ಹೋಂಡಾ ಕಾರ್ ಇನ್ಶೂರೆನ್ಸ್ ಖರೀದಿಸಿ
ಮೋಟಾರ್ ಇನ್ಶೂರೆನ್ಸ್
ಕೇವಲ ₹2094 ರಲ್ಲಿ ಪ್ರೀಮಿಯಂ ಆರಂಭ*

ಪ್ರೀಮಿಯಂ ಆರಂಭ

ಕೇವಲ ₹2094 ಕ್ಕೆ*
8000+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

8000+ ನಗದು ರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
ತಡರಾತ್ರಿಯ ಕಾರ್ ರಿಪೇರಿ ಸೇವೆಗಳು ^

ತಡರಾತ್ರಿಯ ಕಾರ್

ರಿಪೇರಿ ಸೇವೆಗಳು¯
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಹೋಂಡಾ
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ಆನ್ಲೈನ್‌ನಲ್ಲಿ ಹೋಂಡಾ ಕಾರ್ ಇನ್ಶೂರೆನ್ಸ್ ಖರೀದಿಸಿ/ನವೀಕರಿಸಿ

ಹೋಂಡಾ ಕಾರ್ ಇನ್ಶೂರೆನ್ಸ್
ಹೋಂಡಾ ಆಟೋಮೊಬೈಲ್‌ ಕ್ಷೇತ್ರದಲ್ಲಿ ತುಂಬಾ ಹೆಸರು ಮಾಡಿದೆ. 1948 ರಲ್ಲಿ ಜಪಾನಿನಲ್ಲಿ ಸೋಯಿಚಿರೋ ಹೋಂಡಾ ಅವರು ಹೋಂಡಾ ಕಂಪನಿಯನ್ನು ಸ್ಥಾಪಿಸಿದ್ದು,1959 ರಿಂದ ವಿಶ್ವದ ಅತಿದೊಡ್ಡ ಮೋಟಾರ್‌ಸೈಕಲ್ ಉತ್ಪಾದಕ ಕಂಪನಿ ಎನ್ನಿಸಿಕೊಳ್ಳುವ ಜೊತೆಗೆ ಜಗತ್ತಿನ ಅತಿದೊಡ್ಡ ಇಂಟರ್ನಲ್‌ ಕಂಬಸ್ಟನ್‌ ಎಂಜಿನ್‌ಗಳ ಉತ್ಪಾದಕ ಕಂಪನಿಯಾಗಿದೆ. 2020 ರಂತೆ, ಹೋಂಡಾ ಜಗತ್ತಿನ ಐದನೇ ಅತಿದೊಡ್ಡ ಕಾರು ಕಂಪನಿಯಾಗಿದ್ದು, ಏಷ್ಯಾ ಖಂಡ, ಅದರಲ್ಲು ಭಾರತವು, ಹೋಂಡಾ ಕಂಪನಿಯ ಬೆಳವಣಿಗೆಗೆ ಪ್ರಮುಖ ಮಾರುಕಟ್ಟೆಯಾಗಿವೆ. ಹೋಂಡಾ ಸೀಲ್ ಕಾರ್ಸ್ ಇಂಡಿಯಾ ಲಿಮಿಟೆಡ್ ಎಂಬ ಜಂಟಿ ಉದ್ಯಮದಲ್ಲಿ 1995 ರಲ್ಲಿ ಹೋಂಡಾ ಮೊದಲ ಬಾರಿಗೆ ಭಾರತವನ್ನು ಪ್ರವೇಶಿಸಿತು. 2012 ರಲ್ಲಿ, ಅದು JVಯ ಸಂಪೂರ್ಣ ಪಾಲುದಾರಿಕೆಯನ್ನು ಖರೀದಿಸಿತು ಮತ್ತು ಹೋಂಡಾ ಮೋಟಾರ್ ಕಂಪನಿ ಲಿಮಿಟೆಡ್‌ನ ಸಂಪೂರ್ಣ ಅಂಗಸಂಸ್ಥೆಯಾಯಿತು.

ಜನಪ್ರಿಯ ಹೋಂಡಾ ಕಾರ್ ಮಾಡೆಲ್‌ಗಳು

1
ಹೋಂಡಾ ಸಿಟಿ (5ನೇ ಜನರೇಶನ್)
ದೇಶದ ಅತ್ಯಂತ ಜನಪ್ರಿಯ ಸೆಡಾನ್‌ಗಳಲ್ಲಿ ಒಂದಾದ ಹೋಂಡಾ ಸಿಟಿ, ನಗರದೊಳಗಿನ ಚಾಲನೆಗೆ ಸೂಕ್ತವಾದ ವಾಹನವಾಗಿದ್ದು, ಕೈಗೆಟಕುವ ಬೆಲೆಯಲ್ಲಿ ಪ್ರೀಮಿಯಂ ಕಂಫರ್ಟ್ ಮತ್ತು ಡ್ರೈವಿಂಗ್ ಅನುಭವವನ್ನು ಒದಗಿಸುತ್ತದೆ. ಸಿಟಿಯ ಹೊಸ ಜನರೇಶನ್ ಒಂಬತ್ತು ಟ್ರಿಮ್ ಮಟ್ಟಗಳಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿದ್ದು, ಮೊದಲನೆಯದು ಏಳು-ಸ್ಪೀಡ್‌ ಸ್ವಯಂಚಾಲಿತ ಟ್ರಾನ್ಸ್‌ಮಿಷನ್‌ ಒದಗಿಸುತ್ತದೆ.
2
ಹೋಂಡಾ ಸಿಟಿ (4ನೇ ಜನರೇಶನ್)
ಅದರ ಹೊಸ ಆವೃತ್ತಿ ಲಭ್ಯವಿದ್ದರು ಕೂಡ, ಹೋಂಡಾ ಕಾರುಗಳಲ್ಲಿ 4ನೇ ಜನರೇಶನ್‌ ಸಿಟಿ, ಅದರ ಕೈಗೆಟುಕುವ ಬೆಲೆ ಮತ್ತು ಫೀಚರ್‌ಗಳಿಂದ ಜನಮೆಚ್ಚಿದ ಆಯ್ಕೆಯಾಗಿದೆ. ಅದನ್ನು ಈಗ ಎರಡು ಸ್ಪೆಸಿಫಿಕೇಶನ್‌ಗಳೊಂದಿಗೆ ಪೆಟ್ರೋಲ್-ಮ್ಯಾನುಯಲ್ ಪವರ್‌ಟ್ರೈನ್ ಆಯ್ಕೆಗಳಲ್ಲಿ ಮಾತ್ರ ಹೊರತರಲಾಗುತ್ತಿದೆ. 5ನೇ ಜನರೇಶನ್‌ನ ಎಂಟ್ರಿ ಲೆವೆಲ್‌ ವೇರಿಯಂಟ್‌ಗಿಂತ ಹೆಚ್ಚಿನ ಸ್ಪೆಸಿಫಿಕೇಶನ್‌ಗಳೊಂದಿಗೆ ಕೈಗೆಟುಕುವ ಬೆಲೆಯಲ್ಲಿ ಅದು ಲಭ್ಯವಿದ್ದು, ಕಡಿಮೆ ಬೆಲೆ ಅಥವಾ ಬಜೆಟ್‌ನಲ್ಲಿ ಲಕ್ಸುರಿ ಸೆಡಾನ್ ಹುಡುಕುತ್ತಿರುವವರಿಗೆ ಆಕರ್ಷಕವಾಗಿದೆ.
3
ಹೋಂಡಾ ಅಮೇಜ್
ಸಿಟಿಗಿಂತ ಕೆಳಗಿನ ಹಂತದಲ್ಲಿರುವ ಅಮೇಜ್, ಹೋಂಡಾದ ಎಂಟ್ರಿ ಲೆವೆಲ್‌ ಸೆಡಾನ್ ಆಗಿದೆ. ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ಮತ್ತು ಕಾಂಪ್ಯಾಕ್ಟ್ SUVಗಳೊಂದಿಗೆ ಸ್ಪರ್ಧಿಸುವಂತಹ ಬೆಲೆ ಇಂದ ದೇಶದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಎರಡು ವಿಭಾಗಗಳಲ್ಲಿ, ಅಮೇಜ್ ತನ್ನದೇ ಆಗಿರುವ ಹೆಸರನ್ನು ಸಂಪಾದಿಸಿದ್ದು, ಹೆಚ್ಚಿನ ಗ್ರಾಹಕ ವರ್ಗವನ್ನು ತನ್ನತ್ತ ಸೆಳೆದುಕೊಂಡು ಅತ್ಯಂತ ಅಕರ್ಷಕ ಮತ್ತು ಯಶಸ್ವಿ ಸೆಡಾನ್‌ ಎನ್ನಿಸಿಕೊಂಡಿದೆ’.
4
ಹೋಂಡಾ WR-V
ಫೇಸ್‌ಲಿಫ್ಟ್‌ ಆಗಿರುವ ಹೊಸ sub-4-metre SUV ಆಗಿ ವಿಭಾಗವನ್ನು ಪ್ರವೇಶಿಸಿದ್ದು, ಹೆಚ್ಚಿನ ಪ್ರತಿಸ್ಪರ್ಧಿಗಳನ್ನು ಹೊಂದಿದೆ. ಆದರೆ, ಹೋಂಡಾದ BSVI-ಒಗ್ಗುವ ಎಂಜಿನ್‌ ಮತ್ತು ಫ್ಯಾಮಿಲಿ ಕಾರ್ ಆಗಿ ಸೌಕರ್ಯವನ್ನು ನೀಡುತ್ತದೆ. ಅದರ SUV-ರೀತಿಯ ಪೊಸಿಶನಿಂಗ್ ಉತ್ತಮ ಒಳ ಸ್ಥಳಾವಕಾಶ ಮತ್ತು ಫೀಚರ್‌ಗಳನ್ನು ಒದಗಿಸುತ್ತದೆ. ABS, ಡ್ಯುಯಲ್ ಏರ್‌ಬ್ಯಾಗ್‌ಗಳು ಮತ್ತು ಮಲ್ಟಿ-ವ್ಯೂ ಹಿಂಬದಿ ಕ್ಯಾಮರಾ ಜೊತೆಗೆ ಹೊಸ ಇನ್‌ಫೋಟೈನ್ಮೆಂಟ್‌ ವ್ಯವಸ್ಥೆ ಮತ್ತು ಒನ್-ಟಚ್ ಎಲೆಕ್ಟ್ರಿಕ್ ಸನ್‌ರೂಮ್ (ಟಾಪ್-ಸ್ಪೆಕ್ ವೇರಿಯಂಟ್) ಸೇರಿರುವ ಹೋಂಡಾ, ಆ ರೀತಿ ವ್ಯವಸ್ಥೆ ಹೊಂದಿರುವ ದೇಶದ ಏಕೈಕ SUV ಕಾರ್ ಆಗಿದೆ.
5
ಹೋಂಡಾ ಜಾಜ್
ಪ್ರೀಮಿಯಂ ಹ್ಯಾಚ್‌ಬ್ಯಾಕ್ ಪೆಟ್ರೋಲ್-ಮಾತ್ರದ ಆಯ್ಕೆಗಳು ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ವೇರಿಯಂಟ್‌ನೊಂದಿಗೆ ಭಾರತದ ಮಾರುಕಟ್ಟೆಗೆ ವಾಪಸ್ಸಾಗಿವೆ. CVT ವೇರಿಯಂಟ್ ಪ್ಯಾಡಲ್ ಶಿಫ್ಟರ್‌ಗಳೊಂದಿಗೆ ಬರುತ್ತದ್ದಾದರು, ವಾಹನವು ವಿಭಾಗದಲ್ಲೇ ಎಲೆಕ್ಟ್ರಿಕ್ ಸನ್‌ರೂಫ್‌ ಹೊಂದಿರುವ ಮೊದಲ ಕಾರ್ ಆಗಿದೆ. ಸೀಮಿತ ಪರಿಧಿಯಲ್ಲಿ, ಹೆಚ್ಚಿನ ಒಳ ಸ್ಥಳಾವಕಾಶದ ಜೊತೆಗೆ ಎಲ್ಲಾ ಜನರಿಗು ಸಲ್ಲುವಂತಹ ವೈಶಿಷ್ಟ್ಯಗಳನ್ನು ಹೊಂದಿರುವ ಕಾರ್‌ ಆಗಿ ಹಿಂದಿನ ಪರಂಪರೆಯನ್ನು ಮುಂದುವರೆಸಿದೆ. ಸುಧಾರಿತ, ಬೆಣ್ಣೆಯಂತಹ ಎಂಜಿನ್ ಮತ್ತು ಡ್ರೈವರ್ ಏಡ್‌ಗಳೊಂದಿಗೆ, ಇದು ಹೈವೇಗಳಲ್ಲಿಯೂ ಮತ್ತು ನಗರದ ಒಳಗಡೆಯೂ ಯಾವುದೇ ತೊಂದರೆ ಇಲ್ಲದೆ ಓಡಾಡಬಹುದು.
5
ಹೋಂಡಾ ಸಿವಿಕ್
ಸಿವಿಕ್ ಅತ್ಯಂತ ಜನಪ್ರಿಯ ಹೋಂಡಾ ಕಾರುಗಳಲ್ಲಿ ಒಂದಾಗಿದ್ದು, ನಿಶ್ಚಿತವಾಗಿ ಜನ ಬಯಸುವಂತಹ ಕಾರ್ ಆಗಿದೆ. ಹೋಂಡಾ ಹೊರತಂದಿರುವ ಈ ಪ್ರೀಮಿಯಂ ಸೆಡಾನ್, ಹೊರಭಾಗ ಮತ್ತು ಒಳಭಾಗ ಎರಡರಲ್ಲೂ ಒಳ್ಳೆಯ ಡಿಸೈನ್ ಹೊಂದಿದೆ. ನಯವಾದ ಎಂಜಿನ್‌ಗಳು ಮತ್ತು ಓಡಾಟದ ಗುಣಮಟ್ಟ ಉತ್ಸಾಹಿಗಳನ್ನು ಆಕರ್ಷಿಸುವ ಗುರಿಯನ್ನು ಹೊಂದಿದ್ದು, ಸುರಕ್ಷತೆಯ ವಿಭಾಗದಲ್ಲೂ ನಾಲ್ಕು-ಡಿಸ್ಕ್ ಬ್ರೇಕ್‌ಗಳು ಮತ್ತು ಆರು ಏರ್‌ಬ್ಯಾಗ್‌ಗಳೊಂದಿಗೆ ಹೆಚ್ಚಿನ ಅಂಕ ಗಳಿಸುತ್ತದೆ.

ಎಚ್‌ಡಿಎಫ್‌ಸಿ ಎರ್ಗೋ ಆಫರ್‌ ಮಾಡುವ ಹೋಂಡಾ ಕಾರ್ ಇನ್ಶೂರೆನ್ಸ್ ವಿಧಗಳು

ನಿಮ್ಮ ಕನಸಿನ ಹೋಂಡಾ ಕಾರ್‌ ಅನ್ನು ಖರೀದಿಸುವುದಷ್ಟೇ ಸಾಕಾಗುವುದಿಲ್ಲ; ಯಾವುದೇ ದುರದೃಷ್ಟಕರ ಸಂದರ್ಭಗಳಲ್ಲಿ ನಿಮ್ಮ ವಾಹನವನ್ನು ಆರ್ಥಿಕವಾಗಿ ರಕ್ಷಿಸುವ ಹೋಂಡಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ಕೂಡ ನೀವು ಪಡೆಯಬೇಕು. ಪ್ರಮುಖ ಥರ್ಡ್ ಪಾರ್ಟಿ ಇನ್ಶೂರೆನ್ಸ್ ನಿಂದ ಮಲ್ಟಿ-ಇಯರ್ ಸಮಗ್ರ ಪ್ಯಾಕೇಜ್‌ವರೆಗೆ, ನಿಮ್ಮ ವಾಹನವನ್ನು ಸರಿಯಾದ ಹೋಂಡಾ ಇನ್ಶೂರೆನ್ಸ್‌ನೊಂದಿಗೆ ರಕ್ಷಿಸಿ.

ಸ್ವಂತ ಹಾನಿ ಕವರ್, ಥರ್ಡ್ ಪಾರ್ಟಿ ಹೊಣೆಗಾರಿಕೆ ಮತ್ತು ಪರ್ಸನಲ್ ಆಕ್ಸಿಡೆಂಟ್ ಕವರ್ ಸೇರಿದಂತೆ, ಏಕ ವರ್ಷದ ಸಮಗ್ರ ಇನ್ಶೂರೆನ್ಸ್ ಪಾಲಿಸಿ ನಿಮಗೆ ಮತ್ತು ನಿಮ್ಮ ವಾಹನಕ್ಕೆ ಸಂಪೂರ್ಣ ರಕ್ಷಣೆ ಒದಗಿಸುತ್ತದೆ. ನೀವು ಹಲವಾರು ಆ್ಯಡ್-ಆನ್‌ಗಳೊಂದಿಗೆ ನಿಮ್ಮ ಕಾರ್ ಇನ್ಶೂರೆನ್ಸ್ ಕವರೇಜ್ ಹೆಚ್ಚಿಸಬಹುದು.

X
ಸಮಗ್ರ ರಕ್ಷಣೆಯನ್ನು ಬಯಸುವ ಕಾರು ಪ್ರೇಮಿಗಳಿಗೆ ಸೂಕ್ತವಾಗಿದೆ. ಈ ಪ್ಲಾನ್, ಇವುಗಳನ್ನು ಕವರ್‌ ಮಾಡುತ್ತದೆ:
ಕಾರು ಅಪಘಾತ

ಅಪಘಾತ

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಾರು ಕಳ್ಳತನ

ಕಳ್ಳತನ

ಇನ್ನಷ್ಟು ಹುಡುಕಿ

ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಭಾರತೀಯ ರಸ್ತೆಗಳಲ್ಲಿ ಚಾಲನೆ ಮಾಡಲು ಕಾನೂನುಬದ್ಧವಾಗಿ ಕಡ್ಡಾಯವಾಗಿದೆ. ನಿಮ್ಮ ವಾಹನವನ್ನು ಒಳಗೊಂಡಿರುವ ಅಪಘಾತದ ಪರಿಣಾಮವಾಗಿ ಥರ್ಡ್ ಪಾರ್ಟಿ ವ್ಯಕ್ತಿ ಅಥವಾ ಆಸ್ತಿಗೆ ಯಾವುದೇ ಹಣಕಾಸಿನ ಹೊಣೆಗಾರಿಕೆಯ ವಿರುದ್ಧ ಇದು ನಿಮ್ಮನ್ನು ಕವರ್ ಮಾಡುತ್ತದೆ.

X
ಅಪರೂಪಕ್ಕೊಮ್ಮೆ ಕಾರು ಬಳಸುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಇನ್ನಷ್ಟು ಹುಡುಕಿ

ಸ್ವತಂತ್ರ ಸ್ವಂತ ಹಾನಿ ಕವರ್ ಅಪಘಾತ ಅಥವಾ ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತಿನ ಸಂದರ್ಭದಲ್ಲಿ ನಿಮ್ಮ ಸ್ವಂತ ವಾಹನಕ್ಕೆ ಆದ ಹಾನಿಯ ವಿರುದ್ಧ ಹಣಕಾಸಿನ ರಕ್ಷಣೆಯನ್ನು ಒದಗಿಸುತ್ತದೆ. ಇದು ಕಳ್ಳತನದಿಂದ ರಕ್ಷಿಸುತ್ತದೆ. ಇದು ನಿಮ್ಮ ಥರ್ಡ್-ಪಾರ್ಟಿ ಕಾರು ಇನ್ಶೂರೆನ್ಸ್ ಪಾಲಿಸಿಗೆ ಪರಿಪೂರ್ಣ ಪಾಲುದಾರ. ಆ್ಯಡ್-ಆನ್‌ಗಳ ಆಯ್ಕೆಯು ನಿಮ್ಮ ವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಕಾರು ಅಪಘಾತ

ಅಪಘಾತ

ನೈಸರ್ಗಿಕ ವಿಕೋಪಗಳು

ಬೆಂಕಿ

ಆ್ಯಡ್-ಆನ್‌ಗಳ ಆಯ್ಕೆ

ಕಾರು ಕಳ್ಳತನ

ಕಳ್ಳತನ

ಇನ್ನಷ್ಟು ಹುಡುಕಿ

ತಜ್ಞರು ನಿಮ್ಮ ಅನುಕೂಲಕ್ಕಾಗಿ ಈ ಯೋಜನೆಯನ್ನು ವಿನ್ಯಾಸಗೊಳಿಸಿದ್ದಾರೆ. ನಿಮ್ಮ ಸ್ವಂತ ಹಾನಿಯ ಕವರ್ ಅವಧಿ ಮುಗಿದರೂ ಸಹ ನಿಮ್ಮನ್ನು ನಿರಂತರವಾಗಿ ರಕ್ಷಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು 3-ವರ್ಷದ ಮೂರನೇ ವ್ಯಕ್ತಿಯ ಕವರ್ ಮತ್ತು ವಾರ್ಷಿಕ ಸ್ವಂತ ಹಾನಿ ಕವರ್ ಅನ್ನು ಒಂದು ಪ್ಯಾಕೇಜ್‌ನಲ್ಲಿ ಪಡೆಯಿರಿ. ಸಮಗ್ರ ರಕ್ಷಣೆಯನ್ನು ಆನಂದಿಸಲು ಸ್ವಂತ ಹಾನಿಯ ಕವರ್ ಅನ್ನು ಸರಳವಾಗಿ ನವೀಕರಿಸಿ.

X
ಹೊಸ ಕಾರನ್ನು ಖರೀದಿಸಿದವರಿಗೆ ಸೂಕ್ತವಾಗಿದೆ, ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:
ಕಾರು ಅಪಘಾತ

ಅಪಘಾತ

ನೈಸರ್ಗಿಕ ವಿಕೋಪಗಳು

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಾರು ಕಳ್ಳತನ

ಕಳ್ಳತನ

ಹೋಂಡಾ ಕಾರ್ ಇನ್ಶೂರೆನ್ಸ್‌ನ ಸೇರಿಕೆಗಳು ಮತ್ತು ಹೊರಪಡಿಕೆಗಳು

ನಿಮಗೆ ಸಿಗುವ ಕವರೇಜ್‌ ವ್ಯಾಪ್ತಿಯು ನೀವು ನಿಮ್ಮ ಹೋಂಡಾ ಕಾರಿಗೆ ಆಯ್ಕೆ ಮಾಡುವ ಪ್ಲಾನ್‌ ಮೇಲೆ ಅವಲಂಬಿತವಾಗಿರುತ್ತದೆ. ಸಮಗ್ರ ಹೋಂಡಾ ಕಾರ್ ಇನ್ಶೂರೆನ್ಸ್ ಪಾಲಿಸಿ ಸಾಮಾನ್ಯವಾಗಿ ಈ ಕೆಳಗಿನವುಗಳನ್ನು ಒಳಗೊಂಡಿರುತ್ತದೆ:

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ಆಕ್ಸಿಡೆಂಟ್‌ಗಳು

ಅಪಘಾತಗಳು

ಅಪಘಾತದಿಂದ ಉಂಟಾಗುವ ಆರ್ಥಿಕ ನಷ್ಟದ ವಿರುದ್ಧ ನಾವು ರಕ್ಷಣೆ ನೀಡುತ್ತೇವೆ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ಬೆಂಕಿ ಸ್ಫೋಟ

ಬೆಂಕಿ ಮತ್ತು ಸ್ಫೋಟ

ನಿಮ್ಮ ಕಾರಿಗೆ ಸಂಬಂಧಿಸಿದ ಬೆಂಕಿ ಮತ್ತು ಸ್ಫೋಟಗಳಿಂದ ನೀವು ಆರ್ಥಿಕವಾಗಿ ರಕ್ಷಿಸಲ್ಪಡುತ್ತೀರಿ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ಕಳ್ಳತನ

ಕಳ್ಳತನ

ನಿಮ್ಮ ಕಾರು ಕಳ್ಳತನವಾಗುವುದು ದುಃಸ್ವಪ್ನಗಳ ವಿಷಯವಾಗಿದೆ. ಆ ಸಂದರ್ಭದಲ್ಲಿ ನಿಮ್ಮ ಮನಸ್ಸಿನ ಶಾಂತಿಯನ್ನು ನಾವು ಖಚಿತಪಡಿಸುತ್ತೇವೆ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ವಿಕೋಪಗಳು

ವಿಪತ್ತುಗಳು

ನೈಸರ್ಗಿಕ ಅಥವಾ ಮಾನವ ನಿರ್ಮಿತ, ಯಾವುದೇ ಇರಲಿ ನಾವು ವ್ಯಾಪಕ ಶ್ರೇಣಿಯ ವಿಪತ್ತುಗಳಾದ್ಯಂತ ಆರ್ಥಿಕ ವ್ಯಾಪ್ತಿಯನ್ನು ಒದಗಿಸುತ್ತೇವೆ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ವೈಯಕ್ತಿಕ ಆಕ್ಸಿಡೆಂಟ್‌

ವೈಯಕ್ತಿಕ ಆಕ್ಸಿಡೆಂಟ್

ಅಪಘಾತದ ಸಂದರ್ಭದಲ್ಲಿ ನಿಮ್ಮ ಚಿಕಿತ್ಸೆಯ ಶುಲ್ಕವನ್ನು ನೋಡಿಕೊಳ್ಳಲಾಗುತ್ತದೆ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್ ಪಾರ್ಟಿ ಹೊಣೆಗಾರಿಕೆ

ಯಾವುದೇ ಥರ್ಡ್ ಪಾರ್ಟಿ ವ್ಯಕ್ತಿಗೆ ಆದ ಗಾಯ ಅಥವಾ ಅವರ ಆಸ್ತಿಗೆ ಆದ ಹಾನಿಯನ್ನು ಕೂಡಾ ಒಳಗೊಂಡಿದೆ.

ಹೋಂಡಾ ಕಾರ್ ಇನ್ಶೂರೆನ್ಸ್ ನವೀಕರಿಸುವುದು ಹೇಗೆ?

ಹೊಸ ಹೋಂಡಾ ಕಾರ್ ಇನ್ಶೂರೆನ್ಸ್ ಪಾಲಿಸಿ ನವೀಕರಿಸುವುದು ಅಥವಾ ಖರೀದಿಸುವುದು ತುಂಬಾ ಸುಲಭ ಮತ್ತು ತ್ವರಿತವಾಗಿದೆ. ನೀವು ಕೇವಲ ಕೆಲವೇ ಕ್ಲಿಕ್‌ಗಳಲ್ಲಿ ಪಾಲಿಸಿ ಖರೀದಿಯನ್ನು ಮಾಡಬಹುದು. ಈಗ ಕೆಲವೇ ನಿಮಿಷಗಳಲ್ಲಿ ನಿಮ್ಮ ಪಾಲಿಸಿ ಪಡೆದುಕೊಳ್ಳಿ. ನಿಮ್ಮನ್ನು ಕವರ್ ಮಾಡಲು ಈ ಕೆಳಗಿನ ನಾಲ್ಕು ಹಂತಗಳನ್ನು ಅನುಸರಿಸಿ.

  • ಹಂತ #1
    ಹಂತ #1
    ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಭೇಟಿ ನೀಡಿ, ನಿಮ್ಮ ಪಾಲಿಸಿಯನ್ನು ಖರೀದಿಸಲು ಅಥವಾ ನವೀಕರಿಸಲು ಆಯ್ಕೆ ಮಾಡಿ
  • ಹಂತ #2
    ಹಂತ #2
    ನಿಮ್ಮ ಕಾರಿನ ವಿವರಗಳು, ನೋಂದಣಿ, ನಗರ ಮತ್ತು ಹಿಂದಿನ ಪಾಲಿಸಿ ವಿವರಗಳು ಯಾವುದಾದರೂ ಇದ್ದರೆ ನಮೂದಿಸಿ
  • ಹಂತ #3
    ಹಂತ #3
    ಕೋಟ್ ಸ್ವೀಕರಿಸಲು, ನಿಮ್ಮ ಇಮೇಲ್ ID, ಮತ್ತು ಫೋನ್ ನಂಬರ್ ಒದಗಿಸಿ
  • ಹಂತ #4
    ಹಂತ #4
    ಆನ್ಲೈನ್ ಪಾವತಿ ಮಾಡಿ, ತಕ್ಷಣ ಕವರ್ ಪಡೆಯಿರಿ!

ಎಚ್‌ಡಿಎಫ್‌ಸಿ ಎರ್ಗೋ ಏಕೆ ನಿಮ್ಮ ಮೊದಲ ಆಯ್ಕೆಯಾಗಿರಬೇಕು?

ಕಾರ್ ಇನ್ಶೂರೆನ್ಸ್ ಕಾರ್ ಮಾಲೀಕತ್ವದ ಅಗತ್ಯ ಅವಶ್ಯಕತೆಯಾಗಿದೆ. ಇದು ಕಡ್ಡಾಯ ಮಾತ್ರವಲ್ಲ, ಅಪಘಾತಗಳು ಆಕಸ್ಮಿಕವಾಗಿ ಆಗುವುದರಿಂದ ಆರ್ಥಿಕ ಜಾಗರೂಕತೆಯ ನಿರ್ಧಾರ ಕೂಡ ಆಗಿದೆ. ಇದಲ್ಲದೆ, ರಸ್ತೆಯಲ್ಲಿ ನಿಮ್ಮ ಸುರಕ್ಷತೆಯೂ ಇತರ ಚಾಲಕರನ್ನು ಅವಲಂಬಿಸಿರುತ್ತದೆ. ಮತ್ತು ಕಾರು ಹಾನಿಗಳು ಸಾಮಾನ್ಯವಾಗಿ ದುರಸ್ತಿಗೆ ದುಬಾರಿಯಾಗಿರುತ್ತವೆ. ಇಂತಹ ಸಂದರ್ಭಗಳಲ್ಲಿಯೇ ಕಾರ್ ಇನ್ಶೂರೆನ್ಸ್ ಸಹಾಯಕ್ಕೆ ಬರುತ್ತದೆ. ಇದು ಅನಿರೀಕ್ಷಿತ ಹಣಕಾಸಿನ ನಷ್ಟಗಳನ್ನು ತಡೆಯುವ ಜೊತೆಗೆ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ನಿಮ್ಮ ಹೋಂಡಾ ಕಾರ್ ಇನ್ಶೂರೆನ್ಸ್‌ಗೆ ನೀವು ಎಚ್‌ಡಿಎಫ್‌ಸಿ ಎರ್ಗೋ ಅನ್ನು ಏಕೆ ಆಯ್ಕೆ ಮಾಡಬೇಕು ಎನ್ನುವುದಕ್ಕೆ ಕಾರಣಗಳು ಇಲ್ಲಿವೆ:

ಅನುಕೂಲಕರ ಮತ್ತು ವ್ಯಾಪಕ ಸೇವೆ

ಅನುಕೂಲಕರ ಮತ್ತು ವ್ಯಾಪಕ ಸೇವೆ

ವರ್ಕ್‌ಶಾಪ್‌ಗಳಲ್ಲಿ ನೇರ ನಗದುರಹಿತ ಸೆಟಲ್ಮೆಂಟ್ ಸೌಲಭ್ಯವಿರುವುದರಿಂದ ನೀವು ಕೈಯಾರೆ ಖರ್ಚು ಮಾಡುವುದು ತಪ್ಪುತ್ತದೆ. ಮತ್ತು ದೇಶಾದ್ಯಂತ 7600 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳೊಂದಿಗೆ, ನಿಮಗೆ ಯಾವಾಗ ಬೇಕಾದರೂ ನೆರವು ಸಿಗುತ್ತದೆ. 24x7 ರಸ್ತೆಬದಿಯ ನೆರವು ಕೇವಲ ಒಂದು ಫೋನ್ ಕರೆಯ ದೂರದಲ್ಲಿದ್ದು, ನೀವು ಎಂದಿಗೂ ಅಸಹಾಯಕ ಸ್ಥಿತಿಗೆ ಸಿಲುಕುವುದಿಲ್ಲ ಎಂಬುದನ್ನು ಖಚಿತಪಡಿಸುತ್ತದೆ.

ವಿಸ್ತಾರವಾದ ಕುಟುಂಬ

ವಿಸ್ತಾರವಾದ ಕುಟುಂಬ

1.6 ಕೋಟಿಗೂ ಹೆಚ್ಚು ಸಂತುಷ್ಟ ಗ್ರಾಹಕರೊಂದಿಗೆ, ನಿಮ್ಮ ನಿಖರವಾದ ಅಗತ್ಯಗಳನ್ನು ನಾವು ತಿಳಿದಿದ್ದೇವೆ ಮತ್ತು ಮಿಲಿಯನ್ ಮುಖಗಳಲ್ಲಿ ನಗುವನ್ನು ಮೂಡಿಸಿದ್ದೇವೆ. ಆದ್ದರಿಂದ, ನಿಮ್ಮ ಚಿಂತೆಗಳನ್ನು ಪಕ್ಕಕ್ಕೆ ಇರಿಸಿ ಮತ್ತು ಕ್ಲಬ್‌ಗೆ ಸೇರಿಕೊಳ್ಳಿ!

ಓವರ್‌ನೈಟ್ ಸೇವೆ

ಓವರ್‌ನೈಟ್ ಸೇವೆ

ಎಚ್ ಡಿ ಎಫ್ ಸಿ ನೈಟ್ ಸರ್ವಿಸ್ ರಿಪೇರಿಯು ನಿಮ್ಮ ಕಾರು ಮರುದಿನ ಬಳಸಲು ಸಿದ್ಧವಾಗಿದೆ ಎಂದು ಖಚಿತಪಡಿಸಿಕೊಳ್ಳಲು ಸಣ್ಣ ಅಪಘಾತದ ಹಾನಿ ಅಥವಾ ಸ್ಥಗಿತಗಳನ್ನು ನೋಡಿಕೊಳ್ಳುತ್ತದೆ. ಈ ರೀತಿಯಾಗಿ, ನಿಮ್ಮ ದಿನಚರಿಗೆ ಅಡ್ಡಿಯಾಗುವುದಿಲ್ಲ. ನಿಮ್ಮ ರಾತ್ರಿ ನಿಶ್ಚಿಂತೆಯಿಂದ ನಿದ್ರೆ ಮಾಡಿ ಮತ್ತು ನಿಮ್ಮ ಬೆಳಗಿನ ಪ್ರಯಾಣದ ಸಮಯಕ್ಕೆ ನಿಮ್ಮ ಕಾರನ್ನು ಸಿದ್ಧಗೊಳಿಸಲು ನಮಗೆ ಅವಕಾಶ ಮಾಡಿಕೊಡಿ.

ಸುಲಭ ಕ್ಲೈಮ್‌ಗಳು

ಸುಲಭ ಕ್ಲೈಮ್‌ಗಳು

ಕ್ಲೈಮ್‌ಗಳನ್ನು ಮಾಡುವುದು ಸುಲಭ ಮತ್ತು ತ್ವರಿತವಾಗಿದೆ. ನಾವು ಪ್ರಕ್ರಿಯೆಯನ್ನು ಕಾಗದರಹಿತವಾಗಿ ಮಾಡುತ್ತೇವೆ, ಸ್ವಯಂ ತಪಾಸಣೆಗೆ ಅವಕಾಶ ನೀಡುತ್ತೇವೆ ಮತ್ತು ನಿಮ್ಮ ಚಿಂತೆಗಳನ್ನು ದೂರ ಮಾಡಲು ತ್ವರಿತ ಪರಿಹಾರವನ್ನು ನೀಡುತ್ತೇವೆ

ಭಾರತದಾದ್ಯಂತ 8000+ ನಗದುರಹಿತ ಗ್ಯಾರೇಜ್‌ಗಳುˇ

ಹೋಂಡಾ ಕಾರ್ ಇನ್ಶೂರೆನ್ಸ್ ಬಗ್ಗೆ ಆಗಾಗ್ಗೆ ಕೇಳಿದ ಪ್ರಶ್ನೆಗಳು


ಅವಧಿ ಮುಗಿದಿರುವ ನಿಮ್ಮ ಹೋಂಡಾ ಕಾರ್ ಇನ್ಶೂರೆನ್ಸ್ ಪಾಲಿಸಿಯನ್ನು ನವೀಕರಿಸುವುದು ತುಂಬಾ ಸುಲಭ ಮತ್ತು ಸರಳವಾಗಿದೆ. ಎಚ್‌ಡಿಎಫ್‌ಸಿ ಎರ್ಗೋಗೆ ಲಾಗಿನ್ ಮಾಡಿ ಮತ್ತು ಹೊಸ ಪಾಲಿಸಿ ಖರೀದಿಸಿ. ನಿಮ್ಮ ಹಿಂದಿನ ಪಾಲಿಸಿ ವಿವರಗಳನ್ನು ನಮೂದಿಸುವಾಗ, ಕಳೆದ ಸಮಯವನ್ನು ಅವಲಂಬಿಸಿ, ಕಾರಿನ ತಪಾಸಣೆಯೊಂದಿಗೆ ಅದನ್ನು ನವೀಕರಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಗಡುವಿನ ದಿನಾಂಕದ ಹತ್ತಿರ ನವೀಕರಿಸಿದರೆ, ಕಾರನ್ನು ಸ್ವಯಂ-ಪರಿಶೀಲಿಸಲೂ ಅರ್ಹರಾಗಬಹುದು ಮತ್ತು ಅನುಮೋದಿಸುವ ಮೊದಲು ವಾಹನದ ಚಿತ್ರಗಳು ಮತ್ತು ವೀಡಿಯೊಗಳನ್ನು ವಿಮೆದಾರರಿಗೆ ಕಳುಹಿಸಬಹುದು. ಪಾವತಿ ಮಾಡಿದ ನಂತರ, ನೀವು ಮತ್ತೆ ಇನ್ಶೂರ್ ಆಗುವಿರಿ.
NCB ಅನ್ನು ಪಾಲಿಸಿ ಮುಕ್ತಾಯದ 90 ದಿನಗಳವರೆಗೆ ಸಂರಕ್ಷಿಸಲಾಗುತ್ತದೆ, ನಂತರ ಅದನ್ನು ಶೂನ್ಯಕ್ಕೆ ಮರುಹೊಂದಿಸಲಾಗುತ್ತದೆ. ಆದಾಗ್ಯೂ, ನೀವು ನಿಮ್ಮ ಕಾರನ್ನು ಮಾರಾಟ ಮಾಡಿದರೆ ಮತ್ತು ಅನುಮೋದನೆಯನ್ನು (ಕಾರ್ ಮಾಲೀಕತ್ವದ ಬಗ್ಗೆ ಪಾಲಿಸಿಯಲ್ಲಿ ಬದಲಾವಣೆ) ಪಾಸ್ ಮಾಡಿದ ಸಂದರ್ಭದಲ್ಲಿ ನೀವು ವಿಮಾದಾರರಿಂದ NCB ಮೀಸಲಾತಿ ಪತ್ರವನ್ನು ಪಡೆಯಬಹುದು. ಈ ಪತ್ರ, ಅಂದರೆ, NCB, ಮೂರು ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ. ಆದರೆ ನೀವು ಮೂರು ತಿಂಗಳ ನಂತರದ ಪಾಲಿಸಿ ಅವಧಿಯ ನಂತರ ನಿಮ್ಮ ಕಾರನ್ನು ಮಾರಾಟ ಮಾಡಿದರೆ, ನೀವು NCB ಮೀಸಲಾತಿ ಪತ್ರಕ್ಕೆ ಅರ್ಹರಾಗಿರುವುದಿಲ್ಲ.
ನಿಮ್ಮ ಹೋಂಡಾ ಕಾರ್ ಇನ್ಶೂರೆನ್ಸ್ ಅನ್ನು ಆನ್ಲೈನ್‌ನಲ್ಲಿ ನವೀಕರಿಸುವುದು, ಹೊಸದನ್ನು ಖರೀದಿಸುವುದಕ್ಕಿಂತ ಸುಲಭ ಮತ್ತು ಸರಳವಾಗಿದೆ. ಎಚ್‌ಡಿಎಫ್‌ಸಿ ಎರ್ಗೋದಲ್ಲಿ ಲಾಗಿನ್ ಮಾಡಿ ಅಥವಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ. ಪಾಲಿಸಿ ನವೀಕರಣ ಆಯ್ಕೆ ಮಾಡಿ ಮತ್ತು ಕಾರ್ ವಿವರಗಳನ್ನು ಅಪ್ಡೇಟ್ ಮಾಡಿ. IDV ಆಯ್ಕೆಮಾಡಿ ಮತ್ತು ಪಾವತಿ ಮಾಡಿ. ಈ ಪೂರ್ತಿ ಪ್ರಕ್ರಿಯೆಯು 3 ನಿಮಿಷಗಳಿಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.
ಸಮಗ್ರ ಹೋಂಡಾ ಕಾರ್ ಇನ್ಶೂರೆನ್ಸ್ ತೆಗೆದುಕೊಳ್ಳುವುದು ಯಾವಾಗಲೂ ಶಿಫಾರಸು ಮಾಡಲಾದ ಆಯ್ಕೆಯಾಗಿದೆ. ಮತ್ತು ಅದರೊಂದಿಗೆ ನಾವು ಜೀರೋ ಡಿಪ್ರಿಸಿಯೇಷನ್ ಕವರ್ ಮತ್ತು ರಿಟರ್ನ್ ಟು ಇನ್ವಾಯ್ಸ್ ಕವರ್ ಶಿಫಾರಸು ಮಾಡುತ್ತೇವೆ. ಜೀರೋ ಡಿಪ್ರಿಸಿಯೇಷನ್ ಕವರ್ ಆಕ್ಸಿಡೆಂಟ್ ಆದ ನಂತರ ನಿಮ್ಮ ಕಾರಿನ ಭಾಗಗಳನ್ನು ರಿಪೇರಿ ಮಾಡಿಸುವಾಗ ಅಥವಾ ಬದಲಾಯಿಸುವಾಗ ಡಿಪ್ರಿಸಿಯೇಷನ್‌ಗಾಗಿ ಪಾವತಿಸುವ ವೆಚ್ಚವನ್ನು ಉಳಿಸುತ್ತದೆ. ಸಂಪೂರ್ಣ ನಷ್ಟ ಅಥವಾ ಕಳ್ಳತನವಾದಾಗ ರಿಟರ್ನ್ ಟು ಇನ್ವಾಯ್ಸ್ ಕವರ್ ನೀವು ಕಾರ್ ತೆಗೆದುಕೊಳ್ಳುವಾಗ ಪಾವತಿಸಿದಷ್ಟು ಪೂರ್ತಿ ಹಣ ಪಾವತಿಸುತ್ತದೆ. ಇದಲ್ಲದೆ, ನಿಮ್ಮ NCB ಅನ್ನು ಕಳೆದುಕೊಳ್ಳದೆ ಕ್ಲೈಮ್ ಫೈಲ್ ಮಾಡಲು ನೀವು NCB ಪ್ರೊಟೆಕ್ಷನ್ ಆ್ಯಡ್-ಆನ್ ಅನ್ನೂ ಪರಿಗಣಿಸಬಹುದು. ಮತ್ತು ನೀವು ಪ್ರವಾಹ-ಪೀಡಿತ ಪ್ರದೇಶದಲ್ಲಿ ವಾಸಿಸುತ್ತಿದ್ದರೆ, ಎಂಜಿನ್ ಪ್ರೊಟೆಕ್ಷನ್ ಕವರ್ ಬೇಕಾಗುತ್ತದೆ.
ಮೊದಲನೆಯದಾಗಿ, ನಿಮ್ಮ ವಾಹನದ ಸರಾಸರಿ IDV ಶ್ರೇಣಿಯನ್ನು ಪಡೆಯಲು ಆನ್ಲೈನ್‌ನಲ್ಲಿ ಪಾಲಿಸಿಗಳನ್ನು ಹೋಲಿಸಿ ನೋಡಿ. ನಂತರ ಪ್ರೀಮಿಯಂ ದರಗಳನ್ನೂ ಹೋಲಿಕೆ ಮಾಡಿ. ಅತ್ಯುತ್ತಮ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ(IDV) ಟು ಪ್ರೀಮಿಯಂ ರೇಶಿಯೋ ಆಯ್ಕೆ ಮಾಡುವುದು ಮುಖ್ಯವಾಗುತ್ತದೆ. IDV ಕಡಿಮೆ ಮಾಡುವುದರಿಂದ ಪ್ರೀಮಿಯಂ ಕಡಿಮೆಯಾಗುತ್ತದೆ, ಆದರೆ ಇದರಿಂದ ಕಡಿಮೆ ಇನ್ಶೂರ್ ಮಾಡಿಸಿದಂತಾಗಬಹುದು. ಹಾಗೆಯೇ, ಹೆಚ್ಚಿನ IDV ವೆಚ್ಚ ಪರಿಣಾಮಕಾರಿಯಾಗಿರದೇ ಇರಬಹುದು. IDV ಎಂಬುದು ವಿಮಾದಾತರಿಂದ ನೀವು ಪಡೆಯಬಹುದಾದ ಗರಿಷ್ಠ ಪಾವತಿಯಾಗಿದೆ - ವಾಹನದ ಕಳ್ಳತನ ಅಥವಾ ಪೂರ್ಣ ನಷ್ಟವನ್ನು ಒಳಗೊಳ್ಳುವ ಸಂದರ್ಭಗಳಲ್ಲಿ. ನೀವು ಕಾರನ್ನು ಬಳಸುವುದರ ಆಧಾರದ ಮೇಲೆ ಅವು ಬದಲಾಗಬಹುದಾದ ಕಾರಣದಿಂದ, ಆ್ಯಡ್-ಆನ್‌ಗಳನ್ನು ಬಳಸಿಕೊಳ್ಳಿ. ನಿಮಗೆ ಮುಂದಿನ ವರ್ಷದಲ್ಲಿ ಕ್ಲೈಮ್ ಮಾಡುವ ನಿರೀಕ್ಷೆ ಇದ್ದರೆ NCB ಪ್ರೊಟೆಕ್ಷನ್ ಆ್ಯಡ್-ಆನ್ ಪಡೆಯಿರಿ. ಕಟ್ಟಡದ ಕೆಳಮಹಡಿಯಲ್ಲಿ ವಾಹನವನ್ನು ಪಾರ್ಕ್ ಮಾಡುತ್ತಿದ್ದು, ಅದು ಜಲಾವೃತವಾಗುವ ಸಾಧ್ಯತೆ ಇದ್ದರೆ ಎಂಜಿನ್ ಪ್ರೊಟೆಕ್ಷನ್ ಆ್ಯಡ್-ಆನ್ ಆಯ್ಕೆ ಮಾಡಿ.