ಕಂಪನಿಗಳು ಜಾಗತಿಕ ಮಾರುಕಟ್ಟೆಯ ಭಾಗವಾಗಿರಲು ಬಯಸುತ್ತವೆ ಮತ್ತು ತಮ್ಮ ದೇಶಗಳಾಚೆ ಬಿಸಿನೆಸ್ ನಡೆಸುವ ಕಾರ್ಪೊರೇಟ್ ಉದ್ಯೋಗಿಗಳಿಗೆ, ತಾವು ಭಾಷೆಯ ಅಡೆತಡೆಗಳು, ವಿದೇಶಿ ಸಂಸ್ಕೃತಿ, ವೈವಿಧ್ಯಮಯ ಮಾತುಕತೆ ಶೈಲಿ, ಮುಂತಾದ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂಬ ಅಂದಾಜು ಇರುತ್ತದೆ. ಆದರೆ, ಅವರು ರಾಜಕೀಯ ಏರಿಳಿತ, ಅಪಹರಣ ಮತ್ತು ಸುಲಿಗೆಯಂತಹ ಅಪಾಯವನ್ನು ಮೊದಲೇ ಅಂದಾಜಿಸಲು ಸಾಧ್ಯವಿಲ್ಲ. ಅಪಹರಣಕ್ಕೆ ಒಳಗಾದವರ ಸುರಕ್ಷಿತ ವಾಪಸಾತಿ ಅಥವಾ ಬಿಕ್ಕಟ್ಟಿನ ತೃಪ್ತಿಕರ ಪರಿಹಾರವೇ ನಮ್ಮ ಕಾರ್ಯಕ್ರಮದ ಗುರಿ - ಈ ಗುರಿಗೆ ನಾವು ಕಟಿಬದ್ಧರಾಗಿರುತ್ತೇವೆ. ಅಪಹರಣಕ್ಕೆ ಮುಂಚೆ, ಅಪಹರಣ ನಡೆದಾಗ ಮತ್ತು ನಂತರದ ಕಾಲಘಟ್ಟದಲ್ಲಿ ವೃತ್ತಿಪರ ನೆರವು ನೀಡುವುದು ಕಾರ್ಪೊರೇಟ್ ರಿಸ್ಕ್ ಮ್ಯಾನೇಜ್ಮೆಂಟ್‌ನ ಪ್ರಮುಖ ಅಂಶವಾಗಿದೆ.
ಒಬ್ಬ ವ್ಯಕ್ತಿಯು ನಿಜವಾಗಿಯೂ ಅಪಹರಣಕ್ಕೆ ಒಳಗಾದಾಗ ಅಥವಾ ಅಪಹರಣಕ್ಕೆ ಒಳಗಾಗಿದ್ದಾರೆ ಎಂದುಕೊಂಡು ಯಾರಾದರೂ ಸುಲಿಗೆಯ ಹಣ ಪಾವತಿಸಿದಾಗ ಕಿಡ್ನ್ಯಾಪ್/ಒತ್ತಾಯದ ವಸೂಲಿಯ ಕವರೇಜ್ ನೆರವಿಗೆ ಬರುತ್ತದೆ.
ಎಚ್‌ಡಿಎಫ್‌ಸಿ ಎರ್ಗೋ ಈ ಕೆಳಗಿನ ಅಪಾಯಗಳ ವಿರುದ್ಧ ರಕ್ಷಣೆ ಒದಗಿಸುತ್ತದೆ:
ವಸೂಲಿ ಅಥವಾ ಸುಲಿಗೆ ಬೇಡಿಕೆಯನ್ನು ಪೂರೈಸಲು ಬಳಸಲಾದ ಹಣ ಅಥವಾ ಇತರ ಪರ್ಯಾಯ ಆಸ್ತಿಯನ್ನು ಇನ್ಶೂರ್ ಮಾಡುತ್ತದೆ.
ಒತ್ತೆಯಾಳಿನ ಬಿಡುಗಡೆಗೆ ತಗಲುವ ಹೆಚ್ಚುವರಿ ಖರ್ಚುಗಳು ಮತ್ತು ಕಾನೂನು ವೆಚ್ಚಗಳಿಗೆ ನಾವು ಕವರೇಜ್ ಅನ್ನು ವಿಸ್ತರಿಸುತ್ತೇವೆ. ಆ ವೆಚ್ಚಗಳಲ್ಲಿ ಸ್ವತಂತ್ರ ಸಮಾಲೋಚಕರ ಶುಲ್ಕಗಳು, ಸುಲಿಗೆ ಹಣ ಪಾವತಿಸಲು ಪಡೆದಿದ್ದ ಲೋನ್‌ಗಳ ಮೇಲಿನ ಬಡ್ಡಿ ವೆಚ್ಚಗಳು, ಸಂಬಳ ಮುಂದುವರಿಕೆ, ಪರಿಣಾಮಕಾರಿ ವೈಯಕ್ತಿಕ ಹಣಕಾಸು ನಷ್ಟ ಮತ್ತು ಸಮಂಜಸ ವೈದ್ಯಕೀಯ ವೆಚ್ಚಗಳು ಸೇರಿರಬಹುದು.
ಒತ್ತೆಯಾಳುಗಳ ಸಂರಕ್ಷಣೆ ಮಾಡುವಾಗ ಇನ್ಶೂರ್ಡ್ ವ್ಯಕ್ತಿಯು ನಿರ್ಲಕ್ಷ್ಯದಿಂದ ವರ್ತಿಸಿದ್ದ ಎಂಬ ಆರೋಪದ ಸಂದರ್ಭದಲ್ಲಿ ರಕ್ಷಣೆ.
ಸರ್ಕಾರಕ್ಕಾಗಿ ಅಥವಾ ಸರ್ಕಾರದ ಅನುಮೋದನೆಯೊಂದಿಗೆ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಅಕ್ರಮ ಬಂಧನದಿಂದ ಉಂಟಾದ ವೆಚ್ಚಗಳಿಗೆ ಕವರೇಜ್.
ಅಪರಾಧಿಗಳು ಯಾವುದೇ ಹಣಕಾಸು ಬೇಡಿಕೆ ಇಡದಿದ್ದಾಗ, ಅಪಹರಣಕ್ಕೆ ನೈಜ ಕಾರಣವೇನೆಂದು ತನಿಖೆ ಮಾಡಲು ಇನ್ಶೂರ್ಡ್ ವ್ಯಕ್ತಿಯು ಹೆಚ್ಚುವರಿ ಸೇವೆಗಳನ್ನು ಬಳಸಿದಾಗ ಉಂಟಾಗುವ ವೆಚ್ಚಗಳಿಗೆ ಪಾವತಿ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards