ಬಿಸಿನೆಸ್ ಟ್ರಿಪ್‌ಗಳು ಬಹುತೇಕ ಎಲ್ಲಾ ಸಂಸ್ಥೆಗಳ ಅತ್ಯಗತ್ಯ ಭಾಗವಾಗಿವೆ. ಆದರೆ, ಭಾರತದಲ್ಲಿ ಅಥವಾ ವಿಶ್ವಾದ್ಯಂತ ಪ್ರಯಾಣ ಮಾಡುವಾಗ ಕೆಲವೊಂದು ಅಪಾಯಗಳು ಮತ್ತು ಹೊಣೆಗಾರಿಕೆಗಳು ಬಂದೇ ಬರುತ್ತವೆ. ಎಚ್‌ಡಿಎಫ್‌ಸಿ ಎರ್ಗೋ ಅನೇಕ ರೀತಿಯ ಗ್ರೂಪ್ ಟ್ರಾವೆಲ್ ಇನ್ಶೂರೆನ್ಸ್ ಪಾಲಿಸಿಗಳನ್ನು ಒದಗಿಸುತ್ತದೆ. ಇವು ನಿಮ್ಮ ಉದ್ಯೋಗಿಗಳು ಪ್ರಯಾಣ ಮಾಡುವಾಗ ಅವರಿಗೆ ಎದುರಾಗಬಹುದಾದ ತುರ್ತು ಪರಿಸ್ಥಿತಿಗಳು, ಆಕ್ಸಿಡೆಂಟ್‍ಗಳು, ನಷ್ಟ ಅಥವಾ ತುರ್ತು ವೈದ್ಯಕೀಯ ನೆರವನ್ನೂ ಕವರ್ ಮಾಡುತ್ತವೆ.
ಇಂಟರ್ನ್ಯಾಷನಲ್ ಬಿಸಿನೆಸ್ ಟ್ರಾವೆಲ್ ಪಾಲಿಸಿಯು ವಿದೇಶ ಪ್ರಯಾಣ ಮಾಡುವ ವ್ಯಕ್ತಿಗಳನ್ನು ಕವರ್ ಮಾಡುತ್ತದೆ.
ವಾರ್ಷಿಕ ಮಲ್ಟಿ-ಟ್ರಿಪ್ ಬಿಸಿನೆಸ್ ಟ್ರಾವೆಲ್ ಪಾಲಿಸಿಯನ್ನು ಆಗಾಗ್ಗೆ ಪ್ರಯಾಣಿಸುವವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಗರಿಷ್ಠ ಪ್ರಯಾಣದ ಅವಧಿ 30 ದಿನಗಳಾಗಿದ್ದು, ಇದನ್ನು 180 ದಿನಗಳಿಗೆ ವಿಸ್ತರಿಸುವ ಆಯ್ಕೆಯೂ ಇದೆ.
ಎಚ್‌ಡಿಎಫ್‌ಸಿ ಎರ್ಗೋದ ಗ್ರೂಪ್ ಟ್ರಾವೆಲ್ ಇನ್ಶೂರೆನ್ಸ್, ಆಕಸ್ಮಿಕ ಸಾವು ಮತ್ತು/ಅಥವಾ ಶಾಶ್ವತ ಅಂಗವೈಕಲ್ಯ ಹಾಗೂ ತುರ್ತು ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುತ್ತದೆ. .
ಮಾನ್ಯತೆ ಪಡೆದ ಫ್ರೀಕ್ವೆಂಟ್ ಫ್ಲೈಯರ್ ಪ್ರೋಗ್ರಾಂ ಅಡಿಯಲ್ಲಿ ಪ್ರಯಾಣಕ್ಕೆ ಅಡಚಣೆ ಉಂಟಾದಾಗ, ಫಸ್ಟ್ ಕ್ಲಾಸ್ ಟ್ರೈನ್ ಟಿಕೆಟ್ ಅಥವಾ ಎಕಾನಮಿ ಕ್ಲಾಸ್ ಫ್ಲೈಟ್ ಟಿಕೆಟ್‌ನ ವೆಚ್ಚಗಳನ್ನು ಇದು ಕವರ್ ಮಾಡುತ್ತದೆ.
ಇದು ಶವಪೆಟ್ಟಿಗೆ ವೆಚ್ಚಗಳು, ಆಟೋಮೊಬೈಲ್ ಆಕ್ಸಿಡೆಂಟ್ ಸಂದರ್ಭದಲ್ಲಿ ಕಾನೂನು ನೆರವು, ತುರ್ತು ಹೋಟೆಲ್ ವಾಸ್ತವ್ಯ ಮತ್ತು/ಅಥವಾ ಪಾಲಿಸಿಯಲ್ಲಿ ಒಳಗೊಂಡಿರುವ ಆಕಸ್ಮಿಕತೆಯ ಸಂದರ್ಭದಲ್ಲಿ ತುರ್ತು ಹೋಟೆಲ್ ವಾಸ್ತವ್ಯ ವಿಸ್ತರಣೆ, ಇತ್ಯಾದಿ ವೆಚ್ಚಗಳನ್ನು ಮರುಪಾವತಿಸುತ್ತದೆ.
ತುರ್ತು ವೈದ್ಯಕೀಯ ಸ್ಥಳಾಂತರ ಅಥವಾ ಸ್ವದೇಶಕ್ಕೆ ಮರಳಿಸುವುದು, ಅದಕ್ಕೆ ಸಂಬಂಧಿಸಿದ ಇನ್ನಿತರ ಸೇವೆಗಳು ಮತ್ತು ವೀಸಾ ಅವಶ್ಯಕತೆಗಳಂತಹ ನಿರ್ಗಮನಕ್ಕೆ ಮುಂಚಿನ ಮಾಹಿತಿ, ಇತ್ಯಾದಿಗಳ ವಿಷಯದಲ್ಲಿ ಈ ಗ್ರೂಪ್ ಇನ್ಶೂರೆನ್ಸ್ ನಿಮ್ಮ ನೆರವಿಗೆ ಬರುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards