ಇದು ನಿಮ್ಮೊಳಗಿನ ಪ್ರಯಾಣಿಕನನ್ನು ಜೀವಂತವಾಗಿರಿಸುವ ಕೆಲಸ ಅಥವಾ ರಜಾದಿನ, ಬಿಸಿನೆಸ್ ಅಥವಾ ವಿರಾಮವಾಗಿದೆಯೇ? ಉತ್ತರ ಏನೇ ಆಗಿರಲಿ, ನಿಮ್ಮ ಪ್ರವಾಸಕ್ಕೆ ಅಡೆತಡೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ಆದರೆ ನಿಮ್ಮ ಪ್ರಯಾಣವನ್ನು ಪ್ರಾರಂಭಿಸುವ ಮೊದಲು, ದೂರದ ದೇಶದಲ್ಲಿ ಉಂಟಾಗಬಹುದಾದ ಎಲ್ಲಾ ಅಪಾಯಗಳಿಂದ ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿರಿಸಲು ಟ್ರಾವೆಲ್ ಇನ್ಶೂರೆನ್ಸ್ ಪಡೆಯಿರಿ. ವೈದ್ಯಕೀಯ ಅಥವಾ ದಂತ ತುರ್ತುಸ್ಥಿತಿ, ಚೆಕ್-ಇನ್ ಬ್ಯಾಗೇಜ್ ನಷ್ಟ ಅಥವಾ ವಿಳಂಬ, ಡಾಕ್ಯುಮೆಂಟ್‌ಗಳು, ಕಳ್ಳತನ - ಯಾವುದೇ ಅನಿರೀಕ್ಷಿತ ಘಟನೆ ನಿಮ್ಮನ್ನು ವಿದೇಶಿ ತಾಣದಲ್ಲಿ ಸಿಲುಕಿ ಹಾಕುವಂತೆ ಮಾಡಬಹುದು. ವೈಯಕ್ತಿಕ ಟ್ರಾವೆಲ್ ಪಾಲಿಸಿ ಹೊಂದಿರುವುದು ಅಂತಹ ಸಮಯದಲ್ಲಿ ನಿಮ್ಮ ರಕ್ಷಣೆಗೆ ಬರಬಹುದು. ಇದಲ್ಲದೆ, ವಿದೇಶಿ ತಾಣಕ್ಕೆ ಒಬ್ಬರೇ ಪ್ರಯಾಣ ಮಾಡುವಾಗ, ಬೆಳೆಯುವ ಯಾವುದೇ ಸವಾಲನ್ನು ತೆಗೆದುಕೊಳ್ಳಲು ನೀವು ಸಾಕಷ್ಟು ಸಿದ್ಧರಾಗಿರಬೇಕು. ಆದ್ದರಿಂದ, ನೀವು ನಿಮ್ಮ ಅಗತ್ಯ ವಸ್ತುಗಳನ್ನು ನಿಮ್ಮ ಬ್ಯಾಕ್‌ಪ್ಯಾಕ್‌ನಲ್ಲಿ ಇರಿಸಿದಂತೆ, ನಿಮ್ಮ ಪ್ರಯಾಣವನ್ನು ಸುರಕ್ಷಿತವಾಗಿರಿಸಲು ವ್ಯಕ್ತಿಗಳಿಗೆ ಅಂತಾರಾಷ್ಟ್ರೀಯ ಟ್ರಾವೆಲ್ ಇನ್ಶೂರೆನ್ಸ್ ಪಡೆಯಲು ನೆನಪಿಡಿ.
• ಅಗತ್ಯ ಜೀವ ರಕ್ಷಕ: ವಿದೇಶದಲ್ಲಿ ಅನಿರೀಕ್ಷಿತ ಸವಾಲುಗಳು ಮತ್ತು ತುರ್ತುಸ್ಥಿತಿಗಳಲ್ಲಿ ನಿರ್ಣಾಯಕ ಬೆಂಬಲವನ್ನು ಒದಗಿಸುತ್ತದೆ.
• ಸೋಲೋ ಪ್ರಯಾಣಿಕರ ಅತ್ಯುತ್ತಮ ಸಂಗಾತಿ: ಒಬ್ಬರೇ ವಿದೇಶಿ ತಾಣಗಳನ್ನು ಹುಡುಕುತ್ತಿರುವ ವ್ಯಕ್ತಿಗಳಿಗೆ ಹೆಚ್ಚು ಶಿಫಾರಸು ಮಾಡಲಾಗಿದೆ.
• ಮನಸ್ಸಿನ ಶಾಂತಿಗೆ ವೈದ್ಯಕೀಯ ಕವರೇಜ್: ವೈದ್ಯಕೀಯ ಮತ್ತು ದಂತ ತುರ್ತುಸ್ಥಿತಿಗಳಿಗೆ ಹಣಕಾಸಿನ ನೆರವು ನೀಡುತ್ತದೆ, ಚಿಂತೆ-ಮುಕ್ತ ಚೇತರಿಸಿಕೊಳ್ಳುವಿಕೆಯನ್ನು ಖಚಿತಪಡಿಸುತ್ತದೆ.
• ಸಮಗ್ರ ಪ್ರಯಾಣ ರಕ್ಷಣೆ: ವಿಮಾನ ವಿಳಂಬಗಳು, ರದ್ದತಿಗಳು, ಡಾಕ್ಯುಮೆಂಟ್‌ಗಳ ನಷ್ಟ, ವೈಯಕ್ತಿಕ ಹೊಣೆಗಾರಿಕೆ ಮತ್ತು ಬ್ಯಾಗೇಜ್ ವಿಳಂಬಗಳು ಅಥವಾ ನಷ್ಟಗಳಂತಹ ಪ್ರಯಾಣ ಮತ್ತು ಬ್ಯಾಗೇಜ್ ಸಂಬಂಧಿತ ಸಮಸ್ಯೆಗಳ ವಿರುದ್ಧ ರಕ್ಷಣೆ ನೀಡುತ್ತದೆ.
• ವಿಮಾದಾತರಲ್ಲಿ ವಿವಿಧ ಕವರೇಜ್: ಕವರೇಜ್ ನಿಶ್ಚಿತತೆಗಳು ಬದಲಾಗಬಹುದು, ಆದ್ದರಿಂದ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ಅರ್ಥಮಾಡಿಕೊಳ್ಳಲು ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
• ಜಾಗತಿಕ ಆದೇಶಗಳು: ಟರ್ಕಿ ಮತ್ತು UAE ಯಂತಹ ಕೆಲವು ದೇಶಗಳಲ್ಲಿ ಕಡ್ಡಾಯವಾಗಿ, ಮಾನ್ಯ ಟ್ರಾವೆಲ್ ಮೆಡಿಕಲ್ ಇನ್ಶೂರೆನ್ಸ್ ಹೊಂದಿರುವ ಪ್ರಾಮುಖ್ಯತೆಯನ್ನು ಕಡ್ಡಾಯಗೊಳಿಸುತ್ತದೆ.
ಈ ಪ್ರಯೋಜನವು ಆಸ್ಪತ್ರೆಗೆ ದಾಖಲಾಗುವುದು, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳನ್ನು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.
ಹಲ್ಲುಗಳ ಆರೋಗ್ಯ ನೀವು ದೈಹಿಕ ಅನಾರೋಗ್ಯ ಅಥವಾ ಗಾಯಗಳ ಸಲುವಾಗಿ ಆಸ್ಪತ್ರೆಗೆ ದಾಖಲಾಗುವುದರಷ್ಟೇ ಮುಖ್ಯ ಎನ್ನುವುದು ನಮ್ಮ ನಂಬಿಕೆ; ಅದಕ್ಕಾಗಿ ಪ್ರಯಾಣದ ಸಮಯದಲ್ಲಿ ಬರಬಹುದಾದ ಹಲ್ಲುಗಳ ಚಿಕಿತ್ಸೆಯ ಖರ್ಚುಗಳನ್ನು ನಾವು ಕವರ್ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ನಿಮ್ಮ ಕಷ್ಟದಲ್ಲಿ ಮತ್ತು ಉತ್ತಮ ಸಮಯದಲ್ಲಿ ಸಹವರ್ತಿಗಳಾಗುವುದರ ಮೇಲೆ ನಾವು ನಂಬಿಕೆ ಹೊಂದಿದ್ದೇವೆ. ಅಪಘಾತದ ಸಂದರ್ಭದಲ್ಲಿ, ವಿದೇಶಕ್ಕೆ ಪ್ರಯಾಣಿಸುವಾಗ, ಶಾಶ್ವತ ಅಂಗವೈಕಲ್ಯ ಅಥವಾ ಆಕ್ಸಿಡೆಂಟಲ್ ಸಾವಿನಿಂದ ಉಂಟಾಗುವ ಯಾವುದೇ ಹಣಕಾಸಿನ ಹೊರೆಗಳಿಗೆ ಸಹಾಯ ಮಾಡಲು ನಮ್ಮ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಕುಟುಂಬಕ್ಕೆ ದೊಡ್ಡ ಮೊತ್ತದ ಪಾವತಿಯನ್ನು ಒದಗಿಸುತ್ತದೆ.
ಏರಿಳಿತಗಳಲ್ಲಿ ನಿಮ್ಮ ಜೊತೆಗೆ ಇರುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ. ಆದ್ದರಿಂದ, ದುರದೃಷ್ಟಕರ ಸಂದರ್ಭಗಳಲ್ಲಿ, ಕಾಮನ್ ಕ್ಯಾರಿಯರ್‌ನಲ್ಲಿರುವಾಗ ಗಾಯದಿಂದ ಉಂಟಾಗುವ ಆಕಸ್ಮಿಕ ಸಾವು ಅಥವಾ ಶಾಶ್ವತ ಅಂಗವೈಕಲ್ಯ ಸಂದರ್ಭದಲ್ಲಿ ನಾವು ಒಟ್ಟು ಮೊತ್ತದ ಪಾವತಿಯನ್ನು ಒದಗಿಸುತ್ತೇವೆ.
ಗಾಯ ಅಥವಾ ಅನಾರೋಗ್ಯದಿಂದಾಗಿ ಒಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದರೆ, ಪಾಲಿಸಿ ಶೆಡ್ಯೂಲಿನಲ್ಲಿ ತಿಳಿಸಲಾದ ಗರಿಷ್ಠ ದಿನಗಳವರೆಗೆ, ಆಸ್ಪತ್ರೆಗೆ ದಾಖಲಾಗುವ ಪ್ರತಿ ಪೂರ್ಣ ದಿನಕ್ಕೆ ನಾವು ಪ್ರತಿ ದಿನದ ವಿಮಾ ಮೊತ್ತವನ್ನು ಪಾವತಿಸುತ್ತೇವೆ.
ವಿಮಾನ ವಿಳಂಬ ಅಥವಾ ಕ್ಯಾನ್ಸಲೇಶನ್ ನಮ್ಮ ನಿಯಂತ್ರಣದಾಚೆ ಇರಬಹುದು, ಆದರೆ ಚಿಂತಿಸಬೇಡಿ, ನಮ್ಮ ವೆಚ್ಚ ತುಂಬಿಕೊಡುವಿಕೆ ಫೀಚರ್ ನಿಮಗೆ ಈ ಕಾರಣದಿಂದ ಉಂಟಾಗುವ ಯಾವುದೇ ಅಗತ್ಯ ವೆಚ್ಚಗಳನ್ನು ಪೂರೈಸಲು ಅನುವು ಮಾಡಿಕೊಡುತ್ತದೆ.
ಪ್ರಯಾಣದ ವಿಳಂಬ ಅಥವಾ ರದ್ದುಪಡಿಸುವಿಕೆಯ ಸಂದರ್ಭದಲ್ಲಿ, ನಿಮ್ಮ ಮುಂಚಿತವಾಗಿ ಬುಕ್ ಮಾಡಲಾದ ವಸತಿ ಮತ್ತು ಚಟುವಟಿಕೆಗಳ ರಿಫಂಡ್ ಮಾಡಲಾಗದ ಭಾಗವನ್ನು ನಾವು ರಿಫಂಡ್ ಮಾಡುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಪ್ರಮುಖ ಡಾಕ್ಯುಮೆಂಟ್‌ಗಳನ್ನು ಕಳೆದುಕೊಳ್ಳುವುದರಿಂದ ನೀವು ವಿದೇಶದಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಆದ್ದರಿಂದ, ಹೊಸ ಅಥವಾ ಪಾಸ್‌ಪೋರ್ಟ್ ಪ್ರತಿ ಮತ್ತು/ಅಥವಾ ಅಂತರರಾಷ್ಟ್ರೀಯ ಡ್ರೈವಿಂಗ್ ಲೈಸೆನ್ಸ್ ಪಡೆಯುವುದಕ್ಕೆ ಸಂಬಂಧಿಸಿದ ವೆಚ್ಚಗಳನ್ನು ನಾವು ಮರುಪಾವತಿಸುತ್ತೇವೆ.
ಅನಿರೀಕ್ಷಿತ ಸಂದರ್ಭಗಳಿಂದಾಗಿ ನಿಮ್ಮ ಪ್ರಯಾಣವನ್ನು ಮೊಟಕುಗೊಳಿಸುವುದರ ಬಗ್ಗೆ ಚಿಂತಿಸಬೇಡಿ. ಪಾಲಿಸಿ ಶೆಡ್ಯೂಲ್ ಪ್ರಕಾರ ನಿಮ್ಮ ಮರುಪಾವತಿ ಮಾಡಲಾಗದ ವಸತಿ ಸೌಲಭ್ಯ ಮತ್ತು ಮುಂಚಿತ-ಬುಕ್ ಮಾಡಲಾದ ಚಟುವಟಿಕೆಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.
ಬೇರೆ ದೇಶದಲ್ಲಿರುವಾಗ, ನೀವು ಥರ್ಡ್ ಪಾರ್ಟಿ ಹಾನಿಯ ಹೊಣೆಗಾರಿಕೆಗೆ ಒಳಪಟ್ಟರೆ, ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಸುಲಭವಾಗಿ ಆ ಹಾನಿಗಳನ್ನು ತುಂಬಿಕೊಡುತ್ತದೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ತುರ್ತು ಸ್ಥಿತಿ ಎದುರಾದರೆ ನಿಮ್ಮ ಹೋಟೆಲ್ ವಾಸವನ್ನು ಮತ್ತಷ್ಟು ದಿನಗಳಿಗೆ ವಿಸ್ತರಿಸಬೇಕಾಗಬಹುದು. ಇದರ ಹೆಚ್ಚುವರಿ ಖರ್ಚಿನ ಬಗ್ಗೆ ಚಿಂತೆಯೇ? ನೀವು ಚೇತರಿಸಿಕೊಳ್ಳುತ್ತಿರುವಾಗ ನಾವು ಅದರ ಕಾಳಜಿ ವಹಿಸುತ್ತೇವೆ. ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ
ತಪ್ಪಿದ ಫ್ಲೈಟ್ ಕನೆಕ್ಷನ್‌ಗಳಿಂದಾಗಿ ಎದುರಾಗುವ ಅನಿರೀಕ್ಷಿತ ವೆಚ್ಚಗಳ ಬಗ್ಗೆ ಚಿಂತಿಸಬೇಡಿ; ನಿಮ್ಮ ತಲುಪುವ ಸ್ಥಳಕ್ಕೆ ತಲುಪಲು ವಸತಿ ಮತ್ತು ಪರ್ಯಾಯ ವಿಮಾನ ಬುಕಿಂಗ್ ವೆಚ್ಚಗಳಿಗಾಗಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ.
ವಿಮಾನ ಹೈಜಾಕ್ ಆಗುವುದು ಬಹಳ ಆತಂಕಕಾರಿ.. ಮತ್ತು ಅಧಿಕಾರಿಗಳು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುವುದರ ಜೊತೆಗೆ, ನಾವು ನಮ್ಮಿಂದ ಆಗುವುದನ್ನು ಮಾಡುತ್ತೇವೆ ಮತ್ತು ಅದರಿಂದ ಉಂಟಾಗುವ ತೊಂದರೆಗೆ ನಿಮಗೆ ಪರಿಹಾರ ನೀಡುತ್ತೇವೆ.
ಪ್ರಯಾಣ ಮಾಡುವಾಗ, ಕಳ್ಳತನ ಅಥವಾ ದರೋಡೆ ನಗದು ತೊಂದರೆಗೆ ಕಾರಣವಾಗಬಹುದು. ಆದರೆ ಚಿಂತಿಸಬೇಡಿ ; ಎಚ್‌ಡಿಎಫ್‌ಸಿ ಎರ್ಗೋ ಭಾರತದಲ್ಲಿ ಇನ್ಶೂರ್ಡ್ ಕುಟುಂಬದಿಂದ ಹಣ ವರ್ಗಾವಣೆಯನ್ನು ಸುಲಭಗೊಳಿಸಬಹುದು. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಚೆಕ್-ಇನ್ ಆದ ಬ್ಯಾಗ್‌ಗಳನ್ನು ಕಳೆದುಕೊಂಡಿದ್ದೀರಾ?? ಚಿಂತಿಸಬೇಡಿ ; ನಷ್ಟಕ್ಕೆ ನಾವು ನಿಮಗೆ ಪರಿಹಾರ ನೀಡುತ್ತೇವೆ, ಆದ್ದರಿಂದ ನೀವು ನಿಮ್ಮ ಅಗತ್ಯತೆಗಳು ಮತ್ತು ರಜೆಗೆ ಬೇಕಾದವುಗಳು ಇಲ್ಲದೆ ಹೋಗಬೇಕಾಗಿಲ್ಲ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ಕಾಯುವುದರಲ್ಲಿ ಯಾವ ಖುಷಿಯೂ ಇಲ್ಲ.. ನಿಮ್ಮ ಲಗೇಜ್ ವಿಳಂಬವಾದರೆ, ಬಟ್ಟೆ, ಟಾಯ್ಲೆಟ್ರಿಗಳು ಮತ್ತು ಔಷಧಿಯಂತಹ ಅಗತ್ಯ ವಸ್ತುಗಳಿಗೆ ನಾವು ನಿಮಗೆ ಮರುಪಾವತಿ ಮಾಡುತ್ತೇವೆ, ಆದ್ದರಿಂದ ನೀವು ನಿಮ್ಮ ರಜಾದಿನವನ್ನು ಚಿಂತೆ ಇಲ್ಲದೆ ಪ್ರಾರಂಭಿಸಬಹುದು.
ಬ್ಯಾಗೇಜ್ ಕಳ್ಳತನವು ನಿಮ್ಮ ಪ್ರಯಾಣಕ್ಕೆ ಅಡಚಣೆ ಮಾಡಬಹುದು. ಆದ್ದರಿಂದ, ನಿಮ್ಮ ಪ್ರಯಾಣಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಲು, ಬ್ಯಾಗೇಜ್ ಕಳ್ಳತನದ ಸಂದರ್ಭದಲ್ಲಿ ನಾವು ನಿಮಗೆ ಮರುಪಾವತಿ ಮಾಡುತ್ತೇವೆ. ಪಾಲಿಸಿಯು ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.
ನಮ್ಮ ಕೆಲವು ಟ್ರಾವೆಲ್ ಪ್ಲಾನ್‌ಗಳಲ್ಲಿ ಮೇಲೆ ತಿಳಿಸಿದ ಕವರೇಜ್ ಲಭ್ಯವಿರದೇ ಇರಬಹುದು. ನಮ್ಮ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ದಯವಿಟ್ಟು ಪಾಲಿಸಿ ನಿಯಮಾವಳಿಗಳು, ಕರಪತ್ರ ಮತ್ತು ಪ್ರಾಸ್ಪೆಕ್ಟಸ್ ಓದಿ.
ಯುದ್ಧ ಅಥವಾ ಕಾನೂನು ಉಲ್ಲಂಘನೆಯಿಂದ ಉಂಟಾದ ಯಾವುದೇ ಕಾಯಿಲೆ ಅಥವಾ ಆರೋಗ್ಯ ಸಮಸ್ಯೆಗಳು.
ನೀವು ಮಾದಕ ಅಥವಾ ನಿಷೇಧಿತ ಪದಾರ್ಥಗಳನ್ನು ಬಳಸಿದರೆ, ಯಾವುದೇ ಕ್ಲೇಮ್‌ಗಳನ್ನು ಪಾಲಿಸಿಯು ಅವಕಾಶ ನೀಡುವುದಿಲ್ಲ.
ಪ್ರಯಾಣ ಮಾಡುವ ಮೊದಲು ನೀವು ರೋಗದಿಂದ ಬಳಲುತ್ತಿದ್ದರೆ ಅಥವಾ ಈಗಾಗಲೇ ಅಸ್ತಿತ್ವದಲ್ಲಿರುವ ಅನಾರೋಗ್ಯಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರೆ, ನಾವು ಅದನ್ನು ಕವರ್ ಮಾಡುವುದಿಲ್ಲ.
ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕಾಸ್ಮೆಟಿಕ್ ಅಥವಾ ಬೊಜ್ಜಿನ ಚಿಕಿತ್ಸೆ ಪಡೆಯಲು ಇಚ್ಛಿಸಿದರೆ, ಪಾಲಿಸಿಯು ಅದನ್ನು ಕವರ್ ಮಾಡುವುದಿಲ್ಲ.
ನಿಮಗೆ ನೀವೇ ಹಾನಿ ಮಾಡಿಕೊಂಡರೆ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸಿ ಆಸ್ಪತ್ರೆಗೆ ದಾಖಲಾಗುವ ಸ್ಥಿತಿ ತಲುಪಿದರೆ, ನಾವು ನಿಮಗೆ ಪಾಲಿಸಿಯಡಿ ಕವರ್ ನೀಡಲು ಸಾಧ್ಯವಿಲ್ಲ
ಸಾಹಸ ಕ್ರೀಡೆಯಿಂದ ಆದ ಯಾವುದೇ ಹಾನಿಯು ಪಾಲಿಸಿಯಡಿ ಕವರ್ ಆಗುವುದಿಲ್ಲ.
ಅಂತಾರಾಷ್ಟ್ರೀಯ ತಾಣಕ್ಕೆ ಪ್ರಯಾಣ ಮಾಡಲು ಯೋಜಿಸುತ್ತಿರುವ ಸೋಲೋ ಪ್ರಯಾಣಿಕರಿಗಾಗಿ ವಿನ್ಯಾಸಗೊಳಿಸಲಾಗಿದೆ. ವಿರಾಮಕ್ಕಾಗಿ ಫನ್ ಟೂರ್ ಆಗಿರಲಿ ಅಥವಾ ಬಿಸಿನೆಸ್ ಅಥವಾ ಉದ್ಯೋಗದ ಉದ್ದೇಶಗಳಿಗಾಗಿ ಶಾರ್ಟ್ ಟ್ರಿಪ್ ಆಗಿರಲಿ, ಈ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಪ್ರಕಾರದೊಂದಿಗೆ ಆಕಸ್ಮಿಕ ಘಟನೆಗಳಿಂದ ನಿಮ್ಮ ಪ್ರಯಾಣವನ್ನು ನೀವು ಸುಲಭವಾಗಿ ಸುರಕ್ಷಿತಗೊಳಿಸಬಹುದು. ವಿದೇಶಿ ಸಿಂಗಲ್ ಟ್ರಿಪ್‌ಗಳಿಗೆ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಒಂದೇ ನಿರ್ದಿಷ್ಟ ಪ್ರಯಾಣವನ್ನು ಮಾತ್ರ ಕವರ್ ಮಾಡುತ್ತದೆ ಎಂಬುದನ್ನು ಗಮನಿಸಿ. ಇದರರ್ಥ ಈ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅಡಿಯಲ್ಲಿನ ಕವರೇಜ್ ಸಾಮಾನ್ಯವಾಗಿ ಆ ನಿರ್ದಿಷ್ಟ ಪ್ರಯಾಣ ಪ್ರಾರಂಭವಾಗುವ ಸಮಯದಿಂದ ಆರಂಭವಾಗುತ್ತದೆ ಮತ್ತು ಸಂಘಟಿತ ಪ್ರಯಾಣದ ನಿರ್ದಿಷ್ಟ ಅವಧಿಯವರೆಗೆ ಇರುತ್ತದೆ. ಆದ್ದರಿಂದ ವರ್ಷದ ನಿರ್ದಿಷ್ಟ ಅಂತಾರಾಷ್ಟ್ರೀಯ ರಜಾದಿನವನ್ನು ಗಮನದಲ್ಲಿಟ್ಟುಕೊಂಡಿರುವವರು ಈ ಪ್ಲಾನ್ ಪ್ರಕಾರವನ್ನು ಸುಲಭವಾಗಿ ಆಯ್ಕೆ ಮಾಡಿಕೊಳ್ಳಬಹುದು.
ತಮ್ಮನ್ನು ತಾವು ಪ್ರಯಾಣ ಉತ್ಸಾಹಿಗಳನ್ನಾಗಿ ಪರಿಗಣಿಸುವವರಿಗಾಗಿ ವಿನ್ಯಾಸಗೊಳಿಸಲಾಗಿದೆ, ಇದು ಒಂದು ವರ್ಷದಲ್ಲಿ (365 ದಿನಗಳು) ಅನೇಕ ಪ್ರಯಾಣಗಳನ್ನು ಕವರ್ ಮಾಡುವ ವಿದೇಶಿ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಆಗಿದೆ. ಆದ್ದರಿಂದ, ವಿಹಾರಕ್ಕೆ ಹೋಗಲು ಇಷ್ಟಪಡುವ ಏಕವ್ಯಕ್ತಿ ಪ್ರಯಾಣಿಕರು ಅಥವಾ ವ್ಯಾಪಾರ ಅಥವಾ ಉದ್ಯೋಗದ ಉದ್ದೇಶಗಳಿಗಾಗಿ ಆಗಾಗ್ಗೆ ಪ್ರಯಾಣಿಸಬೇಕಾದ ವ್ಯಕ್ತಿಗಳು, ಒಂದು ವರ್ಷದೊಳಗೆ ಅನೇಕ ಬಾರಿ, ವೈಯಕ್ತಿಕ ಮಲ್ಟಿ ಟ್ರಿಪ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಆಯ್ಕೆಮಾಡಿಕೊಳ್ಳಬಹುದು. ಈ ಪಾಲಿಸಿಯು ಒಂದು ವರ್ಷದೊಳಗೆ ಬಹು ಟ್ರಿಪ್‌ಗಳನ್ನು ಒಳಗೊಂಡಿದೆ, ಅಂದರೆ ಒಂದೇ ಪಾಲಿಸಿಯಡಿಯಲ್ಲಿ ನೀವು ಬಹು ಪ್ರಯಾಣಗಳಿಗೆ ಕವರೇಜ್ ಪಡೆಯುತ್ತೀರಿ. ಇದು ಟ್ರಾವೆಲ್ ಇನ್ಶೂರೆನ್ಸ್ ಖರೀದಿಸುವುದು ಮತ್ತು ನಿರ್ವಹಿಸುವುದನ್ನು ಸುಲಭಗೊಳಿಸುತ್ತದೆ ಇದರರ್ಥ ನೀವು ಗಮನಾರ್ಹವಾಗಿ ಕಡಿಮೆ ಪೇಪರ್‌ವರ್ಕ್‌ನೊಂದಿಗೆ ವ್ಯವಹರಿಸಬೇಕು ಎಂದಾಗಿದೆ. ನೀವು ಅನೇಕ ಅನಿರೀಕ್ಷಿತ ವೈದ್ಯಕೀಯ ಮತ್ತು ವೈದ್ಯಕೀಯೇತರ ಘಟನೆಗಳನ್ನು ಒಳಗೊಂಡಂತೆ ಎಲ್ಲಾ ಸಾಮಾನ್ಯ ಕವರೇಜ್ ಅನ್ನು ಪಡೆಯುತ್ತಿರುವಾಗ, ವರ್ಷದೊಳಗೆ ಪ್ರತಿ ಟ್ರಿಪ್‌ಗೆ ಕವರೇಜ್ ಗರಿಷ್ಠ ದಿನದ ಮಿತಿಯನ್ನು ಹೊಂದಿದೆ ಎಂಬುದನ್ನು ಗಮನಿಸಿ.
ಟ್ರಾವೆಲ್ ಮೆಡಿಕಲ್ ಇನ್ಶೂರೆನ್ಸ್ ಎಂಬುದು ಜಗತ್ತಿನಾದ್ಯಂತ ನಿಮ್ಮ ಸೋಲೋ ಸಾಹಸಗಳಲ್ಲಿ ನೀವು ಹೊಂದಬಹುದಾದ ಅತ್ಯಂತ ಸೂಕ್ತವಾದ ಟ್ರಿಪ್ ಸಂಗಾತಿಯಾಗಿದೆ. ವೈದ್ಯಕೀಯ ತುರ್ತುಸ್ಥಿತಿಗಳು ಸಾಮಾನ್ಯವಾಗಿ ಅನಿರೀಕ್ಷಿತವಾಗಿ ಬರುತ್ತವೆ ಮತ್ತು ವಿದೇಶಕ್ಕೆ ಸೋಲೋ ಟ್ರಿಪ್‌ನಲ್ಲಿರುವಾಗ ಅವುಗಳೊಂದಿಗೆ ವ್ಯವಹರಿಸುವುದು ನಿಜವಾಗಿಯೂ ಕಷ್ಟವಾಗಬಹುದು. ಇದು ಮಾನಸಿಕ ಒತ್ತಡವನ್ನು ಉಂಟುಮಾಡುವುದಷ್ಟೇ ಅಲ್ಲದೆ ವಿದೇಶದಲ್ಲಿ ದುಬಾರಿ ಹೆಲ್ತ್‌ಕೇರ್ ನಿಮ್ಮ ಒಟ್ಟಾರೆ ಪ್ರಯಾಣದ ಬಜೆಟ್ ಮೇಲೆ ಕೂಡ ಪರಿಣಾಮ ಬೀರುತ್ತದೆ.
ಆದ್ದರಿಂದ, ನಿಮ್ಮ ಏಕವ್ಯಕ್ತಿ ಪ್ರಯಾಣದಲ್ಲಿ ಇಂತಹ ಸಮಸ್ಯೆಗಳು ಒಂದು ದೊಡ್ಡ ಸಮಸ್ಯೆಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನೀವು ತೆಗೆದುಕೊಳ್ಳಬಹುದಾದ ಅತ್ಯುತ್ತಮ ಹೆಜ್ಜೆ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಹೂಡಿಕೆ ಮಾಡುವುದು. ಅದರ ಹಣಕಾಸಿನ ನೆರವು ಮತ್ತು ಸಮಯದ ಮಿತಿ ಇರದ ಬೆಂಬಲದೊಂದಿಗೆ, ನಿಮ್ಮ ಅಂತಾರಾಷ್ಟ್ರೀಯ ಪ್ರಯಾಣದಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಾಗ ನಿಮಗೆ ಅಗತ್ಯವಿರುವ ಸರಿಯಾದ ವೈದ್ಯಕೀಯ ಆರೈಕೆಯನ್ನು ನೀವು ಪಡೆಯಬಹುದು. ಈ ಪ್ಲಾನ್ ಅಡಿಯಲ್ಲಿ ನೀಡಲಾಗುವ ಕವರೇಜ್‌ನ ಕೆಲವು ಉದಾಹರಣೆಗಳು ಎಂದರೆ:
• ತುರ್ತು ವೈದ್ಯಕೀಯ ಪ್ರಯೋಜನಗಳು: ಇದು ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್‌ನ ಪ್ರಮುಖ ಫೀಚರ್‌ಗಳಲ್ಲಿ ಒಂದಾಗಿದೆ. ಆಸ್ಪತ್ರೆ ದಾಖಲಾತಿ, ರೂಮ್ ಬಾಡಿಗೆ, OPD ಚಿಕಿತ್ಸೆ ಮತ್ತು ರಸ್ತೆ ಆಂಬ್ಯುಲೆನ್ಸ್ ವೆಚ್ಚಗಳು ಸೇರಿದಂತೆ ಪ್ರಯಾಣದ ಸಮಯದಲ್ಲಿ ಅಪಘಾತ ಅಥವಾ ಅನಾರೋಗ್ಯದಿಂದಾಗಿ ಉಂಟಾದ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ. ತುರ್ತು ವೈದ್ಯಕೀಯ ಸ್ಥಳಾಂತರ, ವೈದ್ಯಕೀಯ ವಾಪಸಾತಿ ಮತ್ತು ಅಸ್ಥಿ ಅವಶೇಷಗಳನ್ನು ವಾಪಾಸ್ ಕಳುಹಿಸುವ ವೆಚ್ಚಗಳನ್ನು ಕೂಡ ಇದು ಮರುಪಾವತಿಸುತ್ತದೆ.
• ಆಸ್ಪತ್ರೆ ನಗದು: ಪ್ರಯಾಣದ ಸಮಯದಲ್ಲಿ ಅನಾರೋಗ್ಯ ಅಥವಾ ಅಪಘಾತದಿಂದಾಗಿ ವಿಮಾದಾರರು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿದ್ದರೆ, ವಿಮಾದಾತರು ಪ್ಲಾನಿನಲ್ಲಿ ತಿಳಿಸಿದಂತೆ "ನಗದು" ದೈನಂದಿನ ಭತ್ಯೆಯನ್ನು ಒದಗಿಸುತ್ತಾರೆ.
• ವೈದ್ಯಕೀಯ ಸ್ಥಳಾಂತರ: ಸರಿಯಾದ ಚಿಕಿತ್ಸೆಯನ್ನು ಪಡೆಯಲು ವಿಮಾದಾರರಿಗೆ ತುರ್ತು ವೈದ್ಯಕೀಯ ಸ್ಥಳಾಂತರದ ಅಗತ್ಯವಿರುವಲ್ಲಿ, ರೋಗಿಯನ್ನು ರಸ್ತೆ ಅಥವಾ ವಾಯು ಸಾರಿಗೆಯ ಮೂಲಕ ಸ್ಥಳಾಂತರಿಸಲು ಉಂಟಾದ ಸಂಬಂಧಿತ ವೆಚ್ಚಗಳನ್ನು ಪಾಲಿಸಿಯು ಕವರ್ ಮಾಡುತ್ತದೆ.
• ಶಾಶ್ವತ ಅಂಗವಿಕಲತೆ: ಪ್ರಯಾಣದಲ್ಲಿರುವಾಗ ಅಪಘಾತದಿಂದ ಉಂಟಾದ ಶಾಶ್ವತ ಅಂಗವಿಕಲತೆಯ ಸಂದರ್ಭದಲ್ಲಿ, ಪಾಲಿಸಿಯು ವಿಮಾದಾರರಿಗೆ ಒಟ್ಟು ಮೊತ್ತದ ಪರಿಹಾರವನ್ನು ನೀಡುತ್ತದೆ.
ವೈಯಕ್ತಿಕ ಟ್ರಾವೆಲ್ ಪ್ಲಾನಿನ ನಿರ್ದಿಷ್ಟ ಫೀಚರ್‌ಗಳು ಒಂದು ಪೂರೈಕೆದಾರರಿಂದ ಇನ್ನೊಂದಕ್ಕೆ ಬದಲಾಗುತ್ತವೆ. ಎಚ್‌ಡಿಎಫ್‌ಸಿ ಎರ್ಗೋದಿಂದ ಭಾರತದ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ ಬರುವ ಪ್ರಮುಖ ಫೀಚರ್‌ಗಳ ಕೆಲವು ಉದಾಹರಣೆಗಳು ಇಲ್ಲಿವೆ
ಪ್ರಮುಖ ಫೀಚರ್‌ಗಳು | ಪ್ರಯೋಜನಗಳು |
ಪ್ರಪಂಚದಾದ್ಯಂತ ನಗದುರಹಿತ ಆಸ್ಪತ್ರೆ ನೆಟ್ವರ್ಕ್‌ನ ವ್ಯಾಪಕ ಶ್ರೇಣಿ | ವಿಶ್ವದಾದ್ಯಂತ 1 ಲಕ್ಷಕ್ಕಿಂತ ಹೆಚ್ಚು ನೆಟ್ವರ್ಕ್ ಆಸ್ಪತ್ರೆಗಳೊಂದಿಗೆ, ನಿಮ್ಮ ಅಂತಾರಾಷ್ಟ್ರೀಯ ಟ್ರಿಪ್‌ಗಳಲ್ಲಿ ಅಗತ್ಯವಿದ್ದರೆ ನೀವು ಸುಲಭವಾಗಿ ನಗದುರಹಿತ ಕ್ಲೈಮ್ ಸೌಲಭ್ಯವನ್ನು ಪಡೆಯಬಹುದು. ನಗದುರಹಿತ ಸೌಲಭ್ಯವು ನಿಮ್ಮ ಜೇಬಿಗೆ ಭಾರವಾಗದೆ ಸರಿಯಾದ ವೈದ್ಯಕೀಯ ಆರೈಕೆಗೆ ಅಕ್ಸೆಸ್ ನೀಡುತ್ತದೆ. |
ವ್ಯಾಪಕ ಕವರೇಜ್ ಮೊತ್ತ | ಎಚ್‌ಡಿಎಫ್‌ಸಿ ಎರ್ಗೋ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ನಿಮಗೆ $40K ರಿಂದ $1000K ವರೆಗೆ ಕವರೇಜ್ ಆಯ್ಕೆಗಳನ್ನು ನೀಡುತ್ತದೆ. ನಿಮ್ಮ ಟ್ರಿಪ್ ಅವಶ್ಯಕತೆ ಮತ್ತು ಒಟ್ಟಾರೆ ಬಜೆಟ್ ಆಧಾರದ ಮೇಲೆ, ನೀವು ಸೂಕ್ತ ಕವರೇಜ್ ಮೊತ್ತ ಆಯ್ಕೆ ಮಾಡಬಹುದು. |
ಕೋವಿಡ್-19 ಗಾಗಿ ಕವರ್ | ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯು ಪ್ರಯಾಣದ ಸಮಯದಲ್ಲಿ ಕೋವಿಡ್-19 ಪರಿಣಾಮದಿಂದ ಆಸ್ಪತ್ರೆಗೆ ದಾಖಲಾಗುವುದು ಮತ್ತು ಇತರ ವೆಚ್ಚಗಳನ್ನು ಕವರ್ ಮಾಡುತ್ತದೆ. |
ಸ್ಪರ್ಧಾತ್ಮಕ ಬೆಲೆಗಳಲ್ಲಿ ರೂಪಿಸಲಾದ ಪ್ಲಾನ್‌ಗಳು | ನಿಮ್ಮ ಟ್ರಿಪ್ ಬಜೆಟ್ ಮತ್ತು ಅವಶ್ಯಕತೆಗಳಿಗೆ ನೀವು ಸಿಲ್ವರ್, ಗೋಲ್ಡ್ ಮತ್ತು ಪ್ಲಾಟಿನಂ ಪ್ಲಾನ್ ಆಯ್ಕೆಗಳ ನಡುವೆ ಆಯ್ಕೆ ಮಾಡಬಹುದು. |
ವೈದ್ಯಕೀಯ ಮತ್ತು ವೈದ್ಯಕೀಯವಲ್ಲದ ಕವರ್ | ವೈದ್ಯಕೀಯ ಮತ್ತು ದಂತ ತುರ್ತುಸ್ಥಿತಿಗಳ ಜೊತೆಗೆ, ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಪ್ಲಾನ್ ಅನಿರೀಕ್ಷಿತ ವೈದ್ಯಕೀಯ ಘಟನೆಗಳನ್ನು ಕೂಡ ಕವರ್ ಮಾಡುತ್ತದೆ. ಇದು ಟ್ರಿಪ್ ಮೊಟಕುಗೊಳಿಸುವಿಕೆ, ಹೈಜಾಕ್ ಯಾತನೆ ಭತ್ಯೆ, ವಿಮಾನ ವಿಳಂಬ, ಚೆಕ್-ಇನ್ ಬ್ಯಾಗೇಜ್ ನಷ್ಟ ಇತ್ಯಾದಿಗಳಿಗೆ ರಕ್ಷಣೆಯನ್ನು ಒಳಗೊಂಡಿದೆ. |
24x7 ಇನ್-ಹೌಸ್ ಕ್ಲೇಮ್ ಸಹಾಯ | ಎಚ್‌ಡಿಎಫ್‌ಸಿ ಎರ್ಗೋ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್‌ನೊಂದಿಗೆ, ನೀವು 24x7 ಕ್ಲೈಮ್ ಸೆಟಲ್ಮೆಂಟ್ ಸೇವೆಯನ್ನು ಪಡೆಯುತ್ತೀರಿ, ಇದು ಪ್ರಯಾಣವನ್ನು ಹೆಚ್ಚು ನಿರ್ವಹಣಾತ್ಮಕವಾಗಿಸುತ್ತದೆ ಮತ್ತು ಮೋಜು ನೀಡುತ್ತದೆ. |
ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಲು ಪರಿಗಣಿಸುತ್ತಿದ್ದರೆ, ಅರ್ಹತಾ ಮಾನದಂಡಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿಷಯಗಳು ಇಲ್ಲಿವೆ ;
• ರಜಾದಿನಗಳು, ಬಿಸಿನೆಸ್ ಮತ್ತು ಅಧಿಕೃತ ಮತ್ತು ಉದ್ಯೋಗ ಉದ್ದೇಶಗಳಿಗೆ ಸಂಬಂಧಿಸಿದ ಪ್ರಯಾಣಗಳಿಗಾಗಿ ಭಾರತೀಯ ನಿವಾಸಿಗಳಿಗೆ ಈ ಪಾಲಿಸಿಯು ವಿಶ್ವವ್ಯಾಪಿ ಕವರೇಜ್‌ನೊಂದಿಗೆ ಬರುತ್ತದೆ.
• ವಯಸ್ಸಿನ ಮಿತಿ 91 ದಿನಗಳಿಂದ 70 ವರ್ಷಗಳವರೆಗೆ ಇರುತ್ತದೆ.
ಡಾಕ್ಯುಮೆಂಟೇಶನ್ ವಿಷಯದಲ್ಲಿ, ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್‌ಗೆ ಅಗತ್ಯವಿರುವ ನಿಖರವಾದ ಪೇಪರ್‌ವರ್ಕ್ ಅನ್ನು ಕಂಡುಹಿಡಿಯಲು ನಿಮ್ಮ ವಿಮಾದಾತರನ್ನು ಸಂಪರ್ಕಿಸುವುದನ್ನು ಖಚಿತಪಡಿಸಿಕೊಳ್ಳಿ. ಆನ್ಲೈನಿನಲ್ಲಿ ಖರೀದಿಸುವಾಗ ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಶೂನ್ಯ ಪೇಪರ್‌ವರ್ಕ್ ಆಗಿರುವುದರಿಂದ ನಿಶ್ಚಿಂತರಾಗಿರಿ, ಪಾಲಿಸಿಯನ್ನು ಖರೀದಿಸುವಾಗ ಮಾತ್ರ ನೀವು ಈ ಕೆಳಗಿನ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ:
• ಪ್ರಯಾಣದ ಸ್ಥಳ ಮತ್ತು ಅವಧಿಯ ವಿವರಗಳು.
• ಹೆಸರು, ಲಿಂಗ, ಪಾಸ್‌ಪೋರ್ಟ್ ನಂಬರ್, ಹುಟ್ಟಿದ ದಿನಾಂಕ ಮತ್ತು ವೈದ್ಯಕೀಯ ಇತಿಹಾಸದಂತಹ ವಿಮಾದಾರರ ವೈಯಕ್ತಿಕ ವಿವರಗಳು (ಯಾವುದಾದರೂ ಇದ್ದರೆ).”
• ಹೆಸರು, ವಿಳಾಸ, PAN ಕಾರ್ಡ್ ನಂಬರ್ ಮತ್ತು ನಾಮಿನಿ ವಿವರಗಳಂತಹ ಪ್ರಸ್ತಾಪಕರ ವೈಯಕ್ತಿಕ ವಿವರಗಳು.
• ಈ ಅಂಶದ ಮೇಲೆ ಹೆಚ್ಚುವರಿ ವಿವರಗಳಿಗಾಗಿ ಟೋಲ್-ಫ್ರೀ ನಂಬರ್ ಅಥವಾ ಇಮೇಲ್ ಮೂಲಕ ವಿಮಾದಾತರನ್ನು ಸಂಪರ್ಕಿಸುವುದನ್ನು ಖಚಿತಪಡಿಸಿಕೊಳ್ಳಿ.
ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಯನ್ನು ಹುಡುಕುವಾಗ, ಕ್ಲೈಮ್ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳಿ. ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಸಲ್ಲಿಸುವುದು ತುಂಬಾ ಸುಲಭ. ನೀವು ಅನುಸರಿಸಬಹುದಾದ ಎರಡು ಕ್ಲೈಮ್‌ಗಳ ಪ್ರಕ್ರಿಯೆಗಳು ಇಲ್ಲಿವೆ ;
travelclaims@hdfcergo.com / medical.ervices@allianz.com ಗೆ ಕ್ಲೈಮ್ ಬಗ್ಗೆ ತಿಳಿಸಿ ಮತ್ತು TPA ಯಿಂದ ನೆಟ್ವರ್ಕ್ ಆಸ್ಪತ್ರೆಗಳ ಪಟ್ಟಿಯನ್ನು ಪಡೆಯಿರಿ.
ಚೆಕ್‌ಲಿಸ್ಟ್: travelclaims@hdfcergo.com ನಗದುರಹಿತ ಕ್ಲೈಮ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಚೆಕ್‌ಲಿಸ್ಟನ್ನು ಹಂಚಿಕೊಳ್ಳುತ್ತದೆ
ನಮ್ಮ TPA ಪಾಲುದಾರರಿಗೆ ನಗದುರಹಿತ ಕ್ಲೈಮ್ ಡಾಕ್ಯುಮೆಂಟ್‌ಗಳು ಮತ್ತು ಪಾಲಿಸಿ ವಿವರಗಳನ್ನು medical.services@allianz.com ನಲ್ಲಿ ಕಳುಹಿಸಿ.
ಪಾಲಿಸಿಯ ನಿಯಮ ಮತ್ತು ಷರತ್ತುಗಳ ಪ್ರಕಾರ ಮುಂದಿನ ನಗದುರಹಿತ ಕ್ಲೈಮ್ ಪ್ರಕ್ರಿಯೆಗಾಗಿ ನಮ್ಮ ಸಂಬಂಧಪಟ್ಟ ತಂಡವು 24 ಗಂಟೆಗಳ ಒಳಗೆ ನಿಮ್ಮನ್ನು ಸಂಪರ್ಕಿಸುತ್ತದೆ.
travelclaims@hdfcergo.com ಗೆ ಬರೆದು ಕ್ಲೇಮ್ ಬಗ್ಗೆ ತಿಳಿಸಿ ಮತ್ತು TPA ನಿಂದ ನಮ್ಮ ನೆಟ್ವರ್ಕ್‌ಗೆ ಒಳಪಡುವ ಆಸ್ಪತ್ರೆಗಳ ಪಟ್ಟಿ ಪಡೆಯಿರಿ.
travelclaims@hdfcergo.com ಮರುಪಾವತಿ ಕ್ಲೈಮ್‌ಗಳಿಗೆ ಅಗತ್ಯವಿರುವ ಡಾಕ್ಯುಮೆಂಟ್‌ಗಳ ಚೆಕ್‌ಲಿಸ್ಟನ್ನು ಹಂಚಿಕೊಳ್ಳುತ್ತದೆ.
ಚೆಕ್‌ಲಿಸ್ಟ್ ಪ್ರಕಾರ ಮರುಪಾವತಿಗಾಗಿ ಎಲ್ಲಾ ಅಗತ್ಯ ಡಾಕ್ಯುಮೆಂಟ್‌ಗಳನ್ನು travelclaims@hdfcergo.com ಗೆ ಕಳುಹಿಸಿ
ಸಂಪೂರ್ಣ ಡಾಕ್ಯುಮೆಂಟ್‌ಗಳನ್ನು ಸ್ವೀಕರಿಸಿದ ನಂತರ, ಪಾಲಿಸಿಯ ನಿಯಮ ಮತ್ತು ಷರತ್ತುಗಳ ಪ್ರಕಾರ 7 ದಿನಗಳ ಒಳಗೆ ಕ್ಲೈಮ್ ನೋಂದಣಿಯಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ, ವೈಯಕ್ತಿಕ ಟ್ರಾವೆಲ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಫೈಲ್ ಮಾಡುವುದು ಮತ್ತು ಸೆಟಲ್ ಮಾಡುವುದು ಸರಳ ಕೆಲಸವಾಗಿದೆ. ವಿಶ್ವದಾದ್ಯಂತ 24x7 ಕ್ಲೈಮ್ ಬೆಂಬಲ ಮತ್ತು 1 ಲಕ್ಷ+ ನೆಟ್ವರ್ಕ್ ಆಸ್ಪತ್ರೆಗಳು ನಗದುರಹಿತ ಮತ್ತು ಮರುಪಾವತಿ ಕ್ಲೈಮ್‌ಗಳನ್ನು ಸುಲಭಗೊಳಿಸಿವೆ.
ಕಡ್ಡಾಯವಾಗಿ ಓವರ್‌ಸೀಸ್ ಟ್ರಾವೆಲ್ ಇನ್ಶೂರೆನ್ಸ್ ಅಗತ್ಯವಿರುವ ಕೆಲವು ದೇಶಗಳು ಹೀಗಿವೆ: ಇದು ಅಂತಹ ದೇಶಗಳನ್ನು ಸೂಚಿಸುವ ಪಟ್ಟಿಯಷ್ಟೇ. ಹೊರಡುವ ಮೊದಲು ಪ್ರತ್ಯೇಕವಾಗಿ ಪ್ರತಿ ದೇಶದ ವೀಸಾ ಅವಶ್ಯಕತೆಯನ್ನು ಪರಿಶೀಲಿಸುವುದು ಒಳ್ಳೆಯದು.
ಮೂಲ: VisaGuide.World
ಯಾವುದೇ ಸಂದರ್ಭದಲ್ಲೂ ನಿಮಗೆ ಸೂಕ್ತ ಕವರ್ ನೀಡುವ ವಿಮಾ ಮೊತ್ತವನ್ನು ಆಯ್ಕೆಮಾಡಿ. ಸರಾಸರಿ ವೈದ್ಯಕೀಯ ಚಿಕಿತ್ಸೆ ವೆಚ್ಚವು ದೇಶದಿಂದ ದೇಶಕ್ಕೆ ಭಿನ್ನವಾಗಿರುವುದರಿಂದ, ನೀವು ಯಾವ ದೇಶಕ್ಕೆ ಹೋಗುತ್ತಿದ್ದೀರಿ ಎನ್ನುವ ಆಧಾರದ ಮೇಲೆ ನಾವು ಅದನ್ನು ಶಿಫಾರಸು ಮಾಡುತ್ತೇವೆ.
ಖಂಡಿತ. ನಿಮಗೆ ಸರಿ ಎಂದು ತೋರುವ ವೈಯಕ್ತಿಕ ವಿಮಾ ಮೊತ್ತದ ಆಧಾರದ ಮೇಲೆ ಅಥವಾ ಫ್ಲೋಟರ್ ಆಧಾರದ ಮೇಲೆ ನಿಮ್ಮ ಪೋಷಕರಿಗೆ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಬಹುದು.
ಇಲ್ಲ. ನಿಮ್ಮ ಹತ್ತಿರದ ಕುಟುಂಬ ಸದಸ್ಯರಿಗೆ ಮಾತ್ರ, ನೀವು ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬಹುದು.
ಹೌದು, ನೀವು ಹೈಪರ್‌ಟೆನ್ಶನ್/ಡಯಾಬಿಟಿಸ್‌ನಿಂದ ಬಳಲುತ್ತಿದ್ದರೆ ಅದನ್ನು ಘೋಷಿಸುವ ಮೂಲಕ ನೀವು ಟ್ರಾವೆಲ್ ಇನ್ಶೂರೆನ್ಸ್ ಖರೀದಿಸಬಹುದು. ಆದಾಗ್ಯೂ, ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ, ನಿಮಗೆ ಮೊದಲೇ ಇದ್ದ ಕಾಯಿಲೆಗೆ ತಗುಲುವ ವೆಚ್ಚಗಳ ಹೊರತಾಗಿ, ಉಳಿದ ಎಲ್ಲಾ ವೆಚ್ಚಗಳಿಗೆ ನಿಮಗೆ ಕವರ್ ದೊರೆಯುತ್ತದೆ.
ಎಲ್ಲಾ ಪ್ರಕರಣಗಳಲ್ಲೂ ವಿಮಾದಾರರು ಮುಂಚಿತವಾಗಿ ಭರಿಸಬೇಕಾದ ಮೊತ್ತಕ್ಕೆ ಕಡಿತಕ್ಕೆ ಒಳಪಟ್ಟವುಗಳು ಎನ್ನುತ್ತಾರೆ. ಆ ಮೊತ್ತವನ್ನು ಕ್ಲೇಮ್ ಮೊತ್ತದಿಂದ ಕಡಿತಗೊಳಿಸಲಾಗುತ್ತದೆ.
61 ವರ್ಷ ಮೀರಿದವರಿಗೆ ಮಾತ್ರ ಉಪಮಿತಿ ಅನ್ವಯವಾಗುತ್ತದೆ. ಅದನ್ನು ಪಾಲಿಸಿ ಶೆಡ್ಯೂಲ್‌ನಲ್ಲೂ ಸ್ಪಷ್ಟಪಡಿಸಲಾಗಿದೆ.
ಇಲ್ಲ. ಅಂತಹ ಯಾವುದೇ ಅವಶ್ಯಕತೆ ಇಲ್ಲ. ಯಾವುದೇ ಪಾಲಿಸಿ-ಪೂರ್ವ ಕಾಯಿಲೆಯ ಬಗ್ಗೆ ಘೋಷಿಸಿದರೆ ಸಾಕಾಗುತ್ತದೆ.
ಇಲ್ಲ. ಪಾಲಿಸಿ-ಪೂರ್ವ ಕಾಯಿಲೆಗಳನ್ನು ಈ ಪಾಲಿಸಿ ಕವರ್ ಮಾಡುವುದಿಲ್ಲ.. ಮುಂಚಿತ-ಅಸ್ತಿತ್ವದಲ್ಲಿರುವ ಕಾಯಿಲೆ' ಎಂದರೆ ವ್ಯಕ್ತಿಯು ಪಾಲಿಸಿಯನ್ನು ಖರೀದಿಸುವ ಮೊದಲು ಈಗಾಗಲೇ ರೋಗದಿಂದ ಬಳಲುತ್ತಿದ್ದಾರೆ.
ತುರ್ತು ವೈದ್ಯಕೀಯ ಸ್ಥಳಾಂತರ ಎಂದರೆ ಇನ್ಶೂರ್ಡ್ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ವರ್ಗಾಯಿಸಲು ಮಾಡಲಾಗುವ ಸಾರಿಗೆ ವ್ಯವಸ್ಥೆ. ವೈದ್ಯಕೀಯ ವಾಪಸಾತಿ ಎಂದರೆ ತುರ್ತುಸ್ಥಿತಿಯಲ್ಲಿ ಇನ್ಶೂರ್ಡ್ ವ್ಯಕ್ತಿಯನ್ನು ತಮ್ಮ ಸ್ವದೇಶಕ್ಕೆ ಕಳುಹಿಸಲು ಮಾಡಲಾಗುವ ಸಾರಿಗೆ ವ್ಯವಸ್ಥೆ.