ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್
ಮೋಟಾರ್ ಇನ್ಶೂರೆನ್ಸ್
ಕೇವಲ ₹2094 ರಲ್ಲಿ ಪ್ರೀಮಿಯಂ ಆರಂಭ*

ಪ್ರೀಮಿಯಂ ಆರಂಭ

ಕೇವಲ ₹2094 ಕ್ಕೆ*
8700+ ನಗದುರಹಿತ ನೆಟ್ವರ್ಕ್ ಗ್ಯಾರೇಜ್‌ಗಳು ^

8700+ ನಗದು ರಹಿತ

ನೆಟ್ವರ್ಕ್ ಗ್ಯಾರೇಜ್‌ಗಳು**
ತಡರಾತ್ರಿಯ ಕಾರ್ ರಿಪೇರಿ ಸೇವೆಗಳು ^

ತಡರಾತ್ರಿಯ ಕಾರ್

ರಿಪೇರಿ ಸೇವೆಗಳು¯
4.4 ಗ್ರಾಹಕ ರೇಟಿಂಗ್‌‌ಗಳು ^

4.4

ಗ್ರಾಹಕ ರೇಟಿಂಗ್‌‌ಗಳು
ಹೋಮ್ / ಮೋಟಾರ್ ಇನ್ಶೂರೆನ್ಸ್ / ಕಾರ್ ಇನ್ಶೂರೆನ್ಸ್ / ಮಾರುತಿ ಸುಜುಕಿ / ಆಲ್ಟೋ
ನಿಮ್ಮ ಕಾರ್ ಇನ್ಶೂರೆನ್ಸ್‌ಗೆ ತ್ವರಿತ ಕೋಟ್

ಈ ಮೂಲಕ ಎಚ್‌ಡಿಎಫ್‌ಸಿ ಎರ್ಗೋ ಜನರಲ್ ಇನ್ಶೂರೆನ್ಸ್‌ಗೆ, ರಾತ್ರಿ 10 ಗಂಟೆಯ ಒಳಗೆ ಸಂಪರ್ಕಿಸಲು ಒಪ್ಪಿಗೆ ನೀಡುತ್ತೇನೆ. ಇದು ನನ್ನ NDNC ನೋಂದಣಿಯನ್ನು ಮೀರುವ ಒಪ್ಪಂದವೆಂದು ಒಪ್ಪುತ್ತೇನೆ.

Call Icon
ಸಹಾಯ ಬೇಕೇ? ನಮ್ಮ ತಜ್ಞರೊಂದಿಗೆ ಮಾತನಾಡಿ 022-62426242

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ಆನ್ಲೈನ್

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್
ಮಾರುತಿ ಸುಜುಕಿ ಆಲ್ಟೋ ಕಾರನ್ನು ಮೊದಲು, ಸ್ಥಳೀಯವಾಗಿ ನಿರ್ಮಿಸಲಾದ ಜಪಾನೀಸ್ ಮಾಡೆಲ್‌ನ ಆವೃತ್ತಿಯಾಗಿ 2000 ರಲ್ಲಿ ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಾಯಿತು. ತನ್ನ ಎರಡನೇ ಜನರೇಶನ್‌ನಲ್ಲಿ, ಇದು ವಿಶೇಷವಾಗಿ ಭಾರತಕ್ಕೆಂದು ಅಭಿವೃದ್ಧಿಪಡಿಸಿದ ಮಾಡೆಲ್‌ ಆಗಿ, 2006 ರಿಂದ ದೇಶದಲ್ಲಿ ಅತಿಹೆಚ್ಚು ಮಾರಾಟವಾಗುವ ವಾಹನವಾಗಿದೆ. ಪ್ರಸಿದ್ಧ ಮಾರುತಿ 800 ಗೆ ಸಹಜವಾದ ಉತ್ತರಾಧಿಕಾರಿಯಾಗಿ, ಆಲ್ಟೋ ಭಾರತದಲ್ಲಿ ಎಲ್ಲಾ ಸಮಯದಲ್ಲೂ ಬೇಡಿಕೆಯಿರುವ ಮೂರನೇ ಅತಿ ಹೆಚ್ಚು ಮಾರಾಟವಾಗುವ ಕಾರ್ ಆಗಿದ್ದು, ವರ್ಷಗಳಲ್ಲಿ ಹಲವಾರು ನವೀಕರಣಗಳನ್ನು ಕಂಡಿದೆ. ವಾಸ್ತವವಾಗಿ, ಇತ್ತೀಚಿನ ನವೀಕರಣವು 2021 ರಲ್ಲಿ ಆಗಿದೆ.

ಎಚ್‌ಡಿಎಫ್‌ಸಿ ಎರ್ಗೋ ಆಫರ್‌ ಮಾಡುವ ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ವಿಧಗಳು

ಮಾರುತಿ ವಿಶ್ವಾಸಾರ್ಹ, ಕೈಗೆಟುಕುವ ಮತ್ತು ಹೆಚ್ಚಿನ ಮೈಲೇಜ್ ಕಾರುಗಳನ್ನು ಹೊರತಂದಿರುವುದಕ್ಕೆ ಹೆಸರುವಾಸಿಯಾಗಿದೆ ಮತ್ತು ವಿಶ್ವಾಸಾರ್ಹವಾಗಿದೆ. ಮೊದಲ ಬಾರಿಯ ಕಾರು ಮಾಲೀಕರಿಗೆ ಉತ್ತಮ ಆಯ್ಕೆಯನ್ನು ಒದಗಿಸುವುದರಲ್ಲಿ ಆಲ್ಟೋ ಭಿನ್ನವಾಗಿಲ್ಲ. ಕಾರನ್ನು ಖರೀದಿಸುವಾಗ, ನೀವು ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದಿರುವುದನ್ನು ಕೂಡ ಖಚಿತಪಡಿಸಿಕೊಳ್ಳಬೇಕು, ಏಕೆಂದರೆ ಇದು ಕಡ್ಡಾಯ ಮಾತ್ರವಲ್ಲ, ಆದರೆ ಹೆಚ್ಚು ಮುಖ್ಯವಾಗಿ, ಅಪಘಾತದ ಸಂದರ್ಭದಲ್ಲಿ ನಿಮ್ಮನ್ನು ರಕ್ಷಿಸುವ ಹಣಕಾಸಿನ ಸುರಕ್ಷತಾ ಕವಚವಾಗಿದೆ. ನೀವು ಆರಿಸಬಹುದಾದ ಆಯ್ಕೆಗಳು ಇಲ್ಲಿವೆ:

ಹೆಸರೇ ಸೂಚಿಸುವಂತೆ, ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯು, ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಪತ್ತುಗಳಿಂದ ಕಳ್ಳತನದವರೆಗಿನ ಸಾಮಾನ್ಯ ಎಲ್ಲಾ ಸಂಭಾವ್ಯ ದುರ್ಘಟನೆಗಳನ್ನು ಕವರ್ ಮಾಡುವ ಒಂದು ಪಾಲಿಸಿಯಾಗಿದೆ. ಇದರಲ್ಲಿ ಕಡ್ಡಾಯ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಮತ್ತು ಪರ್ಸನಲ್ ಆಕ್ಸಿಡೆಂಟ್ ಕವರ್ ಒಳಗೊಂಡಿದ್ದು, ನಿಮ್ಮ ಸ್ವಂತ ವಾಹನಕ್ಕಾಗುವ ಹಾನಿಗೆ ಕವರೇಜ್‌ ಒದಗಿಸುತ್ತದೆ.

X
ಸಮಗ್ರ ರಕ್ಷಣೆಯನ್ನು ಬಯಸುವ ಕಾರು ಪ್ರೇಮಿಗಳಿಗೆ ಸೂಕ್ತವಾಗಿದ್ದು, ಈ ಪ್ಲಾನ್, ಇವುಗಳನ್ನು ಕವರ್‌ ಮಾಡುತ್ತದೆ:

ಅಪಘಾತ

ವೈಯಕ್ತಿಕ ಅಪಘಾತ

ನೈಸರ್ಗಿಕ ವಿಕೋಪಗಳು

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಇನ್ನಷ್ಟು ಹುಡುಕಿ

ರಸ್ತೆಯಲ್ಲಿನ ಪ್ರತಿ ವಾಹನಕ್ಕೆ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಕಡ್ಡಾಯವಾಗಿದೆ.. ಇದು ಥರ್ಡ್ ಪಾರ್ಟಿಗೆ ಗಾಯ, ಅಂಗವೈಕಲ್ಯ ಅಥವಾ ಸಾವು ಮತ್ತು ಅವರ ಆಸ್ತಿಗಾದ ಹಾನಿಗೆ ಕವರೇಜ್‌ ಒದಗಿಸುತ್ತದೆ.. ಇದು ಯಾವುದಾದರು ಚಿಕಿತ್ಸೆ ಮತ್ತು ಕಾನೂನು ಶುಲ್ಕಗಳಿದ್ದರೆ, ಎಲ್ಲವನ್ನೂ ನೋಡಿಕೊಂಡು, ಅವಘಡದಲ್ಲಿ ನಿಮ್ಮದೇ ತಪ್ಪಿದ್ದರೂ ಸಹ ನಿಮ್ಮ ಹಣಕಾಸಿಗೆ ಸುರಕ್ಷತೆಯನ್ನು ಒದಗಿಸಲಾಗುವುದು.. ಅದೇ ರೀತಿ, ನೀವು ಆಕ್ಸಿಡೆಂಟ್‌ಗೆ ಈಡಾದರೇ, ಅಪರಾಧಿಗಳ ಥರ್ಡ್ ಪಾರ್ಟಿ ಹೊಣೆಗಾರಿಕೆ ಪಾಲಿಸಿಯಿಂದ ಪ್ರಯೋಜನಗಳನ್ನು ಪಡೆಯಲು ನೀವು ಅರ್ಹರಾಗಿರುತ್ತೀರಿ.

X
ಅಪರೂಪಕ್ಕೊಮ್ಮೆ ಕಾರು ಬಳಸುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ವೈಯಕ್ತಿಕ ಅಪಘಾತ

ಥರ್ಡ್-ಪಾರ್ಟಿ ಆಸ್ತಿ ಹಾನಿ

ಥರ್ಡ್ ಪಾರ್ಟಿ ವ್ಯಕ್ತಿಗಾದ ಗಾಯ

ಸ್ಟ್ಯಾಂಡ್‌ಅಲೋನ್ ಸ್ವಂತ ಹಾನಿ ಕವರ್ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯ ಅರ್ಧದಷ್ಟು ಕವರೇಜ್ ಆಗಿದ್ದು, ಇದು ನಿಮ್ಮ ಸ್ವಂತ ವಾಹನಕ್ಕೆ ಆದ ಹಾನಿಗೆ ಕವರೇಜ್ ಒದಗಿಸುತ್ತದೆ. ಅದು ಪ್ರವಾಹ, ಭೂಕಂಪ, ಬೆಂಕಿ, ಬಿರುಗಾಳಿ ಮುಂತಾದ ನೈಸರ್ಗಿಕ ವಿಪತ್ತುಗಳಿಂದಾದ ಹಾನಿಯಾಗಿರಬಹುದು. ಅದರಲ್ಲಿ ದಂಗೆಗಳು ಮತ್ತು ವಿಧ್ವಂಸದಂತಹ ಮಾನವ ನಿರ್ಮಿತ ವಿಕೋಪಗಳೂ ಕೂಡ ಪರಿಗಣಿತವಾಗಿರುತ್ತವೆ.. ಆಕ್ಸಿಡೆಂಟ್‌ ಹಾನಿಯನ್ನು ಕೂಡ ಕವರ್ ಮಾಡಲಾಗುತ್ತದೆ. ಅಂತಿಮವಾಗಿ, ಇದು ವಾಹನದ ಕಳ್ಳತನಕ್ಕೂ ಕವರ್ ನೀಡುತ್ತದೆ.. ನಿಮ್ಮ ಆಲ್ಟೋಗೆ ಸಮಗ್ರ ಕವರೇಜ್‌ ಪಡೆಯಲು ಥರ್ಡ್ ಪಾರ್ಟಿ ಹೊಣೆಗಾರಿಕೆ ಪಾಲಿಸಿಯೊಂದಿಗೆ ಈ ಪ್ಲಾನ್ ಅತ್ಯುತ್ತಮವಾಗಿ ಜೊತೆಯಾಗಿದೆ.

X
ಮಾನ್ಯವಾದ ಥರ್ಡ್ ಪಾರ್ಟಿ ಕವರ್ ಹೊಂದಿರುವವರಿಗೆ ಸೂಕ್ತವಾಗಿದೆ. ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ಅಪಘಾತ

ನೈಸರ್ಗಿಕ ವಿಕೋಪಗಳು

ಬೆಂಕಿ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಹೊಸ ಕಾರು ಮಾಲೀಕರು ಸಾಮಾನ್ಯವಾಗಿ ಕಾರು ಇನ್ಶೂರೆನ್ಸ್ ಏನನ್ನು ಒಳಗೊಂಡಿದೆ ಎಂದು ಅರಿಯದೆ ಕಾರ್ ಮಾಲೀಕತ್ವ ಪಡೆದುಕೊಳ್ಳುತ್ತಾರೆ. ದೀರ್ಘಾವಧಿಯ ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್ ಸಂಯೋಜಿಸುವ ಮೂಲಕ ನಿಮ್ಮ ಎಲ್ಲಾ ಚಿಂತೆಗಳನ್ನು ದೂರ ಮಾಡುವ ಗುರಿಯನ್ನು ಈ ಪ್ಲಾನ್ ಹೊಂದಿದೆ. ಹಾಗಾಗಿ, ಸಮಗ್ರ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕವಾಗಿ ನವೀಕರಿಸಬಹುದಾದ ಸ್ವಂತ ಹಾನಿ ಅಂಶವನ್ನು ಸೇರಿಸುವಾಗ, ನೀವು ವಿಸ್ತರಿತ ಅವಧಿಗೆ ನಿರಂತರವಾಗಿ ರಕ್ಷಣೆ ಪಡೆಯುತ್ತೀರಿ.

X
ಹೊಸ ಕಾರನ್ನು ಖರೀದಿಸಿದವರಿಗೆ ಸೂಕ್ತವಾಗಿದೆ, ಈ ಪ್ಲಾನ್ ಇವುಗಳನ್ನು ಕವರ್ ಮಾಡುತ್ತದೆ:

ಅಪಘಾತ

ನೈಸರ್ಗಿಕ ವಿಕೋಪಗಳು

ವೈಯಕ್ತಿಕ ಆಕ್ಸಿಡೆಂಟ್

ಥರ್ಡ್-ಪಾರ್ಟಿ ಹೊಣೆಗಾರಿಕೆ

ಆ್ಯಡ್-ಆನ್‌ಗಳ ಆಯ್ಕೆ

ಕಳ್ಳತನ

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್‌ನ ಸೇರಿಕೆಗಳು ಮತ್ತು ಹೊರಪಡಿಕೆಗಳು

ನಿಮ್ಮ ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ಪ್ಲಾನ್ ನಿಮ್ಮ ವಾಹನವನ್ನು ಸಮಗ್ರವಾಗಿ ಕವರ್ ಮಾಡುವುದರ ಜೊತೆಗೆ ಅತ್ಯಂತ ಸಾಮಾನ್ಯ ಅವಘಡಗಳಿಂದ ನಿಮ್ಮನ್ನು ಉತ್ತಮವಾಗಿ ರಕ್ಷಿಸುವುದೆಂಬ ಖಚಿತತೆ ನೀಡುತ್ತದೆ. ನಿಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿಯು ಈ ಕೆಳಗಿನವುಗಳನ್ನು ಕವರ್ ಮಾಡುತ್ತದೆ,:

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುವುದು - ಅಪಘಾತದ ಕವರೇಜ್

ಅಪಘಾತ ಕವರೇಜ್

ಆಕ್ಸಿಡೆಂಟ್ ಎನ್ನುವುದು, ನೀವು ರಸ್ತೆಯಲ್ಲಿ ಇರುವಾಗಲೆಲ್ಲಾ ನಿಮ್ಮ ಮನಸ್ಸಿನ ಮೂಲೆಯಲ್ಲಿ ಕಾಡುವ ವಿಷಯವಾಗಿದೆ. ಅದು ಆಘಾತಕಾರಿ ಅನುಭವ ಮಾತ್ರವಲ್ಲದೆ, ನಂತರದಲ್ಲಿ ಕಾರನ್ನು ದುರಸ್ತಿ ಮಾಡಿಸಲು ಬೇಕಾಗುವ ಹಣಕಾಸಿನ ವಿಷಯವೂ ಸೇರಿದೆ. ಸಮಗ್ರ ಇನ್ಶೂರೆನ್ಸ್ ಪಾಲಿಸಿಯೊಂದಿಗೆ, ದುರಸ್ತಿ ವೆಚ್ಚಗಳನ್ನು ನೋಡಿಕೊಳ್ಳಲಾಗುತ್ತದೆ.

ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗಿರುವುದು - ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು

ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳು

ಬಿರುಗಾಳಿ ಮತ್ತು ಪ್ರವಾಹ ಬಹಳ ಸಾಮಾನ್ಯವಾಗಿವೆ ಮತ್ತು ಹೆಚ್ಚು ತೀವ್ರವಾಗಿವೆ. ಜೊತೆಗೆ, ನೇರವಾಗಿ ಅಥವಾ ಪರೋಕ್ಷವಾಗಿ ನಿಮ್ಮ ಕಾರಿಗೆ ಹಾನಿ ಉಂಟುಮಾಡುವ ಸಾಧ್ಯತೆ ಇದೆ. ಅದೇ ರೀತಿ, ಗಲಭೆ ಮತ್ತು ವಿಧ್ವಂಸ ನಿಮ್ಮ ಕಾರಿನ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು. ಅದೃಷ್ಟವಶಾತ್, ಇವೆಲ್ಲವನ್ನೂ ನಿಮ್ಮ ಪಾಲಿಸಿ ಮೂಲಕ ಕವರ್ ಮಾಡಲಾಗುತ್ತದೆ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ಕಳ್ಳತನ

ಕಳ್ಳತನ

ನಿಮ್ಮ ಕಾರು ಕಳ್ಳತನವಾದರೆ ಮತ್ತು ಮರುಪಡೆಯಲು ಸಾಧ್ಯವಾಗದಿದ್ದರೆ, ಪಾಲಿಸಿ ನವೀಕರಣದ ಸಮಯದಲ್ಲಿ ನಿರ್ಧರಿಸಲಾದ ವಾಹನದ ಇನ್ಶೂರ್ಡ್ ಡಿಕ್ಲೇರ್ಡ್ ವ್ಯಾಲ್ಯೂ (IDV) ಅನ್ನು ನೀವು ಪಡೆಯುತ್ತೀರಿ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ವೈಯಕ್ತಿಕ ಆಕ್ಸಿಡೆಂಟ್‌

ವೈಯಕ್ತಿಕ ಆಕ್ಸಿಡೆಂಟ್

ಆಕ್ಸಿಡೆಂಟ್‌ಗಳು ಆಕಸ್ಮಿಕವಾಗಿ ಸಂಭವಿಸುವುದರಿಂದ, ಶಾರೀರಿಕ ಹಾಗೂ ಆರ್ಥಿಕವಾಗಿ ಗಮನಾರ್ಹ ಹಾನಿಯನ್ನು ಉಂಟುಮಾಡಬಹುದು.. ಪರ್ಸನಲ್ ಆಕ್ಸಿಡೆಂಟ್ ಕವರ್ ನೊಂದಿಗೆ, ವೈದ್ಯಕೀಯ ಕಾರ್ಯವಿಧಾನಗಳ ವೆಚ್ಚದಿಂದ ಹಿಡಿದು ದೈನಂದಿನ ವೆಚ್ಚಗಳವರೆಗೆ ನಿಮ್ಮ ಚಿಕಿತ್ಸೆಯ ವೆಚ್ಚಗಳನ್ನು ಕವರ್ ಮಾಡಲಾಗುತ್ತದೆ.

ಕಾರ್ ಇನ್ಶೂರೆನ್ಸ್ ಪಾಲಿಸಿಯಲ್ಲಿ ಕವರ್ ಆಗುತ್ತದೆ - ಥರ್ಡ್ ಪಾರ್ಟಿ ಹೊಣೆಗಾರಿಕೆ

ಥರ್ಡ್-ಪಾರ್ಟಿ ಹೊಣೆಗಾರಿಕೆ

ಒಂದು ವೇಳೆ ನೀವು ಅಪಘಾತಕ್ಕೆ ಕಾರಣವಾದರೆ, ನಿಮ್ಮ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಅಪಾಯಕ್ಕೆ ಸಂಬಂಧಿಸಿದ ಹಾನಿಗಳಿಗೆ ಪಾವತಿಸಲು ಸಹಾಯ ಮಾಡುತ್ತದೆ ಮತ್ತು ಹಾಗೆಯೇ ವಿಲೋಮವಾಗಿರುತ್ತದೆ.

ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ನವೀಕರಿಸುವುದು ಹೇಗೆ?

ತಮ್ಮ ಸಂಪೂರ್ಣ ಶ್ರೇಣಿಯ ಸೇವೆಗಳನ್ನು ಆನ್‌ಲೈನ್‌ನಲ್ಲಿ ಒದಗಿಸುವ ಇನ್ಶೂರರ್‌ನ ಬಳಿ ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ಪಾಲಿಸಿ ಖರೀದಿಸುವುದು ಅಥವಾ ನವೀಕರಿಸುವುದು ಇಷ್ಟು ಸುಲಭವಾಗಿ ಎಂದಿಗೂ ಇರಲಿಲ್ಲ. ಕೆಲವೇ ನಿಮಿಷಗಳಲ್ಲಿ ನಿಮ್ಮ ಮನೆಯಿಂದಲೇ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಈಗ ನೀವು ನಿಮ್ಮ ಪಾಲಿಸಿಯನ್ನು ಖರೀದಿಸಬಹುದು ಅಥವಾ ನವೀಕರಿಸಬಹುದು.

  • ಹಂತ #1
    ಹಂತ #1
    ಎಚ್‌ಡಿಎಫ್‌ಸಿ ಎರ್ಗೋ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ ಅಥವಾ ಮೊಬೈಲ್ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ನವೀಕರಣ ಆಯ್ಕೆಯನ್ನು ಆರಿಸಿ
  • ಹಂತ #2
    ಹಂತ #2
    ನೋಂದಣಿ, ಸ್ಥಳ, ಹಿಂದಿನ ಪಾಲಿಸಿ ವಿವರಗಳು, NCB ಇತ್ಯಾದಿಗಳನ್ನು ಒಳಗೊಂಡಂತೆ ನಿಮ್ಮ ಕಾರಿನ ವಿವರಗಳನ್ನು ನಮೂದಿಸಿ.
  • ಹಂತ #3
    ಹಂತ #3
    ಕೋಟ್ ಪಡೆಯಲು ನಿಮ್ಮ ಇಮೇಲ್ ID ಮತ್ತು ಫೋನ್ ನಂಬರ್ ಒದಗಿಸಿ
  • ಹಂತ #4
    ಹಂತ #4
    ಪಾವತಿ ಮಾಡಿ ಅಷ್ಟೇ, ನೀವು ಸುರಕ್ಷಿತ!.

ಎಚ್‌ಡಿಎಫ್‌ಸಿ ಎರ್ಗೋದಿಂದ ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ಏಕೆ ಖರೀದಿಸಬೇಕು?

ನಿಮ್ಮ ಕಾರ್ ಇನ್ಶೂರೆನ್ಸ್ ಪಾಲಿಸಿ ಹೊಂದಿರಬೇಕಾದ ಕೈಗೆಟಕುವ, ವಿಶ್ವಾಸಾರ್ಹ ಮತ್ತು ವೆಚ್ಚ-ಪರಿಣಾಮಕಾರಿ ಅನುಭವ ನೀಡುವುದಕ್ಕಾಗಿ ಆಲ್ಟೋ ಹೆಸರುವಾಸಿಯಾಗಿದೆ. ಜನಪ್ರಿಯವಾದ, ದೊಡ್ಡ ಗ್ರಾಹಕರ ನೆಲೆಯನ್ನು ಹೊಂದಿರುವ ಮತ್ತು ಹೆಚ್ಚಿನ ಸೆಟಲ್ಮೆಂಟ್ ಅನುಪಾತದೊಂದಿಗೆ ವಿಶ್ವಾಸಾರ್ಹವಾಗಿ ಕ್ಲೈಮ್‌ಗಳನ್ನು ಪ್ರಕ್ರಿಯೆಗೊಳಿಸುವ ಇನ್ಶೂರರ್‌ ಅನ್ನು ಆಯ್ಕೆ ಮಾಡಿ. ಎಚ್‌ಡಿಎಫ್‌ಸಿ ಎರ್ಗೋ ಏಕೆ ಸರಿಯಾದ ಆಯ್ಕೆ ಎನ್ನಲು ಕಾರಣ ಇಲ್ಲಿದೆ,:

ನಗದು ರಹಿತ ಸೌಲಭ್ಯ

ನಗದು ರಹಿತ ಸೌಲಭ್ಯ

ಆಕ್ಸಿಡೆಂಟ್ ಅಥವಾ ದುರ್ಘಟನೆ ಸಂಭವಿಸಿದ ತಕ್ಷಣ ನಿಮ್ಮ ಕಾರನ್ನು ದುರಸ್ತಿ ಮಾಡಬೇಕಾಗುತ್ತದೆ. ರಿಪೇರಿಯ ವೆಚ್ಚ ಪಾವತಿಸಲು ನಿಮ್ಮ ಬಳಿ ನಗದು ಯಾವಾಗಲೂ ಇಲ್ಲದಿರಬಹುದು. ಅಂತಹ ಸಮಯದಲ್ಲಿ ನಗದುರಹಿತ ಸೇವೆಯಿಂದ ಸಹಾಯವಾಗುತ್ತದೆ. ಎಚ್‌ಡಿಎಫ್‌ಸಿ ಎರ್ಗೋ ಭಾರತದಾದ್ಯಂತ 8700 ಕ್ಕೂ ಹೆಚ್ಚು ನಗದುರಹಿತ ಗ್ಯಾರೇಜ್‌ಗಳನ್ನು ಹೊಂದಿದ್ದು, ನಿಮ್ಮ ಹಣಕಾಸಿಗೆ ಒತ್ತಡ ನೀಡದೆ ನಿಮ್ಮ ಕಾರು ರಿಪೇರಿ ಆಗುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.

ಸುಲಭ ಕ್ಲೈಮ್‌ಗಳು

ಸುಲಭ ಕ್ಲೈಮ್‌ಗಳು

ಬಹುತೇಕ 80% ಕಾರ್ ಇನ್ಶೂರೆನ್ಸ್ ಕ್ಲೈಮ್‌ಗಳನ್ನು ಅದೇ ದಿನ ಪ್ರಕ್ರಿಯೆಗೊಳಿಸಿ, ನೀವು ಕ್ಲೈಮ್ ಸಲ್ಲಿಸುವುದು ಮತ್ತು ಕಾರು ದುರಸ್ತಿ ಮಾಡುವುದರ ನಡುವೆ ಸಮಯ ಕಳೆದುಕೊಳ್ಳದ ಹಾಗೆ ನೋಡಿಕೊಳ್ಳುತ್ತದೆ.

ತಡರಾತ್ರಿಯ ರಿಪೇರಿ ಸೇವೆ

ತಡರಾತ್ರಿಯ ರಿಪೇರಿ ಸೇವೆ

ಅಪಘಾತದ ಪರಿಣಾಮವಾಗಿ ಉಂಟಾಗುವ ಸಣ್ಣ ಕಾರು ರಿಪೇರಿಗಳನ್ನು ರಾತ್ರಿಯಲ್ಲಿಯೇ ನಡೆಸಲಾಗುತ್ತದೆ, ಇದರಿಂದ ನೀವು ರಾತ್ರಿಯ ನಿದ್ರೆಯನ್ನು ಆನಂದಿಸಬಹುದು ಮತ್ತು ಮರುದಿನ ಬೆಳಿಗ್ಗೆ ಕಾರನ್ನು ಸಿದ್ಧಗೊಳಿಸಬಹುದು.

24x7 ಸಹಾಯ

24x7 ಸಹಾಯ

ನಮ್ಮ 24x7 ರಸ್ತೆಬದಿಯ ನೆರವಿನಿಂದ, ಸಹಾಯ ಕೇವಲ ಒಂದು ಕರೆ ದೂರದಲ್ಲಿದೆ.

ಭಾರತದಾದ್ಯಂತ 8700+ ನಗದುರಹಿತ ಗ್ಯಾರೇಜ್‌ಗಳುˇ

ಆಗಾಗ್ಗೆ ಕೇಳಲಾದ ಪ್ರಶ್ನೆಗಳು


ಹೊಸ ಕಾರು ಮಾಲೀಕರಾಗಿ, ಬಹು-ವರ್ಷದ ಸಮಗ್ರ ಪಾಲಿಸಿಯನ್ನು ಪಡೆಯಲು ಮತ್ತು ಕನಿಷ್ಠ ಮೊದಲ 5 ವರ್ಷಗಳವರೆಗೆ ನಿಮ್ಮ ಸ್ವಂತ ಹಾನಿಯ ಅಂಶವನ್ನು ನವೀಕರಿಸಲು ಬಲವಾಗಿ ಶಿಫಾರಸು ಮಾಡಲಾಗುತ್ತದೆ. ಅವಘಡದ ಸಂದರ್ಭದಲ್ಲಿ ಇದು ನಿಮ್ಮನ್ನು ಆರ್ಥಿಕವಾಗಿ ರಕ್ಷಿಸುತ್ತದೆ.
CNG ಪೆಟ್ರೋಲ್‌ಗಿಂತ ಸುರಕ್ಷಿತವಾಗಿರುವಾಗ, ಮಾರುತಿ ಸುಜುಕಿ ಆಲ್ಟೋ ಕಾರ್ ಇನ್ಶೂರೆನ್ಸ್ ಪ್ರೀಮಿಯಂ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ, ಅದರಲ್ಲಿ ವಾಹನದ ಒಟ್ಟಾರೆ ಬೆಲೆ ಅತ್ಯಂತ ಪ್ರಮುಖವಾಗಿದೆ. CNG LXi ಪೆಟ್ರೋಲ್ LXi ಗಿಂತ ದುಬಾರಿಯಾಗಿರುವುದರಿಂದ, ಅದರ ಇನ್ಶೂರೆನ್ಸ್ ವೆಚ್ಚವೂ ಹೆಚ್ಚಾಗಿರುತ್ತದೆ.
ಬೈಕ್ ಓಡಿಸಲು ಮತ್ತು ಕಾರ್‌ ಚಾಲನೆ ಮಾಡಲು ಅಗತ್ಯವಿರುವ ಕೌಶಲ್ಯಗಳು ಸಂಪೂರ್ಣವಾಗಿ ಭಿನ್ನವಾಗಿರುವುದರಿಂದ, ನಿಮ್ಮ ಬೈಕ್ ಇನ್ಶೂರೆನ್ಸ್‌ನಲ್ಲಿ ಸಂಗ್ರಹಿಸಲಾದ NCB ಯನ್ನು ಕಾರ್‌ಗಳಂತಹ ಇನ್ನೊಂದು ವಿಧದ ವಾಹನಕ್ಕೆ ವರ್ಗಾಯಿಸಲಾಗುವುದಿಲ್ಲ.
NCB ಎಂಬುದು ನಿಮ್ಮ ಸಮಗ್ರ ಕಾರ್ ಇನ್ಶೂರೆನ್ಸ್ ಪಾಲಿಸಿ ನ ಸ್ವಂತ ಹಾನಿ ಅಂಶಕ್ಕೆ ಮಾತ್ರ ಅನ್ವಯವಾಗುವ ರಿಯಾಯಿತಿಯಾಗಿದೆ. ಆದ್ದರಿಂದ ಅದನ್ನು ಥರ್ಡ್ ಪಾರ್ಟಿ ಹೊಣೆಗಾರಿಕೆ ಇನ್ಶೂರೆನ್ಸ್‌ನಲ್ಲಿ ಬಳಸಲಾಗುವುದಿಲ್ಲ.