ಎಚ್‌ಡಿಎಫ್‌ಸಿ ಎರ್ಗೋದ ಕೊರೋನಾ ಕವಚ್ ಪಾಲಿಸಿಯನ್ನು ಕೊರೋನಾ ವೈರಸ್ ಸೋಂಕಿಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಪಾವತಿಸಲು ವಿನ್ಯಾಸಗೊಳಿಸಲಾಗಿದೆ. ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ಕೊರೋನಾ ಕವಚ್ ಪಾಲಿಸಿಯನ್ನು ಪ್ರಾರಂಭಿಸಿದ್ದು, ಭಾರತದ ಎಲ್ಲಾ ಜನರಲ್ ಮತ್ತು ಸ್ಟ್ಯಾಂಡ್‌ಅಲೋನ್ ಹೆಲ್ತ್ ಇನ್ಶೂರೆನ್ಸ್ ಕಂಪನಿಗಳು ತಮ್ಮ ಗ್ರಾಹಕರಿಗೆ ಕಡ್ಡಾಯವಾಗಿ ಈ ಪಾಲಿಸಿಯನ್ನು ಒದಗಿಸುವಂತೆ ಸೂಚಿಸಿದೆ. ಕೋವಿಡ್-19 ಪಾಸಿಟಿವ್ ಎಂದು ಧೃಢಪಟ್ಟ ಇನ್ಶೂರ್ಡ್ ವ್ಯಕ್ತಿಯ ಆಸ್ಪತ್ರೆ ದಾಖಲಾತಿ, ಆಸ್ಪತ್ರೆ ದಾಖಲಾತಿಗೆ ಮುಂಚೆ ಮತ್ತು ನಂತರದ ವೆಚ್ಚಗಳು, ಹೋಮ್ ಕೇರ್ ಚಿಕಿತ್ಸೆ ವೆಚ್ಚಗಳು ಮತ್ತು ಆಯುಷ್ ಚಿಕಿತ್ಸೆಯನ್ನು ಕವರ್ ಮಾಡುವುದೇ ಇದರ ಗುರಿ. ಎಚ್‌ಡಿಎಫ್‌ಸಿ ಎರ್ಗೋದ ಕೊರೋನಾ ಕವಚ್ ಅನ್ನು ಆನ್ಲೈನ್‌ನಲ್ಲಿ ಖರೀದಿಸಿ ಮತ್ತು ಈ ಮಹಾಮಾರಿ ಸಮಯದಲ್ಲಿ ಗುಣಮಟ್ಟದ ವೈದ್ಯಕೀಯ ಚಿಕಿತ್ಸೆಗಳಿಗೆ ಅಕ್ಸೆಸ್ ಪಡೆಯಿರಿ.
ಕೋವಿಡ್-19 ಇನ್ಶೂರೆನ್ಸ್, ಇತರ ಹೆಲ್ತ್ ಇನ್ಶೂರೆನ್ಸ್ ಪ್ರಾಡಕ್ಟ್‌ಗಳಂತೆ, ಕೊರೋನಾವೈರಸ್ ಆರೋಗ್ಯ ತುರ್ತುಸ್ಥಿತಿಗಳ ವಿರುದ್ಧ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ. 2020 ರಲ್ಲಿ ಪ್ರಾರಂಭವಾದ ಕೊರೋನಾವೈರಸ್ ಜಾಗತಿಕ ವಿಪತ್ತುಗಳಿಂದಾಗಿ ಕೋವಿಡ್-19 ಇನ್ಶೂರೆನ್ಸ್ ಪ್ಲಾನನ್ನು ಪರಿಚಯಿಸಲಾಯಿತು. ಆ ಸಮಯದಲ್ಲಿ, ಪರಿಸ್ಥಿತಿಯ ತೀವ್ರತೆಯನ್ನು ನೋಡುತ್ತಿರುವಾಗ, ಭಾರತೀಯ ಇನ್ಶೂರೆನ್ಸ್ ನಿಯಂತ್ರಕ ಅಭಿವೃದ್ಧಿ ಪ್ರಾಧಿಕಾರವು (IRDAI) ಕೋವಿಡ್-19 ವೈದ್ಯಕೀಯ ಬಿಲ್‌ಗಳ ವಿರುದ್ಧ ಆರ್ಥಿಕವಾಗಿ ರಕ್ಷಿಸಲು ಗ್ರಾಹಕರಿಗೆ ಸಹಾಯ ಮಾಡಲು ಪ್ರಮುಖ ಕೋವಿಡ್-19 ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯಾದ ಕೊರೋನಾ ಕವಚ್ ಅನ್ನು ಪ್ರಾರಂಭಿಸಲು ಕಡ್ಡಾಯವಾಗಿಸಿದೆ
ಕೋವಿಡ್-19 ಈಗಾಗಲೇ ವಿಶ್ವದಾದ್ಯಂತ ಅನೇಕ ಜೀವಗಳನ್ನು ಬಲಿ ತೆಗೆದುಕೊಂಡಿದೆ ಮತ್ತು ಕೊರೋನಾವೈರಸ್ ಪ್ಯಾಂಡೆಮಿಕ್ ಇನ್ನೂ ಮುಗಿದಿಲ್ಲ. ಪ್ರಸ್ತುತ ಕೋವಿಡ್-19 ರೂಪಾಂತರಿ BF.7 ಚೀನಾದಲ್ಲಿ ವಿನಾಶವನ್ನೇ ಸೃಷ್ಟಿಸುತ್ತಿದೆ ಮತ್ತು ಕೆಲವು ಕೇಸ್‌ಗಳನ್ನು ಭಾರತದ ಕೆಲವು ಭಾಗಗಳಲ್ಲಿಯೂ ಪತ್ತೆ ಮಾಡಲಾಗಿದೆ. ಆದ್ದರಿಂದ, ಪರಿಸ್ಥಿತಿ ಬಿಗಡಾಯಿಸಿದರೆ, ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಇನ್ನಷ್ಟು ಮುಖ್ಯವಾಗಿದೆ. ಮಾಸ್ಕ್‌ಗಳನ್ನು ಧರಿಸುವುದು, ತೊಳೆಯುವುದು ಮತ್ತು ಸ್ಯಾನಿಟೈಸ್ ಮಾಡಿದ ಹ್ಯಾಂಡ್‌ಗಳು ಇತ್ಯಾದಿಗಳು ಜನರು ಅನುಸರಿಸಬೇಕಾದ ಪ್ರಮುಖ ಪ್ರೋಟೋಕಾಲ್ ಆಗಿವೆ. ಅದಲ್ಲದೆ, ಕೋವಿಡ್-19 ಸಂಬಂಧಿತ ಚಿಕಿತ್ಸೆಗಳನ್ನು ಕವರ್ ಮಾಡುವ ಉತ್ತಮ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊಂದುವುದು ಮುಖ್ಯವಾಗಿದೆ. ನಿಯಮಿತ ಹೆಲ್ತ್ ಇನ್ಶೂರೆನ್ಸ್ ಪಾಲಿಸಿಯನ್ನು ಹೊರತುಪಡಿಸಿ, ಕೊರೋನಾ ಕವಚ್ ಪಾಲಿಸಿಯನ್ನು ಪ್ರತ್ಯೇಕವಾಗಿ ಖರೀದಿಸಬಹುದು.
ಇನ್ಶೂರೆನ್ಸ್ ರೆಗ್ಯುಲೇಟರಿ ಆಂಡ್ ಡೆವಲಪ್ಮೆಂಟ್ ಅಥಾರಿಟಿ ಆಫ್ ಇಂಡಿಯಾ (IRDAI) ಕಡ್ಡಾಯಗೊಳಿಸಿರುವ ಕೊರೋನಾ ಕವಚ್ ಪಾಲಿಸಿಯು, ಇನ್ಶೂರ್ಡ್ ವ್ಯಕ್ತಿಗೆ ಕೋವಿಡ್-19 ಧೃಢಪಟ್ಟ ನಂತರ ತಗುಲುವ ಆಸ್ಪತ್ರೆ ದಾಖಲಾತಿ ವೆಚ್ಚಗಳನ್ನು ಕವರ್ ಮಾಡುತ್ತದೆ. ಅಷ್ಟೇ ಅಲ್ಲ, ಆಸ್ಪತ್ರೆ ದಾಖಲಾತಿ ಅವಧಿಯಲ್ಲಿ ಕೋವಿಡ್-19 ಕಾರಣದಿಂದಾಗಿ ಉಲ್ಬಣಗೊಂಡ ಯಾವುದೇ ಕೋ-ಮಾರ್ಬಿಡಿಟಿಯನ್ನೂ ಸಹ ಪಾಲಿಸಿಯು ಕವರ್ ಮಾಡುತ್ತದೆ. ಆದರೆ, ಈ ಪಾಲಿಸಿಯು ಪ್ರಸ್ತುತ ಮಹಾಮಾರಿಗೆ ಸಂಬಂಧಿಸದ ಯಾವುದೇ ಇತರ ಚಿಕಿತ್ಸೆಯನ್ನು ಕವರ್ ಮಾಡುವುದಿಲ್ಲ. ನೀವು ಇತರ ಸಾಮಾನ್ಯ ಮತ್ತು ಗಂಭೀರ ಕಾಯಿಲೆಗಳ ವಿರುದ್ಧ ಇನ್ಶೂರೆನ್ಸ್ ಪಡೆಯಲು ಬಯಸಿದರೆ, ಒಂದು ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಬೇಕು. ಕೊರೋನಾ ಕವಚ್ ಪಾಲಿಸಿಯನ್ನು ವೈಯಕ್ತಿಕವಾಗಿ ಅಥವಾ ಫ್ಯಾಮಿಲಿ ಫ್ಲೋಟರ್ ಪ್ಲಾನ್ ಆಗಿ ಖರೀದಿಸಬಹುದು. ಆದರೆ ಇದನ್ನು 18 ರಿಂದ 65 ವರ್ಷಗಳ ನಡುವಿನ ವ್ಯಕ್ತಿಗಳು ಮಾತ್ರ ಪಡೆಯಬಹುದು.
ಆದರೆ, ಈ ಪಾಲಿಸಿಯು ಪ್ರಸ್ತುತ ಮಹಾಮಾರಿಗೆ ಸಂಬಂಧಿಸದ ಯಾವುದೇ ಇತರ ಚಿಕಿತ್ಸೆಯನ್ನು ಕವರ್ ಮಾಡುವುದಿಲ್ಲ. ನೀವು ಇತರ ಸಾಮಾನ್ಯ ಮತ್ತು ಗಂಭೀರ ಕಾಯಿಲೆಗಳ ವಿರುದ್ಧ ಇನ್ಶೂರೆನ್ಸ್ ಪಡೆಯಲು ಬಯಸಿದರೆ, ಒಂದು ಸಮಗ್ರ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಆಯ್ಕೆ ಮಾಡಬೇಕು. ಕೊರೋನಾ ಕವಚ್ ಪಾಲಿಸಿಯನ್ನು ವೈಯಕ್ತಿಕವಾಗಿ ಅಥವಾ ಫ್ಯಾಮಿಲಿ ಫ್ಲೋಟರ್ ಪ್ಲಾನ್ ಆಗಿ ಖರೀದಿಸಬಹುದು. ಆದರೆ ಇದನ್ನು 18 ರಿಂದ 65 ವರ್ಷಗಳ ನಡುವಿನ ವ್ಯಕ್ತಿಗಳು ಮಾತ್ರ ಪಡೆಯಬಹುದು.
ಬೆಡ್-ಶುಲ್ಕ, ನರ್ಸಿಂಗ್ ಶುಲ್ಕ, ರಕ್ತ ಪರೀಕ್ಷೆ, PPE ಕಿಟ್‌ಗಳು, ಆಕ್ಸಿಜನ್, ICU ಮತ್ತು ವೈದ್ಯರ ಸಮಾಲೋಚನೆ ಶುಲ್ಕ ಸೇರಿದಂತೆ ಪ್ರತಿಯೊಂದೂ ಕವರ್ ಆಗುತ್ತದೆ.
ಆಸ್ಪತ್ರೆಗೆ ದಾಖಲಾಗುವ ಮೊದಲು, ವೈದ್ಯರ ಸಮಾಲೋಚನೆ, ಚೆಕ್-ಅಪ್ ಮತ್ತು ಡಯಾಗ್ನೊಸಿಸ್‌ಗೆ ಸಂಬಂಧಿಸಿದ ವೈದ್ಯಕೀಯ ಖರ್ಚುಗಳು ಇರುತ್ತವೆ. ನಾವು ಅಂತಹ ವೆಚ್ಚಗಳ ಕವರೇಜ್ ಅನ್ನು ಆಸ್ಪತ್ರೆ ದಾಖಲಾತಿಯ 15 ದಿನಗಳ ಮೊದಲು ಒದಗಿಸುತ್ತೇವೆ. ನಾವು ಕೋವಿಡ್-19 ಗೆ ಸಂಬಂಧಿಸಿದ ಡಯಾಗ್ನಸ್ಟಿಕ್ಸ್ ವೆಚ್ಚಗಳನ್ನು ಕೂಡ ಕವರ್ ಮಾಡುತ್ತೇವೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ 30 ದಿನಗಳವರೆಗೆ ಉಂಟಾಗುವ ವೈದ್ಯಕೀಯ ವೆಚ್ಚಗಳಿಗೆ ಕವರೇಜ್ ಪಡೆಯಿರಿ.
ನೀವು ಮನೆಯಲ್ಲೇ ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದರೆ, ನಾವು ಆರೋಗ್ಯ ಮೇಲ್ವಿಚಾರಣೆ, ಔಷಧಿ ವೆಚ್ಚಗಳಿಗೆ ಸಂಬಂಧಿಸಿದ ವೈದ್ಯಕೀಯ ಖರ್ಚುಗಳನ್ನು 14 ದಿನಗಳವರೆಗೆ ಕವರ್ ಮಾಡುತ್ತೇವೆ.
ನಾವು ಆಯುರ್ವೇದ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ತರಹದ ಚಿಕಿತ್ಸಾ ವಿಧಾನಗಳನ್ನೂ ಬೆಂಬಲಿಸುತ್ತೇವೆ. ನೀವು ಯಾವ ಚಿಕಿತ್ಸೆ ವಿಧಾನ ಆಯ್ಕೆ ಮಾಡಿದರೂ ಸರಿ, ನಾವು ಯಾವಾಗಲೂ ನಿಮ್ಮ ಸಹಾಯಕ್ಕೆ ನಿಲ್ಲುತ್ತೇವೆ.
ಆಂಬ್ಯುಲೆನ್ಸ್‌ನಲ್ಲಿ ಮನೆಯಿಂದ ಆಸ್ಪತ್ರೆಗೆ ಅಥವಾ ಆಸ್ಪತ್ರೆಯಿಂದ ಮನೆಗೆ ವರ್ಗಾವಣೆಯನ್ನು ಕೂಡ ಕವರ್ ಮಾಡಲಾಗುತ್ತದೆ. ಪ್ರತಿ ಆಸ್ಪತ್ರೆ ದಾಖಲಾತಿಗೆ ನಾವು ₹2000 ಪಾವತಿಸುತ್ತೇವೆ.
ಈಗಿನ ಡಯಾಗ್ನಸ್ಟಿಕ್ಸ್ ಮತ್ತು ಚಿಕಿತ್ಸೆಗೆ ಸಂಬಂಧಪಡದ ಅಥವಾ ಆಕಸ್ಮಿಕವಲ್ಲದ ಡಯಾಗ್ನಸ್ಟಿಕ್ಸ್ ಮತ್ತು ಮೌಲ್ಯಮಾಪನ ಉದ್ದೇಶಗಳಿಗಾಗಿ ಆಸ್ಪತ್ರೆಗೆ ದಾಖಲಾಗುವುದು.
ಬೆಡ್ ರೆಸ್ಟ್, ಮನೆ ಆರೈಕೆ ಅಥವಾ ವೃತ್ತಿಪರ ಮತ್ತು ವೃತ್ತಿಪರವಲ್ಲದ ನರ್ಸಿಂಗ್ ಸೌಲಭ್ಯಕ್ಕೆ ಸಂಬಂಧಿಸಿದ ವೆಚ್ಚಗಳನ್ನು ಕವರ್ ಮಾಡಲಾಗುವುದಿಲ್ಲ.
ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದ ಔಷಧಿಯನ್ನು ಖರೀದಿಸಲು ಮಾಡಿದ ಖರ್ಚುಗಳನ್ನು ಕವರ್ ಮಾಡಲಾಗುವುದಿಲ್ಲ.
ತನ್ನ ಪರಿಣಾಮಕಾರಿತ್ವವನ್ನು ಸಾಬೀತುಪಡಿಸಲು ಗಮನಾರ್ಹ ವೈದ್ಯಕೀಯ ದಾಖಲೆಗಳಿಲ್ಲದ ಯಾವುದೇ ಸಾಬೀತಾಗದ ಚಿಕಿತ್ಸೆ, ಸೇವೆ ಮತ್ತು ಔಷಧಿಗಳಿಗೆ ಸಂಬಂಧಿಸಿದ ವೆಚ್ಚಗಳನ್ನು ನಾವು ಕವರ್ ಮಾಡುವುದಿಲ್ಲ. ಆದಾಗ್ಯೂ, ಕೋವಿಡ್-19 ಚಿಕಿತ್ಸೆಗಾಗಿ ಸರ್ಕಾರದಿಂದ ಪ್ರಮಾಣೀಕರಿಸಲ್ಪಟ್ಟ ಚಿಕಿತ್ಸೆಯನ್ನು ಕವರ್ ಮಾಡಲಾಗುತ್ತದೆ.
ಯುದ್ಧವು ಹಾನಿಕಾರಕ ಮತ್ತು ದುರದೃಷ್ಟಕಾರಿಯಾಗಿರಬಹುದು. ಯುದ್ಧಗಳಿಗೆ ಸಂಬಂಧಿಸಿದ ಯಾವುದೇ ಕ್ಲೇಮ್ ಅನ್ನು ನಮ್ಮ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕವರ್ ಮಾಡುವುದಿಲ್ಲ.
OPD ಚಿಕಿತ್ಸೆಗಳು ಅಥವಾ ಡೇ ಕೇರ್ ಚಿಕಿತ್ಸೆಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳು ಕವರ್ ಆಗುವುದಿಲ್ಲ.
ಇನಾಕ್ಯುಲೇಶನ್, ವ್ಯಾಕ್ಸಿನೇಶನ್ ಅಥವಾ ಇತರ ಮುಂಜಾಗೃತಾ ಚಿಕಿತ್ಸೆಗಳಿಗೆ ಸಂಬಂಧಿಸಿದ ಯಾವುದೇ ವೆಚ್ಚಗಳನ್ನು ಕವರ್ ಮಾಡಲಾಗುವುದಿಲ್ಲ.
ದೇಶದ ಭೌಗೋಳಿಕ ಮಿತಿಗಳ ಹೊರಗೆ ತೆಗೆದುಕೊಳ್ಳಲಾದ ಚಿಕಿತ್ಸೆಗೆ ನಾವು ವೈದ್ಯಕೀಯ ವೆಚ್ಚಗಳನ್ನು ಕವರ್ ಮಾಡುವುದಿಲ್ಲ.
ಸರ್ಕಾರದಿಂದ ಅಧಿಕೃತವಾಗಿಲ್ಲದ ಡಯಾಗ್ನಸ್ಟಿಕ್ ಸೆಂಟರ್‌ನಲ್ಲಿ ಮಾಡಲಾದ ಪರೀಕ್ಷೆಯನ್ನು ಈ ಪಾಲಿಸಿಯ ಅಡಿಯಲ್ಲಿ ಪರಿಗಣಿಸುವುದಿಲ್ಲ.
ಕೋವಿಡ್-19 ಚಿಕಿತ್ಸೆಗಾಗಿ ನೀವು ಆಸ್ಪತ್ರೆಗೆ ದಾಖಲಾಗುವ ದಿನಾಂಕದಿಂದ ಮುಂದಿನ 15 ದಿನಗಳವರೆಗೆ, ಪ್ರತಿ 24 ಗಂಟೆಗಳಿಗೊಮ್ಮೆ ವಿಮಾ ಮೊತ್ತದ 0.5% ಅನ್ನು ಪಡೆಯುತ್ತೀರಿ.
ಕೊರೋನಾ ಕವಚ್ ಪಾಲಿಸಿಗೆ 15 ದಿನಗಳ ಕಾಯುವ ಅವಧಿಯನ್ನು ಸೂಚಿಸಲಾಗಿದೆ.
ಕೊರೋನಾ ಕವಚ್ ಪಾಲಿಸಿ, ಎಚ್‌ಡಿಎಫ್‌ಸಿ ಎರ್ಗೋ UIN: HDFHLIP21078V012021
ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಕೋವಿಡ್-19 ಸಾಂಕ್ರಾಮಿಕವು ಒಂದು ಪರೀಕ್ಷೆ ಎಂದು ಹೇಳಿದರು, ಇದು ಜಾಗತಿಕ ಸವಾಲುಗಳಿಂದ ನಿವಾರಿಸಲು ಅನೇಕ ರೀತಿಯ ಸಹಕಾರದ ಮಾರ್ಗ ತೋರಿಸುತ್ತಿದೆ.
ಮೂಲ: NDTV.com | 24 ನವೆಂಬರ್ 2020 ರಂದು ಪ್ರಕಟಿಸಲಾಗಿದೆ
ಕೊರೋನಾ ವೈರಸ್ ಆಸ್ಪತ್ರೆ ದಾಖಲಾತಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೆಲ್ತ್ ಇನ್ಶೂರೆನ್ಸ್ ಪ್ಲಾನ್ ಕೊರೋನಾ ಕವಚ್ ಸರಿಯಾದ ಅಂಶಗಳನ್ನು ಹೊಂದಿದೆ. ಭಾರತದಾದ್ಯಂತದ ವಿಮಾದಾತರು ಅಂಗೀಕರಿಸಿದ್ದಾರೆ.
ಮೂಲ: TOI | 17 ಅಕ್ಟೋಬರ್ 2020 ರಂದು ಪ್ರಕಟಿಸಲಾಗಿದೆ
ಆಗಾಗ ಕೇಳುವ ಪ್ರಶ್ನೆಗಳು