ಸಾಕಷ್ಟು ಸೂಕ್ತ ವ್ಯವಸ್ಥೆಗಳ ಮೂಲಕ ಕಂಪನಿಯು ಸಮಗ್ರ ಮತ್ತು ಪ್ರಬಲವಾದ ಮಾಹಿತಿ ಭದ್ರತಾ ನಿರ್ವಹಣಾ ವ್ಯವಸ್ಥೆಯನ್ನು (ISMS) ಸ್ಥಾಪಿಸಿ, ಕಾರ್ಯರೂಪಕ್ಕೆ ತಂದು, ನಿರ್ವಹಿಸುತ್ತದೆ, ಇದು "ಗೌಪ್ಯತೆ" ಕಾಯ್ದುಕೊಳ್ಳಲು, "ಸಮಗ್ರತೆ" ಕಾಪಾಡಿಕೊಳ್ಳಲು ಮತ್ತು ಅದರ ಮಾಹಿತಿ ಸ್ವತ್ತುಗಳ "ಲಭ್ಯತೆಯನ್ನು" ಖಚಿತಪಡಿಸಿಕೊಳ್ಳಲು ಹಾಗೂ ಮಾಹಿತಿ ಸುರಕ್ಷತೆಗೆ ಸಂಬಂಧಿಸಿದ ಘಟನೆಗಳು ನಡೆದಾಗ ಅವುಗಳಿಗೆ ಸ್ಪಂದಿಸಲು ಹಾಗೂ ಅವುಗಳಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ.. ISMS ಯೋಜಿಸುವಾಗ, ಕಂಪನಿಯು ಆಸಕ್ತ ಪಾರ್ಟಿಗಳ ಅವಶ್ಯಕತೆಗಳ ಜೊತೆಗೆ ತನ್ನ ಆಂತರಿಕ ಮತ್ತು ಬಾಹ್ಯ ಸಮಸ್ಯೆಗಳನ್ನು ಪರಿಗಣಿಸಿ, ತಮ್ಮ ಉತ್ಪನ್ನಗಳು ಹಾಗೂ ಸೇವೆಗಳ ಪೂರೈಕೆಗೆ ಬೆಂಬಲ ನೀಡುವ ಚಟುವಟಿಕೆಗಳ ಮೇಲೆ ಪರಿಣಾಮ ಬೀರುವ ಅಪಾಯಗಳು ಮತ್ತು ಅವಕಾಶಗಳನ್ನು ನಿರ್ಧರಿಸುತ್ತದೆ. ಉನ್ನತ ಆಡಳಿತ ಮಂಡಳಿಯು ಅಗತ್ಯ ಸಂಪನ್ಮೂಲಗಳನ್ನು ನೀಡಿ ISMS ತನ್ನ ಉದ್ದೇಶಿತ ಫಲಿತಾಂಶ ಸಾಧಿಸುವಲ್ಲಿ ಸಾಕಷ್ಟು ಕೊಡುಗೆ ನೀಡಬೇಕು.
ಈ ಮಾಹಿತಿ ಭದ್ರತಾ ನೀತಿಯು ISMS ಚೌಕಟ್ಟಿನ ಪ್ರಮುಖ ಘಟಕವಾಗಿದೆ ಹಾಗೂ ಇದನ್ನು ಇನ್ನಷ್ಟು ವಿವರಗಳು ಮತ್ತು ಸಂಸ್ಥೆಯ ನಿರ್ದಿಷ್ಟ ಮಾಹಿತಿ ಭದ್ರತೆಯ ನೀತಿಗಳೊಂದಿಗೆ ಪರಿಗಣಿಸಬೇಕು.. ಈ ಭದ್ರತಾ ನೀತಿಯು ಎಚ್ಡಿಎಫ್ಸಿ ಎರ್ಗೋದ ಮಾಹಿತಿ ಅಥವಾ ಎಚ್ಡಿಎಫ್ಸಿ ಎರ್ಗೋದ ಮಾಹಿತಿ ವ್ಯವಸ್ಥೆಗಳನ್ನು ಬಳಸುವ ಎಲ್ಲ ಉದ್ಯೋಗಿಗಳಿಗೆ, ಗುತ್ತಿಗೆದಾರರರಿಗೆ, ಉಪ ಗುತ್ತಿಗೆದಾರರಿಗೆ ಹಾಗೂ ಆನ್ ಸೈಟ್ ಥರ್ಡ್ ಪಾರ್ಟಿ ಮಾರಾಟಗಾರರಿಗೆ ಅನ್ವಯವಾಗುತ್ತದೆ.