ಹೋಂಡಾ ಸಿಟಿ ಭಾರತದಲ್ಲಿ ಜಪಾನೀಸ್ ಬ್ರ್ಯಾಂಡ್‌ನ ಐಕಾನಿಕ್ ಮಾದರಿಯಾಗಿದೆ. 1998 ರಲ್ಲಿ ಪ್ರಾರಂಭವಾದ ನಂತರ ಇದು ಭಾರತದಲ್ಲಿ ಹೋಂಡಾದ ಅತಿದೊಡ್ಡ ಮಾರಾಟವಾಗುವ ಸ್ಥಾನದಲ್ಲಿದೆ. ವರ್ಷಗಳಿಂದ, ತಾಂತ್ರಿಕವಾಗಿ ಸುಧಾರಿತ ಕಾರು ತಯಾರಕರಾಗಿರುವ ಹೋಂಡಾದ ಖ್ಯಾತಿ ಮತ್ತು ಅದರ ಯಶಸ್ಸು ನಗರದಾದ್ಯಂತ ಪ್ರಚಲಿತವಾಗಿದೆ.
ಹೋಂಡಾ ಸಿಟಿ ತನ್ನ ವಿಭಾಗದಲ್ಲಿ ಹೆಚ್ಚು ಫೀಚರ್-ಲೋಡ್ ಆದ ಕಾರಾಗಿದೆ. ಅದರ ಕೆಲವು ಪ್ರಮುಖ ಫೀಚರ್ಗಳು - ಎಲೆಕ್ಟ್ರಿಕ್ ಸನ್‌ರೂಫ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್‌ಗಳು ಮತ್ತು ವೈಪರ್‌ಗಳು, ಲೆದರ್ ಅಪ್‌ಹೋಲ್‌ಸ್ಟರಿ, ಇನ್-ಬಿಲ್ಟ್ ನ್ಯಾವಿಗೇಶನ್ ಮತ್ತು 8-ಸ್ಪೀಕರ್ ಸೌಂಡ್ ಸಿಸ್ಟಮ್ನೊಂದಿಗೆ 7-ಇಂಚ್ ಟಚ್‌ಸ್ಕ್ರೀನ್ ಇನ್ಫೋಟೈನ್ಮೆಂಟ್ ಯುನಿಟ್.
ಹೋಂಡಾ ಸಿಟಿ ತನ್ನ ವಿಭಾಗದಲ್ಲಿನ ದೊಡ್ಡ ಕಾರುಗಳಲ್ಲಿ ಒಂದು. ಸಾಕಷ್ಟು ಹಿಂಭಾಗದ ಲೆಗ್‌ರೂಮ್ ಮತ್ತು ಶೋಲ್ಡರ್‌ರೂಮ್ ಇರುವುದರಿಂದ ಮೂರು ಜನ ಆರಾಮವಾಗಿ ಕುಳಿತುಕೊಳ್ಳಬಹುದು. 510 ಲೀಟರ್‌ಗಳ ಯಥೇಚ್ಛ ಬೂಟ್ ಸ್ಪೇಸ್‌ನಿಂದಾಗಿ ಹೋಂಡಾ ಸಿಟಿ ಕೌಟುಂಬಿಕರ ಅಚ್ಚುಮೆಚ್ಚಿನ ಕಾರ್ ಎನಿಸಿದೆ. ಇದರ ಜೊತೆ ಹೋಂಡಾದ ವಿಶ್ವಾಸಾರ್ಹತೆ ಮತ್ತು ಮಾರಾಟ-ನಂತರದ ಸೇವಾ ನೆಟ್ವರ್ಕ್ ಇರುವಾಗ, ಸಿಟಿ ತನ್ನ ವಿಭಾಗದ ಮುಂಚೂಣಿಯಲ್ಲಿದೆ.
ಅಪಘಾತಗಳು ಅನಿಶ್ಚಿತವಾಗಿವೆ. ಆಕ್ಸಿಡೆಂಟ್‌ನಿಂದಾಗಿ ನಿಮ್ಮ ಕಾರು ಹಾನಿಗೊಳಗಾಗಿದೆಯೇ? ಭಯಭೀತರಾಗಬೇಡಿ! ನಾವು ಅದನ್ನು ಕವರ್ ಮಾಡುತ್ತೇವೆ!
ಬೂಮ್! ಬೆಂಕಿ ಮತ್ತು ಸ್ಫೋಟದಿಂದ ನಿಮ್ಮ ಕಾರಿಗೆ ಭಾಗಶಃ ಅಥವಾ ಸಂಪೂರ್ಣವಾಗಿ ನಷ್ಟವಾಗಿರಬಹುದು. ಚಿಂತಿಸಬೇಡಿ, ಅದನ್ನು ನಾವು ನಿಭಾಯಿಸುತ್ತೇವೆ.
ಕಾರ್ ಕಳುವಾಗಿದೆಯೇ? ನಿಜಕ್ಕೂ ತುಂಬಾ ದುಃಖದ ಸುದ್ಧಿ ಇದು! ಆದರೆ ದುಃಖ ಪಡುವ ಮೊದಲು, ನಿಮ್ಮ ವಾಹನದ ರಕ್ಷಣೆ ನಮ್ಮ ಹೊಣೆ ಎಂಬುದನ್ನು ನೆನಪಿಡಿ!
ಭೂಕಂಪ, ಭೂಕುಸಿತ, ಪ್ರವಾಹ, ಗಲಭೆಗಳು, ಭಯೋತ್ಪಾದನೆ, ಇತ್ಯಾದಿಗಳು ನಿಮ್ಮ ಮೆಚ್ಚಿನ ವಾಹನಕ್ಕೆ ಹಾನಿ ಮಾಡಬಹುದು. ಆದರೆ ಚಿಂತಿಸಬೇಡಿ. ಇನ್ನಷ್ಟು ನೋಡಿ...
ನೀವು ₹ 15 ಲಕ್ಷಗಳ ಪರ್ಯಾಯ ಪರ್ಸನಲ್ ಆಕ್ಸಿಡೆಂಟ್ ಪಾಲಿಸಿಯನ್ನು ಹೊಂದಿದ್ದರೆ, ನೀವು ಈ ಕವರ್ ಅನ್ನು ಬಿಟ್ಟುಬಿಡಬಹುದುಇನ್ನಷ್ಟು ಓದಿ...
ಒಂದು ವೇಳೆ ನಿಮ್ಮ ವಾಹನವು ಆಕಸ್ಮಿಕವಾಗಿ ಮೂರನೇ ವ್ಯಕ್ತಿಯ ಆಸ್ತಿಗೆ ಗಾಯ ಅಥವಾ ಹಾನಿ ಮಾಡಿದರೆ, ನಾವು ಅವರ ಕಾನೂನು ಹೊಣೆಗಾರಿಕೆಗಳ ನಿರ್ವಹಣೆಗೆ ಸಂಪೂರ್ಣ ಕವರೇಜ್ ಇನ್ನಷ್ಟು ಓದಿ...
ನಾವು ಕಾರಿನ ಮೌಲ್ಯದಲ್ಲಿ ಸವಕಳಿಯನ್ನು ಒಳಗೊಳ್ಳುವುದಿಲ್ಲ.
ನಮ್ಮ ಕಾರು ಇನ್ಶೂರೆನ್ಸ್ ಪಾಲಿಸಿಯ ಅಡಿಯಲ್ಲಿ ಯಾವುದೇ ಎಲೆಕ್ಟ್ರಿಕ್ ಅಥವಾ ಮೆಕ್ಯಾನಿಕಲ್ ಸ್ಥಗಿತಗಳು ಬಹಿರಂಗಗೊಳ್ಳುತ್ತವೆ.
ನಿಮ್ಮ ಬಳಿ ಸರಿಯಾದ ಡ್ರೈವಿಂಗ್ ಲೈಸೆನ್ಸ್ ಇಲ್ಲದಿದ್ದರೆ ನಿಮ್ಮ ವೆಹಿಕಲ್ ಇನ್ಶೂರೆನ್ಸ್ ನಿಷ್ಕ್ರಿಯವಾಗುತ್ತದೆ. ಡ್ರಗ್ಸ್/ಮದ್ಯಪಾನದ ಪ್ರಭಾವದಡಿಯಲ್ಲಿ ಚಾಲನೆ ಮಾಡುವುದು ಟೂ ವೀಲರ್ ಇನ್ಶೂರೆನ್ಸ್ ಕವರೇಜ್ ವ್ಯಾಪ್ತಿಗೆ ಒಳಪಡುವುದಿಲ್ಲ.
ಸಾಮಾನ್ಯವಾಗಿ, ನಿಮ್ಮ ಪಾಲಿಸಿಯು ಸವಕಳಿ ಮೊತ್ತವನ್ನು ಕಡಿತಗೊಳಿಸಿದ ನಂತರ ಉಳಿಯುವ ಕ್ಲೇಮ್ ಮೊತ್ತವನ್ನು ಮಾತ್ರ ಪಾವತಿಸುತ್ತದೆ. ನಿಮ್ಮ ಪಾಲಿಸಿ ವಿವರಗಳು ಸವಕಳಿಯ ವಿವರಗಳನ್ನು ಒಳಗೊಂಡಿರುತ್ತವೆ. ಆದ್ದರಿಂದ, ಸಂಪೂರ್ಣ ಮೊತ್ತವನ್ನು ಪಡೆಯಲು ನೀವು ಏನು ಮಾಡಬಹುದು? ಒಂದು ಮಾರ್ಗ ಇದೆ! ಜೀರೋ-ಡಿಪ್ರಿಸಿಯೇಶನ್ ಕವರ್! ಜೀರೋ ಡಿಪ್ರಿಸಿಯೇಶನ್‌ನಲ್ಲಿ, ಯಾವುದೇ ಸವಕಳಿ ಕಡಿತಗಳಿಲ್ಲ ಮತ್ತು ಸಂಪೂರ್ಣ ಮೊತ್ತ ನಿಮ್ಮ ಕೈಸೇರುತ್ತದೆ!
ಹೊರಗಿನ ಅಂಶಗಳು, ಪ್ರವಾಹ, ಬೆಂಕಿ ಇತ್ಯಾದಿಗಳಿಂದ ಪಾರ್ಕ್ ಮಾಡಿದ ವಾಹನಕ್ಕೆ ಅಥವಾ ವಿಂಡ್‌ಶೀಲ್ಡ್ ಗ್ಲಾಸ್‌ಗೆ ಉಂಟಾದ ಹಾನಿಗಾಗಿ ಕ್ಲೈಮ್ ಸಲ್ಲಿಸಿದಾಗ, ಈ ಆ್ಯಡ್ ಆನ್ ಕವರ್ ನೀವು ಇಲ್ಲಿಯವರೆಗೆ ಗಳಿಸಿದ ನೋ ಕ್ಲೈಮ್ ಬೋನಸ್ ಅನ್ನು ರಕ್ಷಿಸುವುದು ಮಾತ್ರವಲ್ಲದೇ, ಅದನ್ನು ಮುಂದಿನ NCB ಸ್ಲ್ಯಾಬ್‌ಗೆ ಕೊಂಡೊಯ್ಯುತ್ತದೆ.
ನಿಮ್ಮ ಕಾರಿನ ಯಾವುದೇ ತಾಂತ್ರಿಕ ಅಥವಾ ಯಾಂತ್ರಿಕ ಬ್ರೇಕ್‌ಡೌನ್ ಸಮಸ್ಯೆಗಳನ್ನು ನಿರ್ವಹಿಸಲು ನಾವು ನಿಮಗೆ ಸದಾಕಾಲ ಸಹಾಯ ಒದಗಿಸುತ್ತೇವೆ! ಹಾನಿಯಾದ ಸ್ಥಳದಲ್ಲಿ ಸಣ್ಣ ರಿಪೇರಿ, ಕೀ ಕಳೆದುಹೋದಾಗ ಸಹಾಯ, ನಕಲಿ ಕೀ ಸಮಸ್ಯೆ, ಟೈರ್ ಬದಲಾವಣೆ, ಬ್ಯಾಟರಿ ಜಂಪ್ ಸ್ಟಾರ್ಟ್, ಇಂಧನ ಟ್ಯಾಂಕ್ ಖಾಲಿಯಾಗುವುದು ಮತ್ತು ಟೋವಿಂಗ್ ಶುಲ್ಕಗಳು ಈ ತುರ್ತು ಸಹಾಯ ಕವರ್‌ನಲ್ಲಿ ಸೇರಿವೆ!
ಒಂದು ದಿನ ಅಚಾನಕ್ಕಾಗಿ ನಿಮ್ಮ ಕಾರು ಕಳುವಾಗಿದೆ ಅಥವಾ ಸಂಪೂರ್ಣವಾಗಿ ಜಖಂಗೊಂಡಿದೆ ಎಂಬ ಸುದ್ಧಿ ಕೇಳುವುದಕ್ಕಿಂತ ಕೆಟ್ಟ ವಿಷಯ ಏನಿದೆ? ನಿಮ್ಮ ಪಾಲಿಸಿಯು ಯಾವಾಗಲೂ ನಿಮ್ಮ ವಾಹನದ IDV (ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ) ಅನ್ನು ಪಾವತಿಸುತ್ತದೆ. IDV ವಾಹನದ ಪ್ರಸ್ತುತ ಮಾರುಕಟ್ಟೆ ಬೆಲೆಗೆ ಸಮನಾಗಿರುತ್ತದೆ. ಆದರೆ, ರಿಟರ್ನ್ ಟು ಇನ್ವಾಯ್ಸ್ ಆ್ಯಡ್-ಆನ್ ಮೂಲಕ, ನೀವು ಇನ್ವಾಯ್ಸ್ ಮೌಲ್ಯ ಮತ್ತು IDV ನಡುವಿನ ವ್ಯತ್ಯಾಸವನ್ನು ಕೂಡ ಪಡೆಯುತ್ತೀರಿ! ನೀವು FIR ಫೈಲ್ ಮಾಡಿದ್ದೀರಿ ಮತ್ತು ಘಟನೆ ನಡೆದ 90 ದಿನಗಳ ಒಳಗೆ ಕಾರನ್ನು ಮರುಪಡೆಯಲಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು .
ಭಾರೀ ಮಳೆಯಿರಲಿ ಅಥವಾ ಭೋರ್ಗರೆವ ಪ್ರವಾಹವೇ ಬರಲಿ, ಎಂಜಿನ್ ಮತ್ತು ಗೇರ್‌ಬಾಕ್ಸ್ ಪ್ರೊಟೆಕ್ಷನ್ ಕವರ್ ಮೂಲಕ ನಿಮ್ಮ ವಾಹನದ ಗೇರ್‌ಬಾಕ್ಸ್ ಮತ್ತು ಎಂಜಿನ್‌ಗೆ ಸುಭದ್ರ ಕವರೇಜ್ ಸಿಗುತ್ತದೆ.! ಇದು ಎಲ್ಲಾ ಸಣ್ಣ ಭಾಗಗಳು ಅಥವಾ ಆಂತರಿಕ ಭಾಗಗಳ ಬದಲಿ ಅಥವಾ ದುರಸ್ತಿಗೆ ಹಣ ಪಾವತಿಸುತ್ತದೆ. ಇದಲ್ಲದೆ, ಇದು ಕೆಲಸದ ವೆಚ್ಚಗಳು, ಕಂಪ್ರೆಷನ್ ಟೆಸ್ಟ್‌ಗಳ ವೆಚ್ಚ, ಯಂತ್ರ ಶುಲ್ಕಗಳು ಮತ್ತು ಎಂಜಿನ್ ಸಿಲಿಂಡರ್ ರೀ-ಬೋರಿಂಗ್‌ಗಳನ್ನು ಕೂಡ ಕವರ್ ಮಾಡುತ್ತದೆ.
ನಿಮ್ಮ ಕೀ ಕಳುವಾಗಿದೆಯೇ ಅಥವಾ ಕಾಣೆಯಾಗಿದೆಯೇ? ಈ ಆ್ಯಡ್-ಆನ್, ಆದಷ್ಟು ಬೇಗ ಬದಲಿ ಕೀಗಳನ್ನು ಪಡೆಯಲು ಸಹಾಯ ಮಾಡುತ್ತದೆ.!
ನಿಮ್ಮ ಕಾರಿನಲ್ಲಿ ಬಳಸಿದ ಎಲ್ಲಾ ಉಪಭೋಗ್ಯ ವಸ್ತುಗಳನ್ನು ಒಳಗೊಳ್ಳುವ ಉಪಭೋಗ್ಯ ವಸ್ತುಗಳ ಕವರೇಜ್ ಇಲ್ಲಿದೆ! ಹೌದು! ನಿಮಗೆ ಇದೀಗ ಇದು ಅಗತ್ಯವಿದೆ! ನಟ್ಸ್, ಬೋಲ್ಟ್‌ಗಳಂತಹ ಎಲ್ಲಾ ಮರುಬಳಕೆ ಮಾಡಲಾಗದ ಉಪಭೋಗ್ಯ ವಸ್ತುಗಳಿಗೆ ಇದು ಪಾವತಿಸುತ್ತದೆ....
ನಿಮ್ಮ ಕಾರನ್ನು ರಿಪೇರಿಗೆ ಕೊಟ್ಟು ಕ್ಯಾಬ್‌ನಲ್ಲಿ ಪ್ರಯಾಣ ಮಾಡಿದಿರಾ? ನಿಮಗಾಗಿ ನಾವು ಡೌನ್‌ಟೈಮ್ ಪ್ರೊಟೆಕ್ಷನ್ ತಂದಿದ್ದೇವೆ! ಗ್ರಾಹಕರು ತಮ್ಮ ದೈನಂದಿನ ಪ್ರಯಾಣಕ್ಕಾಗಿ ಬೇರೆ ಸಾರಿಗೆ ವಿಧಾನಗಳನ್ನು ಬಳಸಿದಾಗ, ಇದು ನಗದು ಭತ್ಯೆಯ ಪ್ರಯೋಜನ ಒದಗಿಸುತ್ತದೆ .
ಎಚ್‌ಡಿಎಫ್‌ಸಿ ಎರ್ಗೋದಲ್ಲಿ ನಿಮ್ಮ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನವೀಕರಿಸುವುದು ತ್ವರಿತ ಮತ್ತು ಸರಳವಾಗಿದೆ. ಇದಕ್ಕೆ ಕನಿಷ್ಠ ಪೇಪರ್‌ವರ್ಕ್ ಅಗತ್ಯವಿರುತ್ತದೆ. ನೀವು ಮಾಡಬೇಕಾಗಿರುವುದು ಕೇವಲ ಇಲ್ಲಿ ಕ್ಲಿಕ್ ಮಾಡಿ ಮತ್ತು ನಿಮ್ಮ ಗಡುವು ಮುಗಿಯುವ ಪಾಲಿಸಿಯ ವಿವರಗಳನ್ನು ಆನ್ಲೈನಿನಲ್ಲಿ ನೀಡಿ, ಹೊಸ ಪಾಲಿಸಿಯ ವಿವರಗಳನ್ನು ನೋಡಿ ಮತ್ತು ಅನೇಕ ಸುರಕ್ಷಿತ ಪಾವತಿ ಆಯ್ಕೆಗಳ ಮೂಲಕ ತ್ವರಿತ ಆನ್‌ಲೈನ್ ಪಾವತಿ ಮಾಡಿ. ಅಷ್ಟೆ!
ನೀವು ಎಚ್‌ಡಿಎಫ್‌ಸಿ ಎರ್ಗೋದಿಂದ ಹೋಂಡಾ ಮೋಟಾರ್ಸ್ ಇನ್ಶೂರೆನ್ಸ್ ಅನ್ನು ಆನ್ಲೈನಿನಲ್ಲಿ ಖರೀದಿಸಿದಾಗ ಸರಳ ಕಾರ್ಯವಿಧಾನಗಳು, ತ್ವರಿತ ವಿತರಣೆ ಮತ್ತು ವಿಶಿಷ್ಟ ಪ್ರಯೋಜನಗಳನ್ನು ಪಡೆಯುತ್ತೀರಿ. ಆದ್ದರಿಂದ, ಯಾವುದೇ ಅನಿರೀಕ್ಷಿತ ಅಪಘಾತದ ನಂತರ, ನೀವು ಡ್ರೈವಿಂಗ್ ಸೀಟಿಗೆ ಸುರಕ್ಷಿತವಾಗಿ ಮತ್ತು ಶೀಘ್ರದಲ್ಲೇ ಮರಳಿ ಬರಲು ಬಯಸಿದರೆ, ನಿಮ್ಮ ಇನ್ಶೂರೆನ್ಸ್ ಪಾಲುದಾರರಾಗಿ ಎಚ್‌ಡಿಎಫ್‌ಸಿ ಎರ್ಗೋ ಆಯ್ಕೆಮಾಡಿ!
ನಿಮ್ಮಲ್ಲಿ ಅನೇಕರು ಇನ್ಶೂರೆನ್ಸ್ ಕ್ಲೈಮ್ ಮಾಡುವ ಪ್ರಕ್ರಿಯೆ ತುಂಬಾ ಸಂಕೀರ್ಣ ಮತ್ತು ಕಷ್ಟಕರ ಎಂದು ಭಾವಿಸಬಹುದು! ಕ್ಲೈಮ್ ಪ್ರಕ್ರಿಯೆಯನ್ನು ತ್ವರಿತ, ಸುಗಮ ಮತ್ತು ಸರಳವಾಗಿಸುವ ಮೂಲಕ ನಾವು ಅದು ನಿಜವಲ್ಲ ಎಂದು ಸಾಬೀತು ಮಾಡಿದ್ದೇವೆ. ಈ ಕೆಳಗೆ ನಮೂದಿಸಿದ ವಿಧಾನಗಳಲ್ಲಿ ನಿಮ್ಮ ಕ್ಲೈಮ್ ನೋಂದಣಿ ಮಾಡುವ ಮೂಲಕ ನಿಮ್ಮ ಕ್ಲೈಮ್ ಪ್ರಕ್ರಿಯೆಯನ್ನು ಆರಂಭಿಸಿ. ಕ್ಲೈಮ್ ಪ್ರಕ್ರಿಯೆಯ ಬಗ್ಗೆ ಇನ್ನಷ್ಟು ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಎಲ್ಲಾ ಬಗೆಯ ವಾಹನಗಳು | ಸ್ವಂತ ಹಾನಿ ಪ್ರೀಮಿಯಂನಲ್ಲಿನ ರಿಯಾಯಿತಿಯ % |
---|---|
ಇನ್ಶೂರೆನ್ಸ್ ಹಿಂದಿನ ಇಡೀ ವರ್ಷದಲ್ಲಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 20% |
ಇನ್ಶೂರೆನ್ಸ್‌ನ 2 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 25% |
ಇನ್ಶೂರೆನ್ಸ್‌ನ 3 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 35% |
ಇನ್ಶೂರೆನ್ಸ್‌ನ 4 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 45% |
ಇನ್ಶೂರೆನ್ಸ್‌ನ 5 ವರ್ಷದಲ್ಲಿ ಸತತವಾಗಿ ಯಾವುದೇ ಕ್ಲೈಮ್ ಮಾಡಿರದಿದ್ದರೆ ಅಥವಾ ಬಾಕಿ ಇರದಿದ್ದರೆ | 50% |
ವಾಹನದ ವಯಸ್ಸು | IDV ಫಿಕ್ಸ್ ಮಾಡಲು ಸವಕಳಿ % |
---|---|
6 ತಿಂಗಳು ಮೀರದ | 5% |
6 ತಿಂಗಳಿಗಿಂತ ಹೆಚ್ಚಿನ ಆದರೆ 1 ವರ್ಷ ಮೀರದ | 15% |
1 ವರ್ಷಕ್ಕಿಂತ ಹೆಚ್ಚಿನ ಆದರೆ 2 ವರ್ಷ ಮೀರದ | 20% |
2 ವರ್ಷಕ್ಕಿಂತ ಹೆಚ್ಚಿನ ಆದರೆ 3 ವರ್ಷ ಮೀರದ | 30% |
3 ವರ್ಷಕ್ಕಿಂತ ಹೆಚ್ಚಿನ ಆದರೆ 4 ವರ್ಷ ಮೀರದ | 40% |
4 ವರ್ಷಕ್ಕಿಂತ ಹೆಚ್ಚಿನ ಆದರೆ 5 ವರ್ಷ ಮೀರದ | 50% |