ತಪಾಸಣೆ ಪಡೆದುಕೊಳ್ಳಿ.
ಸೆಕ್ಷನ್ 80 D ಅಡಿ ತೆರಿಗೆ ಪ್ರಯೋಜನವನ್ನು ಪಡೆಯಿರಿ.
ವೆಲ್‌ನೆಸ್ ಕೋಚ್ ನಿಮ್ಮ ವ್ಯಾಯಾಮ ಮತ್ತು ಸೇವಿಸುತ್ತಿರುವ ಕ್ಯಾಲೋರಿಯನ್ನು ತಡೆರಹಿತವಾಗಿ ಟ್ರ್ಯಾಕ್ ಮಾಡಲು ಅನುವು ಮಾಡಿಕೊಡುತ್ತದೆ. ಆರೋಗ್ಯಕರ ಜೀವನಶೈಲಿಯನ್ನು ನಡೆಸಲು ಇದು ನಿಮಗೆ ಸಹಾಯ ಮಾಡುತ್ತದೆ.
ಯಾವುದೇ ಬಲವಂತವಿಲ್ಲ. ನಿಮಗೆ ಪಾಲಿಸಿ ಸೂಕ್ತವಲ್ಲ ಎಂದನಿಸಿದರೆ, ಪಾಲಿಸಿ ದಾಖಲಾತಿಯನ್ನು ಸ್ವೀಕರಿಸಿದ ದಿನಾಂಕದಿಂದ 15 ದಿನಗಳ ಒಳಗೆ ನೀವು ಪಾಲಿಸಿಯನ್ನು ರದ್ದುಗೊಳಿಸಬಹುದು.
1.6 ಕೋಟಿಗೂ ಹೆಚ್ಚಿನ ನಗುಮುಖಗಳನ್ನು ಸುರಕ್ಷಿತವಾಗಿಸಿದ್ದೇವೆ!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ವೆಲ್ನೆಸ್ ಆ್ಯಪ್.
ಕಾಗದರಹಿತ!
1.6 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
24 x 7 ನಿಮಗೆ ಬೇಕಾದ ಎಲ್ಲಾ ಬೆಂಬಲ ಸೇವೆಗಳು
ಪ್ರತಿ ಹಂತದಲ್ಲೂ ಪಾರದರ್ಶಕವಾಗಿದೆ!
ಇಂಟಿಗ್ರೇಟೆಡ್ ವೆಲ್ನೆಸ್ ಆ್ಯಪ್.
ಕಾಗದರಹಿತ!
ಆಗಾಗ ಕೇಳುವ ಪ್ರಶ್ನೆಗಳು