ನೀವು ಮೊದಲು ಆಕ್ಸಿಡೆಂಟ್‌ನ ಗಾಬರಿಯಿಂದ ಚೇತರಿಸಿಕೊಳ್ಳಿ. ನಿಮ್ಮ ವಾಹನದಿಂದ ಉಂಟಾದ ಹಾನಿ ಅಥವಾ ನಷ್ಟಗಳ ಚಿಂತೆಯನ್ನು ನಮಗೆ ಬಿಡಿ!
ಅನಿರೀಕ್ಷಿತ ಬೆಂಕಿ ಅಥವಾ ಸ್ಫೋಟದಿಂದ ನಿಮ್ಮ ವಾಹನ ಸುಟ್ಟುಹೋಗಬಹುದು. ಆದರೆ ನಿಮ್ಮ ಜೇಬು ಸುಡದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು.
ನಿಮ್ಮ ನೆಮ್ಮದಿಯ ನಿದ್ರೆಯನ್ನು ಖಚಿತಪಡಿಸಿಕೊಳ್ಳಲು ನಾವು ದಿನವಿಡೀ ಕೆಲಸ ಮಾಡುತ್ತೇವೆ. ನಿಮ್ಮ ವಾಹನ ಕಳುವಾದಾಗ ಉಂಟಾಗುವ ನಷ್ಟಗಳನ್ನು ನಮ್ಮ ಪಾಲಿಸಿ ಕವರ್ ಮಾಡುತ್ತದೆ.
ಅನಿರೀಕ್ಷಿತ ನೈಸರ್ಗಿಕ ವಿಕೋಪಗಳು ನಿಮಗೆ ತಡೆಯೊಡ್ಡಲು ನಾವಂತೂ ಬಿಡುವುದಿಲ್ಲ. ಅಂತಹ ಘಟನೆಗಳಿಂದ ಉಂಟಾಗುವ ಯಾವುದೇ ಹಾನಿ ಅಥವಾ ನಷ್ಟಗಳನ್ನು ಕವರ್ ಮಾಡುತ್ತೇವೆ.
ನಿಮ್ಮ ಸುರಕ್ಷತೆಯೇ ನಮ್ಮ ಅತಿಮುಖ್ಯ ಆದ್ಯತೆ! ಹಾಗಾಗಿ, ಅಪಘಾತದ ಸಂದರ್ಭದಲ್ಲಿ ನಿಮ್ಮ ಚಿಕಿತ್ಸೆಯ ಶುಲ್ಕಗಳನ್ನು ಕವರ್ ಮಾಡಲು ನಾವು ಕಡ್ಡಾಯ ಪರ್ಸನಲ್ ಆಕ್ಸಿಡೆಂಟ್ ಕವರ್ ಒದಗಿಸುತ್ತೇವೆ.
ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿಯನ್ನು ನಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಫೀಚರ್ ಮೂಲಕ ಕವರ್ ಮಾಡಲಾಗುತ್ತದೆ
ಈಗ ಗಂಟೆಗಟ್ಟಲೆ ಕಾಯುವ ಅಥವಾ ಮಧ್ಯವರ್ತಿಗಳ ಜೊತೆ ಹೆಣಗುವ ಕಿರಿಕಿರಿ ಇಲ್ಲ, ಕೆಲವೇ ಕ್ಲಿಕ್‌ಗಳಲ್ಲಿ ಉಚಿತ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಕೋಟ್ ಪಡೆಯಿರಿ. ಅಷ್ಟೇ ಅಲ್ಲ. ಕೋಟ್ ಅನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಪರ್ಸನಲೈಸ್ ಮಾಡಬಹುದು ಹಾಗೂ ನಿಮ್ಮಿಷ್ಟದ ವಿಧಾನದಲ್ಲಿ ಪಾವತಿ ಮಾಡಬಹುದು! ಎಷ್ಟೊಳ್ಳೆ ವಿಷಯ, ಅಲ್ಲವೇ?
ನೀವು ನಮ್ಮ ವೆಹಿಕಲ್ ಇನ್ಶೂರೆನ್ಸ್ ಪಾಲಿಸಿ ಖರೀದಿಸಿದ ಮೇಲೆ, ಈ ನಾಲ್ಕು ಸುಲಭ ಹಂತಗಳಲ್ಲಿ ನಿಮ್ಮ ಕ್ಲೈಮ್ ಸಂಬಂಧಿತ ಒತ್ತಡವನ್ನು ನಮಗೆ ವರ್ಗಾಯಿಸಿ
ನಿಮ್ಮ ಕಾರಿನ ಭಾಗಗಳು ಸವೆದಂತೆಲ್ಲಾ, ಕ್ಲೈಮ್ ಮೊತ್ತವೂ ಕಡಿಮೆಯಾಗುತ್ತಾ ಹೋಗುತ್ತದೆ! ಆದರೆ, ನಮ್ಮ ಜೀರೋ ಡಿಪ್ರಿಸಿಯೇಶನ್ ಕವರ್ ನಿಮ್ಮ ಹಣಕಾಸನ್ನು ರಕ್ಷಿಸುವುದರಿಂದ, ಹಣ ಕಳೆದುಕೊಳ್ಳುವ ಚಿಂತೆ ಬಿಟ್ಟುಬಿಡಿ.
ಅನಿವಾರ್ಯ ಕ್ಲೈಮ್ ಸಲ್ಲಿಕೆಗಳಿಂದ NCB ಪ್ರಯೋಜನ ಕೈತಪ್ಪಿ ಹೋಗುತ್ತದೆ ಎಂಬ ಚಿಂತೆಯೇ? ಅಂತಹ ಸಂದರ್ಭದಲ್ಲಿ, ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್ ಆ್ಯಡ್-ಆನ್ ನಿಮ್ಮ ನೆರವಿಗೆ ಬರುತ್ತದೆ. ಈ ಕವರ್, ನೀವು ಇಲ್ಲಿಯವರೆಗೆ ಸಂಗ್ರಹಿಸಿದ NCB ಗೆ ಯಾವುದೇ ಚ್ಯುತಿಯಾಗದೇ, ಅದು ಮುಂದಿನ ಸ್ಲ್ಯಾಬ್‌ಗೆ ಮುಂದುವರೆಯುವಂತೆ ನೋಡಿಕೊಳ್ಳುತ್ತದೆ.
ಬೆಳಗಿನ ಜಾವ 3 ಗಂಟೆಗೆ ನಿಮ್ಮ ಪ್ರಾಣಸ್ನೇಹಿತ ನಿಮಗೆ ಸಹಾಯ ಮಾಡುತ್ತಾರೋ ಇಲ್ಲವೋ, ಆದರೆ ನಮ್ಮ ಎಮರ್ಜೆನ್ಸಿ ಅಸಿಸ್ಟೆನ್ಸ್ ಆ್ಯಡ್-ಆನ್ ಕವರ್ ನಿಮ್ಮ ನೆರವಿಗೆ ಬರುತ್ತದೆ. ಈ ಕವರ್‌ನಲ್ಲಿ ರಿಫ್ಯೂಯಲಿಂಗ್, ಟೈರ್ ಬದಲಾವಣೆ, ಟೋಯಿಂಗ್ ಸಹಾಯ ಸೇರಿದಂತೆ ವಿವಿಧ 24x7 ಸೇವೆಗಳು ಸಿಗುತ್ತವೆ
ನಂಬಿದರೆ ನಂಬಿ ಬಿಟ್ಟರೆ ಬಿಡಿ, ನಿಮ್ಮ ವಾಹನ ಕಳುವಾದರೆ ಅಥವಾ ರಿಪೇರಿ ಮಾಡಲಾಗದಷ್ಟು ಹಾಳಾಗಿದ್ದರೆ ನಮ್ಮ ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಕವರ್ ನಿಮ್ಮ ಹಣಕಾಸು ನಷ್ಟಕ್ಕೆ ಪರಿಹಾರ ನೀಡುತ್ತದೆ. ಈ ಆ್ಯಡ್-ಆನ್, ನಿಮ್ಮ ವಾಹನದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV), ವಾಸ್ತವಿಕ ಇನ್ವಾಯ್ಸ್ ಮೌಲ್ಯ, ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕವನ್ನು ಕವರ್ ಮಾಡುತ್ತದೆ.
ನಿಮ್ಮ ವಾಹನಕ್ಕೆ ನಿಮ್ಮ ಹೃದಯದಲ್ಲಿ ವಿಶೇಷ ಸ್ಥಾನ ಇರಬಹುದು, ಆದರೆ ಅದರ ಹೃದಯವನ್ನು ರಕ್ಷಿಸುವುದು ಕೂಡಾ ನಿಮ್ಮ ಹೊಣೆಯೇ ಅಲ್ಲವೇ?! ನಮ್ಮ ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಟರ್ ಆ್ಯಡ್-ಆನ್ ಕವರ್‌ನೊಂದಿಗೆ ನಿಮ್ಮ ಕಾರಿನ ಎಂಜಿನ್ ಮತ್ತು ಗೇರ್‌ಬಾಕ್ಸ್ ಅನ್ನು ಸುರಕ್ಷಿತವಾಗಿರಿಸಿ. ಕಾರಿನ ಈ ಪ್ರಮುಖ ಭಾಗಗಳಿಗೆ ಹಾನಿಯಾದಾಗ ಸಂಭವಿಸುವ ಹಣಕಾಸು ಹೊರೆಯ ವಿರುದ್ಧ ಈ ಕವರ್ ನಿಮ್ಮನ್ನು ರಕ್ಷಿಸುತ್ತದೆ.
ನಿಮ್ಮ ವಾಹನವನ್ನು ಗ್ಯಾರೇಜಿನಲ್ಲಿ ಬಿಟ್ಟರೆ, ಪ್ರಯಾಣದ ಖರ್ಚುಗಳನ್ನು ಹೇಗೆ ನಿಭಾಯಿಸುವುದು ಎಂದು ಚಿಂತಿಸುತ್ತಿದ್ದೀರಾ? ಕೋಪ ಮಾಡಿಕೊಳ್ಳಬೇಡಿ! ನಮ್ಮ ಡೌನ್‌ಟೈಮ್ ಪ್ರೊಟೆಕ್ಷನ್ ಆ್ಯಡ್-ಆನ್ ಕವರ್, ನಿಮ್ಮ ಸಾರಿಗೆ ವೆಚ್ಚವನ್ನು ಪೂರೈಸಲು ಪರ್ಯಾಯ ಸಾರಿಗೆ ವ್ಯವಸ್ಥೆ ಅಥವಾ ಪೂರ್ವ-ನಿರ್ಧರಿತ ದೈನಂದಿನ ಹಣಕಾಸು ನೆರವಿನ ಫ್ಲೆಕ್ಸಿಬಿಲಿಟಿ ಒದಗಿಸುತ್ತದೆ.
ನೀವು ಪಾವತಿಸುವ ಪ್ರೀಮಿಯಂ ನೀವು ಖರೀದಿಸುವ ಪಾಲಿಸಿಯ ವ್ಯಾಪ್ತಿಗೆ ಬರುವುದಿಲ್ಲ. ನಾವು ನಿಮ್ಮ ವೆಹಿಕಲ್ ಇನ್ಶೂರೆನ್ಸ್ ಕೋಟ್ ತಯಾರಿಸುವ ಮೊದಲು, ಹಲವಾರು ಅಂಶಗಳನ್ನು ಪರಿಗಣಿಸುತ್ತೇವೆ. ನಿಮ್ಮ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು ಯಾವುವು ಎಂದು ನೋಡಿ:
ನಿಮ್ಮದು ಹೊಚ್ಚಹೊಸ ಮಾಡೆಲ್‌ನ ವಾಹನವೋ ಅಥವಾ ಹಳೆಯದಾದರೂ ಕಳೆಯಲಾಗದು ಎನ್ನುವಷ್ಟು ಹಚ್ಚಿಕೊಂಡಿರುವ ಹಳೆ ಮಾಡೆಲ್ ವಾಹನವೋ? ನೀವು ಪಾವತಿಸುವ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವಲ್ಲಿ ವಾಹನದ ವಯಸ್ಸು ಬಹಳ ಮುಖ್ಯವಾಗಿದೆ. ಏಕೆ ಗೊತ್ತಾ? ನಿಮ್ಮ ವಾಹನ ಹಳೆಯದಾದಷ್ಟೂ, ಇನ್ಶೂರೆನ್ಸ್ ಪ್ರೀಮಿಯಂ ಹೆಚ್ಚುತ್ತಾ ಹೋಗುತ್ತದೆ.
ನಿಮ್ಮ ಬಳಿ ಟಾಪ್-ಆಫ್-ದಿ-ರೇಂಜ್ ಲಕ್ಸುರಿ ವಾಹನ ಇದೆಯೋ ಅಥವಾ ಮಿಡ್-ರೇಂಜ್ ಸೆಗ್ಮೆಂಟ್‌ಗೇ ತೃಪ್ತಿ ಪಟ್ಟುಕೊಂಡಿದ್ದೀರೋ? ನಿಮ್ಮ ವೈಯಕ್ತಿಕ ಅಭಿರುಚಿಗೂ ಪ್ರೀಮಿಯಂ ಮೊತ್ತಕ್ಕೂ ಏನು ಸಂಬಂಧ ಎಂದು ಯೋಚಿಸುತ್ತಿದ್ದೀರಾ? ಪ್ರತಿ ವಾಹನದ ಮೇಕ್ ಮತ್ತು ಮಾಡೆಲ್ ಆಧಾರದ ಮೇಲೆ ಪ್ರೀಮಿಯಂ ಮೊತ್ತ ಬದಲಾಗುತ್ತಾ ಹೋಗುತ್ತದೆ.
1500cc ಗಿಂತ ಹೆಚ್ಚು ಅಥವಾ ಕಡಿಮೆ ಎಂಜಿನ್ ಸಾಮರ್ಥ್ಯ ಹೊಂದಿರುವ ವಾಹನ, ಪೆಟ್ರೋಲ್ ಅಥವಾ ಡೀಸೆಲ್ ವೇರಿಯಂಟ್ - ಇವೆಲ್ಲವೂ ನಿಮ್ಮ ವೆಹಿಕಲ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ನಿರ್ಧರಿಸುವ ಪ್ರಮುಖ ಅಂಶಗಳು.
ನಿಮ್ಮ ಮನೆ ಸುಧಾರಿತ ಭದ್ರತೆ ವ್ಯವಸ್ಥೆ ಇರುವ ಗೇಟೆಡ್ ಕಮ್ಯುನಿಟಿಯಲ್ಲಿ ಇದೆಯೋ ಅಥವಾ ಅಪರಾಧಗಳಿಗೆ ಕುಖ್ಯಾತವಾದ ಏರಿಯಾದಲ್ಲಿ ಇದೆಯೋ? ನಿಮ್ಮ ವೆಹಿಕಲ್ ಇನ್ಶೂರೆನ್ಸ್‌ಗೆ ಎಷ್ಟು ಹಣ ಪಾವತಿಸುತ್ತೀರಿ ಎಂಬುದು ನಿಮ್ಮ ಉತ್ತರದ ಮೇಲೆ ನಿಂತಿದೆ.
ವಾಹನ ಖರೀದಿಸಿದ ಮೇಲೆ ಅದಕ್ಕೆ ಸಂಬಂಧಿಸಿದ ಜವಾಬ್ದಾರಿ ಮತ್ತು ಆತಂಕಗಳೂ ಹೆಗಲೇರುತ್ತವೆ, ನಿಮ್ಮ ಕಾರ್ ಅಥವಾ ಬೈಕ್‌ಗೆ ಆದ ಹಾನಿಗೆ ಕ್ಲೈಮ್ ಮಾಡಬೇಕಾದಾಗ ಎದುರಾಗುವ ತೊಂದರೆಯೂ ಇವುಗಳಲ್ಲಿ ಒಂದು. ಎಚ್‌ಡಿಎಫ್‌ಸಿ ಎರ್ಗೋ ಮೂಲಕ ನಿಮ್ಮ ಕ್ಲೈಮ್ ಸಂಬಂಧಿತ ಆತಂಕಗಳಿಗೆ ವಿದಾಯ ಹೇಳಿ. ನಮ್ಮ ತುತ್ತೂರಿಯನ್ನು ನಾವೇ ಊದುತ್ತಿದ್ದೇವೆ ಎಂದುಕೊಳ್ಳಬೇಡಿ, ಇದನ್ನು ಓದಿದ ಮೇಲೆ ನೀವೇ ತೀರ್ಮಾನಿಸಿ: