ಭಾರತದಲ್ಲಿನ ಹೆಚ್ಚಿನ ಜನ ಅವಲಂಬಿಸಿರುವ ಅತ್ಯಂತ ಮಹತ್ವದ ಮತ್ತು ವಿಸ್ತೃತ ಆರ್ಥಿಕ ಕ್ಷೇತ್ರವೇ ಕೃಷಿ ಕ್ಷೇತ್ರ. ಕೃಷಿ ಉತ್ಪಾದನೆಯಲ್ಲಿ ಸಣ್ಣ ಪ್ರಮಾಣದ ಕುಸಿತವಾದರೂ ಸಹ, ಅದು ಸಂಪೂರ್ಣ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಉತ್ಪಾದನೆಯಲ್ಲಿನ ಬದಲಾವಣೆಯು ಕೀಟದ ದಾಳಿಗಳು, ಮಳೆ, ತಾಪಮಾನ, ಆರ್ದ್ರತೆ ಮುಂತಾದ ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳಿಂದ ನೇರವಾಗಿ ಪ್ರಭಾವಿತವಾಗಿರುತ್ತದೆ. ಹೀಗಾಗಿ, ಇಳುವರಿ ಮತ್ತು ಇಳುವರಿ ಆಧಾರಿತ ನಷ್ಟಗಳನ್ನು ಸುರಕ್ಷಿತಗೊಳಿಸುವುದು ಸಮಯದ ಅಗತ್ಯವಾಗಿದೆ.
ಆದ್ದರಿಂದ, ಎಚ್‌ಡಿಎಫ್‌ಸಿ ಎರ್ಗೋ ಹವಾಮಾನ ಇನ್ಶೂರೆನ್ಸ್ ಜೊತೆಗೆ ಸಮಗ್ರ ಇಳುವರಿ-ಆಧಾರಿತ ಬೆಳೆ ಇನ್ಶೂರೆನ್ಸ್ ಪಾಲಿಸಿಯನ್ನು ಒದಗಿಸುತ್ತಿದ್ದು, ಇದು ಕೃಷಿ ವಲಯವು ಎದುರಿಸುವ ಉತ್ಪಾದನಾ ಅಪಾಯಗಳನ್ನು ಕವರ್ ಮಾಡುವ ಗುರಿ ಹೊಂದಿದೆ. ಈ ಪಾಲಿಸಿಯು ನೈಸರ್ಗಿಕ ಬೆಂಕಿ ಮತ್ತು ಸಿಡಿಲು, ಬಿರುಗಾಳಿ, ಆಲಿಕಲ್ಲು ಮಳೆ, ಚಂಡಮಾರುತ, ಬಿರುಗಾಳಿ, ಸುಂಟರಗಾಳಿ, ಪ್ರವಾಹ, ಮುಳುಗಡೆ, ಭೂಕುಸಿತ, ಬರ, ಅನಾವೃಷ್ಟಿ, ಕೀಟಗಳು/ರೋಗಗಳು ಇತ್ಯಾದಿಗಳಿಂದಾಗಿ ಉಂಟಾಗುವ ಯಾವುದೇ ಕೊರತೆಯನ್ನು ಕವರ್ ಮಾಡುತ್ತದೆ.
ನೈಸರ್ಗಿಕ ಬೆಂಕಿ ಮತ್ತು ಸಿಡಿಲು, ಬಿರುಗಾಳಿ, ಆಲಿಕಲ್ಲು ಮಳೆ, ಚಂಡಮಾರುತ, ಬಿರುಗಾಳಿ, ಸುಂಟರಗಾಳಿ, ಪ್ರವಾಹ, ಮುಳುಗಡೆ, ಭೂಕುಸಿತ, ಬರ, ಅನಾವೃಷ್ಟಿ, ಕೀಟಗಳು/ರೋಗಗಳು ಇತ್ಯಾದಿಗಳಿಂದಾಗಿ ಇಳುವರಿಯಲ್ಲಿ ಉಂಟಾಗುವ ಯಾವುದೇ ಕೊರತೆ.
ಯಾವುದೇ ಸಾರ್ವಜನಿಕ ಪ್ರಾಧಿಕಾರದ ಆದೇಶದಿಂದ ಅಥವಾ ಭೂಗತ ಬೆಂಕಿಯಿಂದ ಆಸ್ತಿ ಸುಟ್ಟಿರುವುದು
ಕಟಾವಿನ ಸಮಯದಲ್ಲಿ ಎಂಜಿನ್ ಎಕ್ಸಾಸ್ಟ್ ಮತ್ತು/ಅಥವಾ ಇತರ ಬಿಸಿ ಯಂತ್ರೋಪಕರಣಗಳ ಭಾಗಗಳಿಂದ ಉಂಟಾಗುವ ಕಿಡಿಯ ಕಾರಣದಿಂದ ಕೊಯ್ಲಿನ ಸಂದರ್ಭದಲ್ಲಿ ಬೆಂಕಿ
ನಿಯಂತ್ರಿಸಬಹುದಾದ ರೋಗಗಳು, ಕಳೆಗಳು ಮತ್ತು/ಅಥವಾ ನಿಯಂತ್ರಿಸಬಹುದಾದ ಕೀಟದ ಸೋಂಕುಗಳು
ಇನ್ಶೂರೆನ್ಸ್ ಮಾಡಿದ ಬೆಳೆಯ ಕಳ್ಳತನ / ರಹಸ್ಯ ಸಾಗಣೆ
ದೋಷಯುಕ್ತ ಬೀಜ / ಸ್ಯಾಂಪಲ್ ಅಥವಾ ಬಿತ್ತನೆ ಅವಧಿಯಲ್ಲಿರುವ ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ಕಳಪೆ ಬೆಳೆ.
ಪಕ್ಷಿಗಳು ಮತ್ತು ಪ್ರಾಣಿಗಳಿಂದಾಗಿ ನಾಶವಾದ ಬೆಳೆಗಳು.
ಭಯೋತ್ಪಾದಕ ಕೃತ್ಯಗಳಿಂದ ನಷ್ಟ ಅಥವಾ ಹಾನಿ
ಕೈಗಾರಿಕಾ ಮಾಲಿನ್ಯ ಮತ್ತು / ಅಥವಾ ವಿಷಕಾರಿ ತ್ಯಾಜ್ಯದಿಂದ ಉಂಟಾಗುವ ನಷ್ಟ
ನಮ್ಮ ನಷ್ಟ ಮೌಲ್ಯಮಾಪಕರಿಂದ ತಪಾಸಣೆಗೆ ಮೊದಲು ಕೊಯ್ಲು ಮಾಡಿದ ಯಾವುದೇ ಬೆಳೆಗೆ ಉಂಟಾದ ಯಾವುದೇ ನಷ್ಟ.
ನೈಸರ್ಗಿಕ ಬೆಂಕಿ ಮತ್ತು ಸಿಡಿಲು, ಬಿರುಗಾಳಿ, ಆಲಿಕಲ್ಲು ಮಳೆ, ಚಂಡಮಾರುತ, ಬಿರುಗಾಳಿ, ಸುಂಟರಗಾಳಿ, ಪ್ರವಾಹ, ಮುಳುಗಡೆ, ಭೂಕುಸಿತ, ಬರ, ಅನಾವೃಷ್ಟಿ, ಕೀಟಗಳು/ರೋಗಗಳು ಇತ್ಯಾದಿಗಳಿಂದಾಗಿ ಇಳುವರಿಯಲ್ಲಿ ಉಂಟಾಗುವ ಯಾವುದೇ ಕೊರತೆ.
ವಿಧಿಸಬಹುದಾದ ಪ್ರೀಮಿಯಂ ವಿವಿಧ ಅಂಶಗಳಾದ ಬೆಳೆಯ ವಿಧ, ಸ್ಥಳ, ಹಿಂದಿನ ಇಳುವರಿ ಡೇಟಾ, ನಿರ್ದಿಷ್ಟ ಪ್ರದೇಶದಲ್ಲಿನ ವಿಕೋಪ ವರ್ಷಗಳು ಮತ್ತು ಇಳುವರಿ ಬೆಳೆಯ ನಷ್ಟ ಪರಿಹಾರ ಮಟ್ಟವನ್ನು ಅವಲಂಬಿಸಿರುತ್ತದೆ.
ಈ ಪಾಲಿಸಿ ಅಡಿಯಲ್ಲಿನ ಕ್ಲೈಮ್‌ಗಳನ್ನು ಇನ್ಶೂರ್ಡ್ ಪ್ರದೇಶದಲ್ಲಿ ಮಾಡಲಾದ ಬೆಳೆ ಕಟಾವು ಪ್ರಯೋಗದ ಸಹಾಯದಿಂದ ಅಂದಾಜು ಮಾಡಲಾಗುತ್ತದೆ
ಬಿತ್ತನೆಯ ಮೊದಲು ಮತ್ತು ಕಟಾವಿನ ನಂತರದ ಹಂತಗಳಲ್ಲಿ ನಷ್ಟವನ್ನು ಕಂಡುಹಿಡಿಯಲು ಇನ್ಶೂರ್ಡ್ ಪ್ರದೇಶದಲ್ಲಿ ವೈಯಕ್ತಿಕ ಮೌಲ್ಯಮಾಪನ ಮಾಡಲಾಗುತ್ತದೆ.
ಈ ಪಾಲಿಸಿ ಅಡಿಯ ಕ್ಲೇಮ್‌ಗೆ ಸಂಬಂಧಿಸಿದಂತೆ, ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅನ್ನು ಟೋಲ್ ಫ್ರೀ ನಂಬರ್: 1800-2-700-700 ನಲ್ಲಿ ಸಂಪರ್ಕಿಸಿ (ಭಾರತದಿಂದ ಮಾತ್ರ)
ಅಥವಾ ಕ್ಲೇಮ್ ಮ್ಯಾನೇಜರ್, 6ನೇ ಫ್ಲೋರ್, ಲೀಲಾ ಬಿಸಿನೆಸ್ ಪಾರ್ಕ್, ಅಂಧೇರಿ-ಕುರ್ಲಾ ರೋಡ್, ಅಂಧೇರಿ (ಪೂರ್ವ), ಮುಂಬೈ - 400059 ಗೆ ಪತ್ರ ಬರೆಯಿರಿ
ಸರಿಯಾಗಿ ಭರ್ತಿಮಾಡಿದ ಕ್ಲೇಮ್ ಫಾರ್ಮ್
ಸರ್ಕಾರಿ ನಿಯಮಗಳ ಪ್ರಕಾರ ಭೂ ದಾಖಲೆಗಳು
ಸರ್ಕಾರದಿಂದ ನಾಮನಿರ್ದೇಶನಗೊಂಡ ಅಥವಾ ಕಂಪನಿಯಿಂದ ಅಧಿಕೃತವಾದ ಪ್ರಮಾಣೀಕರಣ ಏಜೆನ್ಸಿಯಿಂದ ಪ್ರಮಾಣಪತ್ರ
ಸರ್ಕಾರಿ ಸಬ್ಸಿಡಿ ಯೋಜನೆಯನ್ನು ಹೊರತುಪಡಿಸಿ, ಪಾಲಿಸಿಯ ಅಡಿಯಲ್ಲಿ ನಷ್ಟವನ್ನು ತೋರಿಸುವ ಇನ್ಶೂರ್ಡ್ ಬೆಳೆಯ ಹಾನಿಗೊಳಗಾದ ಅಥವಾ ನಷ್ಟದ ಎರಡು ಫೋಟೋಗಳು
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards