ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿದಾರರ ವಾಹನದಿಂದ ಆದ ಅಪಘಾತದಿಂದಾಗಿ ಉಂಟಾಗಬಹುದಾದ ಥರ್ಡ್ ಪಾರ್ಟಿ ಹೊಣೆಗಾರಿಕೆಗಳನ್ನು ಕವರ್ ಮಾಡುತ್ತದೆ. ಟೂ ವೀಲರ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇನ್ಶೂರ್ಡ್ ವ್ಯಕ್ತಿಯ ವಾಹನದಿಂದ ಅಪಘಾತವಾದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ಆಸ್ತಿ/ವ್ಯಕ್ತಿಗೆ ಉಂಟಾದ ಹಾನಿಗಳಿಗೆ ಕವರೇಜ್ ಒದಗಿಸುತ್ತದೆ. ಇದು ಥರ್ಡ್ ಪಾರ್ಟಿ ವ್ಯಕ್ತಿಯ ಸಾವು ಅಥವಾ ಶಾಶ್ವತ ಅಂಗವೈಕಲ್ಯವನ್ನು ಒಳಗೊಂಡಿದೆ. 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಟೂ ವೀಲರ್ ಮಾಲೀಕರು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿದೆ. ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಇಲ್ಲದೆ ಭಾರತದಲ್ಲಿ ಬೈಕ್ ಅಥವಾ ಸ್ಕೂಟರ್ ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ ಮತ್ತು ಇನ್ಶೂರೆನ್ಸ್ ಇಲ್ಲದೆ ನಿಮ್ಮ ವಾಹನವನ್ನು ಸವಾರಿ ಮಾಡುತ್ತಿದ್ದರೆ ಟ್ರಾಫಿಕ್ ಪೊಲೀಸರು ₹ 2000 ವರೆಗೆ ದಂಡ ವಿಧಿಸಬಹುದು. ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ನಿಂದ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಖರೀದಿಸುವುದು ತೊಂದರೆ ರಹಿತವಾಗಿದೆ, ಇಂದೇ ನಿಮ್ಮ ರೈಡ್ ಅನ್ನು ಸುರಕ್ಷಿತಗೊಳಿಸಿ.
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಖರೀದಿಸುವ ಮೊದಲು, ಅದರ ಕೆಲವು ಫೀಚರ್‌ಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು
ಫೀಚರ್‌ಗಳು | ವಿವರಣೆ |
ಕಡಿಮೆ ಪ್ರೀಮಿಯಂ | ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ₹ 538 ರಿಂದ ಆರಂಭವಾಗುತ್ತದೆ ಮತ್ತು ಸಮಗ್ರ ಇನ್ಶೂರೆನ್ಸ್‌ಗೆ ಹೋಲಿಸಿದರೆ ಇದು ತುಂಬಾ ಕೈಗೆಟಕುವಂತಿದೆ. |
ಹೊಣೆಗಾರಿಕೆ ಕವರ್ ಒದಗಿಸುತ್ತದೆ | 3ನೇ ಪಾರ್ಟಿ ಬೈಕ್ ಇನ್ಶೂರೆನ್ಸ್ ಥರ್ಡ್ ಪಾರ್ಟಿ ಆಸ್ತಿ/ವ್ಯಕ್ತಿಗೆ ಹಾನಿಯಿಂದಾಗಿ ಉಂಟಾಗುವ ಹಣಕಾಸು ಮತ್ತು ಕಾನೂನು ಹೊಣೆಗಾರಿಕೆಗಳ ವಿರುದ್ಧ ಕವರ್ ಮಾಡುತ್ತದೆ. ನಿಮ್ಮ ಇನ್ಶೂರೆನ್ಸ್ ಮಾಡಿದ ಟೂ ವೀಲರ್ ವಾಹನದಿಂದಾಗಿ ಥರ್ಡ್ ಪಾರ್ಟಿಗೆ ಉಂಟಾದ ಗಾಯ ಅಥವಾ ಮರಣವನ್ನು ಇದು ಒಳಗೊಂಡಿದೆ. |
ಖರೀದಿಸಲು ಸುಲಭ | ಶೂನ್ಯ ಡಾಕ್ಯುಮೆಂಟೇಶನ್‌ನೊಂದಿಗೆ ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಅನ್ನು ಸುಲಭವಾಗಿ ಆನ್ಲೈನಿನಲ್ಲಿ ಖರೀದಿಸಬಹುದು. |
ಕಾನೂನು ಅವಶ್ಯಕತೆಗಳನ್ನು ಪೂರೈಸಿ | ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೂಲಕ ನೀವು 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಕಡ್ಡಾಯ ಅವಶ್ಯಕತೆಯನ್ನು ಪೂರೈಸುತ್ತೀರಿ. |
ಪ್ರಯೋಜನಗಳು | ವಿವರಣೆ |
ಕಾನೂನು ತೊಂದರೆಗಳನ್ನು ತಪ್ಪಿಸಿ | 1988 ರ ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕಡ್ಡಾಯವಾಗಿದೆ. ನೀವು ಸರಿಯಾದ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಟೂ ವೀಲರ್ ವಾಹನವನ್ನು ಸವಾರಿ ಮಾಡುತ್ತಿದ್ದರೆ, ನಿಮಗೆ ದಂಡ ವಿಧಿಸಲಾಗುತ್ತದೆ. |
ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜ್ | ಇನ್ಶೂರೆನ್ಸ್ ಮಾಡಿದ ಬೈಕ್‌ನಿಂದಾಗಿ ಥರ್ಡ್ ಪಾರ್ಟಿಗೆ ಗಾಯವಾದರೆ ಅಥವಾ ದುರದೃಷ್ಟಕರ ಸಾವು ಸಂಭವಿಸಿದರೆ, ಈ ಪಾಲಿಸಿಯ ಅಡಿಯಲ್ಲಿ ಹಣಕಾಸಿನ ಪರಿಹಾರವನ್ನು ಕವರ್ ಮಾಡಲಾಗುತ್ತದೆ. |
ಕೈಗೆಟುಕುವ ಪಾಲಿಸಿ | ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಸಮಗ್ರ ಮತ್ತು ಸ್ಟ್ಯಾಂಡ್‌ಅಲೋನ್ ಸ್ವಂತ-ಹಾನಿ ಪಾಲಿಸಿಗಿಂತ ಹೆಚ್ಚು ಕೈಗೆಟಕುವಂತಿದೆ. ಕ್ಯುಬಿಕ್ ಸಾಮರ್ಥ್ಯದ ಆಧಾರದ ಮೇಲೆ IRDAI ತನ್ನ ಪ್ರೀಮಿಯಂ ಅನ್ನು ನಿರ್ಧರಿಸುತ್ತದೆ. |
ಥರ್ಡ್ ಪಾರ್ಟಿ ವಾಹನಕ್ಕೆ ಕವರೇಜ್ | ಇನ್ಶೂರೆನ್ಸ್ ಮಾಡಿದ ಬೈಕ್ ಥರ್ಡ್ ಪಾರ್ಟಿಗೆ ಹಾನಿ ಮಾಡಿದರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಯು ಕವರೇಜನ್ನು ಒದಗಿಸುತ್ತದೆ. |
ಕಾಗದರಹಿತ ಪ್ರಕ್ರಿಯೆ | ನೀವು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕ್ಲೈಮ್ ಮಾಡಿದರೆ ಅಥವಾ ಪ್ಲಾನನ್ನು ನವೀಕರಿಸಿದರೆ, ಯಾವುದೇ ಪೇಪರ್‌ವರ್ಕ್ ಅಗತ್ಯವಿಲ್ಲ. ನೀವು ಆನ್ಲೈನಿನಲ್ಲಿ ಎಲ್ಲಾ ಸಂಬಂಧಿತ ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕು. |
ನಮ್ಮ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯೊಂದಿಗೆ ಯಾವುದೇ ವೈದ್ಯಕೀಯ ತುರ್ತುಸ್ಥಿತಿಗಳ ವಿರುದ್ಧ ನಿಮ್ಮನ್ನು ರಕ್ಷಿಸಲು ನಾವು ₹ 15 ಲಕ್ಷ ಮೌಲ್ಯದ ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ (CPA) ಪಾಲಿಸಿಯನ್ನು ಒದಗಿಸುತ್ತೇವೆ.
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್‌ನಲ್ಲಿ, ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ವಾಹನಕ್ಕೆ ಸಂಬಂಧಿಸಿದ ಯಾವುದೇ ಥರ್ಡ್ ಪಾರ್ಟಿ ಆಸ್ತಿ ಹಾನಿಗೆ ಇನ್ಶೂರರ್ ವೆಚ್ಚಗಳನ್ನು ಪಾವತಿಸುತ್ತಾರೆ.
ಇನ್ಶೂರೆನ್ಸ್ ಮಾಡಿದ ವ್ಯಕ್ತಿಯ ವಾಹನದಿಂದಾಗಿ ಥರ್ಡ್ ಪಾರ್ಟಿ ವ್ಯಕ್ತಿಯು ಗಾಯ ಅಥವಾ ಮರಣವನ್ನು ಎದುರಿಸಿದರೆ, ಇನ್ಶೂರರ್ ವೈದ್ಯಕೀಯ ಚಿಕಿತ್ಸೆ ಅಥವಾ ಇತರ ನಷ್ಟಗಳಿಗೆ ಕವರೇಜನ್ನು ಒದಗಿಸುತ್ತಾರೆ.
ಟೂ ವೀಲರ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಖರೀದಿಸುವುದು ಕಾನೂನಿನ ಪ್ರಕಾರ ಪ್ರತಿ ಬೈಕ್/ಸ್ಕೂಟರ್ ಮಾಲೀಕರಿಗೆ ಅಗತ್ಯ ಅವಶ್ಯಕತೆಯಾಗಿದೆ. 3ನೇ ಪಾರ್ಟಿ ಬೈಕ್ ಇನ್ಶೂರೆನ್ಸ್‌ನ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಅಧ್ಯಯನ ಮಾಡಿದ ನಂತರ ನೀವು ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಆಯ್ಕೆ ಮಾಡಬಹುದು. ಈ ಕೆಳಗಿನ ಟೇಬಲ್‌ನಲ್ಲಿ ನಾವು ಅದನ್ನು ನೋಡೋಣ
ಪ್ರಯೋಜನಗಳು | ಅನಾನುಕೂಲಗಳು |
ಬೈಕ್‌ಗಾಗಿ ಥರ್ಡ್ ಪಾರ್ಟಿ ಇನ್ಶೂರೆನ್ಸ್, ಥರ್ಡ್ ಪಾರ್ಟಿಗೆ ಆಗುವ ಗಾಯ ಅಥವಾ ಮರಣವನ್ನು ಒಳಗೊಂಡಂತೆ ಥರ್ಡ್ ಪಾರ್ಟಿ ವ್ಯಕ್ತಿಯ ಹಾನಿಗಳಿಂದ ವಿಮಾದಾತರಿಗೆ ಕವರೇಜ್ ಒದಗಿಸುತ್ತದೆ. ಉದಾಹರಣೆಗೆ, ಮಿ. ಎ ಟೂ ವೀಲರ್ ಸವಾರಿ ಮಾಡುವಾಗ ಆಕಸ್ಮಿಕವಾಗಿ ಮಿ. ಬಿ ಅವರಿಗೆ ಗಾಯವಾಗುತ್ತದೆ, ಮಿ. ಬಿ ಚಿಕಿತ್ಸೆಯ ವೆಚ್ಚವನ್ನು ಇನ್ಶೂರರ್ ಪಾವತಿಸುತ್ತಾರೆ. | ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಇನ್ಶೂರ್ಡ್ ವ್ಯಕ್ತಿ ಅಥವಾ ಅವರ ವಾಹನಕ್ಕೆ ಉಂಟಾದ ಯಾವುದೇ ಹಾನಿಗಳು ಅಥವಾ ನಷ್ಟವನ್ನು ಕವರ್ ಮಾಡುವುದಿಲ್ಲ. ಉದಾಹರಣೆಗೆ: ಮಿ. ಎ ಈ ಪಾಲಿಸಿಯನ್ನು ಹೊಂದಿದ್ದಾರೆ ಮತ್ತು ಅಪಘಾತದಲ್ಲಿ ಅವರ ಸ್ಕೂಟರ್ ಹಾನಿಗೊಳಗಾಗುತ್ತದೆ, ಆ ಸಂದರ್ಭದಲ್ಲಿ ರಿಪೇರಿ ವೆಚ್ಚವನ್ನು ಮಿ. ಎ ಭರಿಸುತ್ತಾರೆ.. |
ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜ್ | ಈ ಪಾಲಿಸಿಯೊಂದಿಗೆ, ವಿಮಾದಾತರು ಪಾಲಿಸಿದಾರರ ಬೈಕ್ ಕಳ್ಳತನಕ್ಕೆ ಪರಿಹಾರ ನೀಡುವುದಿಲ್ಲ. |
ಸಮಗ್ರ ಬೈಕ್ ಇನ್ಶೂರೆನ್ಸ್ ಪಾಲಿಸಿಗೆ ಹೋಲಿಸಿದರೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕೈಗೆಟಕುತ್ತದೆ. | ಟೂ ವೀಲರ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ವೆಚ್ಚ ಕಡಿಮೆ ಇರುತ್ತದೆ. ಆದಾಗ್ಯೂ, ನೀವು ಸೀಮಿತ ಕವರೇಜ್ ಪಡೆಯುತ್ತೀರಿ. |
ಈ ಪಾಲಿಸಿಯನ್ನು ಖರೀದಿಸುವುದು ಸುಲಭ ಮತ್ತು ಪ್ರೀಮಿಯಂ ದರವನ್ನು ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ನಿರ್ಧರಿಸುತ್ತದೆ. | ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್‌ನಲ್ಲಿ ಯಾವುದೇ ರೈಡರ್‌ಗಳು ಲಭ್ಯವಿರುವುದಿಲ್ಲ. ಅಲ್ಲದೆ, ನೀವು ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಅನ್ನು ಕಸ್ಟಮೈಸ್ ಮಾಡಲು ಸಾಧ್ಯವಿರುವುದಿಲ್ಲ. |
ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ನಿಮಗೆ ಪಾಲಿಸಿದಾರರ ಅತ್ಯಂತ ಮೂಲಭೂತ ವಿಧದ ಕವರೇಜನ್ನು ಒದಗಿಸುತ್ತದೆ. ಇದು ವಾಹನ, ಆಸ್ತಿ ಅಥವಾ ವ್ಯಕ್ತಿಗೆ ಉಂಟಾದ ಯಾವುದೇ ಹಾನಿ/ನಷ್ಟಗಳಿಂದ ನಿಮ್ಮನ್ನು ಕವರ್ ಮಾಡುತ್ತದೆ. ಎಲ್ಲಾ ಟೂವೀಲರ್ ವಾಹನ ಮಾಲೀಕರಿಗೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕೂಡ ಕಡ್ಡಾಯವಾಗಿದೆ, ಅದು ವಿಫಲವಾದರೆ ₹ 2000 ದಂಡ ಮತ್ತು/ 3 ತಿಂಗಳವರೆಗೆ ಜೈಲು ಶಿಕ್ಷೆ ಆಗಬಹುದು.
ಮಾನದಂಡಗಳು | ಸಮಗ್ರವಾದ ಬೈಕ್ ಇನ್ಶೂರೆನ್ಸ್ | ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ |
ಕವರೇಜ್ | ಸಮಗ್ರ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯು ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜನ್ನು ಒದಗಿಸುತ್ತದೆ. | ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಮಾತ್ರ ಕವರೇಜನ್ನು ಒದಗಿಸುತ್ತದೆ. ಇದು ವಿಮಾದಾರರ ವಾಹನದಿಂದ ಉಂಟಾದ ಥರ್ಡ್ ಪಾರ್ಟಿಯ ಗಾಯ, ಮರಣ ಮತ್ತು ಆಸ್ತಿ ಹಾನಿಯನ್ನು ಒಳಗೊಂಡಿದೆ. |
ಅವಶ್ಯಕತೆಯ ಸ್ವರೂಪ | ಇದು ಕಡ್ಡಾಯವಲ್ಲ, ಆದಾಗ್ಯೂ ನಿಮಗೆ ಮತ್ತು ನಿಮ್ಮ ವಾಹನಕ್ಕೆ ಒಟ್ಟಾರೆ ರಕ್ಷಣೆಯನ್ನು ಪಡೆಯಲು ಶಿಫಾರಸು ಮಾಡಲಾಗಿದೆ. | ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಕನಿಷ್ಠ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಹೊಂದುವುದು ಕಡ್ಡಾಯವಾಗಿದೆ |
ಆ್ಯಡ್-ಆನ್‌ಗಳ ಲಭ್ಯತೆ | ಎಚ್‌ಡಿಎಫ್‌ಸಿ ಎರ್ಗೋ ಸಮಗ್ರ ಬೈಕ್ ಇನ್ಶೂರೆನ್ಸ್ ಮೂಲಕ ನೀವು ಶೂನ್ಯ ಸವಕಳಿ ಕವರ್ ಮತ್ತು ತುರ್ತು ಸಹಾಯ ಕವರ್ ಪಡೆಯಬಹುದು. | ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್‌ನೊಂದಿಗೆ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆ ಮಾಡಲಾಗುವುದಿಲ್ಲ. |
ವೆಚ್ಚ | ಇದು ತುಲನಾತ್ಮಕವಾಗಿ ದುಬಾರಿಯಾಗಿದೆ ಏಕೆಂದರೆ ಇದು ವ್ಯಾಪಕ ಕವರೇಜನ್ನು ಒದಗಿಸುತ್ತದೆ. | ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಮಾತ್ರ ಕವರೇಜ್ ಒದಗಿಸುವುದರಿಂದ ಇದು ಕಡಿಮೆ ದುಬಾರಿಯಾಗಿದೆ. |
ಬೈಕ್ ಮೌಲ್ಯದ ಕಸ್ಟಮೈಸೇಶನ್ | ನಿಮ್ಮ ಇನ್ಶೂರೆನ್ಸ್ ಅವಶ್ಯಕತೆಗಳಿಗೆ ಅನುಗುಣವಾಗಿ ನೀವು ಸಮಗ್ರ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ಕಸ್ಟಮೈಜ್ ಮಾಡಬಹುದು. | ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಕಸ್ಟಮೈಜ್ ಮಾಡಲಾಗುವುದಿಲ್ಲ. ಇದು IRDAI ಪ್ರಕಟಿಸಿದ ವಾರ್ಷಿಕ ಬೈಕ್ ಇನ್ಶೂರೆನ್ಸ್ ದರಗಳು ಮತ್ತು ನಿಮ್ಮ ಬೈಕಿನ ಎಂಜಿನ್ ಕ್ಯುಬಿಕ್ ಸಾಮರ್ಥ್ಯದ ಆಧಾರದ ಮೇಲೆ ನಿರ್ಧರಿಸಲಾದ ಪ್ರಮಾಣಿಕೃತ ಪಾಲಿಸಿಯಾಗಿದೆ. |
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅಡಿಯಲ್ಲಿ ಪರಿಹಾರವನ್ನು ಮಾಲೀಕ-ಚಾಲಕರಿಗೆ ನೀಡಲಾಗುತ್ತದೆ. ಆದಾಗ್ಯೂ, ಮಾಲೀಕ-ಚಾಲಕರು ಇನ್ಶೂರ್ಡ್ ಬೈಕಿನ ಮಾನ್ಯ ಡ್ರೈವಿಂಗ್ ಲೈಸೆನ್ಸ್ ಮತ್ತು ನೋಂದಣಿ ಪ್ರಮಾಣಪತ್ರವನ್ನು ಹೊಂದಿರಬೇಕು. ಈ ಕೆಳಗಿನ ಟೇಬಲ್‌ನಲ್ಲಿ, ಪಾಲಿಸಿದಾರರಿಗೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕವರ್ ಅಡಿಯಲ್ಲಿ ನೀಡಲಾಗುವ ಪರಿಹಾರದ ಶೇಕಡಾವಾರನ್ನು ನೀವು ನೋಡಬಹುದು:
ಗಾಯದ ಸ್ವರೂಪ | ಪರಿಹಾರದ ಪ್ರಮಾಣ |
ಸಾವಿನ ಸಂದರ್ಭದಲ್ಲಿ | 100% |
ಎರಡು ಅಂಗಗಳನ್ನು ಅಥವಾ ಎರಡು ಕಣ್ಣುಗಳ ದೃಷ್ಟಿ ಕಳೆದುಕೊಂಡರೆ | 100% |
ಒಂದು ಅಂಗ ಮತ್ತು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡರೆ | 50% |
ಗಾಯಗಳಿಂದಾದ ಶಾಶ್ವತ ಒಟ್ಟು ಅಂಗವಿಕಲತೆಯ ಸಂದರ್ಭದಲ್ಲಿ | 100% |
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ, ಎಲ್ಲಾ ಜನರಲ್ ಇನ್ಶೂರೆನ್ಸ್ ಕಂಪನಿಗಳು ಹೊಸ ಬೈಕ್‌ಗಳಿಗೆ ದೀರ್ಘಾವಧಿಯ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸಬೇಕು. ಟೂ ವೀಲರ್‌ಗಳಿಗೆ ಕಡ್ಡಾಯ ಐದು ವರ್ಷದ ಪಾಲಿಸಿಯನ್ನು ಒದಗಿಸಲು IRDAI ಇನ್ಶೂರೆನ್ಸ್ ಕಂಪನಿಗಳಿಗೆ ನಿರ್ದೇಶಿಸಿದೆ. ಆದ್ದರಿಂದ, ಪ್ರತಿ ಹೊಸ ಬೈಕ್ ಮಾಲೀಕರು ತಮ್ಮ ವಾಹನವು ಐದು ವರ್ಷದ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಈ ಹೊಸ ಪಾಲಿಸಿಯ ಪರಿಚಯದೊಂದಿಗೆ, ಪ್ರತಿ ವರ್ಷ ಪಾಲಿಸಿಯನ್ನು ನವೀಕರಿಸುವಲ್ಲಿ ಯಾವುದೇ ತೊಂದರೆಯಿಲ್ಲ. ಈ ಪಾಲಿಸಿಯೊಂದಿಗೆ, ಇದನ್ನು ಐದು ವರ್ಷಗಳವರೆಗೆ ನಿಗದಿಪಡಿಸಲಾಗುವುದರಿಂದ ಪಾಲಿಸಿದಾರರು ಪ್ರೀಮಿಯಂನಲ್ಲಿ ವಾರ್ಷಿಕ ಹೆಚ್ಚಳವನ್ನು ಕೂಡ ತಪ್ಪಿಸಬಹುದು.
1ನೇ ಜೂನ್, 2022 ರಿಂದ ಅನ್ವಯವಾಗುವಂತೆ ದೀರ್ಘಾವಧಿಯ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಗೆ ಈ ಕೆಳಗಿನ ದರಗಳು ಅನ್ವಯವಾಗುತ್ತವೆ
ಎಂಜಿನ್ ಸಾಮರ್ಥ್ಯ (cc) | 5 ವರ್ಷಗಳಿಗೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ದರಗಳು |
75cc ವರೆಗೆ | ₹ 2901 |
75 ರಿಂದ 150 cc ನಡುವೆ | ₹ 3851 |
150 ರಿಂದ 350 cc ನಡುವೆ | ₹ 7365 |
350 ಸಿಸಿಗಿಂತ ಹೆಚ್ಚು | ₹ 15117 |
ಟೂ ವೀಲರ್ ಎಂಜಿನ್ ಸಾಮರ್ಥ್ಯದ ಆಧಾರದ ಮೇಲೆ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಅನ್ನು IRDAI ನಿರ್ಧರಿಸುತ್ತದೆ. ಆದ್ದರಿಂದ, ಟೂ ವೀಲರ್‌ನ ಎಂಜಿನ್ ಕ್ಯುಬಿಕ್ ಸಾಮರ್ಥ್ಯ (cc) ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಏಕೈಕ ಅಂಶವಾಗಿದೆ.
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವಾಗ, ಅದರ ಪ್ರೀಮಿಯಂ ಅನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯವಾಗಿದೆ. ನಿಮ್ಮ ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ಹಂತವಾರು ಮಾರ್ಗದರ್ಶಿ ಇಲ್ಲಿದೆ
• ಹಂತ 1 – ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ನಿಮ್ಮ ಬೈಕ್ ನೋಂದಣಿ ನಂಬರ್ ನಮೂದಿಸಿ ಮತ್ತು ಕೋಟ್ ಪಡೆಯಿರಿ ಮೇಲೆ ಕ್ಲಿಕ್ ಮಾಡುವ ಮೂಲಕ ಮುಂದುವರಿಯಿರಿ.
• ಹಂತ 2- ನೀವು ನಿಮ್ಮ ಬೈಕ್ ಕಂಪನಿ ಮತ್ತು ಮಾಡೆಲ್ ನಮೂದಿಸಬೇಕು.
• ಹಂತ 3 – ನೀವು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಬೇಕು.
• ಹಂತ 4 – ನಿಮ್ಮ ಕೊನೆಯ ಬೈಕ್ ಇನ್ಶೂರೆನ್ಸ್ ಪಾಲಿಸಿಯ ವಿವರಗಳನ್ನು ನೀಡಿ - ಗಡುವು ದಿನಾಂಕ. ನಿಮ್ಮ ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ನಮೂದಿಸಿ.
• ಹಂತ 5 - ನೀವು ಈಗ ನಿಮ್ಮ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಬೆಲೆಯನ್ನು ನೋಡಬಹುದು.
ಮೋಟಾರ್ ವಾಹನ ಕಾಯ್ದೆಯ ಪ್ರಕಾರ ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿರುವುದರ ಹೊರತಾಗಿ, ನೀವು ಈ ಕವರ್ ಏಕೆ ಹೊಂದಿರಬೇಕು ಎಂಬುದಕ್ಕೆ ಇತರ ಕಾರಣಗಳಿವೆ:
✔ ಕಾನೂನಿನ ಪ್ರಕಾರ ಕಡ್ಡಾಯ: ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಭಾರತದಲ್ಲಿ ಎಲ್ಲಾ ಬೈಕ್ ಮಾಲೀಕರು ಹೊಂದಿರಬೇಕಾದ ಅಗತ್ಯವಾದ ಆದರೆ ಕಡ್ಡಾಯ ಕವರ್ ಆಗಿದೆ. ಟ್ರಾಫಿಕ್ ಪೊಲೀಸ್ ನೀವು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಇಲ್ಲದಿರುವುದನ್ನು ಕಂಡುಹಿಡಿದರೆ, ನಿಮಗೆ ₹ 2000 ವರೆಗೆ ದಂಡ ವಿಧಿಸಬಹುದು/.
✔ 3ನೇ ಪಾರ್ಟಿ ವಾಹನಕ್ಕೆ ಆದ ಯಾವುದೇ ಹಾನಿಯನ್ನು ಕವರ್ ಮಾಡುತ್ತದೆ: ಇನ್ಶೂರೆನ್ಸ್ ಮಾಡಿದ ಬೈಕ್‌ಗೆ ಆಕ್ಸಿಡೆಂಟ್ ಆದ ಸಂದರ್ಭದಲ್ಲಿ ಥರ್ಡ್ ಪಾರ್ಟಿ ವಾಹನ ಅಥವಾ ಅವರ ಆಸ್ತಿ ಹಾನಿಗೆ ಕಾರಣವಾದರೆ, ನಿಮ್ಮ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಕವರೇಜ್ ಅದರ ಬಗ್ಗೆ ಚಿಂತಿಸದೆ ನೀವು ಹಾನಿಯ ವೆಚ್ಚಗಳಿಗೆ ಪರಿಹಾರವನ್ನು ನೀಡುತ್ತದೆ.
✔ 3ನೇ ಪಾರ್ಟಿ ವಾಹನ ಮಾಲೀಕ-ಚಾಲಕರ ಯಾವುದೇ ಗಾಯ ಅಥವಾ ಮರಣಕ್ಕೆ ಕವರೇಜ್: ಇನ್ಶೂರೆನ್ಸ್ ಮಾಡಿದ ಬೈಕ್‌ನಿಂದ ಅಪಘಾತದ ಸಮಯದಲ್ಲಿ ಥರ್ಡ್ ಪಾರ್ಟಿ ವಾಹನದ ಮಾಲೀಕರು ಗಾಯಗೊಂಡರೆ, ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅಂತಹ ವೈಯಕ್ತಿಕ ಹಾನಿಗೆ ಹಣಕಾಸಿನ ನಷ್ಟಗಳನ್ನು ಭರಿಸುತ್ತದೆ. ಅಲ್ಲದೆ, ಅಪಘಾತದಿಂದಾಗಿ ಥರ್ಡ್ ಪಾರ್ಟಿ ವ್ಯಕ್ತಿಯು ಸಾವಿಗೀಡಾದರೆ, ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಇನ್ಶೂರ್ಡ್ ವ್ಯಕ್ತಿಯನ್ನು ಕಾನೂನು ಮತ್ತು ಹಣಕಾಸಿನ ಪರಿಣಾಮಗಳಿಂದ ರಕ್ಷಿಸುತ್ತದೆ.
✔ ತ್ವರಿತ ಮತ್ತು ಸರಳ ಖರೀದಿ: ಬೇಸರದ ವಿಮೆ ಖರೀದಿ ವಿಧಾನಗಳು ಪುರಾತನವಾಗಿವೆ. ಈಗ ಕೆಲವು ಕ್ಲಿಕ್‌ಗಳಲ್ಲಿ ನಮ್ಮ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕನಿಷ್ಠ ಡಾಕ್ಯುಮೆಂಟೇಶನ್‌ನೊಂದಿಗೆ ನಿಮ್ಮ ಆದ್ಯತೆಯ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಡೆಯಿರಿ
✔ ವೆಚ್ಚ-ಪರಿಣಾಮಕಾರಿ ಇನ್ಶೂರೆನ್ಸ್ ಪಾಲಿಸಿ: ಎಲ್ಲಾ ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂಗಳನ್ನು IRDAI ಪೂರ್ವನಿರ್ಧರಿಸಿರುವುದರಿಂದ; ಇದು ಈ ಪಾಲಿಸಿಯನ್ನು ಎಲ್ಲರಿಗೂ ಕೈಗೆಟಕುವಂತೆ ಮಾಡುತ್ತದೆ. ಹೀಗಾಗಿ, ನಾಮಮಾತ್ರದ ಮೌಲ್ಯದೊಳಗೆ, ರಸ್ತೆಯ ಪ್ರತಿ ಮಗ್ಗುಲಲ್ಲಿ ನಿಮಗಾಗಿ ಕಾಯುತ್ತಿರುವ ಯಾವುದೇ ಅನಿರೀಕ್ಷಿತ ಥರ್ಡ್ ಪಾರ್ಟಿ ವೆಚ್ಚಗಳಿಗೆ ನೀವು ಕವರೇಜನ್ನು ನಿರೀಕ್ಷಿಸಬಹುದು.
ಇದನ್ನೂ ಓದಿ: ಥರ್ಡ್ ಪಾರ್ಟಿ ಟೂ ವೀಲರ್ ಇನ್ಶೂರೆನ್ಸ್‌ನ ಪ್ರಯೋಜನಗಳು
ಎಚ್‌ಡಿಎಫ್‌ಸಿ ಎರ್ಗೋ ಟೂ ವೀಲರ್ ಇನ್ಶೂರೆನ್ಸ್ ಅನ್ನು ಎದ್ದು ಕಾಣಿಸುವ ಪ್ರಮುಖ ಅಂಶಗಳು ಇಲ್ಲಿವೆ:
• ತ್ವರಿತ, ಕಾಗದರಹಿತ ಇನ್ಶೂರೆನ್ಸ್ ಖರೀದಿ ಪ್ರಕ್ರಿಯೆ
• ಪ್ರೀಮಿಯಂ ₹ 538 ರಿಂದ ಆರಂಭ*
• ತುರ್ತು ಮನೆಬಾಗಿಲಿನ ಅಥವಾ ರಸ್ತೆಬದಿಯ ಸಹಾಯದ ಆ್ಯಡ್-ಆನ್ ಕವರ್ ಆಯ್ಕೆ
• 2000+ ನಗದುರಹಿತ ಗ್ಯಾರೇಜ್‌ಗಳ ವ್ಯಾಪಕ ನೆಟ್ವರ್ಕ್
• ಅನಿಯಮಿತ ಕ್ಲೈಮ್‌ಗಳನ್ನು ಮಾಡಬಹುದು
• 100% ಕ್ಲೈಮ್ ಸೆಟಲ್ಮೆಂಟ್ ಅನುಪಾತ^
• ತಪಾಸಣೆ ಇಲ್ಲದೆ ನವೀಕರಣದ ಆಯ್ಕೆ
ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸುವ ಮೂಲಕ ಈ ಕೆಳಗಿನ ಹಂತಗಳು ನಿಮಗೆ ಮಾರ್ಗದರ್ಶನ ನೀಡುತ್ತವೆ.
ಸುರಕ್ಷಿತ ಪಾವತಿ ಗೇಟ್‌ವೇ ಮೂಲಕ ಪ್ರೀಮಿಯಂ ಪಾವತಿಸಿ. ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್ ವಿಳಾಸಕ್ಕೆ ಅಥವಾ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತದೆ.
ನೀವು ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸಲು ಬಯಸಿದರೆ, ನೀವು ಈ ಕೆಳಗಿನ ಹಂತಗಳನ್ನು ನೋಡಬೇಕು:
ಹಂತ 1: ವಿಮಾದಾತರ ವೆಬ್‌ಸೈಟ್‌ಗೆ ಭೇಟಿ ನೀಡಿ, ವಾಹನ ನೋಂದಣಿ ನಂಬರ್ ನಮೂದಿಸಿ ಮತ್ತು ಪಾಲಿಸಿಯನ್ನು ನವೀಕರಿಸಿ ಆಯ್ಕೆಮಾಡಿ.
ಹಂತ 2: ನೀವು ನವೀಕರಿಸಲು ಬಯಸುವ ನಿಮ್ಮ ಪಾಲಿಸಿಗೆ ಸಂಬಂಧಿಸಿದ ವಿವರಗಳನ್ನು ನಮೂದಿಸಿ. ಥರ್ಡ್ ಪಾರ್ಟಿ ಕವರ್ ಪ್ಲಾನ್ ಆಯ್ಕೆಮಾಡಿ.
ಹಂತ 3: ನವೀಕರಿಸಿದ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ನಿಮ್ಮ ನೋಂದಾಯಿತ ಇಮೇಲ್-ID ಗೆ ಮೇಲ್ ಮಾಡಲಾಗುತ್ತದೆ.
ಭಾರತೀಯ ರಸ್ತೆಗಳಲ್ಲಿ ಬೈಕ್ ಸವಾರಿ ಮಾಡುವುದರಿಂದ ಅಪಘಾತಗಳಾಗುವ ಹೆಚ್ಚಿನ ಸಂಭಾವ್ಯತೆಯಿಂದಾಗಿ ಬಹಳಷ್ಟು ಅಪಾಯಗಳನ್ನು ಒಳಗೊಂಡಿರುತ್ತದೆ. ಹಾನಿಗಳಿಗೆ ಪರಿಹಾರ ನೀಡಲು ಎಲ್ಲಾ ಟೂ ವೀಲರ್ ಮಾಲೀಕರಿಗೆ ಇನ್ಶೂರೆನ್ಸ್ ಮುಖ್ಯವಾಗಿದೆ ಮತ್ತು ಸೂಕ್ತ ಪ್ಲಾನ್ ಯಾವುದೇ ವಾಹನ ಹಾನಿಗಳಿಗೆ ಕವರೇಜನ್ನು ಒದಗಿಸುತ್ತದೆ. ನೀವು ಬೇಸಿಕ್ ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಕೇವಲ ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜ್ ಪಡೆಯುತ್ತೀರಿ, ಆದರೆ ಸಮಗ್ರ ಇನ್ಶೂರೆನ್ಸ್ ಸ್ವಂತ ಹಾನಿ ಮತ್ತು ಥರ್ಡ್ ಪಾರ್ಟಿ ಹೊಣೆಗಾರಿಕೆಗಳಿಗೆ ಕವರೇಜನ್ನು ಒದಗಿಸುತ್ತದೆ. ನಿಮ್ಮ ಬೈಕಿಗೆ ನೀವು ಬೇಸಿಕ್ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಾತ್ರ ಹೊಂದಿದ್ದರೆ, ಸಮಗ್ರ ಇನ್ಶೂರೆನ್ಸ್‌ಗೆ ಬದಲಾಯಿಸುವ ಹಂತಗಳು ಇಲ್ಲಿವೆ:
• ವಿಮಾದಾತರ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
• ಟೂ ವೀಲರ್ ಇನ್ಶೂರೆನ್ಸ್ ಖರೀದಿಸಿ ಮೇಲೆ ಕ್ಲಿಕ್ ಮಾಡಿ.
• ನಿಮ್ಮ ಅಸ್ತಿತ್ವದಲ್ಲಿರುವ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದ ವಿವರಗಳನ್ನು ಒಳಗೊಂಡಿರುವ ಎಲ್ಲಾ ಅಗತ್ಯ ಫಾರ್ಮ್‌ಗಳನ್ನು ಸಲ್ಲಿಸಿ
• ನಿಮ್ಮ ಟೂ ವೀಲರ್‌ಗಾಗಿ ನೀವು ಸ್ವಯಂ ತಪಾಸಣೆ ಆಯ್ಕೆಯನ್ನು ಆರಿಸಿಕೊಳ್ಳಬಹುದು.
• ಸಮೀಕ್ಷಕರು ನೀಡಿದ ವರದಿಗಳ ಆಧಾರದ ಮೇಲೆ, ಪಾಲಿಸಿ ಪ್ಲಾನನ್ನು ಅಪ್ಗ್ರೇಡ್ ಮಾಡಲಾಗುತ್ತದೆ
• ಹಿಂದಿನ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ಲಾನನ್ನು ರದ್ದುಗೊಳಿಸಲಾಗುತ್ತದೆ ಮತ್ತು ಹೊಸ ಪಾಲಿಸಿಯನ್ನು ಆರಂಭಿಸಲಾಗುತ್ತದೆ
✔ ಸರಿಯಾದ ಸಾಕ್ಷ್ಯ ಥರ್ಡ್ ಪಾರ್ಟಿಗೆ, ಅವರ ಕಾರಿಗೆ ಅಥವಾ ಅವರ ಆಸ್ತಿಗೆ ವಿಮಾದಾರ ಬೈಕ್‌ನಿಂದ ಉಂಟಾದ ಹಾನಿಯನ್ನು ಕ್ಲೈಮ್ ಮಾಡುವ ಮೊದಲು ಸೂಕ್ತ, ನಿಖರ ಮತ್ತು ವಿಶ್ವಾಸಾರ್ಹ ಸಾಕ್ಷ್ಯವನ್ನು ಹೊಂದಿರಬೇಕು.
✔ ಇನ್ಶೂರೆನ್ಸ್ ಕಂಪನಿ ಮತ್ತು ಪೋಲೀಸರಿಗೆ ವರದಿ ಮಾಡುವುದು: ನಿಮ್ಮ ಕವರ್ ಆದ ಬೈಕ್ ಅಪಘಾತದಲ್ಲಿ ಸಿಲುಕಿದರೆ ತಕ್ಷಣವೇ ನಿಮ್ಮ ಇನ್ಶೂರೆನ್ಸ್ ಕಂಪನಿ ಮತ್ತು ಪೋಲೀಸರಿಗೆ ತಿಳಿಸಲು ಮರೆಯಬೇಡಿ, ಇದರಿಂದಾಗಿ ಥರ್ಡ್ ಪಾರ್ಟಿಗಳು ಹಾನಿಗೊಳಗಾದರೆ ನೀವು ಸುಲಭವಾಗಿ ಈ ಕೆಳಗಿನ ಹಂತಗಳನ್ನು ತೆಗೆದುಕೊಳ್ಳಬಹುದು.
✔ ಹಾನಿಗಳಿಗೆ ಮಿತಿ ಮೋಟಾರ್ ಆಕ್ಸಿಡೆಂಟ್ ಕ್ಲೈಮ್‌ಗಳ ಟ್ರಿಬ್ಯೂನಲ್ ಹಾನಿಗಳಲ್ಲಿ ನೀಡಬಹುದಾದ ಗರಿಷ್ಠ ಮೊತ್ತವನ್ನು ತಿಳಿಸುವ ಆರ್ಡರನ್ನು ಪಾಸ್ ಮಾಡುತ್ತದೆ. ಪರಿಹಾರದ ಮೊತ್ತವು IRDAI ಮಾರ್ಗಸೂಚಿಗಳಿಗೆ ಅನುಗುಣವಾಗಿದೆ. ಪ್ರಸ್ತುತ, ಥರ್ಡ್ ಪಾರ್ಟಿಯ ಆಸ್ತಿಯ ಹಾನಿಗಳಿಗೆ ಪಾವತಿಸಬೇಕಾದ ಗರಿಷ್ಠ ಮೊತ್ತ ₹7.5 ಲಕ್ಷಗಳು. ಆದಾಗ್ಯೂ, ಥರ್ಡ್ ಪಾರ್ಟಿಗಳಿಗೆ ಗಾಯವಾದರೆ, ಪರಿಹಾರದ ಮೊತ್ತದ ಮೇಲೆ ಯಾವುದೇ ಮಿತಿ ಇರುವುದಿಲ್ಲ.
• ಥರ್ಡ್ ಪಾರ್ಟಿ ಬೈಕ್ ಇನ್ಶೂರೆನ್ಸ್ ಪಾಲಿಸಿಯ ಪ್ರತಿ
• ಪರಿಶೀಲನೆಗಾಗಿ ಬೈಕಿನ RC, ಮತ್ತು ಮೂಲ ತೆರಿಗೆ ರಶೀದಿಗಳ ಪ್ರತಿ.
• ಥರ್ಡ್ ಪಾರ್ಟಿ ಸಾವು, ಹಾನಿ ಮತ್ತು ದೈಹಿಕ ಗಾಯಗಳನ್ನು ವರದಿ ಮಾಡುವಾಗ ಪೊಲೀಸ್ FIR ವರದಿ.
• ನಿಮ್ಮ ಮೂಲ ಡ್ರೈವಿಂಗ್ ಲೈಸೆನ್ಸಿನ ಪ್ರತಿ.
• ಹಾನಿ ರಿಪೇರಿ ಅಂದಾಜು.
• ಪಾವತಿ ರಶೀದಿಗಳು ಮತ್ತು ರಿಪೇರಿ ಬಿಲ್‌ಗಳು.
ಬೈಕ್ ಎಂಜಿನ್ ಸಾಮರ್ಥ್ಯ | ಪ್ರೀಮಿಯಂ |
75cc ಗಿಂತ ಕಡಿಮೆ | ₹482 |
75cc ಗಿಂತ ಹೆಚ್ಚು 150cc ಗಿಂತ ಕಡಿಮೆ | ₹752 |
150cc ಗಿಂತ ಹೆಚ್ಚು 350cc ಗಿಂತ ಕಡಿಮೆ | ₹ 1,193 |
350cc ಗಿಂತ ಹೆಚ್ಚು | ₹ 2,323 |