ಅಸ್ಥಿರ ಹವಾಮಾನದಿಂದಾಗಿ, ಭಾರತದ ರೈತಾಪಿ ಸಮುದಾಯ ವರ್ಷದಿಂದ ವರ್ಷಕ್ಕೆ ಭಾರೀ ನಷ್ಟಗಳನ್ನು ಎದುರಿಸುವ ಪರಿಸ್ಥಿತಿ ಬಂದಿದೆ. ನೀರಾವರಿ ಸೌಲಭ್ಯಗಳು ಮತ್ತು ಆಧುನಿಕ ಕೃಷಿ ತಂತ್ರಗಳ ಕೊರತೆಯಿಂದ, ಈ ಸಮಸ್ಯೆಯ ತೀವ್ರತೆ ಇನ್ನಷ್ಟು ಹೆಚ್ಚಿದೆ. ಇದರಿಂದ ಗ್ರಾಮೀಣ ಜನತೆಗೆ ಕ್ರೆಡಿಟ್ ಸೌಲಭ್ಯದ ಕೊರತೆಯೂ ಕಾಡುತ್ತದೆ. ಬರಗಾಲದಲ್ಲಿ ರೈತರು ತಮ್ಮ ಬೆಳೆ ಸಾಲದ ಬಡ್ಡಿ ಪಾವತಿಸಲು ಹಿಂದೇಟು ಹಾಕುತ್ತಾರೆ ಅಥವಾ ಕಷ್ಟ ಪಡುತ್ತಾರೆ ಮತ್ತು ಅಸಲು ಮರುಪಾವತಿಗಳನ್ನು ಮುಂದೂಡಲು ಪ್ರಯತ್ನಿಸುತ್ತಾರೆ. ಹವಾಮಾನದ ಅಪಾಯವು ಸಾಲ ನೀಡುವವರ ವ್ಯವಹಾರದ ಅಸ್ಥಿರತೆಯನ್ನು ಹೆಚ್ಚಿಸುವ ಮೂಲಕ ಮತ್ತು ಅವರ ಲಾಭದ ಮೇಲೆ ಪರಿಣಾಮ ಬೀರುವ ಮೂಲಕ ಅವರ ಮೇಲೂ ದುಷ್ಪರಿಣಾಮ ಬೀರುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಸಮಗ್ರ ಮಳೆ ಸೂಚ್ಯಂಕ ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸುತ್ತದೆ. ಮಳೆಯ ಅಸ್ಥಿರತೆಯಿಂದ ದುಷ್ಪರಿಣಾಮ ಎದುರಿಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ಕೈಗೆಟಕುವ ವೆಚ್ಚದಲ್ಲಿ ಪರಿಣಾಮಕಾರಿ ಅಪಾಯ ನಿರ್ವಹಣೆ ಸಹಾಯ ಒದಗಿಸುತ್ತದೆ.
ವರಮಾನಕ್ಕಾಗಿ ಕೃಷಿಯನ್ನೇ ನೆಚ್ಚಿಕೊಂಡಿರುವ ಮತ್ತು ಮಳೆ ಕೊರತೆಯಿಂದಾಗಿ ಪ್ರತಿಕೂಲ ಪರಿಣಾಮ ಎದುರಿಸುವ ರೈತಾಪಿ ಸಮುದಾಯಗಳಿಗೆ ಈ ಪಾಲಿಸಿಯು ದೊರೆಯುತ್ತದೆ. ಅವರು ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಸರ್ಕಾರಿ ಪ್ರಾಯೋಜಿತ ಸಂಸ್ಥೆಗಳು ಹಾಗೂ ಗ್ರಾಮೀಣ ಮತ್ತು ಸಾಮಾಜಿಕ ವಲಯದ ಅಂತಹ ಯಾವುದೇ ಅಫಿನಿಟಿ ಗುಂಪುಗಳು/ ಸಂಸ್ಥೆಗಳ ಸದಸ್ಯರು (ಗುಂಪುಗಳಲ್ಲಿ) ಆಗಿರಬೇಕು.
ಫಸಲು/ಇಳುವರಿ ಕೊರತೆ: ನಿರ್ದಿಷ್ಟ ಭೂಪ್ರದೇಶ ಮತ್ತು ನಿರ್ದಿಷ್ಟ ಅವಧಿಯಲ್ಲಿ ನಿರೀಕ್ಷಿತ ಸಾಮಾನ್ಯ ಮಳೆಯ ಕೊರತೆಯಿಂದ ಉಂಟಾಗುವ ಫಸಲು/ಇಳುವರಿ ಕೊರತೆಯನ್ನು ಕವರ್ ಮಾಡುತ್ತದೆ.
ಮಳೆ ಸೂಚ್ಯಂಕ ಇನ್ಶೂರೆನ್ಸ್‌ನ ಅತ್ಯಂತ ಪ್ರಮುಖ ಪ್ರಯೋಜನಗಳು ಎಂದರೆ:
ಮಳೆಸೂಚ್ಯಂಕ ಇನ್ಶೂರೆನ್ಸ್ ಮೂಲಕ ಆಹಾರ ಮತ್ತು ತೋಟಗಾರಿಕೆ ಬೆಳೆಗಳಿಗೆ ಸಂಬಂಧಿಸಿದಂತೆ ಭಾರತದ ಕೃಷಿ ಸಮುದಾಯ ಎದುರಿಸುತ್ತಿರುವ ಮಳೆ ಸಂಬಂಧಿತ ಅಪಾಯಗಳನ್ನು ಸ್ಪರ್ಧಾತ್ಮಕ ನಿಯಮಗಳ ಆಧಾರದಲ್ಲಿ ಜಾಗತಿಕ ಹವಾಮಾನ ಮಾರುಕಟ್ಟೆಗಳಿಗೆ ವರ್ಗಾಯಿಸಬಲ್ಲದು. ಭೌಗೋಳಿಕವಾಗಿ ವೈವಿಧ್ಯಮಯ ಪೋರ್ಟ್‌ಫೋಲಿಯೋ ಹೊಂದಿರುವ ಅಂತಾರಾಷ್ಟ್ರೀಯ ಹವಾಮಾನ ಮರು-ವಿಮಾದಾತರಿಗೆ ಅಕ್ಸೆಸ್ ನೀಡುವುದರಿಂದ ವೆಚ್ಚ ಕಡಿಮೆಯಾಗುತ್ತದೆ ಎಂಬುದನ್ನು ನಾವಿಲ್ಲಿ ಗಮನಿಸಬಹುದು
ಈ ಮಳೆ ಸೂಚ್ಯಂಕ ಇನ್ಶೂರೆನ್ಸ್, ಇನ್ಶೂರ್ಡ್ ಕೃಷಿ ಸಮುದಾಯಗಳಿಗೆ ತಕ್ಷಣದ ಮತ್ತು ಪಾರದರ್ಶಕ ಕ್ಲೇಮ್ ಸೆಟಲ್ಮೆಂಟ್ ಒದಗಿಸಬಲ್ಲದು.
ತನ್ನ ಕಡಿಮೆ ಆಡಳಿತಾತ್ಮಕ ವೆಚ್ಚಗಳಿಂದಾಗಿ, ಪಾರಂಪರಿಕ ಬೆಳೆ ಇನ್ಶೂರೆನ್ಸ್‌ಗೆ ಹೋಲಿಸಿದರೆ ಮಳೆ ಸೂಚ್ಯಂಕ ಇನ್ಶೂರೆನ್ಸ್ ವಿಮಾದಾತರಿಗೆ ಹೆಚ್ಚು ಅನುಕೂಲಕರವಾಗಿದೆ
ಎಲ್ಲಾ ಪ್ರಯೋಜನಗಳು ಪಾಲಿಸಿಯಲ್ಲಿ ತಿಳಿಸಿದ ಗರಿಷ್ಠ ಮೊತ್ತಕ್ಕೆ ಒಳಪಟ್ಟಿರುತ್ತವೆ ಎಂಬುದನ್ನು ದಯವಿಟ್ಟು ಗಮನಿಸಿ. ಬಿಡುಗಡೆಯಾದ ಯಾವುದೇ ಕೊಟೇಶನ್ ಅಥವಾ ನೀಡಲಾದ ಯಾವುದೇ ಪಾಲಿಸಿಯಲ್ಲಿ ಇವುಗಳನ್ನು ಸ್ಪಷ್ಟವಾಗಿ ತಿಳಿಸಲಾಗಿರುತ್ತದೆ.
ಈ ಕೆಳಕಂಡ ಸಂದರ್ಭಗಳಲ್ಲಿ ಈ ಪಾಲಿಸಿ ಅಡಿಯಲ್ಲಿ ಯಾವುದೇ ಪಾವತಿ ಮಾಡಲು ಎಚ್‌ಡಿಎಫ್‌ಸಿ ಎರ್ಗೋ ಹೊಣೆಯಾಗಿರುವುದಿಲ್ಲ:
ಮಳೆ ಕೊರತೆಯ ಕಾರಣದಿಂದ ಉಂಟಾದ ಯಾವುದೇ ವೆಚ್ಚ/ಹಾನಿಗಳ ನಷ್ಟಭರ್ತಿ ಹೊರತುಪಡಿಸಿ, ಬೇರೆ ಯಾವುದೇ ಕಾರಣದಿಂದ ಉಂಟಾದ ಯಾವುದೇ ನಷ್ಟವು ನಿರ್ದಿಷ್ಟ ಪ್ರದೇಶದಲ್ಲಿ ಬೆಳೆಯುವ ನಿರ್ದಿಷ್ಟ ಬೆಳೆಯ ಫಸಲು/ಇಳುವರಿಯನ್ನು ಕಡಿಮೆ ಮಾಡಿದರೂ ಕೂಡ, ಅಂತಹ ಸಂದರ್ಭದಲ್ಲಿ ವೆಚ್ಚವನ್ನು ಮರುಪಾವತಿಸಲು ಅಥವಾ ನಷ್ಟಭರ್ತಿ ನೀಡಲು.
ವಾಸ್ತವಿಕ ಒಟ್ಟಾರೆ ಮಳೆ ಸೂಚ್ಯಂಕವು ಸಾಮಾನ್ಯ ಮಳೆ ಸೂಚ್ಯಂಕಕ್ಕಿಂತ ಹೆಚ್ಚಾಗಿದ್ದಾಗ.
ಪಾಲಿಸಿ ಅಡಿಯಲ್ಲಿ ರೈತರು ನೋಂದಾಯಿಸಿರುವ ಕೃಷಿಭೂಮಿಗೆ ನೀರಾವರಿ ಸೌಲಭ್ಯ ಅಥವಾ ನದಿ, ಹೊಂಡ, ಬಾವಿ, ಸರೋವರ, ಕೆರೆ, ಟ್ಯಾಂಕ್, ನದಿ ಕಾಲುವೆ, ಮುಂತಾದ ನೈಸರ್ಗಿಕ ಅಥವಾ ಮಾನವ ನಿರ್ಮಿತ ಮೂಲಗಳಿಂದ ನೀರಿನ ಸೌಲಭ್ಯ ಇದ್ದರೆ, ಮಳೆ ಕೊರತೆಯ ಸಂದರ್ಭದಲ್ಲಿ ಅಂತಹ ರೈತರಿಗೆ ನಷ್ಟಭರ್ತಿ ಮಾಡುವುದು.
ಇದು ಹೊರತುಪಡಿಸುವಿಕೆಗಳ ನಿದರ್ಶನಾತ್ಮಕ ಪಟ್ಟಿ ಮಾತ್ರ. ವಿವರವಾದ ಪಟ್ಟಿಗಾಗಿ ದಯವಿಟ್ಟು ಪಾಲಿಸಿ ನಿಯಮಾವಳಿಗಳನ್ನು ನೋಡಿ.
ಕಂಪನಿಗೆ ಸಲ್ಲಿಸಿದ ಡಾಕ್ಯುಮೆಂಟ್‌ಗಳ ಆಧಾರದ ಮೇಲೆ ಕ್ಲೇಮ್‌ಗಳನ್ನು ಮೌಲ್ಯಮಾಪನ ಮಾಡಿ, ಪರಿಹಾರ ಪಾವತಿಸಲಾಗುತ್ತದೆ. ನಿರ್ದಿಷ್ಟ ಭೂಪ್ರದೇಶದಲ್ಲಿ ಮತ್ತು ಈ ಪಾಲಿಸಿಯ ಶೆಡ್ಯೂಲ್‌ನಲ್ಲಿ ನಿರ್ದಿಷ್ಟಪಡಿಸಿದ ಅವಧಿಯಲ್ಲಿ, ವಾಸ್ತವಿಕ ಒಟ್ಟಾರೆ ಮಳೆ ಸೂಚ್ಯಂಕವು ಸಾಮಾನ್ಯ ಮಳೆ ಸೂಚ್ಯಂಕಕ್ಕಿಂತ ಕಡಿಮೆ ಇರುವ ಸಂದರ್ಭದಲ್ಲಿ, ಇನ್ಶೂರ್ಡ್ ವ್ಯಕ್ತಿಗೆ ಪಾವತಿಸಬಹುದಾದ ಪ್ರಯೋಜನವು ಪ್ರಮಾಣಿತ ನಷ್ಟದ ದರವನ್ನು ಸಾಮಾನ್ಯ ಮಳೆ ಸೂಚ್ಯಂಕ ಮತ್ತು ನಿಜವಾದ ಒಟ್ಟು ಮಳೆ ಸೂಚ್ಯಂಕದ ನಡುವಿನ ವ್ಯತ್ಯಾಸದಿಂದ ಗುಣಿಸಿದಾಗ ಸಿಗುವ ಮೊತ್ತಕ್ಕೆ ಸಮನಾಗಿರುತ್ತದೆ, ಇದು ಒಟ್ಟಾರೆ ವಿಮಾ ಮೊತ್ತದ ಗರಿಷ್ಠ ಮಿತಿಗೆ ಒಳಪಟ್ಟಿರುತ್ತದೆ.
ಈ ವಿಷಯವು ವಿವರಣೆಯ ಉದ್ದೇಶಕ್ಕಷ್ಟೇ ಆಗಿದೆ. ನಿಜವಾದ ಕವರೇಜ್ ನೀಡಲಾದ ಪಾಲಿಸಿಗಳ ಭಾಷೆಗೆ ಒಳಪಟ್ಟಿರುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards