ಮಚಲ ಚೋಪ್ಡಾ ಹಳ್ಳಿಯ ಶಾಲೆ, ಜಲಗಾಂವ್, ಮಹಾರಾಷ್ಟ್ರ
ನಮ್ಮ CSR ಚಟುವಟಿಕೆಯು "ನನ್ನ ಹಳ್ಳಿ" ಎಂಬ ನಮ್ಮ ಪ್ರಮುಖ ತೊಡಗುವಿಕೆಯ ಕಡೆಗೆ ಕೇಂದ್ರಿತವಾಗಿದ್ದು, ಆಯ್ದ ಹಳ್ಳಿಗಳಲ್ಲಿನ ಈಗಿನ ಶಿಕ್ಷಣದ ಮಟ್ಟ ಮತ್ತು ಸ್ವಚ್ಛತೆಯ ಸ್ಥಿತಿಯನ್ನು ಸುಧಾರಿಸುವ ಗುರಿ ಹೊಂದಿದೆ.
ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ
ಶಾಲೆಯು ಮಕ್ಕಳಿಗೆ ಇನ್ನೊಂದು ಮನೆ ಇದ್ದಂತೆ ಎಂದು ಹೇಳಲಾಗುತ್ತದೆ. ಸರ್ಕಾರ ನಡೆಸುತ್ತಿರುವ ಅನೇಕ ಶಾಲೆಗಳು, ನೀರು, ವಿದ್ಯುತ್ ಅಥವಾ ಸ್ವಚ್ಛತೆಯ ಕೊರತೆಯಿಂದ ಕೆಟ್ಟ ಪರಿಸ್ಥಿತಿಯಲ್ಲಿವೆ ಹಾಗೂ ಹಾಳುಬಿದ್ದಿವೆ. ಕೆಲವು ಸರ್ಕಾರಿ ಶಾಲೆಗಳು ಶುದ್ಧ ಕುಡಿಯುವ ನೀರು, ಟಾಯ್ಲೆಟ್‌ಗಳು, ಲೈಬ್ರರಿಗಳಂತಹ ಕನಿಷ್ಟ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲ ಮತ್ತು ಬಹುತೇಕ ಶಾಲೆಗಳಲ್ಲಿ ಕಂಪ್ಯೂಟರ್ ಲ್ಯಾಬ್‌ಗಳೂ ಇಲ್ಲ.
ಈ ಅಂತರವನ್ನು ಕಡಿಮೆ ಮಾಡಲು, ಎಚ್‌ಡಿಎಫ್‌ಸಿ ಎರ್ಗೋದ "ನನ್ನ ಹಳ್ಳಿ" ಕಾರ್ಯಕ್ರಮ ಸುಸ್ಥಿರ ಶೈಕ್ಷಣಿಕ ಮೂಲಸೌಕರ್ಯಗಳನ್ನು ನೀಡುವ ಗುರಿಯನ್ನು ಹೊಂದಿದೆ. ಶಿಕ್ಷಣದ ಸುಸ್ಥಿರ ಅಭಿವೃದ್ಧಿ ಗುರಿಯ (SDG) ನಿಟ್ಟಿನಲ್ಲಿ ಕೆಲಸ ಮಾಡುವ ಮೂಲಕ, ಗ್ರಾಮೀಣ ಭಾರತದ ಸರ್ಕಾರಿ ಶಾಲೆಗಳ ಮರುನಿರ್ಮಾಣ ಕೈಗೊಂಡು, ಭೌತಿಕ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಕಂಪನಿ ಹೂಡಿಕೆ ಮಾಡಿದೆ. ಓದಿಗೆ ನೆರವಾಗುವ ಕಟ್ಟಡ ಮಾರ್ಗಸೂಚಿಗಳ ಅಡಿಯಲ್ಲಿ (ಬಾಲ ಮಾರ್ಗಸೂಚಿಗಳು) ಹೊಸ ಶಾಲಾ ಕಟ್ಟಡಗಳನ್ನು ಉತ್ತಮವಾಗಿ ನಿರ್ಮಿಸಲಾಗಿದೆ. ಮಕ್ಕಳಿಗೆ ಇಷ್ಟವಾಗುವ ಮತ್ತು ಮೋಜಿನ ವಾತಾವರಣವನ್ನು ನಿರ್ಮಿಸುವ ಮೂಲಕ ಇದು ಶಿಕ್ಷಣ ಗುಣಮಟ್ಟದ ಸುಧಾರಣೆಯನ್ನು ಗುರಿಯಾಗಿಸಿಕೊಂಡಿದೆ. ಆ ಮೂಲಕ, ತರಗತಿಗಳಲ್ಲಿ ಸಾಕಷ್ಟು ಗಾಳಿ-ಬೆಳಕನ್ನು ಖಾತ್ರಿಪಡಿಸಲು ಹೊರಟಿದೆ. ಹೊಸದಾಗಿ ನಿರ್ಮಾಣವಾದ ಶಾಲೆಗಳು ಬೆಂಚ್, ಡೆಸ್ಕ್, ಗ್ರೀನ್ ಬೋರ್ಡ್, ಕಿಚನ್, ಭೋಜನಶಾಲೆ ಸೌಲಭ್ಯಗಳು, ಲೈಬ್ರರಿಗಳು ಮತ್ತು ಕಂಪ್ಯೂಟರ್ ರೂಮ್‌ಗಳಿಂದ ಸುಸಜ್ಜಿತವಾಗಿವೆ.
ಮುಂಬೈನ ಸುತ್ತಮುತ್ತಲಿನ ಸೌಲಭ್ಯವಂಚಿತ ಮಕ್ಕಳಿಗೆ ನಮ್ಮ ಉದ್ಯೋಗಿಗಳು ಕಾಸ್ಮಿಕ್ ಡಿವೈನ್ ಸೊಸೈಟಿಯ ಜೊತೆಗೂಡಿ ಪೌಷ್ಟಿಕ ಆಹಾರವನ್ನು ಒದಗಿಸಿದರು.
ಚೆನೈ, ದೆಹಲಿ, ನೋಯ್ಡಾ, ಘಾಜಿಯಾಬಾದ್, ಬೆಂಗಳೂರು ಮತ್ತು ಚಂಡೀಗಢದಲ್ಲಿ ನಡೆಸಲಾದ ಕಣ್ಣಿನ ಆರೋಗ್ಯ ತಪಾಸಣೆ ಕ್ಯಾಂಪ್‌ಗಳಲ್ಲಿ ಉದ್ಯೋಗಿಗಳು ಭಾಗಿಯಾದರು. ಗ್ರಾಮೀಣ ಜನರಿಗೆ ಕಣ್ಣಿನ ಪೊರೆ, ಗ್ಲಾಕೋಮಾ, ಡಯಾಬಿಟಿಕ್ ರೆಟಿನೋಪತಿ, ರೆಟಿನಲ್ ರೋಗಗಳು ಮತ್ತು ಇತರ ಕಣ್ಣಿನ ರೋಗಗಳ ಬಗ್ಗೆ ಜಾಗೃತಿ ಮೂಡಿಸುವುದು ಕಣ್ಣಿನ ಕ್ಯಾಂಪ್‌ನ ಒಂದು ಉದ್ದೇಶವಾಗಿತ್ತು.
ಪುಣೆಯ ಗರಾಡೆ ಹಳ್ಳಿಯಲ್ಲಿ ವಾಟರ್‌ಶೆಡ್‌ಗಳನ್ನು ನಿರ್ಮಿಸಲು HT ಪಾರೇಖ್ ಫೌಂಡೇಶನ್ ಮತ್ತು ಪಾನಿ ಫೌಂಡೇಶನ್ ಜೊತೆ ಸೇರಿಕೊಂಡು ಎಚ್‌ಡಿಎಫ್‌ಸಿ ಎರ್ಗೋ ಉದ್ಯೋಗಿಗಳು ಕೆಲಸಕ್ಕೆ ಹೆಗಲು ಕೊಟ್ಟರು. ಒಂದು ಸಲಕ್ಕೆ ಸುಮಾರು 30,000 ಲೀಟರ್‌ಗಳಷ್ಟು ನೀರನ್ನು ಕೊಂಡೊಯ್ಯುವ, 1,45,000 ಲೀಟರ್‌ಗಳ ಒಟ್ಟು ಸಾಮರ್ಥ್ಯವನ್ನು ಹೊಂದಿರುವ 03 ಕಂಪಾರ್ಟ್ಮೆಂಟ್ ಬಂಡ್‌ಗಳನ್ನು ನಿರ್ಮಿಸಲು ನಮ್ಮ ಉದ್ಯೋಗಿಗಳು ನೆರವಾದರು.
ಎಚ್‌ಡಿಎಫ್‌ಸಿ ಎರ್ಗೋ CSR ಮುಂದೊಡಗುಗಳ ಬಗ್ಗೆ ಪ್ರಶ್ನೆಗಳು, ಸಲಹೆಗಳು ಮತ್ತು ಅನಿಸಿಕೆಗಳಿಗಾಗಿ, ನಮ್ಮನ್ನು ಇಲ್ಲಿ ಸಂಪರ್ಕಿಸಿ: csr.initiative@hdfcergo.com