ಈ ಹಬ್ಬದ ಋತುವಿನಲ್ಲಿ ನಿಮ್ಮ ಮನೆಗೆ ಮನೆ ಎಂಬ ಭಾವನೆ ನೀಡುವ ಪ್ರತಿಯೊಂದು ಅಗತ್ಯ ವಸ್ತುಗಳಿಗೆ ರಕ್ಷಣೆ ನೀಡಿ. ನಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ಅಮೂಲ್ಯ ಚರಾಸ್ತಿಗಳವರೆಗೆ ನಿಮ್ಮ ಮೌಲ್ಯಯುತ ವಸ್ತುಗಳಿಗೆ ಕವರೇಜನ್ನು ಒದಗಿಸುತ್ತದೆ, ಆದ್ದರಿಂದ ನೀವು ಮನಸ್ಸಿನ ಶಾಂತಿಯನ್ನು ಹೊಂದಬಹುದು ಮತ್ತು ಎಲ್ಲಾ ಸಮಯದಲ್ಲೂ ಸುರಕ್ಷಿತವಾಗಿರಬಹುದು. ನಮ್ಮ ಕಸ್ಟಮೈಜ್ ಮಾಡಿದ ಪ್ಲಾನ್‌ಗಳು ಮತ್ತು ಹಲವಾರು ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಮನೆಯ ನಿಧಿಗಳನ್ನು ಯಾವುದೇ ಅನಿರೀಕ್ಷಿತ ಘಟನೆಗಳ ವಿರುದ್ಧ ರಕ್ಷಿಸಲಾಗುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪಾಲಿಸಿಯು ಬಾಡಿಗೆ ನಷ್ಟ, ಪರ್ಯಾಯ ವಸತಿ ವೆಚ್ಚಗಳು ಮುಂತಾದ ಉಪಯುಕ್ತ ಆ್ಯಡ್-ಆನ್ ಕವರ್‌ಗಳೊಂದಿಗೆ ₹10 ಕೋಟಿಯವರೆಗಿನ ಮನೆ ಕಟ್ಟಡಗಳು ಮತ್ತು ವಸ್ತುಗಳನ್ನು ಕವರ್ ಮಾಡುತ್ತದೆ. ಹೆಚ್ಚುವರಿಯಾಗಿ, ಎಚ್‌ಡಿಎಫ್‌ಸಿ ಎರ್ಗೋ ಹೋಮ್ ಶೀಲ್ಡ್ ಇನ್ಶೂರೆನ್ಸ್ ಪೋರ್ಟೆಬಲ್ ಎಲೆಕ್ಟ್ರಾನಿಕ್ ಸಲಕರಣೆಗಳಿಗೆ ಎಲ್ಲಾ-ರಿಸ್ಕ್ ಕವರೇಜನ್ನು ಒದಗಿಸುತ್ತದೆ.
ಇದು ನೀವು ಆಯ್ಕೆ ಮಾಡುವ ಕವರ್ ಪ್ರಕಾರವನ್ನು ಅವಲಂಬಿಸಿರುವಾಗ, ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪಾಲಿಸಿಯು ಸಾಮಾನ್ಯವಾಗಿ ಇದಕ್ಕೆ ಕವರೇಜ್ ಒದಗಿಸುವುದಿಲ್ಲ ;
ನಿರ್ಮಾಣದಲ್ಲಿರುವ ಆಸ್ತಿ ಅಥವಾ ಕಚ್ಚಾ ನಿರ್ಮಾಣವನ್ನು ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ. ನಿಮ್ಮ ಮನೆಯ ವಸ್ತುಗಳನ್ನು ಸುರಕ್ಷಿತವಾಗಿರಿಸಲು ಈ ಪಾಲಿಸಿಗೆ ಅಪ್ಲೈ ಮಾಡಲು ಅರ್ಹರಾಗಲು ನಿಮ್ಮ ಮನೆಯು "ನಿರ್ಮಾಣದಲ್ಲಿರುವ" ಸ್ಥಿತಿಯನ್ನು ಹೊಂದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಹಳೆಯ ಮತ್ತು ಹೊಚ್ಚ ಹೊಸ ವಸ್ತುಗಳು ಮನೆಯ ವಸ್ತುಗಳ ಒಳಗೆ ಬರುತ್ತವೆ. ಆದಾಗ್ಯೂ, 10 ವರ್ಷಕ್ಕಿಂತ ಹಳೆಯ ವಸ್ತುಗಳಿಂದ ಉಂಟಾದ ಹಾನಿಗಳು ಅಥವಾ ನಷ್ಟಗಳನ್ನು ಈ ಪ್ಲಾನ್ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ಆಕ್ಸಿಡೆಂಟಲ್ ಹಾನಿಗಳು, ಅದು ಮಾನವ ಅಥವಾ ಪ್ರಕೃತಿ ಸ್ವರೂಪದಿಂದ ಉಂಟಾಗಿರಲಿ, ಅವುಗಳು ಹೋಮ್ ಕಂಟೆಂಟ್ಸ್ ಪ್ಲಾನ್‌ಗಳ ಅಡಿಯಲ್ಲಿ ಕವರ್ ಆಗುತ್ತವೆ ಎಂಬುದನ್ನು ನಾವು ಖಚಿತಪಡಿಸುತ್ತೇವೆ. ಆದಾಗ್ಯೂ, ಉದ್ದೇಶಪೂರ್ವಕ ತಪ್ಪಾದ ನಡವಳಿಕೆಯಿಂದಾಗಿ ನಿಮ್ಮ ಅಮೂಲ್ಯ ವಸ್ತುಗಳಿಗೆ ಉಂಟಾದ ಹಾನಿಗಳು ಅಥವಾ ನಷ್ಟಗಳನ್ನು ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ಓವರ್‌ಲೋಡ್ ಅಥವಾ ಸ್ಟ್ರೈನ್, ಅತಿಯಾದ ಒತ್ತಡ, ಅಥವಾ ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ವಸ್ತುಗಳಿಂದ ಉಂಟಾಗುವ ನಷ್ಟಗಳು ಅಥವಾ ಹಾನಿಗಳು ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಅಡಿಯಲ್ಲಿ ಒಳಗೊಳ್ಳುವುದಿಲ್ಲ. ಪಾಲಿಸಿ ಸೇರ್ಪಡೆಗಳು ಮತ್ತು ಹೊರಗಿಡುವಿಕೆಗಳನ್ನು ಎಚ್ಚರಿಕೆಯಿಂದ ಓದುವುದನ್ನು ಖಚಿತಪಡಿಸಿಕೊಳ್ಳಿ.
ಕಲಾಕೃತಿಗಳು, ವಿಂಟೇಜ್ ನಾಣ್ಯಗಳು, ಹಳೆಯ ಸ್ಟ್ಯಾಂಪ್‌ಗಳು ಮುಂತಾದ ಅಮೂಲ್ಯ ಸಂಗ್ರಹಗಳು ತಮ್ಮದೇ ಆದ ಮೌಲ್ಯವನ್ನು ಹೊಂದಿವೆ. ಆದಾಗ್ಯೂ, ಅಂತಹ ವಸ್ತುಗಳಿಗೆ ಆದ ಹಾನಿಗಳನ್ನು ಸಾಮಾನ್ಯವಾಗಿ ಈ ಪಾಲಿಸಿಯ ಅಡಿಯಲ್ಲಿ ಕವರ್ ಮಾಡಲಾಗುವುದಿಲ್ಲ.
ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಖರೀದಿಸಲು ಬಯಸಿದರೆ, ಈ ಸರಳ ಹಂತಗಳನ್ನು ಅನುಸರಿಸುವ ಮೂಲಕ ನೀವು ಅದನ್ನು ಆನ್ಲೈನಿನಲ್ಲಿ ಮಾಡಬಹುದು ;
1. ಎಚ್‌ಡಿಎಫ್‌ಸಿ ಎರ್ಗೋದ ಅಧಿಕೃತ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪುಟಕ್ಕೆ ಭೇಟಿ ನೀಡಿ,
2. ಪೇಜಿನ ಮೇಲ್ಭಾಗದಲ್ಲಿರುವ "ಈಗಲೇ ಖರೀದಿಸಿ" ಮೇಲೆ ಕ್ಲಿಕ್ ಮಾಡಿ,
3. "ಮಾಲೀಕರಿಗೆ ಹೋಮ್ ಕವರ್" ವಿಭಾಗದಿಂದ ನಿಮ್ಮ ಪ್ರಕರಣದಲ್ಲಿ ಅನ್ವಯವಾಗುವ "ಮಾಲೀಕ" ಮತ್ತು "ಬಾಡಿಗೆದಾರ" ನಡುವೆ ಆಯ್ಕೆಮಾಡಿ,
4. "ನಾನು ಕವರ್ ಮಾಡಲು ಬಯಸುತ್ತೇನೆ" ವಿಭಾಗದಿಂದ "ಕಂಟೆಂಟ್" ಅಥವಾ "ಸ್ಟ್ರಕ್ಚರ್ ಮತ್ತು ಕಂಟೆಂಟ್" ನಡುವೆ ಆಯ್ಕೆ ಮಾಡಿ ಮತ್ತು "ಮುಂದುವರಿಯಿರಿ" ಒತ್ತಿ,
5. ನೀವು ಸಂಬಳ ಪಡೆಯುವವರಾಗಿರಲಿ ಅಥವಾ ಇಲ್ಲದಿರಲಿ, ನಿಮ್ಮ ವಸ್ತುಗಳ ಮೌಲ್ಯವನ್ನು ಒಳಗೊಂಡಂತೆ ಅಗತ್ಯ ವಿವರಗಳನ್ನು ಮತ್ತು ನಿಮ್ಮ ಮನೆಯಲ್ಲಿ ಲಭ್ಯವಿರುವ ಭದ್ರತಾ ಕ್ರಮಗಳನ್ನು ಒದಗಿಸಿ ಮತ್ತು "ಮುಂದುವರಿಯಿರಿ" ಮೇಲೆ ಕ್ಲಿಕ್ ಮಾಡಿ,
6. ನಿಮ್ಮ ಹೆಸರು, ಇಮೇಲ್ ವಿಳಾಸ ಮತ್ತು ಫೋನ್ ನಂಬರ್ ಸೇರಿದಂತೆ ನಿಮ್ಮ ಸಂಪರ್ಕ ವಿವರಗಳನ್ನು ಭರ್ತಿ ಮಾಡಿ ಮತ್ತು "ಮುಂದುವರಿಯಿರಿ" ಆಯ್ಕೆಯನ್ನು ಒತ್ತಿ,
7. ನೀವು ಬಯಸುವ ಹೋಮ್ ಪ್ಲಾನ್ ಪ್ರಕಾರವನ್ನು ಆಯ್ಕೆಮಾಡಿ, ಪಾಲಿಸಿ ಅವಧಿ ಮತ್ತು ಐಚ್ಛಿಕ ಕವರ್‌ಗಳನ್ನು ಆಯ್ಕೆ ಮಾಡಿ (ಅಗತ್ಯವಿದ್ದರೆ) ಮತ್ತು "ಮುಂದುವರಿಯಿರಿ" ಮೇಲೆ ಕ್ಲಿಕ್ ಮಾಡಿ,
8. ಪ್ಯಾನ್ ಕಾರ್ಡ್ ನಂಬರ್, ನಿಮ್ಮ ಪೂರ್ಣ ಹೆಸರು, ಆಸ್ತಿ ವಿಳಾಸ ಮುಂತಾದ ಹೆಚ್ಚುವರಿ ವಿವರಗಳನ್ನು ನಮೂದಿಸಿ ಮತ್ತು "ಮುಂದಿನದು" ಕ್ಲಿಕ್ ಮಾಡಿ
9. ಅಂತಿಮವಾಗಿ, ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪಾಲಿಸಿಯನ್ನು ಪರಿಶೀಲಿಸಿ ಮತ್ತು ಪ್ಲಾನ್ ಖರೀದಿಯನ್ನು ಪೂರ್ಣಗೊಳಿಸಲು ಆನ್ಲೈನಿನಲ್ಲಿ ಪ್ರೀಮಿಯಂ ಪಾವತಿಸಿ.
ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಅಸ್ತಿತ್ವದಲ್ಲಿರುವ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪ್ಲಾನ್ ಹೊಂದಿದ್ದರೆ ಮತ್ತು ಅದನ್ನು ನವೀಕರಿಸಲು ಬಯಸಿದರೆ, ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ ;
1. ಅಧಿಕೃತ ಎಚ್‌ಡಿಎಫ್‌ಸಿ ಎರ್ಗೋ ಹೋಮ್‌ಪೇಜಿಗೆ ಹೋಗಿ,
2. "ರಿನೀವ್" ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ ಮತ್ತು ಕ್ಲಿಕ್ ಮಾಡಿ,
3. ಅಸ್ತಿತ್ವದಲ್ಲಿರುವ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಪ್ಲಾನಿನ ಪಾಲಿಸಿ ನಂಬರ್ ನಮೂದಿಸಿ,
4. ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ,
5. ಪ್ಲಾನ್ ವಿವರಗಳನ್ನು ವಿಮರ್ಶಿಸಿ ಮತ್ತು ಪರಿಶೀಲಿಸಿ,
6. ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ನವೀಕರಣವನ್ನು ಪೂರ್ಣಗೊಳಿಸಲು ಆನ್ಲೈನಿನಲ್ಲಿ ಪ್ರೀಮಿಯಂ ಪಾವತಿಸಿ.
ಎಚ್‌ಡಿಎಫ್‌ಸಿ ಎರ್ಗೋದೊಂದಿಗೆ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಕ್ಲೈಮ್ ಫೈಲ್ ಮಾಡುವ ಪ್ರಕ್ರಿಯೆಯು ತುಂಬಾ ಸರಳವಾಗಿದೆ. ಅದನ್ನು ಪೂರ್ಣಗೊಳಿಸಲು ನೀವು ಅನುಸರಿಸಬೇಕಾದ ಹಂತಗಳು ಇಲ್ಲಿವೆ ;
1. ಅಧಿಕೃತ ಸಹಾಯವಾಣಿ ನಂಬರ್ ಮೂಲಕ ವಿಮಾದಾತರನ್ನು ಸಂಪರ್ಕಿಸುವ ಮೂಲಕ ಹೋಮ್ ಕಂಟೆಂಟ್ಸ್ ಇನ್ಶೂರೆನ್ಸ್ ಕ್ಲೈಮ್ ಆರಂಭಿಸಿ/ನೋಂದಣಿ ಮಾಡಿ. 022 6158 2020 ಅಥವಾ care@hdfcergo.com ಗೆ ಇಮೇಲ್ ಮಾಡಿ,
2. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಮ್ಮ ತಂಡವು ನೀಡಿದಂತಹ ಮುಂದಿನ ಸೂಚನೆಗಳನ್ನು ಅನುಸರಿಸಿ,
3. ನೀವು ಕ್ಲೈಮ್ ಪ್ರಕ್ರಿಯೆಯ ಭಾಗವಾಗಿ ಕೆಲವು ಡಾಕ್ಯುಮೆಂಟ್‌ಗಳನ್ನು ಒದಗಿಸಬೇಕು, ಇದು ಸರಿಯಾಗಿ ಭರ್ತಿ ಮಾಡಿದ ಮತ್ತು ಸಹಿ ಮಾಡಿದ ಕ್ಲೈಮ್ ಫಾರ್ಮ್, ಪಾಲಿಸಿ ಬುಕ್‌ಲೆಟ್, ಹಾನಿಯ ಫೋಟೋಗಳು, ರಿಪೇರಿ ಇನ್ವಾಯ್ಸ್‌ಗಳು, ಮೊದಲ ವರದಿ ಪ್ರತಿ (ಅನ್ವಯವಾದರೆ) ಇತ್ಯಾದಿಗಳನ್ನು ಒಳಗೊಂಡಿರಬಹುದು.,
4. ನಷ್ಟ/ಹಾನಿ ಸಮೀಕ್ಷೆ ಮತ್ತು ಮೌಲ್ಯಮಾಪನ ಮಾಡಲು ವಿಮಾದಾತರು ಸಮೀಕ್ಷಕರನ್ನು ನೇಮಿಸಿದರೆ ನಿಮ್ಮ ಸಹಕಾರ ಮತ್ತು ಸಹಾಯವನ್ನು ವಿಸ್ತರಿಸಿ,
5. ಹೆಚ್ಚಿನ ಸೂಚನೆಗಳಿಗಾಗಿ ಕಾಯಿರಿ ಮತ್ತು ಅವುಗಳನ್ನು ಹಾಗೆಯೇ ಅನುಸರಿಸಿ.
ಕ್ಲೈಮ್ ಅನುಮೋದನೆಯ ನಂತರ, ಕಂಪನಿಯು ನಿಮ್ಮ ನಷ್ಟಗಳಿಗೆ ಮರುಪಾವತಿಯನ್ನು ಒದಗಿಸುತ್ತದೆ.
ಬೇರೆಬೇರೆ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಕಂಪನಿಗಳು ನೀಡುವ ಕೋಟ್‌ಗಳನ್ನು ಹೋಲಿಕೆ ಮಾಡಿ, ನಿಮಗೆ ಹೆಚ್ಚು ಸೂಕ್ತವಾದ ಪ್ಲಾನ್ ಆಯ್ಕೆ ಮಾಡಿ. ಹೋಲಿಕೆ ಮಾಡುವಾಗ ಪ್ರೀಮಿಯಂ ಅನ್ನು ಮಾತ್ರವೇ ಪರಿಗಣಿಸಬೇಡಿ. ಕ್ಲೈಮ್ ಸಂದರ್ಭದಲ್ಲಿ ನೀವು ಪಡೆಯುವ ಕವರೇಜ್ ಮತ್ತು ಮೌಲ್ಯದ ವ್ಯಾಪ್ತಿಯನ್ನು ಕೂಡ ಗಮನಿಸಿ.
ನಿಮ್ಮ ಮನೆಯಲ್ಲಿ CCTV ಕ್ಯಾಮರಾ, 24-x7-house ಗಾರ್ಡ್ ಮತ್ತು ಇಂಟರ್‌ಕಾಮ್ ಕರೆ ಸೌಲಭ್ಯದಂತಹ ಆಧುನಿಕ ಭದ್ರತಾ ವ್ಯವಸ್ಥೆ ಇದ್ದರೆ, ನಿಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್‌ನ ಪ್ರೀಮಿಯಂ ಮೊತ್ತ ಕಡಿಮೆಯಾಗಿರುತ್ತದೆ.
ನಿಮ್ಮ ಉದ್ಯೋಗವೂ ಸಹ ಒಂದಿಷ್ಟು ರಿಯಾಯಿತಿ ಪಡೆಯುವಲ್ಲಿ ನೆರವಾಗುತ್ತದೆ. ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪಡೆಯಲು ಬಯಸುವ ಸಂಬಳದಾರ ವ್ಯಕ್ತಿಗಳಿಗೆ ನಾವು ರಿಯಾಯಿತಿ ಒದಗಿಸುತ್ತೇವೆ. ಹಾಗೆಂದ ಮಾತ್ರಕ್ಕೆ, ಸ್ವಯಂ-ಉದ್ಯೋಗಿಗಳು ಅಥವಾ ವ್ಯಾಪಾರಸ್ಥರು ಹೋಮ್ ಕಂಟೆಂಟ್ ಇನ್ಶೂರೆನ್ಸ್ ಕೊಳ್ಳಬಾರದು ಎಂದೇನಿಲ್ಲ.
ಡಿಜಿಟಲ್ ಆಗಿ ಪಾವತಿಸಿ. ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ಖರೀದಿಸಿ, ಒಂದಿಷ್ಟು ಹಣ ಉಳಿಸಿ. ನಾವು ನಿಮ್ಮ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪ್ಲಾನ್ ಮೇಲೆ ಆನ್ಲೈನ್ ರಿಯಾಯಿತಿಯನ್ನು ಒದಗಿಸುತ್ತೇವೆ. ಅದ್ಭುತ ಅಲ್ಲವೇ?
ನಿಮ್ಮ ಬಳಿ ದುಬಾರಿ ಆಭರಣ ಅಥವಾ ಪೆಡಲ್ ಸೈಕಲ್ ಇಲ್ಲದಿದ್ದರೆ, ಹೋಮ್ ಕಂಟೆಂಟ್ ಇನ್ಶೂರೆನ್ಸ್ ಪ್ರೀಮಿಯಂ ಮೊತ್ತವನ್ನು ಕಡಿಮೆ ಮಾಡಲು, ಐಚ್ಛಿಕ ಕವರ್‌ಗಳನ್ನು ಸ್ಕಿಪ್ ಮಾಡಬಹುದು.
ಹೌದು. ನಿಮ್ಮ ಬಟ್ಟೆಗಳು ಮತ್ತು ಇತರ ವಸ್ತುಗಳು ಸಹ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತವೆ.
ಹೌದು. ಖಂಡಿತ. ಹೋಮ್ ಕಂಟೆಂಟ್ ಇನ್ಶೂರೆನ್ಸ್ ಮನೆ ಮಾಲೀಕರಿಗೆ ಮಾತ್ರ ಸೀಮಿತವಾಗಿಲ್ಲ. ನೀವು ಬಾಡಿಗೆ ಮನೆಯಲ್ಲಿದ್ದರೂ ಸಹ ಹೋಮ್ ಕಂಟೆಂಟ್ ಇನ್ಶೂರೆನ್ಸ್ ಅಡಿಯಲ್ಲಿ ನಿಮ್ಮ ಮನೆಯ ವಸ್ತುಗಳಿಗೆ ಕವರೇಜ್ ನೀಡಬಹುದು.