ವೋಕ್ಸ್‌ವ್ಯಾಗನ್ ಅಮಿಯೋ ಕಾರ್ ಇನ್ಶೂರೆನ್ಸ್
ಮೋಟಾರ್ ಇನ್ಶೂರೆನ್ಸ್
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಮೇಕ್ ಮತ್ತು ಮಾಡೆಲ್‌ಗಾಗಿ ಕಾರ್ ಇನ್ಶೂರೆನ್ಸ್ / ಡಾಟ್ಸನ್
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242
  • ಪರಿಚಯ
  • ಏನನ್ನು ಒಳಗೊಂಡಿದೆ?
  • ಏನನ್ನು ಒಳಗೊಂಡಿಲ್ಲ?
  • ಆ್ಯಡ್-ಆನ್ ಕವರ್‌ಗಳು
  • FAQ

ಡಾಟ್ಸನ್ ಕಾರ್ ಇನ್ಶೂರೆನ್ಸ್ ಆನ್ಲೈನ್

ಜಪಾನಿನ ಕಾರ್ ತಯಾರಕ ಡಾಟ್ಸನ್ ಭಾರತದಲ್ಲಿ ಡಾಟ್ಸನ್ ಗೋ ಪ್ರಾರಂಭದೊಂದಿಗೆ 2014ವರ್ಷದಲ್ಲಿ ಡಾಟ್ಸನ್ ಹೆಸರನ್ನು ನವೀಕರಿಸಿದರು. ಇಂಡೋನೇಷ್ಯಾ, ಭಾರತ, ದಕ್ಷಿಣ ಆಫ್ರಿಕಾ ಮತ್ತು ರಷ್ಯಾದಂತಹ ದೇಶಗಳಲ್ಲಿ ಡಾಟ್ಸನ್ ಬಜೆಟ್ ಕಾರ್ ಬ್ರ್ಯಾಂಡ್ ಆಗಿ ಸ್ಥಾಪಿತವಾಯಿತು. ಪ್ರಪಂಚದಾದ್ಯಂತ ಉದಯೋನ್ಮುಖ ಮಾರುಕಟ್ಟೆಗಳಲ್ಲಿ ಮಾರುಕಟ್ಟೆ ಪಾಲನ್ನು ಪಡೆಯಲು ಬ್ರ್ಯಾಂಡ್‌ನ ಮೌಲ್ಯ ಮತ್ತು ವಿಶ್ವಾಸಾರ್ಹತೆಯ ಖ್ಯಾತಿಯು ಸಹಾಯ ಮಾಡುತ್ತದೆ ಎಂದು ಡಾಟ್ಸನ್ ನಂಬುತ್ತದೆ.

ರೆನಾಲ್ಟ್-ಡಾಟ್ಸನ್ 'V' ವೇದಿಕೆಯ ಆಧಾರದ ಮೇಲೆ ಡಾಟ್ಸನ್ ಗೋ ಡಾಟ್ಸನ್‌ನ ಮೊದಲ ಕಾರು ಆಗಿತ್ತು. ಗೋ ಕುಟುಂಬದ ಪ್ರಾಯೋಗಿಕ ಹ್ಯಾಚ್‌ಬ್ಯಾಕ್ ಆಗಿ ಉಳಿದುಕೊಂಡಿದ್ದು, ಇದು ಭಾರತದ ಕಂಪನಿಯಿಂದ ಆಕ್ರಮಣಕಾರಿ ಬೆಲೆಯನ್ನು ಹೊಂದಿದೆ. ಡಾಟ್ಸನ್ ನಂತರ ಗೋ ಆಧಾರಿತ ಕಾಂಪ್ಯಾಕ್ಟ್ 7-ಸೀಟ್ ಮಲ್ಟಿ-ಪರ್ಪಸ್ ವೆಹಿಕಲ್ (MPV) ಅನ್ನು ಪ್ರಾರಂಭಿಸಿತು. ಗೋ ಪ್ಲಸ್ (ಗೋ ಆಧಾರದ ಮೇಲೆ MVP) ಕುಟುಂಬ ಖರೀದಿದಾರರ ಗುರಿಯನ್ನು ಹೊಂದಿದೆ. ಮೂರನೇ ಉತ್ಪನ್ನವು 2016 ರಲ್ಲಿ ಬಂದಿತು ಮತ್ತು ರೆಡಿ-ಗೋ ಎಂದು ನಾಮಕರಣ ಮಾಡಲಾಯಿತು, ಇದು ನಗರ ಪ್ರದೇಶದ ಪ್ರೇಕ್ಷಕರನ್ನು ಗುರಿಯಾಗಿಟ್ಟುಕೊಂಡ ಪ್ರವೇಶ ಮಟ್ಟದ ಹ್ಯಾಚ್‌ಬ್ಯಾಕ್ ಆಗಿದೆ. ಡಾಟ್ಸನ್ ವೆಚ್ಚಗಳನ್ನು ಕಡಿಮೆಯಾಗಿರಿಸುವಲ್ಲಿ ನಿರ್ವಹಣೆ ಮಾಡುತ್ತಿದೆ ಮತ್ತು ಆಯಾ ವಿಭಾಗಗಳಲ್ಲಿ ಅದರ ಪ್ರತಿಸ್ಪರ್ಧಿಗಳನ್ನು ಕಡಿಮೆ ಮಾಡುವ ಮೂಲಕ ಅವರ ಉತ್ಪನ್ನಗಳ ಬೆಲೆ ನಿರ್ಧರಿಸುತ್ತಿದೆ.

ಅಲ್ಲದೆ ಡಾಟ್ಸನ್ ಕಾರ್ ಮಾದರಿಗಳಿಗೆ ಉತ್ತಮ ಕಾರ್ ಇನ್ಶೂರೆನ್ಸ್ ಪ್ಲಾನ್ ಅಪಘಾತದ ಸಂದರ್ಭದಲ್ಲಿ ಹೆಚ್ಚು ಅಗತ್ಯವಿರುವ ಹಣಕಾಸಿನ ರಕ್ಷಣೆಯನ್ನು ಒದಗಿಸಬಹುದು.

ಮೂರು ಜನಪ್ರಿಯ ಡಾಟ್ಸನ್ ಮಾಡೆಲ್‌ಗಳು


ಡಾಟ್ಸನ್ ಗೋ: ಡಾಟ್ಸನ್ ಮೈಕ್ರಾನಂತೆಯೇ ಇದೂ ಸಹ 'V' ಪ್ಲಾಟ್‌ಫಾರ್ಮ್ ಆಧಾರಿತ ಎಂಟ್ರಿ-ಲೆವೆಲ್ ಹ್ಯಾಚ್‌ಬ್ಯಾಕ್ ಆಗಿದೆ, ಇದು ಬೇರೆಲ್ಲಾ ಕಾರುಗಳಿಗಿಂತ ಹೆಚ್ಚಿನ ಕ್ಯಾಬಿನ್ ಸ್ಪೇಸ್ ಒದಗಿಸುತ್ತದೆ ಮತ್ತು ಮೊದಲ ಬಾರಿಯ ಕಾರು ಖರೀದಿಸುವವರ ಅಚ್ಚುಮೆಚ್ಚಿನ ಕಾರ್ ಆಗಿದೆ. 1.3-litre ಪೆಟ್ರೋಲ್ ಮೋಟಾರ್ ಹೊಂದಿರುವ ಡಾಟ್ಸನ್ ಗೋ, ತನ್ನ ಸೆಗ್ಮೆಂಟ್‌ನ ಅತ್ಯಂತ ಶಕ್ತಿಶಾಲಿ ಕಾರುಗಳಲ್ಲಿ ಒಂದಾಗಿದೆ. 5-ಸ್ಪೀಡ್ ಮ್ಯಾನ್ಯುಯಲ್ ಗೇರ್‌ಬಾಕ್ಸ್ ಹೊಂದಿರುವ ಈ ಕಾರ್, 20.6 km/l ಇಂಧನ ದಕ್ಷತೆ ನೀಡುತ್ತದೆ ಎನ್ನಲಾಗಿದೆ.

ಡಾಟ್ಸನ್ ಗೋ ಪ್ಲಸ್: ಗೋ ಹ್ಯಾಚ್‌ಬ್ಯಾಕ್ ಆಧಾರಿತ ಮಿನಿ ವ್ಯಾನ್ ಆಗಿರುವ ಗೋ+, ಏಳು-ಸೀಟ್‌ಗಳ ಬಜೆಟ್ ಕಾರ್ ಆಗಿದ್ದು, ದೊಡ್ಡ ಕುಟುಂಬಗಳಿಗೆ ಹೆಚ್ಚು ಸೂಕ್ತವಾದ ಆಯ್ಕೆಯಾಗಿದೆ. ಡಾಟ್ಸನ್ ಗೋ ಪ್ಲಸ್‌ನಲ್ಲಿ ಅದೇ 1.3-ಪೆಟ್ರೋಲ್ ಮೋಟಾರ್ ಅನ್ನು 5-ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್‌ಗೆ ಹೊಂದಿಸಲಾಗಿದೆ. ತನ್ನ ಸ್ಪರ್ಧಾತ್ಮಕ ಬೆಲೆಯೊಂದಿಗೆ, ಡಾಟ್ಸನ್ ಗೋ ಪ್ಲಸ್ ಹಣಕ್ಕೆ ತಕ್ಕ ಮೌಲ್ಯ ಒದಗಿಸುವ ಕಾರ್ ಆಗಿದೆ.

ಡಾಟ್ಸನ್ ರೆಡಿ-ಗೋ: ಡಾಟ್ಸನ್‌ನ ಎಂಟ್ರಿ-ಲೆವೆಲ್ ಕಾರ್ ಆಗಿರುವ ರೆಡಿ-ಗೋ, ರೆನಾಲ್ಟ್ ಕ್ವಿಡ್‌ನೊಂದಿಗೆ ತನ್ನ ಪ್ಲಾಟ್‌ಫಾರ್ಮ್ ಮತ್ತು ಎಂಜಿನ್‌ ಹಂಚಿಕೊಳ್ಳುತ್ತದೆ. ಮೊದಲ ಬಾರಿಯ ಕಾರು ಖರೀದಿಸುವ ಯುವಕರನ್ನು ಮನಸ್ಸಿನಲ್ಲಿಟ್ಟುಕೊಂಡು ರೆಡಿ-ಗೋ ವಿನ್ಯಾಸಗೊಂಡಿದೆ. ಅದರ ವಿಶಾಲ ಉದ್ದಗಲ, ಇಂಧನ-ದಕ್ಷ ಎಂಜಿನ್‌ಗಳ ಆಯ್ಕೆ, ಸಲಕರಣೆಗಳ ಪಟ್ಟಿ ಮತ್ತು ರೈಡ್ ಗುಣಮಟ್ಟವು ಈ ಸಿಟಿ-ಹ್ಯಾಚ್‌ನ ಬೇಡಿಕೆ ಹೆಚ್ಚಲು ಕಾರಣವಾಗಿದೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಸಮಗ್ರ ಕವರ್ ಆಯ್ಕೆ ಮಾಡಲು ಕಾರಣಗಳು

ನಮ್ಮ 80% ಕಾರು ಕ್ಲೈಮ್‌ಗಳನ್ನು ಅದೇ ದಿನ ಸೆಟಲ್ ಮಾಡಲಾಗುತ್ತದೆˇ
ನಮ್ಮ 80% ಕಾರು ಕ್ಲೈಮ್‌ಗಳನ್ನು ಅದೇ ದಿನ ಸೆಟಲ್ ಮಾಡಲಾಗುತ್ತದೆˇ
ಒಂದೇ ಕ್ಲಿಕ್ಕಿನಲ್ಲಿ ಅತ್ಯುತ್ತಮ ಬೆಲೆ ಪಡೆಯುವ ಅವಕಾಶವಿರುವಾಗ ಬೇರೆಲ್ಲೋ ಯಾಕೆ ಹುಡುಕುತ್ತೀರಿ?
8700+ ನಗದುರಹಿತ ಗ್ಯಾರೇಜ್‌‌ಗಳೊಂದಿಗೆ ನಗದುರಹಿತ ಆರಿಸಿಕೊಳ್ಳಿ!
8700+ ನಗದುರಹಿತ ಗ್ಯಾರೇಜ್‌‌ಗಳೊಂದಿಗೆ ನಗದುರಹಿತ ಆರಿಸಿಕೊಳ್ಳಿ!
8700+ ನೆಟ್‌ವರ್ಕ್ ಗ್ಯಾರೇಜ್‌ಗಳು ದೇಶದಾದ್ಯಂತ ಹರಡಿವೆ, ಅದು ದೊಡ್ಡ ಸಂಖ್ಯೆಯೇ ಅಲ್ಲವೇ? ಇದಷ್ಟೇ ಅಲ್ಲ, IPO ಅಪ್ಲಿಕೇಶನ್ ಮತ್ತು ವೆಬ್‌ಸೈಟ್ ಮೂಲಕ ಕ್ಲೈಮ್ ಅನ್ನು ನೋಂದಾಯಿಸಲು ನಾವು ನಿಮಗೆ ಅವಕಾಶ ನೀಡುತ್ತೇವೆ ಮತ್ತು 30* ನಿಮಿಷಗಳಲ್ಲಿ ನಿಮ್ಮ ಕ್ಲೈಮ್‌ಗಳನ್ನು ನಾವು ಅನುಮೋದಿಸುತ್ತೇವೆ.
ನಿಮ್ಮ ಕಾರ್ ಇನ್ಶೂರೆನ್ಸ್ ಕ್ಲೈಮ್‌‌ಗಳ ವಿಷಯದಲ್ಲಿ ಜಿಪುಣತನ ಯಾಕೆ? ಮಿತಿಯಿಲ್ಲದಷ್ಟು ಕ್ಲೈಮ್ ಸಲ್ಲಿಸಿ!
ನಿಮ್ಮ ಕಾರ್ ಇನ್ಶೂರೆನ್ಸ್ ಕ್ಲೈಮ್‌‌ಗಳ ವಿಷಯದಲ್ಲಿ ಜಿಪುಣತನ ಯಾಕೆ? ಮಿತಿಯಿಲ್ಲದಷ್ಟು ಕ್ಲೈಮ್ ಸಲ್ಲಿಸಿ!
ಎಚ್‌‌ಡಿಎಫ್‌‌ಸಿ ಅನಿಯಮಿತ ಕ್ಲೈಮ್‌ಗಳಿಗೆ ಬಾಗಿಲು ತೆರೆಯುತ್ತದೆ! ನೀವು ಎಚ್ಚರಿಕೆಯಿಂದ ಚಾಲನೆ ಮಾಡುತ್ತಿದ್ದೀರಿ ಎಂದು ನಾವು ನಂಬಿದ್ದರೂ, ನೀವು ನೋಂದಾಯಿಸಲು ಬಯಸುವ ಯಾವುದೇ ಕ್ಲೈಮ್‌ನ ಸಂದರ್ಭದಲ್ಲಿ, ನಾವು ನಿಮ್ಮನ್ನು ನಿರ್ಬಂಧಿಸುವುದಿಲ್ಲ.
ತಡರಾತ್ರಿಯ ಕಾರ್ ರಿಪೇರಿ ಸೇವೆಗಳು
ತಡರಾತ್ರಿಯ ಕಾರ್ ರಿಪೇರಿ ಸೇವೆಗಳು
ಮುಸ್ಸಂಜೆಯಿಂದ ಬೆಳಗಿನ ಜಾವದವರೆಗೆ ಯಾವುದೇ ತೊಂದರೆಯಿಲ್ಲದೆ ನಾವು ಸಣ್ಣ ಆಕಸ್ಮಿಕ ಹಾನಿಗಳನ್ನು ಸರಿಪಡಿಸುತ್ತೇವೆ. ನೀವು ಸರಳವಾಗಿ ನಮ್ಮೊಂದಿಗೆ ಸಂಪರ್ಕದಲ್ಲಿರಬಹುದು; ನಾವು ನಿಮ್ಮ ಕಾರನ್ನು ರಾತ್ರಿಯಲ್ಲಿ ಪಿಕ್ ಮಾಡುತ್ತೇವೆ, ಅದನ್ನು ರಿಪೇರಿ ಮಾಡುತ್ತೇವೆ ಮತ್ತು ಬೆಳಿಗ್ಗೆ ನಿಮ್ಮ ಮನೆ ಬಾಗಿಲಿಗೆ ತಲುಪಿಸುತ್ತೇವೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್‌ನಲ್ಲಿ ಏನೆಲ್ಲಾ ಒಳಗೊಂಡಿದೆ?

ಅಪಘಾತಗಳು
ಅಪಘಾತಗಳು

ಅಪಘಾತಗಳು ಅನಿಶ್ಚಿತವಾಗಿವೆ. ನಿಮ್ಮ ಡಾಟ್ಸನ್ ಕಾರು ಅಪಘಾತದಲ್ಲಿ ಹಾನಿಗೊಳಗಾಗಿದೆಯೇ? ಭಯಭೀತರಾಗಬೇಡಿ! ನಾವು ಅದನ್ನು ಕವರ್ ಮಾಡುತ್ತೇವೆ!

ಬೆಂಕಿ ಮತ್ತು ಸ್ಫೋಟ
ಬೆಂಕಿ ಮತ್ತು ಸ್ಫೋಟ

ಬೂಮ್! ಬೆಂಕಿ ಅವಘಡ ನಿಮ್ಮ ಡಾಟ್ಸನ್ ಕಾರನ್ನು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿ ಮಾಡಬಹುದು, ಬೆಂಕಿ ಅಥವಾ ಸ್ಫೋಟದ ಘಟನೆಗಳಿಂದಾಗಿ ಆಗುವ ಯಾವುದೇ ಹಾನಿಯಾದರೂ. ಚಿಂತಿಸಬೇಡಿ, ಅದನ್ನು ನಾವು ನಿಭಾಯಿಸುತ್ತೇವೆ.

ಕಳ್ಳತನ
ಕಳ್ಳತನ

ನಿಮ್ಮ ಡಾಟ್ಸನ್ ಕಾರು ಕಳ್ಳತನವಾಗಿದೆಯೇ? ನಿಜಕ್ಕೂ ತುಂಬಾ ದುಃಖದ ಸುದ್ಧಿ ಇದು! ಆದರೆ ದುಃಖ ಪಡುವ ಮೊದಲು, ನಿಮ್ಮ ವಾಹನದ ರಕ್ಷಣೆ ನಮ್ಮ ಹೊಣೆ ಎಂಬುದನ್ನು ನೆನಪಿಡಿ!

ವಿಪತ್ತುಗಳು
ವಿಪತ್ತುಗಳು

ಭೂಕಂಪ, ಭೂಕುಸಿತ, ಪ್ರವಾಹ, ಗಲಭೆಗಳು, ಭಯೋತ್ಪಾದನೆ, ಇತ್ಯಾದಿಗಳು ನಿಮ್ಮ ಮೆಚ್ಚಿನ ವಾಹನಕ್ಕೆ ಹಾನಿ ಮಾಡಬಹುದು. ಆದರೆ ಚಿಂತಿಸಬೇಡಿ. ಇನ್ನಷ್ಟು ನೋಡಿ...

ವೈಯಕ್ತಿಕ ಆಕ್ಸಿಡೆಂಟ್
ವೈಯಕ್ತಿಕ ಆಕ್ಸಿಡೆಂಟ್

ನೀವು ₹ 15 ಲಕ್ಷಗಳ ಪರ್ಯಾಯ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಈ ಕವರ್ ಅನ್ನು ಬಿಟ್ಟುಬಿಡಬಹುದುಇನ್ನಷ್ಟು ಓದಿ...

ಥರ್ಡ್ ಪಾರ್ಟಿ ಹೊಣೆಗಾರಿಕೆ
ಥರ್ಡ್ ಪಾರ್ಟಿ ಹೊಣೆಗಾರಿಕೆ

ಒಂದು ವೇಳೆ ನಿಮ್ಮ ವಾಹನವು ಆಕಸ್ಮಿಕವಾಗಿ ಮೂರನೇ ವ್ಯಕ್ತಿಯ ಆಸ್ತಿಗೆ ಗಾಯ ಅಥವಾ ಹಾನಿ ಮಾಡಿದರೆ, ನಾವು ಅವರ ಕಾನೂನು ಹೊಣೆಗಾರಿಕೆಗಳ ನಿರ್ವಹಣೆಗೆ ಸಂಪೂರ್ಣ ಕವರೇಜ್‌ ಇನ್ನಷ್ಟು ಓದಿ...

ಡಾಟ್ಸನ್ ಕಾರ್ ಇನ್ಶೂರೆನ್ಸ್‌ ಏನನ್ನು ಒಳಗೊಂಡಿಲ್ಲ?

ಸವಕಳಿ
ಸವಕಳಿ

ನಾವು ಕಾರಿನ ಮೌಲ್ಯದಲ್ಲಿ ಸವಕಳಿಯನ್ನು ಒಳಗೊಳ್ಳುವುದಿಲ್ಲ.

ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ದೋಷದಿಂದ ಹಾನಿ
ಎಲೆಕ್ಟ್ರಿಕಲ್ ಮತ್ತು ಮೆಕ್ಯಾನಿಕಲ್ ದೋಷದಿಂದ ಹಾನಿ

ನಮ್ಮ ಡಾಟ್ಸನ್ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವುದೇ ಎಲೆಕ್ಟ್ರಿಕಲ್ ಅಥವಾ ಮೆಕ್ಯಾನಿಕಲ್ ಬ್ರೇಕ್‌ಡೌನ್‌ಗಳು ಕವರ್ ಆಗುವುದಿಲ್ಲ.

ಅಕ್ರಮ ಚಾಲನೆ
ಅಕ್ರಮ ಚಾಲನೆ

ನೀವು ಸರಿಯಾದ ಡ್ರೈವಿಂಗ್ ಲೈಸೆನ್ಸ್ ಹೊಂದಿಲ್ಲದಿದ್ದರೆ ನಿಮ್ಮ ಡಾಟ್ಸನ್ ಕಾರ್ ಇನ್ಶೂರೆನ್ಸ್ ಸಹಾಯಕ್ಕೆ ಬಾರದೆ ಉಪಯೋಗವಿಲ್ಲದಂತಾಗುತ್ತದೆ. ಮದ್ಯ/ಮಾದಕದ್ರವ್ಯಗಳ ಪ್ರಭಾವದಲ್ಲಿ ಚಾಲನೆ ಮಾಡುವುದು ಕಾರ್ ಇನ್ಶೂರೆನ್ಸ್ ಕವರೇಜ್ ವ್ಯಾಪ್ತಿಯಿಂದ ಹೊರಗುಳಿಯುತ್ತದೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಆ್ಯಡ್ ಆನ್ ಕವರ್‌ಗಳು

ಡಾಟ್ಸನ್ ಕಾರ್ ಇನ್ಶೂರೆನ್ಸ್-ಶೂನ್ಯ ಸವಕಳಿ ಕವರ್

ಜೀರೋ ಡಿಪ್ರಿಸಿಯೇಶನ್ ಕವರ್ ಮೂಲಕ ಸಂಪೂರ್ಣ ಮೊತ್ತವನ್ನು ಪಡೆಯಿರಿ!

ಸಾಮಾನ್ಯವಾಗಿ, ಮೌಲ್ಯ ಇಳಿಕೆ ಮೊತ್ತವನ್ನು ಕಡಿತಗೊಳಿಸಿದ ನಂತರವಷ್ಟೇ ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿಯು ನಿಮಗೆ ಕ್ಲೈಮ್ ಮೊತ್ತವನ್ನು ಪಾವತಿಸುತ್ತದೆ. ನಿಮ್ಮ ಪಾಲಿಸಿ ವಿವರಗಳು ಸವಕಳಿಯ ವಿವರಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ, ಸಂಪೂರ್ಣ ಮೊತ್ತವನ್ನು ಪಡೆಯಲು ನೀವು ಏನು ಮಾಡಬಹುದು? ಒಂದು ಮಾರ್ಗ ಇದೆ! ಜೀರೋ-ಡಿಪ್ರಿಸಿಯೇಶನ್ ಕವರ್! ಜೀರೋ ಡಿಪ್ರಿಸಿಯೇಶನ್‌ನಲ್ಲಿ, ಯಾವುದೇ ಸವಕಳಿ ಕಡಿತಗಳಿಲ್ಲ ಮತ್ತು ಸಂಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ !


ಇದು ಹೇಗೆ ಕೆಲಸ ಮಾಡುತ್ತದೆ? ನಿಮ್ಮ ಡಾಟ್ಸನ್ ಕಾರು ಹಾನಿಗೊಳಗಾಗಿದ್ದು, ಕ್ಲೈಮ್ ಮೊತ್ತ ₹15,000 ಆಗಿದ್ದರೆ, ಅದರಲ್ಲಿ ಕಾರ್ ಇನ್ಶೂರೆನ್ಸ್ ಕಂಪನಿಯು ಪಾಲಿಸಿ ಹೆಚ್ಚುವರಿ/ಕಡಿತದ ಜೊತೆಜೊತೆಗೆ ಮೌಲ್ಯ ಇಳಿಕೆ ಮೊತ್ತವಾಗಿ ₹7000 ಅನ್ನು ಪಾವತಿಸಬೇಕು ಎನ್ನುತ್ತದೆ ಎಂದು ಭಾವಿಸೋಣ. ನೀವು ಈ ಆ್ಯಡ್-ಆನ್ ಕವರ್ ಖರೀದಿಸಿದರೆ, ಕಾರ್ ಇನ್ಶೂರೆನ್ಸ್ ಕಂಪನಿಯು ಸಂಪೂರ್ಣ ಮೌಲ್ಯಮಾಪನ ಮೊತ್ತವನ್ನು ಪಾವತಿಸುತ್ತದೆ. ಆದಾಗ್ಯೂ, ಪಾಲಿಸಿ ಹೆಚ್ಚುವರಿ/ಕಡಿತದ ಮೊತ್ತವನ್ನು ಗ್ರಾಹಕರೇ ಪಾವತಿಸಬೇಕಾಗುತ್ತದೆ, ಇದು ತೀರಾ ಕಡಿಮೆ ಇರುತ್ತದೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್-ನೋ ಕ್ಲೈಮ್ ಬೋನಸ್ ಪ್ರೊಟೆಕ್ಷನ್

ನಿಮ್ಮ NCB ಯನ್ನು ರಕ್ಷಿಸಲು ಒಂದು ಮಾರ್ಗವಿದೆ

ಹೊರಗಿನ ಅಪಾಯ, ಪ್ರವಾಹ, ಬೆಂಕಿ ಇತ್ಯಾದಿಗಳಿಂದ ಪಾರ್ಕ್ ಮಾಡಲಾದ ವಾಹನಕ್ಕೆ ಅಥವಾ ವಿಂಡ್‌ಶೀಲ್ಡ್ ಗಾಜಿಗೆ ಹಾನಿಯಾದಾಗ ಕ್ಲೈಮ್ ಸಲ್ಲಿಸಿದರೆ, ಈ ಆ್ಯಡ್ ಆನ್ ಕವರ್ ನಿಮ್ಮ ಡಾಟ್ಸನ್ ಕಾರ್‌ ಮೇಲೆ ಇಷ್ಟು ದಿನ ಗಳಿಸಿದ ನೋ ಕ್ಲೈಮ್ ಬೋನಸ್ ಅನ್ನು ರಕ್ಷಿಸುವುದಷ್ಟೇ ಅಲ್ಲದೆ ಮುಂದಿನ NCB ಸ್ಲ್ಯಾಬ್‌ಗೆ ಅದನ್ನು ಮುಂದುವರೆಸುತ್ತದೆ .


ಇದು ಹೇಗೆ ಕೆಲಸ ಮಾಡುತ್ತದೆ? ಅಪಘಾತ ಅಥವಾ ಇತರ ಯಾವುದೇ ವಿಕೋಪದಿಂದಾಗಿ ನೀವು ಪಾರ್ಕ್ ಮಾಡಿದ ನಿಮ್ಮ ಡಾಟ್ಸನ್‌ ಕಾರು ಹಾನಿಗೊಳಗಾದ ಸಂದರ್ಭದಲ್ಲಿ, ನೋ ಕ್ಲೈಮ್ ಬೋನಸ್ ಪ್ರೊಟೆಕ್ಶನ್‌ ಅದೇ ವರ್ಷಕ್ಕೆ ನಿಮ್ಮ NCB ಅನ್ನು 20% ನಷ್ಟು ಉಳಿಸಬಹುದು ಮತ್ತು ಮುಂದಿನ ವರ್ಷದಲ್ಲಿ ಅದನ್ನು 25% ಶ್ರೇಣಿಗೆ ಸರಾಗವಾಗಿ ತೆಗೆದುಕೊಂಡು ಹೋಗಬಹುದು. ಸಂಪೂರ್ಣ ಪಾಲಿಸಿ ಅವಧಿಯಲ್ಲಿ ಈ ಕವರ್‌ ಅನ್ನು 3 ಬಾರಿಗೆ ಕ್ಲೈಮ್‌ ಮಾಡಬಹುದು.

ಡಾಟ್ಸನ್ ಕಾರ್ ಇನ್ಶೂರೆನ್ಸ್-ತುರ್ತು ಸಹಾಯ ಕವರ್

ನಾವು ನಿಮ್ಮನ್ನು ಸುರಕ್ಷಿತವಾಗಿಸಿದ್ದೇವೆ.!

ನಿಮ್ಮ ಡಾಟ್ಸನ್ ಕಾರ್‌ಗೆ ಉಂಟಾಗುವ ಯಾವುದೇ ತಾಂತ್ರಿಕ ಅಥವಾ ಯಾಂತ್ರಿಕ ಬ್ರೇಕ್‌ಡೌನ್ ಸಮಸ್ಯೆಗಳನ್ನು ಎದುರಿಸಲು ನಾವು ನಿಮಗೆ ಸದಾಕಾಲ ಸಹಾಯ ಒದಗಿಸುತ್ತೇವೆ! ಈ ತುರ್ತು ಸಹಾಯ ಕವರ್, ಅಪಘಾತದ ಸ್ಥಳದಲ್ಲಿನ ಸಣ್ಣ ರಿಪೇರಿಗಳು, ಕಳೆದುಹೋದ ಕೀ ಸಹಾಯ, ನಕಲಿ ಕೀ ಸಮಸ್ಯೆ, ಟೈರ್ ಬದಲಾವಣೆ, ಬ್ಯಾಟರಿ ಜಂಪ್ ಸ್ಟಾರ್ಟ್‌, ಇಂಧನ ಟ್ಯಾಂಕ್ ಖಾಲಿಯಾಗುವುದು ಮತ್ತು ಟೋವಿಂಗ್ ಶುಲ್ಕಗಳನ್ನು ಒಳಗೊಳ್ಳುತ್ತದೆ! 


ಇದು ಹೇಗೆ ಕೆಲಸ ಮಾಡುತ್ತದೆ? ಈ ಆ್ಯಡ್ ಆನ್ ಕವರ್ ಅಡಿಯಲ್ಲಿ ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಉದಾಹರಣೆಗೆ, ನೀವು ನಿಮ್ಮ ಡಾಟ್ಸನ್ ಕಾರ್ ಓಡಿಸುವಾಗ ಅದಕ್ಕೆ ಹಾನಿ ಉಂಟಾದರೆ, ಅದನ್ನು ಗ್ಯಾರೇಜ್‌ಗೆ ಕೊಂಡೊಯ್ಯಬೇಕು. ಈ ಆ್ಯಡ್ ಆನ್ ಕವರ್‌ನೊಂದಿಗೆ, ನೀವು ವಿಮಾದಾತರಿಗೆ ಕರೆ ಮಾಡಿದರೆ, ಅವರು ನಿಮ್ಮ ವಾಹನವನ್ನು ನಿಮ್ಮ ಘೋಷಿತ ನೋಂದಾಯಿತ ವಿಳಾಸದಿಂದ 100 ಕಿಮೀ ವ್ಯಾಪ್ತಿಯಲ್ಲಿರುವ ಹತ್ತಿರದ ಗ್ಯಾರೇಜ್‌ಗೆ ಕೊಂಡೊಯ್ಯುತ್ತಾರೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್-ರಿಟರ್ನ್ ಟು ಇನ್ವಾಯ್ಸ್

IDV ಮತ್ತು ವಾಹನದ ಇನ್ವಾಯ್ಸ್ ಮೌಲ್ಯದ ನಡುವಿನ ವ್ಯತ್ಯಾಸದ ಮೊತ್ತವನ್ನು ನೀಡುತ್ತದೆ

ಒಂದು ದಿನ ಇದ್ದಕ್ಕಿದ್ದಂತೆ ನಿಮ್ಮ ಕಾರು ಕಳ್ಳತನವಾದ ಅಥವಾ ಸಂಪೂರ್ಣ ಹಾನಿಗೆ ತುತ್ತಾದ ಕಹಿಸುದ್ಧಿ ಕೇಳುವುದಕ್ಕಿಂತ ಕೆಟ್ಟ ವಿಷಯ ಇನ್ನೇನಿದೆ? ನಿಮ್ಮ ಪಾಲಿಸಿಯು ಯಾವಾಗಲೂ ನಿಮ್ಮ ವಾಹನದ IDV (ಇನ್ಶೂರ್ಡ್ ಡಿಕ್ಲೇರ್ಡ್‌ ವ್ಯಾಲ್ಯೂ) ಪಾವತಿಸುತ್ತದೆ.. ಈ IDV, ವಾಹನದ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ. ಆದರೆ, ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಮೂಲಕ, ನೀವು ಇನ್ವಾಯ್ಸ್ ಮೌಲ್ಯ ಮತ್ತು IDV ನಡುವಿನ ವ್ಯತ್ಯಾಸವನ್ನು ಕೂಡ ಪಡೆಯುತ್ತೀರಿ! ಇದಕ್ಕಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ FIR ಫೈಲ್ ಮಾಡಲಾಗಿದೆ ಮತ್ತು ಘಟನೆ ನಡೆದ 90 ದಿನಗಳ ಒಳಗೆ ಕಾರನ್ನು ಮರುಪಡೆದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.


ಇದು ಹೇಗೆ ಕೆಲಸ ಮಾಡುತ್ತದೆ? ನೀವು 2007 ರಲ್ಲಿ ವಾಹನವನ್ನು ಖರೀದಿಸಿದ್ದು, ಅದರ ಪರ್ಚೇಸ್ ಇನ್ವಾಯ್ಸ್ ₹7.5 ಲಕ್ಷ ಆಗಿದ್ದರೆ. ಎರಡು ವರ್ಷಗಳ ನಂತರ, ಅದರ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ₹5.5 ಲಕ್ಷ ಆಗಿರುತ್ತದೆ. ಒಂದು ವೇಳೆ ಆ ಕಾರು ರಿಪೇರಿ ಮಾಡಲಾಗದಷ್ಟು ಹಾನಿಯಾಗಿದ್ದರೆ ಅಥವಾ ಕಳುವಾಗಿದ್ದರೆ, ನೀವು ಮೂಲ ಪರ್ಚೇಸ್ ಇನ್ವಾಯ್ಸ್ ಮೌಲ್ಯವಾದ ₹7.5 ಲಕ್ಷಗಳನ್ನು ಪಡೆಯುತ್ತೀರಿ. ಇದರ ಜೊತೆಗೆ, ನೀವು ನೋಂದಣಿ ಶುಲ್ಕಗಳು ಮತ್ತು ಅನ್ವಯವಾಗುವ ತೆರಿಗೆಗಳನ್ನು ಕೂಡ ಪಡೆಯುತ್ತೀರಿ. ಪಾಲಿಸಿ ಶೆಡ್ಯೂಲ್ ಪ್ರಕಾರ ಹೆಚ್ಚುವರಿ/ಕಡಿತಗಳ ಮೊತ್ತವನ್ನು ನೀವೇ ಭರಿಸಬೇಕಾಗುತ್ತದೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್-ಎಂಜಿನ್ ಮತ್ತು ಗೇರ್ ಬಾಕ್ಸ್ ಪ್ರೊಟೆಕ್ಟರ್

ಮಳೆ ಅಥವಾ ಪ್ರವಾಹದ ಸಮಯದಲ್ಲಿ ಎಂಜಿನ್‌ಗೆ ನೀರು ನುಗ್ಗಿದಾಗ, ನಿಮ್ಮ ಕಾರ್ ಎಂಜಿನ್‌ಗೆ ಆದ ಹಾನಿಯನ್ನು ಕವರ್ ಮಾಡುತ್ತದೆ

ಭಾರೀ ಮಳೆಯಿರಲಿ ಅಥವಾ ಭೋರ್ಗರೆವ ಪ್ರವಾಹವೇ ಬರಲಿ, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್‌ ಮೂಲಕ ನಿಮ್ಮ ವಾಹನದ ಗೇರ್‌ಬಾಕ್ಸ್ ಮತ್ತು ಎಂಜಿನ್‌ಗೆ ಸುಭದ್ರ ಕವರೇಜ್‌ ಸಿಗುತ್ತದೆ.! ಇದು ಎಲ್ಲಾ ಸಣ್ಣ ಭಾಗಗಳು ಅಥವಾ ಆಂತರಿಕ ಭಾಗಗಳ ಬದಲಿ ಅಥವಾ ದುರಸ್ತಿಗೆ ಹಣ ಪಾವತಿಸುತ್ತದೆ. ಇದಲ್ಲದೆ, ಇದು ಕೆಲಸದ ವೆಚ್ಚಗಳು, ಕಂಪ್ರೆಷನ್ ಟೆಸ್ಟ್‌ಗಳ ವೆಚ್ಚ, ಯಂತ್ರ ಶುಲ್ಕಗಳು ಮತ್ತು ಎಂಜಿನ್ ಸಿಲಿಂಡರ್ ರೀ-ಬೋರಿಂಗ್‌ಗಳನ್ನು ಕೂಡ ಕವರ್ ಮಾಡುತ್ತದೆ.


ಇದು ಹೇಗೆ ಕೆಲಸ ಮಾಡುತ್ತದೆ? ಭಾರಿ ಮಳೆ ಇರುವಾಗ ಆಕ್ಸಿಡೆಂಟ್ ಆಗಿ, ಎಂಜಿನ್/ಗೇರ್ ಬಾಕ್ಸ್‌ಗೆ ಹಾನಿಯಾಗಿದೆ ಮತ್ತು ಎಂಜಿನ್ ಆಯಿಲ್ ಲೀಕ್ ಆಗುವ ಸಾಧ್ಯತೆ ಇದೆ ಎಂದುಕೊಳ್ಳಿ. ಅಂತಹ ಸಂದರ್ಭದಲ್ಲಿ, ನೀವು ವಾಹನ ಚಾಲನೆಯನ್ನು ಮುಂದುವರೆಸಿದರೆ, ಎಂಜಿನ್ ಸೀಜ್ ಆಗುತ್ತದೆ. ಅಂತಹ ಹಾನಿಯು ಸ್ಟ್ಯಾಂಡರ್ಡ್ ಮೋಟಾರ್ ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಕವರ್ ಆಗದಿರುವ ಪರಿಣಾಮಕಾರಿ ನಷ್ಟದ ಫಲವಾಗಿದೆ. ಈ ಆ್ಯಡ್-ಆನ್ ಕವರ್ ಮೂಲಕ, ನಿಮ್ಮ ಕಾರಿನ ಎಂಜಿನ್ ಮತ್ತು ಗೇರ್‌ಬಾಕ್ಸ್‌ನ ಆಂತರಿಕ ಭಾಗಗಳಿಗೆ ಕವರೇಜ್ ಸಿಗುತ್ತದೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್-ಕೀ ಬದಲಿ ಕವರ್

ಕೀ ಕಾಣೆಯಾಗಿದೆಯೇ/ಕಳುವಾಗಿದೆಯೇ? ಕೀ ರಿಪ್ಲೇಸ್‌ಮೆಂಟ್ ಕವರ್ ನಿಮಗೆ ಸಹಾಯ ಮಾಡುತ್ತದೆ.!

ನಿಮ್ಮ ಕೀ ಕಳುವಾಗಿದೆಯೇ ಅಥವಾ ಕಾಣೆಯಾಗಿದೆಯೇ? ಈ ಆ್ಯಡ್-ಆನ್, ಆದಷ್ಟು ಬೇಗ ಬದಲಿ ಕೀಗಳನ್ನು ಪಡೆಯಲು ಸಹಾಯ ಮಾಡುತ್ತದೆ.!


ಇದು ಹೇಗೆ ಕೆಲಸ ಮಾಡುತ್ತದೆ? ನೀವು ನಿಮ್ಮ ಕಾರಿನ ಕೀ ಕಳೆದುಕೊಂಡಿದ್ದರೆ ಅಥವಾ ಅದು ಕಾಣೆಯಾದರೆ ಈ ಆ್ಯಡ್-ಆನ್ ಕವರ್ ನಿಮ್ಮ ಆಪ್ತರಕ್ಷಕನಾಗುತ್ತದೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್- ಬಳಸಬಹುದಾದ ವಸ್ತುಗಳ ವೆಚ್ಚ

ನಿಮ್ಮ ಕಾರಿನಲ್ಲಿ ಬಳಸಲಾದ ಎಲ್ಲಾ ಬಳಕೆ ಮಾಡಬಹುದಾದ ವಸ್ತುಗಳ ಕವರೇಜ್ ಇಲ್ಲಿದೆ! ಹೌದು! ಇದು ನಿಮಗೆ ಈಗಲೇ ಅಗತ್ಯವಿದೆ!! ಇದು ಎಲ್ಲಾ ಮರುಬಳಕೆ ಮಾಡಲಾಗದ ನಟ್‌, ಬೋಲ್ಟ್‌, ಇತ್ಯಾದಿ ವಸ್ತುಗಳಿಗೆ ಪಾವತಿಸುತ್ತದೆ ....


ಇದು ಹೇಗೆ ಕೆಲಸ ಮಾಡುತ್ತದೆ? ನಿಮ್ಮ ಕಾರಿಗೆ ಆಕ್ಸಿಡೆಂಟ್ ಆಗಿದ್ದು, ರಿಪೇರಿಯ ಅಗತ್ಯವಿದ್ದರೆ, ಅಂತಹ ಸಂದರ್ಭದಲ್ಲಿ ನಿಮ್ಮ ಕಾರನ್ನು ರಿಪೇರಿ ಮಾಡಿಸಲು ನಟ್‌, ಬೋಲ್ಟ್‌ನಂತಹ ಮರು-ಬಳಕೆ ಮಾಡಲಾಗದ ವಸ್ತುಗಳನ್ನು ಖರೀದಿಸಬೇಕಾಗಬಹುದು. ವಾಶರ್‌, ಸ್ಕ್ರೂ, ಲ್ಯೂಬ್ರಿಕೆಂಟ್‌, ಇತರೆ ಆಯಿಲ್‌ಗಳು, ಬೇರಿಂಗ್‌, ನೀರು, ಗ್ಯಾಸ್ಕೆಟ್‌, ಸೀಲಂಟ್‌, ಫಿಲ್ಟರ್‌, ಸೇರಿದಂತೆ ಹಲವಾರು ಭಾಗಗಳು ಮೋಟಾರ್ ಇನ್ಶೂರೆನ್ಸ್ ಕವರ್ ಅಡಿಯಲ್ಲಿ ಕವರ್ ಆಗಿರುವುದಿಲ್ಲ. ಅದರ ವೆಚ್ಚವನ್ನು ಇನ್ಶೂರ್ಡ್‌ ವ್ಯಕ್ತಿಯೇ ಭರಿಸಬೇಕು. ಆದರೆ ಈ ಆ್ಯಡ್-ಆನ್ ಕವರ್‌ನೊಂದಿಗೆ ನಾವು ಅಂತಹ ವೆಚ್ಚವನ್ನು ಪಾವತಿಸುತ್ತೇವೆ ಮತ್ತು ನಿಮ್ಮ ಚಿಂತೆಯನ್ನು ದೂರ ಮಾಡುತ್ತೇವೆ.

ಡಾಟ್ಸನ್ ಕಾರ್ ಇನ್ಶೂರೆನ್ಸ್- ಬಳಕೆಯ ನಷ್ಟ - ಡೌನ್‌ಟೈಮ್ ರಕ್ಷಣೆ

ನಿಮ್ಮ ಡಾಟ್ಸನ್ ಕಾರು ಕೆಟ್ಟಾಗ ಕ್ಯಾಬ್‌ಗಳಿಗೆ ಹಣ ಪಾವತಿಸುತ್ತಿದ್ದೀರಾ? ನಿಮಗಾಗಿ ನಾವು ಡೌನ್‌ಟೈಮ್ ಪ್ರೊಟೆಕ್ಷನ್ ತಂದಿದ್ದೇವೆ! ಗ್ರಾಹಕರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬೇರೆ ಸಾರಿಗೆ ವಿಧಾನಗಳನ್ನು ಬಳಸಿದಾಗ, ಇದು ನಗದು ಭತ್ಯೆಯ ಪ್ರಯೋಜನ ಒದಗಿಸುತ್ತದೆ .


ಇದು ಹೇಗೆ ಕೆಲಸ ಮಾಡುತ್ತದೆ? ಈಗ, ನಿಮ್ಮ ಕಾರ್‌ಗೆ ಆಕ್ಸಿಡೆಂಟ್ ಆಗಿದ್ದು ಅದನ್ನು ರಿಪೇರಿಗೆ ಕಳಿಸಲಾಗಿದೆ ಎಂದುಕೊಳ್ಳೋಣ! ದುರಾದೃಷ್ಟಕ್ಕೆ, ನಿಮ್ಮ ಬಳಿ ಯಾವುದೇ ವಾಹನವಿಲ್ಲದೇ, ದೈನಂದಿನ ಪ್ರಯಾಣಕ್ಕೆ ಕ್ಯಾಬ್‌ಗಳಲ್ಲಿ ಓಡಾಡಿ ಹಣ ಪೋಲಾಗುತ್ತದೆ! ಆದರೆ, ಯೂಸ್-ಡೌನ್‌ಟೈಮ್ ಪ್ರೊಟೆಕ್ಷನ್, ನೀವು ಕ್ಯಾಬ್‌ಗಳಿಗೆ ಮಾಡಿದ ಖರ್ಚನ್ನು ಕವರ್ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು! ಇದು ಪಾಲಿಸಿ ಶೆಡ್ಯೂಲಿನಲ್ಲಿ ನಮೂದಿಸಿದಂತೆ ಇರುತ್ತದೆ!

ಡಾಟ್ಸನ್ ಕಾರ್ ಇನ್ಶೂರೆನ್ಸ್ - ನವೀಕರಣ ಪ್ರಕ್ರಿಯೆ

 

ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನವೀಕರಿಸುವುದು ತ್ವರಿತ ಮತ್ತು ಸರಳವಾಗಿದೆ. ಇದಕ್ಕೆ ಕನಿಷ್ಠ ಪೇಪರ್‌ವರ್ಕ್ ಅಗತ್ಯವಿರುತ್ತದೆ. ನೀವು ಮಾಡಬೇಕಾಗಿರುವುದು ಕೇವಲ ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಗಡುವು ಮುಗಿಯುವ ಪಾಲಿಸಿಯ ವಿವರಗಳನ್ನು ಆನ್ಲೈನಿನಲ್ಲಿ ನೀಡಿ, ಹೊಸ ಪಾಲಿಸಿಯ ವಿವರಗಳನ್ನು ನೋಡಿ ಮತ್ತು ಅನೇಕ ಸುರಕ್ಷಿತ ಪಾವತಿ ಆಯ್ಕೆಗಳ ಮೂಲಕ ತ್ವರಿತ ಆನ್ಲೈನ್ ಪಾವತಿ ಮಾಡಿ. ಅಷ್ಟೆ!

ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಡಾಟ್ಸನ್ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಿದಾಗ ಸರಳ ಕಾರ್ಯವಿಧಾನಗಳು, ತ್ವರಿತ ವಿತರಣೆ ಮತ್ತು ವಿಶಿಷ್ಟ ಪ್ರಯೋಜನಗಳನ್ನು ಪಡೆಯುತ್ತೀರಿ. ಆದ್ದರಿಂದ, ಯಾವುದೇ ಅನಿರೀಕ್ಷಿತ ಅಪಘಾತದ ನಂತರ, ನೀವು ಡ್ರೈವಿಂಗ್ ಸೀಟಿಗೆ ಸುರಕ್ಷಿತವಾಗಿ ಮತ್ತು ಶೀಘ್ರದಲ್ಲೇ ಮರಳಿ ಬರಲು ಬಯಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲುದಾರರಾಗಿ ಎಚ್‌ಡಿಎಫ್‌ಸಿ ಎರ್ಗೋವನ್ನು ಆಯ್ಕೆಮಾಡಿ!

ಡಾಟ್ಸನ್ ಕಾರ್ ಇನ್ಶೂರೆನ್ಸ್-ಕ್ಲೈಮ್ ಪ್ರಕ್ರಿಯೆ

 

ಇದು ನಿಮ್ಮಲ್ಲಿ ಹೆಚ್ಚಿನವರಿಗೆ ಅರ್ಥಮಾಡಿಕೊಳ್ಳಲು ಕಷ್ಟಕರವಾಗಿ ಕಾಣಿಸಬಹುದು. ಆದಾಗ್ಯೂ, ಎಚ್‌‌ಡಿಎಫ್‌‌ಸಿ ಎರ್ಗೋ ತಪ್ಪು ಕಲ್ಪನೆಯನ್ನು ಚೆನ್ನಾಗಿ ಭೇದಿಸಿದೆ. ಇದು ಕ್ಲೈಮ್ ಪ್ರಕ್ರಿಯೆಯನ್ನು ತ್ವರಿತ, ಸುಗಮ ಮತ್ತು ಸರಳಗೊಳಿಸಿದೆ. ನೀವು ಮಾಡಬೇಕಾಗಿರುವುದು ಅದರ ಮೊಬೈಲ್ ಅಪ್ಲಿಕೇಶನ್, ಎಚ್‌ಡಿಎಫ್‌ಸಿ ಎರ್ಗೋ ಇನ್ಶೂರೆನ್ಸ್ ಪೋರ್ಟ್‌ಫೋಲಿಯೊ ಆರ್ಗನೈಸರ್ (IPO) ಅಥವಾ ಟೋಲ್ ಫ್ರೀ ಸಂಖ್ಯೆಯ ಮೂಲಕ ನಿಮ್ಮ ಕ್ಲೈಮ್ ಅನ್ನು ನೋಂದಾಯಿಸಿ, ಕ್ಲೈಮ್ ಪ್ರಕ್ರಿಯೆಯ ವಿವರಗಳನ್ನು ತಿಳಿಯಲು 022 6234 6234ಇಲ್ಲಿ ಕ್ಲಿಕ್ ಮಾಡಿ.

 

ಇತರೆ ಕಾರ್ ಇನ್ಶೂರೆನ್ಸ್ ಸಂಬಂಧಿತ ಬರಹಗಳು
 

ಕಾರ್ ಇನ್ಶೂರೆನ್ಸ್ ಕುರಿತು ಆಗಾಗ ಕೇಳುವ ಪ್ರಶ್ನೆಗಳು

ಕಾರ್ ಇನ್ಶೂರೆನ್ಸ್ ಎಂಬುದು ಹಣಕಾಸು ನಷ್ಟಕ್ಕೆ ಕಾರಣವಾಗುವ ಯಾವುದೇ ಹಾನಿಯ ವಿರುದ್ಧ ನಿಮ್ಮ ವಾಹನಕ್ಕೆ ರಕ್ಷಣೆ ನೀಡಲು ಅಗತ್ಯವಿರುವ ಒಂದು ರೀತಿಯ ಇನ್ಶೂರೆನ್ಸ್ ಪಾಲಿಸಿಯಾಗಿದೆ. ಜೊತೆಗೆ, ವಾಹನದ ಬಳಕೆಯಿಂದ ಉದ್ಭವವಾಗುವ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯು ಕಾರ್ ಇನ್ಶೂರೆನ್ಸ್ ಅಡಿಯಲ್ಲಿ ಕವರ್ ಆಗುತ್ತದೆ. ಮೋಟಾರ್ ವಾಹನ ಕಾಯ್ದೆಯ ಪ್ರಕಾರ, ಹೊಣೆಗಾರಿಕೆ ಮಾತ್ರದ ಪಾಲಿಸಿ ಖರೀದಿಸುವುದು ಕಡ್ಡಾಯವಾಗಿದ್ದು, ಇದರ ಹೊರತು ವಾಹನವನ್ನು ರಸ್ತೆಗಿಳಿಸಲು ಸಾಧ್ಯವಿಲ್ಲ.
ಸಮಗ್ರ ಇನ್ಶೂರೆನ್ಸ್ ಪಾಲಿಸಿಯು ನಿಮ್ಮ ವಾಹನಕ್ಕೆ ಬೆಂಕಿ ಹತ್ತುವುದು, ಕಳ್ಳತನ, ಭೂಕಂಪ ಇತ್ಯಾದಿಗಳಿಂದಾಗುವ ಹಾನಿಯ ವಿರುದ್ಧ ರಕ್ಷಣೆ ಒದಗಿಸುತ್ತದೆ. ಜೊತೆಗೆ, ಸಾವು, ದೈಹಿಕ ಗಾಯ ಹಾಗೂ ಥರ್ಡ್ ಪಾರ್ಟಿ ಆಸ್ತಿ ಹಾನಿಯ ವಿಷಯದಲ್ಲಿ ಯಾವುದೇ ಥರ್ಡ್ ಪಾರ್ಟಿ ಹೊಣೆಗಾರಿಕೆಯ ವಿರುದ್ಧ ಕವರ್ ಒದಗಿಸುತ್ತದೆ.
ಕಾನೂನಿನ ಪ್ರಕಾರ, ಥರ್ಡ್ ಪಾರ್ಟಿ ಹೊಣೆಗಾರಿಕೆ ಮಾತ್ರದ ಪಾಲಿಸಿ ಅತ್ಯಗತ್ಯ, ಇದಿಲ್ಲದೆ ವಾಹನವನ್ನು ರಸ್ತೆಯಲ್ಲಿ ಬಳಸಲು ಸಾಧ್ಯವಿಲ್ಲ. ಆದರೆ, ಥರ್ಡ್ ಪಾರ್ಟಿ ಹೊಣೆಗಾರಿಕೆ ಮಾತ್ರದ ಪಾಲಿಸಿಯ ಅಡಿಯಲ್ಲಿ, ಬೆಂಕಿ, ಕಳ್ಳತನ, ಭೂಕಂಪ, ಭಯೋತ್ಪಾದನೆ ಇತ್ಯಾದಿಗಳಿಂದ ನಿಮ್ಮ ವಾಹನಕ್ಕೆ ಆಗುವ ಯಾವುದೇ ಹಾನಿ ಕವರ್ ಆಗುವುದಿಲ್ಲ, ಇದು ದೊಡ್ಡ ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ಆದ್ದರಿಂದ, ಥರ್ಡ್ ಪಾರ್ಟಿ ಹೊಣೆಗಾರಿಕೆಯ ಮೇಲೆ ರಕ್ಷಣೆ ಒದಗಿಸುವ ಜೊತೆಗೆ ಹಣಕಾಸಿನ ರಕ್ಷಣೆಯನ್ನೂ ನೀಡುವ ಸಮಗ್ರ ಕವರ್ ಖರೀದಿಸುವುದು ಉತ್ತಮ.
ಎರಡು ರೀತಿಯ ಕಾರ್ ಇನ್ಶೂರೆನ್ಸ್ ಪಾಲಿಸಿಗಳಿವೆ - ಸಮಗ್ರ ಮತ್ತು ಹೊಣೆಗಾರಿಕೆ ಮಾತ್ರದ ಪಾಲಿಸಿ
ಸುಪ್ರೀಮ್ ಕೋರ್ಟ್ ನಿರ್ದೇಶನದ ಪ್ರಕಾರ, 1ನೇ ಸೆಪ್ಟೆಂಬರ್, 2018 ರಿಂದ ಅನ್ವಯವಾಗುವಂತೆ, ಎಲ್ಲಾ ಹೊಸ ಕಾರು ಮಾಲೀಕರು ದೀರ್ಘಾವಧಿ ಪಾಲಿಸಿ ಖರೀದಿಸಬೇಕು. ನಿಮ್ಮ ಅಮೂಲ್ಯ ಸ್ವತ್ತಿಗೆ ಈ ಕೆಳಗಿನ ದೀರ್ಘಾವಧಿ ಪಾಲಿಸಿಗಳಿಂದ ಆಯ್ಕೆ ಮಾಡಬಹುದು:
  1. 3 ವರ್ಷಗಳ ಅವಧಿಗೆ ಹೊಣೆಗಾರಿಕೆ ಮಾತ್ರದ ಪಾಲಿಸಿ
  2. 3 ವರ್ಷಗಳ ಪಾಲಿಸಿ ಅವಧಿಗೆ ಪ್ಯಾಕೇಜ್ ಪಾಲಿಸಿ
  3. 3 ವರ್ಷಗಳ ಹೊಣೆಗಾರಿಕೆ ಕವರ್ ಮತ್ತು ಸ್ವಂತ ಹಾನಿಗಾಗಿ 1 ವರ್ಷದ ಕವರ್‌ನೊಂದಿಗೆ ಬಂಡಲ್ಡ್ ಪಾಲಿಸಿ
ಹೌದು, ಮೋಟಾರ್ ವಾಹನ ಕಾಯ್ದೆಯು ರಸ್ತೆಯಲ್ಲಿ ಚಲಿಸುವ ಪ್ರತಿಯೊಂದು ವಾಹನವು ಹೊಣೆಗಾರಿಕೆ ಮಾತ್ರದ ಪಾಲಿಸಿಯೊಂದಿಗೆ ಇನ್ಶೂರ್ ಆಗಿರಬೇಕು ಎಂದು ಹೇಳುತ್ತದೆ.
ಜೀರೋ ಡಿಪ್ರಿಸಿಯೇಷನ್ ಒಂದು ಆ್ಯಡ್-ಆನ್ ಕವರ್ ಆಗಿದ್ದು ಇದನ್ನು ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಖರೀದಿಸಬೇಕಾಗುತ್ತದೆ. ಇದು ನಿಮ್ಮ ವಾಹನಕ್ಕೆ ಆದ ಸವಕಳಿಯನ್ನು ಲೆಕ್ಕಿಸದೆ ಪೂರ್ಣ ಕವರೇಜ್ ಒದಗಿಸುತ್ತದೆ. ಉದಾಹರಣೆಗೆ, ವಾಹನವು ತೀರಾ ಹಾನಿಗೊಳಗಾಗಿದ್ದರೆ, ಯಾವುದೇ ಸವಕಳಿ ಶುಲ್ಕಗಳನ್ನು ಪಾವತಿಸದೇ, ಪಾಲಿಸಿಯ ನಿಯಮ ಮತ್ತು ಷರತ್ತುಗಳಿಗೆ ಒಳಪಟ್ಟು ಕ್ಲೇಮ್ ಮೊತ್ತ ಪಡೆಯಲು ನೀವು ಅರ್ಹರಾಗುತ್ತೀರಿ.
ತುರ್ತು ಸಹಾಯವು ಒಂದು ಆ್ಯಡ್-ಆನ್ ಕವರ್ ಆಗಿದ್ದು, ಹೆಚ್ಚುವರಿ ಪ್ರೀಮಿಯಂ ಪಾವತಿಸುವ ಮೂಲಕ ಇದನ್ನು ಖರೀದಿಸಬೇಕು. ಇದು ಪಾಲಿಸಿ ಅವಧಿಯಲ್ಲಿ ಬಳಸಿಕೊಳ್ಳಬಹುದಾದ ಅನೇಕ ಪ್ರಯೋಜನಗಳನ್ನು ಹೊಂದಿದೆ. ಉದಾಹರಣೆಗೆ: ವಾಹನ ದುರಸ್ಥಿ, ಟೈರ್ ಬದಲಾವಣೆ, ಟೋವಿಂಗ್ ಅಥವಾ ಇಂಧನ ಬದಲಾವಣೆ ಮಾಡಬೇಕಾದಾಗ ಸಹಾಯ ದೊರಕುತ್ತದೆ. ಈ ಪ್ರಯೋಜನಗಳನ್ನು ಪಡೆಯಲು ಗ್ರಾಹಕರು ಪಾಲಿಸಿಯಲ್ಲಿ ನಮೂದಿಸಿದ ಗ್ರಾಹಕ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು.
ಸರಳವಾಗಿ, ಕ್ಲೈಮ್-ರಹಿತ ವರ್ಷದ ನಂತರ ನಿಮ್ಮ ಪಾಲಿಸಿಯನ್ನು ನವೀಕರಿಸುವಾಗ ಪಾವತಿಸಬೇಕಾದ ಸ್ವಂತ ಹಾನಿ ಪ್ರೀಮಿಯಂನಲ್ಲಿ ಸಿಗುವ ರಿಯಾಯಿತಿಯಾಗಿದೆ. ಎಚ್ಚರಿಕೆಯಿಂದ ಚಾಲನೆ ಮಾಡಲು ಮತ್ತು ಅಪಘಾತಗಳನ್ನು ತಪ್ಪಿಸಲು ಇದು ಪ್ರೋತ್ಸಾಹಕವಾಗಿದೆ.
ಎಲ್ಲಾ ಬಗೆಯ ವಾಹನಗಳುಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ %
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ20%
ಇನ್ಶೂರೆನ್ಸ್‌‌‌‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ25%
ಇನ್ಶೂರೆನ್ಸ್‌‌‌‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ35%
ಇನ್ಶೂರೆನ್ಸ್‌‌‌‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ45%
ಇನ್ಶೂರೆನ್ಸ್‌‌‌‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ50%
ಅವಧಿ ಮುಗಿದ ನಿಮ್ಮ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ಸೆಲ್ಫ್ ಇನ್ಸ್‌ಪೆಕ್ಷನ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ, ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಿರಿ. ಡಾಕ್ಯುಮೆಂಟ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಅನುಮೋದಿಸಿದ ಮೇಲೆ, ಪಾಲಿಸಿ ನವೀಕರಣಕ್ಕೆ ಹಣ ಪಾವತಿಸಲು ಒಂದು ಪೇಮೆಂಟ್ ಲಿಂಕ್ ಕಳುಹಿಸಲಾಗುವುದು. ಪಾವತಿಯನ್ನು ಮಾಡಿದ ನಂತರ, ನೀವು ಪಾಲಿಸಿಯ ಕಾಪಿಯನ್ನು ಸ್ವೀಕರಿಸುತ್ತೀರಿ.
ಹಿಂದಿನ ಪಾಲಿಸಿಯ ಗಡುವು ದಿನಾಂಕದಿಂದ 90 ದಿನಗಳವರೆಗೆ ನೋ ಕ್ಲೈಮ್ ಬೋನಸ್ ಮಾನ್ಯವಾಗಿರುತ್ತದೆ. ಪಾಲಿಸಿಯನ್ನು 90 ದಿನಗಳ ಒಳಗೆ ನವೀಕರಿಸದಿದ್ದರೆ, ನೋ ಕ್ಲೈಮ್ ಬೋನಸ್ 0% ಆಗುತ್ತದೆ ಮತ್ತು ತಡವಾಗಿ ನವೀಕರಿಸಿದ ಪಾಲಿಸಿಗೆ ಯಾವುದೇ ಪ್ರಯೋಜನವನ್ನು ನೀಡಲಾಗುವುದಿಲ್ಲ.
ವಾಹನದ ಇನ್ಶೂರ್ಡ್‌ ಡಿಕ್ಲೇರ್ಡ್‌ ವ್ಯಾಲ್ಯೂ (IDV) ಅನ್ನು 'ವಿಮಾ ಮೊತ್ತ' ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಪ್ರತಿ ಇನ್ಶೂರ್ಡ್‌ ವಾಹನಕ್ಕೆ ಪ್ರತಿ ಪಾಲಿಸಿ ಅವಧಿಯ ಆರಂಭದಲ್ಲಿ ನಿಗದಿಪಡಿಸಲಾಗುತ್ತದೆ.
ವಾಹನದ IDVಯನ್ನು ಆ ಬ್ರ್ಯಾಂಡ್‌ನ ಉತ್ಪಾದಕರು ಪಟ್ಟಿ ಮಾಡಿದ ಮಾರಾಟ ಬೆಲೆ ಮತ್ತು ಇನ್ಶೂರೆನ್ಸ್/ನವೀಕರಣ ಪ್ರಾರಂಭದಲ್ಲಿ ಇನ್ಶೂರೆನ್ಸ್‌ಗಾಗಿ ಪ್ರಸ್ತಾಪಿಸಲಾದ ವಾಹನದ ಮಾಡೆಲ್ ಆಧಾರದ ಮೇಲೆ ನಿಗದಿಪಡಿಸಬೇಕು ಹಾಗೂ ಅದನ್ನು ಸವಕಳಿಗೆ ಸರಿಹೊಂದಿಸಬೇಕು (ಕೆಳಗೆ ನಿರ್ದಿಷ್ಟಪಡಿಸಿದ ಶೆಡ್ಯೂಲ್ ಪ್ರಕಾರ). ಸೈಡ್ ಕಾರ್ (ಗಳು) ಮತ್ತು/ಅಥವಾ ಅಕ್ಸೆಸರಿಗಳ IDV, ಯಾವುದಾದರೂ ಇದ್ದಲ್ಲಿ, ಅದನ್ನು ವಾಹನದ ಉತ್ಪಾದಕರ ಪಟ್ಟಿ ಮಾಡಿದ ಮಾರಾಟ ಬೆಲೆಯಲ್ಲಿ ಸೇರಿಸಲಾಗಿಲ್ಲ ಎಂದಾದರೆ, ಅದನ್ನೂ ಇದೇ ರೀತಿಯಲ್ಲಿ ನಿಗದಿಪಡಿಸಬೇಕು.
ವಾಹನದ ವಯಸ್ಸುIDV ಫಿಕ್ಸ್ ಮಾಡಲು ಸವಕಳಿ %
6 ತಿಂಗಳು ಮೀರದ5%
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ15%
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ20%
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ30%
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ40%
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ50%
ಯಾವುದೇ ಪೇಪರ್‌ವರ್ಕ್ ಮತ್ತು ಫಿಸಿಕಲ್ ಡಾಕ್ಯುಮೆಂಟೇಶನ್ ಅಗತ್ಯವಿಲ್ಲ. ನೀವು ತಕ್ಷಣವೇ ನಿಮ್ಮ ಪಾಲಿಸಿಯನ್ನು ಪಡೆಯುತ್ತೀರಿ.
ಅಸ್ತಿತ್ವದಲ್ಲಿರುವ ಇನ್ಶೂರೆನ್ಸ್ ಪಾಲಿಸಿಯನ್ನು ಒಂದು ಅನುಮೋದನೆ ಪಾಸ್ ಮಾಡುವ ಮೂಲಕ ಖರೀದಿದಾರರ ಹೆಸರಿಗೆ ವರ್ಗಾಯಿಸಬಹುದು.. ಮಾರಾಟ ಪತ್ರ/ಫಾರ್ಮ್ 29/30/NOC/NCB ಮರುಪಡೆಯುವಿಕೆಯಂತಹ ಬೆಂಬಲಿತ ಡಾಕ್ಯುಮೆಂಟ್‌ಗಳು ಅಸ್ತಿತ್ವದಲ್ಲಿರುವ ಪಾಲಿಸಿಯ ಅಡಿಯಲ್ಲಿ ಅನುಮೋದನೆಯನ್ನು ನೀಡಬೇಕಾಗುತ್ತದೆ.
ಅಥವಾ
ನೀವು ಅಸ್ತಿತ್ವದಲ್ಲಿರುವ ಪಾಲಿಸಿಯನ್ನು ರದ್ದುಗೊಳಿಸಬಹುದು. ಪಾಲಿಸಿಯನ್ನು ರದ್ದುಗೊಳಿಸಲು ಮಾರಾಟ ಪತ್ರ/ಫಾರ್ಮ್ 29/30 ನಂತಹ ಬೆಂಬಲಿತ ಡಾಕ್ಯುಮೆಂಟ್‌ಗಳು ಬೇಕಾಗುತ್ತವೆ.
ನಿಮ್ಮ ಬಳಿಯಿರುವ ವಾಹನದ ಮಾರಾಟದ ಆಧಾರದ ಮೇಲೆ ಈಗಿನ ವಿಮಾದಾರರು NCB ರಿಸರ್ವಿಂಗ್ ಲೆಟರ್ ನೀಡುತ್ತಾರೆ. NCB ರಿಸರ್ವಿಂಗ್ ಲೆಟರ್ ಆಧಾರದ ಮೇಲೆ, ಈ ಪ್ರಯೋಜನವನ್ನು ಹೊಸ ವಾಹನಕ್ಕೆ ವರ್ಗಾಯಿಸಬಹುದು
ಇನ್ಶೂರೆನ್ಸ್ ವರ್ಗಾವಣೆ ಮಾಡಲು ಪೂರಕ ಡಾಕ್ಯುಮೆಂಟ್‌ಗಳೊಂದಿಗೆ ಇನ್ಶೂರರ್ ಅನ್ನು ಸಂಪರ್ಕಿಸಬೇಕು. ಪೂರಕ ಡಾಕ್ಯುಮೆಂಟ್‌ಗಳೆಂದರೆ ಸೇಲ್ ಡೀಡ್/ಮಾರಾಟಗಾರರ ಫಾರ್ಮ್ 29/30/NOC, ಹಳೆಯ RC ಕಾಪಿ, ವರ್ಗಾಯಿಸಿದ RC ಕಾಪಿ ಮತ್ತು NCB ರಿಕವರಿ ಮೊತ್ತ, ಇತ್ಯಾದಿ.
ಅವಧಿ ಮುಗಿದ ನಿಮ್ಮ ಪಾಲಿಸಿಯನ್ನು ಆನ್‌ಲೈನ್‌ನಲ್ಲಿ ಸುಲಭವಾಗಿ ನವೀಕರಿಸಬಹುದು. ನೀವು ಎಚ್‌ಡಿಎಫ್‌ಸಿ ಎರ್ಗೋ ಸ್ವಯಂ ತಪಾಸಣೆ ಅಪ್ಲಿಕೇಶನ್ ಡೌನ್ಲೋಡ್ ಮಾಡಬೇಕು ಮತ್ತು ಡಾಕ್ಯುಮೆಂಟ್‌ಗಳನ್ನು ಅಪ್ಲೋಡ್ ಮಾಡಬೇಕು. ಡಾಕ್ಯುಮೆಂಟ್‌ಗಳನ್ನು ಎಚ್‌ಡಿಎಫ್‌ಸಿ ಎರ್ಗೋ ಅನುಮೋದಿಸಿದ ನಂತರ, ಪಾವತಿ ಲಿಂಕ್ ಕಳುಹಿಸಲಾಗುತ್ತದೆ ಮತ್ತು ಪಾಲಿಸಿಯನ್ನು ನವೀಕರಿಸಲು ನೀವು ಈ ಲಿಂಕ್‌ನಲ್ಲಿ ಪಾವತಿ ಮಾಡಬೇಕು. ಪಾವತಿಯನ್ನು ಮಾಡಿದ ನಂತರ, ನೀವು ಪಾಲಿಸಿಯ ಕಾಪಿಯನ್ನು ಸ್ವೀಕರಿಸುತ್ತೀರಿ.
ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ ಅಥವಾ ಸಹಾಯವಾಣಿ ಕೇಂದ್ರ ಅಥವಾ ಎಚ್‌ಡಿಎಫ್‌‌‌ಸಿ ಎರ್ಗೋ ಮೊಬೈಲ್ ಆ್ಯಪ್‌ ಮೂಲಕ ಕ್ಲೈಮ್ ನೋಂದಣಿ ಮಾಡಬಹುದು
ನೀವು ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ ಅಥವಾ ಸಹಾಯವಾಣಿ ಕೇಂದ್ರ ಅಥವಾ ಎಚ್‌ಡಿಎಫ್‌‌‌ಸಿ ಎರ್ಗೋ ಮೊಬೈಲ್ ಆ್ಯಪ್‌ ಮೂಲಕ ಕ್ಲೈಮ್ ನೋಂದಣಿ ಮಾಡಬಹುದು
ಓವರ್‌ನೈಟ್ ರಿಪೇರಿ ಸೌಲಭ್ಯದೊಂದಿಗೆ, ಸಣ್ಣಪುಟ್ಟ ಹಾನಿಗಳನ್ನು ಒಂದು ರಾತ್ರಿಯಲ್ಲಿ ರಿಪೇರಿ ಮಾಡಲಾಗುತ್ತದೆ. ಸೌಲಭ್ಯವು ಖಾಸಗಿ ಕಾರುಗಳು ಮತ್ತು ಟ್ಯಾಕ್ಸಿಗಳಿಗೆ ಮಾತ್ರ ಲಭ್ಯವಿದೆ. ಓವರ್‌ನೈಟ್ ರಿಪೇರಿ ಸೌಲಭ್ಯದ ಪ್ರಕ್ರಿಯೆಯನ್ನು ಕೆಳಗೆ ವಿವರಿಸಲಾಗಿದೆ
  1. ಕ್ಲೈಮ್ ಅನ್ನು ಕಾಲ್ ಸೆಂಟರ್ ಅಥವಾ ಎಚ್‌ಡಿಎಫ್‌ಸಿ ಎರ್ಗೋ ಮೊಬೈಲ್ ಅಪ್ಲಿಕೇಶನ್ (IPO) ಮೂಲಕ ತಿಳಿಸಬೇಕು.
  2. ನಮ್ಮ ತಂಡವು ಗ್ರಾಹಕರನ್ನು ಸಂಪರ್ಕಿಸಿ ಹಾನಿಗೊಳಗಾದ ವಾಹನದ ಫೋಟೋಗಳನ್ನು ಕಳಿಸುವಂತೆ ಕೇಳುತ್ತದೆ.
  3. ಈ ಸೇವೆಯ ಅಡಿಯಲ್ಲಿ 3 ಪ್ಯಾನೆಲ್‌‌ಗಳಿಗೆ ಸೀಮಿತವಾದ ಹಾನಿಗಳನ್ನು ಅಂಗೀಕರಿಸಲಾಗುವುದು.
  4. ವರ್ಕ್‌ಶಾಪ್‌ ಅಪಾಯಿಂಟ್ಮೆಂಟ್ ಮತ್ತು ಪಿಕಪ್‌ಗಳು ವಾಹನದ ಭಾಗ ಮತ್ತು ಸ್ಲಾಟ್ ಲಭ್ಯತೆಗೆ ಒಳಪಟ್ಟಿರುವುದರಿಂದ ವಾಹನವನ್ನು ಮಾಹಿತಿ ನೀಡಿದ ತಕ್ಷಣ ದುರಸ್ತಿ ಮಾಡಲಾಗುವುದಿಲ್ಲ.
  5. ಗ್ರಾಹಕರು ಗ್ಯಾರೇಜ್‌ಗೆ ಬಂದು, ವಾಪಸ್ ಹೋಗಲು ಬೇಕಾಗುವ ಸಮಯ ಉಳಿಯುತ್ತದೆ.
  6. ಸದ್ಯಕ್ಕೆ ಈ ಸೇವೆಯು 13 ಆಯ್ದ ನಗರಗಳಲ್ಲಿ, ಅಂದರೆ ದೆಹಲಿ, ಮುಂಬೈ, ಪುಣೆ, ನಾಗ್ಪುರ, ಸೂರತ್, ವಡೋದರಾ, ಅಹಮದಾಬಾದ್, ಗುರ್ಗಾಂವ್, ಜೈಪುರ, ಹೈದರಾಬಾದ್, ಚೆನ್ನೈ, ಕೋಲ್ಕತ್ತಾ ಮತ್ತು ಬೆಂಗಳೂರಿನಲ್ಲಿ ಮಾತ್ರ ದೊರೆಯುತ್ತಿದೆ.
ಅವಾರ್ಡ್ಸ್ ಮತ್ತು ಗುರುತಿಸುವಿಕೆ
x
x