ಜನಪ್ರಿಯ ತಯಾರಿಕೆ ಮಾದರಿಗಳಿಗೆ ಪಾಲಿಸಿ
ಮೋಟಾರ್ ಇನ್ಶೂರೆನ್ಸ್
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ನಮೂನೆ ಮತ್ತು ಮಾಡೆಲ್‌ಗಾಗಿ ಕಾರ್ ಇನ್ಶೂರೆನ್ಸ್
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ಪ್ರಸಿದ್ಧ ಬ್ರ್ಯಾಂಡ್‌ಗಳು ಮತ್ತು ಮಾಡೆಲ್‌ಗಳಿಗಾಗಿ ಕಾರ್ ಇನ್ಶೂರೆನ್ಸ್ ಪಾಲಿಸಿ

ಕಾರ್ ಖರೀದಿಸುವುದು ನೀವು ಮಾಡುವ ಪ್ರಮುಖ ಹೂಡಿಕೆಗಳಲ್ಲಿ ಒಂದಾಗಿದೆ; ಇದು ಜೀವನದ ಒಂದು ಪ್ರಮುಖ ಸಾಧನೆ ಮಾತ್ರವಲ್ಲದೆ ಜೀವನಶೈಲಿಯಲ್ಲಿ ಮೇಲ್ದರ್ಜೆಗೆ ಹೋಗುವುದೂ ಆಗಿದೆ. ಸಾರ್ವಜನಿಕ ಸಾರಿಗೆಯ ಕಷ್ಟದಲ್ಲಿ ಸಿಲುಕದಂತಿರಲು ಇದು ನಿಮಗೆ ಸಹಾಯ ಮಾಡುತ್ತದೆ. ಗದ್ದಲದಿಂದ ತುಂಬಿದ ರೈಲುಗಳು, ಜನಸಂದಣಿಯ ಬಸ್‌ಗಳಲ್ಲಿ ನೀವು ಪರದಾಡಬೇಕಿಲ್ಲ. ಕಾರೊಂದು ನಿಮಗೆ ಸಂತೋಷ ತರುವಂತೆಯೇ, ಹಲವಾರು ಅಪಾಯಗಳನ್ನೂ ಆಹ್ವಾನಿಸುತ್ತದೆ. ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಸಂಬಂಧಿಸಿದ ಅಪಾಯಗಳನ್ನು ಇನ್ಶೂರ್ ಮಾಡಿಸಲು, ಮೋಟಾರ್ ವಾಹನ ಕಾಯ್ದೆಯು ಮಾನ್ಯ ಇನ್ಶೂರೆನ್ಸ್‌ನೊಂದಿಗೆ ಡ್ರೈವ್ ಮಾಡುವುದನ್ನು ಕಡ್ಡಾಯಗೊಳಿಸಿದೆ ಕಾರ್ ಇನ್ಶೂರೆನ್ಸ್ ಪಾಲಿಸಿ . ಮಾನ್ಯ ಇನ್ಶೂರೆನ್ಸ್ ಇಲ್ಲದೆ ಚಾಲನೆ ಮಾಡುವುದು ದಂಡ ಮತ್ತು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಾವು ಬಹುವರ್ಷದ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಪಾಲಿಸಿ ಒದಗಿಸುತ್ತೇವೆ, ಇದು ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ವಾಹನಕ್ಕೆ 2 ಅಥವಾ 3 ವರ್ಷಗಳ ಅವಧಿಯಲ್ಲಿ ಉಂಟಾಗುವ ಅಪಾಯಗಳ ವಿರುದ್ಧ ಕವರೇಜ್ ಒದಗಿಸುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್‌ನ ಬೆಳೆಯುತ್ತಿರುವ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತದೆ, ಇದು ಥರ್ಡ್ ಪಾರ್ಟಿಗೆ ಸಂಬಂಧಿಸಿದ ಅಪಾಯಗಳನ್ನು ಮಾತ್ರವಲ್ಲದೆ ನಿಮ್ಮ ಸ್ವಂತ ವಾಹನ ಮತ್ತು ಚಾಲಕರನ್ನೂ ರಕ್ಷಿಸುತ್ತದೆ. ನೈಸರ್ಗಿಕ ವಿಕೋಪಗಳು, ಆಕ್ಸಿಡೆಂಟ್‌ಗಳು ಅಥವಾ ಭಯೋತ್ಪಾದನೆಯಿಂದಾಗಿ ಆಗಬಹುದಾದ ಹಾನಿಗಳ ವಿರುದ್ಧ ನಿಮ್ಮ ಸ್ವಂತ ವಾಹನವನ್ನು ಇನ್ಶೂರ್ ಮಾಡಿಸಲು ನಾವು ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ವಿನ್ಯಾಸಗೊಳಿಸಿದ್ದೇವೆ.

ಕಾರ್ ಇನ್ಶೂರೆನ್ಸ್ ನವೀಕರಣ

ನಾವು ಸಾಮಾನ್ಯವಾಗಿ ಕಾರ್ ಇನ್ಶೂರೆನ್ಸ್ ಖರೀದಿಸುತ್ತೇವೆ; ಆದರೆ ಸಮಯಕ್ಕೆ ಸರಿಯಾಗಿ ಅದನ್ನು ನವೀಕರಿಸಲು ವಿಫಲರಾಗುತ್ತೇವೆ. ಬಹುಶಃ ಗಡಿಬಿಡಿಯ ಜೀವನಶೈಲಿ ಮತ್ತು ಸಮಯವೇ ಸಿಗದಿರುವುದು ಇದಕ್ಕೆ ಕಾರಣವಿರಬಹುದು. ನಿಮ್ಮ ಮುಂದಿನ ನವೀಕರಣ ದಿನಾಂಕಕ್ಕೆ ಯಾವಾಗಲೂ ರಿಮೈಂಡರ್ ಸೆಟ್ ಮಾಡಿ, ಇದರಿಂದಾಗಿ ನೀವು ಮುಂದಿನ ನವೀಕರಣದ ಪ್ರೀಮಿಯಂ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತೀರಿ. ಪಾಲಿಸಿಯ ಅವಧಿ ಮುಗಿದರೆ, ಕಾನೂನು ತೊಂದರೆಗೆ ಸಿಲುಕಬಹುದು ಅಥವಾ ನಿಮ್ಮ ವಾಹನಕ್ಕೆ ಉಂಟಾದ ಯಾವುದೇ ಆಕಸ್ಮಿಕ ಹಾನಿಗೆ ಹಣಕಾಸಿನ ನಷ್ಟವನ್ನು ಭರಿಸಬೇಕಾಗಬಹುದು. ನವೀಕರಣಗಳು ಕೇವಲ ನಿಮ್ಮನ್ನು ಇನ್ಶೂರ್ ಮಾಡಲು ಮಾತ್ರವಲ್ಲ, ನೋ ಕ್ಲೈಮ್ ಬೋನಸ್‌ನಂತಹ ನಿರಂತರ ಪ್ರಯೋಜನಗಳಂತಹ ಲಾಭಗಳನ್ನೂ ತರುತ್ತವೆ.

ಪ್ರಸಿದ್ಧ ಕಾರ್ ಬ್ರ್ಯಾಂಡ್‌ಗಳು ಮತ್ತು ಮಾಡೆಲ್‌ಗಳ ಪಟ್ಟಿ


ಕೈನೆಟಿಕ್ ಮಹಿಂದ್ರ ಸುಜುಕಿ Royal Enfield
ಟಯೋಟ ಟೊಯೋಟಾ ಇನ್ನೋವಾ ಟಾಟಾ ಹುಂಡೈ
Honda ಮಾರುತಿ ಸುಜುಕಿ ಆಲ್ಟೋ ಮಾರುತಿ ಸುಜುಕಿ ಸ್ವಿಫ್ಟ್ ನಿಸ್ಸಾನ್
Ford ಫೋಕ್ಸ್‌‌ವ್ಯಾಗನ್ Skoda Datsun
ಮಹೀಂದ್ರಾ XUV 500 ಹೀರೋ HF ಡಿಲಕ್ಸ್ ಹೀರೋ ಸ್ಪ್ಲೆಂಡರ್ ಹುಂಡೈ
ಹ್ಯುಂಡೈ ಗ್ರ್ಯಾಂಡ್ ಹುಂಡೈ ವೆರ್ನಾ ಹುಂಡೈ ಎಲೈಟ್ ಹೋಂಡಾ CB ಶೈನ್
ಹೋಂಡಾ ಡಿಯೋ ಹೋಂಡಾ ಆ್ಯಕ್ಟಿವಾ ಬಜಾಜ್ BAJAJ PULSAR
ಬಜಾಜ್ ಪ್ಲಾಟಿನಾ ಹೀರೋ ಮೋಟರ್ ಕಾರ್ಪ್. PASSION PRO ಹೀರೋ HF ಡಿಲಕ್ಸ್
ಹೀರೋ ಸ್ಪ್ಲೆಂಡರ್ ಟಿವಿಗಳು TVS APACHE TVS ಜ್ಯುಪಿಟರ್

ಇತರ ಸಂಬಂಧಪಟ್ಟ ಲೇಖನಗಳು

 

ಆಗಾಗ ಕೇಳುವ ಪ್ರಶ್ನೆಗಳು

ಕಾರ್ ಇನ್ಶೂರೆನ್ಸ್ ಎಂಬುದು ನಿಮ್ಮ ವಾಹನಕ್ಕೆ ಯಾವುದೇ ಹಾನಿಯ ವಿರುದ್ಧ ರಕ್ಷಣೆ ಒದಗಿಸಲು ಅಗತ್ಯವಿರುವ ಒಂದು ರೀತಿಯ ಇನ್ಶೂರೆನ್ಸ್ ಪಾಲಿಸಿಯಾಗಿದ್ದು, ಇದು into ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಜೊತೆಗೆ, ವಾಹನದ ಬಳಕೆಯಿಂದ ಉದ್ಭವವಾಗುವ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯು ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತದೆ.. ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಹೊಣೆಗಾರಿಕೆ ಮಾತ್ರದ ಪಾಲಿಸಿ ಖರೀದಿಸುವುದು ಕಡ್ಡಾಯವಾಗಿದ್ದು, ಇದರ ಹೊರತು ವಾಹನವನ್ನು ರಸ್ತೆಗಿಳಿಸಲು ಸಾಧ್ಯವಿಲ್ಲ.
ಸಮಗ್ರ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವಾಹನಕ್ಕೆ ಬೆಂಕಿ ಹತ್ತುವುದು, ಕಳ್ಳತನ, ಭೂಕಂಪ ಇತ್ಯಾದಿಗಳಿಂದಾಗುವ ಹಾನಿಯ ವಿರುದ್ಧ ರಕ್ಷಣೆ ಒದಗಿಸುತ್ತದೆ. ಇದರ ಜೊತೆಗೆ, ಇದು ಮರಣ, ದೈಹಿಕ ಗಾಯ ಮತ್ತು ಥರ್ಡ್ ಪಾರ್ಟಿ ಆಸ್ತಿ ಹಾನಿಯ ವಿಷಯದಲ್ಲಿ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯ ಮೇಲೆ ಕವರ್ ಅನ್ನು ಒದಗಿಸುತ್ತದೆ.
ಕಾರ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ಎರಡು ಪ್ರಕಾರಗಳಿವೆ - ಸಮಗ್ರ ಮತ್ತು ಹೊಣೆಗಾರಿಕೆ ಮಾತ್ರದ ಪಾಲಿಸಿ.
ಸುಪ್ರೀಮ್ ಕೋರ್ಟ್ ನಿರ್ದೇಶನದ ಪ್ರಕಾರ, 1ನೇ ಸೆಪ್ಟೆಂಬರ್, 2018 ರಿಂದ ಅನ್ವಯವಾಗುವಂತೆ, ಪ್ರತಿ ಹೊಸ ಕಾರು ಮಾಲೀಕರು ದೀರ್ಘಾವಧಿ ಪಾಲಿಸಿ ಖರೀದಿಸಬೇಕು. ನಿಮ್ಮ ಅಮೂಲ್ಯ ಸ್ವತ್ತಿಗಾಗಿ ನೀವು ಈ ಕೆಳಗಿನ ದೀರ್ಘಾವಧಿಯ ಪಾಲಿಸಿಗಳಿಂದ ಆಯ್ಕೆ ಮಾಡಬಹುದು: i. 3 ವರ್ಷಗಳ ಪಾಲಿಸಿ ಅವಧಿಗೆ ಹೊಣೆಗಾರಿಕೆ ಮಾತ್ರದ ಪಾಲಿಸಿ. ಈ ಪಾಲಿಸಿಯು ಮರಣ ಅಥವಾ ಗಾಯ ಅಥವಾ ಥರ್ಡ್ ಪಾರ್ಟಿ ಆಸ್ತಿ ಹಾನಿಯ ವಿಷಯದಲ್ಲಿ ಥರ್ಡ್ ಪಾರ್ಟಿ ಹೊಣೆಗಾರಿಕೆಯ ವಿರುದ್ಧ ರಕ್ಷಣೆ ನೀಡುತ್ತದೆ. ii. 3 ವರ್ಷಗಳ ಪಾಲಿಸಿ ಅವಧಿಯ ಪ್ಯಾಕೇಜ್ ಪಾಲಿಸಿ. ಬೆಂಕಿ ಅನಾಹುತ, ಕಳ್ಳತನ, ಭೂಕಂಪ ಇತ್ಯಾದಿಗಳಿಂದ ನಿಮ್ಮ ವಾಹನವನ್ನು ರಕ್ಷಿಸಲು ಈ ಪಾಲಿಸಿಯು ಸಮಗ್ರ ಕವರ್ ಒದಗಿಸುತ್ತದೆ.. ಜೊತೆಗೆ, ಸಾವು, ದೈಹಿಕ ಗಾಯ ಹಾಗೂ ಥರ್ಡ್ ಪಾರ್ಟಿ ಆಸ್ತಿ ಹಾನಿಯ ವಿಷಯದಲ್ಲಿ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯ ವಿರುದ್ಧ ಕವರ್ ಒದಗಿಸುತ್ತದೆ.. iii. 3 ವರ್ಷಗಳ ಪಾಲಿಸಿ ಅವಧಿಯ ಬಂಡಲ್ಡ್ ಪಾಲಿಸಿ. ಈ ಪಾಲಿಸಿಯು ಓನ್ ಡ್ಯಾಮೇಜ್‌ಗೆ ಒಂದು ವರ್ಷದ ಮತ್ತು ಥರ್ಡ್ ಪಾರ್ಟಿ ವಿಭಾಗಕ್ಕೆ 3 ವರ್ಷಗಳ ಕವರ್ ಒದಗಿಸುತ್ತದೆ.
ಹೌದು, ಮೋಟಾರ್ ವಾಹನ ಕಾಯ್ದೆಯು ರಸ್ತೆಯಲ್ಲಿ ಚಲಿಸುವ ಪ್ರತಿಯೊಂದು ವಾಹನವು ಹೊಣೆಗಾರಿಕೆ ಮಾತ್ರದ ಪಾಲಿಸಿಯೊಂದಿಗೆ ಇನ್ಶೂರ್ ಆಗಿರಬೇಕು ಎಂದು ಹೇಳುತ್ತದೆ.
ಜೀರೋ ಡಿಪ್ರಿಸಿಯೇಷನ್ ಒಂದು ಆ್ಯಡ್-ಆನ್ ಕವರ್ ಆಗಿದೆ ಇದನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಖರೀದಿಸಬೇಕು. ಇದು ನಿಮ್ಮ ವಾಹನಕ್ಕೆ ಆದ ಸವಕಳಿಯನ್ನು ಲೆಕ್ಕಿಸದೆ ಪೂರ್ಣ ಕವರೇಜ್ ಒದಗಿಸುತ್ತದೆ.. ಉದಾಹರಣೆಗೆ, ನಿಮ್ಮ ವಾಹನವು ತೀರಾ ಹಾನಿಗೊಳಗಾಗಿದ್ದರೆ ನೀವು ಯಾವುದೇ ಸವಕಳಿ ಮೊತ್ತ ಪಾವತಿಸಬೇಕಾಗಿಲ್ಲ ಮತ್ತು ಪಾಲಿಸಿಯ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಪೂರ್ಣ ಕ್ಲೈಮ್ ಮೊತ್ತಕ್ಕೆ ಅರ್ಹರಾಗಿರುತ್ತೀರಿ. ಪಾಲಿಸಿ ಡಾಕ್ಯುಮೆಂಟ್ ಪ್ರಕಾರ, ಯಾವುದೇ ಹೆಚ್ಚುವರಿ ಅಥವಾ ಕಟಾವಣೆ ಮೊತ್ತವನ್ನು ನೀವೇ ಭರಿಸಬೇಕು.
ತುರ್ತು ಸಹಾಯದ ಕವರ್ ಒಂದು ಆ್ಯಡ್-ಆನ್ ಕವರ್ ಆಗಿದೆ ಇದನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಖರೀದಿಸಬೇಕು. ಇದು ಬ್ರೇಕ್‌ಡೌನ್ ಆದಾಗ ಸಹಾಯ, ಟೈರ್ ಬದಲಿಸುವಿಕೆ, ಟೋಯಿಂಗ್, ಇಂಧನ ಬದಲಿಸುವಿಕೆ ಇನ್ನು ಮುಂತಾದ ಪಾಲಿಸಿ ಅವಧಿಯಲ್ಲಿ ಪಡೆಯಬಹುದಾದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಈ ಪ್ರಯೋಜನಗಳನ್ನು ಪಡೆಯಲು ಗ್ರಾಹಕರು ಪಾಲಿಸಿ ಡಾಕ್ಯುಮೆಂಟ್‌ನಲ್ಲಿ ನಮೂದಿಸಿದ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು.
ಸರಳವಾಗಿ, ಕ್ಲೈಮ್-ರಹಿತ ವರ್ಷದ ನಂತರ ನಿಮ್ಮ ಪಾಲಿಸಿಯನ್ನು ನವೀಕರಿಸುವಾಗ ಪಾವತಿಸಬೇಕಾದ ಸ್ವಂತ ಹಾನಿ ಪ್ರೀಮಿಯಂನಲ್ಲಿ ಸಿಗುವ ರಿಯಾಯಿತಿಯಾಗಿದೆ. ಎಚ್ಚರಿಕೆಯಿಂದ ಚಾಲನೆ ಮಾಡಲು ಮತ್ತು ಅಪಘಾತಗಳನ್ನು ತಪ್ಪಿಸಲು ಇದು ಪ್ರೋತ್ಸಾಹಕವಾಗಿದೆ.
ಅವಧಿ ಮುಗಿದ ನಿಮ್ಮ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಸ್ವಯಂ ತಪಾಸಣೆ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕು. ಡಾಕ್ಯುಮೆಂಟ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಅನುಮೋದಿಸಿದ ನಂತರ, ಪಾವತಿ ಲಿಂಕ್ ಕಳುಹಿಸಲಾಗುತ್ತದೆ ಮತ್ತು ಪಾಲಿಸಿಯನ್ನು ನವೀಕರಿಸಲು ನೀವು ಈ ಲಿಂಕ್‌ನಲ್ಲಿ ಪಾವತಿ ಮಾಡಬೇಕು. ಪಾವತಿಯನ್ನು ಮಾಡಿದ ನಂತರ, ನೀವು ಪಾಲಿಸಿಯ ಕಾಪಿಯನ್ನು ಸ್ವೀಕರಿಸುತ್ತೀರಿ.
ಹಿಂದಿನ ಪಾಲಿಸಿ ಗಡುವು ದಿನಾಂಕದಿಂದ 90 ದಿನಗಳ ವರೆಗೆ ನೋ ಕ್ಲೈಮ್ ಬೋನಸ್ ಮಾನ್ಯವಾಗಿರುತ್ತದೆ. ಪಾಲಿಸಿಯನ್ನು 90 ದಿನಗಳ ಒಳಗೆ ನವೀಕರಿಸದಿದ್ದರೆ, ನೋ ಕ್ಲೇಮ್ ಬೋನಸ್ 0% ಆಗುತ್ತದೆ ಮತ್ತು ತಡವಾಗಿ ನವೀಕರಿಸಿದ ಪಾಲಿಸಿಗೆ ಯಾವುದೇ ಪ್ರಯೋಜನವನ್ನು ನೀಡಲಾಗುವುದಿಲ್ಲ.
ವಾಹನದ ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ (IDV) ವನ್ನು 'ವಿಮಾ ಮೊತ್ತ' ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಪ್ರತಿ ಇನ್ಶೂರ್ಡ್‌ ವಾಹನಕ್ಕೆ ಪ್ರತಿ ಪಾಲಿಸಿ ಅವಧಿಯ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ. ವಾಹನದ IDVಯನ್ನು ಆ ಬ್ರ್ಯಾಂಡ್‌ನ ಉತ್ಪಾದಕರು ಪಟ್ಟಿ ಮಾಡಿದ ಮಾರಾಟ ಬೆಲೆ ಮತ್ತು ಇನ್ಶೂರೆನ್ಸ್/ನವೀಕರಣ ಪ್ರಾರಂಭದಲ್ಲಿ ಇನ್ಶೂರೆನ್ಸ್‌ಗಾಗಿ ಪ್ರಸ್ತಾಪಿಸಲಾದ ವಾಹನದ ಮಾಡೆಲ್ ಆಧಾರದ ಮೇಲೆ ನಿಗದಿಪಡಿಸಬೇಕು ಹಾಗೂ ಅದನ್ನು ಸವಕಳಿಗೆ ಸರಿಹೊಂದಿಸಬೇಕು (ಕೆಳಗೆ ನಿರ್ದಿಷ್ಟಪಡಿಸಿದ ಶೆಡ್ಯೂಲ್ ಪ್ರಕಾರ).. ಸೈಡ್ ಕಾರ್(ಗಳು) ಮತ್ತು / ಅಥವಾ ವಾಹನದೊಂದಿಗೆ ಜೋಡಿಸಿದ್ದು ವಾಹನದ ಉತ್ಪಾದಕರ ಪಟ್ಟಿ ಮಾಡಲಾದ ಮಾರಾಟ ಬೆಲೆಯಲ್ಲಿ ಸೇರಿಸಿರದ ಅಕ್ಸೆಸರಿಗಳ IDV,ಯಾವುದಾದರೂ ಇದ್ದರೆ
ಯಾವುದೇ ಪೇಪರ್‌ವರ್ಕ್ ಮತ್ತು ಫಿಸಿಕಲ್ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ. ನೀವು ತಕ್ಷಣವೇ ನಿಮ್ಮ ಪಾಲಿಸಿಯನ್ನು ಪಡೆಯುತ್ತೀರಿ.
ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಹಿಂಬರಹವನ್ನು ಹೊರಡಿಸುವ ಮೂಲಕ ಖರೀದಿದಾರರ ಹೆಸರಿಗೆ ವರ್ಗಾಯಿಸಬಹುದು. ಈಗಿರುವ ಪಾಲಿಸಿಯ ಅಡಿಯಲ್ಲಿ ಹಿಂಬರಹವನ್ನು ಹೊರಡಿಸಲು ಸೇಲ್ ಡೀಡ್/ಫಾರ್ಮ್ 29/30/NOC/NCB ರಿಕವರಿ ಮೊತ್ತ, ಮತ್ತಿತರ ಬೆಂಬಲಿತ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.. ಅಥವಾ ನೀವು ಈಗಿರುವ ಪಾಲಿಸಿಯನ್ನು ರದ್ದುಗೊಳಿಸಬಹುದು.. ರದ್ದುಗೊಳಿಸಲು ಸೇಲ್ ಡೀಡ್/ ಫಾರ್ಮ್ 29/30 ನಂತಹ ಬೆಂಬಲಿತ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x
x