ಇಂದಿನ ಜಗತ್ತಿನಲ್ಲಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ಕ್ರಾಂತಿಯು ಉದ್ಯಮದ ಚಿತ್ರಣವನ್ನೇ ಬದಲಾಯಿಸಿದೆ. ಬಿಸಿನೆಸ್ ಮಾಡುವ ವಿಧಾನವು ಗಣನೀಯವಾಗಿ ಬದಲಾಗಿದೆ. ಡೇಟಾ, ವಿಶ್ಲೇಷಣೆ, ಎಲೆಕ್ಟ್ರಾನಿಕ್ ಸಲಕರಣೆಗಳು ಬಿಸಿನೆಸ್‌ನಲ್ಲಿ ಉತ್ತಮ ಸ್ಪರ್ಧೆ ನೀಡಲು ನಿಮಗೆ ಸಹಕಾರಿಯಾಗಿವೆ.
ಇಂತಹ ಡೇಟಾಗೆ ಏನಾದರೂ ಆದರೆ ಅಥವಾ ನಿಮ್ಮ ಕಂಪ್ಯೂಟರ್ ಹಾಗೂ ಇತರೆ ಎಲೆಕ್ಟ್ರಾನಿಕ್ ಸಲಕರಣೆಗಳು ಮತ್ತೆ ರಿಪೇರಿಯಾಗದಂತೆ ಹಾಳಾದರೆ ಅದರ ಪರಿಣಾಮವನ್ನು ಊಹಿಸಿ. ಎಚ್‌ಡಿಎಫ್‌ಸಿ ಎರ್ಗೋ ಎಲೆಕ್ಟ್ರಾನಿಕ್ ಸಲಕರಣೆ ಇನ್ಶೂರೆನ್ಸ್ ಪಾಲಿಸಿಯು ಸುಗಮ ಬಿಸಿನೆಸ್ ಕಾರ್ಯನಿರ್ವಹಣೆಗೆ ಪ್ರಮುಖವಾದ ನಿಮ್ಮ ಸ್ವತ್ತುಗಳನ್ನು ರಕ್ಷಿಸುವ ಕವರ್ ಆಗಿದೆ.
ಈ ಪಾಲಿಸಿಯು ನಿಮ್ಮ ಎಲೆಕ್ಟ್ರಾನಿಕ್ ಎಕ್ವಿಪ್ಮೆಂಟ್‌ಗಳಿಗೆ ಸಮಗ್ರ ಕವರೇಜ್ ಒದಗಿಸುತ್ತದೆ. ಇದು ಎಲ್ಲಾ ಎಲೆಕ್ಟ್ರಾನಿಕ್ ಎಕ್ವಿಪ್ಮೆಂಟ್‌ಗಳು ಮತ್ತು ಡೇಟಾ ಮಾಧ್ಯಮಗಳಿಗೆ ಆಗುವ ಭೌತಿಕ ನಷ್ಟ ಅಥವಾ ಹಾನಿಯನ್ನು ಒಳಗೊಂಡಿದೆ, ಇನ್ನಷ್ಟು ಓದಿ...
ಅತ್ಯಂತ ಕಡಿಮೆ ಹೆಚ್ಚುವರಿ ಪ್ರೀಮಿಯಂ ಪಾವತಿಸಿ ಪಾಲಿಸಿಯ ಕವರೇಜ್ ಅನ್ನು ಭಯೋತ್ಪಾದನೆಯ ರಿಸ್ಕ್‌ಗಳಿಗೂ ವಿಸ್ತರಿಸಬಹುದು.
ನಿರ್ವಹಣಾ ಒಪ್ಪಂದ ಮತ್ತು ಉಪಕರಣಗಳ ನಿಬಂಧನೆಗಳನ್ನು ಒಳಗೊಂಡಂತೆ ಸಲಕರಣೆಗಳ ಮೌಲ್ಯ, ಸ್ವರೂಪ ಮತ್ತು ಬಳಕೆಯ ಮೇಲೆ ಪ್ರೀಮಿಯಂ ಅವಲಂಬಿತವಾಗಿರುತ್ತದೆ.
ಪಾಲಿಸಿಯು ಇನ್ಶೂರ್ಡ್ ಉಪಕರಣದ ಮೌಲ್ಯವನ್ನು ಅವಲಂಬಿಸಿರುವ ಕಡ್ಡಾಯ ಹೆಚ್ಚುವರಿ ಮೊತ್ತಕ್ಕೆ ಒಳಪಟ್ಟಿರುತ್ತದೆ. ವಿಂಚೆಸ್ಟರ್ ಡ್ರೈವ್‌ಗೆ ಪ್ರತ್ಯೇಕ ಹೆಚ್ಚುವರಿ ಅನ್ವಯವಾಗುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards