ನಿಮ್ಮ ಬಿಸಿನೆಸ್ ನಿಮ್ಮ ಆಲೋಚನೆಗಳ ವಿಸ್ತರಣೆಯಾಗಿದೆ. ಅದು ನಿಮ್ಮ ಸಿಬ್ಬಂದಿ ಹಾಗೂ ನಿಮ್ಮ ಆತ್ಮೀಯರ ಪ್ರಯತ್ನಗಳು ಮತ್ತು ಆಕಾಂಕ್ಷೆಗಳ ಪ್ರತಿಫಲವಾಗಿದೆ.
ನಿಮ್ಮ ಬಿಸಿನೆಸ್ ಮತ್ತು ಸ್ವತ್ತುಗಳ ರಕ್ಷಣೆ ವಿಷಯಕ್ಕೆ ಬಂದಾಗ, ಎಚ್‌ಡಿಎಫ್‌ಸಿ ಎರ್ಗೋ ಯಾವುದೇ ತೊಂದರೆಗಳಿಲ್ಲದೆ ನಿಮ್ಮನ್ನು ಮತ್ತೆ ಸದೃಢವಾಗಿಸುವ ಅತ್ಯುತ್ತಮ ಇನ್ಶೂರೆನ್ಸ್ ಸಂಸ್ಥೆಯಾಗಿದೆ. ನಿಜವಾಗಿಯೂ, ನಾವು ಒಂದು ಹೆಜ್ಜೆ ಮುಂದೆ ಹೋಗಿ ಬೆಂಕಿ ಅನಾಹುತದಿಂದ ನಿಮ್ಮ ಬಿಸಿನೆಸ್‌ನಲ್ಲಿ ಅನುಭವಿಸಿದ ಹಣಕಾಸಿನ ನಷ್ಟಗಳನ್ನು ಕವರ್ ಮಾಡುತ್ತೇವೆ. ಅವಶ್ಯಕತೆಯ ಸಂದರ್ಭದಲ್ಲಿ ಹಣಕಾಸಿನ ನಷ್ಟಗಳನ್ನು ತುಂಬಿಕೊಡುವ ಹಾಗೂ ಸಂಪೂರ್ಣ ನಾಶದ ನಂತರದ ಪರಿಣಾಮಗಳನ್ನು ಎದುರಿಸುವ ಸಮಯದಲ್ಲಿ ನಿಮ್ಮನ್ನು ಬೆಂಬಲಿಸುವ ಉತ್ತಮ ಸಂಸ್ಥೆಯೊಂದಿಗೆ ಕೈಜೋಡಿಸಿದ್ದೇನೆ ಎಂದು ನಿಮಗೆ ಆದಷ್ಟು ಬೇಗ ತಿಳಿಯುತ್ತದೆ.
ಸಂಪೂರ್ಣ ಹಾನಿಗೂ ಮುಂಚಿನ ಸ್ಥಿತಿಗೆ ನಿಮ್ಮ ಬಿಸಿನೆಸ್ ಮರಳುವವರೆಗೆ ಎಚ್‌ಡಿಎಫ್‌ಸಿ ಎರ್ಗೋ ನಿಮ್ಮೊಂದಿಗೆ ಇರುತ್ತದೆ. ಈ ಪಾಲಿಸಿಯು ಆಸ್ತಿ ಮತ್ತು ಬಿಸಿನೆಸ್ ಹಾಳಾಗುವ ಅನಿಯಂತ್ರಿತ ಸಂದರ್ಭಗಳಿಂದ ಹೊರಬರಲು, ಅವರ ಬಿಸಿನೆಸ್‌ಗೆ ಕವರೇಜ್ ಪಡೆಯುವ ಅವಶ್ಯಕತೆ ಇರುವ SME ಮತ್ತು ಕಾರ್ಪೊರೇಟ್‍ಗಳಿಗೆ ಸೂಕ್ತವಾಗಿದೆ. ಈ ಪಾಲಿಸಿ SFSP ಪಾಲಿಸಿಯೊಂದಿಗೆ ಸೇರಿದೆ ಹಾಗೂ ಇದನ್ನು ಬೇರೆಯಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ.
ಫೈರ್ ಮೆಟೀರಿಯಲ್ ಡ್ಯಾಮೇಜ್ ಪಾಲಿಸಿ ಅಡಿಯಲ್ಲಿ ಇನ್ಶೂರೆನ್ಸ್ ಮಾಡಿಸಲಾದ ಯಾವುದೇ ಅಪಾಯದಿಂದ ನಿಮ್ಮ ಜಾಗಕ್ಕೆ ಹಾನಿಯಾಗಿ, ಆ ಹಾನಿಯ ಕಾರಣದಿಂದ ಬಿಸಿನೆಸ್‍ಗೆ ಅಡಚಣೆಯಾದ ಸಂದರ್ಭದಲ್ಲಿ, ಅವುಗಳಿಂದ ಚೇತರಿಸಿಕೊಳ್ಳಲು ಈ ಪಾಲಿಸಿ ನಿಮಗೆ ಅನುವು ಮಾಡಿಕೊಡುತ್ತದೆ:
ಇನ್ನಷ್ಟು ತಿಳಿಯಿರಿ...ಒಳಗೊಳ್ಳದ ಅಂಶಗಳು ಫೈರ್ ಮೆಟೀರಿಯಲ್ ಡ್ಯಾಮೇಜ್ ಕವರ್ ಅನ್ನು ಹೋಲುತ್ತವೆ.
ಇದು ಹಿಂದಿನ ವರ್ಷದ ಲೆಕ್ಕಗಳ ಪ್ರಕಾರ ನಿಮ್ಮ ಬಿಸಿನೆಸ್‌ನ ಅಂದಾಜು ವಾರ್ಷಿಕ ಒಟ್ಟು ಲಾಭವನ್ನು ಆಧರಿಸಿದೆ. ಇನ್ಶೂರೆನ್ಸ್ ಅವಧಿಯ ಹಣಕಾಸು ವರ್ಷದಲ್ಲಿ ಗಳಿಸಿದ ಒಟ್ಟು ಲಾಭವು ವಿಮಾ ಮೊತ್ತಕ್ಕಿಂತ ಕಡಿಮೆ ಇದ್ದರೆ ಇನ್ಶೂರ್ಡ್ ವ್ಯಕ್ತಿಯು ಪ್ರೀಮಿಯಂ (ಪಾವತಿಸಿದ ಪ್ರೀಮಿಯಂನ 50% ಮೀರದಂತೆ) ಹಿಂಪಡೆದುಕೊಳ್ಳಲು ಅರ್ಹರಾಗುತ್ತಾರೆ.
ಪಾಲಿಸಿಯು ಕಡ್ಡಾಯ ಹೆಚ್ಚುವರಿಗೆ ಒಳಪಟ್ಟಿರುತ್ತದೆ.
ಪ್ರೀಮಿಯಂ ಸ್ಥಳ, ವಾರ್ಷಿಕ ಒಟ್ಟು ಲಾಭ, ಆಯ್ಕೆ ಮಾಡಿದ ನಷ್ಟ ಪರಿಹಾರ ಅವಧಿ ಮತ್ತು ವಿಸ್ತರಣೆಗಳ ಮೇಲೆ ಅವಲಂಬಿತವಾಗಿರುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards