ಬಹುತೇಕ ಭಾರತೀಯರಿಗೆ ವ್ಯವಸಾಯವೇ ಜೀವನಾಧಾರ. ಹಾಗಾಗಿ, ಇದು ಭಾರತದ ಅತ್ಯಂತ ಪ್ರಮುಖ ಕ್ಷೇತ್ರವಾಗಿದೆ. ಭಾರತದ ಅತಿದೊಡ್ಡ ವಲಯ ಹಾಗೂ ಭಾರತೀಯ ಆರ್ಥಿಕತೆಗೆ ಸಾಮಾಜಿಕ-ಆರ್ಥಿಕ ಅಡಿಪಾಯವಾಗಿರುವ ಕೃಷಿ ಕ್ಷೇತ್ರವು ಹವಾಮಾನದ ಪರಿಸ್ಥಿತಿಗಳ ಮೇಲೆ ಅವಲಂಬಿತವಾಗಿದೆ. ಭಾರತದ ಬಹುಪಾಲು ಕೃಷಿಭೂಮಿಯು ಮಳೆಯಾಶ್ರಿತವಾಗಿದ್ದು, ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯು ಕೃಷಿ ಉತ್ಪಾದನೆಯ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತಿದೆ. ಕೃಷಿಯ ಮೇಲಿನ ಯಾವುದೇ ಪ್ರತಿಕೂಲ ಪರಿಣಾಮವು ಆರ್ಥಿಕತೆಯ ಮೇಲೆ ನೇರ ಪರಿಣಾಮ ಬೀರುತ್ತದೆ.
ಅಂತಹ ಪ್ರತಿಕೂಲ ಹವಾಮಾನ ಪರಿಸ್ಥಿತಿಯನ್ನು ನಿಭಾಯಿಸಲು, ಎಚ್‌ಡಿಎಫ್‌ಸಿ ಎರ್ಗೋ 'ಸಮಗ್ರ ಹವಾಮಾನ ಇನ್ಶೂರೆನ್ಸ್ ಪಾಲಿಸಿ'ಯನ್ನು ಒದಗಿಸುತ್ತದೆ. ಇದು ತಾಪಮಾನ, ಗಾಳಿಯ ವೇಗ, ಮಳೆ, ಆರ್ದ್ರತೆ ಮುಂತಾದ ಹವಾಮಾನ ಪರಿಸ್ಥಿತಿಗಳಿಂದಾಗಿ ಉಂಟಾಗುವ ನಷ್ಟಗಳನ್ನು ಕವರ್ ಮಾಡುವ ಸೂಚ್ಯಂಕ ಆಧಾರಿತ ಉತ್ಪನ್ನವಾಗಿದೆ.
ಉತ್ಪಾದನಾ ವೆಚ್ಚ - ನಿರ್ದಿಷ್ಟ ಭೂಪ್ರದೇಶ ಮತ್ತು ನಿರ್ದಿಷ್ಟ ಕಾಲಾವಧಿಯಲ್ಲಿ ಬೆಳೆಯ ಅತ್ಯುತ್ತಮ ಇಳುವರಿಗೆ ಬೇಕಾದ ಹವಾಮಾನ ಪರಿಸ್ಥಿತಿಗಳ ಕೊರತೆಯಿಂದ ಉಂಟಾಗುವ ಉತ್ಪಾದನೆ/ಇಳುವರಿ ಕೊರತೆಯನ್ನು ಕವರ್ ಮಾಡುತ್ತದೆ.
ವಾಸ್ತವಿಕ ಹವಾಮಾನ ಸೂಚ್ಯಂಕವು (ಅಬ್ಸರ್ವ್ಡ್ ವೆದರ್ ಇಂಡೆಕ್ಸ್) ನಿರೀಕ್ಷಿತ ಸೂಚ್ಯಂಕದಿಂದ (ಸ್ಟ್ರೈಕ್ ಇಂಡೆಕ್ಸ್) ಏರುಪೇರಾದಾಗ ಕೃಷಿ ಅಥವಾ ಕೃಷಿಯೇತರ ಆರ್ಥಿಕ ಚಟುವಟಿಕೆಯ ಕಾರ್ಯಾಚರಣೆಯ ವೆಚ್ಚದಲ್ಲಾಗುವ ಹೆಚ್ಚಳ.
ಯಾವುದೇ ಪರಮಾಣು ತ್ಯಾಜ್ಯದ ವಿಕಿರಣತೆಯ ಪರಿಣಾಮವಾಗಿ ಹೊರಹೊಮ್ಮುವ ಅಯೋನೈಸಿಂಗ್ ರೇಡಿಯೇಶನ್‌ಗಳು ಅಥವಾ ಕಲ್ಮಶಗಳು
ಯಾವುದೇ ಸ್ಫೋಟಕ ನ್ಯೂಕ್ಲಿಯರ್ ಅಸೆಂಬ್ಲಿ ಅಥವಾ ಪರಮಾಣು ಘಟಕಗಳ ರೇಡಿಯೋಆ್ಯಕ್ಟಿವ್, ವಿಷಕಾರಿ, ಸ್ಫೋಟಕ ಅಥವಾ ಇತರ ಅಪಾಯಕಾರಿ ಗುಣಗಳು
ಭಯೋತ್ಪಾದನೆ: ಯಾವುದೇ ಭಯೋತ್ಪಾದನಾ ಕೃತ್ಯದ ನಿಯಂತ್ರಣ, ತಡೆಗಟ್ಟುವಿಕೆ, ಮಟ್ಟ ಹಾಕುವಿಕೆ ಅಥವಾ ಅಂತಹ ಯಾವುದೇ ಉದ್ದೇಶಕ್ಕಾಗಿ ತೆಗೆದುಕೊಳ್ಳಲಾಗುವ ಯಾವುದೇ ಕ್ರಮಕ್ಕೆ ಸಂಬಂಧಿಸಿದಂತೆ ಅಥವಾ ಅಂತಹ ಕ್ರಮದ ಫಲವಾಗಿ, ನೇರವಾಗಿ ಅಥವಾ ಪರೋಕ್ಷವಾಗಿ ಸಂಭವಿಸುವ ನಷ್ಟ ಅಥವಾ ಹಾನಿ, ಖರ್ಚು ಅಥವಾ ವೆಚ್ಚಗಳನ್ನು ಹೊರತುಪಡಿಸಲಾಗುತ್ತದೆ
ಯುದ್ಧದಂತಹ ಕಾರ್ಯಾಚರಣೆಗಳು, ವಿದೇಶಿ ಶತ್ರುಗಳ ದಾಳಿ, ಭಾರತೀಯ ಪ್ರದೇಶ ಅಥವಾ ಅದರ ಯಾವುದೇ ಭಾಗದ ಆಕ್ರಮಣ, ವಿರೋಧಗಳು, ಅಂತರ್ಯುದ್ಧ, ಕ್ರಾಂತಿ, ಬಂಡಾಯ, ನಾಗರಿಕ ದಂಗೆ, ಮಿಲಿಟರಿ ದಂಗೆ ಅಥವಾ ಕ್ಷಿಪ್ರ ಕ್ರಾಂತಿ, ಅಥವಾ ಲೂಟಿ ಅಥವಾ ಇನ್ನಷ್ಟು ಓದಿ...
ಗಲಭೆ, ಮುಷ್ಕರ, ದುರುದ್ದೇಶಪೂರಿತ ಕೃತ್ಯಗಳು ಹಾಗೂ ನೈಸರ್ಗಿಕ ಹವಾಮಾನ ಪರಿಸ್ಥಿತಿಗಳ ಹೊರತಾಗಿ ಸಂಭವಿಸುವ ಮಾಲಿನ್ಯ, ಕಲ್ಮಶೀಕರಣ ಸೇರಿದಂತೆ, ಆದರೆ ಅಷ್ಟಕ್ಕೆ ಮಾತ್ರ ಸೀಮಿತವಾಗದೆ ವಾಸ್ತವಿಕ ಹವಾಮಾನ ಸೂಚ್ಯಂಕದ ಏರುಪೇರಿಗೆ ಕಾರಣವಾಗುವ ಯಾವುದೇ ಮಾನವ ನಿರ್ಮಿತ ಚಟುವಟಿಕೆಗಳು.
ಪ್ರೀಮಿಯಂ ಮೊತ್ತವು ಬೆಳೆಯ ವಿಧ, ಸ್ಥಳ, ಹಿಂದಿನ ಹವಾಮಾನ ಡೇಟಾ, ನಿರ್ದಿಷ್ಟ ಪ್ರದೇಶದ ಕೃಷಿ ಖರ್ಚು ಮತ್ತು ಕೃಷಿ ಕ್ಷೇತ್ರದ ಎಕರೆವಾರು ವಿಸ್ತೀರ್ಣದಂತಹ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ.
ಕಂಪನಿಗೆ ಸಲ್ಲಿಸಿದ ಡಾಕ್ಯುಮೆಂಟ್‌ಗಳ ಆಧಾರದ ಮೇಲೆ ಕ್ಲೇಮ್‌ಗಳನ್ನು ಮೌಲ್ಯಮಾಪನ ಮಾಡಿ, ಪರಿಹಾರ ಪಾವತಿಸಲಾಗುತ್ತದೆ. ಈ ಪಾಲಿಸಿಯ ಶೆಡ್ಯೂಲ್‌ನಲ್ಲಿ ನಮೂದಿಸಿದ ನಿರ್ದಿಷ್ಟ ಭೂಪ್ರದೇಶ ಮತ್ತು ನಿರ್ದಿಷ್ಟ ಅವಧಿಯಲ್ಲಿ, ಕವರ್ ಮಾಡಲಾದ ಮಾನದಂಡದ ವಾಸ್ತವಿಕ ಒಟ್ಟಾರೆ ಸೂಚ್ಯಂಕವು ಪ್ರಾಡಕ್ಟ್‌ನ ಪೂರ್ವನಿರ್ಧರಿತ ಸೂಚ್ಯಂಕದಿಂದ ವಿಚಲಿಸಿದಾಗ ಈ ಕ್ರಮ ಕೈಗೊಳ್ಳಲಾಗುತ್ತದೆ.
ಪಾಲಿಸಿ ಅವಧಿ ಮುಗಿದ ನಂತರ, ಕಂಪನಿಯು ಕ್ಲೇಮ್ ಸೆಟಲ್ಮೆಂಟ್‌ಗಾಗಿ ಅಧಿಕೃತ ಹವಾಮಾನ ಡೇಟಾ ಏಜೆನ್ಸಿಯಿಂದ ಹವಾಮಾನ ಡೇಟಾವನ್ನು ಸಂಗ್ರಹಿಸುತ್ತದೆ. ಪಾಲಿಸಿ ಶೆಡ್ಯೂಲಿನಲ್ಲಿ ನಮೂದಿಸಿದ ಪರಿಹಾರ ಪಾವತಿ ಫಾರ್ಮುಲಾ ಪ್ರಕಾರ ಮಾತ್ರವೇ ಪರಿಹಾರವನ್ನು ಪಾವತಿಸಲಾಗುತ್ತದೆ ಹಾಗೂ ಪಾಲಿಸಿಯ ನಿಯಮ ಮತ್ತು ಷರತ್ತುಗಳ ಪ್ರಕಾರ ಕಂಪನಿಯು ಪರಿಹಾರದ ಮೊತ್ತವನ್ನು ಲೆಕ್ಕ ಹಾಕಿ, ಅದಕ್ಕೆ ಅನುಗುಣವಾಗಿ ವಿಮಾದಾರ/ಫಲಾನುಭವಿಗೆ ಪರಿಹಾರ ಪಾವತಿಸುತ್ತದೆ.
ಈ ಪಾಲಿಸಿ ಅಡಿಯ ಕ್ಲೇಮ್‌ಗೆ ಸಂಬಂಧಿಸಿದಂತೆ, ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ಅನ್ನು ಟೋಲ್ ಫ್ರೀ ನಂಬರ್: 1800-2-700-700 ನಲ್ಲಿ ಸಂಪರ್ಕಿಸಿ (ಭಾರತದಿಂದ ಮಾತ್ರ).
ಅಥವಾ ಕ್ಲೇಮ್ ಮ್ಯಾನೇಜರ್, 6ನೇ ಫ್ಲೋರ್, ಲೀಲಾ ಬಿಸಿನೆಸ್ ಪಾರ್ಕ್, ಅಂಧೇರಿ-ಕುರ್ಲಾ ರೋಡ್, ಅಂಧೇರಿ (ಪೂರ್ವ), ಮುಂಬೈ - 400059 ಗೆ ಪತ್ರ ಬರೆಯಿರಿ.
ಈ ವಿಷಯವು ವಿವರಣೆಯ ಉದ್ದೇಶಕ್ಕಷ್ಟೇ ಆಗಿದೆ. ನಿಜವಾದ ಕವರೇಜ್ ನೀಡಲಾದ ಪಾಲಿಸಿಗಳ ಭಾಷೆಗೆ ಒಳಪಟ್ಟಿರುತ್ತದೆ.
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards
1 ಕೋಟಿಗೂ ಅಧಿಕ ಸುರಕ್ಷಿತ ನಗುಮುಖಗಳು!
ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7
ಗ್ರಾಹಕರ ಅಗತ್ಯಗಳನ್ನು ಪೂರೈಸುವುದು
ಅತ್ಯುತ್ತಮ ಪಾರದರ್ಶಕತೆ
Awards