ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಒಂದು ಆನ್ಲೈನ್ ಟೂಲ್ ಆಗಿದ್ದು, ಇದು ಪಾಲಿಸಿದಾರರಿಗೆ ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕಲು ಸಹಾಯ ಮಾಡುತ್ತದೆ. ಇದಕ್ಕಾಗಿ ವಾಹನದ ಕೆಲವು ವಿವರಗಳಾದ ಮೇಕ್, ಮಾಡೆಲ್/ವೇರಿಯಂಟ್, ವಾಹನ ನೋಂದಣಿ ನಂಬರ್, RTO ಸ್ಥಳ ಮತ್ತು ಟೂ ವೀಲರ್ ಖರೀದಿಸಿದ ವರ್ಷಗಳನ್ನು ಒದಗಿಸಿದರೆ ಸಾಕಾಗುತ್ತದೆ. ಟೂ ವೀಲರ್ ಪಾಲಿಸಿ ಖರೀದಿಸುವ ಮೊದಲು ಪ್ರೀಮಿಯಂ ಲೆಕ್ಕ ಹಾಕುವುದರಿಂದ ವಿವಿಧ ವಿಮಾದಾತರ ಪಾಲಿಸಿ ಕೋಟ್ಗಳ ಸ್ಪಷ್ಟ ಚಿತ್ರಣ ದೊರೆಯುತ್ತದೆ ಮತ್ತು ಇದರಿಂದ ಸರಿಯಾದ ಖರೀದಿ ನಿರ್ಧಾರ ತೆಗೆದುಕೊಳ್ಳಲು ಸಹಾಯವಾಗುತ್ತದೆ.
ಬೈಕ್ ಇನ್ಶೂರೆನ್ಸ್ ಪಾಲಿಸಿಯನ್ನು ಖರೀದಿಸುವ ಮೊದಲು ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಹೋಲಿಕೆ ಮಾಡುವುದು ತುಂಬಾ ಮುಖ್ಯವಾಗಿದೆ ಮತ್ತು ಪಾಲಿಸಿಯ ವಿರುದ್ಧ ನೀವು ಪಾವತಿಸುತ್ತಿರುವ ಪ್ರೀಮಿಯಂ ಮೊತ್ತವನ್ನು ಪರಿಶೀಲಿಸಿ. ಈ ಕೆಳಗಿನ ಕಾರಣಗಳು ಬೈಕ್ ಇನ್ಶೂರೆನ್ಸ್ ಕ್ಯಾಲ್ಕುಲೇಟರ್ ಬಳಸುವುದು ಏಕೆ ಮುಖ್ಯ ಎಂಬುದನ್ನು ಅರ್ಥ ಮಾಡಿಸುತ್ತವೆ.
• ಖರೀದಿಸುವ ಮೊದಲು ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕಡಿಮೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.
• ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಗೆ ಸಂಬಂಧಿಸಿದಂತೆ ಒಳ್ಳೆಯ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.
• ಹಣ ಉಳಿಸುತ್ತದೆ ಹಾಗೂ ಸುಲಭವಾಗಿ ಕೈಗೆಟಕುತ್ತದೆ
• ಯಾವುದೇ ರೀತಿಯ ಆನ್ಲೈನ್/ಆಫ್‌ಲೈನ್ ವಂಚನೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಲೆಕ್ಕ ಹಾಕುವುದು ತುಂಬಾ ಸುಲಭ. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಕ್ಯಾಲ್ಕುಲೇಟರ್ ಪುಟಕ್ಕೆ ಬಂದ ನಂತರ, ನಿಮ್ಮ ಟೂ ವೀಲರ್ ಮತ್ತು ಇನ್ಶೂರೆನ್ಸ್ ಪ್ರಾಡಕ್ಟ್ ವಿಧದ ಕಡ್ಡಾಯ ವಿವರಗಳನ್ನು (ಸಮಗ್ರ/ಹೊಣೆಗಾರಿಕೆ) ನಮೂದಿಸಿ. ಬೈಕ್ ಇನ್ಶೂರೆನ್ಸ್ ಪ್ರೀಮಿಯಂ ಬಗ್ಗೆ ತಿಳಿದುಕೊಳ್ಳಲು ಮತ್ತು ಲೆಕ್ಕ ಹಾಕಲು ಈ ಕೆಳಗಿನ ಹಂತಗಳನ್ನು ನೋಡಿ.
• ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ವಿವರಗಳಾದ ಮೇಕ್ ಮತ್ತು ಮಾಡೆಲ್‌ಗಳನ್ನು ಭರ್ತಿ ಮಾಡಿ
• ವಾಹನದ ಎಕ್ಸ್-ಶೋರೂಮ್ ಬೆಲೆ, ಖರೀದಿಸಿದ ನಗರ ಮತ್ತು ವರ್ಷವನ್ನು ನಮೂದಿಸಿ
• ನಿಮ್ಮ ಬೈಕ್ನಿಂದ ಕಳೆದ ವರ್ಷ ಮಾಡಲಾದ ಯಾವುದೇ ಕ್ಲೈಮ್ ವಿವರಗಳನ್ನು ಆಯ್ಕೆಮಾಡಿ ಮತ್ತು ಸಲ್ಲಿಸಿ
• ಬೈಕ್ ಇನ್ಶೂರೆನ್ಸ್‌ನಲ್ಲಿ IDV ಮತ್ತು ನಿಮ್ಮ ಟೂ ವೀಲರ್‌ನ ಪ್ರೀಮಿಯಂ ಕೋಟ್ ಅನ್ನು ತೋರಿಸಲಾಗುತ್ತದೆ
• ನಿಮ್ಮ ಅವಶ್ಯಕತೆಗೆ ಅನುಗುಣವಾದ ಪ್ಲಾನ್ (ಸಮಗ್ರ/ಥರ್ಡ್ ಪಾರ್ಟಿ) ಆಯ್ಕೆಮಾಡಿ
• ನಿಮ್ಮ ಬೈಕ್ ಇನ್ಶೂರೆನ್ಸ್‌ಗಾಗಿ ಆ್ಯಡ್-ಆನ್ ಕವರ್‌ಗಳನ್ನು ಆಯ್ಕೆಮಾಡಿ