ಆರೋಗ್ಯಕರ ವ್ಯಕ್ತಿಗಳಿಗೆ ಹೆಲ್ತ್ ಇನ್ಶೂರೆನ್ಸ್ ಹೇಗೆ ಉಪಯುಕ್ತವಾಗಿದೆ? ನಿಮ್ಮ OPD ವೆಚ್ಚಗಳಿಗೆ ನೀವು ಏಕೆ ಪಾವತಿಸಬೇಕು? ಎಚ್‌ಡಿಎಫ್‌ಸಿ ಎರ್ಗೋದ ಹೆಲ್ತ್ ವಾಲೆಟ್‌ನಲ್ಲಿ ನಿಮಗೆ ಅಗತ್ಯವಿರುವುದನ್ನು ನಿಖರವಾಗಿ ಲೋಡ್ ಮಾಡಲಾಗಿದೆ ಮತ್ತು ಇನ್ನೂ ಹೆಚ್ಚು ಇದೆ. ಹೆಲ್ತ್ ಇನ್ಶೂರೆನ್ಸ್ ಪರಿಕಲ್ಪನೆಗೆ ಮರು ವ್ಯಾಖ್ಯಾನ ನೀಡಲು ಮತ್ತು ಕ್ರಾಂತಿಕಾರಕವನ್ನಾಗಿಸಲು ವಿನ್ಯಾಸಗೊಳಿಸಲಾಗಿದೆ
ರಿಸರ್ವ್ ಪ್ರಯೋಜನ, ಇದೊಂದು ಅನುಕೂಲಕರ ಮತ್ತು ಸಮಗ್ರ ಪ್ಲಾನ್ ಆಗಿದ್ದು ಕೆಲವು ವರ್ಷಗಳ ನಂತರ ತಂತಾನೆ ಪಾವತಿ ಆರಂಭಿಸುತ್ತದೆ. ಇನ್ನೇನು ಬೇಕು?
ಇತರ ಎಲ್ಲಾ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‍ಗಳಂತೆ ಅನಾರೋಗ್ಯ ಮತ್ತು ಗಾಯಗಳಿಗಾಗಿ ಆಸ್ಪತ್ರೆಗೆ ದಾಖಲಾಗುವುದಕ್ಕೆ ನಾವು ನಿಮ್ಮನ್ನು ಕವರ್ ಮಾಡುತ್ತೇವೆ.
ಅಂದರೆ ಆಸ್ಪತ್ರೆಗೆ ದಾಖಲಾಗುವುದಕ್ಕೂ ಮುಂಚಿನ 60 ದಿನಗಳವರೆಗಿನ ಹಾಗೂ ಡಿಸ್ಚಾರ್ಜ್ ಆದ 90 ದಿನಗಳವರೆಗಿನ ಆಸ್ಪತ್ರೆ ಖರ್ಚುಗಳು ಕವರ್ ಆಗುತ್ತವೆ. ಉದಾಹರಣೆಗೆ ರೋಗ ನಿರ್ಣಯದ ಖರ್ಚುಗಳು, ತಪಾಸಣೆಯ ಖರ್ಚುಗಳು ಇತ್ಯಾದಿ.
ವೈದ್ಯಕೀಯ ಪ್ರಗತಿಗಳು ತುರ್ತು ಶಸ್ತ್ರಚಿಕಿತ್ಸೆಗಳು ಮತ್ತು ಚಿಕಿತ್ಸೆಗಳನ್ನು 24 ಗಂಟೆಗಳಿಗಿಂತ ಕಡಿಮೆ ಸಮಯದಲ್ಲಿ ಕೈಗೊಳ್ಳಲು ಸಹಾಯ ಮಾಡುತ್ತವೆ, ಮತ್ತು ಇನ್ನೂ ಏನು ಎಂದು ಗೆಸ್ ಮಾಡಿ? ನಾವು 182 ದಿನಗಳವರೆಗಿನ ಡೇ ಕೇರ್ ಸಿಸ್ಟಮ್‍ಗಳನ್ನು ಕವರ್ ಮಾಡುತ್ತೇವೆ.
ತುರ್ತುಸ್ಥಿತಿಯಲ್ಲಿ, ಅಗತ್ಯವಿದ್ದರೆ, ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ. ಪ್ರತಿ ಬಾರಿಯ ಆಸ್ಪತ್ರೆ ದಾಖಲಾತಿಗೆ ಆಂಬ್ಯುಲೆನ್ಸ್ ವೆಚ್ಚಗಳು ₹2000 ದವರೆಗೆ ಕವರ್ ಆಗುತ್ತವೆ.
ಅಂಗ ದಾನ ಒಂದು ಶ್ರೇಷ್ಠ ಕೆಲಸ. ಹೀಗಾಗಿ ನಾವು ಪ್ರಮುಖ ಅಂಗಗಳ ಜೋಡಣೆಯ ಸಂದರ್ಭದಲ್ಲಿ ಅಂಗ ದಾನಿಗಳ ಆಸ್ಪತ್ರೆ ಖರ್ಚುಗಳು ಹಾಗೂ ಶಸ್ತ್ರಚಿಕಿತ್ಸೆಯ ಖರ್ಚುಗಳನ್ನು ಕವರ್ ಮಾಡುತ್ತೇವೆ.
ಒಮ್ಮೆ ನೀವು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಮೂಲಕ ಸುರಕ್ಷಿತರಾದರೆ, ಮತ್ತೆ ಹಿಂತಿರುಗಿ ನೋಡುವ ಪ್ರಮೇಯವಿಲ್ಲ. ತಡೆರಹಿತ ನವೀಕರಣಗಳೊಂದಿಗೆ ಈ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ಜೀವಮಾನದುದ್ದಕ್ಕೂ ಮುಂದುವರೆಯುತ್ತದೆ.
ಡಾಕ್ಟರ್ ಸಲಹೆಯ ಮೇರೆಗೆ ನೀವು ಮನೆಯಿಂದಲೇ ಚಿಕಿತ್ಸೆ ಪಡೆಯಬಹುದು ಹಾಗೂ ನಗದುರಹಿತ ವೈದ್ಯಕೀಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಆಗ ನೀವು ಈ ವೈಶಿಷ್ಟ್ಯದ ಹೆಚ್ಚಿನ ಪ್ರಯೋಜನ ಪಡೆದಂತಾಗುತ್ತದೆ.
ನಿಮಗೆ ಆಯುರ್ವೇದ, ಯುನಾನಿ, ಸಿದ್ಧ ಹಾಗೂ ಹೋಮಿಯೋಪತಿ ಮುಂತಾದ ಪದ್ಧತಿಗಳಲ್ಲಿ ನಂಬಿಕೆ ಇದ್ದರೆ ಅದು ಹಾಗೆಯೇ ಮುಂದುವರಿಯಲಿ. ನಾವು ಆಯುಷ್ ಚಿಕೆತ್ಸೆಗಳ ಆಸ್ಪತ್ರೆ ದಾಖಲಾತಿಗಳನ್ನೂ ಕವರ್ ಮಾಡುತ್ತೇವೆ.
ನೀವು ಆಸ್ಪತ್ರೆಯಲ್ಲಿ ಉಳಿದುಕೊಳ್ಳಬೇಕಾದರೆ, ಅದರ ಬಿಲ್‌ಗಳ ಬಗ್ಗೆ ಯಾವುದೇ ಚಿಂತೆಯಿಲ್ಲದೆ ನಿಮಗೆ ಆರಾಮದಾಯಕ ಮತ್ತು ಅನುಕೂಲಕರ ಕೊಠಡಿಯನ್ನು ಆಯ್ಕೆ ಮಾಡಿ. ವಿಮಾ ಮೊತ್ತದವರೆಗೆ ನಾವು ಕೋಣೆ-ಬಾಡಿಗೆಯ ಮೇಲೆ ಸಂಪೂರ್ಣ ಕವರೇಜ್ ನೀಡುತ್ತೇವೆ.
ಒಂದು ವೇಳೆ ನೀವು 10 ದಿನಗಳಿಗಿಂತ ಹೆಚ್ಚು ಸಮಯ ಆಸ್ಪತ್ರೆಯಲ್ಲಿ ಉಳಿದಿದ್ದರೆ, ಮನೆಯಲ್ಲಿ ನಿಮ್ಮ ಅನುಪಸ್ಥಿತಿಯಿಂದಾಗಿ ಉಂಟಾದ ಇತರ ಹಣಕಾಸಿನ ನಷ್ಟಗಳಿಗೆ ನಾವು ₹13,000 ಗಳ ಒಟ್ಟು ಮೊತ್ತ ನೀಡುತ್ತೇವೆ.
ನಿಮಗಿದು ಗೊತ್ತಿತ್ತೇ? ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕೇವಲ ನಿಮ್ಮ ಉಳಿತಾಯವನ್ನು ಸುರಕ್ಷಿತಗೊಳಿಸದೇ ತೆರಿಗೆ ಉಳಿಸಲೂ ಸಹಾಯ ಮಾಡುತ್ತದೆ. ಹೌದು, ನೀವು ಎಚ್ಡಿಎಫ್ಸಿ ಎರ್ಗೋ ಹೆಲ್ತ್ ಇನ್ಶೂರೆನ್ಸ್ ಪ್ಲಾನ್‌ಗಳೊಂದಿಗೆ ₹75,000 ಗಳವರೆಗೆ ಉಳಿತಾಯ ಮಾಡಬಹುದು.
ಸಾಹಸ ಕ್ರೀಡೆಗಳು ನಿಮ್ಮನ್ನು ರೋಮಾಂಚಿತಗೊಳಿಸಬಲ್ಲವು. ಆದರೆ, ಅವಘಡಗಳೇನಾದರೂ ಆದರೆ ಅವು ಅಪಾಯಕಾರಿಯಾಗಿ ಪರಿಣಮಿಸುತ್ತವೆ. ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವಾಗ ಉಂಟಾಗುವ ಆಕ್ಸಿಡೆಂಟ್‌ಗಳನ್ನು ನಮ್ಮ ಪಾಲಿಸಿಯು ಕವರ್ ಮಾಡುವುದಿಲ್ಲ.
ನಿಮಗೆ ನೀವೇ ಹಾನಿ ಮಾಡಿಕೊಳ್ಳುವ ಉದ್ದೇಶ ನಿಮ್ಮದಾಗಿದ್ದರೆ ನಮ್ಮ ಪಾಲಿಸಿ ಸ್ವತಃ ಮಾಡಿಕೊಂಡ ಗಾಯಗಳನ್ನು ಕವರ್ ಮಾಡುವುದಿಲ್ಲ.
ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಆದಾಗ್ಯೂ, ಯುದ್ಧಗಳಿಂದ ಉಂಟಾಗುವ ಯಾವುದೇ ಕ್ಲೈಮ್ ಅನ್ನು ನಮ್ಮ ಪಾಲಿಸಿ ಕವರ್ ಮಾಡುವುದಿಲ್ಲ.
ನೀವು ರಕ್ಷಣೆ ಕಾರ್ಯಾಚರಣೆಗಳಲ್ಲಿ (ಸೇನಾಪಡೆ/ನೌಕಾಪಡೆ/ವಾಯುಪಡೆ) ಭಾಗವಹಿಸುತ್ತಿರುವಾಗ ನಮ್ಮ ಪಾಲಿಸಿಯು ಆಕ್ಸಿಡೆಂಟ್‌ಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಗಂಭೀರ ಕಾಯಿಲೆಯ ಬಗ್ಗೆ ನಾವು ತಿಳಿದುಕೊಂಡಿದ್ದೇವೆ. ಆದಾಗ್ಯೂ, ನಮ್ಮ ಪಾಲಿಸಿಯು ಗುಪ್ತಾಂಗ ಸಂಬಂಧಿತ ಅಥವಾ ಲೈಂಗಿಕವಾಗಿ ಹರಡುವ ಕಾಯಿಲೆಗಳನ್ನು ಕವರ್ ಮಾಡುವುದಿಲ್ಲ.
ನಿಮ್ಮ ಇನ್ಶೂರೆನ್ಸ್ ಪಾಲಿಸಿ ಅಡಿಯಲ್ಲಿ ಬೊಜ್ಜಿನ ಸಮಸ್ಯೆಯ ಚಿಕಿತ್ಸೆ ಅಥವಾ ಕಾಸ್ಮೆಟಿಕ್ ಸರ್ಜರಿ ಕವರೇಜ್‌ಗೆ ಅರ್ಹವಾಗಿರುವುದಿಲ್ಲ.
ಒಳಗೊಂಡ ಮತ್ತು ಒಳಗೊಳ್ಳದ ವಿವರಗಳಿಗಾಗಿ ದಯವಿಟ್ಟು ಸೇಲ್ಸ್ ಬ್ರೋಶರ್/ಪಾಲಿಸಿ ವಾಕ್ಯಗಳನ್ನು ನೋಡಿ
ಕೆಲವು ಕಾಯಿಲೆ ಮತ್ತು ಚಿಕಿತ್ಸೆಗಳನ್ನು ಪಾಲಿಸಿ ವಿತರಣೆಯ 2 ವರ್ಷಗಳ ನಂತರ ಕವರ್ ಮಾಡಲಾಗುತ್ತದೆ.
ಅರ್ಜಿ ಸಮಯದಲ್ಲಿ ಘೋಷಿಸಲಾದ ಮತ್ತು/ಅಥವಾ ಅಂಗೀಕರಿಸಿದ ಮೊದಲೇ ಅಸ್ತಿತ್ವದಲ್ಲಿರುವ ಷರತ್ತುಗಳನ್ನು ಮೊದಲ 3 ವರ್ಷಗಳ ನಿರಂತರ ನವೀಕರಣಗಳ ನಂತರ ಪರಿಗಣಿಸಲಾಗುತ್ತದೆ.
ಆಕಸ್ಮಿಕ ಆಸ್ಪತ್ರೆ ದಾಖಲಾತಿಗಳನ್ನು ಮಾತ್ರ ಅನುಮತಿಸಲಾಗುವುದು.
3 Lacs | 5 Lacs | 10 Lacs | 15 Lacs | 20 Lacs | 25 Lacs | 50 Lacs | ||
---|---|---|---|---|---|---|---|---|
ರಿಸರ್ವ್ ಪ್ರಯೋಜನದ ವಿಮಾ ಮೊತ್ತ | ಕಡಿತ ಇಲ್ಲ | 5000 | 5000 | 10000 | 10000 | 15000 | 20000 | 25000 |
200,000 ಕಡಿತದ ಮೊತ್ತ | 5000 | 5000 | 10000 | 10000 | 15000 | 20000 | 25000 | |
300,000 ಕಡಿತದ ಮೊತ್ತ | ಸಂಯೋಜನೆಯನ್ನು ಒದಗಿಸಲಾಗಿಲ್ಲ | 5000 | 5000 | 10000 | 10000 | 15000 | 15000 | |
500,000 ಕಡಿತದ ಮೊತ್ತ | ಸಂಯೋಜನೆಯನ್ನು ಒದಗಿಸಲಾಗಿಲ್ಲ | ಸಂಯೋಜನೆಯನ್ನು ಒದಗಿಸಲಾಗಿಲ್ಲ | 5000 | 10000 | 10000 | 15000 | 15000 | |
10,00,000 ಕಡಿತದ ಮೊತ್ತ | ಸಂಯೋಜನೆಯನ್ನು ಒದಗಿಸಲಾಗಿಲ್ಲ | ಸಂಯೋಜನೆಯನ್ನು ಒದಗಿಸಲಾಗಿಲ್ಲ | ಸಂಯೋಜನೆಯನ್ನು ಒದಗಿಸಲಾಗಿಲ್ಲ | ಸಂಯೋಜನೆಯನ್ನು ಒದಗಿಸಲಾಗಿಲ್ಲ | 10000 | 15000 | 15000 |
ರಿಸರ್ವ್ ಪ್ರಯೋಜನದ ವಿಮಾ ಮೊತ್ತ | ಪ್ಲಾನ್ | 5000 | 10000 | 15000 | 20000 | 25000 |
---|---|---|---|---|---|---|
ನಾನ್ ಡಿಡಕ್ಟಿಬಲ್ ಪ್ಲಾನ್ಗಳಿಗಾಗಿ | ವೈಯಕ್ತಿಕ | ನೀಡಲಾಗಿಲ್ಲ | ಪ್ರತಿ ವ್ಯಕ್ತಿಗೆ ₹1500 ವರೆಗೆ | ಪ್ರತಿ ವ್ಯಕ್ತಿಗೆ ₹2500 ವರೆಗೆ | ಪ್ರತಿ ವ್ಯಕ್ತಿಗೆ ₹3000 ವರೆಗೆ | ಪ್ರತಿ ವ್ಯಕ್ತಿಗೆ₹3500 ವರೆಗೆ |
ಡಿಡಕ್ಟಿಬಲ್ ಪ್ಲಾನ್ಗಳಿಗಾಗಿ | ವೈಯಕ್ತಿಕ | ನೀಡಲಾಗಿಲ್ಲ | ಪ್ರತಿ ವ್ಯಕ್ತಿಗೆ ₹1000 ವರೆಗೆ | ಪ್ರತಿ ವ್ಯಕ್ತಿಗೆ ₹2000 ವರೆಗೆ | ಪ್ರತಿ ವ್ಯಕ್ತಿಗೆ ₹2500 ವರೆಗೆ | ಪ್ರತಿ ವ್ಯಕ್ತಿಗೆ ₹3000 ವರೆಗೆ |