ಹೋಮ್ / ಟೂ ವೀಲರ್ ಇನ್ಶೂರೆನ್ಸ್ ನವೀಕರಿಸಿ

ಟೂ ವೀಲರ್ ಇನ್ಶೂರೆನ್ಸ್ ನವೀಕರಣ

ಟೂ ವೀಲರ್ ಇನ್ಶೂರೆನ್ಸ್, ಆಕ್ಸಿಡೆಂಟ್‌ನಂತಹ ಅನಿರೀಕ್ಷಿತ ಘಟನೆಗಳಿಂದ ಉಂಟಾಗುವ ಹೊಣೆಗಾರಿಕೆಗಳ ವಿರುದ್ಧ ಕವರೇಜ್ ಒದಗಿಸುತ್ತದೆ. ಗಡುವು ಮುಗಿಯುವ ದಿನಾಂಕಕ್ಕಿಂತ ಮೊದಲು ನಿಮ್ಮ ಪಾಲಿಸಿಯನ್ನು ನವೀಕರಿಸಲು ಸಾಧ್ಯವಾಗದಿದ್ದರೆ ಪಾಲಿಸಿ ರದ್ದಾಗುತ್ತದೆ ಮತ್ತು ಈ ಅವಧಿಯಲ್ಲಿ ಮಾಡಲಾದ ಯಾವುದೇ ಕ್ಲೈಮ್ ಅನ್ನು ತಿರಸ್ಕರಿಸಲಾಗುತ್ತದೆ. ಜೊತೆಗೆ, ಮೋಟಾರ್ ವಾಹನಗಳ ಕಾಯ್ದೆ 1988 ಮತ್ತು ಇತ್ತೀಚೆಗೆ ಜಾರಿಗೆ ಬಂದ ಮೋಟಾರ್ ವಾಹನಗಳ (ತಿದ್ದುಪಡಿ) ಕಾಯ್ದೆ 2019 ರ ಅಡಿಯಲ್ಲಿ ಎಲ್ಲಾ ಟೂ ವೀಲರ್ ಚಾಲಕರು ಸದಾ ಕಾಲ ಊರ್ಜಿತ ಟೂ ವೀಲರ್ ಇನ್ಶೂರೆನ್ಸ್ ಹೊಂದಿರತಕ್ಕದ್ದು ಕಡ್ಡಾಯವಾಗಿದೆ.

ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್ ಅನ್ನು ಏಕೆ ನವೀಕರಿಸಬೇಕು?

ಎಲ್ಲಾ ಟೂ ವೀಲರ್ ಚಾಲಕರು ಸದಾಕಾಲ ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿ ಹೊಂದಿರತಕ್ಕದ್ದು ಕಾನೂನಿನ ಪ್ರಕಾರ ಕಡ್ಡಾಯವಾಗಿದೆ.. ನಿಮ್ಮ ಇನ್ಶೂರೆನ್ಸ್ ನವೀಕರಿಸದೇ ಇರುವುದು ಒಂದು ದುಬಾರಿ ತಪ್ಪಾಗಬಲ್ಲದು. ಆಕ್ಸಿಡೆಂಟ್ ಸಂದರ್ಭದಲ್ಲಿ ನಿಮ್ಮ ಬಳಿ ಮಾನ್ಯವಾದ ಟೂ ವೀಲರ್ ಇನ್ಶೂರೆನ್ಸ್ ಇಲ್ಲದಿದ್ದರೆ, ಥರ್ಡ್ ಪಾರ್ಟಿಗೆ ಆದ ಯಾವುದೇ ಶಾರೀರಿಕ ಗಾಯ ಅಥವಾ ಯಾವುದೇ ಆಸ್ತಿಹಾನಿಗೆ ಸಂಬಂಧಿಸಿದ ವೆಚ್ಚಗಳನ್ನು ನೀವು ನಿಮ್ಮ ಜೇಬಿನಿಂದ ಥರ್ಡ್ ಪಾರ್ಟಿಗೆ ಪಾವತಿಸಬೇಕಾಗುತ್ತದೆ. ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ನವೀಕರಿಸುವ ಸೌಲಭ್ಯದಿಂದಾಗಿ, ಗಡುವು ದಿನಾಂಕಕ್ಕಿಂತ ಮುಂಚೆ ನಿಮ್ಮ ಪಾಲಿಸಿಯನ್ನು ನವೀಕರಿಸುವುದು ಇನ್ನಷ್ಟು ಅನುಕೂಲಕರ ಮತ್ತು ಸುಲಭವಾಗಿದೆ.

  • ದಯವಿಟ್ಟು ಗಮನಿಸಿ: ಇತ್ತೀಚೆಗೆ ಜಾರಿಯಾದ ಮೋಟಾರ್ ವಾಹನಗಳ (ತಿದ್ದುಪಡಿ) ಕಾಯಿದೆ 2019 ರ ಪ್ರಕಾರ, ಇನ್ಶೂರೆನ್ಸ್ ಮಾಡಿಸದ ಟೂ ವೀಲರ್ ಓಡಿಸಿದರೆ, ನಿಮಗೆ ₹ 2,000 ದಂಡ ಅಥವಾ 3 ತಿಂಗಳ ಜೈಲುಶಿಕ್ಷೆ ವಿಧಿಸಲಾಗುತ್ತದೆ.
  • ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳನ್ನು ಆನ್ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು, ಇದರಿಂದ ನಿಮ್ಮ ಸಮಯ ಮತ್ತು ಶ್ರಮ ಉಳಿಯುತ್ತದೆ.
  • ನೀವು ಯಾವಾಗಲೂ ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು ಗಡುವಿನ ದಿನಾಂಕಕ್ಕಿಂತ ಮೊದಲೇ ನವೀಕರಿಸಲು ಪ್ರಯತ್ನಿಸಬೇಕು, ಒಂದು ವೇಳೆ ನೀವು ಪಾಲಿಸಿಯನ್ನು ನವೀಕರಿಸಲು ವಿಫಲವಾದರೆ, ಅದು ಲ್ಯಾಪ್ಸ್ ಆಗುತ್ತದೆ ಮತ್ತು ಈ ಅವಧಿಯಲ್ಲಿ ಮಾಡಲಾದ ಯಾವುದೇ ಕ್ಲೈಮ್‌ಗಳನ್ನು ವಿಮಾದಾತರು ತಿರಸ್ಕರಿಸುತ್ತಾರೆ.
  • ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಯು 90 ದಿನಗಳಿಗಿಂತ ಹೆಚ್ಚು ಕಾಲ ಲ್ಯಾಪ್ಸ್ ಆದ ಸ್ಥಿತಿಯಲ್ಲಿದ್ದರೆ ನೀವು ನಿಮ್ಮ ನೋ ಕ್ಲೈಮ್ ಬೋನಸ್ ಕಳೆದುಕೊಳ್ಳುತ್ತೀರಿ.

ನಮ್ಮ ಟೂ ವೀಲರ್ ಇನ್ಶೂರೆನ್ಸ್ ಪ್ಲಾನ್‌ಗಳು

ಒಂದು ವರ್ಷದ ಸಮಗ್ರ ಇನ್ಶೂರೆನ್ಸ್
ಒಂದು ವರ್ಷದ ಸಮಗ್ರ ಇನ್ಶೂರೆನ್ಸ್
  • ಈ ಇನ್ಶೂರೆನ್ಸ್ ನಿಮ್ಮ ಸವಾರಿಯನ್ನು ಒಟ್ಟು 1 ವರ್ಷಗಳವರೆಗೆ ರಕ್ಷಿಸುತ್ತದೆ. ಕಳ್ಳತನ, ಆಕ್ಸಿಡೆಂಟ್ ಅಥವಾ ವಿಕೋಪದಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಇದು ಕವರ್ ಮಾಡುತ್ತದೆ.

ಸ್ಟ್ಯಾಂಡ್‌ಅಲೋನ್ ಮೋಟಾರ್ ಓನ್ ಡ್ಯಾಮೇಜ್ ಕವರ್ - ಟೂ ವೀಲರ್
ಸ್ಟ್ಯಾಂಡ್‌ಅಲೋನ್ ಮೋಟಾರ್ ಓನ್ ಡ್ಯಾಮೇಜ್ ಕವರ್ - ಟೂ ವೀಲರ್
  • ನಿಮ್ಮ ಬೈಕ್ ಅಥವಾ ಸ್ಕೂಟರ್‌ಗೆ ಮಾತ್ರ ಅಗತ್ಯವಿರುವ ಸ್ವಂತ ಹಾನಿ ಕವರ್‌ನ ಹುಡುಕಾಟ ಇಲ್ಲಿಗೆ ಕೊನೆಯಾಗುತ್ತದೆ.
ದೀರ್ಘಾವಧಿಯ ಸಮಗ್ರ ಇನ್ಶೂರೆನ್ಸ್
ದೀರ್ಘಾವಧಿಯ ಸಮಗ್ರ ಇನ್ಶೂರೆನ್ಸ್
  • ಈ ಇನ್ಶೂರೆನ್ಸ್ ನಿಮ್ಮ ರೈಡ್ ಅನ್ನು 5 ವರ್ಷಗಳವರೆಗೆ ಸಂಪೂರ್ಣವಾಗಿ ರಕ್ಷಿಸುತ್ತದೆ. ಇದು ಕಳ್ಳತನ, ಆಕ್ಸಿಡೆಂಟ್ ಅಥವಾ ವಿಕೋಪದಿಂದ ನಿಮ್ಮ ವಾಹನಕ್ಕೆ ಉಂಟಾದ ಹಾನಿಯನ್ನು ಕವರ್ ಮಾಡುತ್ತದೆ.
ಟೂ ವೀಲರ್ ಲಯಬಿಲಿಟಿ ಓನ್ಲಿ ಇನ್ಶೂರೆನ್ಸ್
ಟೂ ವೀಲರ್ ಲಯಬಿಲಿಟಿ ಓನ್ಲಿ ಇನ್ಶೂರೆನ್ಸ್
  • ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಉಂಟಾದ ಹಾನಿಗಳು ಅಥವಾ ಗಾಯಗಳನ್ನು ಇನ್ಶೂರ್ ಮಾಡಲು ಈ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಕವರ್ ಪಡೆಯಿರಿ.

ಆ್ಯಡ್ ಆನ್ ಕವರ್‌ಗಳು

ಶೂನ್ಯ ಸವಕಳಿ ಕವರ್
ಜೀರೋ ಡಿಪ್ರಿಸಿಯೇಶನ್ ಕವರ್ ಮೂಲಕ ಸಂಪೂರ್ಣ ಮೊತ್ತವನ್ನು ಪಡೆಯಿರಿ!

ಸಾಮಾನ್ಯವಾಗಿ, ಇನ್ಶೂರೆನ್ಸ್ ಪಾಲಿಸಿಗಳು ಡಿಪ್ರಿಸಿಯೇಶನ್ ಕಡಿತದ ನಂತರ ಕ್ಲೈಮ್ ಮೊತ್ತವನ್ನು ಕವರ್ ಮಾಡುತ್ತವೆ. ಆದರೆ, ಜೀರೋ-ಡಿಪ್ರಿಸಿಯೇಶನ್ ಕವರ್‌ನಲ್ಲಿ, ಯಾವುದೇ ಕಡಿತಗಳನ್ನು ಮಾಡಲಾಗುವುದಿಲ್ಲ ಮತ್ತು ಸಂಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ! ಆದರೆ ಬ್ಯಾಟರಿ ವೆಚ್ಚಗಳು ಮತ್ತು ಟೈರ್‌ಗಳು ಜೀರೋ ಡಿಪ್ರಿಸಿಯೇಶನ್ ಕವರ್ ಅಡಿಯಲ್ಲಿ ಬರುವುದಿಲ್ಲ.


ಇದು ಹೇಗೆ ಕೆಲಸ ಮಾಡುತ್ತದೆ?:ಒಂದು ವೇಳೆ ನಿಮ್ಮ ಕಾರ್‌ಗೆ ಹಾನಿಯಾಗಿದ್ದು, ಕ್ಲೈಮ್ ಮೊತ್ತ ₹15,000 ಆಗಿದ್ದರೆ, ಅದರಲ್ಲಿ ಪಾಲಿಸಿ ಹೆಚ್ಚುವರಿ/ಕಡಿತವನ್ನು ಹೊರತುಪಡಿಸಿ ₹7000 ಡಿಪ್ರಿಸಿಯೇಶನ್ ಪಾವತಿಸಬೇಕು ಎಂದು ಇನ್ಶೂರೆನ್ಸ್ ಕಂಪನಿ ಹೇಳುತ್ತದೆ. ನೀವು ಈ ಆ್ಯಡ್-ಆನ್ ಕವರ್ ಖರೀದಿಸಿದರೆ, ಇನ್ಶೂರೆನ್ಸ್ ಕಂಪನಿಯು ಸಂಪೂರ್ಣ ಮೊತ್ತವನ್ನು ಪಾವತಿಸುತ್ತದೆ. ಆದಾಗ್ಯೂ, ಪಾಲಿಸಿ ಹೆಚ್ಚುವರಿ/ಕಡಿತಗೊಳಿಸಬಹುದಾದ ಮೊತ್ತವನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ, ಇದು ಅತ್ಯಂತ ಕಡಿಮೆಯಿರುತ್ತದೆ.
ತುರ್ತು ಸಹಾಯ ಕವರ್
ನಾವು ನಿಮ್ಮನ್ನು ಸುರಕ್ಷಿತವಾಗಿಸಿದ್ದೇವೆ.!

ತುರ್ತು ಬ್ರೇಕ್‌ಡೌನ್ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ, ನಾವು ಸದಾಕಾಲ ನಿಮಗೆ ಸಹಾಯ ಮಾಡುತ್ತೇವೆ. ಹಾನಿಯಾದ ಸ್ಥಳದಲ್ಲಿ ಸಣ್ಣ ರಿಪೇರಿ, ಕೀ ಕಳೆದುಹೋದಾಗ ಸಹಾಯ, ನಕಲಿ ಕೀ ಸಮಸ್ಯೆ, ಟೈರ್ ಬದಲಾವಣೆ, ಬ್ಯಾಟರಿ ಜಂಪ್ ಸ್ಟಾರ್ಟ್‌, ಇಂಧನ ಟ್ಯಾಂಕ್ ಖಾಲಿಯಾಗುವುದು ಮತ್ತು ಟೋವಿಂಗ್ ಶುಲ್ಕಗಳು ಈ ತುರ್ತು ಸಹಾಯ ಕವರ್‌ನಲ್ಲಿ ಸೇರಿವೆ.!


ಇದು ಹೇಗೆ ಕೆಲಸ ಮಾಡುತ್ತದೆ?:ಈ ಆ್ಯಡ್ ಆನ್ ಕವರ್, ನಿಮಗೆ ಹಲವಾರು ಪ್ರಯೋಜನಗಳನ್ನು ಒದಗಿಸುತ್ತದೆ. ಉದಾಹರಣೆಗೆ, ನೀವು ನಿಮ್ಮ ವಾಹನ ಓಡಿಸುವಾಗ ಅದಕ್ಕೆ ಹಾನಿ ಉಂಟಾದರೆ, ಅದನ್ನು ಗ್ಯಾರೇಜ್‌ಗೆ ಸಾಗಿಸಬೇಕಾಗುತ್ತದೆ. ಈ ಆ್ಯಡ್ ಆನ್ ಕವರ್‌ನೊಂದಿಗೆ, ಅಂತಹ ಸಂದರ್ಭದಲ್ಲಿ ನೀವು ವಿಮಾದಾತರಿಗೆ ಕರೆ ಮಾಡಿದರೆ, ನಿಮ್ಮ ಘೋಷಿತ ನೋಂದಾಯಿತ ವಿಳಾಸದಿಂದ 100 ಕಿ.ಮೀ. ವ್ಯಾಪ್ತಿಯಲ್ಲಿರುವ ಯಾವುದೇ ಗ್ಯಾರೇಜ್‌ಗೆ ನಿಮ್ಮ ವಾಹನವನ್ನು ಟೋವಿಂಗ್ ಮಾಡಲಾಗುತ್ತದೆ.
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಸುರಕ್ಷಿತ 1.5+ ಕೋಟಿ ನಗು!@

ನಮ್ಮ ಗ್ರಾಹಕರ ಬಳಗದ ಕಡೆ ಒಮ್ಮೆ ಕಣ್ಣು ಹಾಯಿಸಿ ಮತ್ತು 1.5 ಕೋಟಿಗೂ ಹೆಚ್ಚು ನಗುಮುಖಗಳನ್ನು ನೋಡಿ ನೀವೇ ನಿಬ್ಬೆರಗಾಗುತ್ತೀರಿ! IAAA ಮತ್ತು ICRA ರೇಟಿಂಗ್‌ಗಳು ಸೇರಿದಂತೆ ನಾವು ಪಡೆದ ಅನೇಕ ಪ್ರಶಸ್ತಿಗಳು, ನಮ್ಮ ವಿಶ್ವಾಸಾರ್ಹತೆ, ನಂಬಿಕೆ ಮತ್ತು ಗರಿಷ್ಠ ಕ್ಲೇಮ್ ಪಾವತಿ ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತವೆ.!
why-hdfc-ergo
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಮನೆಬಾಗಿಲಿನಲ್ಲಿ ಟೂ ವೀಲರ್ ರಿಪೇರಿಗಳು°

ನಕ್ಷತ್ರಗಳು ಹೊಳೆಯಲು ನಿರಾಕರಿಸಬಹುದು, ಆದರೆ ನಾವು ಎಂದಿಗೂ ರಿಪೇರಿಯನ್ನು ನಿರಾಕರಿಸುವುದಿಲ್ಲ.! ನಾವು ಯಾವುದೇ ತೊಂದರೆಯಿಲ್ಲದೆ ಬೆಳಗಿನಿಂದ ರಾತ್ರಿಯವರೆಗೆ ಸಣ್ಣ ಅಪಘಾತದ ಹಾನಿಗಳನ್ನು ದುರಸ್ತಿ ಮಾಡುತ್ತೇವೆ.. ನೀವು ನಮ್ಮನ್ನು ಸಂಪರ್ಕಿಸಬಹುದು; ನಾವು ನಿಮ್ಮ ಟೂ ವೀಲರ್ ಅನ್ನು ಕೊಂಡೊಯ್ದು, ರಿಪೇರಿ ಮಾಡಿ ಮತ್ತು ಅದನ್ನು ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತೇವೆ. ಸದ್ಯಕ್ಕೆ 3 ನಗರಗಳಲ್ಲಿ ನಾವು ಈ ಸೇವೆಗಳನ್ನು ಒದಗಿಸುತ್ತೇವೆ!
why-hdfc-ergo
why-hdfc-ergo
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಅತ್ಯುತ್ತಮ ಪಾರದರ್ಶಕತೆ

ಪಾರದರ್ಶಕತೆಯೇ ನಮ್ಮ ಟ್ರಾನ್ಸಾಕ್ಷನ್‌ಗಳ ಮೂಲಾಧಾರ. ನಾವು ನಿಮಗೆ ಖಂಡಿತವಾಗಿಯೂ ತಡೆರಹಿತ ಕ್ಲೇಮ್ ಪ್ರಕ್ರಿಯೆಯನ್ನು ಒದಗಿಸುತ್ತೇವೆ.. 100% ಕ್ಲೈಮ್ ಸೆಟಲ್ಮೆಂಟ್ ಅನುಪಾತದೊಂದಿಗೆ^ QR ಕೋಡ್ ಮೂಲಕ ಆನ್ಲೈನ್ ಕ್ಲೈಮ್ ಮಾಹಿತಿಯೊಂದಿಗೆ ನಾವು ಎಲ್ಲೆಡೆಯೂ ಗ್ರಾಹಕರ ನಗುವನ್ನು ಗೆಲ್ಲುತ್ತಿದ್ದೇವೆ.
why-hdfc-ergo
why-hdfc-ergo
why-hdfc-ergo
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ನಿಮಗೆ ಬೇಕಾದ ಎಲ್ಲಾ ಬೆಂಬಲ - 24x7

ಪ್ರತಿ ದಿನ, ಪ್ರತಿ ವಾರ, ನಿಮಗೆ ಅಗತ್ಯ ಬಂದಾಗಲೆಲ್ಲಾ ತೊಂದರೆ-ರಹಿತ ಬೆಂಬಲ ಪಡೆಯಿರಿ! ನಮ್ಮ ವಿಶೇಷ ಆಂತರಿಕ ಕ್ಲೈಮ್ ತಂಡ ಮತ್ತು ಗ್ರಾಹಕ ಸೇವೆ ಮೂಲಕ, ಪ್ರತಿಯೊಂದು ಕರೆಗೂ ತಪ್ಪದೇ ಉತ್ತರಿಸುತ್ತೇವೆ. ಅದ್ಭುತ ಅಲ್ಲವೇ? ನಡುರಾತ್ರಿಯಲ್ಲೂ ನಿಮ್ಮ ಬೆಂಬಲಕ್ಕೆ ಒಬ್ಬರು ನಿಲ್ಲುತ್ತಾರೆ ಎಂಬುದು ಎಷ್ಟು ಒಳ್ಳೆಯ ವಿಷಯ ಅಲ್ಲವೇ?
why-hdfc-ergo
why-hdfc-ergo
why-hdfc-ergo
why-hdfc-ergo
why-hdfc-ergo
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?

ಕಾಗದರಹಿತ! ತಡೆರಹಿತ!

ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಎಲ್ಲಾ ಕೆಲಸಗಳನ್ನೂ ಪೇಪರ್‌ಲೆಸ್ ಮಾಡಿರುವಾಗ ಕಂತೆಕಂತೆ ಡಾಕ್ಯುಮೆಂಟ್‌ಗಳನ್ನು ಹೊತ್ತೊಯ್ಯುವ ಚಿಂತೆ ಯಾಕೆ? ಆನ್ಲೈನ್ ಟ್ರಾನ್ಸಾಕ್ಷನ್‌ಗಳು ನಿಮ್ಮ ಬೇರೆ ಕೆಲಸಗಳಿಗೆ ಅಡ್ಡಿಪಡಿಸುವುದಿಲ್ಲ! 'ಎಚ್‌ಡಿಎಫ್‌ಸಿ ಎರ್ಗೋ'ಗೆ ನಿಮ್ಮ ಸಮಯ ಬಹಳ ಅಮೂಲ್ಯ!
ಎಚ್‌ಡಿಎಫ್‌ಸಿ ಎರ್ಗೋ ಯಾಕೆ?
why-hdfc-ergo

ಸುರಕ್ಷಿತ 1.5+ ಕೋಟಿ ನಗು!@

ನಮ್ಮ ಗ್ರಾಹಕರ ಬಳಗದ ಕಡೆ ಒಮ್ಮೆ ಕಣ್ಣು ಹಾಯಿಸಿ. 1 ಕೋಟಿಗೂ ಹೆಚ್ಚು ನಗುಮುಖಗಳನ್ನು ನೋಡಿ ನೀವೇ ನಿಬ್ಬೆರಗಾಗುತ್ತೀರಿ! IAAA ಮತ್ತು ICRA ರೇಟಿಂಗ್‌ಗಳು ಸೇರಿದಂತೆ ನಾವು ಪಡೆದ ಅನೇಕ ಪ್ರಶಸ್ತಿಗಳು, ನಮ್ಮ ವಿಶ್ವಾಸಾರ್ಹತೆ, ನಂಬಿಕೆ ಮತ್ತು ಗರಿಷ್ಠ ಕ್ಲೇಮ್ ಪಾವತಿ ಸಾಮರ್ಥ್ಯಗಳ ಬಗ್ಗೆ ಮಾತನಾಡುತ್ತವೆ.!
why-hdfc-ergo

ಮನೆಬಾಗಿಲಿನಲ್ಲಿ ಟೂ ವೀಲರ್ ರಿಪೇರಿಗಳು°

ನಕ್ಷತ್ರಗಳು ಹೊಳೆಯಲು ನಿರಾಕರಿಸಬಹುದು, ಆದರೆ ನಾವು ಎಂದಿಗೂ ರಿಪೇರಿಯನ್ನು ನಿರಾಕರಿಸುವುದಿಲ್ಲ.! ನಾವು ಯಾವುದೇ ತೊಂದರೆಯಿಲ್ಲದೆ ಬೆಳಗಿನಿಂದ ರಾತ್ರಿಯವರೆಗೆ ಸಣ್ಣ ಅಪಘಾತದ ಹಾನಿಗಳನ್ನು ದುರಸ್ತಿ ಮಾಡುತ್ತೇವೆ.. ನೀವು ನಮ್ಮನ್ನು ಸಂಪರ್ಕಿಸಬಹುದು; ನಾವು ನಿಮ್ಮ ಟೂ ವೀಲರ್ ಅನ್ನು ಕೊಂಡೊಯ್ದು, ರಿಪೇರಿ ಮಾಡಿ ಮತ್ತು ಅದನ್ನು ನಿಮ್ಮ ಮನೆಬಾಗಿಲಿಗೆ ತಲುಪಿಸುತ್ತೇವೆ. ಸದ್ಯಕ್ಕೆ 3 ನಗರಗಳಲ್ಲಿ ನಾವು ಈ ಸೇವೆಗಳನ್ನು ಒದಗಿಸುತ್ತೇವೆ!
why-hdfc-ergo

ಅತ್ಯುತ್ತಮ ಪಾರದರ್ಶಕತೆ

ಪಾರದರ್ಶಕತೆಯೇ ನಮ್ಮ ಟ್ರಾನ್ಸಾಕ್ಷನ್‌ಗಳ ಮೂಲಾಧಾರ. ನಾವು ನಿಮಗೆ ಖಂಡಿತವಾಗಿಯೂ ತಡೆರಹಿತ ಕ್ಲೇಮ್ ಪ್ರಕ್ರಿಯೆಯನ್ನು ಒದಗಿಸುತ್ತೇವೆ.. 100% ಕ್ಲೈಮ್ ಸೆಟಲ್ಮೆಂಟ್ ಅನುಪಾತದೊಂದಿಗೆ^ ನಾವು ಎಲ್ಲೆಡೆಯೂ ಗ್ರಾಹಕರ ನಗುವನ್ನು ಗೆಲ್ಲುತ್ತಿದ್ದೇವೆ.
why-hdfc-ergo

ನಿಮಗೆ ಬೇಕಾದ ಎಲ್ಲಾ ಬೆಂಬಲ - 24 x 7!

ಪ್ರತಿ ದಿನ, ಪ್ರತಿ ವಾರ, ನಿಮಗೆ ಅಗತ್ಯ ಬಂದಾಗಲೆಲ್ಲಾ ತೊಂದರೆ-ರಹಿತ ಬೆಂಬಲ ಪಡೆಯಿರಿ! ನಮ್ಮ ಸಮರ್ಪಿತ ಆಂತರಿಕ ಕ್ಲೈಮ್ ತಂಡ ಮತ್ತು ಗ್ರಾಹಕ ಸೇವೆ ಮೂಲಕ, ಪ್ರತಿಯೊಂದು ವಿಚಾರಣೆಗೂ ತಪ್ಪದೇ ಪ್ರತಿಕ್ರಿಯೆ ನೀಡುತ್ತೇವೆ. ನಡುರಾತ್ರಿಯಲ್ಲೂ ನಿಮ್ಮ ಬೆಂಬಲಕ್ಕೆ ಒಬ್ಬರು ನಿಲ್ಲುತ್ತಾರೆ ಎಂಬುದು ಎಷ್ಟು ಒಳ್ಳೆಯ ವಿಷಯ ಅಲ್ಲವೇ?
why-hdfc-ergo

ಕಾಗದರಹಿತ! ತಡೆರಹಿತ!

ಎಚ್‌ಡಿಎಫ್‌ಸಿ ಎರ್ಗೋ ನಿಮ್ಮ ಎಲ್ಲಾ ಕೆಲಸಗಳನ್ನೂ ಪೇಪರ್‌ಲೆಸ್ ಮಾಡಿರುವಾಗ ಕಂತೆಕಂತೆ ಡಾಕ್ಯುಮೆಂಟ್‌ಗಳನ್ನು ಹೊತ್ತೊಯ್ಯುವ ಚಿಂತೆ ಯಾಕೆ? ಆನ್ಲೈನ್ ಟ್ರಾನ್ಸಾಕ್ಷನ್‌ಗಳು ನಿಮ್ಮ ಬೇರೆ ಕೆಲಸಗಳಿಗೆ ಅಡ್ಡಿಪಡಿಸುವುದಿಲ್ಲ! 'ಎಚ್‌ಡಿಎಫ್‌ಸಿ ಎರ್ಗೋ'ಗೆ ನಿಮ್ಮ ಸಮಯ ಬಹಳ ಅಮೂಲ್ಯ!

ಆಗಾಗ ಕೇಳುವ ಪ್ರಶ್ನೆಗಳು

ಟೂ ವೀಲರ್ ಇನ್ಶೂರೆನ್ಸ್, ಥರ್ಡ್ ಪಾರ್ಟಿಗೆ ಉಂಟಾದ ಹಾನಿ, ನೈಸರ್ಗಿಕ ವಿಕೋಪಗಳು ಮತ್ತು ಮನುಷ್ಯನಿಂದಾದ ಅವಘಡಗಳಿಂದ ಸಂಭವಿಸುವ ಹಾನಿಯ ವಿರುದ್ಧ ಇನ್ಶೂರೆನ್ಸ್ ಕವರೇಜ್ ಒದಗಿಸುತ್ತದೆ. ಇನ್ಶೂರೆನ್ಸ್ ಇಲ್ಲದೆ ನಿಮ್ಮ ಟೂ ವೀಲರ್ ಅನ್ನು ಮೂಲ ಸ್ಥಿತಿಗೆ ತರಲು ತುಂಬಾ ಖರ್ಚಾಗುತ್ತದೆ. ಜೊತೆಗೆ ಮೋಟಾರ್ ವಾಹನಗಳ ಕಾಯ್ದೆ 1988 ಮತ್ತು ಇತ್ತೀಚೆಗೆ ಜಾರಿಯಾದ ಮೋಟಾರ್ ವಾಹನಗಳ (ತಿದ್ದುಪಡಿ) ಕಾಯ್ದೆ 2019 ಅಡಿಯಲ್ಲಿ ಎಲ್ಲಾ ಟೂ ವೀಲರ್ ಚಾಲಕರೂ ಸದಾಕಾಲ ಊರ್ಜಿತ ಟೂ ವೀಲರ್ ಇನ್ಶೂರೆನ್ಸ್ ಹೊಂದಿರುವುದು ಕಡ್ಡಾಯವಾಗಿದೆ.
ಆನ್ಲೈನ್‌ನಲ್ಲಿ ನಿಮ್ಮ ಟೂ ವೀಲರ್ ಇನ್ಶೂರೆನ್ಸ್ ನವೀಕರಿಸುವುದು ತುಂಬಾ ಸುಲಭ. ನೀವು ಪಾಲಿಸಬೇಕಾದ ಹಂತಗಳು ಹೀಗಿವೆ
  • ನಿಮ್ಮ ಅಕೌಂಟಿಗೆ ಲಾಗಿನ್ ಮಾಡಿ
  • ನಿಮ್ಮ ವಿವರಗಳನ್ನು ನಮೂದಿಸಿ
  • ನೀವು ಬಯಸುವ ಯಾವುದೇ ಆ್ಯಡ್-ಆನ್‌ಗಳನ್ನು ಆಯ್ಕೆಮಾಡಿ ಮತ್ತು
  • ಪಾವತಿ ಮಾಡಿ
ಪರ್ಸನಲ್ ಆಕ್ಸಿಡೆಂಟ್ ಇನ್ಶೂರೆನ್ಸ್ ಎಂಬ ಪ್ಲಾನ್‌ನಲ್ಲಿ, ಆಕ್ಸಿಡೆಂಟ್ ಮೂಲಕ ಪಾಲಿಸಿದಾರರ ಸಾವು ಅಥವಾ ಶಾಶ್ವತ ಅಂಗವಿಕಲತೆ ಉಂಟಾದಾಗ ವಿಮಾದಾತರು ಪಾಲಿಸಿದಾರರ ಅವಲಂಬಿತರಿಗೆ ಹಣಕಾಸು ಪರಿಹಾರ ಒದಗಿಸುತ್ತಾರೆ.. IRDAI ಅಡಿಯಲ್ಲಿ ಈ ವಿಮೆಯು ಕಡ್ಡಾಯವಾಗಿದೆ. ಕೆಲವು ನಿರ್ದಿಷ್ಟ ಸಂದರ್ಭಗಳನ್ನು ಹೊರತುಪಡಿಸಿ, ಮಾಲೀಕ-ಚಾಲಕರು ಕನಿಷ್ಠ ₹15 ಲಕ್ಷಗಳ PA ಇನ್ಶೂರೆನ್ಸ್ ಹೊಂದಿರಬೇಕಾದ್ದು ಕಡ್ಡಾಯ. ಈ ಕವರ್ ಅನ್ನು ಆಯ್ಕೆ ಮಾಡದ ಮೂಲಕ, ನೀವು ಅಸ್ತಿತ್ವದಲ್ಲಿರುವ PA ಕವರ್ ಹೊಂದಿದ್ದೀರಿ ಅಥವಾ ನೀವು ಮಾನ್ಯವಾದ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಈ ಘೋಷಣೆಯು ನಿಜವಲ್ಲ ಎಂದು ಕಂಡುಬಂದರೆ, ಕಂಪನಿಯು "ಓನ್ ಡ್ಯಾಮೇಜ್ ಮತ್ತು/ಅಥವಾ PA" ಗೆ ಸಂಬಂಧಿಸಿದ ಕ್ಲೇಮ್ ಅನ್ನು ತಿರಸ್ಕರಿಸಬಹುದು
ನಿಮ್ಮ ಗಡುವು ಮುಗಿದ ಪಾಲಿಸಿಯನ್ನು ಆನ್ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ಇದಕ್ಕೆ ಯಾವುದೇ ತಪಾಸಣೆ ಅಗತ್ಯವಿಲ್ಲ. ಲಾಗಿನ್ ಆಗಿ, ನಿಮ್ಮ ಪಾಲಿಸಿ ವಿವರಗಳನ್ನು ಭರ್ತಿ ಮಾಡಿದರೆ ಸಾಕು.. ಭರ್ತಿ ಮಾಡಿದ ನಂತರ, ನವೀಕರಣದ ಪ್ರೀಮಿಯಂ ಬಗ್ಗೆ ನಿಮ್ಮ ಇನ್ಶೂರರ್ ನಿಮಗೆ ತಿಳಿಸುತ್ತಾರೆ. ಪಾವತಿ ಮಾಡಿದ ನಂತರ, ಕೆಲವೇ ನಿಮಿಷಗಳಲ್ಲಿ ನೀವು ನಿಮ್ಮ ಪಾಲಿಸಿ ಕಾಪಿಯನ್ನು ಸ್ವೀಕರಿಸುತ್ತೀರಿ.
ನೀವು ನಿಮ್ಮ ಟೂ ವೀಲರ್ ಪಾಲಿಸಿಯ ಗಡುವು ದಿನಾಂಕ ತಿಳಿದುಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಅದು ಗಡುವಿನ ದಿನಾಂಕಕ್ಕಿಂತ ಮುಂಚೆಯೇ ನಿಮ್ಮ ಪಾಲಿಸಿಯನ್ನು ನವೀಕರಿಸಲು ನೆರವಾಗುತ್ತದೆ. ಪಾಲಿಸಿಯ ಗಡುವು ದಿನಾಂಕ ತಿಳಿದುಕೊಳ್ಳಲು ನಿಮ್ಮ ಇನ್ಶೂರೆನ್ಸ್ ಅಕೌಂಟ್‌ಗೆ ಲಾಗಿನ್ ಆಗಿ, ಪಾಲಿಸಿ ವಿವರಗಳನ್ನು ನೋಡಬಹುದು ಅಥವಾ ಕಾಲ್ ಸೆಂಟರ್‌ಗೆ ಕರೆ ಮಾಡಿ ನಿಮ್ಮ ಪಾಲಿಸಿ ವಿವರಗಳನ್ನು ಕೇಳಬಹುದು
ಹೌದು, ಖಂಡಿತ. ಜೊತೆಗೆ, ಆನ್ಲೈನ್ ನವೀಕರಣಕ್ಕೆ ಯಾವುದೇ ತಪಾಸಣೆ ಅಗತ್ಯವಿಲ್ಲ.

ನೀವು ಗಡುವು ದಿನಾಂಕಕ್ಕಿಂತ ಮುಂಚೆ ನಿಮ್ಮ ಪಾಲಿಸಿಯನ್ನು ನವೀಕರಿಸದಿದ್ದರೆ, ಟೂ ವೀಲರ್ ಇನ್ಶೂರೆನ್ಸ್ ಕವರ್‌ನ ಗಡುವು ಮುಗಿಯುತ್ತದೆ ಮತ್ತು ಗಡುವು ಮುಗಿದ ಅವಧಿಯಲ್ಲಿ ಮಾಡಲಾದ ಯಾವುದೇ ಕ್ಲೇಮ್ ಅನ್ನು ನಿಮ್ಮ ಇನ್ಶೂರರ್ ತಿರಸ್ಕರಿಸಬಹುದು. ಜೊತೆಗೆ, 90 ದಿನಗಳಿಗಿಂತ ಹೆಚ್ಚು ಕಾಲ ಇನ್ಶೂರೆನ್ಸ್ ನವೀಕರಣ ಮಾಡದಿದ್ದರೆ, ನೀವು ನಿಮ್ಮ ನೋ ಕ್ಲೈಮ್ ಬೋನಸ್ ಕಳೆದುಕೊಳ್ಳುತ್ತೀರಿ.

ಟೂ ವೀಲರ್ ಇನ್ಶೂರೆನ್ಸ್ ಪ್ರೀಮಿಯಂ ಮೇಲೆ ಪರಿಣಾಮ ಬೀರುವ ಅಂಶಗಳು
  • ಮಾಡೆಲ್ ಮತ್ತು ಮೇಕಿಂಗ್
  • ಉತ್ಪಾದನೆಯ ವರ್ಷ
  • ಎಂಜಿನ್ ಸಾಮರ್ಥ್ಯ
  • ಭೌಗೋಳಿಕ ಸ್ಥಳ
  • ನೋ ಕ್ಲೇಮ್ ಬೋನಸ್ &
  • ಸ್ವಯಂ ಕಳೆಯಬಹುದಾದುದು
ಒಂದು ವೇಳೆ ನೀವು ನಿಮ್ಮ ಇನ್ಶೂರೆನ್ಸ್ ಪಾಲಿಸಿಯನ್ನು 90 ದಿನಗಳಲ್ಲೂ ನವೀಕರಿಸದಿದ್ದರೆ, ನಿಮ್ಮ ಸಂಗ್ರಹವಾದ ನೋ ಕ್ಲೈಮ್ ಬೋನಸ್ ಅನ್ನು ನೀವು ಕಳೆದುಕೊಳ್ಳುತ್ತೀರಿ. ಪ್ರತಿ ಪಾಲಿಸಿ ವರ್ಷದ ಕೊನೆಯಲ್ಲಿ ಸಂಚಿತವಾದ ಬೋನಸ್ ಈ ಕೆಳಗಿನಂತಿರುತ್ತದೆ. ವಿವರಗಳು ರಿಯಾಯಿತಿ ಕ್ಲೈಮ್-ರಹಿತ ಹಿಂದಿನ 1 ವರ್ಷ 20% ಕ್ಲೈಮ್-ರಹಿತ ಹಿಂದಿನ 2 ವರ್ಷ 25% ಕ್ಲೈಮ್-ರಹಿತ ಹಿಂದಿನ 3 ವರ್ಷ 35% ಕ್ಲೈಮ್-ರಹಿತ ಹಿಂದಿನ 4 ವರ್ಷ 45% ಕ್ಲೈಮ್-ರಹಿತ ಹಿಂದಿನ 5 ವರ್ಷ 50%
hdfcergo.com ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಪಾಲಿಸಿ ವಿವರಗಳನ್ನು ಆನ್‌ಲೈನ್‌ನಲ್ಲಿ ಬದಲಾಯಿಸಬಹುದು. ವೆಬ್‌ಸೈಟ್‌ನಲ್ಲಿನ "ಸಹಾಯ" ವಿಭಾಗಕ್ಕೆ ಭೇಟಿ ನೀಡಿ ಮತ್ತು ಕೋರಿಕೆಯನ್ನು ಸಲ್ಲಿಸಿ.ಇಲ್ಲಿ ಕ್ಲಿಕ್ ಮಾಡಿ ಇನ್ನಷ್ಟು ತಿಳಿಯಿರಿ.
ಹೌದು, ಸೆಪ್ಟೆಂಬರ್ 1, 2018 ರ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಥರ್ಡ್ ಪಾರ್ಟಿ ಹೊಣೆಗಾರಿಕೆಯು ಎಲ್ಲಾ ಮೋಟಾರಿಸ್ಟ್‌ಗಳಿಗೆ ಕಡ್ಡಾಯ ಪಾಲಿಸಿಯಾಗಿದೆ, 1/9/2018 ನಂತರ ಖರೀದಿಸಿದ ಎಲ್ಲಾ ಟೂ ವೀಲರ್‌ಗಳು 5 ವರ್ಷದ ಪಾಲಿಸಿ ಅವಧಿಯನ್ನು ಹೊಂದಿರುವ ದೀರ್ಘಾವಧಿಯ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಹೊಂದುವುದು ಕಡ್ಡಾಯವಾಗಿದೆ. ಇಲ್ಲಿ ಕ್ಲಿಕ್ ಮಾಡಿ
ಈಗ ಸಿಗುವ ಪ್ಲಾನ್‌ಗಳೆಂದರೆ ಥರ್ಡ್ ಪಾರ್ಟಿ ಹೊಣೆಗಾರಿಕೆ, ಸಮಗ್ರ ಇನ್ಶೂರೆನ್ಸ್ ಪಾಲಿಸಿ ಮತ್ತು ಸ್ವಂತ ಹಾನಿ ಇನ್ಶೂರೆನ್ಸ್ ಪ್ಲಾನ್.
ಟೂ ವೀಲರ್ ಇನ್ಶೂರೆನ್ಸ್ ಪಾಲಿಸಿಗಳಲ್ಲಿ ವಿನಾಯಿತಿಗಳು ಈ ಕೆಳಗಿನಂತಿವೆ
  • ಸಾಮಾನ್ಯ ಬಳಕೆ ಮತ್ತು ಶಿಥಿಲಗೊಳ್ಳುವಿಕೆ
  • ವಿದ್ಯುತ್ ಅವಘಡ
  • ಸರಿಯಾದ ಇನ್ಶೂರೆನ್ಸ್ ಪಾಲಿಸಿ ಇಲ್ಲದೆ ಚಾಲನೆ ಮಾಡುವುದು
  • ಮದ್ಯ ಅಥವಾ ಮಾದಕದ್ರವ್ಯ ಸೇವಿಸಿ ಡ್ರೈವ್ ಮಾಡುವುದು
  • ನಿಮ್ಮ ವೈಯಕ್ತಿಕ ಆಸ್ತಿ ಹಾನಿ
ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ ಎಂದರೆ ವಾಹನದ ಕಳ್ಳತನ ಅಥವಾ ಸಂಪೂರ್ಣ ಹಾನಿಯ ಸಂದರ್ಭದಲ್ಲಿ ವಿಮಾದಾತರು ಒದಗಿಸುವ ಗರಿಷ್ಠ ವಿಮಾ ಮೊತ್ತವಾಗಿದೆ. ಅದನ್ನು ಈ ಕೆಳಕಂಡ ಫಾರ್ಮುಲಾದಿಂದ ಕಂಡುಹಿಡಿಯುತ್ತಾರೆ: ಇನ್ಶೂರ್ಡ್ ಡಿಕ್ಲೇರ್ಡ್‌ ವ್ಯಾಲ್ಯೂ = (ತಯಾರಕರು ನಿಗದಿಪಡಿಸಿದ ಬೆಲೆ - ಡಿಪ್ರಿಸಿಯೇಶನ್ ಮೌಲ್ಯ) + (ವೆಹಿಕಲ್ ಆಕ್ಸೆಸರಿಗಳ ಬೆಲೆ – ಈ ಪಾರ್ಟ್‌ಗಳ ಡಿಪ್ರಿಸಿಯೇಶನ್ ಮೌಲ್ಯ) IDV ಲೆಕ್ಕ ಹಾಕಲು ಬಳಸುವ ಡಿಪ್ರಿಸಿಯೇಶನ್ ಎಂದರೆ ವಾಹನದ ವಯಸ್ಸು ಅನ್ವಯಿಸಿದ ಡಿಪ್ರಿಸಿಯೇಶನ್ % 6 ತಿಂಗಳಿಗಿಂತ ಕಡಿಮೆಗೆ 0% 6 ತಿಂಗಳಿನಿಂದ 1 ವರ್ಷಕ್ಕೆ 5% 1 ವರ್ಷದಿಂದ 2 ವರ್ಷಕ್ಕೆ 10% 2 ವರ್ಷದಿಂದ 3 ವರ್ಷಕ್ಕೆ 15% 3 ವರ್ಷದಿಂದ 4 ವರ್ಷಕ್ಕೆ 25%
x