ಮನೆಯ ಶಾಂತಿಯು ಅಲ್ಲಿ ವಾಸಿಸುವವರಿಗೆ ದೊರಕುವ ಶಾಂತಿ ಮತ್ತು ಭದ್ರತೆಯ ಮೇಲೆ ಅವಲಂಬಿತ ಎಂಬುದನ್ನು ಅರಿತ ಅನೇಕರು ಹೋಮ್ ಇನ್ಶೂರೆನ್ಸ್ ಅಗತ್ಯವಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಆದರೆ, ಸಾಮಾನ್ಯ ಹೋಮ್ ಇನ್ಶೂರೆನ್ಸ್ ಭೂಕುಸಿತದಂತಹ ವಿಕೋಪಗಳನ್ನು ಕವರ್ ಮಾಡುವುದಿಲ್ಲ. ಇದು ಆಸ್ತಿಯ ಸಂಪೂರ್ಣ ವಿನಾಶಕ್ಕೆ ಕಾರಣವಾಗಬಹುದು. ಭೂಕುಸಿತಗಳು ಭೂಕಂಪನ ಚಟುವಟಿಕೆ, ಪ್ರವಾಹ ಅಥವಾ ಇತರ ಅಂಶಗಳಿಂದ ಸಂಭವಿಸಬಹುದು. ಇವುಗಳಿಂದ ಆಸ್ತಿಪಾಸ್ತಿಗಳ ತೀವ್ರ ವಿನಾಶವಾಗುವ ಸಾಧ್ಯತೆ ಇದೆ. ಭೂಕುಸಿತಗಳು ಇತರ ನೈಸರ್ಗಿಕ ವಿಪತ್ತುಗಳಿಗಿಂತ ಹೆಚ್ಚಿನ ಸಾಮಾಜಿಕ-ಆರ್ಥಿಕ ಪರಿಣಾಮಗಳಿಗೆ ಕಾರಣವಾಗುತ್ತವೆ. ಏಕೆಂದರೆ ಇವುಗಳೊಂದಿಗೆ ಸಾಮಾನ್ಯವಾಗಿ ಭೂಕಂಪ, ಪ್ರವಾಹ, ಚಂಡಮಾರುತ ಮತ್ತು ಪೊದೆಗಳಿಗೆ ಬೆಂಕಿ ಹೊತ್ತಿಕುಳ್ಳುವುದು ಮುಂತಾದ ಇತರ ನೈಸರ್ಗಿಕ ವಿಪತ್ತುಗಳು ಸಂಭವಿಸುವ ಸಾಧ್ಯತೆ ಇರುತ್ತದೆ.
ಉತ್ತರಾಖಂಡದ ಪ್ರವಾಹದ ಪರಿಣಾಮವಾಗಿ 2013 ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ದುರಂತವು ಸುಮಾರು 4200 ಹಳ್ಳಿಗಳಲ್ಲಿ ಅಪಾರ ಪ್ರಮಾಣದ ಜೀವ ಮತ್ತು ಆಸ್ತಿ ಹಾನಿಗೆ ಕಾರಣವಾಯಿತು. ಹವಾಮಾನ ಬದಲಾವಣೆಯು ಭೂಕುಸಿತವನ್ನು ಉಂಟುಮಾಡುವ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಹೆಚ್ಚುತ್ತಿರುವ ಜಾಗತಿಕ ತಾಪಮಾನದೊಂದಿಗೆ ಹಿಮನದಿಗಳು ವೇಗವಾಗಿ ಕರಗುತ್ತಿವೆ, ಇದು ಪ್ರವಾಹಗಳು ಮತ್ತು ಭೂಕುಸಿತಗಳಿಗೆ ಕಾರಣವಾಗುತ್ತದೆ. ಹವಾಮಾನ ಬದಲಾವಣೆಗಳು ಮತ್ತು ಭೂಕುಸಿತಗಳು ಹೆಚ್ಚಾಗುತ್ತಿರುವ ಕಾರಣದಿಂದ ಅಪಾಯ-ಪೀಡಿತ ಪ್ರದೇಶಗಳಲ್ಲಿನ ಆಸ್ತಿ-ಪಾಸ್ತಿಗಳು ಆದ್ಯತೆಯ ಆಧಾರದ ಮೇಲೆ ಈ ಗಂಭೀರ ಅಪಾಯವನ್ನು ಕವರ್ ಮಾಡುವ ಇನ್ಶೂರೆನ್ಸ್ ಪಡೆಯಬೇಕಾಗಬಹುದು.
ಗುರುತ್ವಾಕರ್ಷಣೆಯ ಪ್ರಭಾವದ ಅಡಿಯಲ್ಲಿ ಭೂಮಿ ಅಥವಾ ಕಲ್ಲುಗುಡ್ಡೆಗಳು ಇಳಿಜಾರಿನ ಕಡೆಗೆ ಜಾರಿಬೀಳುವುದೇ ಭೂಕುಸಿತ. ಭೂಕುಸಿತಗಳು ಹಲವಾರು ಕಾರಣಗಳಿಂದ ಉಂಟಾಗಬಹುದು. ಅಂತಿಮವಾಗಿ, ಭೂಮಿ ಸಡಿಲವಾಗುತ್ತದೆ ಮತ್ತು ಅದರ ಮೇಲಿನ ಆಸ್ತಿಗಳು ನಾಶವಾಗುತ್ತವೆ. ಹಿಂದೆ, ಹಲವಾರು ಅಂಶಗಳಿಂದಾಗಿ ಭಾರತದಲ್ಲಿ ಕೆಲವು ಗಂಭೀರ ಮತ್ತು ಮಾರಕ ಭೂಕುಸಿತಗಳಾಗಿವೆ. ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಹಿಮಾಲಯ ಪ್ರದೇಶ ಮತ್ತು ಪಶ್ಚಿಮ ಘಟ್ಟಗಳು ಮತ್ತು ಪೂರ್ವ ಘಟ್ಟಗಳ ಭಾಗಗಳು ವಿಶೇಷವಾಗಿ ಭೂಕುಸಿತದ ಅಪಾಯದಲ್ಲಿವೆ. ಭೂಕುಸಿತಕ್ಕೆ ಕಾರಣವಾಗುವ ಕೆಲವು ನಿರ್ದಿಷ್ಟ ಅಂಶಗಳು ಈ ಕೆಳಗಿನಂತಿವೆ:
ಮನೆ ಹಾಗೂ ಅದರೊಳಗಿನ ವಸ್ತುಗಳಿಗೆ ಕವರೇಜ್
ಮನೆಯಲ್ಲಿನ ಬೆಲೆ ಬಾಳುವ ವಸ್ತುಗಳ ಹಾನಿಯ ವಿರುದ್ಧ ಕವರೇಜ್
ಪ್ರವಾಹದಿಂದ ಉಂಟಾಗುವ ಯಾವುದೇ ಹಾನಿಯನ್ನು ಕವರ್ ಮಾಡಲಾಗುತ್ತದೆ
ಪಾಲಿಸಿ ಅಡಿಯಲ್ಲಿ ಅನ್ವಯವಾಗುವ ಡಿಡಕ್ಟಿಬಲ್‌ಗಳನ್ನು ಹೊರತುಪಡಿಸಲಾಗಿದೆ
ಗಳಿಕಯಲ್ಲಿ ನಷ್ಟ ಹಾಗೂ ಯಾವುದೇ ರೀತಿಯ ಪರೋಕ್ಷ ಹಾನಿಯನ್ನು ಕವರ್ ಮಾಡಲಾಗುವುದಿಲ್ಲ
ಆರ್ಕಿಟೆಕ್ಟ್, ಸರ್ವೇಯರ್ ಅಥವಾ ಕನ್ಸಲ್ಟಿಂಗ್ ಎಂಜಿನಿಯರ್‌ಗಳ ಶುಲ್ಕವನ್ನು (3% ಕ್ಲೈಮ್ ಮೊತ್ತಕ್ಕಿಂತ ಹೆಚ್ಚು) ಕವರ್ ಮಾಡಲಾಗುವುದಿಲ್ಲ
ತ್ಯಾಜ್ಯ ವಿಲೇವಾರಿಯನ್ನು ಪಾಲಿಸಿ ಕವರ್ ಮಾಡುವುದಿಲ್ಲ
ಬಾಡಿಗೆಯ ನಷ್ಟವನ್ನು ಕವರ್ ಮಾಡಲಾಗುವುದಿಲ್ಲ
ಪರ್ಯಾಯ ವಸತಿಯ ಬಾಡಿಗೆ ಮೊತ್ತ, ಹೆಚ್ಚುವರಿ ವೆಚ್ಚವಾಗಿದ್ದು ಅದನ್ನು ಕವರ್ ಮಾಡಲಾಗುವುದಿಲ್ಲ
ಇನ್ಶೂರೆನ್ಸ್ ಅವಧಿಯ ನಂತರ ಉಂಟಾಗುವ ಹಾನಿಗಳಿಗೆ ಕವರೇಜ್ ಇರುವುದಿಲ್ಲ
ಸುರಕ್ಷಿತ 1.6+ ಕೋಟಿ ನಗು!@
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ಸುರಕ್ಷಿತ #1.6+ ಕೋಟಿ ನಗು
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
ತಡೆರಹಿತ ಮತ್ತು ವೇಗದ ಕ್ಲೈಮ್ ಸೆಟಲ್ಮೆಂಟ್